Saturday, September 29, 2012

ಅಬಚೂರಿನ ಪೋಸ್ಟಾಫೀಸು - ಪೂರ್ಣಚಂದ್ರ ತೇಜಸ್ವಿ

Abachurina Postoffice - Poornachandra Thejasvi

Abachoorina Postoffice
Avanati
Kubi Mattu Yiyaala
Tukkoji
Dare Devil Mustafa
Tabarana Kathe
Tyakta

 


ಅಬಚೂರಿನ ಪೋಸ್ಟಾಫೀಸು ಪೂರ್ಣಚಂದ್ರ ತೇಜಸ್ವಿಯವರ ಕಥಾ ಸಂಕಲನ.  ಈ ಸಂಕಲನದಲ್ಲಿ ಬರುವ ಕಥೆಗಳು:

ಅಬಚೂರಿನ ಪೋಸ್ಟಾಫೀಸು
ಅವನತಿ
ಕುಬಿ ಮತ್ತು ಇಯಾಲ
ತುಕ್ಕೋಜಿ
ಡೇರ್ ಡೆವಿಲ್ ಮುಸ್ತಫಾ
ತಬರನ ಕಥೆ
ತ್ಯಕ್ತ

ಅಬಚೂರಿನ ಪೋಸ್ಟಾಫೀಸು

ಭೋಬಣ್ಣ ಅಬಚೂರಿನ ಮೊದಲಿನ ಪೋಸ್ಟ್ ಆಫೀಸಿನ ಮೊದಲ ಕೆಲಸಗಾರ. ಸ್ವಲ್ಪ ಇಂಗ್ಲಿಷ್ ಗೊತ್ತಿದ್ದರಿಂದ ಮತ್ತು ಆ ಊರಿನಲ್ಲಿ ಯಾರಿಗೂ ಇಂಗ್ಲಿಷ್ ಗೊತ್ತಿಲ್ಲದ್ದರಿಂದ ಅವನಿಗೆ ಆ ಕೆಲಸ ಕೊಟ್ಟಿದ್ದು. ಈ ಕೆಲಸ ಸಿಗುವ ಮೊದಲು ತುಂಬಾ ಖುಷಿಯಗ್ಗಿದ್ದ, ಆನಾಥನಾದ  ಭೋಬಣ್ಣ ಮಾಚಮ್ಮನ ಮನೆಅಳಿಯನಾದ. ಈ ಮೊದಲು ಅಲ್ಲೀಜಾನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭೋಬಣ್ಣ ಪೋಸ್ಟಾಫೀಸು ಬರುವರೆಗೂ ಯಾವುದೇ ತೊಂದರೆಯಿಲ್ಲದೆ ಜೀವನ ಸಾಗುಸಿತ್ತಿದ್ದ. ಒಂದು ದಿನ ಅಲ್ಲೀಜಾನ್ ಮಗನಿಗೆ ಬಂದಿದ್ದ ಪತ್ರವನ್ನು ಕದ್ದು ನೋಡಿ ಅಲ್ಲಿದ್ದ ಬೆತ್ತಲೆ ಹೆಣ್ಣಿನ ಚಿತ್ರ ನೋಡಿ ತನ್ನ ಹೆಂಡತಿ ಈಗೆ ಇರಬಹುದ ಎಂದು ಮನಸಿನ್ನಲೇ ಯೋಚನೆ ಮಾಡುತ್ತಾನೆ. ಆ ದಿನದ ನಂತರ ಯಾವುದೇ ಪತ್ರ ಬರಲಿ ಅದು ಹೆಣ್ಣಿನ ಬೆತ್ತಲೆ ಚಿತ್ರ ಎಂದು ಹೂಯಿಸಿ ತೆಗೆದು ನೋಡುತ್ತಾನೆ. ದಿನ ದಿನ ಕಳೆಯುತ್ತಾ ಪ್ಪೋಸ್ಟ್ ಆಫೀಸಿನಲ್ಲಿ ಜನ ಪತ್ರ ಬರೆಸುವುದು, ಓದುವುದು, ಹರಟೆ ಹೊಡೆಯುವುದು ಜಾಸ್ತಿ ಹಾಗುತ್ತ ಬಂತು. ಯಾರು ತೆಗೆದುಕೊಂಡು ಹೋಗದ ಪತ್ರವನ್ನು ಜಾಯಿಕಾಯಿ ಪೆಟ್ಟಿಗೆ ಹಾಕುವುದು ನಿತ್ಯದ ಕಾರ್ಯ. ಒಂದು ದಿನ ಬೆಲಾಯದ ಮಗಳ ಕೆಟ್ಟ ಚಾಳಿಯ ಮೇಲೆ ಒಂದು ಪತ್ರ ಬರುತ್ತದೆ. ಬೆಲಾಯ ಆ ಸಮಯದಲ್ಲಿ ಊರಿನಲ್ಲಿ ಇರದ ಕಾರಣ ಪತ್ರವನ್ನು ಜಾಯಿಕಾಯಿ ಪೆಟ್ಟಿಗೆ ಹಾಕಿದ, ಆ ಪತ್ರವನ್ನು ಊರಿನ ಜನ ನೋಡಿ ಗುಸು ಗುಸು ಮಾತಾಡುವುದು, ಕೆಟ್ಟ ಮಾತನ್ನು ಹರಡವುದು ವಾಡಿಕೆಯಾಗಿತ್ತು. ಇದೆಲ್ಲ ಭೋಬಣ್ಣನ ಅತ್ತೆಗೆ ಇಷ್ಟವಾಗುತ್ತಿರಲ್ಲಿಲ್ಲ, ಅವರಿಗೆ ಇವನು ತನ್ನ ಹೆಂಡತಿ ಜೊತೆ ಬೇರೆ ಮನೆ ಮಾಡುತ್ತಾನೆ ಇದರಿಂದ ತಾನು ಒಂಟಿ ಯಾಗಬಹುದು ಎಂದು ಯೋಚಿಸಿ ಭೋಬಣ್ಣನನ್ನು ದ್ವೇಷಿಸುತ್ತಾಲೆ. ಬೆಲಾಯದ ಮಗಳ ಪತ್ರದ ವಿಷಯ ದೊಡ್ದಾಗಿ ಅವನನ್ನು ಹೊಡೆಯಲು ಊರಿನ ಜನರು ಬರುತ್ತಾರೆ, ಬಂದವರಲ್ಲಿ ಇಬ್ಬರು ಮೂವರನ್ನು ಹೊಡೆದುಊರು ಬಿಟ್ಟು ಓಡಿಹೋಗುತ್ತಾನೆ.

ಈ ಕಥಾ ಸಂಕಲದಲ್ಲಿ ಇರುವ ಎಲ್ಲ ಕಥೆಗಳು ಒಂದೊಂದು ವಿಷಯಗಳ ಬಗ್ಗೆ ತಮ್ಮ ವಿಚಾರಗಳನ್ನು ನಮ್ಮ ಮುಂದೆ ಇಡುತ್ತಾರೆ, ಕುಬಿ ಮತ್ತು ಇಯಾಲದಲ್ಲಿ ರಾಜಕೀಯ ಮತ್ತು ಗೊಡ್ಡು ನಂಬಿಕೆ, ತುಕ್ಕೋಜಿಯಲ್ಲಿ ಗಂಡ ಹೆಂಡತಿ ಮಧ್ಯೆ ಬರುವ ವ್ಯಮನಸ್ಸು, ದರೆ ಡೆವಿಲ್ ಮುಸ್ತಫಾ ದಲ್ಲಿ ಜಾತಿ ಬಗ್ಗೆ ಮತ್ತು ತ್ಯಕ್ತದಲ್ಲಿ ಬದುಕಿನಬಗ್ಗೆ ವಿವರಿಸುತ್ತಾರೆ.


