Wednesday, April 30, 2014

ಜನಿವಾರ ಮತ್ತು ಶಿವದಾರ - ಬಸವರಾಜ ಕಟ್ಟಿಮನಿ

Janivara Mattu Shivadara -  Basavaraja Kattimaniನಿಜ ಹೇಳಬೇಕು ಅಂದ್ರೆ ನಾನು ಇದೆ ಮೊದಲು ತಿಲಿದುಕೊಳ್ಳುತಿರುವುದು ಜನಿವಾರ ಮತ್ತು ಶಿವದಾರ ಏನೆನ್ನುವುದು. ಜನಿವಾರ ಬ್ರಾಹ್ಮಣರು ಮಾತು ಶಿವದಾರ ಲಿಂಗಾಯತರು ಹಾಕುವುದೆಂದು. ಈ ರೀತಿಯ ಕಾದಂಬರಿ ಓದುತ್ತಿರುವುದು ಇದೆ ಮೊದಲು. ಈ ಇಬ್ಬರ ಜಾತಿಗಳ ನಡುವೆ ಇಂಥ ಒಂದು ದೊಡ್ಡ ಅಂತರ ಮತ್ತು ಸಮಸ್ಯ ಇರುವುದೆಂದು ಗೊತ್ತಿರಲ್ಲಿಲ್ಲ. ಬಸವರಾಜ ಕಟ್ಟಿಮನಿ ಇದನ್ನು ಬರೆದ್ದಿದ್ದು ೧೯೫೫ ಇಸವಿಯಲ್ಲಿ. ಈಗ ಇಷ್ಟು ಅಂತರ ವಿರಲಾರದು ಎಂದು ನನ್ನ ಅನಿಸಿಕೆ. ಈಗಿನ ಕಾಲಕ್ಕೆ ನಾನು ನೋಡಿರುವ ಜನರಲ್ಲಿ ಇಂಥ ಜಾತಿಪರತೆ ಕಡಿಮೆ ಇದ್ದರು ಮಾಡುವೆ ವಿಷಯದಲ್ಲಿ ಮಾತ್ರ ಇದು ಒಂದು ದೊಡ್ಡ ಅಂಶವೆಂದೆ ಹೇಳಬೇಕು. ಯಾವುದೇ ಮಾಡುವೆ ದೊಡ್ಡವರು ನಿಂತು ಮಾಡುವುದಾದರೆ ಇಂದಿಗೂ ತಮ್ಮ ಮಕ್ಕಳಿಗೆ ಸ್ವಜಾತಿ ವರ ಇಲ್ಲ ವಧು ವನ್ನೇ ನೋಡುವುದು. ಪ್ರೀತಿ ಎಂದರೆ ಅದು ಬೇರೆ ಮಾತು, ಈಗಿನ ಕಾಲದಲ್ಲಿ ವಿದ್ಯಾವಂತ ತಂದೆ ತಾಯಿ ಅಡ್ಡಿ ಮಾಡುವುದಿಲ್ಲ. ಜನಿವಾರ ಮತ್ತು ಶಿವದಾರ ಬರೆದ ಕಾಲದಲ್ಲಿ ಪ್ರೀತಿ ಪ್ರೇಮ ಎಂದರೆ ಮೂಗು ಮುರಿಯುವವರು ಮಾತು ಹೆಣ್ಣು ಎಂದರೆ ಒಂದು ದಡ್ಡ ಬಾರಾ ಎಂದು ತಿಳಿಯುತ್ತಿದ್ದರು. ಆಗಿನ ಕಾಲದ ಜಾತಿಯ ಘಷಣೆಯ ಒಂದು ನೋಟವೆ 'ಜನಿವಾರ ಮತ್ತು ಶಿವದಾರ' ಕಾದಂಬರಿ. 

ಇಲ್ಲಿ ಬರುವ ರಾಮಚಂದ್ರರಾಯನು ಒಬ್ಬ ಬಡ ಬ್ರಾಹ್ಮಣ, ಒಂದು ಇನ್ಸೂರೆನ್ಸ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನ ಸಂಬಳ ಮನೆಗೆ ಸಾಲುವುದಿಲ್ಲ ಅದರ ಮೇಲೆ ಅವನು ಬ್ರಾಹ್ಮಣನೆಂದು ಅವರ ಮೇಲಾಧಿಕಾರಿ ಲಿಂಗಪ್ಪ ತುಂಬಾ ಕಾಟಕೊಡುತ್ತಿರುತ್ತಾನೆ. ಇದರ ಮೇಲೆ ಅವನಿಗೆ ಒಬ್ಬ ತಮ್ಮ ವೆಂಕಟೇಶ ಮತ್ತು ತಂಗಿ ಶಾಂತನ ಚಿಂತೆ. ಅವನಿಗೆ ಶಾಂತನ ಮಾಡುವೆ ಚಿಂತೆ. ಯಾರೇ ಬಂದರು ವರದಕ್ಷಿಣೆ ಕೇಳುತ್ತಾರೆ, ಇವನ ಬಾಲಿ ಹಣವಿಲ್ಲ. ಏನು ಮಾಡುವುದು ಎಂದೇ ಚಿಂತೆ. ಅವರ ಅಪ್ಪ ಮಾಧ್ವರಾಯರು ನಿವೃತ್ತಿಯಾಗಿ ಮನೆಲಿದ್ದಾರೆ. 

ಶಾಂತಗೆ ಓದುವಾಸೆ. ಅವಳನ್ನು ಡಿಗ್ರಿ ಮಾಡಲು ಕಾಲೇಜ್ ಗೆ ಸೇರಿಸುತ್ತಾರೆ. ಅವರ ಮನೆ ಮುಂದೆ ಒಂದು ಕೋಣೆಯಲ್ಲಿ ಕೊಡಬಾವಿ ಎನ್ನುವ ಕವಿ ಅಧ್ಯಾಪಕರಾಗಿ ಕೆಲಸ ಮಾಡುತ್ತಾ ಶಾಂತನನ್ನು ಇಷ್ಟ ಪಡುತ್ತಾನೆ. ಇದನ್ನು ಅರಿತ ಶಾತ ಮತ್ತು ಅವಳ ಗೆಳತಿಯರು ಅವನನ್ನು ನೋಡಿ ಒಳಗೊಳಗೆ ನಗುತ್ತಿರುತ್ತಾರೆ. ಇದರ ಮಧ್ಯೆ ಅಲ್ಲಿರಲು ಸದಾನಂದ ಅವನ ಕೋಣೆಗೆ ಇರಲು ಬರುತ್ತಾನೆ. ಅವನು ನೋಡಲು ಅಂದಾವಾಗಿ ಮತ್ತು ಒಳ್ಳೆ ಸಂಬಾವಿತನಾಗಿ ಕಾಣುತ್ತಾನೆ ಶಾಂತಳಿಗೆ. ಸದಾನಂದನು ಒಬ್ಬ ಕವಿ. ಒಂದೇ ಕಾಲೇಜ್ ನಲ್ಲಿ ಇರುವುದರಿಂದ ಇಬ್ಬರ ಪರಿಚಯ ಸ್ನೇಹವಾಗಿ ಮತ್ತು ಮುಂದೆ ಪ್ರೀಥಿಯಾಗು ಬೆಳೆಯುತ್ತಾದೆ. ಅವರ ಪಡುವ ಕಷ್ಟ ಮತ್ತು ಮದುವೆಯಾಗಲು ಮಾಡುವ ದಿಟ್ಟತನ ಕಟ್ಟಿಮನಿಯವರು ಮನಸ್ಸಿಗೆ ನಾಟುವಂತೆ ಬರೆದಿದ್ದರೆ. ಇಲ್ಲಿ ಅರ್ ಎಸ್ ಎಸ್, ಸೋಷಲಿಸ್ಟ್, ಕಮ್ಯುನಿಸ್ಟ್ ಮತ್ತು ಇತರೆ ಎಲ್ಲಾ ರೀತಿಯ ವಿಭಿನ್ನ ಪಾತ್ರಗಳು ಬಂದು ಹೋಗುತ್ತವೆ, ಅದರ ಬಗ್ಗೆ ಇಲ್ಲಿ ಹೇಳುವುದಕ್ಕೆ ಹೋಗುವುದಿಲ್ಲ. ಈ ಕಾದಂಬರಿಯಲ್ಲಿ ನಮಗೆ ನಮ್ಮ ಜಾತಿಯ ಮೇಲೆ ಅಂಧ ಮೋಧ ಮಾತ್ತು ಬೇರೆ ಜಾತಿಯ ಮಳೆ ಈರ್ಷೆ ಎಲ್ಲ ಬರಿ ನೀರಿನ ಮೇಲಿನ ಗುಳ್ಳೆ ಮಾತು ವಿಧ್ಯವಂತರಾದ ನಾವು ಬದುಕನ್ನು ಪ್ರೀತಿಸಬೇಕೆ ಹೊರತು ಜಾತಿಯನಲ್ಲ ಎಂದು ತೋರಿಸಿದ್ದರೆ. 

ನಾನು ಇಲ್ಲಿ ಯಾವುದೇ ಜಾತಿ ಕೀಳು ಯಾವುದೊ ಮೇಲೆ ಎಂದು ಹೇಳಿಕ್ಕೆ ಹೋಗುವುದಿಲ್ಲ ಯಾಕೆಂದರೆ ಅದು ಅವರವರ ಭಾವಕ್ಕೆ ಬಿಟ್ಟಿದ್ದು. Tuesday, April 29, 2014

ಸ್ಮಶಾನ ಭೈರಾಗಿ - ಎನ್ ನರಸಿಂಹಯ್ಯ

Smashana Bhyragi  - Narashimaiah Nನರಸಿಂಹಯ್ಯ ನವರ ಕಾದಂಬರಿಗಳೇ ಹೀಗೆ ಎರಡು ಅಥವಾ ಮೂರು ಗಂಟೆಗಳಲ್ಲಿ ಮುಗಿಸಬಹುದು. ಅವರ ಸರಳ ಭಾಷೆ, ಹೇಳುವು ರೀತಿ ಮತ್ತು ಕಥೆಯಲ್ಲಿನ ಕುತೂಹಲ ಕಾಯ್ದುಕೊಳ್ಳುಹುದು ಈ ರೀತಿಯ ಬಿರುಸಿನ ಓದುವಿಕೆಯ ಕಾರಣ. ಕನ್ನಡದ ಪತ್ತೇದಾರಿ ಕಾದಂಬರಿಕಾರರಲ್ಲಿ ನಿಸ್ಸಿಮರು ಎನಿಸಿಕೊಂಡವರು ನರಸಿಂಹಯ್ಯನವರು. ಅವರು ನೂರಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದವರು. 

ಸ್ಮಶಾನ ಭೈರಾಗಿಯಲ್ಲಿ ಅವರು ಪತ್ತೇದಾರಿ ಜೊತೆಗೆ ಮಾತಾ ಮಾತ್ರ ಭೂತಗಳನ್ನು ಕಥೆಯ ಮೂಖ್ಯ ಪಾತ್ರವನ್ನಾಗಿಸಿದ್ದಾರೆ. ಅನಂತಚಾರರಿಗೆ ಬರಿ ೩೫ ರೂ ಗಳಿಗೆ ಒಂದು ಬಂಗಲೆ ಬಾಡಿಗೆಗೆ ಸಿಗುತ್ತಾದೆ, ಇದು ಯಾಕೆಂದು ಅವರ ಪತ್ನಿ ಮಂಜುಳ ವಿವರಿಸುತ್ತಾಳೆ. ಅದು ಒಂದು ಬೂತದ ಬಂಗಲೆ ಮತ್ತು ಅದನ್ನು ಯಾರು ಬಾಡಿಗೆಗೆ ತೆಗೆದುಕೊಂಡಿಲ್ಲವಾದ್ದರಿಂದ ಕಡಿಮೆಗೆ ಸಿಕ್ಕಿತು ಎಂದು. ಮಂಜುಳಗೆ ಅಳುಕು, ದುಃಖ ಒಮ್ಮೆಲೇ ಬರುತ್ತದೆ, ಇದಕ್ಕೆ ಅನಂತಚಾರಿ ಅವಳನ್ನು ಜೋಹಿಸರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಬಂದ ಮೇಲೆ ಅವಳಿಗೆ ಸಮಧಾನ ವಾಗುತ್ತದೆ. ಅದೇ ಊರಿನಲ್ಲಿ ಅಪ್ಪೊರಾಯ ಮತ್ತು ಆಲಮೇಲಮ್ಮ  ಎಂಬ ದಂಪತಿಗಳು ಒಂದು ಭೂತದ ಕಾಟಕ್ಕೆ ಸಿಲುಕಿರುತ್ತಾರೆ. ಅವರಿಗೆ ಮೊದಮೊದಲು ಕಷ್ಟ ಕೊಟ್ಟು ಆಮೇಲೆ ಅವರು ಭೂತ ಮಾತು ಕೇಳಿದರೆ ತಮ್ಮ ಎಲ್ಲ ಇಷ್ಟಾರ್ತವನ್ನು ನೆರವೆರುಸುವುದಾಗಿ ಹೇಳುತ್ತಾದೆ. ಅದರ ಪ್ರಕಾರ ಅಪ್ಪೊರಾಯ ಮತ್ತು ಆಲಮೇಲಮ್ಮ ಮನಸ್ಸಿಗೆ ಬೇಕೆನಿಸಿದ್ದನ್ನು ಭೂತವು ಕ್ಷಣ ಮಾತ್ರದಲ್ಲಿ ಒದಗಿಸುತ್ತದೆ. 

ಮಂಜುಳ ಮನೆಯಲ್ಲಿನ ಭೂತದಿಂದ ಬಹಳ ನೋವನ್ನು ಅನುಬವಿಸಿ ಅನಂತಚಾರಿ ಮನಜುಳೆಗೆ ತಾಯತ ಕಟ್ಟುತ್ತಾರೆ. ಕಟ್ಟಿದ ಮೇಲೆ ಭೂತದ ಕಾಟ ಇಲ್ಲವಾಗುತ್ತದೆ. ಅಪ್ಪೊರಾಯರಿಗೆ ಈ ಭೂತ ಯಾರು, ಏಕೆ ನಮ್ಮ ಸಹಾಯ ಮಾಡುತ್ತಿದೆ ಎಂದು ಕುತೂಹಲ, ಅವರಿಗೆ ಯಾರಾದರು ಕೇಡು ಬಯಸಿದರೆ ಆ ಭೂತವು ಅವರನ್ನು ತಂಟೆಗೆ ತೆಗೆದುಕೊಳ್ಳುವುದು. ಇದರಿಂದಾಗಿ ಊರಿನ ಜನರಿಗೆ ಅಪ್ಪೊರಾಯರ ಮೇಲೆ ಗೊಎರವ ಮತ್ತು ಹೆದರಿಕೆ. ಇದರ ಮಧ್ಯ ಆ ಊರಿಗೆ ಒಬ್ಬ ಸ್ಮಶಾನ ಭೈರಾಗಿಯಾ ಆಗಮನವಾಗುತ್ತದೆ. ಭೈರಾಗಿಯು ಯಾರ ಹತ್ತಿರನು ದುಡ್ಡು ಕೇಳದ ಎಲ್ಲರಿಗು ಸಹಾಯ ಮಾಡುತ್ತಿರುತ್ತಾನೆ ಆದರೆ ಅವನ ಮೇಲೆ ಪತ್ತೆದಾರ ಮಧುಸೂದನನಿಗೆ ಯಾಕೋ  ಅನುಮಾನ. 

ಸ್ಮಶಾನ ಭೈರಾಗಿ ಯಾರು, ಮಂಜುಳಾ ಮುಂದೆ ಏನಾಗುತ್ತಾಳೆ, ಅಪ್ಪೊರಾಯರ ಭೂತವು  ಮುಂದೆಯೂ ಸಹಾಯ ಮಾಡುತ್ತದ ಹಾಗು ಪತ್ತೆದಾರ ಮಧುಸೂದನನ ಅನುಮಾನದ ಕಾರಣಗಳೇನು ಎಂದು ನೀವು ಒದೆ ತಿಳಿಯಬೇಕು. ಒಂದಂತು ಹೇಳಬಲ್ಲೆ ನೀವು ಈ ಪುಸ್ತಕವನ್ನು ಓದಿದ ಮೇಲೆ ಬೇಜಾರಂತು ಆಗುವುದಿಲ್ಲ ಬದಲ್ಲಗಿ ಇನ್ನು ನರಸಿಂಹಯ್ಯ ನವರ ಕಾದಂಬರಿಗಳನ್ನು ಕೊಂದು ಓದುತ್ತಿರಿ. 


