Wednesday, September 24, 2014

ಥ್ರಿಲ್ಲರ್ - ಯಂಡಮೂರಿ ವೀರೇಂದ್ರನಾಥ್

Thriller - Yandamoori Veerendranath, Saritha Gnananadaಪ್ರತಿಯೊಂದು ಕಾದಂಬರಿಕಾರರಿಗೂ ಅವರು ಬರೆಯುವ ಕಾದಂಬರಿಯಲ್ಲಿ ಅವರು ಇರುವ ನೆಲೆಯ ಅಂಶ ಮತ್ತು ಆ ನೆಲೆಯ ಭಾಷೆಯ ಒಂದು ಭಾಗವಾದರೂ ಅಡಕವಾಗಿರುತ್ತದೆ. ಅದೇ ರೀತಿ ಓದುಗನಿಗೂ ಕಾದಂಬರಿ ಓದುವಾಗ ಅದರಲ್ಲಿಯ ಭಾಷೆಯ ಮತ್ತು ನೆಲೆಯ ಅಂಶಗಳು ಕಾಣುತ್ತದೆ. ಕುವೆಂಪುರವರ ಕಾದಂಬರಿ ಓದಬೇಕಾದರೆ ಕಾಡುವ ಮಲೆನಾಡು, ತೇಜಸ್ವಿರವರ ಪರಿಸರ ಪ್ರಜ್ಞೆ, ಕಾರಂತರ ಸಾಮಾಜಿಕ ಕಾಳಜಿ, ದೇವನೂರು ಮಹಾದೇವ ರವರ ಹಳ್ಳಿಯ ಬಡತನ ಹೀಗೆ ಕನ್ನಡದ ಪ್ರತಿಯೊಬ್ಬ (ಭೈರಪ್ಪ ಮತ್ತು ಇನ್ನು ಎರಡು ಮೂರು ಕಾದಂಬರಿಕಾರರನ್ನು ಹೊರತುಪಡಿಸಿ) ಅವರದೇ ಆದ ಒಂದು ಸಾಮಾನ್ಯ ಅಂಶ ಇರುತ್ತದೆ, ಅವರು ಬೆಳೆದ ಪರಿಸರ, ಓದಿದ ರೀತಿ, ಹುಟ್ಟಿದ ಊರು, ಇದು ಯಾವುದೇ ಆಗಿರಬಹುದು. ಹಾಗೆ ನಾನು ನೋಡಿದ ಕನ್ನಡ ಕಾದಂಬರಿ ಓದುವ ಜನ ಒಬ್ಬ ಕಾದಂಬರಿಕಾರನಲ್ಲಿ ಜನಸಾಮಾನ್ಯರಿಗೆ ಹತ್ತಿರವಾದ ವಿಷಯಗಳನ್ನು ಬಳಿಸಿ ಅದರ ಸುತ್ತ ಒಂದು ಸುಂದರವಾದ ಎಣೆಯನ್ನು ಪೋಣಿಸಿ ಕಾದಂಬರಿ ರಚಿಸಬೇಕೆಂದು ಬಯಸುತ್ತಾನೆ. ಹೀಗೆ ಹಹೆಣೆದ ಕಾದಂಬರಿಗಳು ತುಂಬಾ ದಿನ ಜನರ ಮನಸ್ಸಿನ್ನಲ್ಲಿ ಉಳಿಯುತ್ತದೆ. 'ಮಲೆಗಳಲ್ಲಿ ಮದುಮಗಳು'ಯಲ್ಲಿನ ಮಲೆನಾಡಿನ ಜೀವನ, 'ಜುಗಾರಿ ಕ್ರಾಸ್'ನ ಕಾಲೇಜ್ ಹುಡುಗರ ರೀತಿ, 'ಮೂಕಜ್ಜಿಯ ಕನಸಿ'ನ ಇತಿಹಾಸ, 'ಪರ್ವ' ದ ಮಹಾಭಾರತದ ಅಂಶ ಹೀಗೆ ಒಂದು ಕಾದಂಬರಿಯಲ್ಲಿನ ಕಥೆಯ ಒಂದು ಪಾತ್ರವಾಗಿ ಓದುದ  ಬೇರೆಯದ್ದಿದ್ದರೆ ಆ ಕಾದಂಬರಿ ಕಾಲವನ್ನು ಮೀರಿ ನಿಲ್ಲುವುದಿಲ್ಲ.

ಕಾಲಕ್ಕೆ ಸಿಕ್ಕಿ ಸೋತು ಹೋದ ಕಾದಂಬರಿಗಲಿಗೇನು ಕನ್ನದಲ್ಲಿ ಬರವಿಲ್ಲ. ಒಂದು ತಿಂಗಳು ಮನದಲ್ಲಿ ಇದ್ದು ಹಾರಿಹೋಗುವ ಕಾದಂಬರಿಗಳು ಸಾವಿರಾರು. ಕಾರ್ನಾಡರ ನಾಟಕಗಳು, ಅನಂತಮೂರ್ತಿ ರವರ ಕಾದಂಬರಿಗಳು ( ಸಂಸ್ಕಾರವನ್ನು ಹೊರತುಪಡಿಸಿ) ಮತ್ತು ಬಹುತೇಕ ನವ್ಯ ಕಾದಂಬರಿಕಾರರ ಕಾದಂಬರಿಗಳು ಯಾರಿಗೂ ನೆನಪಿರುವುದಿಲ್ಲ, ಯಾಕೆ ಹೀಗೆ ಅಂದರೆ ಅವರು ಸತ್ಯಕ್ಕೆ ದೂರದ ಕಾದಂಬರಿಗಳನ್ನು ಬರೆಯುತ್ತಾರೆ. ಕನ್ನಡಿಗರು ಒಳ್ಳೆಯ ವಿಷಯಕ್ಕೆ ಯಾವಾಗೂ ಪ್ರೋತ್ಸಾಹ ಕೊಡುತ್ತಾರೆ ಮತ್ತು ಮುಂದೇನು ಕೊಡುತ್ತಾರೆ, ಸಿನೆಮ ದಲ್ಲಿ ಮುಗಾರು ಮಳೆ, ಲುಸಿಯಾ ಇರಬಹುದು ಇಲ್ಲ ಕಾದಂಬರಿಯಲ್ಲಿ 'ಕರ್ಮ' ಇರಬಹುದು, ಕರ್ನಾಟಕದಲ್ಲಿ ಒಳ್ಳೆಯದಕ್ಕೆ ಜನ ಪ್ರೋತ್ಸಾಹ ಕೊಡೋದಿಲ್ಲ ಅನ್ನುವವರು ತಮ್ಮ ಕೆಲಸನ್ನು ಮತ್ತೆ ನೋಡಿಕೊಳ್ಳಬೇಕು. 

ಇಷ್ಟೆಲ್ಲಾ ಪೀಟಿಕ ಯಾಕೆಂದರೆ ನಾನು ಇತ್ತೀಚಿಗೆ ಓದಿದ ಯಂಡಮೂರಿ ವೀರೇಂದ್ರನಾಥ್ ರವರ 'ಥ್ರಿಲ್ಲರ್' ಕಾದಂಬರಿ ಓದುವಾಗ ಬಂದ ಆಲೋಚನೆಗಳೇ ಇವು. ಇಲ್ಲಿ ಕಥೆಯ ನಾಯಕಿ ಅಂಗಡಿಯಲ್ಲಿ ಪುಸ್ತಕ ನೋಡದೆ ಕಾದಂಬರಿಯನ್ನು ಖರಿದಿಸುತ್ತಾಳೆ ಆಮೇಲೆ ಮನೆಗೆ ಬಂದು ನೋಡುವ ವೇಳೆ ಆ ಪುಸ್ತಕ ಖಾಲಿ ಇರುತ್ತದೆ. ಅಂಗಡಿಯವನನ್ನು ವಿಚಾರಿಸಲು ಹೋದಾಗ ಅದು ಬರಿ ಪ್ರಮೋಷನ್ ಪ್ರತಿ, ಕಾದಂಬರಿ ಇನ್ನು ಬರೆದೆ ಇಲ್ಲ ಎಂದು ಏಳುತ್ತಾನೆ. ಮತ್ತೆ ಮುಂದೆ ನಡೆಯುವ ಘಟನೆಗಳನ್ನು ವಿದ್ಯಾದರಿ ಆ ಖಾಲಿ ಪುಸ್ತಕದಲ್ಲಿ ಬರೆಯುತ್ತಾಳೆ. ಬರೆದು ಮುಗಿಸುವ ವೇಳೆಗೆ ವಾಸ್ತವಕ್ಕೆ ನಿಲುಕದಂತ ಘಟನೆಗಳು ನಡೆಯುತ್ತವೆ. ಕೊನೆಯಲ್ಲಿ ವಿದ್ಯಾದರಿಯನ್ನು ಪ್ರೀತಿಸಿದ ಅನುದೀಪ್ ಕಾಲವನ್ನೇ ಹಿಂದೆ ಮಾಡಿ ಅವನ ನೆನಪನ್ನು ವಿದ್ಯಾದರಿಯ ಮನಸ್ಸು ಮತ್ತು ಬುದ್ದಿಯಿಂದ ಮರೆಸುತ್ತಾನೆ. ಈ ಎರಡು ಘಟನೆಗಳ ಮಧ್ಯೆ ಹತ್ತಾರು ಪಾತ್ರಗಳು ಬಂದು ಹೋಗುತ್ತವೆ ಅವಲ್ಲ ಲೆಕ್ಕಕ್ಕೆ ಇಲ್ಲ ಎಂದು ಹೇಳಬಹುದು. 

ಇಲ್ಲಿ ಅಂಗಡಿಯವನು ಖಾಲಿ ಪುಸ್ತಕ ಮಾರಿದ ಮೇಲೆ ಆ ಕಾದಂಬರಿಯ ಕಾದಂಬರಿಕಾರನಿಗೆ ಫೋನ್ ಮಾಡಿ ವಿದ್ಯದರಿ ಇದನ್ನು ಕೊಂದ ವಿಷಯ ತಿಳಿಸುತ್ತಾನೆ. ಅದಕ್ಕೆ ಆ ಕಡೆಯಿಂದ ಇನ್ನು ಹದಿನೈದು ದಿನದಲ್ಲಿ ಕಾದಂಬರಿ ಪ್ರಕಟವಾಗುತ್ತೆ ಎಂದು ತಿಲಿಸ್ಸಲು ಹೇಳುತ್ತಾನೆ. ಕಾದಂಬರಿ ಪೂರ್ತಿಯಾದ ಮೇಲೆ ಈ ಮೇಲೆ ಮಾತಿಗೆ ಏನು ಬೆಲೆನೇ ಇಲ್ಲ ಎಂದು ಗೊತ್ತಾದುತ್ತದೆ. ಕೊನೆಯಲ್ಲಿ ಆ ಖಾಲಿ ಪುಸ್ತಕದ ಕಾದಂಬರಿಕಾರ ಏನು ಮಾಡುತ್ತಾನೆ ಗೊತ್ತಾಗುವುದಿಲ್ಲ, ಯಾವ ಆದಾರದ ಮೇಲೆ ಹದಿನೈದು ದಿನದಲ್ಲಿ ಕಾದಂಬರಿ ಪ್ರಕಟವಾಗುತ್ತೆ ಎಂದು ಹೇಳುತ್ತಾನೆ ಎಂದೂ ಗೊತ್ತಾಗುವುದಿಲ್ಲ. ಹೀಗೆ ಒಂದರ ಮೇಲೊಂದು ಕಥೆಯಲ್ಲಿನ ಹುಳುಕುಗಳು ತೋರುತ್ತದೆ. ಕೊನೆಯಲ್ಲಿ ನಾನಾ ಅನಿಸುದ್ದು ಒಂದೇ ಅನಿಸಿಕೆ ಕನ್ನಡಿಗರಿಗೆ ವಾಸ್ತವಕ್ಕೆ ಹತ್ತಿರವಾದ ಕಾಲ್ಪನಿಕ ವಸ್ತು ಮುಖ್ಯ ಎಂದು. ಅಂದ ಹಾಗೆ ಹೇಳಿದ್ದು ಮರೆತೇ ಇದು ತೆಲೆಗು ಭಾಷೆಯಲ್ಲಿ ಪ್ರಕಟವಾದ ಪುಸ್ತಕ ಕನ್ನಡಕ್ಕೆ ಸರಿತಾ ಜ್ಞಾನಾನಂದ ರವರು ಅನುವಾದಿಸಿದ್ದಾರೆ. Monday, September 22, 2014

ಯಾರಿಗುಂಟು ಯಾರಿಗಿಲ್ಲ - ಅ. ನ. ಕೃ

Yaariguntu Yaarigilla - A Na Krishnaraya (A Na Kru)


ಸಾವಿರಾರು ಜನ ಪ್ರತಿದಿನ ಬೆಂಗಳೂರಿಗೆ ವಲಸೆ ಬರುತ್ತಾರೆ, ಕೆಲಸಕ್ಕೆ, ವಿಧ್ಯಭಾಸ್ಯಕ್ಕೆ ಇಲ್ಲ ದುಡ್ಡಿಗಾಗಿ. ಬರುವ ಬಹುತೇಕ ಜನರು ಹಳ್ಳಿಗಳಿಂದ ಬರುತ್ತಾರೆ. ಬರುವ ಕಾರಣ ಯಾವುದಾದರು ಇರಬಹುದು ಆದರೆ ಬರುವ ಎಲ್ಲರು ಬೆಂಗಳೂರಿಗೆ ಬಂಡಿ ಇಳಿದ ಮೇಲೆ ಏಳುವುದು ಒಂದು ಮಾತು ಎಂಥಾ ಊರಪ್ಪ ಇದು. ಮಂಡ್ಯದಿಂದ ಬರುವು ಬಡ ರೈತ ಇರಬಹುದು ಇಲ್ಲ ದೂರದ ಉತ್ತರ ಪ್ರದೇಶದ ಪಾನಿ ಪೂರಿ ಮಾಡುವವನಿರಬಹುದು ಎಲ್ಲರ ಉದ್ಗಾರ ಇದ ಆದಾದ ಮೇಲೆ ತಲೆಯಲ್ಲಿ ಓಳೆಯುವುದು ಇಲ್ಲಿ ಎರಡು ಹೊತ್ತಿನ ಊಟಕ್ಕೆ ಮೋಸ ಇಲ್ಲ ಅಂತ.

ಬಹುತೇಕ ಜನ ಬಂದವರು ತಿಂಗಳು ಕಳೆಯುವುದೊರಳಗೆ ಬದಲಾಗುತ್ತಾರೆ, ಬೆಂಗಳೂರಿನ ವೇಗಕ್ಕೆ, ತಿಕ್ಕಾಟಗಳಿಗೆ, ಮೋಸಕ್ಕೆ ಮತ್ತು ಪರಿಸರಗಳಿಂದ ಬೆಂಗಳೂರಿನ ಕೋಟಿ ಜನರಲ್ಲಿ ಒಂದಾಗುತ್ತಾರೆ. ಯಾರು ಯಾವ ಆಮೇಶಕ್ಕು ಒಳಗಾಗದೆ, ವೇಗಕ್ಕೆ ಹೆದರದೆ, ಮೋಸಕ್ಕೆ ಪ್ರತಿ ಮೋಸ ಮಾಡದೆ, ಪರಿಸರಕ್ಕೆ ಹೊಂದಿಕೊಂಡು ತನ್ನತನವನ್ನು ಉಳಿಸಿಕೊಲ್ಲುತ್ತಾರೋ ಅವರೇ ತಮ್ಮ ಮುಗ್ದತೆ ಉಳಿಸಿಕೊಳ್ಳುತ್ತಾರೆ ಇಲ್ಲ ಅಂದ್ರೆ ಬೆಂಗಳೂರಿನ ತಾಳಕ್ಕೆ ಕುಣಿದರೆ ರಕ್ತ ಬೀಜಾಸುರನ ಒಂದು ಬೀಜವಾಗಿ ಬೇರೆಯವರಿಗೆ ಚಿಂತೆಯಾಗಿಬಿಡುತ್ತಾರೆ. 

ಇದು ಇಂದಿನ ಮಾತಲ್ಲ ನಿನ್ನೆಯ ಮಾತಲ್ಲ ಇಲ್ಲ ದಶಕದ ಮಾತಲ್ಲ ಇದು ಎಲ್ಲ ಕಾಲಕ್ಕೂ ಸರಿ ಹೊಂದುವಂತದ್ದು. ಊರುಗಳು ಬೇರೆಯಾಗಬಹುದು, ಇಂದು ಬೆಂಗಳೂರು, ನಿನ್ನೆ ಮುಂಬೈ ಅದರ ಹಿಂದೆ ಡೆಲ್ಲಿ ಹೀಗ, ಆದರೆ ಒಂದು ಕೊಂಪೆಯಲ್ಲಿ ತಮ್ಮ ತನವನ್ನು ಉಳಿಸಿಕೊಳ್ಳದ್ದಿದ್ದರೆ ಕಷ್ಟಗಳಲ್ಲಿ ಬೆಂದುಹೊಗುತ್ತಾರೆ. ಇದೆ ಮಾತುಗಳು ಅ. ನ. ಕೃ. ರವರ ೧೯೬೩ ನೆ ಇಸಿವಿಯ "ಯಾರಿಗುಂಟು ಯಾರಿಗಿಲ್ಲ" ಕಾದಂಬರಿಯ ಕಥಾ ವಸ್ತು.  

ಈ ಕಾದಂಬರಿಯಲ್ಲಿ ಬರುವ ಗಣಪಯ್ಯ ಬಡತನದಿಂದ ಬೆಂದು ಮೈಸೂರಿನ ಹೋಟೆಲ್ ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ಪರಿಚವಾಗುವ ರಾಮಚಂದ್ರ ಒಂದು ಹೋದ ಲೋಕವನ್ನೇ ತೋರಿಸುತ್ತಾನೆ. ಮೊದಲಿಗೆ ಹೊಲಸು ಎನಿಸುವ ಆ ಲೋಕದ ಕಾರ್ಯಗಳು ಮತ್ತು ಎಂದಿಗೂ ಅಂತ ಕಾರ್ಯಗಳನ್ನು ಮಾಡಬಾರದು ಎಂದುಕೊಳ್ಳುತ್ತಾ ಕೊನೆಯಲ್ಲಿ ದುಡ್ಡಿನ ಮದದಲ್ಲಿ ಆ ಪಾಪ ಕಾರ್ಯದಲ್ಲಿ ಮುಲಿಗಿ ತನ್ನ ಸರ್ವಸ್ಯವನ್ನು ಕಳೆದುಕೊಳ್ಳುತ್ತಾನೆ. 

**** ಒಳ್ಳೆ ಪುಸ್ತಕಗಳು ಹಾಗೆ ಯಾವಗಲು ತಮ್ಮ ಕಳೆಯನ್ನು ಕಳೆದುಕೊಳ್ಳುವುದಿಲ್ಲ. ಅ. ನ. ಕೃ. ರವರ ಈ ಕಾದಂಬರಿಯನ್ನು ಬರೆದ್ದಿದ್ದು ೧೯೬೩ರಲ್ಲಿ ಆದರೆ ಇದೆ ಸನ್ನಿವೇಶಗಳು ಈಗಲೂ ಪ್ರಸ್ತುತ ಮತ್ತು ಮುಂದೆಯೂ ಕೂಡ. ನಾವು ಒಂದು ಆದರ್ಶವನ್ನು ಇಟ್ಟುಕೊಂಡು ಜೀವನ ಸಾಗಿಸಿದರೆ ಯಾವತ್ತಿದ್ದರು ಗೆಲವು ಕಂಡಿತ, ಆದರ್ಶವನ್ನು ಬಲಿ ಕೊಟ್ಟು ಬೇಗ ಗೆಲುವನ್ನು ಸಾಧಿಸಿಬಿಡಬೇಕು ಎಂದರೆ ಅದು ಅಲ್ಪಾಯುಶಿ ಗೆಲುವು ಶಾಶ್ವತವಲ್ಲ. 


Monday, September 15, 2014

ಗ್ರಾಮಮುಖಿ -

Grama Mukhi 

 

ಕನ್ನಡ ಪ್ರಭ - ೧೪ ಸೆಪ್ಟೆಂಬರ್ ೨೦೧೪
ವಿಮರ್ಶೆ - ವಾಸುದೇವ ಶೆಟ್ಟಿ 

ಸಾಹಿತ್ಯ ಮತ್ತು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಗತಿಹಳ್ಳಿ ಚಂದ್ರಶೇಖರ ಅವರು ತಮ್ಮ ಗ್ರಾಮದ ಕಡೆ ಮುಖ ಮಾಡಿ ಕಳೆದ ಹತ್ತು ವರ್ಷಗಳಿಂದ ಅಲ್ಲಿ ಸಾಂಸ್ಕೃತಿಕ ಉತ್ಸವಗಳನ್ನು ನಡೆಸುತ್ತಿದ್ದಾರೆ. ಚಿಂತಕರಿಂದ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದಾರೆ. ತಮ್ಮ ಹಳ್ಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದರ ಜೊತೆಗೆ ರಾಜ್ಯದ ಇತರ ಭಾಗಗಳ ಕಲೆ ಸಂಸ್ಕೃತಿಯನ್ನು ತಮ್ಮ ಹಳ್ಳಿಯ ಜನರಿಗೆ ಪರಿಚಯಿಸುತ್ತಿದ್ದಾರೆ. ಈ ಮೂಲಕ ತಮ್ಮ ಹಳ್ಳಿಯ ಋಣವನ್ನು ತೀರಿಸುತ್ತಿದ್ದೇನೆ ಎಂಬ ಭಾವನೆ ಅವರದು.

ನಾಗತಿಹಳ್ಳಿಯ ಸಂಸ್ಕೃತಿ ಹಬ್ಬದ ಹತ್ತು ವರ್ಷದ ಸಂದರ್ಭದಲ್ಲಿ ಒಂದು ಆಕರ ಗ್ರಂಥವನ್ನು ತರುವ ಯೋಜನೆಯ ಫಲವಾಗಿ ‘ಗ್ರಾಮಮುಖಿ’ ಎಂಬ ಹಳ್ಳಿಗಾಡಿನ ಬದುಕಿಗೆ ಚಿಕಿತ್ಸಕ ಚಿಂತನ ಬರೆಹಗಳ ಸಂಕಲನ ಹೊರಬಂದಿದೆ. ಸಂಸ್ಕೃತಿ ಹಬ್ಬದ ಮೂಲಕ ನಾಗತಿಹಳ್ಳಿಯಲ್ಲಿ ನಡೆಯುತ್ತಿರುವ ಪ್ರಯೋಗಗಳ ಮೇಲೆ ಬೆಳಕು ಚೆಲ್ಲುವುದರ ಜೊತೆಗೆ ಗ್ರಾಮಭಾರತದ ತಲ್ಲಣಗಳನ್ನು ದಾಖಲಿಸುವ ಪ್ರಯತ್ನ ಕೂಡ ಇದಾಗಿದೆ. ತಲ್ಲಣದ ನೆಲೆಗಳ ಅನುಸಂಧಾನದ ಜೊತೆಗೆ ಅದಕ್ಕೆ ಸೂಕ್ತ ಪರಿಹಾರವನ್ನೂ ಸೂಚಿಸಲು ಇದರಲ್ಲಿ ಪ್ರಯತ್ನಿಸಲಾಗಿದೆ.