Friday, September 28, 2012

ಇನ್ನೊಂದೇ ದಾರಿ - ಶಿವರಾಮ ಕಾರಂತ

Innonde Daari - Shivarama Karanth




ಇನ್ನೊಂದೇ ದಾರಿ ಮೂರು ತಲೆಮಾರಿನ ಒಂದು ಸಂಸಾರದ ಕಥೆ. ಮೂರು ತಲೆಮಾರಿನ ಮನಸ್ಸಿನ ಯೋಚನೆ, ಸಾಮಾಜದ ಚಿಂತನೆ, ಅವರು ಯೋಚಿಸಿಸುವ ವಿಚಾರಗಳ ಅಂತರ ಮತ್ತು ಅವರ ಕಲ್ಪನೆಗಳ ವಿಸ್ತಾರ, ಇವೆ ಕಾರಂತರ 'ಇನ್ನೊಂದೇ ದಾರಿ'ಯ ಎಳೆ.


ಮೊದಲೆನೆಯ ತಲೆಮಾರು: ಹೊನ್ನಿ, ಸೋಮಯಾಜಿ, ವೆಂಕಮ್ಮ
ಎರಡನೇ ತಲೆಮಾರು - ಮಾದೇವ, ಪದ್ಮಾವತಿ, ನರಸಿಂಹ
ಮೂರನೇ ತಲೆಮಾರು - ಜಯರಾಮ, ಶ್ರೀರಾಮ


ಹೊನ್ನಿ ಒಂದು ಬಡ ಕುಟುಂಬದವಳು, ಮದುವೆಯಾದ ಗಂಡ ತುಂಬ ಶ್ರೀಮಂಥನಲ್ಲ ಆದರೆ ಅವನಿಗೆ ಹೆಣ್ಣಿನ ಚಪಲ. ಹೊನ್ನಿ ಗಂಡನ ಕೆಟ್ಟ ಗುಣಗಳನ್ನು ಯಾರ ಹತ್ತಿರವೂ ದೂರುತ್ತಿರಲ್ಲಿಲ, ಅವಳಿಗೆ ಅಪ್ಪ ಅಮ್ಮ ಕಳಿಸಿಕೊಟ್ಟ ನಡತೆ ಗುಣಗಳೇ ಅದಕ್ಕೆ ಕರಣ. ಅವಳ ಅತ್ತೆ(ಗಂಡನ ಅಕ್ಕ) ವೆಂಕಮ್ಮ ಮೊದಮೊದಲು ಅವಳನ್ನು ಕಾಣುತ್ತಿದ್ದ ರೀತಿ ಕೆಟ್ಟದ್ದಿದ್ದರು, ಮಾದೇಶ ಹುಟ್ಟಿದಮೇಲೆ ಬಾದಲಾಹಿತು. ಮಾದೇಶ ಇರುವ ಮೂರು ಅಂಗುಲ ಜಾಗದಲ್ಲಿ ದುಡಿದರು ಮೂರು ಜನಕ್ಕೆ ಏನೇನು ಸಾಲುವುದಿಲ್ಲ. ಮಾದೇಶ ಬೇರೆ ಬೇರೆ ಕೆಲಸ ಮಾಡಿದರು ಹೊಟ್ಟೆ ತುಂಬಿಸಲು ಕಷ್ಟ.


ಮಾದೇಶನಿಗೆ ಮೂರು ಗಂಡು ಮತ್ತು ಎರಡು ಹೆಣ್ಣು ಮಕ್ಕಳು. ಬಡತನ ಕಿತ್ತು ತಿನ್ನುತ್ತಿತ್ತು. ಇದೆ ವೇಳೆಗೆ ಆ ಊರಿನ ಉಪಾಧ್ಯಾಯಾರ ಸ್ನೇಹಿತರಿಗೆ ಮಕ್ಕಳಿಲ್ಲವಾದ್ದರಿಂದ, ಮಾದೇಶನ ಮೊದಲೆನೆಯ ಗಂಡು ಮಗುವನ್ನು ದತ್ತು ಮಾಡಿಕೊಳ್ಳುತ್ತಾರೆ. ನರಸಿಂಹ, ಮಾದೇಶನ ಮೊದಲನೆಯ ಮಗ, ಹೋದ ಮನೆ ನಾರ್ಣಪ್ಪಯ್ಯನವರದು ದೈವಭಕ್ತ ಕುಟುಂಬ. ಅಲ್ಲಿ ಬೆಳೆದ ನರಸಿಂಹ ದೈವಭಕ್ತಿ ಇದ್ದರು ಕೆಲವೊಂದು ಆಚರ ವಿಚಾರದ ಬಗ್ಗೆ, ಯಾಕೆ ಮಾಡುತ್ತಾರೆ, ಅದರ ಪ್ರಯೋಜನ ಏನು ಎಂದು ಪ್ರಶ್ನೆಗಳು, ಸಂಶಯಗಳು ಎದ್ದವು. ಇತ್ತ ಮಾದೇಶನಿಗೆ ನಾರ್ಣಪ್ಪಯ್ಯ ೩೦ ಎಕರೆ ಜಾಗವನ್ನು ಮತ್ತು ಮನೆಯನ್ನು ಕೊಟ್ಟು ಚೆನ್ನಾಗಿ ಬಾಳಲು ಅನವು ಮಾಡಿಕೊಟ್ಟರು. ಆ ೩೦ ಎಕೆರೆ ಲಾಡು ಜಾಗವನ್ನು ಒಳ್ಳೆ ಇಳುವರಿ ಬರುವ ಜಮಿನನ್ನಗಿ ಮಾಡಲು ಹಗಲು ರಾತ್ರಿ ಶ್ರಮಿಸಿದರು. ಮಾದೇಶನ ಚಿಕ್ಕಮಗ ಸೂರ್ಯ, ಅಜ್ಜಿಯ ಕಾಹಿಲೆ ಗುಣವಾಗಲಿ ಅಂತ ನರಸಿಂಹಮೂರ್ತಿ ಕರೆದುಬರುಲು  ಶಿವಮೊಗ್ಗಕ್ಕೆ ಹೋಗಿದ್ದಾಗ ತನ್ನ ಅಣ್ಣ ನರಸಿಂಹ ಸಿಕ್ಕಿದಾಗ ಹೇಳತೀರದ ಸಂತೋಷ ಪಟ್ಟನು. ಇಬ್ಬರು ಜೊತೆಗೂಡಿ  ವೈದ್ಯರನ್ನು ಕರೆದುಕೊಂಡು ಊರಿಗೆ ಬಂದಾಗ, ಎಲ್ಲರಿಗೆ ತಾವು ಕಳೆದುಕೊಂಡಿದ್ದ ಅಮೂಲ್ಯ ರಂಥ ಸಿಕ್ಕಿದಂತಾಗುತ್ತದೆ.


