Wednesday, November 28, 2012

ಹೇಳಿ ಹೋಗು ಕಾರಣ - ರವಿ ಬೆಳೆಗೆರೆ

Heli Hogu Karana - Ravi Belegere




ಕೆಲವೊಮ್ಮೆ ಈ ರೀತಿ ಹಾಗುತ್ತದೆ, ತುಂಬಾ ಆಸೆ ಇಟ್ಟುಕೊಳ್ಳದೆ ಹೋದ ಚಿತ್ರ ಚೆನ್ನಾಗಿ ಮತ್ತೆ ತುಂಬಾ ಆಸೆ ಇಟ್ಟುಕೊಂಡ ಚಿತ್ರ ಸಪ್ಪೆಯಾಗುತ್ತದೆ. ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಮೊದಲೆನಯ ಸಾಲಿಗೆ ಸೇರುತ್ತದೆ. ಬೆಳೆಗೆರೆಯವರ ಕಾದಂಬರಿಗಳಲ್ಲಿ ಓದಿದ ಮೊದಲೆಯದು ಇದು. ನಾನು ತುಂಬಾನೇ ಅಂದ್ರೆ ತುಂಬಾನೆ ಆಂಗ್ಲ ಚಿತ್ರಗಳನ್ನು ನೋಡುತ್ತೇನೆ, ಈ ಕಾದಂಬರಿಯನ್ನು ಅಲ್ಲಿನ ಚಿತ್ರಗಳಿಗೆ ಹೋಲಿಸಿ ಹೇಳುವುದಾದರೆ, "Guilty Pleasure" ಚಿತ್ರದ ರೀತಿ. ಭೈರಪ್ಪನವರ ಕಾದಂಬರಿಗಳು ಜೇಮ್ಸ್ ಕ್ಯಾಮೆರೋನ್ ಮಾಡೋ ಚಿತ್ರಗಳ ಹಾಗೆ, ಮತ್ತು ಬೆಳೆಗೆರೆರವರ ಕಾದಂಬರಿಗಳು ಜಸ್ಟಿನ್ ಲಿನ್ ಚಿತ್ರಗಳ ರೀತಿ.


ಅಧುನಿಕ ಜಗತ್ತಿನ ಪ್ರೀತಿ, ಪ್ರೇಮ, ಜಗಳ, ಕಾಮ, ಕ್ರೋಧ ಎಲ್ಲಾವನ್ನು ನಮ್ಮಂಥವರ ಮನ ತಟ್ಟುವ ರೀತಿ ತುಂಬ ಚೆನ್ನಾಗಿ ಬರೆದಿದ್ದಾರೆ. ಹಿಮವಂತ ಬಡವನಾದರೂ ವ್ಯಕ್ತಿತ್ವ ಒಳ್ಳೆಯದು ಪ್ರಾರ್ಥನಾನನ್ನು ಡಾಕ್ಟರ ಓದಿಸಲು ದಿನ ರಾತ್ರಿ ದುಡಿಯುತ್ತ, ಹಗಲು ರಾತ್ರಿ ಅವಳ ನೆನಪಲ್ಲಿ ಕಳೆಯುತ್ತಾ ತನ್ನ ಮೋದಿನ ಜೀವನ ಬಗ್ಗೆ ಯೋಚಿಸುತ್ತಾನೆ. ಪ್ರಾರ್ಥನಾ ಹಿಮವಂತ ಕಷ್ಟಪಟ್ಟು ದುಡಿದು ಕೊಟ್ಟ ದುಡ್ಡಿನಿಂದ ದಾವಣಗೆರೆಯಲ್ಲಿ ಡಾಕ್ಟರ ಸೇರುತ್ತಾಳೆ. ಪ್ರಾರ್ಥನಾ ಹಾಸ್ಟೆಲ್ ನಲ್ಲಿ ಊರ್ಮಿಳ ಮತ್ತು ದೇಬಶಿಶ್ ಪರಿಚಯವಾಗುತ್ತದೆ. ಊರ್ಮಿಳ ಆಧುನಿಕ ಜಗತ್ತಿನ ದಿಟ್ಟ ಹುಡುಗಿ, ಸಿಗರೆಟ್ ಸೇದುತ್ತಾಳೆ, ವಾರಕೊಮ್ಮೆ ಕುಡಿಯುತ್ತಾಳೆ, ತಾನು ಯಾವ ಹುಡುಗರಿಗೂ ಕಮ್ಮಿಯಿಲ್ಲ ಅನ್ನೋ ರೀತಿಯಲ್ಲಿ ಜೀವನ ಸಾಗಿಸುತ್ತಾಳೆ. ಪ್ರಾರ್ಥನಾ ದೇಬಶಿಶ್ ಸಗಾತದಿಂದ ಬದಲಾಗುತ್ತಾಳೆ, ಇತ್ತ ಊರ್ಮಿಳ ಹಿಮವಂಥನ ಪರಿಚಯದಿಂದ ಬದಲಾಗುತ್ತಾಳೆ.
ಇಲ್ಲಿ ಪಾತ್ರಗಳ ಮೊಸವಿದೆ, ಕಾಮದ ವಾಸನೆಯಿದೆ, ಮನಸ್ಸಿನ ಗಟ್ಟಿತನವಿದೆ, ಸಾದಿಸಬೇಕೆಂಬ ಛಲವಿದೆ, ಆಹಂಕಾರವಿದೆ, ಬಲೆಗೆ ಬೀಳಿಸುವ ತಂತ್ರವಿದೆ. ಎಲ್ಲ ವರ್ಗದ ಓದುಗರಿಗೆ ಎನುಬೇಕೋ ಅದ್ದೆಲ್ಲಾ ಇದೆ.