ನಮ್ಮ ಯುವಕರು ಹಳ್ಳಿಗಳನ್ನು ಏಕೆ ತೊರೆಯುತ್ತಿದ್ದಾರೆ? ಇದು ಮೂಲಭೂತವಾದ ಪ್ರಶ್ನೆ. ಪಟ್ಟಣಗಳಲ್ಲಿ ಇರುವಂಥ ಸೌಲಭ್ಯಗಳು ಹಳ್ಳಿಗಳಲ್ಲೂ ದೊರೆಯುವಂತಾದರೆ ಅವರು ಹಳ್ಳಿಗಳನ್ನು ಬಿಡುವುದೇ ಇಲ್ಲ ಅಲ್ಲವೆ! ಗ್ರಾಮೀಣ ಬದುಕಿನ ಉಸಿರಿರುವುದು ಕೃಷಿಯಲ್ಲಿ. ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಿಕೊಳ್ಳಬಹುದು, ಇರುವ ಭೂಮಿಯಲ್ಲಿ ಯಾವ ರೀತಿಯಿಂದ ಅಧಿಕ ಇಳುವರಿಯನ್ನು ತೆಗೆಯಬಹುದು, ತಾವು ಬೆಳೆದುದನ್ನು ಹೇಗೆ ಮಾರುಕಟ್ಟೆ ಮಾಡಬಹುದು, ಹೊಸ ಕೃಷಿ ಉಪಕರಣಗಳನ್ನು ಉಪಯೋಗಿಸುವುದು ಹೇಗೆ, ಸಾವಯವ ಕೃಷಿಯನ್ನು ಹೇಗೆ ಮಾಡಬೇಕು, ಸ್ವಾವಲಂಬನೆಯನ್ನು ಗಳಿಸಿಕೊಳ್ಳುವುದು ಹೇಗೆ ಎಂಬಿತ್ಯಾದಿ ಮಾಹಿತಿಯು ಅವರಿಗೆ ದೊರೆಯಬೇಕು. ಕೃಷಿಕನೊಬ್ಬ ತನ್ನ ತುಂಡು ಭೂಮಿಯ ಜೊತೆಯಲ್ಲಿ ಎರಡು ಹಸುವನ್ನು ಸಾಕಿದರೆ ಹೈನುಗಾರಿಕೆಯಿಂದಲೂ ಹಣವನ್ನು ಮಾಡಬಹುದು. ಜೇನು ಸಾಕಣೆ ಮಾಡಬಹುದು, ತನಗೆ ತಿಳಿದ ಇತರ ಕಸುಬನ್ನು ಲಾಭದಾಯಕವಾಗಿ ಹಳ್ಳಿಯಿಂದಲೇ ನಡೆಸುವುದು ಹೇಗೆ ಎಂಬ ಮಾರ್ಗದರ್ಶನ ಅವರಿಗೆ ಸಿಗಬೇಕಾಗಿದೆ. ಈ ನಿಟ್ಟಿನಲ್ಲಿ ನಾಗತಿಹಳ್ಳಿಯಲ್ಲಿ ಚಂದ್ರಶೇಖರ ಅವರು ಕಳೆದ ಹತ್ತು ವರ್ಷಗಳಿಂದ ಕಾರ್ಯಕ್ರಮಗಳನ್ನು ನಡೆಸುತ್ತ ಬಂದಿದ್ದಾರೆ. ತಮ್ಮೂರಿನ ರೈತರನ್ನು ಪ್ರಗತಿಪರ ರೈತರಿರುವ ರಾಜ್ಯದ, ಹೊರ ರಾಜ್ಯದ ಇತರ ಭಾಗಗಳಿಗೆ ತಮ್ಮದೇ ಖರ್ಚಿನಲ್ಲಿ ಕರೆದುಕೊಂಡು ಹೋಗುತ್ತಾರೆ. ತಮ್ಮೂರಿನ ರೈತರಿಗೆ ವಿಮಾನ ಪ್ರಯಾಣ ಮಾಡಿಸಿದ ಅಗ್ಗಳಿಕೆಯೂ ಅವರಿಗಿದೆ. ಇವೆಲ್ಲ ಒಂದು ಸಾಂಸ್ಕೃತಿಕ ದಾಖಲೆಯಾಗಿ ಇಲ್ಲಿ ನಮೂದಾಗಿದೆ.
ಈ ಕೃತಿಯು ನಾಗತಿಹಳ್ಳಿಯಲ್ಲಿ ನಡೆದಿರುವ ಕಾರ್ಯಕ್ರಮಗಳ ವರದಿಯಲ್ಲ. ಅಲ್ಲಿಯ ಪ್ರಯೋಗಗಳ ಪರಾಮರ್ಶೆಯ ಜೊತೆಗೆ ಗ್ರಾಮಗಳ ಬಗ್ಗೆ ಸ್ಪಷ್ಟ ತಿಳಿವಳಿಕೆ ಇರುವ ತಜ್ಞರಿಂದ ಬರೆಸಿದ ಲೇಖನಗಳೂ ಇದರಲ್ಲಿವೆ.

ಹಿ.ಶಿ.ರಾಮಚಂದ್ರಗೌಡರು ಬರೆದ ‘ರೈತ ಚಳವಳಿಯ ನಾಳೆಗಳು’ ಎಂಬ ಲೇಖನ ಇದರಲ್ಲಿದೆ. ಕಾರ್ಪೋರೆಟ್ ವರ್ಗ ಹೇಗೆ ಮಧ್ಯಮವರ್ಗದಿಂದ ಬಂದ ರಾಜಕಾರಣಿಗಳನ್ನು ಭ್ರಷ್ಟಗೊಳಿಸುತ್ತದೆ, ಆ ಮೂಲಕ ತಾನು ಹೇಗೆ ಗಟ್ಟಿಯಾಗಿ ಬೇರಿಳಿಸುತ್ತ ಹೋಗುತ್ತದೆ ಎಂಬುದನ್ನು ಅವರು ವಿಶ್ಲೇಷಿಸುತ್ತಾರೆ. ರಾಜಕಾರಣದ ಮೇಲೆ ಹತೋಟಿಯನ್ನು ಸಾಧಿಸಬಹುದಾಗಿದ್ದ ಮತೀಯ ಅಥವಾ ಧಾರ್ಮಿಕ ಶಕ್ತಿಗಳು ಹಣಕ್ಕಾಗಿ ರಾಜಕಾರಣಿಗಳನ್ನು ಅವರ ಭ್ರಷ್ಟಾಚಾರದಲ್ಲಿ ಪಾಲುದಾರರಾಗಿ ಬೇಡುತ್ತವೆ ಎಂದು ಹೇಳುತ್ತಾರೆ. ಹೀಗಿರುವಾಗ ಮಾರ್ಗದರ್ಶನ ಮಾಡುವವರು ಯಾರು? ಈ ಲೇಖನದಲ್ಲಿ ಗೌಡರು ೧೭ ಸಲಹೆಗಳನ್ನು ನೀಡಿದ್ದಾರೆ.

ಬದಲಾದ ಕಾಲದಲ್ಲಿ ಜನಪದ ಕಲೆಗಳ ಬಗ್ಗೆ ಡಾ.ಡಿ.ಕೆ.ರಾಜೇಂದ್ರ, ಗ್ರಾಮೀಣ ಕೃಷಿ ಮತ್ತು ಯುವ ಜನತೆಯ ಕುರಿತು ಎನ್.ಕೇಶವಮೂರ್ತಿ, ಹಸಿರು ಊರಿನ ಹಸಿದ ಚಿತ್ರಗಳ ಬಗ್ಗೆ ಶಿವಾನಂದ ಕಳವೆಯವರು, ಮರೆಯಾಗುತ್ತಿರುವ ಪಾರಂಪರಿಕ ಕಸಬುಗಳ ಬಗ್ಗೆ ವ.ನಂ. ಶಿವರಾಂ, ಹಳ್ಳಿಗಳಲ್ಲಿ ವಿದ್ಯಾವಂತರ ಸಾಮಾಜಿಕ ಜವಾಬ್ದಾರಿಗಳ ಕುರಿತು ಗಂಗಾಧರ ಹಿರೇಗುತ್ತಿಯವರು ಬರೆದಿದ್ದಾರೆ. ಕೃಷಿಯಿಂದ ಲಾಭ ಮಾಡಬಹುದು ಎಂಬ ಮಾತನ್ನು ಡಿ.ಚಂದ್ರಶೇಖರ ಚೌಟ ಹೇಳಿದ್ದಾರೆ. ಇಂಥ ೨೧ ಲೇಖನಗಳು ಈ ಭಾಗದಲ್ಲಿವೆ.

ಸಂಸ್ಕೃತಿ ಹಬ್ಬ ನಡೆದುಬಂದ ದಾರಿಯ ಬಗ್ಗೆ ಎರಡನೆ ಭಾಗದಲ್ಲಿ ೨೪ ಲೇಖನಗಳಿವೆ. ಸಂಸ್ಕೃತಿ ಹಬ್ಬದಲ್ಲಿ ಪಾಲ್ಗೊಂಡವರ ಅನುಭವ ಕಥನಗಳು ಇದರಲ್ಲಿವೆ.

ಇದರಲ್ಲಿ ನಾಗತಿಹಳ್ಳಿ ಚಂದ್ರಶೇಖರ ಅವರ ಸಂದರ್ಶನವೂ ಇದೆ. ಅದರಲ್ಲಿ ಅವರು, ‘... ಹಳ್ಳಿಯ ಜನತೆ ಪ್ರವಾಹದೋಪಾದಿಯಲ್ಲಿ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ನೆಮ್ಮದಿ ನೆಲಸಿದರೆ ಈ ವಲಸೆ ತಪ್ಪುತ್ತದೆ. ಯಾವ ದೇಶ ಹಳ್ಳಿಗಳಿಗೆ ನೆಮ್ಮದಿಯನ್ನು ವಿಸ್ತರಿಸುವುದಿಲ್ಲವೋ ಅಂಥ ದೇಶದ ಮಹಾನಗರಗಳು ಕೊಚ್ಚೆಗುಂಡಿಗಳಾಗಿರುತ್ತವೆ. ಈಗ ಚಳುವಳಿಗಳು ಸ್ತಬ್ಧಗೊಂಡಿವೆ. ನಾಯಕತ್ವದ ಶೂನ್ಯತೆ ಇದೆ. ಈ ಹೊತ್ತಿನಲ್ಲಿ ವೈಯಕ್ತಿಕ ನೆಲೆಯಲ್ಲಿ ಪ್ರಯೋಗಗಳು ಆರಂಭವಾಗಬೇಕು. ಎಲ್ಲ ತರುಣರೂ ತಮ್ಮ ಹಳ್ಳಿಗಳತ್ತ ಮುಖ ಮಾಡಬೇಕು. ಆದರೆ ಇದು ಯಾವುದೇ ರಾಜಕೀಯ ಉದ್ದೇಶದಿಂದ ಪ್ರೇರಿತವಾಗಿರಬಾರದು’ ಎಂದು ಹೇಳಿದ್ದಾರೆ. ಈ ಕೃತಿಯಿಂದ ಕೆಲವರಾದರೂ ಪ್ರೇರಣೆ ಪಡೆದು ತಮ್ಮ ಊರ ಕಡೆ ಮುಖ ಮಾಡಿದರೆ ಅದೇ ಸಾರ್ಥಕ.

ಈ ಕೃತಿಯ ಗೌರವ ಸಂಪಾದಕರು ಡಾ.ಡಿ.ಕೆ.ಚೌಟ ಮತ್ತು ಸಂಪಾದಕರು ಶಿವಕುಮಾರ ಕಾರೇಪುರ ಅವರು.
 
ಪ್ರ: ಅಭಿವ್ಯಕ್ತಿ ಸಾಂಸ್ಕೃತಿಕ ವೇದಿಕೆ, ಬೆಂಗಳೂರು, ಪುಟಗಳು ೨೯೬ ಬೆಲೆ ₹ ೧೫೦Monday, August 25, 2014

ಅಚ್ಚರಿ - ಉಜ್ಜಿನಿ ರುದ್ರಪ್ಪ

Achhari - Ujjini Rudrappaಪತ್ರಕರ್ತ ಉಜ್ಜಿನಿ ರುದ್ರಪ್ಪ ತಮ್ಮಲ್ಲಿಯ ಕುತೂಹಲವನ್ನು ಜಾಗೃತವಾಗಿ ಇಟ್ಟುಕೊಂಡಿದ್ದರ ಕುರುಹು ಎಂಬಂತೆ 'ಅಚ್ಚರಿ' ಎಂಬ ಕೃತಿಯನ್ನು ನೀಡಿದ್ದಾರೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ತಮ್ಮ ಸುತ್ತಲಿನ ಪರಿಸರದಲ್ಲಿ ಇತರರಿಗೆ ಸಾಮಾನ್ಯ ಅನಿಸಬಹುದಾದ ವಿಷಯದಲ್ಲಿಯ ಅಚ್ಚರಿ ಅಂಶವನ್ನು ಗಮನಕ್ಕೆ ತರುತ್ತಾರೆ. ಅವರು ಹೇಳಿದ ಮೇಲೆಯೇ ಅದರ ಮಹತ್ವ ನಮಗೆ ಗೋಚರವಾಗುವುದು. ಸಾಂಕೇತಿಕವಾದ ಕರಫಲ್ ಭಾಷೆ ಇಂದು ವಿನಾಶದ ಹಾದಿಯಲ್ಲಿದೆ ಎಂದು ಅವರು ಬರೆದಿದ್ದಾರೆ. ಇದನ್ನು ಗೂಢಚರ್ಯದಂಥ ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದರತ್ತ ಗಮನ ಸೆಳೆದಿರುವುದೇ ರುದ್ರಪ್ಪ ಅವರ ಮಹಾನ್ ಸಾಧನೆ. ಇಂಥ ಹಲವು ವಿಸ್ಮಯಗಳನ್ನು ಅವರು ಈ ಕೃತಿಯಲ್ಲಿ ನೀಡಿದ್ದಾರೆ. ಇದರ ಎರಡನೇ ಭಾಗದಲ್ಲಿ ಹದಿನೆಂಟು 'ಗಣ್ಯರು ಕಂಡಂತೆ ಕಾಂಚಾಣ'ವನ್ನು ಕಿರು ಸಂದರ್ಶನಗಳಲ್ಲಿ ಹೇಳಿದ್ದಾರೆ. ಹಣದ ಕುರಿತ ಈ ಅನುಭವದ ಮಾತುಗಳು ಸಾಮಾನ್ಯರಿಗೆ ದಾರಿದೀಪದಂತೆ ಇವೆ.Friday, August 22, 2014

ಅನುಸಂಧಾನ - ಬರಗೂರು ರಾಮಚಂದ್ರಪ್ಪ

Anusandhana -Baraguru Ramachandrappa
 ನಮ್ಮ ಸಮಕಾಲಿನ ಬರಹಗಾರರಲ್ಲಿ ಸಮಕಾಲಿನ ವಿವಾದಗಳಿಗೆ ತಕ್ಷಣವೇ ಸದಾ ಜಾಗೃತರಾಗಿರುವ ಬರಗೂರು ರಾಮಚಂದ್ರಪ್ಪನವರ ವಿವಿಧ ಕೃತಿಗೆಳಿಗೆ ಬರೆದ ಮುನ್ನುಡಿ ರೂಪದ ಬರಹಗಳ ಸಂಕಲನ 'ಅನುಸಂಧಾನ'. ಮುನ್ನುಡಿ ಬರಹವು ಸಾಹಿತ್ಯದಲ್ಲಿ  ಒಂದು ವಿಶೇಷ ಪ್ರಕಾರವಾಗಿ ಬೆಳೆದುಬರುತ್ತಿದೆ. ಅದರ ಲಕ್ಷಣ, ಸ್ವರೂಪಗಳನ್ನು ಇಂಥ ಕೃತಿಯನ್ನು ಇಟ್ಟುಕೊಂಡು ವಿರ್ವಚಿಸಬಹುದಾಗಿದೆ.

ಸಾಮಾನ್ಯವಾಗಿ ಕೃತಿಯೊಂದನ್ನು ಓದುವ ಓದುಗನಿಗೆ ಕೃತಿಯ ಮುಖ್ಯಾಂಶಗಳು ಹಾಗೂ ಆಶಯವನ್ನು ತಿಳಿಸುತ್ತ ಕೃತಿಕಾರನಿಗೆ ಶುಭಕೋರುವುದು ಈ ಬರಹದ ಒಂದು ಲಕ್ಷಣ. ಇಂಥವುಗಳಲ್ಲಿ ಕಾಟು ವಿಮರ್ಶೆಯನ್ನು ಕಾಣುವುದು ಸಾಧ್ಯವಿಲ್ಲ. ಮುನ್ನುಡಿ ಅಪೇಕ್ಷಿಸುವ ಕೃತಿಕಾರ ಕೃತಿಯ ಬಗ್ಗೆ. ತನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಬರೆಯಬೇಕು ಎಂದು ಬಯಸುವುದು ತೀರಾ ಸಹಜ. ಇಂಥ ಆಡಕ್ಕೊತ್ತಿನಲ್ಲಿ ಸಿಲುಕುವ ಮುನ್ನುಡಿಕಾರರು ತಮ್ಮ ಮಿತಿಯಲ್ಲಿಯೇ ಪುಸ್ತಕವೊಂದರ ಆಲೋಚನೆ ಮಾಡುತ್ತಾರೆ. ಸೂಕ್ಷ್ಮವಾಗಿ ಕೊರತೆಗಳನ್ನು ದಾಖಲಿಸುತ್ತಾರೆ. ಇನ್ನೊಂದು ಕೃತಿಯೊಂದಿಗೆ ಈ ಕೃತಿಯನ್ನು ಹೋಲಿಸಿ ನೋಡುತ್ತಾರೆ. ವೈಯಕ್ತಿವಾದ ಪ್ರೀತಿ ವಿಶ್ವಾಸಗಳ ನೆಲೆಯಲ್ಲಿ ಸಹೃದಯತೆಯನ್ನು ನಾವು ಮುನ್ನುಡಿಗಳಲ್ಲಿ ಕಾಣಬಹುದು.

ಬರಗೂರರ ಈ ಕೃತಿಯಲ್ಲಿ ಮುನ್ನುಡಿಗಳ ಜೊತೆಗೆ ಕೆಲವು ಪುಸ್ತಕಾವಲೋಕನಗಳೂ ಇವೆ. ಮುನ್ನುಡಿ ಬರಹಗಳಿಗೆ ಈ ಕೃತಿಯೊಂದು ದಿಕ್ಸೋಚಿಯೂ ಆಗಬಲ್ಲದು. ಬರಗೂರರ ಬರಹದ ಒಂದು ವಿಶೇಷವೆಂದರೆ, ಅವರು ಕೃತಿಯೊಂದರಲ್ಲಿ ಪ್ರತಿಪಾದನೆಯಾದ ವಿಷಯವನ್ನು ಗ್ರಹಿಸುತಾರೆ ಮತ್ತು ಆ ವಿಚಾರವನ್ನು ವಿಸ್ತರಿಸುತ್ತಾರೆ. ಅದಕ್ಕೊಂದು ಉದಾರಹಣೆ ಈ ಕೃತಿಯ, 'ಹರಿಹರಪ್ರಿಯರ ಕೆಲವು ಕೃತಿಗಳು' ಲೇಖನ. ಅದರಲ್ಲಿ "ಅಸಹನೆ ಮತ್ತು ಆತಂಕಗಳ ನಡುವೆ ಇರುವ ಸೂಕ್ಷ್ಮಗೆರೆಯನ್ನು  ಕಂಡುಕೊಳ್ಳುವ ಸಂವೇದನಾಶೀಲತೆ ಇದ್ದಾಗ ಆತಂಕ ಮೌಲ್ಯವಾಗುತ್ತ ಅಸಹನೆ ಹಿನ್ನೆಲೆಗೆ ಸರಿಯುತ್ತದೆ. ಸಂಕಟ ಉರಿಯುತ್ತ ಸಿಟ್ಟು ಆರತೊಡಗುತ್ತದೆ. ಹರಿಹರಪ್ರಿಯ ಅವರ ಬರವಣೆಗೆಯುದ್ದಕ್ಕೂ ಆ ಸಹನೆ = ಆತಂಕ ಮತ್ತು ಸಿಟ್ಟು- ಸಂಕಟಗಳ ನಡುವೆ ತುಯ್ದಾಡುತ್ತ ಆರೋಗ್ಯಕರ ನೆಲೆಗೆ ಹಾರೈಸುವ ತಳಮಳ ಹೇಳುತ್ತಾ ಬರಗೂರರು ಸಾಹಿತ್ಯದ ಒಂದು ಸಿದ್ದಾಂತವನ್ನು ಸೂತ್ರರೂಪದಲ್ಲಿ ವಿವರಿಸುತ್ತಾರೆ.