ನರಸಿಂಹನಿಗೆ ಎರಡು ಗಂಡು ಮಕ್ಕಳು. ಮೊದಲೆಯವನು ಶ್ರೀರಾಮ ಮತ್ತು ಎರಡೆನೆಯವನು ಜಯರಾಮ. ಇಬ್ಬರ ಯೋಚಿಸುವ ರೀತಿ ಬೇರೆ ಬೇರೆ. ಜಯರಾಮ ಎಲ್ಲವನ್ನು ಪ್ರಶ್ನಿಸುತ್ತಾನೆ, ದೇವರು, ಜಾತಿ, ಧರ್ಮ, ಆಚಾರ, ಎಲ್ಲದಕ್ಕೂ ಅವನ ವಿಚಾರಗಳೇ ಬೇರೆ, ಇದರಿಂದ ಅಪ್ಪ ನರಸಿಂಹ ಮತ್ತು ಹೆಂಡತಿಗೆ ತುಂಬ ನೋವಾಗುತ್ತದೆ. ಶ್ರೀರಾಮ ಬೆಂಗಳೂರಿನಲ್ಲಿ ಓದುತ್ತ ಕೆಲ ಜಾತಿಯ ಹುಡುಗಿಯನ್ನು ಪ್ರೀತಿಸುತ್ತಾನೆ. ಅಪ್ಪ ಅಮ್ಮ ಮದುವೆಗೆ ಒಪ್ಪುದಿಲ್ಲ ಎಂದು ತಿಳಿದು ನ್ಯಾಯಾಲಯದಲ್ಲಿ ಮಾಡುವೆಯಾಗುತ್ತಾನೆ. ಇದನ್ನು ತಿಳಿದು ಅಮ್ಮ ಹಾಸಿಗೆ ಹಿಡಿಯುತ್ತಾಳೆ. ಜಯರಾಮ ಅಮ್ಮನ ಸ್ಥಿತಿ ನೋಡಿ ತಾನು ಮನೆಯಿಂದ ಹೊರಟರೆ ಸರಿ ಇರೋದಿಲ್ಲ ಎಂದು ತಿಳಿದು  ಮನೆಯಲ್ಲಿ ಇರಲು ತಿರ್ಮಾನಿಸುತ್ತಾನೆ. ಆದರೆ MA ಮುಗಿಸಲು ಒಂದೇ ವರ್ಷ ಇರಬೇಕಾದರೆ ಯಾಕೆ ಓದು ಬಿಡುತ್ತಿಯಾ ಎಂದು ಹೇಳಿ ಓದು ಮುಗಿಸಲು ಅಪ್ಪ ಕಳಿಸುತ್ತಾರೆ.


ಜಯರಾಮ ನೋಡುವ ದೃಷ್ಟಿ, ಮಾಡುವ ಕಾರ್ಯಗಳು, ಅವನು ಇಡುವ ವಾದಗಳು ಸಾಮಾಜ ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಅವರ ಯೋಚನೆಗಳು ಬದಲಾಗಬೇಕು, ಜಾತಿ ಪದ್ಧತಿ ಇಂದ ಹೊರಬರಬೇಕು, ಮೇಲು ಕೀಳು ಇರಬಾರದು, ಕೆಲವರಿಗೆ ಇದು ಇಷ್ಟವಾಗುವುದಿಲ್ಲ. ಅವನು ವೇಶ್ಯಯಾ ಮಗ ಮತ್ತು ಮಗಳನ್ನು ತಂದು ಓದಿಸುವುದಾಗಲಿ, ಅನಾಥ ಮಗುವನ್ನು ಮಾಡುವೆ ಯಾಗದೆ ದತ್ತು ಪಡೆವುದಾಗಲಿ ಯಾರಿಗೂ ಇಷ್ಟವಾಗುವುದಿಲ್ಲ. ಅವನು ಯೋಚಿಸುವ ರೀತಿ, ಅಮ್ಮ ವೇಶ್ಯಯಾದರೆ ಅದರಲ್ಲಿ ಮಕ್ಕಳ ತಪ್ಪಿಲ್ಲ, ಮಕ್ಕಳು ಹುಟ್ಟಿದಾಗ ತಾವು ಇಂತವರ ಒಟ್ಟೆಯಲ್ಲಿ ಹುಟ್ಟಬೇಕು ಅಂತ ಕೇಳಿಕೊಂಡು ಬರುವುದಿಲ್ಲ, ಆದರು ಅವರನ್ನು ಸಾಮಜ ನೋಡುವ ರೀತಿ ಬೇರೆಯದೇ.


ಇಲ್ಲಿ ಕಾರಂತರು ಯಾವ ಯಾವ ಪೀಳಿಗೆ ಯಾವ ರೀತಿ ಯೋಚಿಸುತ್ತದೆ ಮತ್ತು ನಾವು ಯಾವ ರೀತಿಯಲ್ಲಿ ಯೋಚಿಸಬೇಕು ಎಂದು ಜಯರಾಮನ ಮೂಲಕ ಹೇಳುತ್ತಾರೆ. ಅವರ ದೃಷ್ಟಿಕೋನ ನಾವು ಬೆಳೆದಂತೆ ನಮ್ಮ ಅಚಾರ ವಿಚಾರಗಳು ಬೆಳೆಯಬೇಕು, ನಮ್ಮ ಸಂಸ್ಕೃತಿ ಬೆಳೆಯಬೇಕು, ನಾವು ಯೋಚಿಸುವ ರೀತಿ ಬದಲಾಗ ಬೇಕು ಅಂತ.



Wednesday, September 19, 2012

ಸರಸಮ್ಮನ ಸಮಾಧಿ - ಶಿವರಾಮ ಕಾರಂತ

Sarasammana Samadhi - Shivarama Karanth

ಕಾರಂತರ ಸರಸಮ್ಮನ ಸಮಾಧಿ ಒಂದು ಹೆಣ್ಣಿನ ಶೋಷಣೆ ಅಥವಾ ಗಂಡಸಿನ ಹೆಣ್ಣಿನ(ಹೆಂಡತಿ)ಕಡೆ ಉದಾಸೀನದ ಕುರಿತು. ಸಮಾಜದಲ್ಲಿ ಬೇರೆ ಬೇರೆ ವರ್ಗದ, ಮನೆಯ ಮತ್ತು ಗಂಡನದಿರ ಮನೆಯಲ್ಲಿನ ಹೆಣ್ಣಿನ ಸ್ವಾತಂತ್ರ್ಯ, ಅವರ ಮನಸ್ಸಿನ ವ್ಯಥೆ, ಅವರು  ಅನುಸರಿಸುವ ಪದ್ಧತಿ, ಕಷ್ಟ ನಿವಾರಣೆಗೆ ಮಾಡುವ ಕಾರ್ಯಗಳು ನಿಜ ಜೀವನಕ್ಕೆ ಹತ್ತಿರವಾದ ರೀತಿಯಲ್ಲಿ ವಿವರಿಸುತ್ತಾರೆ. ಮೊದಮೊದಲು ಈ ಕಾದಂಬರಿ ಕ್ಲಿಷ್ಟಕರ ಎನಿಸಿದ್ದರು ಕಾದಂಬರಿ ಮುಗಿಸುವ ಹೊತ್ತಿಗೆ ತಿಳಿನೀರಿನ ಹಾಗೆ ಸ್ಪಸ್ಟವಾಗುತ್ತದೆ.