ಮಾಟಾ ಮಂತ್ರ ಕೂಡ ಇದೆ. ಇದಿಲ್ಲದಿದ್ದರು ಕಾದಂಬರಿ ಚೆನಾಗಿರುತ್ತಿತ್ತು, ಇದರಿಂದ ಮತ್ತು ಕೆಲವು ವಿಷಯಗಳಿಂದ ಇದು ವಾಸ್ತವಕ್ಕೆ ಸ್ವಲ್ಪ ದೂರ ಅನಿಸುವುದುಂಟು. ಆದರೆ ಎಲ್ಲ ಹುಡುಗರು ತಾನು ಹಿಮವಂತ ಮತ್ತು ಬಿಟ್ಟು ಹೋದ ಹುಡುಗಿ ಪ್ರಾರ್ಥನಾ ಅನುಸುವುದರಲ್ಲಿ ಸಂಶಯವಿಲ್ಲ.


Friday, November 23, 2012

ಬೆಟ್ಟದ ಜೀವ - ಶಿವರಾಮ ಕಾರಂತ

Bettada Jeeva - Shivarama Karanth

 

 


 ತುಂಬಾ ದಿನಗಳ ಹಿಂದೆ ಶಿವರಾಮ ಕಾರಂತರ, "ಬೆಟ್ಟದ ಜೀವ" ಅನ್ನುವ ಚಿಕ್ಕ ಕಾದಂಬರಿಯೊಂದನ್ನ ಓದಲು ಶುರುಮಾಡಿದ್ದೆ. ಅದು ಕಾರಂತಜ್ಜರ ಮೇರುಕೃತಿಗಳಲ್ಲಿ ಒಂದೆಂಬುದನ್ನ ಕೇಳಿದ್ದೆ. ಅದು ಸುಮಾರು ನೂರೈವತ್ತು ಪುಟಗಳ ಚಿಕ್ಕ ಪುಸ್ತಕವಾದರೂ ಅದನ್ನ ಓದಿ ಮುಗಿಸಲು ಇಪ್ಪತ್ತು ದಿನಗಳಿಗೂ ಹೆಚ್ಚು ಸಮಯವಾಯ್ತು. ಅಷ್ಟೊಂದು ಸಮಯ ಹಿಡಿಯಲು ನನ್ನ ಕೆಲಸದ ಒತ್ತಡವಾಗಲಿ, ಪುಸ್ತಕವಾಗಲಿ ಕಾರಣವಾಗಿರಲಿಲ್ಲ, ಬದಲಾಗಿ ಓದುತ್ತಾ ಹೋದಂತೆಲ್ಲ ಎಲ್ಲಿ ಬೇಗನೆ ಮುಗಿದು ಬಿಡುವುದೊ ಅನ್ನುವ ಬೇಸರ ಅಷ್ಟೇ. ಹಾಗಾಗಿಯೇ ಮುಂದುವರೆದಂತೆಲ್ಲ ದಿನಕ್ಕೆ ಎರಡು-ಮೂರು ಪುಟಗಳನ್ನ ಮಾತ್ರ ಓದಿ ಮುಚ್ಚಿಡುತ್ತಿದ್ದೆ. ಒಮ್ಮೆ ಓದಿ ಮುಗಿಸಿದ ನಂತರ ಮತ್ತೆರಡು ಸಲ ಓದಿದೆ. ಕಾರಂತರಲ್ಲಿ ನಮ್ಮನ್ನ ಬರಹಗಳ ಮೂಲಕ ಕಟ್ಟಿಹಾಕುವ ಮಹತ್ತರವಾದ ಶಕ್ತಿಯಿತ್ತು. ಅದನ್ನ ಈ ಪುಸ್ತಕದಲ್ಲಿ ಹೆಚ್ಚಾಗಿಯೇ ತುಂಬಿದ್ದರು.