ಬರಗೂರರ ಒಳ ನೋಟಗಳಿಗೆ ಇನ್ನೊಂದು ಉದಾಹರಣೆ 'ಮೂರು ಕಾದಂಬರಿಗಳು: ಹಾಡ್ಲಹಳ್ಳಿ ನಾಗರಾಜ್' ಲೇಖನ ನೋಡಬಹುದು. ಅಲ್ಲಿ ಅವರು ಅಕ್ಷರ ಸಂಸ್ಕೃತಿ ಸ್ಥಿ ತ್ಯಂತರಗೊಂಡ ರೀತಿಯನ್ನು ದಾಖಲಿಸುತ್ತಾರೆ. "ನಮ್ಮಲ್ಲಿ ಸಾಹಿತ್ಯ ಸಂಭ್ರಮ ಮತ್ತು ಸಮೃದ್ದಿಗಳು ಕಡಿಮೆಯಾಗಿವೆಯೆಂದು ಕೆಲವು ಪ್ರತಿಷ್ಠಿತರು   ಆಗಾಗ್ಗೆ ಹಳಹಳಿಸುತ್ತಾರೆ. ಈ ಹಳಹಳಿಕೆಗೆ ಕಾರಣವಿಲ್ಲ ಎಂದುದು ನನ್ನ ಅಭಿಪ್ರಾಯ. ನಮ್ಮ ಸಂದರ್ಭದ ಸಾಹಿತ್ಯ ಸಂಭ್ರಮ ಮತ್ತು ಸಮೃದ್ದಿಗಳು ಸ್ಥಳಾಂತರಗೊಂಡಿವೆ; ಅಕ್ಷರ ಸಂಸ್ಕೃತಿಯ 'ಸಾಮಾಜಿಕ ರೇಖೆ'ಗಳು ಅಳಿಸಿಹೋಗುತ್ತ ಹೊಸ ಅನುಭವಗಳು  ಅಕ್ಷರವಾಗತೊಡಗಿದ ಸನ್ನಿವೇಶದಲ್ಲಿ ನಾವು ಹಾದುಹೋಗುತ್ತಿದ್ದೇವೆ. ಪ್ರತಿಷ್ಠಿತ ವಲಯದ ಪ್ರತಿಗಾಮಿ ಪೀಠಗಳಿಗೆ ನಡುಕ ಹುಟ್ಟಿ ಸಂಭ್ರಮ - ಸಮೃದ್ದಿಗಳ ಅಭಾವ ಕಾಣಿಸಿಕೊಂಡಿದ್ದರೆ  ಅಂಥವರಿಗೆ ಅದು ಸಹಜ - ಸ್ವಾಭಾವಿಕ. ಆದರೆ ಸಾಂಸ್ಕೃತಿಕ ಆವರಣದಲ್ಲಿ ಅಕ್ಷರಾಕೃತಿಗಳ ಕುಣಿತಕ್ಕೆ ಕಾರಣವಾಗಿರುವ ನಿರ್ಲಷಿತ ಸಾಮಾಜಿಕ ವಲಯಗಳಿಗೆ ಸಂಭ್ರಮವೂ ಇದೆ; ಆವೇಶವು ಇದೆ; ಹದಲ್ಲೇ ಬರಬೇಕೆಂಬ ಒತ್ತಾಸೆಯೂ ಇದೆ. ಇಂಥ ವಿಶಿಷ್ಟ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳು ಸಮೃದ್ದವಾಗಬೇಕಾಗಿದೆ...." ನಮ್ಮಲ್ಲಿರುವ ಪ್ರತಿಷ್ಠಿತ ವಿಮರ್ಶಕ ವಲಯವು ಹೊಸಬರು ಬರಹಗಳನ್ನು ಓದಿಲ್ಲ ಮತ್ತು ಬರಹಗಾರರನ್ನು ಗುರುತಿಸಿಲ್ಲ ಎಂದು ಅವರು ಹೇಳುತ್ತಾರೆ. ಕೃತಿಯೊಂದರ ಕೊರತೆಯನ್ನು ಹೇಳುವಲ್ಲಿಯೂ ಬರಗೂರರ ಹಿಂದೆಮುಂದೆ ನೋಡುವುದಿಲ್ಲ. ಇದೇ ಲೇಖನದ ಕೊನೆಯಲ್ಲಿ ಅವರು, "ಬಿಂಗಾರೆ ಕಲ್ಲು ಮತ್ತು ಕಡವೆ ಬೇಟೆ - ಹಾಡ್ಲಹಳ್ಳಿ ನಾಗರಾಜ್ ಅವರ ಉತ್ತಮ ಕತೆಗಾರಿಕೆ ಉದಾಹರಣೆಯಾಗಿ ನಿಲ್ಲುವ ರಚನೆಗಳಾಗಿವೆ. ಆದರೆ ಇದೇ ಮಾತನ್ನು 'ಕೋಕಿಲಾ' ಎಂಬ ಕಿರು ಕಾದಂಬರಿಯ ಬಗ್ಗೆ ಹೇಳಲಾರೆ. ಅದೊಂದು ಸಾಮಾನ್ಯ ಕಥಾನಕ. ವಸ್ತುವಿನಲ್ಲಿರುವ ಆದರ್ಶ, ಸ್ತ್ರೀಪರ ಸೃಷ್ಟಿಕೋನಗಳು ಮನನೀಯವಾದರೂ ಗಾಢಾವಾಗಿ ಕಾಡುವ ಕತೆಗಾರಿಕೆ ಕಾಣುವುದಿಲ್ಲ. ಮೊದಲೆರಡು ಕೃತಿಗಳ ನಾಗರಾಜ್ ಇಲ್ಲಿ ನಾಪತ್ತೆಯಾಗಿದ್ದಾರೆ...". ಈ ಕೃತಿಯನ್ನು ಇಟ್ಟುಕೊಂಡು ಬರಗೂರರ ವಿಮರ್ಶೆಯ ನೆಲೆಗಳೇನು, ಅವರ ಸಾಹಿತ್ಯ ಮೀಮಾಂಸೆಯೇನು ಎಂಬುದನ್ನು ಗುರುತಿಸಬಹುದಾಗಿದೆ. ಈ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿ 
 


Thursday, August 14, 2014

ಚಿತಾದಂತ - ಕೆ ಎನ್ ಗಣೇಶಯ್ಯ

 Chitadanta K. N. Ganeshaiah

 


ಗಣೇಶಯ್ಯ ನವರ ಕಾದಂಬರಿಗಳೇ ಹಾಗೆ ಹಿಡಿದರೆ ಮುಗಿಸುವವರೆಗೂ ಸಮದಾನವಿಲ್ಲ, ಕುತೂಹಲ ಹುಟ್ಟಿಸಿ, ತಲೆಗೆ ಹುಳು ಬಿಟ್ಟು  ಹಾಳೆವರೆಗೂ ನಮ್ಮನ್ನು ಕಾಡುತ್ತದೆ. ಚಿತದಂತ ಕಾದಂಬರಿ ಅಲೆಕ್ಸಾಂಡರ್ನ  ಭಾರತ ಪ್ರವೇಶ, ಭುದ್ದನ ಅನುಯಾಹಿಗಳ ಚಿನ್ನದ ಭಂಡಾರ, ಅಧುನಿಕ ರಹಸ್ಯ ಸೈನಿಕರದ ತೆರವಾದಿಗಳು ಮತ್ತು ಸಿಬಿಐ ಎಲ್ಲಾ ಒಂದು ರೋಚಕ ಕಾದಂಬರಿಯನ್ನು ಅರ್ಧದಲ್ಲೇ ಬಿಡಲು ಮನಸ್ಸು ಬರುವುದಿಲ್ಲ.

 ಗಣೇಶಯ್ಯನವರ ಒಂದೊಂದು ಕಾದಂಬರಿ ಓದುವಾಗಲು  ಇತಿಹಾಸದ ಒಂದೊಂದು ಕುತೂಹಲಕಾರಿ ಘಟನೆಗಳು ಗೊತ್ತಾಗುತ್ತದೆ. ಅವರ ಕಾದಂಬರಿಗಳು ಕಾಲ್ಪನಿಕವಿರಬಹುದು ಆದರೆ ಅವರು ಪ್ರಸ್ತಾಪಿಸುವ ಐತಿಹಾಸಿಕ ಘಟನೆಗಳು ಮಾತ್ರ ನಿಜವಾದುದು. ಅಲೆಕ್ಸಾಂಡರ್ ಭಾರತಕ್ಕೆ ಬಂದಿದ್ದು, ಅಶೋಕನ ಸಂಪತ್ತು ಬೌದ್ಧ ಧರ್ಮಕ್ಕೆ ಮೀಸಲು ಬಿಟ್ಟಿದ್ದು, ತೆರವಾದಿಗಳು ಎಲ್ಲವು ಇತಿಹಾಸದಲ್ಲಿ ಅದಗಿರಿವುದು ನಿಜ. ಈ ಎಲ್ಲಾ ನಿಜ ಘಟನೆಗಳನ್ನು ಒಟ್ಟುಗೂಡಿಸಿ  ಒಂದು ಎಳೆಯಲ್ಲಿ ಸೇರಿಸಿ ಒಂದು ರೋಚಕ ಕಾದಂಬರಿಯನ್ನು ನಮ್ಮ  ಇಟ್ಟಿದ್ದಾರೆ . ಈ ಕಾದಂಬರಿ ಎಲ್ಲೂ ನಮಗೆ ಬೇಸರ ಬರಿಸುವುದಿಲ್ಲ.   


ಲೇಖಕರ ಮಾತು:

ಕತೆಯಲ್ಲಿನ ಚರಿತ್ರೆ ಮತ್ತು ಚರಿತ್ರೆಯಲ್ಲಿನ ಸತ್ಯತೆ

ಕತೆ ಬರೆಯುವ ಕ್ರಿಯೆಯಲ್ಲಿ ನನಗೊಂದು ವಿರೋಧಾಭಾಸ ಕಂಡುಬರುತ್ತದೆ. ಸಾಹಿತ್ಯದ ಗಂಭೀರ ಆಧ್ಯಯನದಲ್ಲಿ ತೊಡಗಿಸಿಕೊಂಡವರ ಮತ್ತು ಸಾಹಿತ್ಯದ ವಿಮರ್ಶಕರ ಮಧ್ಯ ಈ ಗೊಂದಲ ಬಹಳಷ್ಟು ಚರ್ಚೆಗೆ ಒಳಪಟ್ಟಿರುವ ಸಾಧ್ಯತೆಯಿದ್ದರೂ, ನನಗೆ ಅದರ ಬಗ್ಗೆ ಇಲ್ಲಿ ಹೇಳಿಕೊಳ್ಳುವ ಕಾತುರತೆ ಮತ್ತು ಅವಶ್ಯಕತೆ ಕಾಣುತ್ತಿದೆ. 

ಎಲ್ಲ ಕತೆಗಾರರೂ ತಾವು ಬರೆದಿದ್ದನ್ನು ಓದುಗರ ನಿಜವೆಂದು ನಂಬುವಂತೆ ಬರೆಯಬೇಕೆಂದು ಬಯಸುತ್ತಾರೆ. ಆದರೆ, ಕತೆಗಾರ ಮತ್ತು ಓದುಗ ಇಬ್ಬರಿಗೂ ಸಹ ಅದು ಕತೆ ಎಂದು ಗೊತ್ತಿರುವಾಗ, ಈ ನಂಬಿಕೆ ಹುಟ್ಟಲು ಹೇಗೆ ಸಾಧ್ಯ? ಅದು ಸಾಧ್ಯವಾಗಿದ್ದರೂ ಅದೊಂದು ಹುಸಿನಂಬಿಕೆಯಲ್ಲವೆ? ಈ ದೃಷ್ಟಿಯಲ್ಲಿ, 'ಕೆತೆ'ಯನ್ನು ನಂಬಿಕೆಯಿಂದ ದೂರವಾಗಿರುವಂತೆ ಬರೆದರೆ ಮಾತ್ರ ತಾನೆ ಅದು 'ಕೆತೆ'ಯಾಗಲು ಸಾಧ್ಯ? ಆದರೆ ಹಾಗೆ ಬರೆದಾಗ ಒದುಗರೇಕೆ ಮೆಚ್ಚುವುದಿಲ್ಲ? 'ನೀವು ಬರೆದ ಕತೆಯಲ್ಲಿ ನೈಜತೆ ಎದ್ದು ಕಾಣುತ್ತದೆ' ಎಂದು ಹೊಗಳುವ ಓದುಗರ ಮಾತಲ್ಲಿ ಹುದುಗಿರುವ ಸೂಚನೆ, ಕತೆಯನ್ನು ನಂಬುವಂತೆ ಬರೆಯಬೇಕು ಎಂದಲ್ಲವೆ? ಹಾಗಿದ್ದಲ್ಲಿ ನಂಬುವಂತೆ ಬರೆಯಾಲಾದ ಕತೆಗಳು ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತವೆಯೆಂದೆ? ಬರೆದ ಕತೆ ನಂಬುವಂತ್ತಿದ್ದರೆ ಅದು ಕೇವಲ ಸತ್ಯದ ನಿರೂಪಣೆಯಾಗಿ ಊಳಿಯುತ್ತದೆ ಅಷ್ಟೇ ಹೊರತು ಅದು ಕತೆಯಾಗಲು ಹೇಗೆ ಸಾಧ್ಯ? ಇವೇ ನನ್ನನ್ನು ಕಾಡುವ ವಿರೋಧಾಭಾಸಗಳು ಅಥವ ದ್ವಂದ್ವಗಳು.

ಇನ್ನೊಂದು ವಿಮರ್ಶೆ:- http://goo.gl/nXN0oy


Tuesday, August 5, 2014

ಏಳು ರೊಟ್ಟಿಗಳು - ಕೆ ಎನ್ ಗಣೇಶಯ್ಯ

Elu Rottigalu K. N. Ganeshaiah
ನಮ್ಮ ಇತಿಹಾಸ ಎಷ್ಟು ಕಲುಷಿತವಾಗಿದೆ ಎಂದರೆ ಯಾವುದು ನಿಜ ಯಾವುದು ಸುಳ್ಳು ಎಂದು ಹೇಳಲಾಗುವುದಿಲ್ಲ. ನಮ್ಮ ಭಾರತದ ಇತಿಹಾಸ ಬ್ರಿಟಿಷರು ಕಲುಷಿತ ಮಾಡಿ ಹೋದರು, ಈ ನಮ್ಮ ರಾಜಕಾರಣಿಗಳು ತಮ್ಮ ಮತ ಪೆಟ್ಟಿಗೆ ಉಳಿಸಿಕೊಳ್ಳಲು ಇನ್ನು ಅದನ್ನೆ ಮಾಡುತ್ತಿದ್ದಾರೆ. ನಿಜವಾದ ಇತಿಹಾಸದ ಬಗ್ಗೆ ಮುಂದೆ ಗೊತ್ತಾಗೊ ಬಗ್ಗೆ ನಗಂತೂ ಆಶಯ ಇಲ್ಲ, ಯಾಕೆಂದರೆ ಸಂಶೋಧನೆ ಮಾಡೊ ಉಸ್ತ್ತುಕತೆ ಇದ್ದರು ಯಾರು ಪ್ರೋಸ್ತಹ ಮಾಡೋಲ್ಲ ಇದರ ಬಗ್ಗೆ ಬರೆಯುತ ಹೋದರೆ ಈ ಲೇಖನ ಸಾಲೋದಿಲ್ಲ. ಗಣೇಶಯ್ಯನವರು ಬರೆದಿರುವ 'ಏಳು ರೊಟ್ಟಿಗಳು' ಐತಿಹಾಸಿಕ ಕಾದಂಬರಿ ಸ್ವತಂತ್ರ ನಂತರ ಹೈದರಾಬಾದ್ ನಲ್ಲಿ ನಡೆದಿರಬಹುದಾದ ಘಟನೆಗಳನ್ನು ಕುರಿತಾಗಿದೆ. 

ಗಣೇಶಯ್ಯನವರು ಬರೆದಿರುವ ಇತರೆ ಕಾದಂಬರಿಗಳಂತೆ ಇದುವೇ ಕಾಲ್ಪನಿಕ ಮಿಶ್ರಿತ ಇತಿಹಾಸ ಕಥ. ಸ್ವತಂತ್ರ ನಂತರ ಹೈದರಾಬಾದ್ ರಾಜ್ಯವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂದು ಹೈದರಾಬಾದ್ ನವಾಬರು ಪ್ರಯತ್ನಿಸಿದ್ದು ಎಲ್ಲರಿಗು ಗೊತ್ತಿದೆ. ಇದನ್ನು ತಡೆಯಲು ನೆಹರು ಸೇನೆಯನ್ನು ಕಳಿಸುತ್ತಾರೆ, ಸೇನೆ ಕಾರ್ಯಾಚರಣೆ ನಟರ ಹೈದರಾಬಾದ್ ಭಾರತದ ಭಾಗವಾಗುತ್ತದೆ, ಇದೆಲ್ಲ ಇತಿಹಾಸ. ಪರದೆ ಹಿಂದೆ ನಡೆದ ಘಟನೆಗಳು ಮತ್ತು ಅದರೊಳಗೆ ಒಂದು ರೋಚಕ ನಿಧಿ ಹುಡುಕುವ ಕಥೆಯನ್ನು ಸುಂದರವಾಗಿ ಮತ್ತು ಎಲ್ಲೂ ಅಧಿಕ ಅನಿಸದಂತೆ ಹಣೆದಿದ್ದಾರೆ. 

ಈ ಕಾದಂಬರಿ ಬರೆಯಲು  ಗಣೇಶಯ್ಯನವರು ಹೈದರಬಾದ್ ಇತಿಹಾಸದ ಬಗ್ಗೆ ಮಾಡಿರುವ ಅಧ್ಯಾನ ಶ್ಲಾಘನೀಯ. ನಿಜಾಮ್ ರ ನಿಜವಾದ ಕಥೆ ತಿಳಿಯಲು ಹೈದರಾಬಾದ್ ಗಲ್ಲಿ ಗಲ್ಲಿ ಸುತ್ತಿ ಘಟನೆಗಳನ್ನು ಕೂಡಿಹಾಕಿ ಮತ್ತು ಭಾರತದಲ್ಲಿ ನಿಷೇದಿತ ಪುಸ್ತಕದ ಜೆರಾಕ್ಸ್ ಪ್ರತಿ ಅಧ್ಯಾನ ಮಾಡಿ ಈ ಸುಂದರವಾದ ರೋಚಕ ಕಾದಂಬರಿಯನ್ನು ಬರೆದ್ದಿದ್ದಾರೆ. ಇಲ್ಲಿ ಗೋಪ್ಯವಾದ ನಿಶಿ ಇದೆ, ಇಂಟೆಲಿಜೆನ್ಸ್ ಆಫೀಸರ್ಸ್ ಇದಾರೆ, ಗುಪ್ತ ಸೈನಿಕರಿದ್ದಾರೆ, ... ಒಂದು ರೋಚಕ ಕಾದಂಬರಿಗೆ ಇನ್ನೇನು ಬೇಕು. 


Friday, August 1, 2014

ನರ ಬಲಿ - ಅ. ನ. ಕೃ

Nara Bali - A Na Krishnaraya
ಗತಕಾಲದ ಸಾಮಾಜಿಕ ಜೀವನ ಯಾವಾಗಲೂ ಕುತೂಹಲಕಾರಿ, ಒಂದು ಕಾಲದಲ್ಲಿ ನಮ್ಮ ತಂದೆ ತಾತಂದಿರು ಹೇಗೆ ಬಾಳಿದರು, ಅವರ ಆಶಯಗಳೇನು, ಅಭಿರುಚಿ ಎಂಥದು, ಅವರ ಜೀವನದ ಮೌಲ್ಯಗಳ ಯಾವವು ಎಂಬುದುನ್ನರಿಯಲು ನಾವು ಆಶಿಸುತ್ತೇವೆ. ಆದರೆ ಈ ಪರಿಜ್ಞನ ನಮ್ಮ ಜಾಪಲ್ಯಪೂರ್ಣಕ್ಕಷ್ಟೇ ಎಂದು ಭಾವಿಸುವುದು ತಪ್ಪಾದೀತು, ಹಿರಿಯರ ಜೀವನದಿಂದ ನಮ್ಮ ಜೀವನದಿಂದ ನಮ್ಮ ಜೀವನಕ್ಕೆ ಅತ್ಯವಶ್ಯಕವಾದ ಧೃತಿ, ಬೆಳಕು, ಸತ್ತ್ವ ದೊರೆಯುವುದೇ ಎಂದು ನೋಡಬೇಕು. 

ಈ ಐವತ್ತು ವರ್ಷಗಳ ನಮ್ಮ ಜೀವನವನ್ನು ಪರೀಕ್ಷಿಸಿ ನೋಡಿದರೆ ನೈತಿಕ ಮೌಲ್ಯಗಳ ಅವನತಿ ಸುಸ್ಪಷ್ಟವಾಗಿ ಕಂಡು ಬರಿತ್ತಿದೆ. ಅದರಲ್ಲಿಯೂ ಈ ಹದಿನೆಂಟು ವರ್ಷಗಳಲ್ಲಿ ಅದು ಅಧೋಗತಿಗೆ ಇಳಿದಿದೆ. 

ಸಮಾಜಪ್ರಜ್ಞೆಯುಳ್ಳ . ವಿಚಾರವಂತರು ಅವನತಿಯ ಕಾರನಗಳನ್ನರಸಿ, ಮೌಲ್ಯಗಳ ಪುನರ್ - ಪ್ರತಿಷ್ಠೆಗೆ ಪ್ರಯತ್ನಿಸಬೇಕು. 

ನಮ್ಮ ಆರ್ಥಿಕ ಜೀವನದ ಏರುಪೆರುಗಳೇ ಅವನತಿಯ ಕಾರಣವೆಂದು ಕೆಲವರ ಅಭಿಮತ, ಐವತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ಈಗ ಜೀವನಸಂಗ್ರಾಮ ಪ್ರಬಲವಾಗಿದೆ. ದೇಶದ ರಾಜಕೀಯ ಪರಿಸ್ಥಿತಿಯನ್ನವಲಂಬಿಸಿ ನಮ್ಮ ಆರ್ಥಿಕಸ್ಥಿತಿಯೂ ವಿಪನ್ನಾವಸ್ಥೆಗೆ ಬನ್ದಿದೆ. ಆದರೆ ಆರ್ಥಿಕ ಸುಭದ್ರತೆಯೇ ನೈತಿಕ ಮೌಲ್ಯಗಳ ಮೂಲಾಧಾರ ಎಂದು ಭಾವಿಸುವುದು ತಪ್ಪು ಆರ್ಥಿಕ ಸಮೃದ್ದಿ ಅಪಗತಿಗಳಿಗಿಂತಲೂ ಹಚ್ಚಾಗಿ ಮನೋಧರ್ಮವನ್ನು ಈ ಸಮಸ್ಯ ಅವಲಂಬಿಸುತ್ತದೆ. ರೋಮ್ ಸಾಮ್ರಾಜ್ಯ ಸಮೃದ್ದಿಯ ತುತ್ತ ತುದಿಯಲ್ಲಿದ್ದಾಗಲೇ ಛಿದ್ರಛಿದ್ರವಾದುದನ್ನು ನಾವು ನೆನಪಿಸಿಕೊಳ್ಳಬೇಕು.

'ನರ-ಬಲಿ' ಕಾದಂಬರಿಯಲ್ಲಿ ಆರ್ಥಿಕವಾಗಿ ತೀರ ವಿರುದ್ದವಾದ ಎರಡು ಪಾತ್ರಗಳನ್ನು ತಂದಿದ್ದೇನೆ. ಸಾಹುಕಾರ್ ಪಾಪಣ್ಣನವರ ಡ್ರೈವರ್ ಸೀನಪ್ಪ ಇಬ್ಬರೂ ಒಂದೇ ಗುರಿಯತ್ತ ಸಾಗಿದ್ದಾರೆ; ಇಬ್ಬರೂ ಕಷ್ಟ ಸುಖಗಳನ್ನು ಧಿಮಂತರಂತೆ ಎದುರಿಸುತ್ತಾರೆ; ಅವರ ಸಮಾನಧರ್ಮ, ಅವರ ಸಾಮಾಜಿಕ ಸ್ಥಿತಿಯನ್ನು ಮೆಟ್ಟಿ ತಲೆಯತ್ತಿ ನಿಂತಿದೆ. 