ಸರಸಮ್ಮ ಮೂಡಂಬೈಲಿನ ದೇವತೆ. ಆ ಊರಿನ ಜನ ಮತ್ತು ಸುತ್ತಮುತ್ತಲಿನ ಊರಿನ ಜನ ಸರಸಮ್ಮನ ಗುಡಿಗೆ ರಾತ್ರಿಯಲ್ಲಿ ಬಂದು ತೆಂಗಿನ ಕಾಯಿಯನ್ನು ಕೆರೆಗೆ ತೇಲಿ ಬಿಟ್ಟು ಯಾರು ಕಾಣದ ಹಾಗೆ ಹೋಗುತ್ತಾರೆ. ಈ ರೀತಿ ಮಾಡಿದರೆ ತಮ್ಮ ಇಷ್ಟಾರ್ಥ ನೆರವೇರುತ್ತದೆ. ಕಾದಂಬರಿಯಲ್ಲಿ ಬರುವ ಜಾನಕಿಯಾ ಗಂಡನ ಊದಾಸಿನ, ಸುನಾಲಿನಿಯಾ ಗಂಡನ ನಿರ್ಲಕ್ಷ್ಯ, ಭಾಗೀರಥಿಯಾ ಮಾವನ ಕೆಟ್ಟ ದೋರಣೆಯಿಂದ ಸರಸಮ್ಮ ಸಾಮಧಿಗೆ ಬಂದವರೇ. ಅವರ ಎಲ್ಲಾ ಆಸೆ ಪೂರೈಸದೆ ಹೋದರು ಸರಸಮ್ಮ ತರುತ್ತಾಳೆ. ಇಲ್ಲಿ ಬರುವ ಮೂಖ್ಯ ಪಾತ್ರ ಚಂದರಯ್ಯ  ಬೆಳ್ಯಮ್ಮನ ಬೂತ(ಪ್ರೇತ)ಆಸಕ್ತ್ಹಿಂದ ಸರಸಮ್ಮನ ಸಾಮಧಿಯತ್ತಿರ ಹೋಗಿದಾದರು, ಭಾಗೀರಥಿಯಾ ಮತ್ತು ಜಲಜಾಕ್ಷಿಯಾ ಪ್ರೀತಿ(ಆಕರ್ಷಣೆ)ಯಾ ಮಧ್ಯೆ ಮನಸ್ಸು ತೊಲಾಡುತ್ತದೆ.

ಇಲ್ಲಿ ನಾವು ನೋಡಬೇಕಾದ ಅಂಶ, ಇಲ್ಲಿ ಸಾಮಜದ ಹೆಣ್ಣಿನ ಮೇಲಿನ ಮೌಡ್ಯತೆ ಮತ್ತು ಗಂಡಸ್ಸಿನ "ಹೆಣ್ಣಿನ ಮನಸ್ಸು ಮತ್ತು ಶರೀರ ಸ್ವಂತ ಸ್ವತ್ತು" ಎಂಬ ದೋರಣೆ ಎಷ್ಟು ಕಠೋರ ಶಿಕ್ಷೆ ಹೆಣ್ಣಿನ ಪಾಲಿಗೆ ಅಂತ ವಿವರಿಸುತ್ತಾರೆ.

ಕೊನೆಯ ಸಾಲು: ಈ ಕಾದಂಬರಿಯಲ್ಲಿ ವಿವರಿಸಿರುವಾಗೆ ಸ್ಥಿತಿ ಈಗಿನ ನಗರಗಳಲ್ಲಿ ಇಲ್ಲವಾದರೂ, ಕೆಲ ಹಳ್ಳಿಗಳ ಕಡೆ ಇದೆ.


Sunday, September 16, 2012

ಜುಗಾರಿ ಕ್ರಾಸ್ - ಪೂರ್ಣಚಂದ್ರ ತೇಜಸ್ವಿ

 Jugari Cross - K. P. Poornachandra Tejasvi





ಒಂದು ಒಳ್ಳೆಯ ಪತ್ತೇದಾರಿ ಕಾದಂಬರಿಗೆ ಬೇಕಾದ ಎಲ್ಲಾ ರುಚಿಗಳು ಈ ಕಾದಂಬರಿಯಲ್ಲಿ ಸಿಗುತ್ತದೆ. ಪ್ರೀತಿ, ಹಣ, ದರೋಡೆಕೋರರು, ವಂಚನೆ, ಕೊಲೆ, ಮೋಸ ಮತ್ತು ಬಹುಮುಕ್ಯವಾದ ನಿಧಿಯಾ ರಹಸ್ಯ. ಜುಗಾರಿ ಕ್ರಾಸ್ ನಾನು ಓದಿದ ತೇಜಸ್ವಿಯವರ ಎರಡನೇ ಕಾದಂಬರಿ. ಇದು ಓದಲು ಶುರು ಮಾಡುವವರು ಮುಗಿಸುವುದರ ಮೊದಲು ಪುಸ್ತಕವನ್ನು ಮುಚ್ಚಿಡಲು ಆಗುವುದಿಲ್ಲ ಯಾಕೆಂದರ ಈ ಕಾದಂಬರಿ ಆ ರೀತಿಯ ಉಸ್ತುಕತೆಯನ್ನು ನಮ್ಮ ಮನದಲ್ಲಿ ಸೃಷ್ಟಿಸುತ್ತದೆ.

ಜುಗಾರಿ ಕ್ರಾಸ್, ಕಾಡಿನ ನಡುವೆ ಬಂದು ಕೂಡುವ ನಾಲ್ಕು ದಾರಿಗಳ ಸರ್ಕಲ್. ಈ ಕಾಡಿನ ಮಧ್ಯೆ ಇರುವ ಜಾಗಕ್ಕೆ ಯಾಕೆ ಜುಗಾರಿ ಕ್ರಾಸ್ ಅಂತ ಹೆಸರಿಟ್ಟಿದ್ದಾರೆ ಅಂತ ನಾವು ಕಾದಂಬರಿ ನಡುವೆ ಗೊತ್ತಾಗುತ್ತದೆ, ಇಲ್ಲಿ ಕಾಡಿನಲ್ಲಿ ನೆಡೆವುವ ಕಳ್ಳ ಸಾಗಣೆ , ಕಳ್ಳ ಬಟ್ಟಿ, ಪೋಲೀಸರ ಲಂಚಕೊರಿಕೆ, ಈ ಕಾರಣಗಳೇ ಇದಕ್ಕೆ ಆ ಹೆಸರು. ಇಲ್ಲಿ ಬಂದುಹೋಗುವ ಸಣ್ಣ ಸಣ್ಣ ಪಾತ್ರಗಳು, ಮಾತಾಡದ ದ್ಯಾವಮ್ಮ ಮಗಳು, ದೇವಪುರದ ಸಿದ್ದಪ್ಪ, ಅಬ್ಬುಸಾಲಿ, ಈ ಕಥೆಯ ಮುಖ್ಯ ಭಾಗವಗುತ್ತಾರೆ. ಕಥೆಯ ನಾಯಕ ಮತ್ತು ನಾಯಕಿಯಂತಿರುವ ಸುರೇಶ, ಗೌರಿ,  ತೇಜಸ್ವಿಯವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಅಕ್ರಮ, ಅನಾಚಾರಗಳ ವಿಸ್ತೃತ ಚಿತ್ರಣದಲ್ಲಿ ಮೂಕ ಪ್ರೆಕ್ಷಕರಾಗುತ್ತಾರೆ .

