Grahana - S L Bhyrappa
ಭಾರತೀಯ ‘ಗ್ರಹಣ’ ಎನ್ನುವುದಕ್ಕಿಂತ ಇಂಗ್ಲೀಷಿನ ‘ಎಕ್‌ಲಿಪ್ಸ್’ ಎಂಬ ಶಬ್ದವು ಹೆಚ್ಚು
ವೈಜ್ಞಾನಿಕವಾದುದು ಎಂದು, ಬೌದ್ಧಿಕ ಮಾರ್ಗದರ್ಶಕರಾದ ಪ್ರಿನ್ಸಿಪಾಲರು ಭಾಷಣ
ಮಾಡುತ್ತಾರೆ.
ಮತ ಧಾರ್ಮಿಕ ಆಧಾರವಿಲ್ಲದ ಶುದ್ಧ ನೀತಿಯನ್ನು ಬೆಳೆಸಲು ಯತ್ನಿಸುವ ಸ್ವಾಮಿಗಳು ಲೇಡಿ ಡಾಕ್ಟರನ್ನು ವಿವಾಹವಾಗಲು ಯತ್ನಿಸುತ್ತಾರೆ.
ತೋರಿಕೆ - ವಾಸ್ತವತೆ, ಸಂಪ್ರದಾಯ - ಹೊಸ ದೃಷ್ಟಿ, ಸತ್ಯ - ಅಸತ್ಯಗಳು ದಿಕ್ಕು
ತಪ್ಪಿಸುವಂತೆ ಒಂದರೊಳಗೊಂದು ಹೆಣೆದುಕೊಂಡಿರುತ್ತವೆ. ಇವೆಲ್ಲವೂ ಪರಸ್ಪರ ಪೂರಕವಾದ
ಸಂಕೇತಗಳಲ್ಲಿ ಅಭಿವ್ಯಕ್ತವಾಗಿ ಈ ಕೃತಿಯ ಆಳ ಎತ್ತರಗಳನ್ನು ಹೆಚ್ಚಿಸಿವೆ. ಜೀವನದ ಹಲವು
ಮೂಲಭೂತ ಪ್ರಶ್ನೆಗಳು ಈ ಕಿರುಕಾದಂಬರಿಯಲ್ಲಿ ಸಮರ್ಥವಾಗಿ ಕಾಣಿಸಿಕೊಂಡಿವೆ.
(ಬ್ಲರ್ಬ್)
ಮಠದ ಸ್ವಾಮೀಜಿ ಇದ್ದಕ್ಕಿದ್ದಂತೆ ಮಠ ತೊರೆದು
ಉತ್ತರಾಧಿಕಾರಿಯನ್ನೂ ನೇಮಿಸದೆ ಹಿಮಾಲಯಕ್ಕೆ ಹೋದ ನಂತರ ಊರಿನಲ್ಲಿ ಭೀಕರ ಮಳೆಯಿಂದಾಗ ಮಠ
ಸೇರಿದಂತೆ ಹಲವು ಮನೆಗಳು ಕೊಚ್ಚಿಹೋಗಿದ್ದವು, ಏನು ಮಾಡಲು ತೋಚದ ಗೌಡರ ಕನಸಿನಲ್ಲಿ
ಒಂದು ರಾತ್ರಿ ಕಾಣಿಸಿಕೊಂಡಿದ್ದ ಗುರುಗಳು ನಿನ್ನ 5 ನೇ ತಲೆಮಾರಿನಲ್ಲಿ ಮಠ
ಉದ್ದಾರವಾಗುತ್ತೆ ಅಂತ ಹೇಳಿದ್ದರಂತೆ.