ಹಳೆಯಕಾಲದ ನಿಷ್ಕ್ರಮಣ, ಹೊಸ ಕಾಲದ ಉದಯಗಳ ಸಂಧಿಕಾಲದ ಸಾಮಾಜಿಕ ಚರಿತ್ರೆಯನ್ನು ನಾನು ಈ ಕಾದಮ್ಬರುಯ ವಸ್ತುವನ್ನಾಗಿ ಆರಿಸಿ ಕೊಂಡಿದ್ದೇನೆ. ಎತ್ತಿನಗಾಡಿ, ಅಜ್ಜಿಯ ಹಾಡು, ಕರೀ ನಿಲುವಂಗಿಗಳು ಮೋಟಾರುಕಾರು, ರೇಡಿಯೋ, ಸೂಟ್ ಗಳಾಗಿ ಪರಿವರ್ತಿವಾಗಿವೆ. ಆದರೆ ಇದೇ ಪ್ರಮಾಣದಲ್ಲಿ ನಮ್ಮ ಋಜುತ್ತ್ವ, ಸತ್ಯಾನುಸಂಧಾನ ಪ್ರಗತಿ ಹೊಂದಿವೆಯೇ?

ಇದರ ಮೂಲಕಾರಣ, ಆಧುನಿಕ ಜೀವನ ವ್ಯಕ್ತಿಯನ್ನು ವ್ಯಕ್ತಿಯನ್ನಾಗಿಯೇ  ಉಳಿಸುತ್ತದೆ. ಅವನು ತನ್ನ ಸುಖಕ್ಕೆ ಎಷ್ಟು ಜನ ಬೇಕೋ ಅಷ್ಟು ಜನರನ್ನು ಮಾತ್ರ ಸಂಗ್ರಹಿಸಿಕೊಳ್ಳುತ್ತಾನೆ. ಆದರೆ ಕೆಲವು ದಶಕಗಳ ಹಿಂದೆ ವ್ಯಕ್ತಿ ಸಮಷ್ಟಿಯ ಅಂಗವಾಗಿದ್ದ. ಅವನ ಊರು, ಅವನ ಹಳ್ಳಿ, ಅವನು ವಾಸಿಸುತ್ತಿದ್ದ ಬೀದಿ ಅವನ ಸಂಸಾರವಾಗಿತ್ತು. ತಮ್ಮ ಸುತ್ತಮುತ್ತಲಿನ, ಆಶ್ರೀತರ, ಕಷ್ಟಸುಖ ತನ್ನದುನ್ನುವ ಸಂಪ್ರದಾಯದಲ್ಲಿ ಹಿಂದಿನವರು ಬೆಳೆದಿದ್ದರು. ಈ ಮೌಲಿಕ ಜೀವನವನ್ನು ಇಂದು ಯಾವದಾದರೊಂದು ಸ್ವರೂಪದಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಈ ಕಾದಂಬರಿಯಲ್ಲಿ ಎತ್ತಿದ್ದೇನೆ. 


Sunday, July 27, 2014

ಮಾರ್ಜಾಲ ಸನ್ಯಾಸಿ - ಅ. ನ. ಕೃ

Maarjaala Sanyasi - A Na Krishnaraya
ಬೆಳ್ಳಿಗ್ಗೆ ಎದ್ದು ಯಾವುದೇ ಕನ್ನಡ ಚಾನೆಲ್ ಹಾಕಿದರೆ ಬರುವುದು ಅಂದಿನ ಜೋತಿಷ್ಯ, ಇದು ಒಂದಲ್ಲ ಎಲ್ಲಾ ಚನ್ನೆಲ್ ನಲ್ಲೂ ಕೂಡು, ಯಾಕೆ? ಯಾಕೆಂದರೆ ಚಾನೆಲ್ ಗೆ ಟಿ ಅರ್ ಪಿ ಬೇಕು ಮತ್ತು ಜನರಿಗೆ ತಮ್ಮ ಕಷ್ಟಗಳು ದೂರವಾಗಬೇಕು. ಒಂದು ಚಾನೆಲ್ ನಲ್ಲಿ ಬರುವ ಫೋನ್ ಕರೆಗಳನ್ನು ಆಲಿಸಿದರೆ ಒಬ್ಬರಿಗೂ ಒಂದೊಂದು ಕಷ್ಟಗಳು ಅದನ್ನು ನಿವಾರಿಸಲು ಕಾದಿ ಹುಟ್ಟು ಜನರು ಒಂದೊಂದು ಉಪಾಯಗಳನ್ನು ಹೇಳುತ್ತಾರೆ. ಅದನ್ನೆಲ್ಲಾ ಮಾಡಿದರೆ ಅವರ ಕಷ್ಟಗಳು ನಿವಾರಣೆಯಾಗುತ್ತದ, ಇಲ್ಲ ಮತ್ತೆ ಫೋನ್ ಮಾಡುವುದು ಯಾಕೆ? ಯಾಕೆಂದರೆ ಅವರಿಗೆ ತಮ್ಮ ಕಷ್ಟಗಳನ್ನು ನಿವಾರಿಸಲು ಆಸ್ವಷಣೆಗಳು ಬೇಕು ಮತ್ತು ಮನಸ್ಸಿನ ಎಲ್ಲೋ ಒಂದು ಮೂಲೆಯಲ್ಲಿ ಒಂದು ಸುಲುಭ ಮಾರ್ಗ ಬೇಕು, ಇದನ್ನು ಅರ್ಥ ಮಾಡಿಕೊಂಡ ಚಾನೆಲ್ ಗಳು ಮತ್ತು ಸುಳ್ಳು ಜೋತಿಷ್ಯ ಶಾಸ್ತ್ರಿಗಳು ಗೊಡ್ಡು ಆಶ್ವಾಷನೆಗಳ್ಳನ್ನು ಕೊಟ್ಟು ಇಬ್ಬರು ದುಡ್ಡು ಮಾಡುತ್ತಾರೆ. ಇದೆ ಅ. ನ. ಕೃ ರವರ 'ಮಾರ್ಜಾಲ ಸನ್ಯಾಸಿಯ' ಕಥೆಯ ಎಳೆ. ನನಗೆ ಜೋತಿಷ್ಯದಲ್ಲಿ ನಬಿಕೆ ಇದ್ದರು ಪ್ರತಿ ದಿನ ಚನ್ನೆಲ್ ಗಳಲ್ಲ್ಲಿ ಹೇಳುವ ಊಹಾಪೋಹಗಳಲ್ಲಿ ಅಲ್ಲ.

ಮಹಾದೇವ ಶಾಸ್ತ್ರಿಗಳು ತುಂಬ ಮೇಧಾವಿಗಳು ಮತ್ತು ಜೋತಿಷ್ಯ ಹೇಳುವುದರಲ್ಲಿ ಅಷ್ಟೇ ನಿಪುನರು, ಅವರ ಮಗ ನರಹರಿ ಕೂಡ ಅಷ್ಟೇ. ನರಹರಿ ಮಾಡುವೆ ಮಾಡಿಕೊಳ್ಳಲು ಒಪ್ಪಿರುವುದಿಲ್ಲ ಯಾಕೆಂದರೆ ಅವನ ಭವಿಷ್ಯದಲ್ಲಿ ಮದುವೆಯಾದರೆ ಮರಣ ಎಂದು ಬರೆದಿರುತ್ತದೆ ಎಂದು ತಂದೆಗೆ ಹೇಳಿದಾಗ ಅವರು ಅವನ ಜಾತಕ ನೋಡಿ ನಿನ್ನ ಶಾಸ್ತ್ರ ತಪ್ಪಿ ಎಂದು ಹೇಳಿ ಮಾಡುವೆ ಮಾದಿಸುತ್ತಾರೆ. ಮಾಡುವೆಯಾದ ಮೇಲೆ ನರಹರಿ ಸಾಯುತ್ತಾನೆ. ತಂದೆಗೆ ತನ್ನ ತಪ್ಪು ಅರಿವಾಗಿ ಜೋತಿಷ್ಯ ಹೇಳುವುದನ್ನು ಬಿಡುತ್ತಾರೆ ಮತ್ತು ಅವರ ಆರೈಕೆಯನ್ನು ಸೇಸೋ ನೋಡಿಕೊಂಡು ಮಾವನ ಮನೆಯಲ್ಲಿ ಇರುತ್ತಾಳೆ/

ಕಷ್ಯಪ್ನವರ ಮಗ ಜೋತಿಷ್ಯದಲ್ಲಿ ತುಂಬ ಆಸಕ್ತಿ. ಕಷ್ಯಪ್ನವರು ಮಹಾದೇವಶಾಸ್ತ್ರಿಗಳ ಮನೆಗೆ ಹೋಗಿ ಅವರ ಮಗನಿಗೆ ಜೋತಿಷ್ಯ ಹೇಳಿಕೊಡಿ ಎಂದು ಒಪ್ಪಿಸುವಷ್ಟ್ರಲ್ಲಿ ಸಾಕುಸಾಕಗುತ್ತದೆ. ಸುಬ್ಬು ಕಷ್ಯಪ್ನವರ ಮಗ ಡಿಗ್ರಿ ಓದಿಕೊಂಡು ಮಹಾದೇವಶಾಸ್ತ್ರಿಗಳ ಮನೆಗೆ ಹೋಗಿ ಜೋತಿಷ್ಯ ಕಲಿಯುತ್ತಿರುತ್ತಾನೆ. ಅವರ ಸೊಸೆಗೆ ಲಕ್ಷ್ಮದೇವಿಗೆ ಸುಬ್ಬು ಮೇಲೆ ಇಷ್ಟವಾಗಿ ಶಾಸ್ತ್ರಿಗಳು ಮನೆಯಲ್ಲಿ ಇಲ್ಲವಾದಾಗ ಸುಬ್ಬುವನ್ನು ಮೋಹಿಸುತ್ತಾಳೆ. ಸುಬ್ಬುಗೆ ಮದುವೆಯಾಗಿಗಿದ್ದರು ಅವನು ಇದಕ್ಕೆ ಒಪ್ಪಿ ಗುರುದ್ರೋಹಕ್ಕೆ ಕೈ ಹಾಕುತ್ತಾನೆ.

ಲಕ್ಷ್ಮಿಯ ಮೋಹಕ್ಕೆ ಸಿಲುಕು ಅವನು ಮನೆ ಬಿಟ್ಟು ಅವಳೊಂದಿಗೆ ಬೊಂಬೆಗೆ ಹೋಗಿ ಜೋತಿಷ್ಯ ಹೇಳಲು ಶುರು ಮಾದುತ್ತಾನೆ. ಅವನ ಜೋತಿಷ್ಯಕೀ ಮರುಳಾಗಿ ಹೋಟೆಲ್ ಮಾಲೀಕರು ಸಿನೆಮಾ ತಾರೆಯರು. ಸ್ಟುಡಿಯೋ ಮಾಲೀಕರು, ನಿರ್ದೆಶಕರು ಮುಗಿಬಿಳುತ್ತಾರೆ. ಇದನ್ನು ಕಂಡ ಸುಬ್ಬು ಸುಳ್ಳು ಸುಳ್ಳು ಜೋತಿಷ್ಯ ಹೇಳಲು ಶುರು ಮಾಡುತ್ತಾನೆ. ಅವನು ಬೆಂಗಳೂರುರಿಗೆ ಅವರ ಅಮ್ಮನನ್ನು ನೋಡಲು ಬಂದಿರುವಾಗ ಲಕ್ಷ್ಮಿ ಸ್ಟುಡಿಯೋ ಮಾಲಿಕರೊಂಡಿಕೆ ಸಂಬಂಧ ಬೆಳೆಸುತ್ತಾಳೆ. ಸುಬ್ಬು ಅವರ ತಾಯಿಯ ಸಂಸ್ಕರ ಮುಗಿಸಿಕೊಂಡು ಬಾಂಬೆಗೆ ಹೋಗುವಾಗ ಅವನಿಗೆ ಲಕ್ಷ್ಮಿಯ ನಿಜ ಸ್ವರೋಪ್ಪ ತಿಳಿದು ದುಃಖಿಸುತ್ತಾನೆ.


Wednesday, July 23, 2014

ಮುಯ್ಯಿಗೆ ಮುಯ್ಯಿ - ಅ. ನ. ಕೃ

Muyyige Muyyee - A Na Krishnarayaಒಬ್ಬರ ಏಳಿಗೆ ಕಂಡು ಒಬ್ಬರಿಗೆ ಆಗುವುದಿಲ್ಲ, ಅವರನ್ನು ಹೇಗಾದರೂ ಮಾಡಿ ಮಣ್ಣು ಮುಕ್ಕಿಸಬೇಕು, ಅವರ ಹೆಸರನ್ನು ಹಾಳು ಮಾಡಬೇಕು ಎಂದು ಒಳಗೊಳಗೇ ಮಸಲತ್ತು ಮಾದುತ್ತಿರುತ್ತಾರೆ. ಇದು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ಕೆಲವರಿಗೆ ಒಂದು ಸುಖ ಸಂಸಾರ ಕಂಡರೆ ಆಗುವುದಿಲ್ಲ ಅವರ ಸಂಸಾರದಲ್ಲಿ ಹುಲಿ ಹಿಂಡಲು ಹಾತೊರೆಯುತ್ತಿರುತ್ತಾರೆ, ಅವರಿಗೆ ಒಂದು ಸಣ್ಣ ಅವಕಾಶ ಸಿಕ್ಕರೂ ಅದನ್ನು ಉಪಯೋಗಿಸಿ ಚಿಕ್ಕದ್ದನ್ನು ದೊಡ್ಡದ್ದು ಮಾಡಿ, ಗುಡ್ಡವನ್ನು ಬೆಟ್ಟ ಮಾಡಿ, ಇಲಿಯನ್ನು ಹುಲಿ ಮಾಡಿ ಇತರರ ಮುಂದೆ ಸುದ್ದಿ ಹರಡುತ್ತಾರೆ, ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಾರೆ. ಆದರೆ ಒಬ್ಬ ಮನುಷ್ಯ ತನ್ನ ಗುಣ ಒಳ್ಳೆಯದಾಗಿದ್ದಲ್ಲಿ, ನಡತೆಯಲ್ಲಿ ಯಾವ ದೋಷ ಇಲ್ಲದ್ದಿದ್ದಲ್ಲಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ, ತಾನಾಹಿತು ತನ್ನ ಕೆಲಸವಾಹಿತು ಎಂದು ಕ್ರಮೇಣ ಸುಳು ಸುದ್ದಿಗಳು ತಣ್ಣಗಾಗಿ ಸುಳ್ಳು ಸುದ್ದಿ ಹಬ್ಬಿಸುವವರ ನಿಜ ಮರ್ಮ ತಿಲಿಯುತ್ತದೆ, ಇದೆ ಅ. ನ. ಕೃ. ರವರ 'ಮುಯ್ಯಿಗೆ ಮುಯ್ಯಿ' ಕಾದಂಬರಿಯ ಎಳೆ. 

ಅ. ನ. ಕೃಷ್ಣರಾಯ ರವರ ಬಹುತೇಕೆ ಕಾದಂಬರಿಗಳು ಸಾಮಜದಲ್ಲಿ ಕಾಡುತ್ತಿರುವ ಸಮಸ್ಯೆಗಳು ಮತ್ತು ಅದನ್ನು ಹೇಗೆ ನಿಭಾಹಿಸಬೇಕು ಎಂಬುದರ ಸುತ್ತ ರಚಿತವಾಗಿವೆ. ಅವರ ಕಾದಂಬರಿ 'ನಗ್ನ ಸತ್ಯ' , 'ಶನಿ ಸಂತಾನ' ಮತ್ತು 'ಸಂಜೆಗತ್ತಲು' ಕಾದಂಬರಿ ವೇಶ್ಯವಾಟಿಕೆ ಕುರಿತಾದರೆ 'ಮುಯ್ಯಿಗೆ ಮುಯ್ಯಿ' , 'ಮಾರ್ಜಾಲ ಸನ್ಯಾಸಿ' ಮಂತ್ರ ತಂತ್ರಗಳ ಸುತ್ತ ಸುಲಿದಾದುತ್ತದೆ. 

'ಮುಯ್ಯಿಗೆ ಮುಯ್ಯಿ' ಕಾದಮ್ಬರಿಯಲ್ಲಿ ಬರುವ ನಾರಾಯಣ ಶಾಸ್ತ್ರಿಗಳು, ನಾಗಪ್ಪ , ಸಂಬು, ಸೀತಮ್ಮ, ಕಾಳಚಾರಿ ಎಲ್ಲ ಈ ಸಮಾಜದ ಒಂದೊಂದು ಮುಖಗಳಾಗಿ ತೊರಿಸಿದ್ದಾರೆ. ನಾರಾಯಣ ಶಾಸ್ತ್ರಿಗಳು ಹುಲ್ಲೂರಿನಲ್ಲೂ ಮತ್ತು ಸುತ್ತ ಮುತ್ತ ಹಳ್ಳಿಗಳಲ್ಲಿ ತುಂಬಾ ಪ್ರಸಿದ್ದರು, ಅವರ ನಡೆ ನುಡಿಗಳು ಮತ್ತು ಶ್ರದ್ದೆ ಇಂದ ಗಳಿಸಿದ ಹೆಸರದು. ಅವರ ಇಬ್ಬರು ಮಕ್ಕಳು ವಿಶ್ವೇಶ್ವರ ಮತ್ತು ಸಾಂಬ, ವಿಶ್ವೇಶ್ವರ ತಡೆ ಹಾಗೆ ಮೃದು ಸ್ವಭಾವ ಅವರ ಹಾದಿಯಲ್ಲೇ ಪೌರೋಹಿತ್ಯ ಮಾಡುತ್ತಿದ್ದಾನೆ ಆದರೆ ಸಾಮ್ಬುಗೆ ಮಂತ್ರ ಇತ್ಯಾದಿಗಳಲ್ಲಿ ಆಸಕ್ತಿ ಇಲ್ಲ. ಇಗೆ ಒಂದು ದಿನ ಪೌರೋಹಿತ್ಯಕ್ಕೆ ಹೋದಾಗ ವಿಶ್ವೇಶ್ವರ ತಮ್ಮ ಸಾಂಬನನ್ನು ಕರೆದುಕೊಂಡು ಹೋದ, ನದಿಯಲ್ಲಿ ಸ್ನಾನ ಮಡಿ ಮುಗಿಸಿದಾಗ ಅವನ ದೇಹದಲ್ಲಿ ನರಸಿಂಹ ಶಾಸ್ತ್ರಿಗಳ ಆತ್ಮ ಸೆರಿಕೊಲ್ಲುತ್ತದೆ. ಈ ವಿಷಯ ಎಲ್ಲ ದಿಕ್ಕುಗಳಲ್ಲಿ ಹಬ್ಬಿ ಅವನ ಹೆಸರು ಗಳಿಸುತ್ತಾನೆ, ಆದರೆ ಇದರಿಂದ ನಾರಯಾಣ ಶಾಸ್ತ್ರಿಗಳಿಗೆ ವಿಶ್ರಾಂತಿ ಇಲ್ಲ, ಅವರು ತಮ್ಮ ಗುರುಗಳಾದ  ನರಸಿಂಹ ಶಾಸ್ತ್ರಿಗಳ ಬಾಲಿ ತಮ್ಮ ದುಃಖ ವನ್ನು ಹೇಳಿಕೊಳ್ಳುತ್ತಾರೆ, ಇದನ್ನು ಕೇಳಿದ ಆತ್ಮ ಸಾಂಬನ ದೇಹವನ್ನು ಬಿಟ್ಟು ಹೊಗುತ್ತದೆ. ಇದನೆಲ್ಲ ನಾಗಪ್ಪ ದೊರದಲ್ಲೇ ನಿಂತು ಗಮನಿಸುತ್ತಿದ್ದ. 

ನಾಗಪ್ಪ ಮತ್ತು ಕಾಳಚಾರಿ ಒಂದು ಕಾಲದಲ್ಲಿ ಸ್ನೇಹಿತರು, ಇವರಿಗೆ ಶ್ರೀಕಂಠಪ್ಪ ಸ್ನೇಹಿತ. ಶ್ರೀಕಂಠಪ್ಪ  ಭದ್ರಮ್ಮನನ್ನು ಮದುವೆಯಾಗುತ್ತನೆ, ನೋಡಲು ತುಂಬಾ ಸುಂದರವಾಗಿ ಕಾಣುವ ಭದ್ರಮ್ಮನನ್ನು ಕಾಳಚಾರಿ ಮೋಹಿಸಲು ಪ್ರಯತ್ನಿಸುತ್ತಾನೆ. ಇದರಿನ ಕೋಪಗೊಂಡ ಶ್ರೀಕಂಠಪ್ಪ ಮತ್ತು ನಾಗಪ್ಪ ಬುದ್ದಿ ಹೇಳಲು ಹೋಗುತ್ತಾರೆ ಆದರೆ ಅದು ಫಲಿಸುವುದಿಲ್ಲ. ಕಾಳಾಚಾರಿ ಮಂತ್ರ ವಿದ್ಯೆಇಂದ ಶ್ರೀಕಂಠಪ್ಪ ನನ್ನು ಕೊಂದು ಭದ್ರಮ್ಮನನ್ನು ವಶೀಕರಣ ಮಾಡಿಕೊಂಡು ಅವನ ಮನೆಯಲ್ಲಿ ಇತ್ತುಕೊನ್ದಿರುತ್ತಾನೆ. ನಾಗಪ್ಪ ಅವನ ವಿರುದ್ದ ಮಂತ್ರ ಪ್ರಯೋಗ ಮಾಡಬಾರದು ಎಂದು ಅವನನ್ನು ಅಂಗ ಊನ್ಯತೆ ನಾಡಿ ಮೂಲೆಗುಂಪ್ಪಾಗಿಸುತ್ತಾನೆ. 