ಅರಣ್ಯ ಅಧಿಕಾರಿಗಳು ಲಂಚ ಕೊಡಲೆಂದು ಜನರಿಗೆ ಕೊಡುವ ಕಾಟ, ಫೋನಿನಲ್ಲೇ ನಡಯುವ ಕಳ್ಳ ದಂದೆಗಳು, ಸರ್ಕಾರದ ಹಾರಜಿನಲ್ಲಿ ನೆಡುವ ಗಂಡಾಗುಂಡಿ, ತೆರಿಗೆ ಉಳಿಸಲು ಅಡ್ಡ ದಾರಿ ಇಡುವ ರೈತರು, ದುಡ್ಡಿಗಾಗಿ ಬಡ ರೈತರ ಜೀವ ಹಿಂಡುವ ದಲ್ಲಾಳಿಗಳನ್ನು ತೇಜಸ್ವಿಯವರು ಮನ ಮುಟ್ಟುವಂತೆ ಹೇಳುತ್ತಾರೆ.

ಸುರೇಶನು ತಾನು ಮಾರಿದ್ದ ಅರವತ್ತು ಸಾವಿರದ ಏಲಕ್ಕಿಗೆ ಜೀವನ್ ಲಾಲನು ಯಾಕೆ ಒಂದು ಲಕ್ಷದ ಅರವತ್ತು ಸಾವಿರ ಕೊಟ್ಟು ಅಂತ ಯೋಚಿಸುತ್ತಿರುವಾಗ ಶೆಸಪ್ಪನ ಕೊಲೆ ಯಾಗುತ್ತದೆ (ಕೊನೆಯಲ್ಲಿ ಅದು ಬರಿ ಕೊಲೆಯ ಹಲ್ಲೆ ಅಂತ ತಿಳಿಯುತ್ತೆ). ಸುರೇಶನ ಹಳೆಯ ಮಿತ್ರ ರಾಜಪ್ಪ ಸಿಕ್ಕಿ ಅವನು ಮಾಡುತ್ತಿರುವ ಹಳೆಗನ್ನಡ ಅನುವಾದಕ್ಕೆ ಇವನ ಸಹಾಯ ಕೋರಿ ಕೊಡುವ ಲಿಪಿಯನ್ನು ಓದಿದಾಗ ಕೆಂಪು ಕಾಲಿನ ರತ್ನದ ಜಾಗಕ್ಕೆ ಅದು ನಕ್ಷೆ ಎಂದು ತಿಳಿಯುದರಲ್ಲಿ ದುಡ್ಡು ದೊಜಲು ಶಾಸ್ತ್ರೀ ಕಳಿಸಿದ್ದ ಗೂಂಡಗಳಿಗೆ ಹೆದರಿ ಚಲಿಸುವ ಟ್ರೈನಿನಿಂದ ಹಾರುತ್ತಾರೆ.

ಇದೊಂದು ೨೪ ಗಂಟೆಯಲ್ಲಿ ನಡಯುವ ಘಟನೆಗಳನ್ನು ತೇಜಸ್ವಿಯವರು ಎಲ್ಲೂ ಬೇಸರವಾಗದಂತೆ ವಿವರಿಸಿದ್ದಾರೆ.


Tuesday, September 11, 2012

ಚಿದಂಬರ ರಹಸ್ಯ - ಪೂರ್ಣಚಂದ್ರ ತೇಜಸ್ವಿ

Chidambara Rahashya - K. P. Poornachandra Tejasvi


ಕ್ರಾಂತಿ, ಜಾತಿ ವೈಶಮ್ಯಾ, ಪ್ರೀತಿ, ಸ್ನೇಹ, ರಾಜಕೀಯ, ವಿದ್ಯೆ, ಸಾಮಾಜಿಕ ಅಸಮತೋಲನ ಮತ್ತು ವೈರುತ್ವ..... ಈ ಎಲ್ಲವನ್ನು ಒಂದು ಕಾದಂಬರಿಯಲ್ಲಿ ನೋಡಬೇಕಾದರೆ ನೀವು ಚಿದಂಬರ ರಹಸ್ಯವನ್ನು ಓದಲೇಬೇಕು. ಎಲ್ಲಾ ವಿಷಯಗಳನ್ನು ಎಲ್ಲೂ ಜಾಸ್ತಿ ಕಮ್ಮಿ ಆಗದಂತೆ ಅರ್ಥಗರ್ಬಿತವಾಗಿ ಸೊಗಸಾಗಿ ಪ್ರಕೃತಿಯ ಮಧ್ಯದಲ್ಲಿ ನಡೆಯುವ ಘಟನೆ, ದುರ್ಗತನೆಗಳನ್ನು ಈ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟಿದಹಾಗೆ ಹೇಳುತ್ತಾರೆ. ಇದು ಪತ್ತೇದಾರಿ ಕಾದಂಬರಿ ರೀತಿ ಮೊದಮೊದಲು ಅನಿಸಿದರು ಇದು ಪತ್ತೇದಾರಿ ಕಾದಂಬರಿಯಲ್ಲ, ಸ್ವಲ್ಪ ಹಾಳೆಗಳನ್ನು ತಿರುವಿದ ಮೇಲೆ ಇದು ಜನರ ಜಾತಿ ವೈಶಮ್ಯಾ ಕಾದಂಬರಿ ಅನಿಸಿದರು ಇದು ಆ ರೀತಿಯ ಕಾದಂಬರಿಯಲ್ಲ, ಮತ್ತೆ ಮೂಡನಂಬಿಕೆ, ಅಂತರ ಜಾತಿಯಾ ಪ್ರೀತಿ, ಸ್ನೇಹ ಅಂತ ಒಂದೊಂದು ಹಂತದಲ್ಲಿ ಅನಿಸಿದರು ಕೊನೆಯಲ್ಲಿ ನಮಗೆ ಅನಿಸುವುದು ಇದು ಇವೆಲ್ಲ ವಿಷಯಗಳನ್ನು ಒಳಗೊಂಡ ಒಂದು ಸಮಗ್ರ ಸಂಗ್ರಹ ಪುಸ್ತಕ.


