Thriller - Yandamoori Veerendranath, Saritha Gnananada
ಪ್ರತಿಯೊಂದು ಕಾದಂಬರಿಕಾರರಿಗೂ ಅವರು ಬರೆಯುವ ಕಾದಂಬರಿಯಲ್ಲಿ ಅವರು ಇರುವ ನೆಲೆಯ ಅಂಶ ಮತ್ತು ಆ ನೆಲೆಯ ಭಾಷೆಯ ಒಂದು ಭಾಗವಾದರೂ ಅಡಕವಾಗಿರುತ್ತದೆ. ಅದೇ ರೀತಿ ಓದುಗನಿಗೂ ಕಾದಂಬರಿ ಓದುವಾಗ ಅದರಲ್ಲಿಯ ಭಾಷೆಯ ಮತ್ತು ನೆಲೆಯ ಅಂಶಗಳು ಕಾಣುತ್ತದೆ. ಕುವೆಂಪುರವರ ಕಾದಂಬರಿ ಓದಬೇಕಾದರೆ ಕಾಡುವ ಮಲೆನಾಡು, ತೇಜಸ್ವಿರವರ ಪರಿಸರ ಪ್ರಜ್ಞೆ, ಕಾರಂತರ ಸಾಮಾಜಿಕ ಕಾಳಜಿ, ದೇವನೂರು ಮಹಾದೇವ ರವರ ಹಳ್ಳಿಯ ಬಡತನ ಹೀಗೆ ಕನ್ನಡದ ಪ್ರತಿಯೊಬ್ಬ (ಭೈರಪ್ಪ ಮತ್ತು ಇನ್ನು ಎರಡು ಮೂರು ಕಾದಂಬರಿಕಾರರನ್ನು ಹೊರತುಪಡಿಸಿ) ಅವರದೇ ಆದ ಒಂದು ಸಾಮಾನ್ಯ ಅಂಶ ಇರುತ್ತದೆ, ಅವರು ಬೆಳೆದ ಪರಿಸರ, ಓದಿದ ರೀತಿ, ಹುಟ್ಟಿದ ಊರು, ಇದು ಯಾವುದೇ ಆಗಿರಬಹುದು. ಹಾಗೆ ನಾನು ನೋಡಿದ ಕನ್ನಡ ಕಾದಂಬರಿ ಓದುವ ಜನ ಒಬ್ಬ ಕಾದಂಬರಿಕಾರನಲ್ಲಿ ಜನಸಾಮಾನ್ಯರಿಗೆ ಹತ್ತಿರವಾದ ವಿಷಯಗಳನ್ನು ಬಳಿಸಿ ಅದರ ಸುತ್ತ ಒಂದು ಸುಂದರವಾದ ಎಣೆಯನ್ನು ಪೋಣಿಸಿ ಕಾದಂಬರಿ ರಚಿಸಬೇಕೆಂದು ಬಯಸುತ್ತಾನೆ. ಹೀಗೆ ಹಹೆಣೆದ ಕಾದಂಬರಿಗಳು ತುಂಬಾ ದಿನ ಜನರ ಮನಸ್ಸಿನ್ನಲ್ಲಿ ಉಳಿಯುತ್ತದೆ. 'ಮಲೆಗಳಲ್ಲಿ ಮದುಮಗಳು'ಯಲ್ಲಿನ ಮಲೆನಾಡಿನ ಜೀವನ, 'ಜುಗಾರಿ ಕ್ರಾಸ್'ನ ಕಾಲೇಜ್ ಹುಡುಗರ ರೀತಿ, 'ಮೂಕಜ್ಜಿಯ ಕನಸಿ'ನ ಇತಿಹಾಸ, 'ಪರ್ವ' ದ ಮಹಾಭಾರತದ ಅಂಶ ಹೀಗೆ ಒಂದು ಕಾದಂಬರಿಯಲ್ಲಿನ ಕಥೆಯ ಒಂದು ಪಾತ್ರವಾಗಿ ಓದುದ ಬೇರೆಯದ್ದಿದ್ದರೆ ಆ ಕಾದಂಬರಿ ಕಾಲವನ್ನು ಮೀರಿ ನಿಲ್ಲುವುದಿಲ್ಲ.