"ಬೆಟ್ಟದ ಜೀವ", ಬೆಟ್ಟದ ಪರಿಸರದಲ್ಲಿ ತೋಟ, ಗದ್ದೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಗೋಪಾಲಯ್ಯ ಮತ್ತು ಶಂಕರಿ ಎನ್ನುವ ವೃದ್ದ ದಂಪತಿಗಳ ಕಥೆಯಿದು. ಕಥೆಯ ಆಳ, ಎತ್ತರ ತುಂಬಾ ಚಿಕ್ಕದಿದ್ದರು ಅದನ್ನ ಬಿಂಬಿಸಿದ್ದ ರೀತಿ ಕಾರಂತರ ವಿಶೇಷತೆಗೆ ಸಾಕ್ಷಿ. ಪಶ್ಚಿಮ ಘಟ್ಟಗಳ ನಡುವೆ, ಸುಬ್ರಮಣ್ಯ ದ ಸಮೀಪ, ಕುಮಾರ ಪರ್ವತದ ತಪ್ಪಲಲ್ಲಿ ಮನೆಬಿಟ್ಟಿರುವ ಮಗನ ಅಗಲಿಕೆಯನ್ನ ಭರಿಸಿಕೊಂಡು, ಬದುಕಿನೆಡೆಗೆ ಉತ್ಸಾಹವನ್ನ ಕಳೆದುಕೊಳ್ಳದೆ, "ಸುಖ" ಎನ್ನುವ ಪದಕ್ಕೆ ಬೇರೆಯದೇ ಅರ್ಥ ಕಂಡುಕೊಂಡು ಬದುಕುವ ವೃದ್ದರ ಜೀವನಗಾಥೆಯನ್ನ ಕಾರಂತರು ನಮ್ಮೆದುರು ಬಿಡಿಸಿಟ್ಟಿದ್ದ ಪರಿ ಅದ್ಭುತವಾಗಿತ್ತು. ನಿಸರ್ಗದ ಸೊಬಗನ್ನ, ಅಲ್ಲಿಯ ಜನರ ಬದುಕನ್ನ, ಕಣ್ಣಿಗೆ ಕಟ್ಟುವಂತೆ ಪುಸ್ತಕದಲ್ಲಿ ಹೇಳಲಾಗಿತ್ತು. ಓದುತ್ತಾ ಸಾಗಿದಂತೆಲ್ಲ ಘಟ್ಟಗಳ ನಡುವಿನ ಸೌಂದರ್ಯ ರಾಶಿ ಸವಿದ ಅನುಭವವಾಗುತ್ತಿತ್ತು.