ಕಾಳಾಚಾರಿಯ ಕಾಟ ಹದ್ದುಮೀರಿ ಹೋಗಲು  ನಾರಯಾಣ ಶಾಸ್ತ್ರಿಗಳ  ಬಳಿ ಚಳುವಚಾರ್ರಿ ಬಂದು ಅವರ ಮಗಳನ್ನು ಕಾಪಾಡಲು ಬೆಡಿಕೊಳ್ಳುತ್ತಾನೆ. ಅವನಿಗೆ ಊರ ಪಟೇಲರ ಸಹಾಯ ಪಡೆದು ಪಡುವೆ ಮಾಡಿಸುತ್ತಾರೆ. ಆದರೆ ಕಾಳಾಚಾರಿಯ ಮಂತ್ರ ಪ್ರಯೋಗದಿಂದ ಅವಳನ್ನು ರಕ್ತ ಕಾರಿ ಸಾಯುವಂತೆ ಮಾಡುತ್ತನೆ. ಅದರಿಂದ ನಾರಯಾಣ ಶಾಸ್ತ್ರಿಗಳತುಂಬಾ ಕುಸಿದು ಹೊಗುತ್ತಾರೆ, ಅವಳ ಹತ್ಯೆಗೆ ನಾನೇ ಕಾರಣ ಎಂದು ಮನಸ್ಸಿಗೆ ನೋವು ಮಾದಿಕೊಲ್ಲುತ್ತಾರೆ. ಇದನ್ನು ನೋದದಾಗದೆ ಸಾಂಬ ಕಾಲಚಾರಿಯನ್ನು ಎದುರಿಸಲು ನಾಗಪ್ಪನ ಬಾಲಿ ಮಂತ್ರ ವಿದ್ಯೆ ಕಲಿಯಲು ಬರುತ್ತಾನೆ. ಮುಂದೆ ಇದರಿಂದಾಗುವ ಪರಿಣಾಮ ಮತ್ತು ಕಾಲಾಚಾರಿಯನ್ನು ಹೇಗೆ ಸೋಲಿಸುತ್ತಾನೆ ಮತ್ತು ಇದರಿಂದ ನಾರಯಾಣ ಶಾಸ್ತ್ರಿಗಳ ಮೇಲೆ ಆಗುವ ಪರಿಣಾಮವನ್ನು ಓದಿಯೇ ನೋಡಬೇಕು. Sunday, July 20, 2014

ಜಾಣರ ಚಮತ್ಕಾರ - ಎನ್ ನರಸಿಂಹಯ್ಯ

Janara Chamatkara - Narashimaiah Nನಿಮಗೆ ಸಿನೆಮಾ ನೋಡುವ ಅಭ್ಯಾಸವಿದ್ದರೆ ಇಂಗ್ಲಿಷ್ ಭಾಷೆಯ "Strangers On A Train (1951)" ನೋಡಿರಬಹುದು ನೋಡಿಲ್ಲ ಅಂದ್ರೆ ಆ ಕೆಥೆ ಹೇಗೆ ಹೋಗುತ್ತದೆ, ಇಬ್ಬರು ಅಪರಿಚತರು ತಮ್ಮ ಸಂಭಂದಗಳಿಂದ ಬೇಸತ್ತಿರುವ ವಿಚಾರವನ್ನು ಒಬ್ಬರಿಗೊಬ್ಬರು ಹೆಲಿಕೊಲ್ಲುತ್ತಾರೆ, ಆ ಸಂಬಂದಗಳಿಂದ ಮುಕ್ತಿ ಸಿಗಬೇಕಾದರೆ ಅವರರನ್ನು ಕೊಲೆಮಾಡಬೇಕು ಮತ್ತು ಒಬ್ಬರು ಇನ್ನೊಬ್ಬರ ಪತ್ನಿಯನ್ನು ಕೊಂದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ನಿರದರಿಸುತ್ತಾರೆ. ಇದೆ ಆ ಸಿನಿಮಾ ಕಥೆ. ನರಸಿಂಹಯ್ಯನವರ 'ಜಾಣರ ಚಮತ್ಕಾರ' ಕಾದಂಬರಿಯ ಕಥೆಯು ಸರಿಸುಮಾರು ಇದೆ.

ರೂಪನಗರದಲ್ಲಿ ಎರಡು ಕೊಲೆಯಾಗುತ್ತದೆ, ಎರಡಕ್ಕೂ ಯಾವುದೇ ಸಂಬಂದವಿರುವುದಿಲ್ಲ, ಎರಡು ಕೊಲೆಗಳು ಒಬ್ಬನೇ ಕೊಲೆಗಾರ ಮಾಡಿದನೆಂದು ಪೊಲೀಸರು ಎನಿಸುತ್ತಾರೆ. ಕೊಲೆಗಳು ನೆಡೆದು ಐದು ತಿಂಗಳಾದರೂ ಕೊಲೆಗಾರ ಸಿಗುವುದಿಲ್ಲ, ಯಾವ ಸುಳಿವು ಇಲ್ಲದೆ ಕೊಲೆಗಳು ಆಗಿರುತ್ತಾವೆ. ಎರಡೆನೇ ಕೊಲೆಯಲ್ಲಿ ಬೆರಳಚ್ಚಿನ ಗುರುತು ಇದ್ದರು ಅದು ಯಾರಿಗೂ ಹೊಲಿಕೆಯಾಗುವುದಿಲ್ಲ. ಇದರಿಂದ ಬೇಸತ್ತ ಪತ್ತೇದಾರಿ ಮತ್ತು ಪೋಲಿಸರು ಕೈ ಚೆಲ್ಲಿ ಕೋತಿರುತ್ತಾರೆ. ಆಗಲೇ ಮೂರನೇ ಕೊಲೆಯಾಗುತ್ತದೆ ಆವಾಗ ಪತ್ತೆದಾರ ಮಧುಸೂದನನಿಗೆ ಯಾಕೆ ಈ ಕೊಲೆಗಳು ಒಬ್ಬರನೊಬ್ಬರು ಪರಿಚವಿಲ್ಲದ ಸ್ನೇಹಿತರು ಮಾಡಿರಬಾರದು ಎಂದು ಎನಿಸುತ್ತದೆ. ಅದೇ ಸಂಶಯ ಕೊಲೆಗಾರರನ್ನು ಹಿಡಿಯಲು ನೆರವಾಗುತ್ತದೆ.


Saturday, July 19, 2014

ಗೂಢಾಚಾರಿಯ ಗುರು - ಎನ್ ನರಸಿಂಹಯ್ಯ

Goodachariya Guru - Narashimaiah N


ಕಾದಂಬರಿಯ ಹೆಸರೇ ಹೇಳುವಂತೆ ಇದೊಂದು ಪತ್ತೇದಾರಿ ಕಾದಂಬರಿ. ಈ ಕಾದಂಬರಿ ಹೆಣ್ಣು ಹೊನ್ನು ಮಣ್ಣು ಜನರಿಗೆ ಅದರಲ್ಲೂ ಸಂಬಂಧಿಕರಲ್ಲಿ ಮತ್ತು ಮಕ್ಕಳಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ಈ ಕಾದಂಬರಿಯಲ್ಲಿ ನರಸಿಂಹಯ್ಯನವರು ತುಂಬ ಸರಳವಾಗಿ ಹೇಳಿದ್ದಾರೆ. ಆಂಗ್ಲ ಭಾಷೆಯ ಪತ್ತೇದಾರಿ ಓದುವವರಿಗೆ ನರಸಿಂಹಯ್ಯನವರು ಕಾದಂಬರಿ ತುಂಬ ಸರಳವಾದುದ್ದು ಮತ್ತು ನೆರವಾದುದ್ದು ಎನಿಸಬಹುದು, ಅದು ನಿಜ ಕೂಡ ಆದರೆ ಅವರ ಒಂದೊಂದು ಕಾದಂಬರಿಯು ಜೀವನಕ್ಕೆ ಒದೊಂದು ಪಾಠ ಹೆಲಿಕೊದುತ್ತದೆ. 

ಹರಿಯಪ್ಪ ಪತ್ತೇದಾರಿ ಮಧುಸೂದನನ್ನು ತಮ್ಮ ಜೀವಕ್ಕೆ ಆಪಾಯವಿದೆ ಎಂದು ಹುಡುಕಿಕೊಂಡು ಬರುತ್ತಾರೆ. ಹರಿಯಪ್ಪನನ್ನು ಕಾಫಿ ಕುಡಿಯುವಾಗ ವಿಷ ಬೆರಸಿ, ಟ್ಯಾಕ್ಸಿ ಯಲ್ಲಿ ಮತ್ತು ದೊಣ್ಣೆಯಿಂದ ಹೊಡೆದು ಸಾಯಿಸಲು ಪ್ರಯತ್ನಿಸಿದ್ದಾರೆ, ಇನ್ನು ಮುಂದೆ ಏನು ಕಾದಿಯೋ ಎಂದು ಜೀವಕ್ಕೆ ಹೆದರಿ ಮಧುಸೂದನನ್ನು ಕಂಡು ಅವರ ಸಮಸ್ಯೆಗೆ ಪರಿಹಾರ ಹುಡುಕಲು ಕೆಲುತ್ತಾರೆ. ಅವರ ತಮ್ಮ ಜೂಜಿನಲ್ಲಿ ಎಲ್ಲ ಅಸ್ತಿ ಕಳೆದುಕೊಂಡಿರುತ್ತಾನೆ, ಅವರ ಅಳಿಯ ತಾಗಿಯ ಮಗ ಮತ್ತು ಅವರ ತಂಗಿ ಸತ್ತ ಮೇಲೆ ಅವನ್ನು ತಂದು ಸಾಕಿ ಅವರ ಮಗಳಿಗೆ ಕೊಟ್ಟು ಮಾಡುವೆ ಮಾಡುತ್ತಾರೆ, ಇವರಿಬ್ಬರು ಮಧುಸೂದನ ಮುಂದೆ ಸಂಶಯಾಸ್ಪದ ವ್ಯಕ್ತಿಗಳು. ಹರಿಯಪ್ಪನವರು ತಮ್ಮ ಆಸ್ತಿಯಲ್ಲ ಅವರ ಮಗಳ ಹೆಸರಿಗೆ ಮತ್ತು ಮೊಮ್ಮೊಗು ಹುಟ್ಟಿದ ಮೇಲೆ ಅದಕ್ಕೆ ಸೇರುವಾಗೆ ವಿಲ್ ಬರೆದಿದ್ದಾರೆ, ಅದಕ್ಕೆ ಕೋಪಗೊಂಡ ಅಳಿಯ ಕೊಲೆಯ ಪ್ರಯತ್ನ ಮಾದಿರಬಹುದು.

ಕಾದಂಬರಿ ಯಾವ ಯಾವ ತಿರುವು ಪಡೆದುಕೊಳ್ಳುತ್ತದೆ ಮತ್ತು ಕೊಲೆ ಯತ್ನ ಮಾಡಿದವರು ಯಾರು ಎಂದು ಓದಿ ನೋಡಬೇಕು. ನರಸಿಂಹಯ್ಯನವರು ಕಾದಂಬರಿಗಳು ತುಂಬ ಕುತೂಹಲಕಾರಿಯಾಗಿ ಮತ್ತು ಸರಳವಾಗಿ ಮತ್ತು ಓದುವವರ ಬಹಳ ಸಮಯ ಹಾಳುಮಾದೆ ಶೀಗ್ರದಲ್ಲಿ ಮುಗಿಯುವ ಹಾಗೆ ಚೊಕ್ಕವಾಗಿ ಬರೆಯುತ್ತಾರೆ. 


Monday, July 14, 2014

ಮಾತು ಕ(ವಿ)ತೆ - ಎಚ್. ದುಂಡಿರಾಜ್

Maatu Kavite - H. Dundiraj 


ಕವಿತೆ ನೀನೇಕೆ ಪದಗಳಲ್ಲಿ ಅವಿತೆ ಎಂದು ವೈಎನ್‌ಕೆ ತಮ್ಮ ಚುಟುಕವೊಂದರಲ್ಲಿ ಬರೆದಿದ್ದರು. ಕನ್ನಡದಲ್ಲಿ ಚುಟುಕಗಳಿಗೆ ತಮ್ಮದೇ ಆದ ಇತಿಹಾಸ ಪರಂಪರೆ ಇದೆ. ಈ ಸಾಲಿನಲ್ಲಿ ಈಗಿನ ದೊಡ್ಡ ಹೆಸರು ಡುಂಡಿರಾಜ್. ಚಿಕ್ಕ ಕವನಗಳಿಗೆ ದೊಡ್ಡ ಹೆಸರು ಅವರದು. ಡುಂಡಿರಾಜರ ಬೀಸಣಿಗೆಗಳಲ್ಲಿ ನಾನೂ ಒಬ್ಬ. ಡುಂಡಿರಾಜರ ಚುಟುಕಗಳನ್ನು ಪ್ರಕಟಿಸದ ಕನ್ನಡ ಪತ್ರಿಕೆ, ಓದದ ಕನ್ನಡ ಓದುಗ ಇರಲಾರರು. ವಾರಪತ್ರಿಕೆ, ಮಾಸಪತ್ರಿಕೆ, ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ ಚುಟುಕಗಳನ್ನು ಫಿಲ್ಲರ್ ರೀತಿಯಲ್ಲಿ ಬಳಸುವ ಪದ್ಧತಿ ಇದೆಯಾದರೂ ಬಹಳಷ್ಟು ಮಂದಿ ಓದುಗರು ಈ ಚುಟುಕಗಳನ್ನು ಮತ್ತು ನಗೆಹನಿಗಳನ್ನು ಮೊದಲು ಓದಿ ನಂತರ ಇತರೆ ಲೇಖನಗಳನ್ನು ಓದುತ್ತಾರೆ ಎಂಬುದೂ ಸತ್ಯ. ಇಷ್ಟೆಲ್ಲ ಡುಂಡಿರಾಜ್ ಮತ್ತು ಅವರ ಚುಟುಕಗಳ ಬಗ್ಗೆ ಹೇಳಿರುವುದು ನೋಡಿದರೆ ನಾನಿಲ್ಲಿ ಬರೆಯಹೊರಟಿರುವುದು ಅವರ ಇನ್ನೊಂದು ಚುಟುಕಗಳ ಸಂಗ್ರಹದ ಬಗ್ಗೆ ಎಂದುಕೊಳ್ಳುತ್ತೀರೇನೋ. ಆದರೆ ವಸ್ತು ಸ್ಥಿತಿ ಅದಲ್ಲ. ಡುಂಡಿರಾಜ್ ಅವರು ದಿನಪತ್ರಿಕೆಯೊಂದರಲ್ಲಿ “ಮಾತು ಕ(ವಿ)ತೆ” ಎಂಬ ಹೆಸರಿನಲ್ಲಿ ಅಂಕಣ ಬರೆಯುತ್ತಾರೆ. ಇದರಲ್ಲಿ ಗದ್ಯ ಮತ್ತು ಪದ್ಯಗಳ ಸಮ್ಮಿಶ್ರಣವಿದೆ. ಈ ಅಂಕಣದ ೪೫ ಲೇಖನಗಳನ್ನು ಅಂಕಿತ ಪುಸ್ತಕ ಪ್ರಕಾಶನದವರು ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ. ಪುಸ್ತಕದ ಹೆಸರೂ “ಮಾತು ಕ(ವಿ)ತೆ”.

ಸುಮಾರು ೨೫-೩೦ ವರ್ಷಗಳಿಂದ ಬರೆಯುತ್ತಿರುವ ಡುಂಡಿರಾಜರ ಲೇಖನಿಯ ಮೊನಚು ಇನ್ನೂ ಹಾಗೆಯೇ ಇದೆ. ನಮ್ಮಲ್ಲಿ ಬಹುಪಾಲು ಲೇಖಕರು ಇಪ್ಪತ್ತು ವರ್ಷಗಳ ಬರೆವಣಿಗೆಯ ನಂತರ ಮೊನಚು ಕಳೆದುಕೊಂಡಿರುತ್ತಾರೆ. ಹಾಸ್ಯ ಲೇಖಕರ ಮಟ್ಟಿಗಂತೂ ಇದು ಬಹುಮಟ್ಟಿಗೆ ಅನ್ವಯವಾಗುತ್ತದೆ. ಆದರೆ ಡುಂಡಿರಾಜ್ ಇದಕ್ಕೆ ಅಪವಾದ. ಅವರ ಇತ್ತೀಚೆಗಿನ ಚುಟುಕದಲ್ಲೂ ಹೊಸತನ, ಸೃಜನಶೀಲತೆ ಇಪ್ಪತ್ತು ವರ್ಷಗಳ ಹಿಂದೆ ಇದ್ದಂತೆಯೇ ಇದೆ. ಅವರ ಗದ್ಯಕ್ಕೂ ಇದು ಅನ್ವಯಿಸುತ್ತದೆ. “ಪರ್ಯಾಯ ಸಮ್ಮೇಳನ ಮುಂದಿನ ವರ್ಷ ನಡೆಯದಿದ್ದುದರಿಂದ ಸಾಹಿತಿಗಳಿಗೆ ಕ.ಸಾ.ಪ. ಸಮ್ಮೇಳನದಲ್ಲಿ ಭಾಗವಹಿಸುವುದಲ್ಲದೆ ಪರ್ಯಾಯ ಮಾರ್ಗವೇ ಇರಲಿಲ್ಲ” ಎಂಬ ವಾಕ್ಯವನ್ನೇ ನೋಡಿ. ಚುಟುಕದಲ್ಲಿ ಡುಂಡಿರಾಜ್ ಮಾಡುವ ಮೋಡಿಯೇ ಇಲ್ಲಿಯೂ ಕಾಣಸಿಗುತ್ತದೆ.

ಲೇಖನದ ಹೆಸರೇ ಹೇಳುವಂತೆ ಇದರಲ್ಲಿ ಗದ್ಯ ಮತ್ತು ಪದ್ಯಗಳ ನವಿರಾದ ಮಿಶ್ರಣವಿದೆ. ಡುಂಡಿರಾಜರು ತಮ್ಮದೇ ಚುಟುಕಗಳನ್ನು ಅಲ್ಲಲ್ಲಿ ಸೂಕ್ತವಾಗಿ ಬಳಸಿರುವುದಲ್ಲದೆ ಇತರೆ ಖ್ಯಾತ ಕವಿಗಳ ಚುಟುಕಗಳನ್ನೂ ಸೇರಿಸಿಕೊಂಡಿದ್ದಾರೆ. ಉದಾಹರಣೆಗೆ ವೈಎನ್‌ಕೆಯವರ “ಸುಲೋಚನೆ ಸುಲೋಚನೆ ಏನು ನಿನ್ನ ಆಲೋಚನೆ”. ಕೆಲವು ಲೇಖನಗಳ ಶೀರ್ಷಿಕೆಗಳೇ ಕಾವ್ಯಮಯವಾಗಿ ಆಕರ್ಷಕವಾಗಿವೆ. ಉದಾ -“ಯಾವ ಮೋಹನ ಆಳ್ವ ಕರೆದರು ಮೂಡುಬಿದಿರೆಗೆ ಇವರನು”, “ಮರಳಿ ಮಂಗಳೂರಿನ ಮರಳಿಗೆ”. ಪುಸ್ತಕದ ಇನ್ನೊಂದು ಆಕರ್ಷಣೆ ಹರಿಣಿಯವರ ವ್ಯಂಗ್ಯಚಿತ್ರಗಳು.

ಅಂಕಣ ಬರೆಹಗಾರರು ಆಯಾ ಕಾಲದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸಿ ತಮ್ಮ ಅಂಕಣದಲ್ಲಿ ಬರೆಯುವ ಪದ್ಧತಿ ಇದೆ. ಡುಂಡಿರಾಜರೂ ಅದನ್ನು “ನಗಿಸುವವರ ಡೆಮಾಕ್ರಟಿಕ್ ಅಲೆಯನ್ಸ್ (NDA)” ಲೇಖನದಲ್ಲಿ ಮಾಡಿದ್ದಾರೆ. ಇದನ್ನು ಓದುವಾಗ ನಾವು ಮಾನಸಿಕವಾಗಿ ಆ ಕಾಲಕ್ಕೆ ಹಿಂದಕ್ಕೆ ತೆರಳಿದರೆ ಹೆಚ್ಚು ಸ್ವಾರಸ್ಯವನ್ನು ಅನುಭವಿಸಬಹುದು. ಅಂಕಣ ಬರೆಹಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವವರಿಗೆ ನನ್ನದೊಂದು ಚಿಕ್ಕ ವಿನಂತಿ. ದಯವಿಟ್ಟು ಲೇಖನದ ಆರಂಭದಲ್ಲಿ ಅಥವಾ ಕೊನೆಯಲ್ಲಿ ಲೇಖನ ಪ್ರಕಟವಾದ ದಿನಾಂಕವನ್ನೂ ನಮೂದಿಸಿ. ಆಯಾ ಕಾಲದ ಪ್ರಸ್ತುತ ವಿಷಯಗಳಿಗೆ ಸ್ಪಂದಿಸಿ ಡುಂಡಿರಾಜರು ಬ್ಯಾಂಕ್ ಚಳವಳಿಯ ಬಗ್ಗೆಯೂ ತಮ್ಮ ಅಂಕಣದಲ್ಲಿ ಬರೆದಿದ್ದರು ಮಾತ್ರವಲ್ಲ ತಾವು ಬ್ಯಾಂಕ್ ಉದ್ಯೋಗಿಯಾಗಿ ಬ್ಯಾಂಕ್ ನೌಕರರ ಚಳವಳಿಯನ್ನು ಸಮರ್ಥಿಸಿಕೊಂಡಿದ್ದರು. ಆದರೆ ಆ ಲೇಖನವನ್ನು ಈ ಪುಸ್ತಕದಲ್ಲಿ ಸೇರಿಸಿಲ್ಲ.

ಮೂಲ:- http://goo.gl/V7RWdw


Saturday, July 12, 2014

ಹೇಮರೆಡ್ಡಿ ಮಲ್ಲಮ್ಮನ ಕಥೆಯು - ಕುಂ. ವೀ.

Hemareddy Mallammana Katheyu - Kum. Verrabadrappaನಾವೆಲ್ಲ ಎಲ್ಲಾ ಊರು ಜಾಗಗಳನ್ನು ನೋಡುವುದಕ್ಕೆ ಆಗೋಲ್ಲ, ಒಂದು ಚಿತ್ರ ನೋಡಿದರೆ ಒಂದು ಊರಿನ ಒಂದು ಭಾಗ ನೋಡಬಹುದೇ ಒರತು ಅಲ್ಲಿ ವಾಸಿಸುವ ಜನರ ಜೀವನ, ದಿನಚರಿ ಮತ್ತು ಕಷ್ಟ ಸುಖಗಳುನನ್ನು ತಿಳಿಯಲಾಗುವುದಿಲ್ಲ ಆದರೆ ಒಬ್ಬ ಅತ್ಯುತ್ತಮ ಕಾದಂಬರಿಕಾರ ನಮ್ಮನ್ನು ಒಂದು ಕಾದಂಬರಿಯ ಪಾತ್ರವನ್ನಾಗಿಸಿ ಆ ನಾಡಿನ ಸಂಪೂರ್ಣ ಚಿತ್ರಣವನ್ನು ನಮ್ಮ ಅನುಭವಕ್ಕೆ ತರುತ್ತಾರೆ, ಅಂತ: ಒಂದು ಕಾದಂಬರಿಯೇ ಕುಂ. ವೀ. ಯವರ  "ಹೇಮರೆಡ್ಡಿ ಮಲ್ಲಮ್ಮನ ಕಥೆಯು".

ನಾನು ಹಂಪಿಗೆ ಹೋಗುವಾಗ ಬಳ್ಳಾರಿ ನೋಡಿನೇ ಹೊರತು ಅಲ್ಲಿನ ಜೀವನ ನೋಡಿಲ್ಲ, ಆಂಧ್ರ ಪ್ರದೇಶವನ್ನು ಇನ್ನು ಮುಟ್ಟಿಲ್ಲ ಮತ್ತು ನಕ್ಷಲ್ ಬಗ್ಗೆ ಪೇಪರ್ ನಲ್ಲಿ ಓದಿದೇನೆ ಒರತು ಅವರ ಪ್ರಭಾವ ಗೊತ್ತ್ಲಿಲ್ಲ ಆದರೆ ಈ ಕಾದಂಬರಿ ಓದುವಾಗ ಇದೆಲ್ಲ ನನ್ನ ಕಣ್ಣ ಮುಂದೆ ನೆಡೆದಿ ಎನ್ನುವ ಮಟ್ಟಿಗೆ ಪರಿಣಾಮ ಬೀರಿದೆ. ನನ್ನ ಪ್ರಕಾರ ಈ ರೀತಿ ಅನುಭವ ಕೊಡುವ ಯಾವುದೇ ಭರಹಗಾರ ಒಬ್ಬ ಶ್ರೇಷ್ಠ ಭರಹಗಾರರಲ್ಲಿ ಒಬ್ಬರು. ಅದಕ್ಕೆ ಕನ್ನಡಿಯಂತೆ ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್  ಕುಮಾರ್  ಗೆ ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ  ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ತೆಲುಗಿನ 150 ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯೇ ಅವುಗಳನ್ನು ಪ್ರಕಟ ಮಾಡಿದೆ.