***********
ದಾನದಲ್ಲಿ ಎತ್ತಿದ ಕೈಯಾದ ಅಪ್ಪೇಗೌಡರು 5ನೇ
ತಲುಮಾರಿನವರು, ಅವರ ಕಾಲದಲ್ಲೇ ಮಠ ಮೊದಲಿನಂತೆ ಸ್ವಾಮೀಜಿಯನ್ನು ಹೊಂದಿ ಅಷ್ಟೇ
ಹೆಗ್ಗಳಿಕೆಯನ್ನು ಮರಳಿ ಪಡೆಯುವುದೆಂದು ಆ ಸಮಯಕ್ಕಾಗಿ ಕಾಯುತ್ತಿದ್ದರು..
ಅದೊಂದು ದಿನ ಊರಿಗೊಬ್ಬ ಹಿಮಾಲಯದಿಂದ ಬಂದಿದ್ದ
ಸನ್ಯಾಸಿಯು ಪ್ರತಿದಿನ 7 ಮನೆಗಳಲ್ಲಿ ಬಿಕ್ಷೆ ಎತ್ತುತ್ತಿದ್ದ ವಿಷಯ ತಿಳಿದು ಅವರನ್ನು
ಕಂಡೂ ಬಂದಾಯಿತು.. ಅದೇ ದಿನ ರಾತ್ರಿ ಆತನ ಕನಸಿನಲ್ಲಿ ಮಠಕ್ಕೊಬ್ಬ ಸ್ವಾಮಿ
ಬಂದಿದ್ದಾನೆಂಬ ಕನಸು ಬೇರೆ..
ಶಾಸ್ತ್ರಿಗಳು, ಹಾಗೂ ಪ್ರಿನ್ಸಿಪಾಲರೊಡನೆ ಆ
ಸನ್ಯಾಸಿಯ ಬಳಿ ಹೋದ ಅಪ್ಪೇಗೌಡರು ಮಠಕ್ಕೆ ಬರಲು ಬೇಡಿಕೊಂಡರು.. ಅದಕ್ಕೊಪ್ಪದ ಆತ ನಾನು
ಸ್ವಾಮಿ ಯಲ್ಲ, ಅಂತ ಹೇಳಿದವನೇ ಎಲ್ಲೋ ಹೊರಟುಬಿಟ್ಟ, ಕೆಲ ದಿನಗಳ ನಂತರ ಆ ಸನ್ಯಾಸಿ
ವಾಪಸು ಬಂದು ಊರಿನಲ್ಲಿ ನೆಲಸಲು ಒಪ್ಪಿದ ಕೆಲ ಷರತ್ತುಗಳೊಂದಿಗೆ, ಆ ಸನ್ಯಾಸಿಯ
ಉದ್ದೇಶವೊಂದೇ ದೇವಸ್ಥಾನ ಪೂಜೆ ಪುನಸ್ಕಾರಗಳಿಗಿಂತ ಶಾಲೆ, ಆಸ್ಪತ್ರೆ ಹೀಗೆ ಜನರಿಗೆ
ಉಪಕಾರವಾಗುವಂತಹ ಸೇವೆಗಳನ್ನು ಮಾಡುವುದು.. ಆದರೆ ಮಠದ ಸ್ವಾಮೀಜಿ ಅಂತ ಸನ್ಯಾಸಿ
ಕರೆಸಿಕೊಳ್ಳಲು ಒಪ್ಪದೇ ಹೋದರೆ ದಾನ ಹುಟ್ಟುವುದು ಕಷ್ಟ ಮಠ ಉದ್ದಾರ ಆಗುವುದು, ಶಾಲೆ,
ಕಾಲೇಜು ಕಟ್ಟುವುದು ಅಸಾದ್ಯದ ಮಾತೇ ಸರಿ ಎಂದು ಶಾಸ್ತ್ರಿಗಳು, ಅಪ್ಪೇಗೌಡರ ಮಾತಿಗೆ
ಸನ್ಯಾಸಿ ಮೌನಂ ಸಮ್ಮತಿ ಲಕ್ಷ್ಮಣಂ ನಂತಿದ್ದರು….