ಈಗ ಪುಸ್ತಕದ ಬಗ್ಗೆ ಪೀಠಿಕೆ  ಹಾಕಿದ್ದಕ್ಕೆ ಕಾರಣ ಇದೆ. ಈ ಪುಸ್ತಕ ಚಲನಚಿತ್ರವಾಗಿದೆ. ಹೌದು, ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಈ ಚಿತ್ರ ಮಾಡುವ ಮೊದಲು ಯಾರಾದರು ನನ್ನಲ್ಲಿ ಈ ಪುಸ್ತಕವನ್ನ ಆದರಿಸಿ ಚಲನಚಿತ್ರ ಮಾಡಬಹುದಲ್ವೆ ಅನ್ನುವ ಪ್ರಶ್ನೆ ಮಾಡಿದ್ದರೆ, ಖಂಡಿತ ಸಾದ್ಯವಿಲ್ಲ ಅನ್ನುವ ಉತ್ತರ ಬರುತ್ತಿತ್ತು. ಕಾರಣ ಕಾರಂತರು ವರ್ಣಿಸಿದ ರೀತಿಯಲ್ಲಿ ಪ್ರಕೃತಿಯನ್ನು ಮತ್ತು ಅಷ್ಟು ಚಿಕ್ಕ ಎಳೆಯಿರುವ ಕಥೆಯನ್ನ ತೆರೆಯ ಮೇಲೆ ಬಿಡಿಸಿದುವುದು ಸಾದ್ಯವಿಲ್ಲ ಅನ್ನುವ ಭಾವನೆ.

ಆದರೆ ಚಿತ್ರ ನೋಡಿ ಬಂದ ನಂತರ ನನ್ನ ಅನಿಸಿಕೆ ಬದಲಾಗಿದೆ. ಇಂತಹ ಅದ್ಬುತ ಕಾದಂಬರಿಯನ್ನ ಅದರ ಮೂಲಸ್ವರೂಪಕ್ಕೆ ತೊಂದರೆಯಾಗದಂತೆ ನಿರ್ದೇಶಕ ಶೇಷಾದ್ರಿ ತೋರಿಸಿದ್ದಾರೆ. ಅವರ ಈ ಪ್ರಯತ್ನ ಮೆಚ್ಚುವಂತದ್ದು. ಬೆಂಗಳೂರಿನ ಕಾಂಕ್ರಿಟ್ ಕಾಡನ್ನ ಮರೆತು, ನಮ್ಮ ಪಶ್ಚಿಮ ಘಟ್ಟಗಳ ಸುಂದರ ಕಾಡಿನೊಂದಿಗೆ ಮೈಮರೆತು ವಿಹರಿಸುವ ತವಕವಿದ್ದವರು ನೋಡಲೇಬೇಕಾದ ಚಿತ್ರವಿದು. ಚಿತ್ರದ ಕತೆ ಚಿಕ್ಕದಾದುದರಿಂದ ಸ್ವಲ್ಪ ಮಂದಗತಿಯಲ್ಲಿ ಸಾಗಿದರು, ತೆರೆಯ ಮೇಲೆ ಕಾಣುವ ಪ್ರಕೃತಿ ಸೌಂದರ್ಯದ ಶ್ರೀಮಂತ ದೃಶ್ಯಗಳು ಎಲ್ಲಿಯೂ ಬೇಸರವೆನಿಸದಂತೆ ನೋಡಿಕೊಳ್ಳುತ್ತವೆ. ಅನಂತ ಅರಸ್ ಅವರ ಛಾಯಾಗ್ರಹಣ ಚಿತ್ರದ ಯಶಸ್ಸಿನಲ್ಲಿ ಪ್ರಮುಕ ಪಾತ್ರ ವಹಿಸಿದೆ. ಗೊಪಲಯ್ಯನ ಪಾತ್ರದಲ್ಲಿ ಧತ್ತಾತ್ರೆಯ ಅವರು ವಯಸ್ಸು ಮರೆತು ನಟಿಸಿದ್ದಾರೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರೆ. ಮಚ್ಚು-ಲಾಂಗುಗಳು ಗುಡುಗುವ ಇವತ್ತಿನ ಚಲನಚಿತ್ರಗಳ ಮದ್ಯೆ "ಬೆಟ್ಟದ ಜೀವ" ಚಿತ್ರ ವಿಶೇಷವಾಗಿ ಕಾಣುತ್ತದೆ. ಆದರೆ ಕೇವಲ ಎರಡು ಚಿತ್ರಮಂದಿರಗಳಲ್ಲಿ ಮಾತ್ರ ತೆರೆ ಕಂಡಿರುವುದು ಬೇಸರದ ಸಂಗತಿ. ಅದಕ್ಕೆ ಜನರ ಅಭಿರುಚಿಯ ಬಗ್ಗೆ ನಿರ್ಮಾಪಕರಿಗೆ ಇರುವ ಅಳುಕು ಕಾರಣವಿರಬಹುದು. ಅಪರೂಪವಾಗಿರುವ ಇಂತಹ ಚಿತ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎನ್ನುವ ಆಶಯ ನಮ್ಮದು.
ಮೂಲ: http://goo.gl/72JEd
ಚಿತ್ರದ ಬಗ್ಗೆ: http://goo.gl/qNg9T