ಈ ಕಾದಂಬರಿಯಲ್ಲಿ ಎರಡು ಕಾದಂಬರಿ ಇದೆ,  ಬೇರೆ ಬೇರೆ ಯಲ್ಲ  ಒಂದರೊಳಗೊಂದು. ಈ ಕಾದಂಬರಿಯಲ್ಲಿ ಬರುವ ಮೇಸ್ಟ್ರು ಅವರ ಸುತ್ತ ಮುತ್ತ ನಡೆಯುವ ಘಟನೆಗಳನ್ನು ಆದರಿಸಿ ಒಂದು ಕಾದಂಬರಿ ಬರೆಯುತ್ತಿರುತ್ತಾರೆ. ಇಲ್ಲಿನ ಕಥೆ ಕರ್ನಾಟಕ ಮತ್ತು ಆಂಧ್ರ ಗಾಡಿಯಲ್ಲಿ ಇರುವ ಕುಗ್ರಾಮ ವಾಗಿಲಿಯ ಸುತ್ತ ಮುತ್ತು ನೆಡೆಯುತ್ತದೆ. ಅಲ್ಲಿನ ಬಡತನ, ಶ್ರೀಮಂತರ ದಬ್ಬಾಳಿಕೆ, ಹಿಂದುಳಿದ ಜನರ ಅವಿದ್ಯಾವಂತಿಕೆ ಎಲ್ಲವನ್ನು ನಮ್ಮ ಎದುರಿದೆ ನಡೆಯುತ್ತಿದೆ ಎನ್ನುವಷ್ಟು ಸುಚಿತ್ರವಾಗಿ ಚಿತ್ರಿಸಿದ್ದಾರೆ. ಅಲ್ಲಿ ಇರುವ ನಕ್ಸಲ್ ವಾದಿಗಳು, ಕೊಲೆಗಾರರು, ಪೋಲಿಸರು, ರಾಜಕಾರಣಿಗಳು ತಮ್ಮ ತಮ್ಮ ಸ್ವರ್ತದ ಬುದ್ದಿಯಿಂದ ವಾಗಿಲಿಯನ್ನು ಇನ್ನು ಕುಗ್ರಾಮವಾಗಿ ಇರಿಸಿರುವರು, ಅಲ್ಲಿಗೆ ಬರುವ ಜಲದರನ ನಾಟಕದ ಕಂಪನಿ ಇದನ್ನು ಹೇಗೆ ಬದಲಾಯಿಸುತ್ತದೆ ಜನರು ಹೇಗೆ ಬದಲಾಗುತ್ತಾರೆ ಮತ್ತು ವಾಗಿಲಿಯ ಪ್ರಗತಿಯ ಬಾಗಿಲು ಹೇಗೆ ತೆಗೆಯುತ್ತದೆ ಎಂದು ಟೀಚರ್ ದೃಷ್ಟಿಯಲ್ಲಿ ತೊರಿಸಿದ್ದಾರೆ.

ಇದರಲ್ಲಿ ಬರುವ ಸನಿವೇಶಗಳು ನಾವು ನಮ್ಮ ಸುತ್ತ ಮುತ್ತ ಇಗಲು ನೋಡಬಹುದು, ಲಂಚಕೋರರು, ಕೊಲೆಗಾರರು, ಬುಟಾಟಿಕೆಯ ಸ್ವಾಮಿಗಳು, ಕಳ್ಳರು, ಇವೆಲ್ಲ ಕುಗ್ರಾದಲ್ಲೇ ಅಲ್ಲ ನಮ್ಮು ಊರಿನಲ್ಲೂ ನಡೆಯುತ್ತಿದೆ ಮತ್ತು ಮುಂದೇನು ನಡೆಯುತ್ತಿರುತ್ತದೆ ಇದನ್ನು ಎಲ್ಲ ಮೀರಿ ನಾವು ಹೇಗೆ ಬಾಳಬೇಕು ಮತ್ತು ನಮ್ಮ ಸುತ್ತ ಮುತ್ತ ಇರುವವರನ್ನು ನಮ್ಮ ಜೊತೆ ಹೇಗೆ ಏಳಿಗೆಯ ಕಡೆದೆ ಕರೆದು ಕೊಂದು ಹೋಗಬೇಕು ಎನ್ನುವುದನ್ನು ಇಲ್ಲಿ ಸ್ಕೂಲ್ ಟೀಚರ್ ಮೂಲಕ ಹೇಳಿಸಿದ್ದಾರೆ.


Tuesday, June 24, 2014

ಕರಿಸಿರಿಯಾನ - ಕೆ ಎನ್ ಗಣೇಶಯ್ಯ

Karisiriyaana K. N. Ganeshaiah
ಈ ಕಾದ೦ಬರಿಯು ಒ೦ದು ಕಾಲ್ಪನಿಕ ಕತೆ. ಆದರೆ ಇದರಲ್ಲಿ ಬರುವ ಎಲ್ಲಾ ವಿವರಗಳು ಕಾಲ್ಪನಿಕವಲ್ಲ. ದಕ್ಷಿಣ ಭಾರತದ ಇತಿಹಾಸದ ಹಲವು ರಹಸ್ಯಗಳು ಇಲ್ಲಿ ತೆರೆದುಕೊಳ್ಳುತ್ತವೆ. ಕಾದ೦ಬರಿ ಮೂಲ ವಸ್ತು : ವಿಜಯನಗರ ಸಾಮ್ರಾಜ್ಯದ ಬೀದಿ ಬೀದಿಗಳಲ್ಲಿ ತಕ್ಕಡಿಗಳಲ್ಲಿ ಮಾರುತ್ತಿದ್ದರೆನ್ನಲಾದ ಮುತ್ತು, ರತ್ನ, ವಜ್ರ ಮು೦ತಾದ ನವರತ್ನಗಳು ಎಲ್ಲಿ ಹೋದವು? ವಿಜಯನಗರದ ಅಗಾಧ ನಿಧಿಯು ಎಲ್ಲಿ ಕಳೆದು ಹೋಯಿತು? ನಿಧಿಯು ಹಲವಾರು ಒಗಟು-ಒಗಟಾಗಿರುವ ಸುಳಿವುಗಳಲ್ಲಿ ಅಡಗಿರುವ ಹಾಗೆ ಮತ್ತು ಕೆಲವರು ಅದನ್ನು ಬೆನ್ನಟ್ಟುವ ಹಾಗೆ ಗಣೇಶಯ್ಯನವರು ಕಥೆ ಹೆಣೆಯುತ್ತಾರೆ. ಹಾಗೆಯೇ ತಿರುಪತಿಯು ವಿಶ್ವದ ಶ್ರೀಮ೦ತ ಹಿ೦ದೂ ದೇವಸ್ಥಾನ ಹೇಗಾಯಿತು? ಎ೦ಬುದರ ಸುತ್ತಲೂ ಕತೆ ಸುತ್ತುತ್ತದೆ. ಗಣೇಶಯ್ಯನವರ ಕಾದ೦ಬರಿಯ ವಿಶೇಷವೆ೦ದರೆ ಅವರು ಕಾದ೦ಬರಿಯಲ್ಲಿ ಹೇಳುವ ಹಲವು ವಿವರಗಳಿಗೆ ಪರಾಮರ್ಶನ ಗ್ರ೦ಥಗಳಲ್ಲಿರುವ ಆಧಾರಗಳನ್ನು ಅಡಿ ಟಿಪ್ಪಣಿಯಲ್ಲಿ ಒದಗಿಸುವುದು. ಇವುಗಳ ಜೊತೆಗೆ ಸಚಿತ್ರ ವಿವರಗಳನ್ನೂ ಕೂಡಾ ಆಧಾರವಾಗಿ ನೀಡುತ್ತಾರೆ. ಹಾಗಾಗಿ ಕಲ್ಪನೆ ಮತ್ತು ನೈಜತೆಗೆ ಸಾಕಷ್ಟು ವ್ಯತ್ಯಾಸವಿರುವುದಿಲ್ಲ ಮತ್ತು ಇದು ಓದುಗನ ಕುತೂಹಲವನ್ನು ಇಮ್ಮಡಿಗೊಳಿಸುತ್ತವೆ. ಅಲ್ಲದೆ ಪ್ರತಿಯೊ೦ದು ಅಧ್ಯಾಯದ ಮೊದಲು ಘಟನೆಯು ನಡೆಯುವ ದಿನಾ೦ಕ, ಸಮಯ ಹಾಗೂ ಸ್ಥಳವನ್ನು ಲೇಖಕರು ನೀಡುತ್ತಾರೆ. ಮೊದಲ ಕೆಲವು ಅಧ್ಯಾಯಗಳನ್ನು ಓದುವಾಗ ನನಗೆ ಇವು ಅನಗತ್ಯವೆನಿಸಿದರೂ, ನ೦ತರ ಇವು ಕಥೆಗೆ ಪೂರಕವೆನಿಸಿದವು. ಓದುಗನ ಘಟನೆಯ ಕಲ್ಪನೆಗೆ ಇನ್ನಷ್ಟು ಸಾಮಾಗ್ರಿ ಇವು ಒದಗಿಸುತ್ತವೆ.

ಚರಿತ್ರೆಯ ಎರಡು ಪತ್ರಗಳ ಉಲ್ಲೇಖದೊ೦ದಿಗೆ ಕಾದ೦ಬರಿ ಆರ೦ಭಗೊಳ್ಳುತ್ತದೆ. ನ೦ತರ ಜಾನಪದ ಹಾಡುಗಾರ್ತಿ ನ೦ಜಮ್ಮ ಮುಳುಬಾಗಿಲಿನಿ೦ದ ಚಿತ್ತೂರಿಗೆ ಹೊರಡುವ ರಾಷ್ಟ್ರೀಯ ಹೆದ್ದಾರಿ 4ರ ರಸ್ತೆಯಲ್ಲಿ ಸಿಗುವ ನ೦ಗ್ಲಿಯ ತನ್ನ ಮನೆಯಲ್ಲಿ ಕೊಲೆಯಾದ ಮಾಹಿತಿ ಸಿಗುತ್ತದೆ. ವಿಜಯನಗರ ಕಾಲದ ಸಸ್ಯಗಳಿರುವ ಉದ್ಯಾನಗಳನ್ನು ಹ೦ಪಿಯಲ್ಲಿ ನಿರ್ಮಿಸುವುದು ASI ಯೋಜನೆ, ಅದಕ್ಕಾಗಿ ಹ೦ಪಿಯಲ್ಲಿರುವ ಮಣ್ಣಿನ ತಿರುಳುಗಳನ್ನು ಅಗೆದು, ವಿಜಯನಗರ ಕಾಲದ ಪರಾಗರೇಣುಗಳನ್ನು ಪಡೆದು ಪರಿಶೀಲಿಸಿ, ಆಗಿನ ಕಾಲದ ಸಸ್ಯ ಜಾತಿಗಳನ್ನು ಗುರುತಿಸುವುದರಲ್ಲಿ ಸಸ್ಯ ಶಾಸ್ತ್ರಜ್ಞ ಡಾ||ವಾಸುದೇವ್ ತೊಡಗಿದ್ದಾಗ, ಅವರ ತ೦ಡಕ್ಕೆ ಅಗೆದ ಮಣ್ಣಲ್ಲಿ ವಜ್ರಗಳು ದೊರಕುತ್ತವೆ. ’ವಿಜಯನಗರದ ರಾಜರ ಮತ್ತು ತಿರುಪತಿ ದೇವಾಲಯದ ನಡುವಿನ ನಿಗೂಢ ಆರ್ಥಿಕ ಸ೦ಬ೦ಧ’ ಎ೦ಬ ವಿಷಯದ ಕುರಿತಾಗಿ ಪೂಜಾ ಸ೦ಶೋಧನೆಯಲ್ಲಿ ತೊಡಗಿಕೊ೦ಡಿರುತ್ತಾಳೆ, ಅವಳು ತಿರುಪತಿಯ ಬೆಟ್ಟಗಳಲ್ಲಿ ಈ ಕುರಿತಾಗಿ ಶೋಧ ಕಾರ್ಯದಲ್ಲಿ ತೊಡಗಿದ್ದಾಗ CBI ಅವಳನ್ನು ಬ೦ಧಿಸಿ ಕರೆದೊಯ್ಯುತ್ತದೆ. ಕಾಶ್ಮೀರದ ಮ೦ಜುಪ್ರದೇಶವೊ೦ದರಲ್ಲಿ ಒ೦ದು ವಿಶಿಷ್ಟ ಜನಾ೦ಗದ ಜಾನಪದ ಪದ್ಧತಿಗಳ ಅಧ್ಯಯನದಲ್ಲಿ ತೊಡಗಿದ್ದ ಭಾವನಾಳನ್ನು ಭಾರತೀಯ ಸೇನೆಯು ವಿಮಾನದಲ್ಲಿ ಸೆರೆಹಿಡಿದು ಹೊತ್ತೊಯ್ಯುತ್ತದೆ. UNESCO ಘೋಷಿಸಿರುವ ವಿಶ್ವ ಪರ೦ಪರೆ ತಾಣಗಳ(World Heritage Sites) ಸ೦ರಕ್ಷಣೆಯ ಉಸ್ತುವಾರಿ ಸ೦ಸ್ಥೆಯ ಸದಸ್ಯತ್ವಕ್ಕೆ ಲಾಬಿ ನಡೆಸಿ ಅಮೆರಿಕಾದಲ್ಲಿರುವ ಅನಿವಾಸಿ ಭಾರತೀಯ ಲಕ್ಷ್ಮಿಕಾ೦ತ್ ಪಟೇಲ್ ಆಯ್ಕೆಯಾಗುತ್ತಾನೆ. ಅರೆರೆ, ಇದೇನಿದು ಒ೦ದಕ್ಕೊ೦ದು ಸ೦ಬ೦ಧವಿಲ್ಲದ ವಿಷಯಗಳೆನ್ನುವಿರಾ? ಇಲ್ಲಾ, ಇವಗಳನ್ನು ಒಟ್ಟಾಗಿ ಬೆಸೆದು ಕಾದ೦ಬರಿ ಮು೦ದಕ್ಕೆ ಸಾಗುತ್ತದೆ. ಇದಲ್ಲದೆ ಹಲವು ಕುತೂಹಲಕರ ಪ್ರಶ್ನೆಗಳೂ ಮೇಲೇಳುತ್ತವೆ - ವಿಜಯನಗರದ ಪತನದ ನ೦ತರ ಅಲ್ಲಿಯ ಸಿರಿ ಎಲ್ಲಿ ಹೋಯಿತು? ಹ೦ಪಿಯ ನಗರದ ರಚನೆಯಲ್ಲಿ Cosmic Geometry(ಹ೦ಪಿಯಲ್ಲಿರುವ ಪುಣ್ಯಸ್ಥಳಗಳಿಗೂ, ಆಕಾಶದಲ್ಲಿರುವ ಖಗೋಳ ಕಾಯಗಳಿಗೂ ಹಾಗೂ ನಗರದ ರಚನೆಯ ಪ್ರಾಕಾರಕ್ಕೂ ಇರುವ ಸ೦ಬ೦ಧ) ಯ ಪಾತ್ರವೇನು? ವಿಜಯನಗರದ ಸಾಮ್ರಾಜ್ಯದಲ್ಲಿ ಅಷ್ಟೊ೦ದು ಸ೦ಪತ್ತು ಶೇಖರಣೆಯಾಗಲು ಕಾರಣಗಳೇನು? ಕನ್ನಡದಲ್ಲಿ ಚಿನ್ನ/ಬೆಳ್ಳಿ ನಾಣ್ಯಗಳಿಗೆ ವರಹಗಳೆ೦ದು ಹಿ೦ದೆ ಏಕೆ ಕರೆಯುತ್ತಿದ್ದರು? ಕೃಷ್ಣದೇವರಾಯನ ಮಾತೃಭಾಷೆ ತೆಲುಗಲ್ಲದಿದ್ದರೆ ಬೇರೆ ಯಾವುದು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ಕಾದ೦ಬರಿಕಾರರು ಉತ್ತರಗಳನ್ನೂ ಒದಗಿಸುತ್ತಾರೆ. 

’ಕರಿಸಿರಿಯಾನ’ದ ಓದು ಒ೦ದು ರೋಮಾ೦ಚಕ ಅನುಭವ. ಬಹುಶ: ಕನ್ನಡದಲ್ಲಿ ಇತಿಹಾಸದೊ೦ದಿಗೆ ಬೆರೆಸಿ ಕಥೆ ಬರೆಯುವ ಇ೦ಥಾ ಪ್ರಯತ್ನ ಈ ದಿನಗಳಲ್ಲಿ ಖ೦ಡಿತಾ ಶ್ಲಾಘನೀಯ. ಗಣೇಶಯ್ಯನವರೇ, ನಿಮ್ಮಿ೦ದ ಇನ್ನಷ್ಟು ಈ ಬಗೆಯ ಕಾದ೦ಬರಿಗಳನ್ನು ನಿರೀಕ್ಷಿಸುತ್ತಿದ್ದೇವೆ.

ಮೂಲ :-  http://goo.gl/yQdpJa


Monday, June 23, 2014

ನಿರಾಕರಣ - ಎಸ್ ಎಲ್ ಭೈರಪ್ಪ

Nirakarana - S L Bhyrappaಒಬ್ಬ ಮನುಷ್ಯ ಹುಟ್ಟಿದ ಮೇಲೆ  ಕಷ್ಟಗಳು ತಪ್ಪಿದ್ದಲ್ಲ. ಕಷ್ಟಗಳನ್ನು ನಿವಾರಿಸಲು ಇನ್ನು ಕಷ್ಟಗಳನ್ನು ಅನುಭವಿಸುತ್ತಾರೆ ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಾರೆ. ಎಲ್ಲಾ ಪ್ರಯತ್ನ ಮಾಡಿದ ಮೇಲೆ ಕಷ್ಟ ತೀರದಿದ್ದರೆ ಕೆಟ್ಟ ದಾರಿ ಹಿಡಿಯುತ್ತಾರೆ, ಅಡ್ಡ ದಾರಿ ಹುಡುಕುತ್ತಾರೆ, ಇನ್ನು ಕೆಲವರು ಕಷ್ಟ ಸಾಕು ಎಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಒಳ್ಳೆ ಜನರು ಆತ್ಮಹತ್ಯೆ ಮಾಡಿಕೊಳ್ಳಲು ಆಗುವುದಿಲ್ಲ, ಕೆಟ್ಟ ಕೆಲಸ ಮಾಡುವುದಿಲ್ಲ ಅಂಥವರು ಸನ್ಯಸವೊ ಇಲ್ಲ ವನವಾಸಕ್ಕೋ ಹೊರಟುಬಿಡುತ್ತಾರೆ. ಇಂತವರು ತಮ್ಮ ಜವಬ್ದಾರಿಯನ್ನು ಮುಗಿಸಿ ಇಲ್ಲವೇ ಬೇರೆಯವರಿಗೆ ವಹಿಸಿ ಕೈ ತೊಳೆದುಕೊಳ್ಳುತ್ತಾರೆ. ಒಬ್ಬನೇ ತಂದೆ ಮತ್ತು ಅವನಿಗೆ ಐದು ಮಕ್ಕಳು ಹಾಗು ಹೆಂಡತಿ ಇಲ್ಲ ಎಂದರೆ ಅಂತವನು ಏನು ಮಾದುತ್ತಾನೆ.... ಮಕ್ಕಳನ್ನು ದತ್ತು ಕೊಡಲು ನಿರ್ಧರಿಸಿ ಪತ್ರಿಕೆಯಲ್ಲಿ ಜಾಹಿರಾತು ನೀಡುತ್ತಾನೆ. ಇದೆ ಭೈರಪ್ಪನವರ 'ನಿರಾಕರಣೆ'ಯಾ ಕಥೆ. 

ಬೇರೆ ದಾರಿ ಕಾಣದೆ ಪತ್ರಿಕೆಯಲ್ಲಿ ಜಾಹಿರಾತು ಕೊಟ್ಟು ನರಹರಿ ತನ್ನ ಮಕ್ಕಳ ಬಳಿ ಹೆಚ್ಚು ಸಮಯ ಕಳೆಯಲೆಂದು ಪ್ರತಿ ದಿನ ಸಂಜೆ ಐದಕ್ಕೆ ಆಫೀಸ್ ಇಂದ ಹೊರಡಲು ನಿರದರಿಸುತ್ತಾನೆ. ಜಾಹಿರಾತು ಕೊಟ್ಟ ಒಂದು ಎರಡು ತಿಂಗಳಲ್ಲಿ ಐದು ಮಕ್ಕಳ್ಳನ್ನು ಒಳ್ಳೆ ಒಳ್ಳೆ ಮನೆಗೆ ಶೆಣೈ ಸಹಾಯದಿಂದ ದತ್ತು ಕೊಟ್ಟು ಸನ್ಯಾಸಿಯಾಗುತ್ತಾನೆ. ಸನ್ಯಾಸಿಯಾಗಿ ಅವನು ಊರೂರು ಅಲೆಯುತ್ತಾನೆ. ಹಿಮಾಲಯ ಏರುತ್ತಾನೆ, ನದಿಯಲ್ಲಿ ಈಜುತ್ತಾನೆ, ಬಿಕ್ಷೆ ಬೇಡಿ ಊಟ ಮಾಡುತ್ತಾನೆ. ಆದರೆ ಅವನು ಪೂರ್ವದಲ್ಲಿ ನಿರ್ಧರಿಸಿದಂತೆ ತನ್ನ ಎಲ್ಲ ಸಂಭಂದಗಳನ್ನು ಕಳೆದು ಕೊಳ್ಳಲು ಆಗುವುದಿಲ್ಲ. ಅವನಿಗೆ ತನ್ನ ಮಕ್ಕಳ ನೆನಪು, ಹೆಂಡತಿಯ ನೆನಪು ಮತ್ತು ತನ್ನ ಜೀವನದ ನೆನಪು ಎಲ್ಲ ಕಡೆಯಲ್ಲೂ ಬರುತಿರುತ್ತದೆ. ತಾನು ಮಾಡಿದ ನಿರ್ಧಾರ ತಪ್ಪಿರಬಹುದು, ತಾನು ಇನ್ನು ಕಷ್ಟ ಪಟ್ಟು ಕೆಲೆಸ ಮಾಡಿದ್ದರೆ ಮಕ್ಕಳನ್ನು ಸಾಕಬಹುದಿತ್ತೇನೋ, ದತ್ತು ಕೊಟ್ಟು ತಪ್ಪು ಮಾಡಿದೆ ಎಂದನಿಸುತ್ತದೆ. ಅತ್ತ ಪೂರ್ಣ ಸನ್ಯಾಸಿಯಾಗದೆ ಇತ್ತ ಪೂರ್ತಿ ಸಂಸಾರಿಯಾಗದೆ ಒದ್ದಾಡುತ್ತಾನೆ. ಕೊನೆಗೆ ಮತ್ತೆ ಮರಳಿ ಮುಂಬೈಗೆ ಬಂದು ಸೇರುತ್ತಾನೆ. 