ಹುಲಿಯೂರಿನ ಸರಹದ್ದು ಸ್ವರೂಪ ನಿಗೂಢ ಮನುಷ್ಯರು - ಪೂರ್ಣಚಂದ್ರ ತೇಜಸ್ವಿ

Huliyoorina Sarahaddu, Swaroopa, Nigoodha Manushyaru - Poornachandra Tejasviತೇಜಸ್ವಿಯವರ ಕಥೆ ಕಾದಂಬರಿಗಳನ್ನು ಓದುವುದೆಂದರೆ ಒಂದು ಸಂತೋಷ. ಯಾಕೆಂದ್ರೆ ಅವರ ಒಂದೊಂದು ಕಾದಂಬರಿಯು ನಮ್ಮನ್ನು ಒಂದೊಂದು ಪ್ರಪಂಜಕ್ಕೆ ಕರೆದ್ದೊಯುತ್ತಾರೆ. ಅವರ ಕಥೆ ಹೇಳುವ ರೀತಿ ಹಾಗೆ ಇದೆ, ನಮ್ಮನ್ನು ಒಂದು ಬೇರೆಯೇ ಪ್ರಪಂಚಕ್ಕೆ ಕರೆದೊಯ್ದು ನಮ್ಮನ್ನು ಆ ಪರಪಂಚದ ಒಂದು ಬಾಗವಾಗಿಬಿಡುಸುತ್ತಾರೆ. ಅವರು ಆ ಲೋಕದ ಒಂದೊಂದು ವರ್ಣನೆಯು ನಮ್ಮನ್ನು ಅದು ನಮ್ಮ ಮುಂದೇನೆ ಇದೆ ಎಂದು ಅನಿಸುತ್ತದೆ. ಈ ರೀತಿ ಮಾಡುವ ಕಲೆಗಾರಿಕೆ ತೇಜಸ್ವಿ ಒಬ್ಬರಿಗೆ ಮಾತ್ರ ಸಾಧ್ಯ. ಈ ಕಥಾಸಂಕಲದಲ್ಲು ಅವರು ನಮ್ಮನ್ನು ಹುಲಿಯೂರು, ಮೊನಿಯ ಬೆಟ್ಟದ ವರ್ಣನೆ, ಮಲೆನಾಡಿನ, ಚಿತ್ರಣ, ಚಂದ್ರಗುತ್ತಿ, ಉಗ್ರಗಿರಿ,ನವಿಲುಗುಂದ..... ಹೀಗೆ ಅವರು ನಮ್ಮನ್ನು ಆ ಊರಿನಲ್ಲಿ ಒಬ್ಬ ಮನುಷ್ಯನನ್ನು ಮಾಡುತ್ತಾರೆ. 

ಇದು ಅವರು ಬರೆದಿರುವ ಅಬಚೂರಿನ ಪೋಸ್ಟ್ ಆಫೀಸ್, ಜುಗಾರಿ ಕ್ರಾಸ್ ..... ಇತ್ಯಾದಿ ಕಥೆ ಕಾದಂಬರಿಗಳಿಗಿಂತ ತುಂಬ ವಿಬಿನ್ನ ಯಾಕೆಂದರೆ ಅವರು ಬರೆದ ಮೊದಲ ಕೆಲವು ಕತೆಗಳೇ ಇವು, ಸ್ವರೂಪ ಒಬ್ಬ ಮನುಷ್ಯ ಅಂತರ್ಯಕ್ಕೆ ಒಕ್ಕು ಅವರ ಭಾವನೆಗಳೇನು, ಅವರು ಇನ್ನೊಬ್ಬರ ಬಗ್ಗೆ ಇರುವ ಧೋರಣೆ ಎಲ್ಲವನ್ನು ತುಂಬ ವಿವರವಾಗಿ ಇದು ನಮ್ಮ ಚಿಂತನೆ ನೆ ಇರಬಹುದು ಅನ್ನಿಸುತ್ತದೆ. ಇಲ್ಲಿ ಅವರ ವಿಬಿನ್ನತೆ ಕಾಣುವುದು ನಿಗೂಡ ಮನುಷ್ಯರು ಕಿರುಕಾದಂಬರಿಯಲ್ಲಿ. ಅವರು ವಿವರಿಸುವ ಜೀವನದಲ್ಲಿ ಬಲಳಿದ ಬರಹಗಾರ ಜಗನ್ನಾಥ, ಎಕ್ಷ್ಚಿಸೆ ಇನ್ಸ್ಪೆಕ್ಟರ್ ರಂಗಪ್ಪ, ಗೋಪಾಲಯ್ಯ.... ಹೇಗೆ ಅವರು ಒಂದು ಮಳೆಯಲ್ಲಿ ಸಿಲುಕಿದ ಜಗನ್ನಾಥ ಮತ್ತು ರಂಗಪ್ಪ ನನ್ನು ಹೇಗೆ ಗೋಪಾಲಯ್ಯ ತಮ್ಮ ಮನೆಗೆ ಕರೆದೊಯ್ದು ಉಪಚರಿಸುತ್ತಾರೆ ಮತ್ತು ಮಳೆ ಜಾಸ್ತಿ ಹಾಗಿ ಭೂಕಂಪನವಾಗಿ ಎಲ್ಲರು ವಲಸೆ ಹೋಗಲು ನಿರ್ಧರಿಸುತ್ತಾರೆ, ಹಾಗೆ ಗೋಪಾಲಯ್ಯನ ಸಿ ಐ ಡಿ ದಿನಗಳು.. ಅವರವರ ಜೀವನದ ಬಗ್ಗೆ ಒಂದೊಂದು ಎಳೆಎಳೆಯನ್ನೇ  ಬಿಡಿಸು ನಮಗೆ ಬಡಿಸುತ್ತಾರೆ. ಇದರ ಮಧ್ಯೆ ಬಂದು ಹೋಗುವ ಕಾಡಿನ ಮನುಷ್ಯ ಮರಸ, ಕಂಪ್ರ ..... ಎಲ್ಲರು ಆ ಕಥೆಯ ಒಂದು ಬಹು ಮುಖ್ಯ ಪಾತ್ರವಾಗುತ್ತಾರೆ. 

ಅವರು ಇಲ್ಲಿ ಬಳಸುವ ಭಾಷೆ ಒಮ್ಮೊಮ್ಮೆ ನಮಗೆ ಅರ್ಥೈಸಿಕ್ಕೊಳ್ಳಲು ಸಲ್ಪ ಸಮಯ ಬೇಕು, ಅವರು ಇದು ಬರೆದಿದ್ದು ೧೯೭೦ ಯಾಲಿ ಮತ್ತು ಇದು ಮಲೆನಾಡಿನ ಭಾಷೆ.... ಆದರೆ ಅದು ಈ ಕಥಾಸಂಕಲನ ಓದಿದ ಮೇಲೆ ಅದು ಯಾಕೆ ಬಳೆಸಿದದಾರೆ, ಅದು ಯಾಕೆ ಮುಖ್ಯ ಎಂದು ತಿಳಿಯುತ್ತದೆ. ಇಲ್ಲಿ ಬರೆದಿರುವುದು ನಾವು ನೀವು ಮಾತಾಡುವ ರೀತಿಯಲ್ಲಿ ಬರೆದಿದ್ದಾರೆ. ಕರ್ವಾಲೋ ರೀತಿಯಲ್ಲಿ ನಾವು ನೋಡಿರದ ಒಂದು ನೀಗೂಡ ಪ್ರಪಂಜಕ್ಕ ನಮ್ಮನು ಪರಿಚಯಿಸುತ್ತಾರೆ. 


Sunday, April 27, 2014

ಭೀಮಕಾಯ - ಎಸ್ ಎಲ್ ಭೈರಪ್ಪ

Bhimakaya - S L Bhyrappa

ಭೀಮಕಾಯ ಭೈರಪ್ಪನವರ ಎರಡನೆಯ ಕಾದಂಬರಿ. ಒಂದು ಒಳ್ಳೆಯ ಕಾದಂಬರಿ ಬರೆಯಲು ಎಷ್ಟು ಆಳವಾದ ಆಧ್ಯನ ಮಾಡಬೇಕು ಅನ್ನುವುದನ್ನು ತೋರಿಸಿದ್ದಾರೆ. ಎಷ್ಟು ಜನ ಲೇಖಕರು ತಮ್ಮ ನಾಲ್ಕನೆಯ ಅಥವಾ ಐದನನೆಯ ಕಾದಂಬರಿ ಬರೆಯುವಾಗ ಉತ್ತಮವಾಗಿ ಬರೆಯುತ್ತಾರೆ, ಆದರೆ ಬೈರಪ್ಪನವರು ಬರೆಯಲೇ ಹುಟ್ಟಿದವರು ಎನ್ನುವುದು ಈ ಕಾದಂಬರಿ ಓದಿದಿಯಾ ಮೇಲೆ ತಿಳಿಯುತ್ತದೆ. ಈ ಕಾದಂಬರಿಗೆ ಅವರು ಗರಡಿ ಕುಸ್ತಿ ಬಗ್ಗೆ ಎಷ್ಟು ಆಳವಾದ ಅಧ್ಯನ ಮಾಡಿರಬೇಕು ಎಂದು ಓದುದುತ್ತಾ ಓದಂತೆ ತಿಳಿಯುತ್ತದೆ ಮತ್ತು ಆಶ್ಚರ್ಯವು ಆಗುತ್ತದೆ. ಆಶ್ಚರ್ಯ ಯಾಕೆಂದರೆ ೧೯೫೮ರಲ್ಲಿ ಅವರು ಕುಸ್ತಿ ಬಗ್ಗೆ ಪೂರ್ತಿ ತಿಳ್ಕೊಂಡು ಮತ್ತು ಆದರೆ ಸುತ್ತ ಕಥ ಎಣೆಯೊದು ಅಷ್ಟು ಸುಲಬವಲ್ಲ. 

ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ನಾವು ಕಾಲದಲ್ಲೂ ನೋಡಬಹುದು, ಒಬ್ಬರ ಯಶಸ್ಸು ಸಹಿಸದೆ ಇರುವವರು ಮತ್ತು ಅವರನ್ನು ತಪ್ಪು ದಾರಿಗೆ ಎಳೆಯುವವರು. ಇಲ್ಲಿ ಬರುವ ಸುಬ್ಬು ಒಳ್ಳೆಯ ಕುಸ್ತಿ ಪಟು, ಅವರು ತಂದೆ ಆಸೆ ಪಟ್ಟ ಹಾಗೆ ಕುಸ್ತಿಯಲ್ಲಿ ಪಳಗಿ ಸುತ್ತಾ ಮುತ್ತಾ ಊರಿನಲ್ಲಿ ಹೆಸರು ಗಳಿಸಿರುತ್ತಾನೆ. ಇದನ್ನು ಸಹಿಸದ ಬೇರೆ ಗರಡಿಯ ಹಳೆ ಕುಸ್ತಿ ಪಟುಗಳು ಇದರಲ್ಲಿ ಮಲ್ಲಾರಿ ಸುಬ್ಬುವನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಒಂದು ಯೋಜನೆ ಹಾಕುತ್ತನೆ. ಮಲ್ಲಾರಿಗೆ ಸುಬ್ಬು ಮೇಲೆ ಕೋಪ ಏಕೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವನನ್ನು ಸೋಲಿಸಿದ್ದ, ಸುಬ್ಬುವನ್ನು ಆಖಾಡದಲ್ಲಿ ಸೋಲಿಸಲು ಹಾಗುವುದಿಲ್ಲ ಎಂದು ಈ ಕೆಟ್ಟ ಯೋಜನೆ ಹಾಕುತ್ತಾನೆ, ಇದಕ್ಕೆ ಅವನು ಪುಟ್ಟನ ಸಹಾಯ ತೆಗೆದುಕೊಳ್ಳುತ್ತಾನೆ.

ಪುಟ್ಟ ಸುಬ್ಬುವನ್ನು ರಾಜಿಗೆ ಪರಿಚಯ ಮಾಡಿಸುತ್ತಾನೆ. ರಾಜಿ ಸುಬ್ಬುವನ್ನು ಮನಸಾರ ಪ್ರೀತಿಸುತ್ತಾಳೆ. ರಾಜಿಯ ಪರಿಚಯವಾದ ಮೇಲೆ ಸುಬ್ಬು ಕುಸ್ತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾ ಬರುತ್ತಾನೆ. ಅವನು ಒಂದು ದಿನ ಯಾವತ್ತು ಸೋಲದ ಕುಸ್ತಿಯಲ್ಲಿ ಚೋಲಾವಾರ್ ಸಿಂಗ್ ನಾ ಹತ್ತಿರ ಸೊಲುತ್ತಾನೆ. ಮುಂದೆ ಸುಬ್ಬು ಹೇಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟು ಮತ್ತೆ ಗೆಲ್ಲುತ್ತಾನೆ ಎಂದು ನೀವು ಓದೆ ನೋಡಬೇಕು.

ನಮ್ಮ ಜೀವನದಲ್ಲೂ ಒಂದಲ್ಲ ಒಂದು ಬಾರಿ ಮ್ಯಲಾರಿಯಂತವರು ಸಿಗುತ್ತಾರೆ ಆದರೆ ನಾವು ನಮ್ಮ ಗುರಿ ತಪ್ಪಬಾರದು. ನಮಗೆ ಸರಿ ಯಾವುದು ತಪ್ಪು ಯಾವುದು ಎಂದು ತಿಳಿದು ಹೆಜ್ಜೆ ಹಾಕಬೇಕು. ತಪ್ಪು ಮಾಡಿ ತಿದ್ದಿಕೊಳ್ಳದೆ ಹೋದರೆ ನಮ್ಮ ಜೀವನಕ್ಕೆ ಆಪಾಯ. ಜೀವನದಲ್ಲಿ ಹೇಗೆ ತಾಪು ಮಾಡಿದರು ತಿದ್ದಿಕೊಳ್ಳಬಹುದು ಎಂದು ಸುಬ್ಬುವಿನ ಜೀವನದಿಂದ ತಿಳಿದುಕೊಳ್ಳಬಹುದು. 


Wednesday, April 23, 2014

ಝೆನ್ ಕಥೆಗಳು - ಸ್ವರ್ಗದ ಬಾಗಿಲುಒಂದು ದಿನ ನೋಬುಶಿಂಗ್ ಎಂಬ ಸೈನಿಕ ಝೆನ್ ಗುರು ಹುಕೈನ್ ಹತ್ತಿರ ಬಂದು "ಗುರುಗಳೇ ಸ್ವರ್ಗ ಮತ್ತು ನರಕ ಅನ್ನುವುದು ನಿಜಬಾಗಲೂ ಇದೆಯೇ?" ಎಂದು ಕೇಳಿದನು. ಅದಕ್ಕೆ ಝೆನ್ ಗುರುಗಳು "ನೀನು ಏನು ಮಾಡುತ್ತಿರುವೆ? " ಎಂದು ಕೇಳಿದರು.

ಅದಕ್ಕೆ ಅವನು "ನಾನೊಬ್ಬ ಸೈನಿಕ" ಎಂದು ಹೇಳಿದ. ಅದಕ್ಕೆ ಗುರುಗಳು "ನೀನು ನೋಡಲಿಕ್ಕೆ ಭಿಕ್ಷುಕ ರೀತಿ ಕಾಣುತ್ತೀಯ, ನೀನು ದೇಶವನ್ನು ರಕ್ಷಿಸುತ್ತೀಯ ಅಂದರೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ" ಎಂದು ಹೇಳಿದರು

ತನ್ನ ಬಗ್ಗೆ ಈ ರೀತಿಯ ಹೇಳಿದ್ದನ್ನು ಕೇಳಿ ಆ ಸೈನಿಕನಿಗೆ ತುಂಬಾ ಕೋಪ ಬಂತು, ಮುಖ ಬಿಗಿದುಕೊಳ್ಳಲಾರಂಭಿಸಿತು, ಅವನ ಕೈಗಳು ಖಡ್ಗವನ್ನು ಮತ್ತಷ್ಟು ಬಿಗಿಯಾಯಿತು. ಇದನ್ನು ಗಮನಿಸಿದ ಝೆನ್ ಗುರು "ಖಡ್ಗವಿದ್ದರೆ ಮಾತ್ರ ಸಾಕೇ ಆ ನಿನ್ನ ಖಡ್ಗ ನನ್ನ ತಲೆಯನ್ನು ತೆಗೆಯುವಷ್ಟು ಹರಿತವಾಗಿಲ್ಲ" ಎಂದು ಹೇಳಿದರು.