Wednesday, November 14, 2012

ಕಾಡಿನ ಕತೆಗಳು - ಪೂರ್ಣಚಂದ್ರ ತೇಜಸ್ವಿ

Kaadina Kathegalu - Poornachandra Tejasvi


Belandurina Narabhakshaka (Kaadina Kategalu - 1)
Pedachurina Rakshasa (Kaadina Kategalu - 2)
Jalahalliya Kurka (Kaadina Kategalu - 3)
Muniswami Mattu Magadi Chirathe (Kaadina KategaLu - 4)





ಕಾಡಿನ ಕತೆಗಳು - ಕಥಾಸಂಕಲನ


ಪುಸ್ತಕದ ಮುನ್ನುಡಿಯಿಂದ:-


ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ತಮ್ಮ ಅನುಭವಗಳನ್ನು ಬರೆದ ಕಾಲ ಚಾರಿತ್ರಿಕವಾಗಿ ಒಂದು ವಿಚಿತ್ರ ಪರ್ವಕಾಲವೆಂದು ಹೇಳಬಹುದು. ಹಿಂದೆ ಇಲ್ಲದ ಮತ್ತು ಮುಂದೆ ಬರದ 'ನ ಭತೋ ನ ಭವಷ್ಯತಿ' ಎನ್ನುವಂಥ ಚಾರಿತ್ರಿಕ ತಿರುವಿನಲ್ಲಿ ಇವರು ಬದುಕಿದ್ದವರು. ಅದಕ್ಕೂ ಹಿಂದೆ ಭಾರತದ ಕಾಡುಗಳಲ್ಲಿ ಹುಲಿ ಚಿರತೆಗಳು ಇವರು ಬದುಕಿದ್ದವರು. ಅದಕ್ಕೂ ಹಿಂದೆ ಭಾರತದ ಕಾಡುಗಳಲ್ಲಿ ಹುಲಿ ಚಿರತೆಗಳು ಇರಲಿಲ್ಲವೆಂದಲ್ಲ. ಹುಲಿ ಸಂಹರಸಿದ ಹೊಯ್ಸಳನಂಥ ಧೀರರ ಕತೆಗಳನ್ನು ನಾವು ಚರಿತ್ರೆಯಲ್ಲಿ ಕಾಣಬಹುದು. ಆದರೆ ಜನಸಂಖ್ಯೆ ಈಗಿನಂತೆ ಇರಲ್ಲಿಲ್ಲ. ಮತ್ತು ಕಾಡುಗಳಲ್ಲಿ ಹುಲಿ ಚಿರತೆಗಳ ಆಹಾರವಾದ ಇತರ ಪ್ರಾಣಿಗಳು ಹೇರಳವಾಗಿ ಇದ್ದವು ಹುಲಿ ಚಿರತೆಗಳಿಗೆ ಸಮಾಜ ಜೀವಿಯಾದ ಮನುಷ್ಯನನ್ನು ಹಿಡಿದು ತಿನ್ನಬೇಕಾದ ತುರ್ತು ಏನು ಇರಲ್ಲಿಲ್ಲ. ಅದ್ದರಿಂದ ಈ ಇಬ್ಬರು ಲೇಖಕರು ಹಿಂದೂ ನರಬಕ್ಷಕಗಳು ಹಾವಳಿ ಈ ಪ್ರಮಾಣದಲ್ಲಿ ಇರಲ್ಲಿಲ್ಲ.