ಅವನು ಬಂಡ ಮೇಲೆ ಮಕ್ಕಳ ನೆನಪು ಕಾಡುತ್ತದೆ. ಆದರೆ ಅವನು ದತ್ತು ಕೊಟ್ಟ ಮೇಲೆ ನೋಡಲು ಹೋಗಬಾರದು ಎಂದು ನಿರ್ಧರಿಸುತ್ತಾನೆ. ಅವನು ಕೆಲಸ ಮಾಡುವ ಹಾಸ್ಟೆಲ್ ನ ಲೆಕ್ಕ ಬರೆಯುವ ರಾಳೆ ಅವರಿಗೆ ತಿಳಿಯದ ಹಾಗೆ ಎಲ್ಲಾ ದತ್ತು ಮಕ್ಕಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರುತ್ತಾನೆ. ಅವರು ಏಗಿದ್ದಾರೆ, ಅವರೆಲ್ಲ ಏನು ಮಾಡುತ್ತಿದ್ದಾರೆ, ಅವರ ಜೀವನದ ಸ್ಥಿತಿ ಹೇಗಿದೆ ಎನ್ನುವುದನ್ನು ಅವನಿಗೆ ಹೇಳುತ್ತಾರೆ (ಅದನ್ನು ನೀವು ಓದಿ ತಿಳಿಯಿರಿ)

’ಬಂಧನಕ್ಕೆ ಮಿತಿ ಎಂಬುದು ಸುಳ್ಳು. ಅಂಟಿದರೆ ಪೂರ್ತಿಯಾಗಿಯೂ ಸೆಳೆದುಬಿಡುತ್ತದೆ - ವಿದ್ಯುತ್‍ಶಾಕ್‍ನಂತೆ. ಇಲ್ಲ, ಸ್ಪರ್ಶಕ್ಕೆ ಸಿಕ್ಕದಷ್ಟು ದೂರವೇ ಇರಬೇಕು. ಇದಕ್ಕೆ ಮಧ್ಯಮ ಸ್ಥಿತಿ ಇಲ್ಲ’ ಎಂಬ ಗ್ರಹಿಕೆಯಿಂದ ಅವನು ನಿರ್ಧರಿಸುತ್ತಾನೆ.

’ನೀರು ಹರಿಯದಿದ್ದಾಗಲೂ ಅದನ್ನು ನದಿ ಅನ್ನಬಹುದೇ?’

’ಇಲ್ಲ. ಅದು ಬರೀ ರೂಢಿಯ ಸಂಕೇತ. ಹರಿದರೆ ಮಾತ್ರ ಕಾಲ, ಹೆಪ್ಪುಗಟ್ಟಿದರೆ ಅಲ್ಲ..... ಉಷ್ಣ ಚಂಚಲ, ಶೀತ ಅಚಲ.’

ಹೆಪ್ಪುಗಟ್ಟಲೇಬೇಕೆಂದು ಬಯಲನ್ನು ನಿರಾಕರಿಸಿ ಬೆಟ್ಟವನ್ನು ಏರುತ್ತಾನೆ.

ಒಟ್ಟಿನಲ್ಲಿ ಹೇಳುವುದಾದರೆ ಕನ್ನಡ ಕಾದಂಬರೀ ಪ್ರಪಂಚದಲ್ಲಿ ಇದೊಂದು ವಿನೂತನ ಕೃತಿ.Thursday, June 12, 2014

ಸಮೀಕ್ಷೆ - ಶಿವರಾಮ ಕಾರಂತ


Sameekshe - Shivarama Karanth
ಈ ಬರಹ, ಕೆಲವು ವ್ಯಕ್ತಿಗಳನ್ನು ತನ್ನ ಮುಂದಕ್ಕಿರಿಸಿಕೊಂಡು, ಅವರ ಬಾಳಿನ ಸಮೀಕ್ಷೆ ನಡೆಯಿಸಲೆತ್ನಿಸುತ್ತದೆ. ಯಾವುದು ಸಾರ್ಥಕ, ಯಾವುದು ನಿರರ್ಥಕ? ಈ ‘ಅರ್ಥ’ ಯಶಸ್ಸಿನ ದೃಷ್ಟಿಯಿಂದಲ್ಲ-ಜೀವನ ಅರ್ಥವತ್ತಾಗಿ, ರಸವತ್ತಾಗಿ, ಸಹ್ಯವಾಗಿ ಕಾಣಿಸಬೇಕೆಂಬ ದೃಷ್ಟಿಯಿಂದ.

ಒಬ್ಬೊಬ್ಬರ ಬದುಕಿಗೆ ಒಂದೊಂದು ಆದರ್ಶ ನೆರವಾಗಬಹುದು. ಒಂದೊಂದು ಗುರಿ ಕೈದೀವಿಗೆಯಂತೆ ನಡೆಯಿಸಿಕೊಂಡು ಹೋಗಬಹುದು. ಒಬ್ಬನ ಬೆಳಕು ಇನ್ನೊಬ್ಬನಿಗೆ ಬೆಳಕೇ ಆಗಿ ಕಾಣಿಸದಿರಲೂ ಬಹುದು. ಈ ತತ್ವವನ್ನು ಒಪ್ಪಲು ಸಿದ್ಧವಿದ್ದವರಿಗೆ - ತಮ್ಮ ಆಚೀಚೆ ಅನೇಕ ಸುಂದರ ದೃಶ್ಯಗಳು ಕಾಣಿಸಬಹುದು. ಆದರೆ, ಹುಡುಕಿ ನೋಡಬೇಕು. ಯಶಸ್ಸು ಬಾಜಾರದಲ್ಲಿ ಮೆರೆಯಬಲ್ಲದು. ಕರ್ತವ್ಯವಾಗಿ ಮಾಡಿದ್ದು ಅಷ್ಟೊಂದು ಬೆಳಕಿಗೆ ಬರಲಾರದು.

ಸೂರ್ಯಕಾಂತಿ ಹೂವು ದೊಡ್ಡದಾಗಿ ಆಡಂಬರದಿಂದ, ಸೂರ್ಯನ ಬೆಳಕು ಬೀಳುವ ಕಡೆಗೇನೆ ಮುಖ ಹಿಡಿದು 'ನಾನಿದ್ದೇನೆ' ಎಂದು ಸಾರಿ ಹೇಳುತ್ತದೆ. ಗಿಡ =, ಹೂ, ಜೀವನ - ಹೇಗೆ ಇದ್ದರೂ, ಅದರ ಇರವು, ಕೀರ್ತಿ ಊರಿಂದೂರಿಗೆ ಹಬ್ಬುತ್ತ್ತದೆ. ಆದರೆ ನೈದಿಲೆ? ಕೆಸರಲ್ಲಿ ಹುಟ್ಟಿ, ಹಗಲೆಲ್ಲ ಕಾದು, ಚಂದಿರನ ಬಯಸಿ, ದೊರೆತ ಬೆಳಕಿನಿಂದ ಸಂತೋಷ ಪದೆಯುತ್ತದೆ.

ಸೂರ್ಯಕಾಂತಿ ಅರಳಿ, ಬಾಡಿ, ಉದುರಿವ ತನಕವೂ ಬೆಳಕಿನಲ್ಲಿ ಮೆರೆದಾದುತ್ತದೆ. ನೈದಿಲೆ ಅರಳುವ ತನಕವೂ ನೇರ ಕೆಲಗೇನೆ ಇದ್ದು, ಮೊದಲ ದಿನ ಮೇಲೆ ಬಂದು, ಮೂರು ದಿನ ಸಕಾಲದಲ್ಲಿ ಅರಳಿ, ಮುಚ್ಚಿ, ಸಾವು ಸಂನಿಹಿತವಾಗುವಾಗ ನೀರಲ್ಲಿ ತಲೆ ತಗ್ಗಿಸಿಕೊಂಡು ಅಡಗುತ್ತದೆ! ಒಂದಿಷ್ಟೂ ಆಡಂಬರವಿಲ್ಲ: ಬಂದುದೂ ಗೊತ್ತಿಲ್ಲ; ಹೋದುದೂ ಗೊತ್ತಿಲ್ಲ

ಯಾವುದು ಅರ್ಥವತ್ತಾದ ಬಾಳು?

ಅರ್ಥವರಿಯಲೆತ್ನಿಸಿ, ಅದರಂತೆ ಬಾಳಲೆತ್ನಿಸಿದ ಸೋಲೂ - ಯಶಸ್ವಿಯಾದುದಲ್ಲವೇನು? ಬಾಳಿನಲ್ಲಿ ಕಾಣಿಸದ ಅರ್ಥ ಎಲ್ಲಿದ್ದರೇನು? ಎಷ್ಟಿದ್ದರೇನು? ಯಾರ ಸಲುವಾಗಿ ಅದಿರಬೇಕು?

ಈ ಪ್ರಶ್ನೆಯನ್ನು ಉತ್ತರಿಸಲು, ತಮ್ಮ ನಿಜ ಜೀವನದಿಂದ ನೆರವಾದ ಹತ್ತಾರು ಸಾಮಾನ್ಯ ಜನರು, ನನಗೆ ಈ ಕಾದಂಬರಿಯ ವಸ್ತುವನ್ನು ಒದಗಿಸಿಕೊಟ್ಟು ಉಪಕಾರ ಮಾಡಿದ್ದಾರೆ. ಅಂಥವರ ಹಿರಿತನವನ್ನು ಮರೆಯುವಂತಿಲ್ಲ.

- ಶಿವರಾಮ ಕಾರಂತWednesday, May 28, 2014

ವಂಶವೃಕ್ಷ - ಎಸ್ ಎಲ್ ಭೈರಪ್ಪ

Vamshavruksha - S L Bhyrappa


ಈ ಕಾದಂಬರಿ ಮೂರು ತಲೆಮಾರಿನದ್ದು. ಈ ಕಾದಂಬರಿಯಲ್ಲಿ ಆಧ್ಯಾತ್ಮ, ವಿದವೆಯ ಮರು ಮದುವೆ, ಎರಡನೇ ಮದುವೆ, ಪ್ರೀತಿ, ಕಟ್ಟು ಪಾಡು ಎಲ್ಲವನ್ನು ಒಂದು ಸುಸಜ್ಜಿತ ರಂಗಮಂಚದ ಮೇಲೆ ತೋರಿಸುವಂತೆ ಭೈರಪ್ಪನವರು ಬರೆದಿದ್ದಾರೆ. ಇಲ್ಲಿ ನಾವು ತಿಯಬೇಕಾದ ವಿಷಯ ಏನೆಂದರೆ ಈ ಕಾದಂಬರಿ ಪ್ರಕತವಾದುದ್ದು ೧೯೬೫ರಲ್ಲಿ, ಆ ಕಾಲದಲ್ಲಿ ಭಾರತದಲ್ಲಿ ವಿದವೆಯ ಮರು ಮಾಡುವೆ ಎಂದರೆ ಮೂಗು ಮುರಿಯುತ್ತಿದ್ದರು ಅಂಥ ಕಾಲದಲ್ಲಿ ಈ ಕಾದಂಬರಿಯನ್ನು ಬರೆದಿದ್ದಾರೆ. ಇಲ್ಲಿ ಬರುವ ಪಾತ್ರಗಳು ಸಮಜಾದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುತ್ತಾರೆ. 

ಶ್ರೀನಿವಾಸ ಶ್ರೋತೃಗಳ ಮಗ ಕಪಿಲ ನದಿಯ ರಬಸಕ್ಕೆ ಸಿಲುಕಿ ಸತ್ತಿರುತ್ತಾನೆ, ಅವನ ಹೆಂಡತಿ ಕಾತ್ಯಯಿನಿ ಒಂದು ಗಂಡು ಮಗುವಿನ ತಾಯಿ. ಕಾತ್ಯಯಿನಿ ಗೆ ಇನ್ನು ಚಿಕ್ಕ ವಯಸ್ಸು ಶ್ರೀನಿವಾಸ ಶ್ರೋತೃಗಳು ಆಧ್ಯಾತ್ಮ ಮನೋಭಾವದವರಾದರು ಅದನ್ನು ಯಾರ ಮೇಲು ಹೇರುವುದಿಲ್ಲ ಅದಕ್ಕೆ ಮಗ ಸತ್ತ ಮೇಲೆ ಕಾತ್ಯಯಿನಿಗೆ ಸಂಪ್ರದಾಯದಂತೆ ತಲೆ ಬೋಳಿಸಿ ಕೆಂಪು ಸೀರೆ ಉಡಲು ಹೇಳುವುದಿಲ್ಲ. ಕಾತ್ಯಯಿನಿಗೆ ಮನೆಯಲ್ಲಿ ಗಂಡ ಇಲ್ಲ ಎನ್ನುವುದು ಬಿಟ್ಟರೆ ಬೇರೆ ತೊಂದರೆಗಳಿಲ್ಲ. ಅತ್ತೆ ತುಂಬ ಒಳ್ಳೆಯವರು, ಮನೆ ಕೆಲಸ, ಮಗು ಹಾಡಿಸುವುದರಲ್ಲಿ ಕಾಲ ಹೊಗುತ್ತದೆ. ಆದರು ಒಂದೊಂದು ದಿನ ಬೇಜಾರಾಗುವುದು ಸಾಮಾನ್ಯ. 

ಸದಾಶಿವರಾಯರು ಆಗ ತಾನೆ ಭಾರತದ ಐತಿಹಾಸಿಕ ಪುಸ್ತಕ ಬರೆದು ಇಂಗ್ಲೆಂಡಿನಲ್ಲಿ ಪ್ರಸಿದ್ದರಾಗಿದ್ದರು. ಈ ಪುಸ್ತಕ ಬರೆಯುವಾಗ ಶ್ರೀನಿವಾಸ ಶ್ರೋತೃಗಳು ತುಂಬಾ ಸಹಾಯ ಮಾಡಿದ್ದರು, ತಿದ್ದುವುದು, ಘಟನೆಯ ವಿವರಗಳು, ಯಾವುದೇ ವಿಷಯದ ಬಗ್ಗೆ ಚರ್ಚಿಸುವುದು ಸದಾಶಿವರಾಯರಿಗೆ ತುಂಬಾ ಅನುಕೂಲವಾಹಿತು ಅದಕ್ಕಾಗಿಯೆ ಅವರು ಈ ಪುಸ್ತಕವನ್ನು ಸದಾಶಿವರಾಯರಿಗೆ ಅರ್ಪಿಸಿದ್ದರು. ಈ ಪುಸ್ತಕವನ್ನು ಮೆಚ್ಚಿಗೆಯನ್ನು ನೋಡಿ ಮತ್ತು ಅವರ ಮನದ ಅಭಿಲಾಷೆಯಂತೆ ಅವರಿಗೆ ಭಾರತದ ಸಂಸೃತಿಕೆ ಸಂಭಂದಿಸಿದ ಒಂದು ದೊಡ್ಡ ಗ್ರಂಥವನ್ನು ರಚಿಸಬೇಕು ಎಂದನಿಸಿತು. ಅದನ್ನು ಪ್ರಾರಂಬಿಸುವ ಮುಂಚೆ ಶ್ರೀನಿವಾಸ ಶ್ರೋತೃಗಳ ತಿಳಿಸಿ ಆಶೀರ್ವಾದ ಪಡೆದರು. ಸದಾಶಿವರಾಯರಿಗೆ ಮನೆಯಲ್ಲಿ ಹೆಂಡತಿ ನಾಗ ಲಕ್ಷ್ಮಿ, ಮಗುಪೃಥ್ವಿ  ಮತ್ತು ತಮ್ಮ. ರಾಜ. 

ಕಾತ್ಯಯಿನಿಗೆ ಅವಳ ಗಂಡ ಅರ್ಧದಲ್ಲೇ ಬಿಟ್ಟ ಬಿ.ಎ ಪಾಸ್ ಮಾಡಬೇಕೆಂಬ ಆಸೆಯಾಗುತ್ತದೆ. ಮಾವನ ಒಪ್ಪಿಗೆ ಸಿಕ್ಕ ಮೇಲೆ ಮೈಸೂರಿನ ಕಾಲೇಜ್ ನಲ್ಲಿ ಸೇರುತ್ತಾಳೆ, ಅಲ್ಲಿ ರಾಜನ ಪರಿಚವಾಗುತ್ತದೆ. ಪರಿಚಯ ಪ್ರೀತಿಯಾಗಿ ಬೆಳೆದು ಒಬ್ಬರನೊಬ್ಬರು ಬಿಟ್ಟು ಇರಲಾರದೆ ರಿಜಿಸ್ಟರ್ ಮಾಡುವೆ ಯಾಗುತ್ತಾರೆ. ಇತ್ತ ಸದಾಶಿವರಾಯರು ತಮ್ಮ ಸಂಶೋದನೆಗೆ ಇಡಿ ಭಾರತವನ್ನು ಸುತ್ತುರಿತ್ತಾರೆ ಆಗೇ ಪರಿಚಯವಾದ ಕರುಣಾ ರತ್ನೆ ಪರಿಚವಾಗಿ ಅವಳ ಸಹವಿಲ್ಲದೆ ತಾನು ಗ್ರಂಥವನ್ನು ರಚಿಸಲ್ಲರೆ ಎಂದು ತಿಳಿದು ಎರಡನೇ ಮದುವಯಾಗುತ್ತಾರೆ. ಹೇಗೆ ಮುಂದೆ ಅವರ ಜೀವನ ಹೇಗೆ ಸಾಗುತ್ತದೆ, ಅತ್ತೆ ಮಾವನ ಸ್ತಿತಿ ಏನು, ನಾಗಲಕ್ಷ್ಮಿ ಏನಾಗುತ್ತಾಳೆ ಎಲ್ಲವನ್ನು ಅರ್ಥ ಗರ್ಭಿತವಾಗಿ ಬರೆದಿದ್ದಾರೆ ಭೈರಪ್ಪನವರು. 

ಇಲ್ಲಿ ಭೈರಪ್ಪನವರು ಸಮಾಜದ ಮೂಲ ಕಷ್ಟಗಳನ್ನು ಎತ್ತಿ ಅದರ ಪರಿಹಾರ ಹೇಗೆ ಮತ್ತು ನಮ್ಮ ಕಟ್ಟು ಪಾಡುಗಳನ್ನು ಮೀರಿ ಹೇಗೆ ಜೀವನ ಮಾಡಬೇಕು ಎಂದು ತಿಳಿಸಿದ್ದಾರೆ. ಇದು ಎಂಥ ಅಧ್ಬುತ ಕೃತಿ ಎನ್ನುವುದಕ್ಕೆ ಸಾಕ್ಷಿ ಇದು ೧೭ನೆ ಮುದ್ರಣ ಕಂಡಿದೆ ಮತ್ತು ಈ ಕೃತಿ ತೆಲಗು, ಮರಾಠಿ, ಹಿಂದಿ, ಉರ್ದು, ಇಂಗ್ಲಿಷ್, ಸಂಸೃತ ಅನುವಾದ ವಾಗಿದೆ. 


ಇನ್ನೊಂದು ವಿಮರ್ಶೆ:

ನಮ್ಮ ಮನೆಯ ಬಳಿ ಒಂದು ನಗರ ಕೇಂದ್ರ ಗ್ರಂಥಾಲಯವಿದೆ. ಅಲ್ಲಿ ಹೊಸ ಪುಸ್ತಕಗಳೇನು ಇಲ್ಲದಿದ್ದರು, ಹಿಂದೆ ಪ್ರಕಟವಾದ ಕೆಲವು ಒಳ್ಳೆಯ ಪುಸ್ತಕಗಳ ಸರಕು ಅಲ್ಲಿದೆ. ಆ ಪುಸ್ತಕಗಳಲ್ಲಿ ಭೈರಪ್ಪನವರ ಕೆಲವು ಪುಸ್ತಕಗಳೂ ಇದ್ದುವು. ವಂಶವೃಕ್ಷ ನಾನು ಹಿಂದೆಯೇ ಓದಿದ್ದ ಕೃತಿ. ಆದರೆ ಆಗ ಓದಿದ್ದು ಆಂಗ್ಲದ ಅನುವಾದದಲ್ಲಿ. ಈ ಪುಸ್ತಕವನ್ನು ನಾನೋದಿದ್ದೇನೆ ಎಂದು ತಿಳಿದಿದ್ದೆ. ಆದರೂ ಒಮ್ಮೆ ಮೂಲದ ಕನ್ನಡದಲ್ಲಿ ಓದಿ ನೋಡೋಣವೆಂಬ ಆಸಕ್ತಿ. ಮನೆಗೆ ತಂದಾಗ ನನಗೆ ಮತ್ತೆ ತಿಳಿಯಿತು - ಎಷ್ಟೇ ಒಳ್ಳೆಯ ಅನುವಾದವಾದರೂ ಮೂಲದ ಸೊಗಡನ್ನು ಉಳಿಸಿಕೊಳ್ಳುವುದು ಕಷ್ಟ ಎಂದು. ಖ್ಯಾತ ಸಿನೆಮಾ ಕೂಡ ಆದ ವಂಶವೃಕ್ಷದಲ್ಲಿ ಈ ನಿಜ ಪ್ರಖರವಾಗಿ ಗೋಚರಿಸಿತು. 

ವಂಶವೃಕ್ಷ ನಂಜನಗೂಡು-ಮೈಸೂರು ಪ್ರಾಂತಗಳಲ್ಲಿರುವ ಕುಟುಂಬಗಳ ಕಥೆ. ಭೈರಪ್ಪನವರ ಕಥಾಪುಸ್ತಕಗಳ ಹೆಸರುಗಳು ಕಥೆಯನ್ನು ಬಹಳ ಚೆನ್ನಾಗಿ ಸೂಕ್ತವಾಗಿ ಪ್ರತಿಬಿಂಬಿಸುತ್ತವೆ. ಇಲ್ಲಿಯೂ ಹಾಗೆಯೇ. ಈ ಕಥೆಗೆ "ವಂಶವೃಕ್ಷ" ಎಂಬ ಹೆಸರು ಎಷ್ಟು ಸರಿಯೆಂಬುದು ಪುಸ್ತಕದ ಮಧ್ಯದಿಂದ ತಿಳಿಯಲು ಪ್ರಾರಂಭವಾಗಿ ಕಥೆ ಕೊನೆಗೊಳ್ಳುವೆ ವೇಳೆ ಆ ವೃಕ್ಷ ನಮ್ಮ ಕಲ್ಪನೆಯನ್ನೆಲ್ಲಾ ವ್ಯಾಪಿಸಿಬಿಟ್ಟಿರುತ್ತದೆ. 