ಚಿದಂಬರ ರಹಸ್ಯ ನಾಲ್ಕು ಸ್ನೇಹಿತರ(ರಾಮಪ್ಪ, ಚಂದ್ರ, ರಮೇಶ ಮತ್ತು ಜೋಸೆಫ್) ಕ್ರಾಂತಿಂದ ಶುರುವಾಗಿ, ಅಂಗಾಡಿ ಯಾಲಕ್ಕಿ ಕೃಷಿ ಉತ್ಪಾದನೆಯ ಕುಸಿತದ ಕಾರಣಗಳನ್ನು ಪತ್ತೆಹಚ್ಚಲು ಶುರುಮಾಡಿ ಜೋಗಿಹಾಳ್ರವರ ಸಾವಿನ ಸುತ್ತ ಇರುವ ಸಂಶಯಗಳನ್ನು ಹುಡುಕುತ್ತಾ, ಕೃಷ್ಣೇಗೌಡರ ಮನೆ ಮೇಲೆ ಬೀಳುವ ಕಲ್ಲುಗಳನ್ನು ಯಾರಿಂದ ಅಥವಾ ಅವರ ಆಳುಗಳು ಹೇಳುವಂತೆ ದೆವ್ವ ಬೂತಗಳಿಂದ ಅಂತನಾ ಎಂದು ತಲೆ ಬಿಸಿಲಲ್ಲಿದ್ದರೆ, ಊರಿನಲ್ಲಿ ಜಾಸ್ತಿಯಾಗುತ್ತಿರುವ ಮರಗಳ ಕಳ್ಳ ಸಾಗಣೆ ಮತ್ತು ಮುಸಲ್ಮಾನರ ಜನಸಂಖ್ಯೆ, ಸುಲೇಮಾನ್ ಬೇರಿಂದ ಅಂದಕ್ಕೆ ಅವನ್ನನ್ನು ಮಟ್ಟಾ ಹಾಕಬೇಕೆಂದು ರೂಪು ರೆಷೆಗಾನ್ನು ರಚಿಸುತ್ತಿರುವ ಆಚಾರಿ,  ಕಾಲೇಜಿನ ಅವಾಂತರಗಳು, ಪಟೇಲರ ನಾಸ್ತಿಕತೆ ಮತ್ತು ಅವರ ಯಲ್ಲಕ್ಕಿ ಹ್ಯಬ್ರಿಡಿನ ಹುಡುಕಾಟ, ಇವೆಲ್ಲದುರ ಮಧ್ಯೆ ರಫಿ ಮತ್ತು ಜಯಂತಿಯ ಪ್ರೀತಿ. ಇಲ್ಲಿ ತೇಜಸ್ವಿಯವರೇ ಕಥಾ ನಾಯಕರು ಯಾಕೆಂದರೆ ಅವರ ಶಬ್ದ ಪ್ರಯೋಗ, ಪಾತ್ರಗಳ ಸಂಬಂಧ ಜೋಡಣೆ, ಮತ್ತು ಸ್ಥಿತಿಗೆ ಪೂರಕವಾಗಿ ಬಳಸುವ ವಿಚಾರಗಳು ಯಾವ ಕಾದಂಬರಿಕಾರನನ್ನು ನಾಚಿಸುವನತದ್ದು.


ನಾನು ಓದಿರುವ ಯಾವ ಕಾದಂಬರಿಗಳಲ್ಲೂ ಇಷ್ಟು ಪತ್ರಗಳನ್ನು ಇಟ್ಟುಕೊಂಡು ಯಾವ ವ್ಯಕ್ತಿ ವಿಚಾರವು ವ್ಯತ್ಯ ವಾಗದಂತೆ ನೋಡಿಕೊಂಡಿರುವುದು ಇದೆ ಕಾದಂಬರಿಯಲ್ಲಿ, ತೇಜಸ್ವಿ ಒಬ್ಬರೇ ಇದನ್ನು ಮಾಡಲು ಶಕ್ಯ ವ್ಯಕ್ತಿಯಂತೆ ಅನಿಸುತ್ತದೆ. ಪ್ರಕೃತಿ ಮತ್ತು ಮನುಷ್ಯ ಪ್ರಾಣಿಯ ತುಚ್ಚ ಕಾರಣಗಳ ಹೊಡೆದಾಟಗಳ ಮಧ್ಯೆ ಪ್ರೀತಿ ಅರಳುವುದನ್ನು ನೋಡಬೇಕಾದರೆ ಈ ಕಾದಂಬರಿಯನ್ನು ಮೊದಲು ಓದಿ.


ಕಾದಂಬರಿಯಾ ಒಂದು ತುಣುಕು


ವೈರಫಿ ಮೆಲ್ಲಗೆ ಅವಳ ಆಲಿಂಗನವನ್ನು ಸಡಿಲಿಸಿ ಬಾಗಿ ಅವಳ ಲಂಗ ಕೊಂಚ ಎತ್ತಿದ. ಜಯಂತಿಗೆ ಸ್ವಲ್ಪ ಗಾಬರಿಯಾಯ್ತು . ರಫಿ ಬಿಡುಗಣ್ಣಿನಿಂದ ಅವಳ ದಂತದಂಥ ಕಾಲುಗಳನ್ನು ಒಮ್ಮೆ ನೋಡಿ ಲಂಗ ಬಿಟ್ಟ. ಜಯಂತಿ ನಕ್ಕಳು. ರಫಿಯೂ ನಕ್ಕ.

"ಏನು ರಫಿ?" ಎಂದಳು.

"ಎನಿಲಪ್ಪ" ಎಂದ ರಫಿ.

"ಅಲ್ಲ ಯಾಕೆ ಬಿಟ್ಟಿಟ್ಟೆ? ಬಯ್ತೀನಿ ಅಂತನ?"

"ಇಲ್ಲ ಜಯಂತಿ. ನೀನು ನನಗೆ ಸಿಕ್ಕಿದಿಯಾ ಅಂತ ಏನು ಮಾಡಿದ್ರೂ ನಂಬಿಕೇನೆ ಬರ್ತಿಲ್ಲ. ನನ್ನ ಫ್ರೆಂಡ್ಸ್ ಗೂ ಅಷ್ಟೇ. ಮೊನ್ನೆ ರಾತ್ರಿ ನನ್ನ ತಬ್ಬಿದ್ದು, ಮೋಹಿನಿ ದೆವ್ವಾ ಇರಬೇಕು ಅಂತ ಕೊನೆಗೆ ತೀರ್ಮಾನ ಮಾಡಿದ್ರು ಅವರೆಲ್ಲ. ಕಾಲು ತಿರುಗಾ ಮುರುಗಾ ಇತ್ತೋ ಸರಿಯಗಿತ್ತ್ಹೋ ನೋಡಿದಿಯೇನೋ ಅಂತ ಬಯ್ದರು. ಅದಕ್ಕೆ ಇವತ್ರು ನೋಡಿದ್ದು."
 




ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ

Mookajjiya Kanasugalu - Shivarama Karanth




ಈ ಕಾದಂಬರಿ ನಾನು ಎರಡೇ ದಿನಗಳಲ್ಲಿ ಮುಗಿಸಿದ್ದು, ನಾನು ನನ್ನ ಬಗ್ಗೆ ಹೊಗಳುವುದಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಕಾದಂಬರಿಯಾ ಹಿಡಿತ, ಮುಂದೆ ಏನಾಗುತದೆ ಎಂದು ತಿಳಿಯುವ ತವಕ, ಮತ್ತು ಕಾರಂತರ ಬರವಣೆಗೆಯಾ ಮೋಡಿ ಅಂತಹದ್ದು. ಈ ಕಾದಂಬರಿಗೆ ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿರುವುದಕ್ಕೆ ಕಾದಂಬರಿಗೆ ಸಂದ ತಕ್ಕ ಪ್ರಶಸ್ತಿ ಎಂದು ಹೇಳಬಲ್ಲೆ. ಕಾರಂತರು ಮುನ್ನುಡಿಯಲ್ಲಿ ಇಲ್ಲಿ ಯಾರು ನಾಯಕರಲ್ಲ, ನಾಯಕಿಯರಿಲ್ಲ, ಮೂಕಜ್ಜಿಯು ಸಹ ನಾಯಕಿಯಲ್ಲ ಎಂದು ಹೇಳುತ್ತಾರೆ. ಈ ಕಾದಂಬರಿಯಲ್ಲಿ ಎಲ್ಲ ಜನರು ಪ್ರಮುಖ ಪಾತ್ರವನ್ನು ಒಂದೊಂದು ಕಡೆ, ಒಂದೊಂದು ಬಾರಿ ವಹಿಸಿಕೊಳ್ಳುತ್ತಾರೆ, ಅದಕ್ಕೆ ಇರಬೇಕು ಕಾರಂತರು ಈ ಕಾದಂಬರಿಗೆ ಯಾವ ನಾಯಕ, ನಾಯಕಿ ಇಲ್ಲ ಅಂತ ಹೇಳಿರಬಹುದು.