ಕಾಲಕ್ಕೆ ಸಿಕ್ಕಿ ಸೋತು ಹೋದ ಕಾದಂಬರಿಗಲಿಗೇನು ಕನ್ನದಲ್ಲಿ ಬರವಿಲ್ಲ. ಒಂದು ತಿಂಗಳು ಮನದಲ್ಲಿ ಇದ್ದು ಹಾರಿಹೋಗುವ ಕಾದಂಬರಿಗಳು ಸಾವಿರಾರು. ಕಾರ್ನಾಡರ ನಾಟಕಗಳು, ಅನಂತಮೂರ್ತಿ ರವರ ಕಾದಂಬರಿಗಳು ( ಸಂಸ್ಕಾರವನ್ನು ಹೊರತುಪಡಿಸಿ) ಮತ್ತು ಬಹುತೇಕ ನವ್ಯ ಕಾದಂಬರಿಕಾರರ ಕಾದಂಬರಿಗಳು ಯಾರಿಗೂ ನೆನಪಿರುವುದಿಲ್ಲ, ಯಾಕೆ ಹೀಗೆ ಅಂದರೆ ಅವರು ಸತ್ಯಕ್ಕೆ ದೂರದ ಕಾದಂಬರಿಗಳನ್ನು ಬರೆಯುತ್ತಾರೆ. ಕನ್ನಡಿಗರು ಒಳ್ಳೆಯ ವಿಷಯಕ್ಕೆ ಯಾವಾಗೂ ಪ್ರೋತ್ಸಾಹ ಕೊಡುತ್ತಾರೆ ಮತ್ತು ಮುಂದೇನು ಕೊಡುತ್ತಾರೆ, ಸಿನೆಮ ದಲ್ಲಿ ಮುಗಾರು ಮಳೆ, ಲುಸಿಯಾ ಇರಬಹುದು ಇಲ್ಲ ಕಾದಂಬರಿಯಲ್ಲಿ 'ಕರ್ಮ' ಇರಬಹುದು, ಕರ್ನಾಟಕದಲ್ಲಿ ಒಳ್ಳೆಯದಕ್ಕೆ ಜನ ಪ್ರೋತ್ಸಾಹ ಕೊಡೋದಿಲ್ಲ ಅನ್ನುವವರು ತಮ್ಮ ಕೆಲಸನ್ನು ಮತ್ತೆ ನೋಡಿಕೊಳ್ಳಬೇಕು.
ಇಷ್ಟೆಲ್ಲಾ ಪೀಟಿಕ ಯಾಕೆಂದರೆ ನಾನು ಇತ್ತೀಚಿಗೆ ಓದಿದ ಯಂಡಮೂರಿ ವೀರೇಂದ್ರನಾಥ್ ರವರ 'ಥ್ರಿಲ್ಲರ್' ಕಾದಂಬರಿ ಓದುವಾಗ ಬಂದ ಆಲೋಚನೆಗಳೇ ಇವು. ಇಲ್ಲಿ ಕಥೆಯ ನಾಯಕಿ ಅಂಗಡಿಯಲ್ಲಿ ಪುಸ್ತಕ ನೋಡದೆ ಕಾದಂಬರಿಯನ್ನು ಖರಿದಿಸುತ್ತಾಳೆ ಆಮೇಲೆ ಮನೆಗೆ ಬಂದು ನೋಡುವ ವೇಳೆ ಆ ಪುಸ್ತಕ ಖಾಲಿ ಇರುತ್ತದೆ. ಅಂಗಡಿಯವನನ್ನು ವಿಚಾರಿಸಲು ಹೋದಾಗ ಅದು ಬರಿ ಪ್ರಮೋಷನ್ ಪ್ರತಿ, ಕಾದಂಬರಿ ಇನ್ನು ಬರೆದೆ ಇಲ್ಲ ಎಂದು ಏಳುತ್ತಾನೆ. ಮತ್ತೆ ಮುಂದೆ ನಡೆಯುವ ಘಟನೆಗಳನ್ನು ವಿದ್ಯಾದರಿ ಆ ಖಾಲಿ ಪುಸ್ತಕದಲ್ಲಿ ಬರೆಯುತ್ತಾಳೆ. ಬರೆದು ಮುಗಿಸುವ ವೇಳೆಗೆ ವಾಸ್ತವಕ್ಕೆ ನಿಲುಕದಂತ ಘಟನೆಗಳು ನಡೆಯುತ್ತವೆ. ಕೊನೆಯಲ್ಲಿ ವಿದ್ಯಾದರಿಯನ್ನು ಪ್ರೀತಿಸಿದ ಅನುದೀಪ್ ಕಾಲವನ್ನೇ ಹಿಂದೆ ಮಾಡಿ ಅವನ ನೆನಪನ್ನು ವಿದ್ಯಾದರಿಯ ಮನಸ್ಸು ಮತ್ತು ಬುದ್ದಿಯಿಂದ ಮರೆಸುತ್ತಾನೆ. ಈ ಎರಡು ಘಟನೆಗಳ ಮಧ್ಯೆ ಹತ್ತಾರು ಪಾತ್ರಗಳು ಬಂದು ಹೋಗುತ್ತವೆ ಅವಲ್ಲ ಲೆಕ್ಕಕ್ಕೆ ಇಲ್ಲ ಎಂದು ಹೇಳಬಹುದು.