ಬ್ರಿಟಿಷ್ ಸಾಮ್ರಾಜ್ಯದ ಪ್ರಾರಂಭಿಕ ದಿನಗಳಲ್ಲಿ, ಕೈಗಾರಿಕಾ ಕ್ರಾತಿ ತನ್ನ ಮೊದಲ ಹೆಜ್ಜೆ ಇಡಲು ಶುರು ಮಾಡಿದಾಗ ನರಭಕ್ಷಕ ಹುಲಿ ಚಿರತೆ ಸಿಂಹಗಳ ಘಟನೆಗಳನ್ನು ನೀವು ಹೆಚ್ಹಾಗಿ ಗಮನಿಸಬಹುದು. ಈ ಖಂಡಗಳಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಾ ನಾಗರೀಕತೆ ವಿಸ್ತರಿಸಿ ಕಾಡಿನ ವಿಸ್ತೀರ್ಣ ಕುಗ್ಗುತ್ತಾ ಹೋದಂತೆ ಕಾಡಿನ ಮಾಂಸಹಾರಿ ಪ್ರಾಣಿಗಳು ವಿವಿಧರೀತಿಯ ಒತ್ತಡಕ್ಕೆ ಸಿಕ್ಕಿಕೂಂಡವು. ಕಾರ್ಬೆಟ್ ಮತ್ತು ಆಂಡರ್ಸನ್ ಈ ಪ್ರಾಣಿಗಳು ನರಬಕ್ಷಕಲಾಗಳು ಅನೇಕಾನೇಕ ವೈಯ್ಯಕ್ತಿಕ ಕಾರಣಗಳನ್ನು ಕೊಡುತ್ತಾರಾದರೂ, ಈ ಕಾರಣಗಳಿಗೂ ನಾನು ಮೇಲೆ ಹೇಳಿದ ಚಾರಿತ್ರಿಕ ಸಂದರ್ಭ ಮೂಲಭೂತ ಕಾರಣ ಎಂದು ನನ್ನ ಭಾವನೆ. ಈ ಚಾರಿತ್ರಿಕ ಘಟ್ಟದಲ್ಲಿ ಬದುಕಿದ್ದವರಿಂದ ಮಾತ್ರ ಇಂಥ ಕೃತಿಗಳನ್ನು ರಚಿಸಲು ಸಾಧ್ಯ. ಈಗ ಹುಲಿಗಳೇ ಅವಸಾನದ ಅಂಚಿನಲ್ಲಿದ್ದು ಸರ್ಕಾರದ ಸಹಾಯಧನದಿಂದ ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಇನ್ನು ನರಭಕ್ಷಕಗಳ ಸವಾಲನ್ನು ಎದುರಿಸಬೇಕಾದ ಸಂದರ್ಭ ಪುನರಾವರ್ತನೆಯಾಗುವುದು ಅಸಂಭವ. ಆದ್ದರಿಂದಲೇ ನಾನು ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ರ ಅನುಭವಗಳನ್ನು 'ನ ಭತೋ ನ ಭವಷ್ಯತಿ' ಅಂದು ಹೇಳಿದ್ದು.


ನಾನು ಹುಟ್ಟುವ ಎಲೆಗಾಗಲೇ ಶಿಕಾರಿ ಯುಗದ ಕೊಟ್ಟಕೊನೆಯ ತುದಿ ಬಂದಿತ್ತು. ಆದರು ಈ ಕತೆಗನನ್ನು ಆಸ್ವಾದಿಸಿ ಅನುಭವಿಸುವ ಮಟ್ಟಿಗಾದರೂ ನನಗೆ ಕಾಡಿನ ಅನುಭವಗಳು ಪರಿಚಯವಾಯ್ತು. ಕೆನೆತ್ ಆಂಡರ್ಸನ್ ಕತೆಗಳ ಹಿನ್ನಲೆ, ಪರಿಸರ, ಪಾತ್ರಗಳು ಎಲ್ಲ ನನ್ನ ಅನುಚವವೇ ಅನ್ನುವಷ್ಟು ಚಿರಪರಿಚಿತವಾದುದು. ಚೋರ್ಡಿ, ಶೆಟ್ಟಿಹಳ್ಳಿ. ಶಿಕಾರಿಪುರ, ಬೆಳ್ಳಂದೂರು ಎಲ್ಲಾ ನಾವು ಕೋವಿ ಹೆಗಲಿಗೀರಿಸಿಕೊಂಡು ಮಳೆ ಬಿಸಿಲೆನ್ನದೆ ತಿರುಗಾಡಿರುವ ಜಾಗಗಳು. ನಾವು ಕಾದಿಗಿಲಿದಾಗ ನರಬಕ್ಷಕಗಳ ಯುಗ ಮುಗಿತ್ತೆಂಬುದೊಂದನ್ನು ಬಿಟ್ಟರೆ ಮಿಕ್ಕಿದೆಲ್ಲ ನಾನೇ ಅನ್ದೆರ್ಸೋನ್ನರ ಜೊತೆ ಇದ್ದೆನೇನೋ ಎನ್ನುವಷ್ಟು ನನಗೆ ಗೊತ್ತು.