ಇದನ್ನು ಕೇಳಿದ ಸೈನಿಕ ಕತ್ತಿಯನ್ನು ಮೇಲಕ್ಕೆ ಎತ್ತಿದನು. ಆಗ ಗುರುಗಳು "ಈಗ ನೀನು ಏನು ಮಾಡುತ್ತಿರುವೆ ಅದೇ ನರಕ" ಎಂದು ಹೇಳಿದರು. ಸೈನಿಕ ಖಡ್ಗ ಕೆಳಗೆ ಹಾಕಿ ಅವರ ಅನುಯಾಯಿಯಾದನು. ಆಗ ಗುರುಗಳು "ಇವತ್ತಿನಿಂದ ನಿನಗೆ ಸ್ವರ್ಗದ ಬಾಗಿಲು ತೆರೆಯಿತು" ಎಂದು ಹೇಳಿದರು.Tuesday, April 22, 2014

ಅಳಿದ ಮೇಲೆ - ಶಿವರಾಮ ಕಾರಂತ

Alida Mele - Shivarama Karanthನಾವೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲವಾರು ಜನರ ಜೀವನದಲ್ಲಿ ಒಂದು ಪಾತ್ರವಾಗಿಬಿಟ್ಟಿರುತ್ತೇವೆ. ನಮಗರಿವಿಲ್ಲದಂತೆ ನಮ್ಮಿಂದ ಕಷ್ಟಕ್ಕೆ ಸಿಲುಕಿದವರು, ಖುಷಿ ಪಟ್ಟವರು ಸುಮಾರು ಜನರಿರುತ್ತಾರೆ. ಕಷ್ಟ ಪಟ್ಟವರು ದ್ವೇಷಿಸಿತ್ತಾರೆ, ಖುಷಿ ಪಟ್ಟವರು ಮರೆಯುತ್ತಾರೆ, ಇದರೆಲ್ಲದರ ಮಧ್ಯೆ ಒಂದೋ ಎರಡೋ ಮೂರೊ ಜನ ಮಾತ್ರ ನಮ್ಮನ್ನು ಪ್ರೀತಿ, ವಿಶ್ವಾಸದಿಂದ ನೆನೆಯುತ್ತಾರೆ. ಅಂತ ಎರಡು ಮೂರ ಜನ ಮಾತ್ರ ನಮ್ಮ ಜೀವನದೊಂದಿಗೆ ನೆಡೆದು ಬರುತ್ತಾರೆ ಕೊನೆವರೆಗೂ. ಒಂದು ಕಾಲದಲ್ಲಿ ಜನರ ಪರಿಚವಾಗಿ, ಪರಿಚಯ ಸ್ನೇಹವಾಗಿ ಆತ್ಮಿಯರಾಗುತ್ತಿದ್ದರು ಪಯಣಮಾದುವಾಗ,, ಬಸ್ಸಲ್ಲೋ ರೈಲ್ಲಲ್ಲೋ, ಈ ಆಧುನಿಕ ಜೀವನದಲ್ಲಿ ಅಕ್ಕ ಪಕ್ಕ ಕೂತವರು ಯಾರು ಎಂದು ತಿಳಿದುಕ್ಕೊಳ್ಳವ ಗೋಜಿಗೆ ಹೋಗುವುದಿಲ್ಲ ಇನ್ನು ಸ್ನೇಹ ಎಲ್ಲಿಂದ ಬರಬೆಕು. ಇದಕ್ಕೆ ನಮಗೆ ಸ್ನೇಹಿತರು ಹಿತೈಷಿಗಳು ಕಮ್ಮಿ, ಅವರನ್ನು ಹುಡುಕಿಕೊಂಡು ನಾವು ಫೇಸ್ಬುಕ್ ಅಲ್ಲೋ ಇಲ್ಲ ಅಂತರ್ಜಾಲದ ಯಾವುದು ವೆಬ್ ಸೈಟ್ ನಲ್ಲಿ ಕಾಲ ವ್ಯಯ ಮಾಡುತ್ತಿರುತ್ತೇವೆ.  'ಅಳಿದ ಮೇಲೆ' ಕಾದಂಬರಿ ಓದಿದ ಮೇಲೆ ನನಗನಿಸ್ಸಿದ್ದು ಅಂದರೆ ನಮ್ಮ ಜೀವನ ರುಚಿಇಲ್ಲದ ಒಂದು ದೀರ್ಘವಾದು ಊಟ ಎಂದು. ಯಾಕೆ ಹೀಗೆ ಹೇಳುತ್ತೇನೆ ಎಂದರೆ ನಾವ್ಯಾರು ಅಕ್ಕ ಪಕ್ಕ ಇರುವ ಜನರ ಬಗ್ಗೆ ತಿಳಿದುಕೊಳ್ಳುವುದಿಲ್ಲ, ಅವರ ಸ್ಥಿತಿ ಗತಿ ಗೊತ್ತಿರವುದಿಲ್ಲ ಇನ್ನು ನಮ್ಮ ಜೀವನದಲ್ಲಿ ವ್ಯವಿಧ್ಯತೆ ಹೇಗೆ ಬರಬೇಕು. 

ಕಾರಂತರಿಗೆ ಯಶವಂತ್'ರ ಪರಿಚವಾಗುವುದು ಮುಂಬೈಗೆ ಹೋಗುತ್ತಿರುವಾಗ ರೈಲು ಪ್ರಯಾಣದಲ್ಲಿ. ಅವರ ಪರಿಚಯ ಸ್ನೇಹವಾಗುತ್ತದೆ, ಯಶವಂತರು ತಮ್ಮ ಬಗ್ಗೆಯಾಗಲಿ ತಮ್ಮ ಮನೆಯರ ಬಗ್ಗೆಯಾಗಲಿ ಕಾರಂತರ ಹತ್ತಿರ ಮಾತಾಡಿದವರಲ್ಲ, ಅವರ ಮಾತು ಕಡಿಮೆ. ಕಳೆದ ಆರು ವರ್ಷದಲ್ಲಿ ಮುಂಬೈಗೆ ಯಾವಾಗಲಾದರು ಹೋದಾಗ ಕಾರಂತರು ಅವರನ್ನು ಬೀತಿಯಾಗಿ ಬರುತ್ತಿದ್ದರು, ಬೇಟಿಯಾದಾಗಲು ಮಾತು ತುಂಬಾ ತೂಕದ ಮಾತಾಡುತ್ತಿದ್ದರು. ಅವರು ಸತ್ತಾಗ ಅವರು ಕಲಿಸದ ಪತ್ರಗಳು ಮತ್ತು ಬಿಡಿಸಿದ ಚಿತ್ರಗಳ ಮೂಲಕ ಅವರ ಜೀವನದಲ್ಲಿ ಎನೇನಾಗಿರಬಹುದು ಎಂದು ಕಾರಂತರಿಗೆ ತಿಳಿಯುತ್ತದೆ. ಮತ್ತೆ ಅವರು ಹದಿನೈದು ಸಾವಿರಕೊಟ್ಟು ತಿಂಗಳಿಗೆ ೨೫ ರುಪಾಯಿಗಳಂತೆ ನಾಲ್ಕು ಜನರಿಗೆ ತಲುಪಿಸಿರಿ ಎಂದು ವಿನಂತಿಸುತ್ತಾನೆ. 

ಕಾರಂತರು ತಿಂಗಳಿಗೊಮ್ಮೆ ದುಡ್ಡು ಕೊಡುವಾಗ ಶಂಬುಭಟ್ಟ  ಪಾರ್ವತಿಯ ದುಡ್ಡು ಕದಿಯುತ್ತಿರುವಾಗಿ ಅನುಮಾನಬರುತ್ತದೆ, ಅದನ್ನು ಪರಿಶೀಲಿಸಲು ಎರಡು ತಿಂಗಳು ದುಡ್ಡು ಕಳಿಸುವುದಿಲ್ಲ, ದುಡ್ಡು ಬರದ ಕಾರಣ ಶಂಬುಭಟ್ಟ ಇವರಿಗೆ ಕಾಗದ ಬರಯುತ್ತಾನೆ. ಅವರ ಅನುಮಾನು ಇನ್ನು ಆಳಾವಾಗುತ್ತದೆ ಕಾರಂತರು ಅವರನ್ನು ನೋಡಲು ಅವರ ಹಳ್ಳಿಗೆ ಪ್ರಯಾಸದಿಂದ ಸಾಗಿ ಸೇರುತ್ತಾರೆ. ಅಲ್ಲಿ ಪಾರ್ವತಿಯು ಯಶವಂತರ ಸಾಕು ತಾಯಿ, ಅವರು ತುಂಬ ಕಷ್ಟದಲ್ಲಿದ್ದಾರೆ ಎಂದು ತಿಳಿಯುತ್ತದೆ. ಅವರಿಂದ ಯಶವಂತರು ತುಂಬ ದಾರಾಳು ಮನುಷ್ಯ, ಅಪ್ಪ ಸತ್ತ ಮೇಲೆ ಇದ್ದ ಆಸ್ತಿಯಲ್ಲೇ ದಾನ ಧರ್ಮ ಮಾಡಿ ಕಳೆದುಕೊಂಡ, ಸಾಲ ಜಾಸ್ತಿಯಾಗಿ ಮನೆ ಮಾರಿಕೊಂಡು ಬೇರೆ ಊರಿಗೆ ಹೋಗಿ ನೆಲೆಸಿ ಮತ್ತೆ ಕಳೆದುಕೊಂಡ ದುಡ್ದನೆಲ್ಲ ಗಳಿಸಿದ ಮತ್ತೆ ಹೆಂಡತಿ ಮಕ್ಕಳ ಕಾಟದಿಂದ ಮನೆ ಬಿಟ್ಟ ಎಂಬುದು ತಿಳಿಯುತ್ತದೆ. ಪಾರ್ವತಿ ಅಜ್ಜಿಯ ಆಸೆಯಂತೆ ಊರಿನ ದೇವಾಲಯದ ಜೀರ್ಣೋದ್ದಾರ ಮಾಡಿಸಿದ ಮೇಲೆ ಅವರು ಕಣ್ಣು ಮುಚ್ಚುತ್ತಾರೆ. 

ಇದರ ಮಧ್ಯೆ ಯಶವಂತರ ಮಗನಿಗೆ ಅಪ್ಪ ಸತ್ತಿದ ವಿಷಯ ತಿಳಿದು ಅವರು ಕೊಟ್ಟಿರುವ ದುಡ್ಡು ಕೇಳಲು ದಾವೆ ಹಾಕುತ್ತಾನೆ ಮಾತ್ತೆ ಸುಮ್ಮನಾಗುತ್ತನೆ. ಯಶವಂತರ ಹೇಳಿರುವ ಇನ್ನು ಮೂರು ಜನ ಒಬ್ಬ ಅವರ ಅಳಿಯ, ಅವರ ಎರಡನೆಯ ಹೆಂಡತಿಯ ಮಗ ಮತ್ತು ಮಹಾಬಲೇಶ್ವರ ದಲ್ಲಿರುವ ಒಬ್ಬ ಪಂಡಿತರು. ಅವರೆಲ್ಲರು ಯಶವಂತರನ್ನು ಒಳ್ಳೆಯ ಮನುಷ್ಯ ಎಂದು ಹೇಳುವವರೆ. ಇದರೆಲ್ಲದರ ಮಧ್ಯ ಯಶವಂತರ ಹೆಂಡತಿಯ ಮಗಳನ್ನು ಭೇಟಿ ಮಾಡುತ್ತಾರೆ. 

ಕಾರಂತರು ಯಶವಂತರ ಜೀವನವನ್ನು ಪೂರ್ತಿಯಾಗಿ ಆತ್ಮ ಕತೆಯಾಗಿ ಬರೆಯದ್ದಿದ್ದರು ಅವರು ಪಟ್ಟ ಕಷ್ಟ, ಮೋಸಹೋದ ದಿನಗಳು, ಸಹಾಯ ಮಾಡಿದ ಜನರು ಎಲ್ಲವನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ. ಅವರು ಈ ನಾಲ್ಕು ಜನರನ್ನು ಹುಡುಕಿಕೊಂಡು ಹೋದ ಪ್ರಸಂಗ, ಅವರಿಂದ ತಿಳಿದ ವಿಷಯಗಳು ಮತ್ತು ಅವರು ನೋಡಿದ ದೃಶ್ಯಗಳಿಂದ ಯಶವಂತರ  ಜೀವನವನ್ನು ಪೋಣಿಸುತ್ತಾರೆ. ಇಲ್ಲಿ ಜನರು ದುಡ್ಡಿನ ಹಿಂದೆ ಹೇಗೆ ಓಡುತ್ತಾರೆ, ಅದರಿಂದ ಬರುವ ವ್ಯಮನಸ್ಸು ಅದರಿಂದ ಸಂಭಂದದಲ್ಲಿ ಆಗುವ ಬಿರಿಕು ಎಂಥಹದ್ದು ಎಂದು ಕಾಣುತ್ತಾರೆ. ಇದು ಕಾರಂತರು ಬರೆದಿರುವ 'ಬೆಟ್ಟದೆ ಜೀವ' ಕಾದಂಬರಿಯ ರೀತಿಯಲ್ಲೇ ನಮ್ಮ ಮುಂದೆ ತರುತ್ತಾರೆ. ಒಂದು ಜೀವದ ಹಿಂದೆ ಹತ್ತಾರು ಜೀವಗಳ ಕೈ ಇದ್ದೆ ಇರುತ್ತದೆ ಮತ್ತು ನಾವಾಗಿ ಯಾವುದೇ ಸಂಬಂಧದಿಂದ ಕಳಚಿಕೊಳ್ಳಲಾಗುವುದಿಲ್ಲ ಮಾತು ಜೀವನ ನಡೆಸಿದಂತೆ ನಾವು ನೆಡೆದು ಹೋಗಬೇಕು. 


Monday, April 21, 2014

ಝೆನ್ ಕಥೆಗಳು - ನಿಷ್ಪ್ರಯೋಜಕ ಜೀವನಒಬ್ಬ ರೈತನಿಗೆ ಬಹಳ ವಯಸ್ಸಾಗಿತ್ತು. ಅವನಿಗೆ ಹೊಲದಲ್ಲಿ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಸದಾ ವರಾಂಡದಲ್ಲೇ ಕುಳಿತುಕೊಂಡು ದಿನ ಕಳೆಯುತ್ತಿದ್ದನು. ಅವನ ಮಗ ಯಾವಾಗಲೂ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಮಗನು ಯಾವ ಸಮಯದಲ್ಲಿ ನೋಡಿದರೂ ಅವರ ತಂದೆ ಅಲ್ಲಿಯೇ ಕುಳಿತಿರುವುದು ಕಾಣುತ್ತಿತ್ತು. 

"ಇವರು ಇನ್ನು ಮುಂದೆ ಯಾವುದೇ ಕೆಲಸಕ್ಕೂ ಉಪಯೋಗಕ್ಕೆ ಬರುವುದಿಲ್ಲ" ಎಂದು ಮಗನು ಭಾವಿಸಿದನು. "ಇನ್ನು ಮುಂದೆ ಇವರಿಂದ ಏನೂ ಮಾಡಲು ಸಾಧ್ಯವಿಲ್ಲ" ಎಂದು ತಿಳಿಯಿತು. ಇದರಿಂದ ಮಗನಿಗೆ ತುಂಬಾ ನಿರಾಸೆಯಾಯಿತು. ಒಂದು ದಿನ ಮಗನು ಒಂದು ದೊಡ್ಡದಾದ ಮರದ ಶವದ ಪೆಟ್ಟಿಗೆಯನ್ನು ತಯಾರು ಮಾಡಿಸಿದನು. ಮತ್ತು ಅದನ್ನು ವರಾಂಡದಲ್ಲಿ ಎಳೆದು ತಂದು ಅವರ ತಂದೆಗೆ ಒಳಗೆ ಮಲಗಿಕೊಳ್ಳಲು ಹೇಳಿದನು.

ಏನೂ ಮಾತನಾಡದೇ ಅವರ ತಂದೆ ಅದರ ಮೇಲೆ ಏರಿ ಒಳಗೆ ಮಲಗಿದರು. ನಂತರ ಮಗನು ಆ ಶವದ ಪೆಟ್ಟಿಗೆಯ ಮುಚ್ಚಳವನ್ನು ಮುಚ್ಚಿ, ಅದನ್ನು ಹೊಲದ ಕೊನೆಯಲ್ಲಿ ಇರುವ ದೊಡ್ಡದಾದ ಪ್ರಪಾತಕ್ಕೆ ಎಳೆದು ತರುತ್ತಿದ್ದನು.