ಇಲ್ಲಿ ಅಂಗಡಿಯವನು ಖಾಲಿ ಪುಸ್ತಕ ಮಾರಿದ ಮೇಲೆ ಆ ಕಾದಂಬರಿಯ ಕಾದಂಬರಿಕಾರನಿಗೆ ಫೋನ್ ಮಾಡಿ ವಿದ್ಯದರಿ ಇದನ್ನು ಕೊಂದ ವಿಷಯ ತಿಳಿಸುತ್ತಾನೆ. ಅದಕ್ಕೆ ಆ ಕಡೆಯಿಂದ ಇನ್ನು ಹದಿನೈದು ದಿನದಲ್ಲಿ ಕಾದಂಬರಿ ಪ್ರಕಟವಾಗುತ್ತೆ ಎಂದು ತಿಲಿಸ್ಸಲು ಹೇಳುತ್ತಾನೆ. ಕಾದಂಬರಿ ಪೂರ್ತಿಯಾದ ಮೇಲೆ ಈ ಮೇಲೆ ಮಾತಿಗೆ ಏನು ಬೆಲೆನೇ ಇಲ್ಲ ಎಂದು ಗೊತ್ತಾದುತ್ತದೆ. ಕೊನೆಯಲ್ಲಿ ಆ ಖಾಲಿ ಪುಸ್ತಕದ ಕಾದಂಬರಿಕಾರ ಏನು ಮಾಡುತ್ತಾನೆ ಗೊತ್ತಾಗುವುದಿಲ್ಲ, ಯಾವ ಆದಾರದ ಮೇಲೆ ಹದಿನೈದು ದಿನದಲ್ಲಿ ಕಾದಂಬರಿ ಪ್ರಕಟವಾಗುತ್ತೆ ಎಂದು ಹೇಳುತ್ತಾನೆ ಎಂದೂ ಗೊತ್ತಾಗುವುದಿಲ್ಲ. ಹೀಗೆ ಒಂದರ ಮೇಲೊಂದು ಕಥೆಯಲ್ಲಿನ ಹುಳುಕುಗಳು ತೋರುತ್ತದೆ. ಕೊನೆಯಲ್ಲಿ ನಾನಾ ಅನಿಸುದ್ದು ಒಂದೇ ಅನಿಸಿಕೆ ಕನ್ನಡಿಗರಿಗೆ ವಾಸ್ತವಕ್ಕೆ ಹತ್ತಿರವಾದ ಕಾಲ್ಪನಿಕ ವಸ್ತು ಮುಖ್ಯ ಎಂದು. ಅಂದ ಹಾಗೆ ಹೇಳಿದ್ದು ಮರೆತೇ ಇದು ತೆಲೆಗು ಭಾಷೆಯಲ್ಲಿ ಪ್ರಕಟವಾದ ಪುಸ್ತಕ ಕನ್ನಡಕ್ಕೆ ಸರಿತಾ ಜ್ಞಾನಾನಂದ ರವರು ಅನುವಾದಿಸಿದ್ದಾರೆ.