Tuesday, November 6, 2012

ಕವಲು - ಎಸ್ ಎಲ್ ಭೈರಪ್ಪ

Kavalu - S L Bhyrappa





ಭೈರಪ್ಪನವರ ಕವಲು ಓದಿದ ಮೇಲೆ ಈ ಕಾದಂಬರಿ ೨೨ನೇ ಮುದ್ರಣ ಕಂಡಿರುವಲ್ಲಿ ಆಶ್ಚರ್ಯವಿಲ್ಲ ಅಂತ ಅನಿಸುತ್ತಿದೆ. ಇವತ್ತು ಪತ್ರಿಕೆಯಲ್ಲಿ ಓದಿದೆ ಬೆಂಗಳೂರಿನಲ್ಲಿ ಒಂದು ಹುಡುಗಿ ತನ್ನ ಪ್ರಿಯಕರನನ್ನು ಕೊಂದು, ಪೋಲಿಸ್ ರವರ ಮುಂದೆ ತನ್ನ ತಪ್ಪನ್ನು ನಗುಮುಕದಿಂದ ಒಪ್ಪಿಕೊಂಡಳು ಅಂತ. ಸ್ವಲ್ಪ ಹೆದರಿಕೆಯಾತ್ತು, ಕವಲು ಮತ್ತು ಈ ಸುದ್ದಿ, ಮದುವೆಯಾಗದ ಹುಡುಗರ ಪಾಡೇನು ಅಂತ. ಪ್ರೀತಿಸಿದ ಹುಡುಗರನ್ನು ಹುದುಗೊಇ ಕೊಲ್ಲುತ್ತಾಳೆ, ಮದುವೆಯಾದ ಹೆಂಡತಿ ಡೈವೋರ್ಸ್ನಲ್ಲಿ ಎಲ್ಲ ಕಿತ್ತಿಕೊಲ್ಲುತ್ತಲೇ, ಸ್ವಲ್ಪ ಮೈ ಜುಮೆನ್ನುತ್ತದೆ.


ಕವಲಿನಲ್ಲಿ ಬರುವ ಪಾತ್ರಗಳು ಯಾವುದೊ ಕಾಲ್ಪನಿಕ ಕಥೆಯಲ್ಲ, ಇದು ನಿಜಜೀವನದ ಕೈಕನ್ನಡಿ ಎನ್ನುವಂತಿದೆ, ಕವಲು ಬಿಡುಗಡೆಯಾದಾಗ ಕೆಲವು ಮಹಿಳ ಸಂಗಟನೆಗಳು ಈ ಕಾದಂಬರಿ ಮಹಿಳೆಯರ ವಿರುದ್ಧ, ಹೆಣ್ಣಿನ ಹವಹೆಲನ ಎಂತೆಲ್ಲ ಪ್ರತಿಬತನೆಗಳು ನಡೆದವು, ಯಾಕೆ ನಡೆದವು ಎಂದು ಪುಸ್ತಕ ಶುರು ಮಾಡಿದ ಮೇಲೆ ಗೊತ್ತಾಗುತ್ತದೆ, ಇದು ಕೆಲವು ಹೆಂಗಸರ ಅದರಲ್ಲೂ "ಸುಡೋ ಫೆಮಿನಿಸ್ಟ್" ಗಳ ಜೇಡರ ಬಲೆಯಲ್ಲಿ ಸಿಕ್ಕಿ ಹಾಕಿಕೊಂಡ ಗಂಡಸರ ಮತ್ತು ಕಾನೂನಿನ ಕಾಯ್ದೆಗಳನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುವ ಕೆಲವು  ಮಹಿಳೆಯರ ನಡತೆಯನ್ನು ವಿವರಿಸುತ್ತದೆ,