ಆ ಪ್ರಪಾತ ಸಮೀಪಿಸುತ್ತಿದ್ದಂತೆ ಶವದ ಪೆಟ್ಟಿಗೆಯ ಒಳಗಿನಿಂದ ನಿಧಾನವಾಗಿ ಮುಚ್ಚಳ ಸರಿದಾಡಲಾರಂಭಿಸಿತು. ಮಗನು ಆ ಮುಚ್ಚಳವನ್ನು ತೆರೆದು ನೋಡಿದನು. ಅದರ ಒಳಗೆ ಅವರ ತಂದೆ ಪ್ರಶಾಂತವಾಗಿ ಮಲಗಿದ್ದರು. ಅವರ ತಂದೆ ಮಗನ ಕಡೆ ನೋಡಿ "ಮಗನೇ ನೀನು ನನ್ನನ್ನು ಪ್ರಪಾತದಿಂದ ಕೆಳಗೆ ತಳ್ಳಲು ಕರೆದೊಯ್ಯುತ್ತಿದ್ದೀಯ ಅಂತ ನನಗೆ ಗೊತ್ತಿದೆ. ಆದರೆ ನೀನು ಹಾಗೆ ಮಾಡುವುದಕ್ಕಿಂತ ಮೊದಲು ನಾನು ನಿನಗೆ ಒಂದು ಸಲಹೆಯನ್ನು ನೀಡಲೇ? ಎಂದು ಕೇಳಿದನು. "ಏನದು..?" ಎಂದು ಮಗನು ಕೇಳಿದನು. "ನೀನು ನನ್ನನ್ನು ಪ್ರಪಾತದಿಂದ ಎಸೆಯಬೇಕು ಎಂದು ಬಯಸಿದರೆ ನನ್ನನ್ನು ಎಸೆದು ಬಿಡು. ಆದರೆ ಈ ಅತ್ಯುತ್ತಮವಾದ ಮರದ ಶವದ ಪೆಟ್ಟಿಗೆಯನ್ನು ಉಳಿಸಿ ಜೋಪಾನವಾಗಿ ಕಾಪಾಡು. ಮುಂದೆ ನಿನ್ನ ಮಕ್ಕಳು ಇದನ್ನು ಬಳಸಲು ಉಪಯುಕ್ತವಾಗುತ್ತದೆ!" ಎಂದು ಹೇಳಿದನು ಆ ವೃದ್ಧ ತಂದೆ. ಆಗ ಮಗನಿಗೆ ತನ್ನ ತಪ್ಪಿನ ಅರಿವಾಯಿತು. ತಂದೆಯ ಕ್ಷಮೆ ಕೇಳಿ, ಗೌರವದಿಂದ ತಂದೆಯನ್ನು ಮನೆಗೆ ವಾಪಸ್ ಕರೆದುಕೊಂಡು ಹೋದನು.Wednesday, April 16, 2014

ಝೆನ್ ಕಥೆಗಳು - ಹಣೆ ಬರಹ


ಜಪಾನಿನ ಒಂದು ಮುಖ್ಯವಾದ ಯುದ್ಧದಲ್ಲಿ ತನ್ನ ಸೈನ್ಯವು ಬಹುತೇಕ ನಾಶವಾಗಿದ್ದರೂ, ಸೈನಿಕರು ದಣಿದಿದ್ದರೂ ಸೈನ್ಯಾಧಿಕಾರಿಗೆ ಗೆಲುವು ಸಾಧ್ಯವೆಂಬ ಭರವಸೆಯಿತ್ತು. ಆದರೆ ಸೈನಿಕರು ಸಂಶಯದಲ್ಲಿದ್ದರು. ಪುನಃ ಯುದ್ಧವನ್ನು ಮುಂದುವರೆಸುವುದೆಂದು ಸೈನ್ಯಾಧಿಕಾರಿ ನಿರ್ಧರಿಸಿದ. 
ಸೈನ್ಯವು ಯುದ್ಧಕ್ಕೆ ತೆರಳುತ್ತಿದ್ದಾಗ ದಾರಿಯಲ್ಲಿ ಒಂದು ದೇವಾಲಯದ ಬಳಿ ಪ್ರಾರ್ಥನೆಗಾಗಿ ನಿಂತಿತು. ತನ್ನ ಸೈನಿಕರೊಂದಿಗೆ ಪ್ರಾರ್ಥನೆ ಮುಗಿಸಿದ ಬಳಿಕ ಸೈನ್ಯಾಧಿಕಾರಿಯು ಕಿಸೆಯಿಂದ ಒಂದು ನಾಣ್ಯವನ್ನು ಹೊರ ತೆಗೆದು, “ಸೈನಿಕರೇ, ಈ ನಾಣ್ಯವನ್ನು ನಾನೀಗ ಚಿಮ್ಮಿಸುತ್ತೇನೆ. ಅದರ ಮುಂಭಾಗ ಕಂಡರೆ, ನಾವು ಗೆಲ್ಲುತ್ತೇವೆ. ಹಿಂಭಾಗ ಕಂಡರೆ ನಾವು ಸೋಲುತ್ತೇವೆ.” ಎಂದು ಹೇಳಿ ನಾಣ್ಯವನ್ನು ಮೇಲಕ್ಕೆ ಚಿಮ್ಮಿಸಿದನು.
ಎಲ್ಲರೂ ಕುತೂಹಲದಿಂದ ಅದು ಕೆಳಗೆ ಬೀಳುವುದನ್ನೇ ಕಾಯುತ್ತಿದ್ದರು. ನಾಣ್ಯ, ಮುಂಭಾಗ ಕಾಣುವಂತೆ ಕೆಳಗೆ ಬಿತ್ತು. ಸೈನಿಕರು ತಮ್ಮ ಎದೆಯಲ್ಲಿ ಭರವಸೆಯನ್ನು ತುಂಬಿಕೊಂಡು ವೀರಾವೇಶದಿಂದ ಶತ್ರುಗಳೊಂದಿಗೆ ಕಾದಿದರು. ಕಡೆಗೆ ಯುದ್ಧದಲ್ಲಿ ಗೆಲುವು ಸಾಧಿಸಿದರು.
“ವಿಧಿಯನ್ನು ಯಾರೂ ಬದಲಾಯಿಸಲಾಗುವುದಿಲ್ಲ.” ಎಂದು ಒಬ್ಬ ಸೈನಿಕ ಸೈನ್ಯಾಧಿಕಾರಿಗೆ ಹೇಳಿದನು.
“ನಿಜವಾಗಿಯೂ”, ಎನ್ನುತ್ತಾ ಸೈನ್ಯಾಧಿಕಾರಿಯು ನಾಣ್ಯವನ್ನು ಎಲ್ಲರಿಗೂ ತೋರಿಸಿದನು. ಅದರ ಎರಡೂ ಮುಖಗಳು ಒಂದೇ ರೀತಿ ಇದ್ದವು!


Tuesday, April 15, 2014

ಸಿಗೀರಿಯ - ಕೆ ಎನ್ ಗಣೇಶಯ್ಯ

Sigiriya K. N. Ganeshaiah
ಯಾವುದೇ ಪ್ರಮುಖ ಚಾರಿತ್ರಿಕ ಸ್ಥಳಕ್ಕೆ ಭೇಟಿಯಿತ್ತರೂ , ಅಲ್ಲಿನ ಚರಿತ್ರೆಯ ವಿವರಣೆಗಳಲ್ಲಿ ಒಂದಲ್ಲ ಒಂದು gap ಕಾಣುವುದು ಸಹಜ ಇಲ್ಲವೆ ಒಂದಲ್ಲ ಒಂದು ಅನುಮಾನ ಅಥವಾ ಉತ್ತರ ಸಿಗದ ಪ್ರಶ್ನೆ, ಧುತ್ತೆಂದು ಎದುರಾಗುತ್ತದೆ. ಅದಕ್ಕೆ ಉತ್ತರ ಹುಡುಕುತ್ತ ಹೋದಂತೆ, ನಾವು ನಿರೀಷಿಸಿರದ ರಹಸ್ಯಗಳು ನಮ್ಮ ಮುಂದೆ ತೆರೆದುಕೊಳ್ಳತೊಡಗುತ್ತದೆ. ಅಂತಹ ಹುಡುಕಾಟದಲ್ಲಿ ದೊರೆತ ಅಪರಿಚಿತ ವಿವರಗಳನ್ನು ಪರಿಚಿತವಿರುವ ಚರಿತ್ರೆಗೆ ಬೆರೆಸಿ ಕತೆಯೊಂದನ್ನು ಬೆಳೆಸಿದರೆ, ಕತೆಯ ಸೃಷ್ಟಿಯ ಜೊತೆಗೆ ಚರಿತ್ರೆಯನ್ನು ಪುನರಾವಲೋಕನ ಮಾಡಿದಂತಹ ಸಮಾಧಾನವೂ ನಮ್ಮದಾಗುತ್ತದೆ. ಹೀಗೆ ಬೆಳೆದ ಕತೆಯೇ, ಸಿಗೀರಿಯ . ಶ್ರೀಲಂಕಾದ ಯಾತ್ರಾಸ್ಥಳಗಳ ಬಗ್ಗೆ ಓದಿದಾಗಲೆಲ್ಲಾ, ಅತೀವವಾಗಿ ಆಕರ್ಷಿಸಿದ್ದ, ಸಿಗೀರಿಯದ ದುರ್ಗಮ ಬೆಟ್ಟ ಮತ್ತು ಅದರ ಮೇಲಿದ್ದ ಬೌದ್ಧ ವಿಹಾರ ನಮ್ಮನ್ನು ಸದಾ ಕಾಡಿತ್ತು. ಅಲ್ಲಿಗೆ ಹೋದಾಗ ಎದುರಾದ ಪ್ರಶ್ನೆಗಳನ್ನು ಕೆದಕಿದಾಗ ದೊರಕಿದ ಅದ್ಭುತ ವಿವರಗಳು ಈ ಕತೆಯ ವಸ್ತುವಾದವು 

ಅಂತಹ ವಸ್ತುಗಳು ಒಮ್ಮೊಮ್ಮೆ ನಮ್ಮ ಹಿತ್ತಲ್ಲೇ ಇರುವ ಸಾಧ್ಯತೆಯೂ ಇದೆ ಎನ್ನುವುದಕ್ಕೆ ಹೊನ್ನಹುಟ್ಟು ಒಂದು ಉದಾಹರಣೆ. ಚಿಕ್ಕ ವಯಸ್ಸಿನಲ್ಲಿ, ನಮ್ಮೂರಿನಲ್ಲಿ ನೋಡಿದ್ದ ಒಬ್ಬ ಬ್ರಿಟೀಷ್ ಅಧಿಕಾರಿಯ ಸಮಾಧಿ, ಅದೇ ಕಾಲದಲ್ಲಿ, ಅಂದರೆ ಎರಡನೆಯ ಮಹಾಯುದ್ದದ ಸಮಯದಲ್ಲಿ, ನಮ್ಮೂರಿನ ಬಾಲಿ ಬೀಡುಬಿಟ್ಟಿದ್ದ ಮಿಲಿಟರಿ ಕ್ಯಾಂಪ್ಗೆ ಒಬ್ಬ ಅಜ್ಜಿ ಹಾಲು ತುಪ್ಪ ಮಾರಿ ಕೆರೆ ಕಟ್ಟಿಸಿದ ಅತಃಕರಣ ಕಳುಕುವ ಘಟನೆ, ಇಂಥಹುಗಳ ಸುತ್ತ ಹೆಣೆದ ಕತೆ ಇದು.  

ಜೀವ ವಿಕಾಸವಾದದಲ್ಲಿನ ಕೆಲವು ಅದ್ಬುತ ಆವಿಷ್ಕಾರಗಳನ್ನು ಕೆತೆಗಳ ಮೂಲಕ ತರುವ ಪ್ರಯತ್ನವೆಂದರೆ ನನಗೆ ಸ್ವಲ್ಪ ಹೆಚ್ಚೆ ಎನ್ನಬಹುದು. ಇದಕ್ಕಾಗಿಯೆ ನಾನು ಈ ಮುಂದೆ ಬರೆದ ಹಲವು ಕತೆಗಳಲ್ಲಿ( ಉಗ್ರಬಂಧ, ಕಾರಾಗ ತ್ಯಾಗ, ಮಲಬಾರ್- ೦೭, ದೇಹಾತ್ಮ, ನಿಶಿದ್ದ ಬಂಧ, ....) ಜೀವವಿಕಾಸದ ಕೆಲವು ವಾದಗಳನ್ನು ತರಲು ಪ್ರಯತ್ನಿಸಿದ್ದೇನೆ. ಇಲ್ಲಿನ ಮಮಕಾರದ ಚರಮರಾಗ ದಲ್ಲಿ ಅಂತಹಧೇ ಒಂದು ಪ್ರಯತ್ನ 