ಈ ಕಾದಂಬರಿಯನ್ನು ಸುಬ್ಬರಾಯ ಅನ್ನುವವರು ನಮಗೆ ಕಾಥನಕ ರೂಪದಲ್ಲಿ ಹೇಳುತ್ತಾ ಹೋಗುತ್ತಾರೆ. ಅವರ ಜೀವನ, ಮನೆಯ ಹಾಗುಹೋಗುಗಳ ಬಗ್ಗೆ, ತನ್ನ ಸ್ನೇಹಿತರು, ಹೆಂಡತಿ, ಮಕ್ಕಳು ...... ಬಗ್ಗೆ ಹೇಳುತ್ತಾ ಜೀವನದ ಅರ್ಥ, ಸಮಾಜದ ಡೋಂಗಿತನ, ಜನರ ಅಂಜಿಕೆ, ಕಟ್ಟುಪಾಡುಗಳು, ದೇವರ ಬಗ್ಗೆ, ಸಾವಿರಾರು ವರ್ಷಗಳ ಒಂದು ಊರಿನ ಇತಿಯಾಸ, ... ಇಂತ ವಿಷಯಗಳ ಬಗ್ಗೆ ತಮ್ಮ ಅಜ್ಜಿಯತ್ತಿರ ಸತ್ಯ ಶೋದನೆಯೇ ಈ ಕಾದಂಬರಿಯ ಕಥಾವಸ್ತು. ಈ ಕಾದಂಬರಿಯು ೧೯೬೮ಯಲ್ಲಿ ಮೂದ್ರಿತವಾದರು, ಇದು ಆಧುನಿಕ ಜಗತ್ತಿನ ಕೈಗನ್ನಡಿಯಂತಿದೆ. ನಾಗಿಯಾ ರೂಪಹಾಂಕರ, ಜನ್ನನ ಹುಡುಗಿ ಲಂಪಟತನ, ಅನಂತರಾಯರ ಬೊಡ್ಡು ಸನ್ಯಾಸತ್ವ, ಸೀತೆಯ ದೇವರ ಮೇಲಿರುವ ಅಂಧ ನಂಬಿಕೆ, ಮತ್ತು ಸುಬ್ಬರಾಯನ ಸತ್ಯ ಶೋದನೆ, ಇವಕ್ಕೆಲ್ಲ ಕಳಶವಿದ್ದಂತೆ ಮೂಕಜ್ಜಿಯ ನಿರ್ಭಯ, ನಿರ್ಬೀತಿ, ಮತ್ತು ಅವರದೇ ಆದ ಸಮಾಜದ ಕಲ್ಪನೆ ಯಾರನ್ನು ಸಹ ಮೂಕವಿಸ್ಮಿತ ಮಾಡುತ್ತದೆ.

ಇಲ್ಲಿ ಮೂಕಜ್ಜಿಯು ತನ್ನ ಮೊಮ್ಮಗನಿಗೆ ದೇವರು ಒಬ್ಬನೇ, ಜನರು ತಮ್ಮ ತಮ್ಮ ಸ್ವಾರ್ಥಕ್ಕೆ ಬೇರೆ ಬೇರೆ ಹೆಸರುಗಳನ್ನ ಕೊಟ್ಟು, ದೇವರ ಹೆಸರಲ್ಲಿ ಅನಾಚಾರ, ಯುದ್ಧ, ಮತ್ತು ಸಮಾಜವನ್ನು ಒಡೆಯುತ್ತ ಹೇಗೆ ಬಂದರು ಅಂತ ಹೇಳುತ್ತಾರೆ. ಅಜ್ಜಿಯು ಗಂಡು ಹೆಣ್ಣಿನ ಪ್ರೀತಿ, ಪ್ರೇಮ, ಕಾಮ, ಕರ್ಮ, ಕರ್ತವ್ಯದ ಬಗ್ಗೆ ಹೇಳುವ ಮಾತು ಎಲ್ಲರಿಗೂ ಕಣ್ಣು ತೆರುಸುವಂತದ್ದು. ಅವರಿಗೆ ಬೂತ, ವರ್ತಮಾನ, ಭವಿಷ್ಯ ಎಲ್ಲ ಗೊತ್ತು ಆದರು ಅವರು ಆಕಾಶಕ್ಕೆ ಏಣಿ ಹಾಕಿ ಕೂರುವುದಿಲ್ಲ, ಅವರು ಸಮಾಜದ ಅಂಧರನ್ನು ಸರಿಯಾಗಿ ದಾರಿ ತೋರಿಸುಲು ಪ್ರಯತ್ನಿಸುತ್ತಾರೆ.

ಯಾವುದೇ ಪುಸ್ತಕ ಪ್ರೇಮಿಯು ಓದಬೇಕಿರುವ ಒಂದು ವಿಶಿಷ್ಟ, ಚಿರಂಜೀವಿ ಕಾದಂಬರಿ ಇದಾಗಿದೆ.


ಸರಸ್ವತಿ ಸಂಹಾರ - ಬೀchi

Saraswathi Samhaara - beechi


ನಾನು ಬೀchi ಬಗ್ಗೆ ಓದಿದ್ದು ಸುಮಾರು ಮೂರು ನಾಲ್ಕು ವರ್ಷಗಳ ಹಿಂದೆ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ. ನನ್ನ ಆಗಿನ ಅಭಿಪ್ರಾಯ, ಇವರು ಹಾಸ್ಯ ಸಾಹಿತಿ ಮತ್ತು ಕವಿ, ಅದೇ ಅಭಿಪ್ರಾಯ ಇಟ್ಟುಕೊಂಡು, ಬೀchi ಅವರ ಎಲ್ಲ (ಒಂದೆರಡು ಬಿಟ್ಟು) ಪುಸ್ತಕಗನ್ನು ತರಿಸಿದೆ.


“ಸರಸ್ವತಿ ಸಂಹಾರ” ಓದಿಲ್ಲಿಕೆ ಶುರು ಮಾಡುವ ಮುನ್ನ ನಾನು ಇದು ಹಾಸ್ಯ ಕಾದಂಬರಿ, ಯಾರೋ ಭಾಷೆಯನ್ನು ತಪ್ಪಾಗಿ ಬಳಸಿದ್ದಾರೆ ಅದಕ್ಕೆ “ಸರಸ್ವತಿ ಸಂಹಾರ” ಅಂತ ಹೆಸರು ಇಟ್ಟಿದ್ದಾರೆ. ಕಾದಂಬರಿ ಮುಗಿಸಿದ ಮೇಲೆ ತಿಳೀತು ಇದು ನಿಜವಾಗಲು ಸರಸ್ವತಿ ಎಂಬ ಹುಡುಗಿಯ ಸಂಹಾರ ಎಂದು.