ಕೊಡುಗೈ ದಾನಯಾದ ಅಪ್ಪೇಗೌಡರ ಸಹಕಾರದೊಂದಿಗೆ,
ಶಾಸ್ತ್ರಿಗಳು, ಪ್ರಿನ್ಸಿಪಾಲರು, ಎಂ.ಎಲ್.ಎ ಚಂದ್ರಪ್ಪ ನವರು ಸ್ವಾಮೀಯ ಹೆಸರಿನ
ಬಲದಿಂದಲೇ ದಾನ ಸಂಗ್ರಹಿಸಿ ಶಾಲಾ ಕಾಲೇಜು, ಆಸ್ಪತ್ರೆ ಮುಂತಾದವನ್ನು ಕಟ್ಟಿಸುವಲ್ಲಿ
ಯಶಸ್ವಿಯಾದರು… ಆದರೆ ಸ್ವಾಮೀಜಿಯು ಯಾವತ್ತೂ ಸ್ವಾಮೀಜಿಯ ರೀತಿ ನಡೆದುಕೊಂಡಿದ್ದೇ
ಇಲ್ಲ.. ಅಸಲಿಗೆ ಆತ ನಾನು ಸ್ವಾಮೀಜಿ ಎಂದು ಯಾರ ಬಳಿಯೂ ಬಾಯಿ ಬಿಟ್ಟು
ಒಪ್ಪಿಕೊಂಡಿರಲಿಲ್ಲ.. ಅವರ ಉದ್ದೇಶವೊಂದೇ ಸಮಾಜ ಸೇವೆ… ಮಠದ ಶಿಷ್ಟಾಚಾರದಂತೆ ಅವರು
ನಡೆದುಕೊಳ್ಳಲಿಲ್ಲ.. ಉಳಿದುಕೊಳ್ಳಲಿಕ್ಕೆ ಅವರೇ ಒಂದು ಗುಡಿಸಲು, ಮುಕ್ಕಾಲು ಎಕರೆಯಲ್ಲಿ
ಮೈ ಬಗ್ಗಿಸಿ ಅವರೇ ಅವರ ಅನ್ನವನ್ನು ದುಡಿದುಕೊಳ್ಳುತ್ತಿದ್ದರು… ಬರ ಬರುತ್ತಾ ಅವರು
ಕಟ್ಟಿದ ಸಮಿತಿಯ ಅಧ್ಯಕ್ಷಗಿರಿಯಿಂದ ಹೊರಗಿದ್ದು ಶಾಲಾ ಕಾಲೇಜುಗಳ ಜವಾಬ್ದಾರಿಯನ್ನು
ನಾನಿಲ್ಲದೇ ನಡೆಯುವುದು ಕಲಿಯಬೇಕು ಅಂದರು…
ರಾತ್ರಿಯೂಟ ಮುಗಿಸಿ ಹೊರಬಂದ ಶಾಸ್ತ್ರಿಗಳಿಗೆ
ಬಾಗಿಲಿನ ಬಳಿ ನಿತ್ರಾಣವಾಗಿ ಕುಳಿತುಕೊಂಡಿದ್ದ ಯಜಮಾನ ಅಪ್ಪೇಗೌಡರು ಕಾಣಿಸಿದ್ದು ನಂತರ
ಅವರು ಹೇಳಿದ್ದು ಕೇಳಿ ಶಾಸ್ರ್ತಿಗಳು ಗರಬಡಿದವರಂತಾದರು… ಸ್ವಾಮೀಜಿಗಳು ವೈದ್ಯೆ
ಸರೋಜಳನ್ನು ಮೋಹಿಸಿದರೇ!!!! ಅಲ್ಲಿಂದ ಶುರುವಾಗೋದೆ ಅಸಲಿ ಗ್ರಹಣ….
ಮೂಲ: - http://goo.gl/smTbE
ಮೂಲ: - http://goo.gl/smTbE
0 comments:
Post a Comment