ಕಲ್ದವಸಿ - ಕೆ ಎನ್ ಗಣೇಶಯ್ಯ

Kaldavasi - K. N. Ganeshaiahಮುನ್ನುಡಿಯಿಂದ 

ನಮ್ಮ ಸಂಸ್ಕೃತಿ ಅನಾದಿ ಕಾಲದ್ದು; ನಮ್ಮ ದೇಶಕ್ಕೆ ಭವ್ಯವಾದ ಚರಿತ್ರೆ ಇದೆ. ನಮ್ಮ ಪೂರ‍್ವಜರಿಗೆ ಎಲ್ಲವೂ ವೇದ್ಯವಾಗಿತ್ತು; ಅವರು ಬರೆದಿರುವುದನ್ನು ಡಿಕೋಡ್ ಮಾಡಿದರೆ ಸಾಕು ಈಗಿನ ವಿಜ್ಞಾನದ ಅದ್ಭುತ ಆವಿಷ್ಕಾರಗಳೇ ಅಲ್ಲಿ ಅಡಗಿವೆ .... ಹೀಗೆ ಬುರುಡೆ ಬಿಡುವಲ್ಲಿ ನಾವು ನಿಸ್ಸೀಮರು. ಅದಕ್ಕೆ ಹುಚ್ಚು ಹುಚ್ಚು ಆಧಾರಗಳನ್ನೂ ಹುಡುಕಿ ತೆಗೆಯುತ್ತೇವೆ ಕೂಡ- ಪೋಸ್ಟ್‌ಮಾರ‍್ಟಮ್ ಆಗಿ.
ಡಾರ್ವಿನ್, ಮನುಷ್ಯನು ಸರಳ ಜೀವಿಗಳಿಂದ ಹಂತ ಹಂತವಾಗಿ ವಿಕಾಸಗೊಂಡ ಒಂದು ಸಂಕೀರ್ಣ ಪ್ರಭೇದ ಎಂದು ವಾದಿಸಿದ ಕೂಡಲೆ, ನಮ್ಮ ದಶಾವತಾರಗಳನ್ನು ತೋರಿಸಿ, ಅಗೋ ನಮ್ಮವರಿಗೆ ಅದು ಗೊತ್ತಿತ್ತು ಎಂದು ಘೋಷಿಸಿಬಿಡುತ್ತೇವೆ- ಅದರ ಪರಿಣಾಮದ ಬಗ್ಗೆ ಯೋಚಿಸದೆ. ದಶಾವತಾರದ ಮತ್ಸ್ಯ, ಆಮೆ, ವರಾಹ ಇವು ಮಾನವನ ವಿಕಾಸದ ಹಂತಗಳನ್ನು ತೋರುವ ಹಾಗಿದ್ದರೆ 'ಸಂಭವಾಮಿ ಉಘೇ ಉಘೇ' ಒಂದು ಉಡಾಫೆಯೆ? ಅಥವ, 'ಸಂಭವಾಮಿ ಉಘೇ ಉಘೇ' ಮತ್ತು ದಶಾವತಾರದ ಕಥೆಗಳು ಸತ್ಯವಾಗಿದ್ದಲ್ಲಿ, ಆ ಅವತಾರಗಳು ಮಾನವನ ವಿಕಾಸವನ್ನು ಸೂಚಿಸುತ್ತವೆ ಎನ್ನುವುದು ಉಡಾಫೆಯಾಗಿರಬೇಕಲ್ಲವೆ?
'ಆ ಎರಡೂ ಸಹ ಒಂದರೊಳಗೊಂದು ಅಡಗಿಕೊಂಡಿರುವ ಸತ್ಯಗಳು' ಎಂದು ವಾದಿಸಿ, ಈ ದ್ವಂದ್ವವನ್ನು ಸುಲಭವಾಗಿ ನೀಗಿಸುವವರಿಗೂ ಬರವಿಲ್ಲ. ನಾವು ಬಹು ತತ್ವ ಪ್ರವೀಣರಲ್ಲವೆ? ಹಾಗಾಗಿ ಬಹು-ಅರ್ಥಗಳೂ ಅಲ್ಲಿರಲು ಸಾಧ್ಯ ಎಂದು ನಂಬುವುದು, ಅಥವ ನಂಬಿಸುವುದು ನಮಗೆ ಕಷ್ಟವಿಲ್ಲ.
ಹೀಗೆ ನಮ್ಮ ಆದಿಕಾಲದ ಜ್ಞಾನದ ಪೋಸ್ಟ್-ಮಾರ್ಟಮ್ ಅವಲೋಕನೆ ಎಷ್ಟರಮಟ್ಟಿಗೆ ಹೋಗಿದೆ ಎಂದರೆ, ಇತ್ತೀಚೆಗೆ ಒಂದೆಡೆ, ಶ್ರಿಚಕ್ರದ ಪ್ರಾಕಾರವು 'ಗಾಡ್ ಪಾರ್ಟಿಕಲ್'ಗಳನ್ನು ತೋರುತ್ತದೆ ಎಂಬ ವಾದವನ್ನೂ ಓದಿದೆ!! ನನಗೆ ಆಶ್ಚರ್ಯವಾಗುವುದೆಂದರೆ, ಗಾಡ್ ಪಾರ‍್ಟಿಕಲ್ ಅನ್ನು ವಿಜ್ಞಾನಿಗಳು ಅಷ್ಟು ಮೈಮುರಿದು ಪ್ರಯೋಗ ಕೈಗೊಂಡು ತೋರುವ ಮುನ್ನವೆ ಅಂತಹ ರಹಸ್ಯ ಜ್ಞಾನ ನಮ್ಮ ಪೂರ್ವಜರು ಅರಿತಿದ್ದರೆಂದು ತೋರಿಸಬಲ್ಲವರು ಅಥವ ಪುರಾವೆಗಳಿಂದ ವಾದಿಸುವವರು ಏಕೆ ಯಾರೂ ಇಲ್ಲ ಎನ್ನುವುದು. ಎಲ್ಲವೂ ಏಕೆ ಪೋಸ್ಟ್-ಮಾರ್ಟೆಮ್ ಆಗಿ ಅವಲೋಕನಗೊಳ್ಳುತ್ತವೆ?
ಇಂತಹ ಕುರುಡು ಪ್ರೇಮದಿಂದ, ಇವೆಲ್ಲಕ್ಕೂ ಮಿಗಿಲಾದ ಅಪಾಯ ಒಂದಿದೆ: ಮುಂದಿನ ಜನಾಂಗಕ್ಕೂ ಈ ದೇಶದ ಚರಿತ್ರೆ ಮತ್ತು ಸಂಸ್ಕೃತಿಯ ಬಗ್ಗೆ ನಮ್ಮ ಎಲ್ಲಕುರುಡು ನಂಬಿಕೆಗಳನ್ನೂ ಸತ್ಯವೆಂದು ಬೋಧಿಸಿ, ನಂಬಿಸಿ, ಬೆನ್ನು ತಟ್ಟಿಕೊಂಡು, ತಟ್ಟಿಸಿಕೊಂಡು, ಸ್ವಪ್ರಶಂಸೆಯಲ್ಲಿಯೆ ತೃಪ್ತಿಪಟ್ಟುಕೊಳ್ಳುವುದರ ಜೊತೆಗೆ, ಅಂತಹ ಹುಸಿ ಸಂತೃಪ್ತಿಯನ್ನು ಎಳೆ ಮನಗಳಲ್ಲಿಯೂ ತುಂಬಿ, ನಮ್ಮ ಸಂಸ್ಕೃತಿಯ ಎಲ್ಲ ಅವಶೇಷಗಳನ್ನೂ ಯಾವುದೇ ಅವಲೋಕನೆಯಿಲ್ಲದೆ ಸ್ವೀಕರಿಸಲು ಪ್ರೇರೇಪಿಸಿ, ಅವರನ್ನು ವಿಚಾರವಂತಿಕೆಯಲ್ಲಿ ಮತ್ತು ಚಿಂತನೆಯಲ್ಲಿ ನಿರ್ವೀರ್ಯರನ್ನಾಗಿಸುವ ಸಾಧ್ಯತೆಯ ಅಪಾಯ.
ಇದಕ್ಕೆ ಹಲವು ದೃಷ್ಟಾಂತಗಳಿವೆ: ನಮ್ಮ ದೇವರುಗಳು ಹೆಂಡತಿಯರನ್ನು ಅಡ ಇಟ್ಟು ಮಾರಿಕೊಂಡರೂ ಅವರನ್ನು ಪೂಜಿಸಬೇಕೆನ್ನುತ್ತೇವೆ. 'ನೀನು ಎಂದಿಗೂ ಜೂಜು ಆಡಬಾರದು' ಎಂದು ಮಕ್ಕಳಿಗೆ ನೀತಿ ಪಾಠ ಹೇಳುತ್ತಲೆ, ಆ ಜೂಜಿನಿಂದಲೆ ಒಂದು ಇಡಿ ಯುಗವನ್ನೆ ಯುದ್ಧರಂಗವನ್ನಾಗಿಸಿದ ಧರ್ಮರಾಯನಿಗೆ ದೇವಾಲಯ ಕಟ್ಟಿಸಿ ಅಲ್ಲಿ ಅವನನ್ನು ಪೂಜಿಸಲು ಕಲಿಸುತ್ತೇವೆ. ಈ ಎಲ್ಲ ವೈರುದ್ಯಗಳ ಮಧ್ಯೆ, ಮಕ್ಕಳನ್ನು ಸರಿತಪ್ಪುಗಳ ತರ್ಕದ ಗೋಜಲಿಗೆ ಸಿಕ್ಕಿಸುತ್ತೇವೆ.
ರಾಮಾಯಣವನ್ನು ವೈಭವೀಕರಿಸುವಾಗ ರಾಮನ 'ಏಕಪತ್ನೀವ್ರತ'ದ ಬಗ್ಗೆ ಪೂಜಾಮನೋಭಾವ ಬೆಳೆಯುವಂತೆ ಬೋಧಿಸಿ, ಕೃಷ್ಣನ ಬೃಂದಾವನದ ಕಥೆಗೆ ಬಂದಾಗ, ಸಾವಿರ ಹೆಣ್ಣುಗಳ ಜೊತೆಯ ಅವನ ಚಕ್ಕಂದವನ್ನು ಮೆಚ್ಚಿ, ಗೌರವಿಸಬೇಕಾದ ದೇವರ ನಡತೆ ಎಂದು ತತ್ವೀಕರಿಸುತ್ತೇವೆ. ನಮ್ಮ ದೈವಗಳ ಈ ವೈರುಧ್ಯಗಳಲ್ಲಿ ಯಾವುದು ಸರಿ ಯಾವುದು ತಪ್ಪು ಎನ್ನುವ ಗೊಂದಲವನ್ನು ಪರಿಹರಿಸಲಾಗದ ಹರೆಯದ ಕಂದಮ್ಮಗಳು ಕೊನೆಗೆ ಯಾವುದರ ಬಗ್ಗೆಯೂ ಯೋಚಿಸದೆ ಇರುವುದೆ ಸುಲಭೋತ್ತಮ ಕ್ರಮವೆಂದು ಕಲಿತು, ಅವರು ತಾರ್ಕಿಕ- ಮತ್ತು ಚಿಂತನಾ-ಸೋಂಬೇರಿಗಳಾಗಲು ನಾವೇ ಕಾರಣವಾಗುತ್ತೇವೆ.
ಇಂತಹ ಸುಳ್ಳು ಬೋಧನೆಗಳಿಂದ ನಮ್ಮ ಮನಸ್ಸುಗಳನ್ನು ಬಿಡುಗಡೆಗೊಳಿಸುವ ಪ್ರಯತ್ನವಾಗಿ 'ಕಲ್ದವಸಿ' ರೂಪುಗೊಂಡಿದ್ದಾಳೆ. ಈ ಕಥೆಯಲ್ಲಿ ಕಥೆ ನಿಮಿತ್ತ. ಕುವೆಂಪು ಮತ್ತು ಸರಸ್ವತಿಯ ಸಂವಾದವೆ ಕಥೆಯ ಜೀವಾಳ.
ಭಾರತವರ್ಷದ ಇದೇ ಕಾಲಘಟ್ಟದಲ್ಲಿ ನಾವು ಮೇಲಿನ ಗುಂಪಿಗೆ ತದ್ವಿರುದ್ಧವಾದ ಮತ್ತೊಂದು 'ವಿಚಾರವಾದಿ' ಬಳಗವನ್ನೂ ಕಾಣುತ್ತೇವೆ. ಎಸ್.ಎಲ್. ಭೈರಪ್ಪನವರು ಚರಿತ್ರೆಯಲ್ಲಿ ಉಲ್ಲೇಖಿತ ಸತ್ಯಗಳನ್ನು ಆಧರಿಸಿ ಬರೆದ 'ಆವರಣ' ಕಾದಂಬರಿಯನ್ನು ಹಾಗೂ, ವಿ.ಎಸ್. ನೈಪಾಲ್‌ರು ತಮ್ಮ 'ವೂಂಡೆಡ್ ಸಿವಿಲೈಜೇಶನ್'ನಲ್ಲಿ ಉಚ್ಚರಿಸಿದ ಇತಿಹಾಸ ಸತ್ಯವನ್ನು 'ಸಮಾಜ ವಿರೋಧಿ', 'ಶಾಂತಿ ಕದಡುವ', ಅಥವ 'ಇನ್ಸೆನ್ಸಿಟಿವ್' ಬರಹಗಳೆಂಬ ಅರ್ಥ ಲೇಪಿಸಿ, ಅವುಗಳಲ್ಲಿ 'ಲಿಟರೇಚರ್- ಬಾಂಬ್' ಎಂಬಂತಹ ಭಯೋತ್ಪಾದಕ ಅಂಶಗಳನ್ನು ಹುಡುಕುವ ಈ ವಿಚಾರವಾದಿಗಳು, ಅದೇ ಭಾರತ ಚರಿತ್ರೆಯ ಜಾತಿ-ವರ್ಣ ಭೇದ, ಸತಿಯೊಡನೆ ಸಹಗಮನ, ಬಾಲ್ಯವಿವಾಹದಂತಹ ದುರಂತ ಸತ್ಯಗಳನ್ನು ಮಾತ್ರ ಎತ್ತಿಹಿಡಿಯುವ ಅರೆ-ಸತ್ಯ-ವಾದಿಗಳು.
ನಮ್ಮ ಸಂಸ್ಕೃತಿಯ ಈ ದುರಂತ ಸತ್ಯಗಳನ್ನು ಎತ್ತಿ ತೋರಬಾರದೆನ್ನುವುದು ನನ್ನ ವಾದವಲ್ಲ. ಅವೆಲ್ಲವೂ ಸತ್ಯ. ಆ ಸತ್ಯವನ್ನು ಗುರುತಿಸಲೇಬೇಕು. ಆದರೆ, ಅಂತೆಯೆ, ಬೇರೆ ಸತ್ಯಗಳನ್ನೂ ಗುರುತಿಸುವಲ್ಲಿ ನಾವು ಭೇದಭಾವ ಮಾಡಬಾರದು ಎನ್ನುವುದು ನನ್ನ ಒತ್ತಾಯ.
ಚರಿತ್ರೆಯನ್ನು ಚರಿತ್ರೆಯನ್ನಾಗಿ ಮಾತ್ರ ನೋಡುವ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆನ್ನುವುದು ನನ್ನ ವಾದ. ಆದರೆ, ಈ ಬುದ್ಧಿಜೀವಿಗಳು ಚರಿತ್ರೆಯ ಕೆಲವು ಸತ್ಯಗಳನ್ನು ಎತ್ತಿಹಿಡಿದು, ಕೆಲವನ್ನು ಕಾಣದಂತೆ ನಟಿಸುವ ಜಾಣಕುರುಡರು. ಚರಿತ್ರೆಯನ್ನು ತಮ್ಮ ವಾದಕ್ಕೆ ತಕ್ಕಂತೆ ಸ್ವೀಕರಿಸುವ ಅಥವ ತಿರಸ್ಕರಿಸುವ ಇವರು, ಪ್ರಸ್ತುತ ಸಾಮಾಜಿಕ ಮನೋಭಾವದ ದೃಷ್ಟಿಯಲ್ಲಿ ಗೌರವಕ್ಕೆ ಪಾತ್ರರಾಗುವಂತೆ, ರಾಜಕೀಯದ ಗಾಳಿಯ ದಿಕ್ಕಿಗೆ ಸರಿಹೊಂದುವಂತೆ, ತಮ್ಮ ವಾದಗಳನ್ನು ಮಂಡಿಸಿ ಬೇರೆಯವರಿಗಿಂತಲೂ ತಾವು 'ಸಾಮಾಜಿಕ ನ್ಯಾಯವಂತರು', 'ಸಾಮಾಜಿಕ ಪ್ರಜ್ಞಾವಂತರು' ಎಂದು ಎದೆ ತಟ್ಟಿ ಹೇಳಿಕೊಳ್ಳವಲ್ಲಿ ನಿಸ್ಸೀಮರು.
'ನಮ್ಮ ಚರಿತ್ರೆಯು ಗೆದ್ದವರು ಬರೆದ ಸುಳ್ಳಿನ ಕಂತೆ' ಎಂಬ ಸತ್ಯದ ಬಗ್ಗೆ ಬಿಡುಬೀಸಾಗಿ ಮಾತನಾಡಿ, ಅಂದಿನ ಚರಿತ್ರಕಾರರನ್ನು ಮೂದಲಿಸುವ ಈ ಬಳಗ, ಇಂದಿನ ಕಾಲ ಘಟ್ಟದಲ್ಲಿ ತಾವೂ ಸಹ ಅಂಥದೆ ಅರ್ಧ ಸತ್ಯವನ್ನು ಹುಟ್ಟುಹಾಕುತ್ತಿರುವ 'ಚರಿತ್ರೆ-ಕಳ್ಳರು' ಎಂದು ನನ್ನ ಭಾವನೆ.
ಈ 'ವಿಚಾರವಾದಿ'ಗಳಿಗೆ ಮತ್ತೊಂದು ದಾಯಾದಿ ಬಳಗವಿದೆ. ಈ ಬಳಗವೂ ಸಹ ಹೀಗೆಯೆ ವೈರುಧ್ಯ ಮೌಲ್ಯಗಳಿಗೆ ಅಂಟಿಕೊಂಡು, ಕಾಣದ ತಮ್ಮ ಬೆನ್ನಿಗೆ ಕನ್ನಡಿ ಹಿಡಿಯದ ಜಾಣ ಜಾತಿ. ಬಹುಪಾಲು, ಮೀಡಿಯಾಗಳಲ್ಲಿ ಕಾಣಿಸಿಕೊಳ್ಳುವ ಇವರು ನಮ್ಮ ಯುವ ಜನಾಂಗವು ಅಸಭ್ಯ ಉಡುಪುಗಳನ್ನು ಧರಿಸುವುದರ ಮತ್ತು ಚಲನಚಿತ್ರಗಳ 'ಐಟಂ ನೃತ್ಯ'ಗಳ ಸಾಮಾಜಿಕ ಪರಿಣಾಮವನ್ನು ಅವಲೋಕಿಸುವುದೇ ಅನಾಗರಿಕ ಎಂದು ತೀರ್ಮಾನಿಸಿದರೂ, ಅಮೆರಿಕದ ಪ್ರೆಸಿಡೆಂಟ್ ಒಬ್ಬಾಕೆಯನ್ನು ಗೌರವಯುತವಾಗಿ, 'ಬೆಸ್ಟ್ ಲುಕಿಂಗ್' ಎಂದು ಹೇಳಿದರೆ, ಅದು 'ಸೆಕ್ಸಿಸ್ಟ್ ಕಾಮೆಂಟ್' ಎಂದೇ ತೀರ್ಮಾನಿಸಿ ಖಂಡಿಸಲು ಮುಂದಾಗುತ್ತಾರೆ.
ತಮ್ಮನ್ನು ತಾವೆ 'ಲಿಬರೇಟೆಡ್' ಎಂದು ಕರೆದುಕೊಳ್ಳುವ ಈ ಜಾತಿ, 'ಲಿವಿಂಗ್ ರಿಲೇಶನ್'ನಂತಹ ಜೀವನ ಕ್ರಮಗಳನ್ನೂ, ಹೆಣ್ಣು ಅಥವಾ ಗಂಡು ಅಸಭ್ಯವಾದ ವೇಷಗಳನ್ನು ಧರಿಸುವುದನ್ನು ವೈಯುಕ್ತಿಕ ಸ್ವಾತಂತ್ರ್ಯ ಎಂದು ಸಮರ್ಥಿಸಿಕೊಳ್ಳುವುದೆ ಒಂದು ಹೆಗ್ಗಳಿಕೆ ಎಂದು ಭಾವಿಸುತ್ತಾರೆ. ಆದರೆ, ಒಂದು
ಹೆಣ್ಣು ಮತ್ತು ಗಂಡನ್ನು ಬೆಸೆಯಲು ನಡೆಯುವ ಮದುವೆ ಮುಂತಾದ ಸಾಂಸ್ಕೃತಿಕ ವ್ಯವಸ್ಥೆಗಳು, ಮತ್ತು ಸಮಾಜದಲ್ಲಿ ನಾವು ಅಳವಡಿಸಿಕೊಳ್ಳಬೇಕಿರುವ ಸಭ್ಯ ವರ್ತನೆಗಳು, ಸಮಾಜದ ಏಳಿಗೆಗಾಗಿ ಶತಮಾನಗಳ ಕಾಲದಿಂದ ವಿಕಾಸಗೊಂಡಿರುವ ಸಾಮಾಜಿಕ ನಡತೆಗಳು ಎಂಬ ಸತ್ಯಕ್ಕೆ ಜಾಣ ಕುರುಡರಾಗಿ ವರ್ತಿಸುತ್ತಾರೆ. ಆ ವ್ಯವಸ್ಥೆಗಳನ್ನು ನಾವು ಸಾರಾ ಸಗಟಾಗಿ ನಿರ್ಲಕ್ಷಿಸುವುದರಿಂದ ಸಮಾಜದ ಸಮೂಹ ನಡವಳಿಕೆಗಳಲ್ಲಿ ಏರುಪೇರಾಗುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸುವುವರನ್ನೆಲ್ಲ 'ದಡ್ಡರು', 'ಅನಾಗರಿಕರು' ಎಂದು ಗುಡಿಸಿ ಗುಡ್ಡೆಹಾಕುತ್ತಾರೆ.