ಉತ್ತರ ಕರ್ನಾಟಕ ಭಾಷೆ ಈ ಪುಸ್ತಕದ ಒಂದು ಮಹತ್ವಪೂರ್ಣ ಅಂಶ. ಅವರು ಆಡುವ ಮಾತು, ಅವರ ಬೈಗುಳ, ತುಂಬ ಚೆನ್ನಾಗಿ ಬರೆದಿದ್ದರೆ. ಈ ಕಾದಂಬರಿಯ ಕತೆ ನಮ್ಮ ಕಾಲಕ್ಕೆ ಪ್ರಸಕ್ತ ಎನಿಸದ್ದಿದರು , ಕೆಲವೊಂದು ಕಡೆ ಈ ರೀತಿಯ ಜನ ನಮ್ಮ ಸಮಾಜದಲ್ಲಿ ಇದ್ದಾರೆ. ಗೌರಮ್ಮನಂತ ಅತ್ತೆ ಯಾರಿಗಾದರೂ ಸಿಕ್ಕರೆ, ಆ ಹುಡುಗಿ ದೇವರ ಕಣ್ಣಲ್ಲಿ ಮಹಾಪಾಪ ಮಾಡಿದ್ದಾಳೆ ಅಂತಾನೋ ಇಲ್ಲ ಅವರ ಅಪ್ಪ ಬ್ರಹ್ಮನಂದರಾಯರು. ಅಮ್ಮ ಅಚ್ಚಮ್ಮ ಹಾಗು ತಾತ ಭಾಸ್ಕರಭಟ್ಟರು ಮಾಡಿದ ಮಹಾಪರಾದ. ಸರಸ್ವತಿಯಾ ಜೀವನ ಒಂದು ದುರಂತ, ಇದು ಅವಳು ಮಾಡಿದ ತಪ್ಪಲ್ಲ, ಅವರ ತಂದೆ, ಬರಿ ಅವರ ಕೊಟ್ಟ ಮಾತು ಹುಳಿಸಿಕೊಳ್ಳುವುದಕ್ಕೆ, ಬಾಳನಂತಹ ಕಟುಕನ ಜೊತೆ ಮದುವೆ ಮಾಡಿ ಕೊನೆಗೆ ನರಳಿ ಸಾಯುತ್ತಾರೆ. ಒಂದೆಡೆ ಭಾಸ್ಕರಭಟ್ಟರು ತಾವು ಹೇಳಿದ ಮುನ್ಸೂಚನೆ ಯನ್ನು ಬ್ರಹ್ಮನಂದರಾಯರು ಕೆಳಲ್ಲಿಲ್ಲ , ಸರಸ್ವತಿಯಾ ಬಾಳು ತನ್ನ ಮಗನಿಂದ ಹಾಳಾಗಿ ಹೊಹಿತಲ್ಲ ಅಂತ ಚಿಂತೆ ಮಾಡಿ ಮನೆ ಬಿಡುತ್ತಾರೆ, ಇತ್ತ ಅಚ್ಚಮ್ಮ ತಮ್ಮ ಮಗಳ ಬಾಳನ್ನು ಗೊತಿದ್ದು ಕಟುಕರ ಕೈಯಲ್ಲಿ ಕೊಟ್ಟೆನಲ್ಲ ಅಂತ ದಿನವಿಡೀ ಕೊರುಗಿ ಕೊನೆಗೆ ತನ್ನ ದತ್ತು ಮಗ ಗಣಪತಿಯಾ ಜೊತೆ ಕಾಶಿಗೆ ಹೋಗಲು ಸಿದ್ದರಾಗುತ್ತಾರೆ. ಊರಿಗೆ ಊರೇ ಗೌರಮ್ಮನ ಬುದ್ದಿ ಗೊತಿದ್ದರು ಅವಳ ಬಯೀಗೆ ಹೆದರಿ ಸುಮನಿರುತ್ತಾರೆ. ಬಾಳ ಹನು ಹೇಳಿದ್ದೆ , ಮಾಡಿದ್ದೆ ಅಂತ ಮನ ಬಂದಂತೆ ಅಮ್ಮನ ಸೆರಗಿನ ಹಿಂದೆ ನಿಂತು ಸರಸ್ವತಿಯ ಜೀವನ ನರಕ ಮಾಡುತ್ತಾನೆ. ಈಗಿನ ಕಾಲದಲ್ಲಿ ಜನರು ಗೌರಮ್ಮ ಮತ್ತು ಬಾಳನ ರೀತಿ ಇರದಿದ್ದರೂ , ಹೆಣ್ಣಿನ ಶೋಷಣೆ ಇದ್ದ ಇದೆ. ಇಲ್ಲಿ ತಂದೆ ತಾಯೀಯ ಅಸಯಕತೆ, ಸಮಾಜದ ಮೌನ, ಅತ್ತೆ ಗಂಡನ ದೌರ್ಜನ್ಯ ಎಲ್ಲವನ್ನು ಕಣ್ಣಿಗೆ ಕಟ್ಟಿದಹಾಗೆ ಬೀchi ಅವರು ಚಿತ್ರಿಸಿದ್ದಾರೆ. ಈ ಕಾದಂಬರಿ ನನ್ನ ಕನ್ನಡ ಸಾಹಿತ್ಯ ಓದುವ ಪ್ರರಂಬಕ್ಕೆ ನಾನ್ನುಡಿ ಯಗ್ಗಿದ್ದು ಕುಷಿಯ ವಿಚಾರ.


ನನ್ನ ಮೇಚ್ಚಿನ ಬೈಗುಳ “ಯಾವ ರಂಡೇಗಂಡ ಬರೆದಿದ್ದಾನೋ ಅಂತೀನಿ, ಅವನ ಹೆಂಡತಿ ರಂಡಿ ಆಗ. ಬರದವನ ಕೈಗೆ ಕರೆ ನಾಗರಹಾವು ಕಡಿಯ. ಅಕ್ಷರ ಕಲಿತ ಮುಂಡೆಗಂಡರದೇ ಈ ಕೆಲಸ, ಅದಕ್ಕೆ ನನ್ನ ಕೂಸಿಗೆ ಇದ್ಯ ಇಲ್ಲದಿದ್ದರೆ ಪೀಡನೆ ಹೋತು ಅಂತ ಸಾಲಿಗೆ ಕೆಳಸಲಿಲ್ಲ ನಾನು, ಇದನ್ನು ಬರದಾತನ ತಾಯೀ ಬಸಿರು ಸೀಳಿ  ಬೀಳಬಾರದಗಿತ್ತೆ, ಅವನ ಹೆಣ ಹೋಗ, ಅವನ್ನ ಸುಟ್ಟು ಬರೀ ಕೈಲಿ ಬರ, ನನ್ನ ಕೈಯಾಗೇನಾದರೂ ಅವನು ಸಿಕ್ಕಿಗಿಕ್ಕಿದ್ದ ಅವನ ವಂಶ ಉದ್ದಾರ ಮಾಡ್ತಿದ್ದೆ.”