ಇದರಲ್ಲಿ ಬರುವ ಎರಡು ಪಾತ್ರಗಳು ಇಳಾ ಮತ್ತು ಮಂಗಳ ಭಾರತ ಸಂಸೃತಿಯ ಮಹಿಳೆಯರು ದೌರ್ಜನ್ಯ, ಹಿಂಸೆ, ಮಾತ್ತು ತುಳಿತ್ತಕೊಳಗಾದವರು ಇದನ್ನು ಹೋಗಲಾಡಿಸಲು ಅಮೇರಿಕಾದಲ್ಲಿ ಮಹಿಳೆಯರಿಗಿರುವ ಸ್ವಾತಂತ್ರ್ಯ ಇಲ್ಲೂ ಬರಬೇಕು ಎನ್ನುವವರು. ಅವರಿಬ್ಬರೂ ಈ ಕಾದಂಬರಿಯಲ್ಲಿ ಬರಿ ಅಲ್ಲಿರುವ ಸ್ವಾತಂತ್ರ್ಯ ಬೇಕು ಆದರೆ ಅಲ್ಲಿರುವ ಮಹಿಳ ಕಾನೂನು, ಗಂಡಿನ ಹಿತರಕ್ಷಣೆ ಕಾನೂನು ಬೇಡ, ನ್ಯಾಯಾಲಯದಲ್ಲಿ ಮಾತ್ರ ಇವರನ್ನು ಭಾರತಿಯ ಮಹಿಳೆಯರ ರೀತಿ ಮತ್ತು
ನ್ಯಾಯಾಲಯದ ಹೊರಗೆ ಇವರನ್ನು ಹೊರದೇಶದ ಮಹಿಳೆಯರ ರೀತಿ ಗುರುತಿಸಬೇಕೆ ಎಂದು ಅವರ ವಾದ.


ನಾನು ಕಾರಂತರ ಮಹಿಳ ಶೋಷಣೆಗಳ ಬಗ್ಗೆ ಓದಬೇಕಾದರೆ, ಗಂಡಸರು ಅನುಭವಿಸುವ ಕಷ್ಟಗಳು, ಹೆಣ್ಣಿಂದ ಮೋಸಕ್ಕೆ ಹೊಳಗಾದವರ ಬಗ್ಗೆ ಯಾರು ಯಾಕೆ ಬರೆದಿಲ್ಲ ಅನಿಸುತ್ತಿತ್ತು, ಕವಲು ಓದಿದ ಮೇಲೆ ತಿಳಿಯಿತು ಅಂತ ಕಾದಂಬರಿಗಳು ಇವೆ ಅಂತ. ಒಂದು ಸಾಮಜದಲ್ಲಿ ಒಂದು ಕಾನೂನು ಮಾಡಿದರೆ ಅದನ್ನು ಊಪಯೋಗಿಸುವವರು ಮಾತ್ತು ದುರೂಪಯೊಗ ಮಾಡುವವರು ಇಬ್ಬರು ಇರುತ್ತಾರೆ, ಅದರಲ್ಲಿ ನಾವು ತೂಗಿ ಆಳತೆ ಮಾಡಿ ಜೀವನ ನಡೆಸಬೇಕು.


ಯಾವುದೇ ಕಾರಂತರ ಕಾದಂಬರಿ ಓದಿದ ಜನ ಭೈರಪ್ಪನವರ ಕವಲು ಓದಲೇಬೇಕು, ಯಾಕೆಂದರೆ ಸಮಾಜ ಒಂದು ನಾಣ್ಯದ ಎರಡು ಮುಖ ಇದ್ದಹಾಗೆ, ಕಾರತರ ಕದಮಬರಿ ಒಂದು ಮುಖವಾದರೆ ಕವಲು ಇನ್ನೊದು ಮುಖ.