ಇವರನ್ನು ಕಂಡಾಗ ನನಗೆ ನೆನಪಾಗುವುದೆಂದರೆ, ೧೭ನೆ ಮತ್ತು ೧೮ನೆ ಶತಮಾನದ ಯೂರೋಪಿನಲ್ಲಿ ಕಂಡುಬಂದ ಇಂಥದೆ ಒಂದು ಚಾಲನೆ: ಅಂದಿನ ಕಾಲ ಘಟ್ಟದ ಯೂರೋಪಿನ ಕೆಲವರು 'ಬುದ್ಧಿವಂತ'ರು (ಲಿನ್ನೇಸ್ ಸೇರಿ), ತಮ್ಮ ಜನಾಂಗ, ಅಂದರೆ ಬಿಳಿಯರು, ಮಾತ್ರ ಉನ್ನತ ಮಟ್ಟದ ನಾಗರಿಕರು ಮಿಕ್ಕೆಲ್ಲರೂ ಅನಾಗರಿಕ ಕೀಳು ಜನಾಂಗದವರು ಎಂದು ತೀರ್ಮಾನಿಸಿ ಪುಟಗಟ್ಟಲೆ
ಬರೆದು, ಭಾಷಣಗಳನ್ನು ಬಿಗಿದು ತಮ್ಮ ಪ್ರತಿಷ್ಟೆಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಈಗಿನ ಕಾಲದ ಈ ಮೀಡಿಯ ಬಳಗ, ಅಂದಿನ ಕಾಲದ ಯೂರೋಪಿನ 'ಬುದ್ಧಿವಂತರ' ಹಾದಿ ತುಳಿಯುವುದೆ 'ನಾಗರೀಕತೆ' ಎಂದು ಭಾವಿಸಿದಂತಿದೆ.

ಧರ್ಮಗಳ ಅವಶ್ಯಕತೆಯ ಬಗ್ಗೆ ಮಾತನಾಡುವವರನ್ನೂ ಹಾಗೆಯೆ ತಿರಸ್ಕಾರ ಮನೋಭಾವದಿಂದ ನೋಡುವ ಈ ಎರಡೂ ವಿಚಾರವಾದಿ'ಗಳು, ಧರ್ಮಗಳು ಮತ್ತು ಹಲವು ಧಾರ್ಮಿಕ ವಿಧಿಗಳು, ಸಾಮಾಜಿಕ ಅವಶ್ಯಕತೆಯಿಂದಾಗಿ ವಿಕಾಸಗೊಂಡ ವ್ಯವಸ್ಥೆಗಳು, ಹಾಗೂ, ಮಾನವನಲ್ಲಿ ಸಮಾಜ-ಪರ ನಡತೆಗಳು ವಿಕಾಸಗೊಂಡಿರುವುದೆ ಧರ್ಮಗಳ ಆವರಣದೊಳಗೆ ಎಂಬ ವೈಜ್ಞಾನಿಕ ಸತ್ಯಕ್ಕೆ ಕಣ್ಣು ಮುಚ್ಚಿಬಿಟ್ಟಂತಿದೆ. ಅಂತೆಯೆ, ಧಾರ್ಮಿಕ ವಿಧಿಗಳನ್ನು ಧಿಕ್ಕರಿಸುವ ಮುನ್ನ ಅವುಗಳ ಅವಲೋಕನೆ ಅವಶ್ಯಕ ಎಂದು ವಾದಿಸುವವರನ್ನು ಇವರು, 'ಮೂಲಭೂತ ವಾದಿಗಳೆಂದು' ತಿರಸ್ಕರಿಸುತ್ತಾರೆ.
ಇಂತಹ 'ವಿಚಾರವಂತ'ರ ವಾದಗಳಲ್ಲಿರಬಹುದಾದ ಟೊಳ್ಳನ್ನು ತೆರೆದಿಡುವ ಪ್ರಯತ್ನವೆ 'ಅಂಗದಾನ'. ನನ್ನ ಉದ್ದೇಶ ಇಷ್ಟೇ: ಧರ್ಮಗಳ ಉಗಮ ಮತ್ತು ಅವಶ್ಯಕತೆ ಗಳನ್ನು ನಾವು ಉದ್ವೇಗರಹಿತವಾಗಿ, ರಾಜಕೀಯ-ಮುಕ್ತವಾಗಿ, ಹಾಗೂ ಕಾಲಾತೀತವಾಗಿ ಗ್ರಹಿಸಿದರೆ, ಆಗ ದೊರೆಯುವ ಉತ್ತರಗಳು, ಬಹುಶಃ ನಮ್ಮ ಈಗಿನ ರಾಜ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳಲ್ಲಿ ತರಬೇಕಾದ ಕೆಲವು ಬದಲಾವಣೆಗಳ ಅವಶ್ಯಕತೆಯತ್ತ ಕೈಮರಗಳಾಗಬಹುದು ಎಂಬ ನಂಬಿಕೆ.
ಈ ನನ್ನ ನಂಬಿಕೆಯನ್ನು ಇನ್ನೂ ಹೆಚ್ಚಿನ ಚರ್ಚೆಯ ಓರೆಗಲ್ಲಿಗೆ ಹಚ್ಚಬೇಕು ಎಂದು ನಾನೂ ಒಪ್ಪಿಕೊಳ್ಳುತ್ತೇನೆ. ನಮ್ಮ ದೇಶಕ್ಕೆ ಅದ್ಭುತವಾದ ಚರಿತ್ರೆಯಿದೆ ಎಂದು ಬೊಗಳೆಬಿಡುವ, ನಾವು ಅದೆಷ್ಟು 'ಚರಿತ್ರೆ-ಹೀನ'ರು ಎಂದು ನಾಚಿಕೆ ಪಡಬೇಕಾಗಿದೆ:
ಅಶೋಕನ ಕಾಲದಲ್ಲಿ ಲಿಪಿಯನ್ನು ಅಳವಡಿಸಿಕೊಂಡ ನಂತರವೂ ಸಹ ಚರಿತ್ರೆಯ ಘಟನೆಗಳ ಬಗ್ಗೆ ಬರೆದು, ದಾಖಲಿಸುವ ರೂಢಿಯೇ ನಮ್ಮ ಭಾರತೀಯರ ರಕ್ತದಲ್ಲಿ ಕಂಡು ಬರುವುದಿಲ್ಲ. ವಿಜಯನಗರದ ವಿವರಗಳು ಬೇಕಿದ್ದರೆ, ಚೀನಾದ ಹುಯೆನ್‌ತ್ಸಾಂಗ್‌ನ ಯಾತ್ರೆಯ ದಾಖಲೆಗಳಿಗೆ ಹೋಗಬೇಕು. ಚಂದ್ರಗುಪ್ತನ ಬಗ್ಗೆ ತಿಳಿಯಬೇಕೆಂದರೆ ಅಲೆಕ್ಸಾಂಡರ್ ತನ್ನೊಂದಿಗೆ ಕರೆತಂದಿದ್ದ ಚರಿತ್ರಕಾರ, ಹೆರೊಡೋಟಸ್‌ನ ಬರಹಕ್ಕೆ ಶರಣಾಗಬೇಕು. ಬುದ್ಧನ ಹಾಗೂ ಅಶೋಕನ ಬಗ್ಗೆ ತಿಳಿಯಬೇಕೆಂದರೆ, ಶ್ರೀಲಂಕದ 'ಮಹಾವಂಶ' ದಂತಹ ಪುರಾಣಗಳಿಗೆ ಮೊರೆಹೋಗಬೇಕು.
ಹೀಗೆ ನಮ್ಮ ಇಡೀ ಚರಿತ್ರೆಯ ರಚನೆಗೆ ನಾವು ಹೊರಗಿನ ದಾಖಲೆಗಳನ್ನೇ ಆಶ್ರಯಿಸಬೇಕಿರುವಾಗ, ನಮ್ಮ ಚರಿತ್ರೆ ಅದ್ಭುತ ಎಂದು ಯಾವ ಖಚಿತತೆಯಿಂದ ಹೇಳಬಹುದು ಎಂದು ನನಗೆ ಆಶ್ಚರ್ಯ. ಬಹುಶಃ
ಇದೆ ಕಾರಣದಿಂದಲೇ ಹಲವು ಚಾರಿತ್ರಿಕ ವ್ಯಕ್ತಿಗಳ ಬಗ್ಗೆ ನಮಗೆ ಯಾವುದೇ ಖಚಿತ ಮಾಹಿತಿ ಇಲ್ಲದೆ, ಊಹಾಪೋಹಗಳ ಕಗ್ಗಂಟೆ ನಮ್ಮ ಮುಂದೆ ಎದುರಾಗುತ್ತದೆ.

ಉದಾಹರಣೆಗೆ, ಎರಡನೆ ಬುದ್ಧ ಎಂದೇ ಹೆಸರಾದ, ಬೌದ್ದ ಧರ್ಮಕ್ಕೆ ಮಹಾಯಾನ ಎಂಬ ಹೊಸ ಆಯಾಮವನ್ನೆ ಕಟ್ಟಿ ಕೊಟ್ಟ, ಇಂದಿನ ತತ್ವಜ್ಞಾನಿಗಳು ಕೂಡ ಅಚ್ಚರಿಪಡುವಂತಹ ತಾತ್ವಿಕ ವಾದಗಳನ್ನು ಮಂಡಿಸಿದ ನಾಗಾರ್ಜುನ ಆಚಾರ್ಯರ ಬಗ್ಗೆ ಅದೆಷ್ಟು ಊಹಾಪೋಹಗಳಿವೆ ಎಂದರೆ, ಅವೆಲ್ಲವೂ ನಿಜವಾಗಿದ್ದಲ್ಲಿ ಆತ ಕನಿಷ್ಟ ೪ ಶತಮಾನಗಳವರೆಗೆ ಬದುಕಿದ್ದ ಪವಾಡಪುರುಷನೂ, ತಾಂತ್ರಿಕನೂ, ಕಾಮುಕನೂ, ಕಲ್ಲನ್ನು ಬಂಗಾರಮಾಡುವ ಕಲೆ ಕಲಿತಿದ್ದ ಅದ್ಭುತ ರಸಾಯನ ಶಾಸ್ತ್ರಜ್ಞನೂ, ತನ್ನ ಕಾಲಕ್ಕೆ ಮೀರಿದ ಚಿಂತನಕಾರನೂ, ತರ್ಕವಾದಿಯೂ, ತತ್ವಶಾಸ್ತ್ರ ಪ್ರವೀಣನೂ. ....ಹೀಗೆ ಏನೇನೋ ಆಗಿರಬೇಕು!
ಅಂತಹ ಬಹು-ಆಕಾರದ ವ್ಯಕ್ತಿಯ ಚಿತ್ರಣ ಬರೆಯುವುದು ದೊಡ್ಡ ಸಾಹಸವೆ ಸರಿ. ಆ ಸಾಹಸವನ್ನು ಬದಿಗಿಟ್ಟು, ದೊರಕಿದ ಹಲವು ಮೂಲಗಳಿಂದ ಆತನ ಬಗ್ಗೆ ಒಂದು ಕೋನದ ಕಥೆ ನಿರ್ಮಿಸುವ ನನ್ನ ಪ್ರಯತ್ನವೆ 'ಧಮನಿ ಧರ್ಮ'


ಝೆನ್ ಕಥೆಗಳು - ಒಂದು ಕೈ ಚಪ್ಪಾಳೆಕೆನಿನ್ ದೇವಾಲಯದಲ್ಲಿದ್ದ ಝೆನ್ ಗುರುವಿನ ಹೆಸರು ಮೊಕೌರಿ. ಮೊಕೌರಿ ಎಂದರೆ ಸದ್ದಿಲ್ಲದ ಗುಡುಗು ಎಂದರ್ಥ. ಹನ್ನೆರಡು ವಯಸ್ಸಿನ ಪ್ರತಿಭಾವಂತ ಹುಡುಗ ಟೊಯೊ ಎಂಬಾತ ಅವನ ಬಳಿ ಶಿಷ್ಯನಾಗಿದ್ದ. ಸ್ವಲ್ಪ ವಯಸ್ಸಾದ ಶಿಷ್ಯರು ದಿನವೂ ಬೆಳಗ್ಗೆ ಸಂಜೆ ಗುರುವಿನ ಬಳಿ ಬಂದು ಸಾನ್‌ಝೆನ್ ಪಡೆದುಕೊಳ್ಳುವುದನ್ನು ನೋಡುತ್ತಿದ್ದ. 

ಸಾನ್‌ಝೆನ್ ಎಂದರೆ ವೈಯಕ್ತಿಕ ಮಾರ್ಗದರ್ಶನ. ಗುರು ಒಬ್ಬರಿಗೂ ಅವರಿಗೆ ತಕ್ಕ ಮುಂಡಿಗೆಯನ್ನು ನೀಡುತ್ತಿದ್ದ. ಈ ಬೆಡಗಿನಂಥ ಮಾತುಗಳ ಮುಂಡಿಗೆಯನ್ನು ಕೋನ್ ಎನ್ನುತ್ತಾರೆ. ಟೊಯೊ ತನಗೂ ಇಂಥ ಒಂದು ಕೋನ್ ಹೇಳಿ ಎಂದು ಗುರುವನ್ನು ಕೇಳಿದ. "ಸ್ವಲ್ಪ ಕಾಲ ತಾಳು, ನೀನಿನ್ನೂ ಚಿಕ್ಕವನು" ಎಂದ ಗುರು. ಆದರೆ ಟೊಯೊನ ಒತ್ತಾಯ ಜಾಸ್ತಿಯಾಯಿತು. 

ಗುರು ಒಪ್ಪಿದ. ಅವತ್ತು ಸಂಜೆ ಗುರುವಿನ ಕೋಣೆಯ ಹೊಸ್ತಿಲಲ್ಲಿ ನಿಂತು, ತಾನು ಬಂದಿರುವುದರ ಸೂಚನೆಯಾಗಿ ಗಂಟೆಯನ್ನು ಬಾರಿಸಿ, ಹೊಸ್ತಿಲಲ್ಲೇ ಮೂರು ಬಾರಿ ನಮಸ್ಕರಿಸಿ, ಒಳಗೆ ಬಂದು ಕುಳಿತ ಟಾಯೊ. "ಎರಡು ಕೈ ತಟ್ಟಿದರೆ ಚಪ್ಪಾಳೆಯ ಸದ್ದು ಕೇಳುತ್ತದೆ. ನನಗೆ ಒಂದೇ ಕೈಯ ಚಪ್ಪಾಳೆ ಸದ್ದನ್ನು ತೋರಿಸು" ಎಂದ ಗುರು.

ಟೊಯೊ ಗುರುವಿಗೆ ನಮಸ್ಕಾರ ಮಾಡಿ ತನ್ನ ಕೋಣೆಗೆ ಹಿಂದಿರುಗಿದ. ಧ್ಯಾನಕ್ಕೆ ಕುಳಿತ. ಅವನ ಕೋಣೆಗೆ ಸಮೀಪದಲ್ಲಿದ್ದ ಗೇಶಾ ಗಣಿಕೆಯರ ಮನೆಯಿಂದ ಸಂಗೀತ ಕೇಳಿಸುತ್ತಿತ್ತು. "ಆಹಾ, ಒಂದು ಕೈ ಚಪ್ಪಾಳೆಯ ಸದ್ದು ಸಿಕ್ಕಿತು" ಎಂದುಕೊಂಡ ಟೊಯೊ. ಮಾರನೆಯ ಒಂದು ಕೈಯ ಚಪ್ಪಾಳೆ ಸದ್ದು ಹೇಗಿರುತ್ತದೆ ಎಂದ ಗುರು. ಟೊಯೊ ಗೇಶಾ ಸಂಗೀತದ ಅನುಕರಣೆ ಮಾಡಿ ತೋರಿಸಿದ. "ಅಲ್ಲ, ಅದು ಒಂದು ಕೈ ಚಪ್ಪಾಳೆ ಸದ್ದಲ್ಲ. ನಿನಗೆ ಏನೂ ಗೊತ್ತಿಲ್ಲ" ಎಂದ ಗುರು.

ಈ ಸಂಗೀತ ಧ್ಯಾನಕ್ಕೆ ತೊಂದರೆ ಮಾಡುತ್ತದೆಂದು ಟೊಯೊ ನಿಶ್ಶಬ್ದವಾದ ಜಾಗ ಹುಡುಕಿಕೊಂಡು ಹೊರಟ. "ಒಂದೇ ಕೈಯ ಚಪ್ಪಾಳೆ ಸದ್ದು ಹೇಗಿರಬಹುದು" ಎಂದು ಚಿಂತಿಸಿದ. ಎಲ್ಲೋ ನೀರು ತೊಟ್ಟಿಕ್ಕುವ ಸದ್ದು ಕೇಳಿಸಿತು. "ಉತ್ತರ ಸಿಕ್ಕಿತು" ಎಂದುಕೊಂಡ ಟೊಯೊ. ಅಂದು ಗುರುವಿನ ಬಳಿ ಹೋದಾಗ ತೊಟ್ಟಿಕ್ಕುವ ನೀರಿನ ಸದ್ದನ್ನು ಅನುಕರಿಸಿ ತೋರಿಸಿದ. "ಇದು ನೀರಿನ ಹನಿಗಳ ಸದ್ದು, ಒಂದು ಕೈ ಚಪ್ಪಾಳೆಯ ಸದ್ದಲ್ಲ. ಪ್ರಯತ್ನಪಡಬೇಕು ಇನ್ನೂ" ಎಂದ ಗುರು. 

ಒಂದು ಕೈ ಚಪ್ಪಾಳೆಯ ಸದ್ದನ್ನು ಸಾಕ್ಷಾತ್ಕರಿಸಿಕೊಳ್ಳಲು ಧ್ಯಾನಕ್ಕೆ ಕೂತ ಟೊಯೊ. ಬೀಸುವ ಗಾಳಿಯ ಸದ್ದು ಕೇಳಿಸಿತು. ಗುರು ಅಲ್ಲ ಎಂದ. ಗೂಗೆಯ ಕೂಗಿನಂತೆ ಇದ್ದೀತೆ? ಅಲ್ಲ ಎಂದ ಗುರು. ಮಿಡತೆಗಳ ಜಿಟಿ ಜಿಟಿ? ಅಲ್ಲ. ಹತ್ತಿಪ್ಪತ್ತು ಬಾರಿ ಬೇರೆ ಬೇರೆ ಸದ್ದುಗಳನ್ನು ಕೇಳಿಸಿಕೊಂಡು, ಅದನ್ನೆಲ್ಲ ಮಾಡಿ ತೋರಿಸಿ ಅಲ್ಲ ಅನ್ನಿಸಿಕೊಂಡ. 

ಒಂದು ಕೈಯ ಚಪ್ಪಾಳೆ ಸದ್ದನ್ನು ಆಲಿಸಲು ಧ್ಯಾನ ಮಾಡುತ್ತಾ ಒಂದು ವರ್ಷವೇ ಕಳೆಯಿತು. ಧ್ಯಾನಿಸುತ್ತಾ ಧ್ಯಾನಿಸುತ್ತಾ ಆಳಕ್ಕೆ ಇಳಿದು ಸದ್ದಿಲ್ಲದ ಸ್ಥಿತಿಗೆ ತಲುಪಿದ ಟೊಯೊ. "ನಿಮಗೆ ತೋರಿಸುವುದಕ್ಕೆ ಯಾವ ಸದ್ದುಗಳೂ ಇಲ್ಲ. ಸದ್ದಿಲ್ಲದ ಸದ್ದಿನ ಸ್ಥಿತಿಗೆ ಹೋಗಿಬಿಟ್ಟಿದ್ದೇನೆ" ಎಂದ ಟೊಯೊ. 

ಟೊಯೊಗೆ ಒಂದು ಕೈ ಚಪ್ಪಾಳೆಯ ಸಾಕ್ಷಾತ್ಕಾರವಾಗಿತ್ತು.


Monday, April 14, 2014

ಝೆನ್ ಕಥೆಗಳು - ಕಣ್ಣು ಮಿಟುಕಿಸದೆ


ಆಂತರಿಕ ಯುದ್ಧಗಳಲ್ಲಿ ತೊಡಗಿದ್ದ ಜಪಾನಿನಲ್ಲಿ ಸೈನ್ಯ ಊರೊಂದಕ್ಕೆ ನುಗ್ಗಿದರೆ ಕೈಗೆ ಸಿಕ್ಕವರನ್ನೆಲ್ಲ ಕೊಂದು ಊರನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದ್ದರು. ಆ ಒಂದು ಹಳ್ಳಿಯಲ್ಲಿನ ಜನರು ಸೈನ್ಯ ಆಕ್ರಮಣ  ಮಾಡುವ ಮುನ್ನವೇ ತಮ್ಮ ಸಾಮಾನು ಸರಂಜಾಮುಗಳನ್ನು ಕಟ್ಟಿಕೊಂಡು ಪಲಾಯನ ಗೈದಿದ್ದರು.

ಹಳ್ಳಿಗೆ ದಾಳಿಯಿಟ್ಟ ಸೈನ್ಯಕ್ಕೆ ಬರಿದಾದ ಮನೆಗಳು, ಮಾರುಕಟ್ಟೆಗಳು ಕಂಡವು. ಆದರೆ ಒಂದು ವಿಹಾರದಲ್ಲಿ ವಯಸ್ಸಾದ ಒಬ್ಬ ಝೆನ್ ಗುರು ಮಾತ್ರ ಉಳಿದಿದ್ದ. ಆ ವೃದ್ಧ ಗುರುವಿನ ಬಗ್ಗೆ ಕುತೂಹಲ ಉಂಟಾಗಿ ಸೈನ್ಯದ ದಂಡನಾಯಕ ಆತನನ್ನು ನೋಡಲು ವಿಹಾರಕ್ಕೆ ಬಂದ.

ದಂಡನಾಯಕನನ್ನು ಕಂಡೂ ಗುರುವು ವಿಚಲಿತನಾಗಲಿಲ್ಲ. ತನ್ನನ್ನು ಕಂಡು ನಡುಗುವ, ಮಂಡಿಯೂರಿ ಕುಳಿತುಕೊಳ್ಳುವವರನ್ನೇ ಎಲ್ಲೆಡೆ ಕಂಡಿದ್ದ ದಂಡನಾಯಕನಿಗೆ ಕೋಪ ನೆತ್ತಿಗೇರಿತು.

“ಮೂರ್ಖ! ನೀನು ಯಾರ ಎದುರು ನಿಂತಿದ್ದೀಯ ಅಂತ ಗೊತ್ತಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತು ಸೀಳಿಹಾಕಬಲ್ಲೆ” ದಂಡನಾಯಕ ಅಬ್ಬರಿಸಿದ.

ಗುರು ತಣ್ಣನೆಯ ಧ್ವನಿಯಲ್ಲಿ ಉತ್ತರಿಸಿದ, “ನೀನು ಯಾರ ಎದುರು ನಿಂತಿದ್ದೀಯ ಅಂತ ತಿಳಿದಿದೆಯಾ? ಕಣ್ಣು ಮಿಟುಕಿಸದೆ ನಾನು ನಿನ್ನ ಕತ್ತಿಗೆ ಕತ್ತು ಒಡ್ಡಬಲ್ಲೆ.”


Friday, April 11, 2014

ಝೆನ್ ಕಥೆಗಳು - ಲೋಟ ಒಡೆದಿತ್ತು


ಇಕ್ಯು ಎಂಬ ಜೆನ್ ಗುರು ಬಾಲ್ಯದಿಂದಲೇ ಮಹಾ ಬುದ್ಧಿವಂತನಾಗಿದ್ದ. ಅವನ ಗುರುವಿನ ಬಳಿ ಬಹಳ ಬೆಲೆ ಬಾಳುವ ಒಂದು ಅಮೂಲ್ಯವಾದ ಚಹಾ ಲೋಟವಿತ್ತು. ಒಂದು ದಿನ, ಪಾತ್ರೆಗಳನ್ನು ಜೋಡಿಸುತ್ತಿದ್ದಾಗ ಅಕಸ್ಮಾತಾಗಿ ಅವನು ಆ ಲೋಟವನ್ನು ಕೆಳಕ್ಕೆ ಬೀಳಿಸಿ ಒಡೆದುಬಿಟ್ಟನು! ಗುರುವಿನ ಹೆಜ್ಜೆ ಸಪ್ಪಳವನ್ನು ಕೇಳಿದ ಕೂಡಲೇ ಅವನು ಕೇಳಿದನು, “ಗುರುಗಳೇ, ಜನರೇಕೆ ಸಾಯುತ್ತಾರೆ?” 

ಗುರು ಹೇಳಿದನು, “ಅದು ಸಹಜ ಮಗೂ, ಸ್ವಲ್ಪ ಕಾಲ ಜೀವಿಸಿದ ನಂತರ ಎಲ್ಲವೂ ಸಾಯಲೇ ಬೇಕು.” ಇಕ್ಯು ಲೋಟದ ಚೂರುಗಳನ್ನು ತೋರಿಸುತ್ತಾ ಹೇಳಿದನು, “ಗುರುಗಳೇ, ತಮ್ಮ ಲೋಟಕ್ಕೆ ಸಾಯುವ ಕಾಲ ಬಂದಿತ್ತು!”


Wednesday, April 9, 2014

ಝೆನ್ ಕಥೆಗಳು - ನಿಜವಾದ ಸ್ನೇಹಿತರು


ಬಹಳ ವರ್ಷಗಳ ಹಿಂದೆ ಚೀನಾದಲ್ಲಿ ಇಬ್ಬರು ಪರಮಾಪ್ತ ಗೆಳೆಯರಿದ್ದರು. ನಮ್ಮ ಜಿಗ್ರಿ ದೋಸ್ತ್‌ಗಳಿದ್ದ ಹಾಗೆ. 

ಒಮ್ಮ ಅತ್ಯಂತ ಸುಂದರವಾಗಿ, ಮಧುರವಾಗಿ ತಂತಿವಾದ್ಯವನ್ನು ನುಡಿಸುತ್ತಿದ್ದ. ಮತ್ತೊಬ್ಬ ಅಷ್ಟೇ ಸಹೃದಯತೆಯಿಂದ ಕೇಳುತ್ತಿದ್ದ. ಒಬ್ಬ ಪರ್ವತದ ಬಗ್ಗೆ ನುಡಿಸಿ ಹಾಡಿದಾಗ, ಮತ್ತ್ತೊಬ್ಬ “ನಿಜವಾಗಲೂ ಪರ್ವತದ ಸೌಂದರ್ಯವನ್ನೇ ಅನುಭವಿಸುವಂತಿದೆ’ ಎಂದ.

ಹಾಗೆಯೇ ಮತ್ತೊಬ್ಬ ಜಲಧಾರೆ ಬಗ್ಗೆ ನುಡಿಸಿದ. ಅದನ್ನು ಕೇಳಿದ ಮೊದಲಿಗ “ಇಲ್ಲೇ ಜಲಪಾತ ಹರಿದಂತಾಗಿದೆ’ ಎಂದು ನುಡಿದ.

ಸಹೃದಯಿ ಕೇಳುಗ (ಗೆಳೆಯ) ಕಾಯಿಲೆ ಬಂದು ಸತ್ತು ಹೋದ. ಇದು ಮತ್ತೊಬ್ಬ ಗೆಳೆಯನಿಗೆ ಬಹಳ ಬೇಸರ ತಂತು. ತಕ್ಷಣವೇ ತನ್ನ ವಾದ್ಯದ ತಂತಿ ಹರಿದು ಹಾಕಿದ. ಎಂದೂ ನುಡಿಸದಿರಲು ನಿರ್ಧರಿಸಿದ. ಅಂದಿನಿಂದ ಇದು ಪರಮಾಪ್ತ ಸ್ನೇಹಕ್ಕೆ ಸಾಕ್ಷಿಯಾಯಿತು.


ಝೆನ್ ಕಥೆಗಳು - ನಗುವ ಬುದ್ಧ
ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ. ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಬೀದಿ ಬೀದಿಗಳಲ್ಲಿ ಅವನ “ಶಿಶುವಿಹಾರ”ಗಳಿದ್ದವು.


ಝೆನ್ ಪಂಥದ ಅನುಯಾಯಿಗಳು ಯಾರಾದರೂ ಕಂಡರೆ ಕೈ ಚಾಚಿ “ಒಂದು ಕಾಸು ಕೊಡಿ” ಎಂದು ಎಗ್ಗಿಲ್ಲದೆ ಕೇಳುತ್ತಿದ್ದ. “ದೇವಸ್ಥಾನಕ್ಕೆ ಬಂದು ಮಕ್ಕಳಿಗೆ ಪಾಠ ಹೇಳು” ಎಂದು ಯಾರಾದರೂ ಅಂದರೆ, ಮತ್ತಿನ್ನೊಮ್ಮೆ ಕೈ ಚಾಚಿ “ಕಾಸು ಕೊಡಿ” ಅನ್ನುತ್ತಿದ್ದ.ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. “ಝೆನ್‌ನ ಮಹತ್ವವೇನು?” ಎಂದು ಹೋಟಿಯನ್ನು ಕೇಳಿದ.ಹೋಟಿ ತಟ್ಟನೆ ತನ್ನ ಹೆಗಲಮೇಲಿದ್ದ ಗಂಟನ್ನು ಕೆಳಕ್ಕಿಳಿಸಿ ಮೌನವಾಗಿ ನಿಂತ. ಅದೇ ಅವನ ಉತ್ತರ. “ಝೆನ್ ಸಾಕ್ಷಾತ್ಕಾರವಾಗಿರುವುದರ ಕುರುಹೇನು?” ಎಂದು ಆ ಗುರು ಮತ್ತೆ ಕೇಳಿದ.ಹೋಟಿ ನಗುನಗುತ್ತಲೇ ಗಂಟನ್ನು ಮತ್ತೆ ಭುಜದ ಮೇಲೆ ಏರಿಸಿಕೊಂಡು ಮುಂದೆ ನಡೆದ.


ಝೆನ್ ಕಥೆಗಳು - ಪ್ರಥಮ ಸೂತ್ರ
ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇದನ್ನು ಬರೆದವನು ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ಕೊಸೆನ್ ಎಂಬ ಕಲಾವಿದ.

ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ಕಾಪಿ ಮಾಡಿಕೊಂಡು ಕೆತ್ತುತ್ತಿದ್ದರು. ಕೊಸೆನ್‌ಗೆ ಒಬ್ಬ ಧೈರ್ಯವಂತ ಶಿಷ್ಯ ಇದ್ದ. ಅಕ್ಷರ ಕಲೆಯಲ್ಲಿ ಪರಿಣತಿ ಪಡೆದಿದ್ದ. ಕೊಸೆನ್ ಮೊದಲ ಬಾರಿಗೆ ಅಕ್ಷರಗಳನ್ನು ಹಾಳೆಯ ಮೇಲೆ ಬರೆದಾಗ ಅವನೂ ಅಲ್ಲೇ ಇದ್ದ. 

"ಗುರುವೇ, ಇದು ಚೆನ್ನಾಗಿಲ್ಲ" ಅಂದ. 

ಗುರು ಮತ್ತೊಮ್ಮೆ ಬರೆದು "ಹೇಗಿದೆ?" ಎಂದು ಕೇಳಿದ. "ಕೆಟ್ಟದಾಗಿದೆ, ಮೊದಲಿನದೇ ಎಷ್ಟೋ ವಾಸಿ" ಅಂದ ಶಿಷ್ಯ. 

ಗುರು ತಾಳ್ಮೆಯಿಂದ ಮತ್ತೆ ಬರೆದ. ಶಿಷ್ಯನಿಗೆ ಅದೂ ಇಷ್ಟವಾಗಲಿಲ್ಲ. ಮತ್ತೆ ಬರೆದ. ಮತ್ತೆ ಚೆನ್ನಾಗಿಲ್ಲ ಅನ್ನುವ ಮಾತು ಕೇಳಿದ. ಹೀಗೇ ಎಂಬತ್ತನಾಲ್ಕು ಪ್ರಥಮ ಸೂತ್ರಗಳು ರಾಶಿಯಾಗಿ ಬಿದ್ದವು. ಶಿಷ್ಯ ಯಾವುದನ್ನೂ ಒಪ್ಪಲಿಲ್ಲ. 

ವಿಮರ್ಶಕ ಶಿಷ್ಯ ಕೊಂಚ ಹೊತ್ತು ಹೊರಗೆ ಹೋಗಬೇಕಾಗಿ ಬಂತು. "ಅವನ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಇದೇ ಸಮಯ" ಎಂದುಕೊಂಡ ಗುರು ನಿರಾಳವಾದ ಮನಸ್ಸಿನಿಂದ ಸರಸರನೆ "ಪ್ರಥಮ ಸೂತ್ರ" ಬರೆದ.

ವಾಪಸ್ಸು ಬಂದ ಶಿಷ್ಯ "ಅದ್ಭುತ ಕಲಾಕೃತಿ" ಎಂದು ಉದ್ಗರಿಸಿದ.

ನೀತಿ - ಸದಾ ದೋಷಗಳನ್ನು ಹುಡುಕುವುದಲ್ಲ; ಎಲ್ಲವೂ ಹೀಗೇ ಇರತಕ್ಕದ್ದು ಎಂಬುದೂ ಅಲ್ಲ; ಇನ್ನೊಬ್ಬರ ಮೆಚ್ಚುಗೆ ಬಯಸುವುದೂ ಅಲ್ಲ; ನಿರಾಳವಾಗಿರುವುದು ಝೆನ್


Tuesday, April 8, 2014

ಝೆನ್ ಕಥೆಗಳು - ಒಂದು ಲೋಟ ಚಾ(ಟೀ)ನಾನ್‌ಇನ್ ಜಪಾನಿನ ಮಾಸ್ಟರ್‌ನನ್ನು ನೋಡಲು ಒಬ್ಬ ವಿಶ್ವವಿದ್ಯಾಲಯ ಪ್ರೊಫೆಸರ್ ಬಂದ. ಅವನಿಗೆ ಝೆನ್ ಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು.

ನಾನ್‌ಇನ್ ಅತಿಥಿಯ ಮುಂದೆ ಲೋಟವಿಟ್ಟು ಟೀ ಸುರಿಯತೊಡಗಿದ. ಲೋಟ ತುಂಬಿ ಟೀ ಹೊರಚೆಲ್ಲಿತು. ಇನ್ನೂ ಸುರಿಯುತ್ತಲೇ ಇದ್ದ.

ಸುಮ್ಮನೆ ನೋಡುತ್ತಿದ್ದ ಪ್ರೊಫೆಸರ್ “ಲೋಟ ತುಂಬಿದೆ. ಇನ್ನು ಹಿಡಿಸಲಾರದು’ ಎಂದ.


ಇದರಂತೆಯೇ ನೀನೂ ನಿನ್ನದೇ ಸ್ವಂತ ಅಭಿಪ್ರಾಯ-ಅನಿಸಿಕೆಗಳಿಂದ ತುಂಬಿಕೊಂಡಿದ್ದೀ. ನೀನು ಖಾಲಿಯಾಗದೇ ನಾನ್ಹೇಗೆ ಝೆನ್ ತೋರಿಸಲಿ ? ಎಂದು ನಾನ್‌ಇನ್ ಕೇಳಿದ. 


ಕೋತಿ ಮತ್ತು ಬೆಣೆಒಂದು ವ್ಯಾಪಾರಿ ಒಮ್ಮೆ ತನ್ನ ತೋಟದ ಮಧ್ಯದಲ್ಲಿ ಒಂದು ದೇವಸ್ಥಾನ ನಿರ್ಮಿಸಲು ಆರಂಭಿಸಿತು. ಅನೇಕ ಕಲ್ಲುಕುಟಿಗ ಮತ್ತು ಬಡಗಿ ವ್ಯಾಪಾರಿಯಲ್ಲಿ  ಕೆಲಸ ಮಾಡುತ್ತಿದ್ದರು. ಪ್ರತಿ ದಿನ ತಮ್ಮ ಊಟಕ್ಕೆ ಪಟ್ಟಣಕ್ಕೆ ಹೋಗಿ ಬರುತ್ತಿದ್ದರು. ಒಂದು ದಿನ ಕಾರ್ಮಿಕರ ಊಟಕ್ಕೆ ಹೋದಾಗ,  ಕೋತಿಗಳ ಒಂದು ಹಿಂಡು ದೇವಾಲಯದ ಜಾಗಕ್ಕೆ ಬಂದಿಳಿಯಿತು ಮತ್ತು ಅವುಗಳ ಗಮನ ಸೆಳೆದ ವಸ್ತುಗಳೊಂದಿಗೆ ಏನೇನೋ ಆಡಲು ಪ್ರಾರಂಭಿಸಿದವು. ಒಂದು ಕೋತಿಯನ್ನು, ಮರನ್ನು  ಇಬ್ಬಾಗ ಮಾಡಿ ಅದು ಮುಚ್ಚ ಬಾರದೆಂದು ಅದರ ಮಧ್ಯ ಒಂದು  ಬೆಣೆಯನ್ನು ಸೇರಿಸಿ ಕಾರ್ಮಿಕರು ಬಿಟ್ಟು ಹೋಗಿದ್ದರು, ಆಕರ್ಷಿಸಿತು. 

ಕುತೂಹಲದಿಂದ ಕೋತಿಯೂ ಆ ಬೆಣೆಯನ್ನು ಎಳೆಯಲೂ ಪ್ರಾರಂಬಿಸಿತು. ಸತತ ಪ್ರಯತ್ನದ ನಂತರ ಬೆಣೆಯೂ ಕಿತ್ತು ಬಂತು ಆದರ ಕೋತಿಯ ಕಾಲು ಮರದ ಮಧ್ಯ ಸಿಕ್ಕಿಹಾಕಿಕೊಂಡಿತು. ಕಾಲು ತೆಗೆಯಲಾಗದೆ ಮರದ ಮಧ್ಯ ಸಿಕ್ಕಿ ಕೋತಿಯೂ ಸತ್ತಿತು. 


ನೀತಿ: ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡು ಪರಿಹಾರಕ್ಕೆ ಪರದಾಡಬಾರದು.

Sunday, April 6, 2014

ಕಪಿಲಿಪಿಸಾರ - ಕೆ ಎನ್ ಗಣೇಶಯ್ಯ

 Kapilipisaara - K. N. Ganeshaiah

 

 


ಮುನ್ನುಡಿಯಿಂದ:

ಸುಮಾರು ಹತ್ತು ವರ್ಷಗಳ ಹಿಂದೆ.

ಭಾರತದ ಸಸ್ಯರಾಶಿಯ ಬಗ್ಗೆ ಮಾಹಿತಿ ಖಾಜಾನೆಯೊಂದನ್ನು ತಯಾರಿಸುತ್ತಿದ್ದಾಗ. ಪಾಶ್ಚಾತ್ಯ ದೇಶದ ಕಂಪನಿಯೊಂದಕ್ಕಾಗಿ ಕೆಲಸ ಮಾಡುತ್ತಿದ್ದ. ಭಾರತೀಯರೇ ಆದ ಹಿರಿಯೊಬ್ಬರು ನಮ್ಮಲ್ಲಿಗೆ ಬಂದು ಆ ಮಾಹಿತಿಯನ್ನು ಮತ್ತು ಅದರ ಮೇಲಿನ ಸಂಪೂರ್ಣ ಅಧಿಕಾರವನ್ನು ಅಪಾರವಾದ ಬೆಲೆಗೆ ಕೊಳ್ಳುವ ಅಭಿಲಾಷೆ ವ್ಯಕ್ತಪಡಿಸುದ್ದು. ನಮ್ಮೆಲ್ಲರಿಗೂ ಅತೀವ ಆಶ್ಚರ್ಯ ಉಂಟುಮಾಡಿತ್ತು. ನಾವು ಕಲೆಹಾಕಿ ಸಂಸ್ಕರಿಸುತ್ತಿದ್ದ ಮಾಹಿತಿಯ ಉದ್ದೇಶ ಮತ್ತು ಉಪಯೋಗಗಳ ಅರಿವು ನಮಗಿದ್ದರೂ, ಅದು ಅಷ್ಟು ಬೆಲೆ ಬಾಳುವಂತಹುದೆಂದು ತಿಳಿದು ಖುಷಿಯಾಗಿತ್ತು. ಆದರೆ ಇವರ ಬೆನ್ನಲ್ಲೆಯೇ, ಹಲವು ವಿದೇಶೀಯರು, ಅದೇ ಮಾಹಿತಿ ಖಜಾನೆಯ ವಾರಸುತನಕ್ಕೆ ಭಾಗಿಯಾಗುವ ಕುತಂತ್ರ ತೋರಿದ್ದು ನಮಲ್ಲಿ ಗಾಬರಿಯನ್ನೂ ಉಂಟುಮಾಡಿತ್ತು.

ಇವೆಲ್ಲರ ಹಿನ್ನೆಲೆಯಲ್ಲಿ 'ಕಪಿಲಿಪಿಸಾರ'ದ ಎಳೆಯೊಂದು ನನ್ನಲ್ಲಿ ಬೆಳೆಯತೊಡಗಿದ್ದಂತೆ, ಈ ಎಳೆಯ ಮತ್ತೊಂದು ಆಯಾಮದ ಸೃಷ್ಟಿಯಾದದ್ದು. ಮಾನವನ ಮತ್ತು ಮಂಗಗಳ ವಿಕಾಸದಲ್ಲಿ ಕಂಡುಬರುವ ಮಾನಸಿಕ ಸರಪಳಿಯ ಬಗ್ಗೆ ನನ್ನ ಸಹಪಾಠಿಯೊಬ್ಬರು ನಡೆಸುತ್ತಿದ್ದ ಸಂಶೋದನೆಯ ಬಗ್ಗೆ ಚರ್ಚಿಸುತ್ತಿದ್ದಾಗ. ಮಂಗಗಳಲ್ಲೂ. ತಾನು, ತನ್ನದು, ಸಾವು, ಜೀವ ಮತ್ತು ಸಾಮಾಜಿಕ ಒಳಿತು, ಕೆಟ್ಟದ್ದು ಎನ್ನುವ 'ಭಾವನೆ'ಗಳಿರುವ ಸಾಧ್ಯಾತೆ ಇದ್ದು. ಅವುಗಳ ನಡವಳಿಕೆ ಈ ಅಂಶಗಳಿಂದ ರೂಪಿಸಲ್ಪದುವುದರಲ್ಲಿ ಆಶರ್ಯವಿಲ್ಲ  ಎಂಬ ವಾದ, ರಾಮಾಯಣದ ಹನುಮಾನ್ ಈ ಪ್ರಶ್ನೆಗೆ ಉತ್ತರ ಒದಗಿಸಬಲ್ಲುದೆ? ಇಂತ ಹಲವು ಪ್ರಶ್ನೆಗಳು, ಇವೆಲ್ಲವೂ ಸೇರಿ 'ಕಪಿಲಿಸಾರ'ದ ಕತೆಯನ್ನು ಬೆಳೆಸತೊಡಗಿದವು. ಕೊನೆಗೆ 'ಸಂಜೀವಿನಿ' ಇವೆಲ್ಲವನ್ನೂ ಬೆಸೆಯುವ ಅಂಟಾಗಿ ಸೇರಿಕೊಂಡಿತು.


ಹೀಗೆ, ನನ್ನದೆ ಅನುಭವದಿಂದ, ನನ್ನ ಹತ್ತಿರದಲ್ಲೇ ಕಂಡ ಹಲವು ಕುತೂಹಲಗಳ ಆಧಾರದ ಬೆಳೆದ ಈ ಕಾದಂಬರಿ, ಇಂದಿಗೂ ನಮ್ಮ ದೇಶದಲ್ಲಿ ನಡೆಯತ್ತಿರುವ ಜ್ಞಾನದ ಲೂಟಿಗೆ, ಡಾಲರ್-ಆಧಾರಿತ-ಯೋಜನೆಗಳ ಆಮಿಶ ಒಡ್ಡಿ ಪಾಶ್ಚಾತ್ಯ ಸಂಸ್ಥೆಗಳು ನಡೆಯುತ್ತಿರುವ ನಮ್ಮ ಯುವ ವಿಜ್ಞಾನಿಗಳ 'ಖೆಡ್ಡಾ'ಗೆ ಒಂದು ಕನ್ನಡಿ.
ಮಹಾಬ್ರಾಹ್ಮಣ - ದೇವುಡು

MahaBrahmana  - Devuduಮುನ್ನುಡಿಯಿಂದ:

ಮಹಾಬ್ರಾಹ್ಮಣ ಕಥೆ ಪ್ರಸಿದ್ದರಾದ ವಸಿಷ್ಠ ವಿಶ್ವಾಮಿತ್ರರದು; ಬಹು ಪುರಾತನವಾದುದು. ಋಗ್ವೇದ, ಯಜುರ್ವೇದ, ಐತರೇಯ, ಕೌಷೀತಕೀ, ಗೋಪಥ, ಶಾಂಖಾಯನ, ಷಡ್ವಿಂಶ ಬ್ರಾಹ್ಮಣಗಳು, ರಾಮಾಯಣ, ಮಹಾಭಾರತ, ಹರಿವಂಶ, ವಿಷ್ಣುಪುರಾಣ, ವಾಯುಪುರಾಣ, ಯೋಗವಾಸಿಷ್ಠ ಇವುಗಳಲ್ಲಿ ಬನ್ದಿದೆ. ಆದರೂ ರಾಮಾಯಾಣದ ಕಥೆಯನ್ನು ಮೂಖ್ಯವಾಗಿಟ್ಟುಕೊಂಡು, ಮಿಕ್ಕ ಕಡೆಗಳಲ್ಲಿ ಸಿಕ್ಕುವ ಅಂಶಗಳನ್ನು ಅದರಲ್ಲಿ ಸಂದ  ಸಂದರ್ಭೋಚಿತವಾಗಿ ಸೇರಿಕೊಂಡು ಹೆಣೆದಿರುವ ಕಥೆ ಈ 'ಮಹಬ್ರಾಹ್ಮಣ'. 

ಅಲ್ಲಲ್ಲಿ ಉಪನಿಷತ್ತುಗಳ ರಹಸ್ಯವಿಧ್ಯೆಗಳೂ ಬಂದಿವೆ. ಈ ವಿದ್ಯಪ್ರತೀಕಗಳಲ್ಲಿ ಕೆಲವು ಸ್ವಾನುಭವ, ಕೆಲವು ಪರಾನುಭವ. ಕೆಲವು ಬರೆಯುತ್ತಿದ್ದಾಗ ತಾವಾಗಿ ಬಂದವು. ರುದ್ರನು ಪ್ರತ್ಯಕ್ಷವಾಗುವುದು, ದೇವತೆಗಳು ಬಂದು ಮಾತಾಡುವುದು, ಇವೆಲ್ಲ ಸ್ವಾನುಭವ. ಪ್ರಾಣಾಗ್ನಿ ಹೋತ್ರ ಪಂಚಾಗ್ನಿವಿದ್ಯಾ, ಇವು ಇದನ್ನು ಮಾಡಿ ನೋಡಿದ್ದವರ ಬಾಯಿಂದ ಕೇಳಿದುದು; ಮದನನು ಹೇಳುವ ಆಹಂಕಾರ ವಿಮರ್ದನ, ಜಗನ್ನಾಥರ ತೇರು, ಗಾಯತ್ರಿ ಸಾಕ್ಷಾತ್ಕಾರಕ್ಕಿಂತ ಮುಂಚೆ ಬರುವ ಬ್ರಹ್ಮಣಸ್ಪತಿ, ಪೂಷಾ, ದೇವರ ಅನುಗ್ರಹ ಮೊದಲಾದವು ತಾವಾಗಿ ಬಂದವು.  

ಹಾಗೇಯೇ ದಿವ್ಯಸ್ತ್ರೀಯರು ಮಾನವನೊಡನೆ ಸಂಸಾರವನ್ನು ಮಾಡಿರುವ ಚಿತ್ರಗಳು, ಕವಷ ಐಲೂಷನೆಂಬ ಶೂದ್ರರ್ಷಿಯು ವಿಶ್ವಾಮಿತ್ರರ ಅನುಗ್ರದಿಂದ ಋಷಿಯಾದನೆಂಬುದು, ಋಗ್ವೇದದ ನಾಲ್ಕನೆಯ ಮಂಡಲಕ್ಕೆ ತನ್ನ ಹೆಸರು ಕೊಟ್ಟಿರುವ ವಾಮದೇವರು ಏಳನೆಯ ಮಂಡಲದ ವಸಿಷ್ಠರ ಶಿಷ್ಯರಾಗಿ, ಮೂರನೆಯ ಮಂಡಲದ ವಿಶ್ವಾಮಿತ್ರರ ಆಧ್ಯಾತ್ಮಿಕ ಪುರೋಭಿವೃದ್ದಿಯ ಕಾರಣರಾದವರು ಎಂಬುದು, ಇವೆಲ್ಲ ಬರೆದವನ ಸೃಷ್ಟಿ. ಪ್ರಾಣವು ಲೋಕದಲ್ಲಿ ವ್ಯಕ್ತಿವ್ಯಕ್ತಿಗಳಲ್ಲಿ ಹರಡಿದ್ದರೂ ಮೂಲತಃ ಒಂದೇ ! ಕಾಲವು ಖಂಡವಾಗಿ ವ್ಯವಹಾರ ಗೊಚರವಾಗುತ್ತಿದ್ದರೂ ಇರುವುದೆಲ್ಲ ಒಂದೇ ಕಾಲ ! ಧರ್ಮ ಪರಿಷತ್ತು, ಬ್ರಹ್ಮ ಪರಿಷತ್ತು, ನೋಡುತ್ತಿದ್ದ ಹಾಗೆಯೇ ಒಳಗಿನ ಅಂತಸ್ತವನ್ನು ಗೊತ್ತುಮಾಡಿ ಕೊಳ್ಳುವುದು. ಇವೆಲ್ಲ ಶಾಸ್ತ್ರಗಳ ವಿಷಯಗಳು. ಹೀಗೆ ಏನೇನೋ ಎಷ್ಟೆಷ್ಟೋ ಓದಿ, ಅಷ್ಟಷ್ಟು ಕೇಳಿ, ಇನ್ನಷ್ಟು ಸ್ವಾನುಭವದಿಂದ ಸಮ್ಪಾದಿಸಿಕೊಂಡು, ಎಲ್ಲವನ್ನು ಗುರುಕೃಪೆಯಿಂದ ಮೂಸೆಯಲ್ಲಿಟ್ಟು ಕರಗಿಸಿ ಎರಕ ಹೂಯ್ದಿರುವ ಬೊಂಬೆಯಿದು.