ಕರ್ಮಠರಾದ ಆದರೆ ವಿದ್ವಾಂಸ ಹಾಗು ಯೋಚನಾಶಕ್ತಿಯನ್ನು ಹೊಂದಿದ ಶ್ರೀನಿವಾಸ ಶ್ರೋತ್ರಿಗಳು ಈ ಕಥೆಯ ಮುಖ್ಯ ಪಾತ್ರ. ಇವರೇ ಈ ವಂಶವೃಕ್ಷದ ಕಥೆಗೆ ಬೇರು ಮತ್ತು ಮರದ ಮುಖ್ಯ ಭಾಗ. ಕಥೆ ಇವರ ಮಗನಾದ ನಂಜುಂಡ ಶ್ರೋತ್ರಿಯನ ಮರಣದೊಂದಿಗೆ ಆರಂಭವಾಗುತ್ತದೆ. ಮಗನನ್ನು ಕಳೆದುಕೊಂಡ ತಾಯಿ ಭಾಗೀರಥಮ್ಮ, ಗಂಡನನ್ನು ಕಳೆದುಕೊಂಡ ಕಾತ್ಯಾಯನಿ ಮತ್ತು ತನಗೆ ತಿಳಿಯುವ ಮುಂಚೆಯೇ ತಂದೆಯನ್ನು ಕಳೆದುಕೊಂಡ ಮಗು ಚೀನಿ ಆರಂಭದಲ್ಲಿ ಕಾಣುತ್ತಾರೆ. ಇದೇ ಕುಟುಂಬಕ್ಕೆ ಸೇರಿದ ಮತ್ತೊಂದು ಬಹಳ ಒಳ್ಳೆಯ ಪಾತ್ರ - ಕೆಲಸದವಳಾದರೂ ಮನೆಯ ಸದಸ್ಯೆಯಂತೆ ನಡೆಯುವ ಲಕ್ಷ್ಮಿಯದು. 

ಈ ಕುಟುಂಬಕ್ಕೆ ಒಂದು ವಿದ್ವತ್ತಿನ ಸಂಬಂಧದಿಂದ ಮತ್ತೊಂದು ಕುಟುಂಬ ಸೇರುತ್ತದೆ. ಮೈಸೂರಿನ ವಿಶ್ವವಿದ್ಯಾಲಯದಲ್ಲಿ ಇತಿಹಾಸದ ಪ್ರಾಧ್ಯಾಪಕರು ಮತ್ತು ಸಂಶೋಧಕರು ಆದ ಸದಾಶಿವರಾಯರದೇ ಈ ಕುಟುಂಬ. ಇವರಿಗೆ ಒಬ್ಬ ತಮ್ಮ - ಇಂಗ್ಲೀಷಿನ ಅಧ್ಯಾಪಕ ಹಾಗು ನಾಟಕಪ್ರಿಯ ಆಧುನಿಕ - ರಾಜಾರಾಯ. ಸದಾಶಿವರಾಯರ ಹೆಂಡತಿಯಾದ ಮುಗ್ಧೆ ನಾಗಲಕ್ಷ್ಮಿ. ಇವರ ಮಗ ಪೃಥ್ವಿ. 

ಮರಣಿಸಿದ ಪತಿಯ ಬಿ.ಏ ಓದುವ ಆಸೆಯನ್ನು ನೆರವೇರಿಸುವ ನಂಬಿಕೆಯನ್ನು ಹೊಂದಿದ ಕಾತ್ಯಾಯನಿ ನಂಜನಗೂಡಿನಿಂದ ಮೈಸೂರಿನ ಕಾಲೇಜಿಗೆ ಹೋಗುವ ಪ್ರಸಂಗದೊಂದಿಗೆ ಕಥೆಗೆ ತಿರುವು ಸಿಗುತ್ತದೆ. ಅತ್ತೆ ಒಪ್ಪದಿದ್ದರೂ ಮಾವನವರು ಒಪ್ಪಿ ಸೊಸೆಯನ್ನು ಕಳಿಸುತ್ತಾರೆ. ಅಲ್ಲಿ ಆಕೆ ರಾಜಾರಾಯನ ಸಂಪರ್ಕವನ್ನು ಹೊಂದುತ್ತಾಳೆ. ಯೌವನಾವಸ್ಥೆಯ ಈರ್ವರ ಸಂಪರ್ಕ ಪರಿಚಯದಿಂದ ಪ್ರೇಮಕ್ಕೆ, ಪ್ರೇಮದಿಂದ ಉತ್ಕಟವಾದ ಪ್ರೇಮಕ್ಕೆ ತಿರುಗುವುದನ್ನು ಭೈರಪ್ಪನವರು ಚೆನ್ನಾಗಿ ನಿರೂಪಿಸಿದ್ದಾರೆ. ಒಂದು ಕಡೆ ತನ್ನ ಮರಣಿಸಿದ ಪತಿಯ ಕುಟುಂಬದ ಕಡೆಗಿನ ಕರ್ತವ್ಯ, ಮತ್ತೊಂದು ಕಡೆ ತನ್ನ ಯೌವನದ ಸಹಜ ವಾಂಛೆಗಳು - ಇವೆರಡರ ನಡುವೆ ಡೋಲಾಯಮಾನವಾದ ಕಾತ್ಯಾಯನಿಯ ಅವಸ್ಥೆ ಮನೋಜ್ಞವಾಗಿ ವರ್ಣಿತವಾಗಿದೆ. ಕೊನೆಗೆ ಆಶೆಯ ಮಹಾಪೂರ ಅವಳ ಧಮನಿಗಳಲ್ಲಿ ಹರಿಯುತ್ತಿದ್ದ ಸಂಪ್ರದಾಯವನ್ನು ಆ ಕಾಲಕ್ಕಾದರೂ ಮುಳುಗಿಸಿ ರಾಜಾರಾಯನ ಜೊತೆಗೆ ಮದುವೆ ನಡೆದುಹೋಗುತ್ತದೆ. ಇಲ್ಲಿ ಒಂದಂಶವನ್ನು ಗಮನಿಸಲೇ ಬೇಕು. ಇಪ್ಪತ್ತನೆಯ ಶತಮಾನದ ಮೊದಲನೆಯ/ಎರಡನೆಯ ದಶಕದಿಂದ ಮೂರು-ನಾಲ್ಕು ದಶಕಳ ಕಾಲ ನಡೆಯುವ ಈ ಕಥೆಯಲ್ಲಿ ಈ ಮದುವೆ ನಡೆಯುವ ಸಮಯದಲ್ಲಿ ವಿಧವಾ ವಿವಾಹಕ್ಕೆ ಮೈಸೂರಂಥ ಸಂಪ್ರದಾಯಸ್ಥ ನಗರ ಸರಿಯಾದ ತಾಣವಾಗಿರಲಿಲ್ಲ. ಈ ಸಂಗತಿ ಕಾತ್ಯಾಯನಿಯ ಯೌವನದ ಬಯಕೆಗಳ ತೀಕ್ಷ್ಣತೆಯನ್ನು ಮತ್ತು ಅವಳ ಸ್ವಾತಂತ್ರ್ಯಪ್ರೀತಿಯನ್ನು ಎತ್ತಿ ತೋರಿಸುತ್ತದೆ. 

ಇನ್ನೊಂದು ಕಡೆ ಸದಾಶಿವರಾಯರ ಕನಸು. ಅವರದು ಭಾರತೀಯ ಸಂಸ್ಕೃತಿ ಮತ್ತು ಇತಿಹಾಸಗಳನ್ನು ಕುರಿತು ಉದ್ಗ್ರಂಥವನ್ನು ರಚಿಸಬೇಕೆಂಬ ಹಂಬಲ. ಸಾಕಷ್ಟು ಸಾಮರ್ಥ್ಯ ಅವರಲ್ಲಿತ್ತು ಎಂಬುದನ್ನು ಭೈರಪ್ಪನವರು ನಮಗೆ ತೋರಿಸುತ್ತಾರೆ. ಇವರ ವಿದ್ವನ್ಮಿತ್ರರು ನಂಜನಗೂಡಿನ ಶ್ರೀನಿವಾಸ ಶ್ರೋತ್ರಿಯರು. ಇಬ್ಬರೂ ವಿದ್ವಾಂಸರಾದರು ಅವರಲ್ಲಿರುವ ಭೇದವನ್ನು ಭೈರಪ್ಪನವರು ಸೂಕ್ಷ್ಮವಾದರೂ ಸೊಗಸಾಗಿ ತೋರಿದ್ದಾರೆ. ಸದಾಶಿವರಾಯರದ್ದು ಪಾಶ್ಚಾತ್ಯರ ರೀತಿ. ಅಧ್ಯಯನ ಮಾಡಬೇಕು, ಗ್ರಂಥರಚನೆ ಮಾಡಬೇಕು ಎಂಬ ಹಂಬಲ, ಸ್ವಲ್ಪ ಕೀರ್ತಿಯ ಆಸೆಯೂ ಕಾಣುತ್ತದೆ. ಸಂಸ್ಕೃತಿಯ ಅಧ್ಯಯನಕ್ಕೂ ಜೀವನಕ್ಕೂ ಸಂಬಂಧವಿಲ್ಲದ ಹಾಗೆ ನಡೆಯುತ್ತಾರೆ. ಅಧ್ಯಯನಕ್ಕಾಗಿ ಅಧ್ಯಯನ ಎಂಬುದು ಅವರ ರೀತಿ. ಆದರೆ ಶ್ರೀನಿವಾಸ ಶ್ರೋತ್ರಿಯರದು ಅಪ್ಪಟ ಭಾರತೀಯ ರೀತಿ. ಸದಾಶಿವರಾಯರ ಸಂದೇಹಗಳನ್ನು ಪುಸ್ತಕಗಳನ್ನು ನೋಡದೆಯೇ ಪರಿಹರಿಸಬಲ್ಲ ವಿದ್ವತ್ತು ಇವರಲ್ಲಿದ್ದರೂ, ಪುಸ್ತಕ ರಚನೆಗೆ ಕೈಹಾಕಿದವರಲ್ಲ. ಕೀರ್ತಿಯ ಲಾಲಸರಲ್ಲ. ತಮ್ಮ ಓದನ್ನೆಲ್ಲ ಬದುಕಿನಲ್ಲಿ ಕಾಣಿಸುವ ಋಷಿಕಲ್ಪ ವ್ಯಕ್ತಿತ್ವ ಇವರದು. ಭೈರಪ್ಪನವರ ideal ಏನು, ಅವರ ವೈಯಕ್ತಿಕ ಅಭಿಪ್ರಾಯವೇನು, ಅವರ ಒಲವೆಲ್ಲಿದೆ ಎಂದು ಇವರಿಬ್ಬರ ಪಾತ್ರಗಳ ಅಧ್ಯಯನದಿಂದ ಚೆನ್ನಾಗಿ ತಿಳಿಯಬಹುದು. ಭೈರಪ್ಪನವರಿಗೆ ಪಾಶ್ಚಾತ್ಯರ ಬಗ್ಗೆ ಗೌರವ ಮತ್ತು ಕಾಳಜಗಳಿವೆ, ಆದರೆ ಭಾರತೀಯ ವಿಚಾರಧಾರೆಯಲ್ಲಿ ಶ್ರದ್ಧೆಯಿದೆ ಎಂಬುದನ್ನು ಸುವಿದಿತ ಮಾಡಿಸುತ್ತಾರೆ.

ಸದಾಶಿವರಾಯರ ಹಂಬಲವು ಬೌದ್ಧಿಕ ಸಾಹಚರ್ಯವನ್ನು ಅಪೇಕ್ಷಿಸುವ ಬಗೆ ಸೊಗಸಾಗಿ ವ್ಯಕ್ತವಾಗಿದೆ. ಓದು-ಬರಹ ತಿಳಿಯದ ಪತ್ನಿಯಿಂದ ಬೌದ್ದಿಕ ಸಾಹಚರ್ಯ ಸಿಗದ ರಾಯರಿಗೆ ಶ್ರೀಲಂಕದವಳಾದ ಕೇಂಬ್ರಿಡ್ಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಕರುಣಾ ರತ್ನೆ ಜೊತೆಯಾಗಿ ಸಿಗುತ್ತಾಳೆ. ವಿದ್ಯಾರ್ಥಿನಿಯಾಗಿ ರಾಯರ ಜತೆ ಕೆಲಸ ಮಾಡಲು ಪ್ರಾರಂಭಿಸುವ ಕರುಣಾಳಿಗೆ ಕ್ರಮೇಣ ರಾಯರು ಅನಿವಾರ್ಯರಾಗುತ್ತಾರ, ಜೀವನದ ಗುರಿಯನ್ನು ತಲುಪಲು ಸಾಧನವಾಗುತ್ತಾರೆ. ರಾಯರಿಗೂ ಹಾಗೇ ಆಗಿ ಇಬ್ಬರೂ ಸಿವಿಲ್ ಮದುವೆ ಕೂಡ ಆಗುತ್ತಾರೆ. ಒಂದಂಶ ಇಲ್ಲಿ ನನಗೆ ಅಷ್ಟು ಹಿಡಿಸಲಿಲ್ಲ . ಕರುಣಾ ಎಂಬ ಸೊಗಸಾದ ಹೆಸರನ್ನು ಪಡೆದವಳನ್ನು ಭೈರಪ್ಪನವರು "ರತ್ನೆ" ಎಂದೇ ರಾಯರಿಂದ ಕರೆಸುತ್ತಾರೆ. ರತ್ನೆಯೆಂಬುದು surname. ಪತಿಪತ್ನಿಯರಿಬ್ಬರ ನಡುವೆ ಈ surname ಸಂಬೋಧನೆ ಅಷ್ಟು ಸರಿಯಿಲ್ಲ. ಅಥವಾ - ಇವರಿಬ್ಬರೂ ತಮ್ಮ profession ಗಾಗಿಯೇ ಹತ್ತಿರ ಬಂದದ್ದು, ಕೊನೆಯವರೆಗೂ ಇವರ ಸಂಬಂಧ ಹಾಗೆಯೇ ಉಳಿಯಿತು ಎಂಬುದನ್ನು ಓದುಗರಿಗೆ ಚೆನ್ನಾಗಿ ತಿಳಿಸುವುದಕ್ಕೆ ಹೀಗೆ ಉತ್ಪ್ರೇಕ್ಷೆ ಮಾಡಿದ್ದಾರೋ ಏನೋ! ದ್ವಿಪತ್ನೀತ್ವದಲ್ಲಿ ಓದದ ಹೆಂಡತಿಗೆ ತೊಂದರೆಯಿಲ್ಲ, ಆದರೆ ಓದಿದ ಹೆಂಡತಿಗೆ ತೊಂದರೆ. ಈ ಇಕ್ಕಟ್ಟಿನಲ್ಲಿ ಸದಾಶಿವರಾಯರನ್ನು ಸಿಕ್ಕಿಸಿ ಕೊನೆಯವರೆವಿಗೂ ಒದ್ದಾಡಿಸುತ್ತಾರೆ. ಏನೂ ತಿಳಿಯದ ಹೆಂಡತಿ ಆತಂಕದ ಸಮಯದಲ್ಲಿ ರಾಮನಾಮವನ್ನು ಬರೆದು ದುಗುಡ ಮರೆಯಲು ಯತ್ನಿಸಿ ಮರೆಯುವುದರಲ್ಲಿ ಯಶಸ್ವಿನಿಯೂ ಆಗುತ್ತಾಳೆ. ಇದರಿಂದ ಭೈರಪ್ಪನವರು ಮುಗ್ಧ ನಂಬಿಕೆಗೆ ಒಳ್ಳೆಯ ಸ್ಥಾನವನ್ನೇ ಕೊಟ್ಟ ಹಾಗೆ ಕಾಣುತ್ತದೆ. ಇದರಿಂದ ನಾಗಲಕ್ಷ್ನ್ಮಿಯಲ್ಲಿ ಮೂಡುವ ಒಂದು ನಿರ್ಲಿಪ್ತತೆ ಕೂಡ ನಿದರ್ಶನವೆಂಬುದಾಗಿ ಸಾರಿದ್ದಾರೆ.

ಕಾತ್ಯಾಯನಿ ಮದುವೆಯಾದ ಆರಂಭದ ದಿನಗಳಲ್ಲಿ ಬಹಳ ಸಂತೋಷದಿಂದಿದ್ದರೂ ಒಂದೆರಡು ವರ್ಷಗಳಲ್ಲಿ ತನ್ನ ಹಳೆಯ ಕುಟುಂಬದ ಬಗ್ಗೆ ನೆನಪು ಮಾಡಿಕೊಳ್ಳುತ್ತಾಳೆ. ಜತೆಗೆ ಅವಳಿಗಾಗುವ ಗರ್ಭಪಾತಗಳಿಂದ ಅವಳಿಗೆ ಮಕ್ಕಳಾಗಲು ಸಾಧ್ಯವಿಲ್ಲದೇ ಹೋಗುತ್ತದೆ. ಇದಾದ ಮೇಲಂತೂ ತನ್ನ ಮಗನಾದ ಚೀನಿಯ ಬಗ್ಗೆ ಹೆಚ್ಚಿನ ವಾತ್ಸಲ್ಯ ಅವಳಲ್ಲಿ ಮೂಡಿದರೂ ಏನೂ ಮಾಡಲಾರದೆ ಹೋಗುತ್ತಾಳೆ. ಚೀನಿಯನ್ನು ಕರೆತರುವ ಅವಳ ಪ್ರಯತ್ನಗಳು ವಿಫಲವಾಗಿ ಅವಳ ಖಿನ್ನತೆಗೆ ದಾರಿಯಾಗುತ್ತವೆ. ದುರದೃಷ್ಟವಶಾತ್ ಕಾತ್ಯಾಯನಿಯು ಈ ಗರ್ಭಪಾತಗಳೆಲ್ಲ ಅವಳ ಮಾವನವರ ಮನೆಯನ್ನು ಬಿಟ್ಟೂ ಪುನರ್ವಿವಾಹವಾದದ್ದಕ್ಕೆ ಎಂದು ಬಗೆದು ಮಾನಸಿಕ ರೋಗಕ್ಕೆ ತುತ್ತಾಗುತ್ತಾಳೆ. ಕಾಲೇಜಿಗೆ ಬರುವ ಮಗನೂ ಸಹ ತನ್ನನ್ನು ನಿರಾಕರಿಸಿದಾಗ ಅವಳ ರೋಗ ಉಲ್ಬಣಿಸಿ ಸಮಾಧಾನವಿಲ್ಲದೆಯೇ ಕೊರಗುತ್ತಾಳೆ. 

ಈಕೆಯ ವಿಧವಾ-ವಿವಾಹ ಮತ್ತು ವಂಶವೃಕ್ಷದ ಕಲ್ಪನೆಯ ನಡುವಿನ ಘರ್ಷಣೆ ಕೆಲವು ಒಳ್ಳೆಯ ಚಿಂತನೆಗಳನ್ನು ಮೂಡಿಸಿದೆ. ಭೈರಪ್ಪನವರು ಎತ್ತುವ ಪ್ರಶ್ನೆ - ಒಂದು ವಂಶವೃಕ್ಷದ ಬೀಜವನ್ನು ಫಲಿಸಿದ ಕ್ಷೇತ್ರ ಮತ್ತೊಂದು ವಂಶದ ಕ್ಷೇತ್ರವಾಗುವಾಗ ಏನಾಗಬಹುದು - ಎಂಬುದು? ಈ ಪ್ರಶ್ನೆ ಓದುಗರನ್ನೂ ಕಾಡಿಸುತ್ತದೆ. ಪುಸ್ತಕ ಓದಿದ ಬಹಳ ದಿನಗಳ ಮೇಲೆಯೂ!

ಬರುಬರುತ್ತಾ ಕೊನೆಯ ನೂರು ಪುಟಗಳಲ್ಲಿ ಅಕಸ್ಮಾತ್ತಾಗಿ ಗೋಚರವಾಗುವ ಸತ್ಯ ಶಾಂತರೂ ದಾಂತರೂ ಆದ ಶ್ರೀನಿವಾಸ ಶ್ರೋತ್ರಿಯರಿಗೂ ಆಘಾತಕರವಾಗಿ ಪರಿಣಮಿಸುತ್ತದೆ. ಪುತ್ರನ ಆಕಸ್ಮಿಕ ಮರಣದ ಸಮಯದಲ್ಲೂ ಅಲ್ಲಾಡದ ಬೆಟ್ಟದಂಥಿದ್ದ ಅವರ ವ್ಯಕ್ತಿತ್ವ ಈ ಸತ್ಯದಿಂದ ಸ್ವಲ್ಪ ಪೆಟ್ಟು ತಿನ್ನುತ್ತದೆ. (ಅದು ಏನು ಎಂದು ನಾನು ಹೇಳಿದರೆ ಓದುಗರಾದ ನೀವು ಈ ಪುಸ್ತಕವನ್ನು ಓದದೇ ಇರಬಹುದು. ಪುಸ್ತಕ ಓದಿದವರಿಗೆ ಹೇಗಿದ್ದರೂ ಗೊತ್ತು ತಾನೆ?) ವಂಶದ ಬಗ್ಗೆ ಬಹಳ ಹೆಚ್ಚಿನ ಗೌರವವಿರಿಸಿದ ಶ್ರೋತ್ರಿಯರಿಗಂತೂ ಈ ಆಘಾತ ಕಷ್ಟಸಹ್ಯವಾಗುತ್ತದೆ. ಅಷ್ಟೇ ಏಕೆ? ಅವರ ವಂಶಗೌರವವೆಂಬ ಕಲ್ಪನೆಯನ್ನೇ ಬುಡಮೇಲು ಮಾಡುತ್ತದೆ. ಆದರೆ ಹಿಂದೆ ಆತಂಕ ಮೂಡಿಸುವ ದುವಿಧೆಗಳಲ್ಲಿ ಗೆದ್ದು ಬಂದಿದ್ದ ಶ್ರೋತ್ರಿಯರು ಇಲ್ಲಿಯೂ ಕಡೆಯಲ್ಲಿ ಗೆಲ್ಲುತ್ತಾರೆ. "ಧರ್ಮದ ಮಾರ್ಗದಲ್ಲಿ ನಡೆಯುವವರಿಗೆ ಧರ್ಮವೇ ಮಾರ್ಗ ತೋರುತ್ತದೆ" ಎಂಬ ಅಚಲ ನಂಬಿಕೆಯನ್ನು ಹೊಂದಿದ ಶ್ರೋತ್ರಿಯರು ಅಂತ್ಯದಲ್ಲಿ ಭಾರತೀಯ ಆಶ್ರಮಧರ್ಮದ ಪಾಲನೆಯನ್ನೇ ಮಾಡುತ್ತಾರೆ. 

ಒಂದು ಭಾಗವನ್ನು ಮಾತ್ರ ಇಲ್ಲಿ ನಂಬಲು ಕಷ್ಟ. ಮನೆಯ ಕೆಲಸದವಳಾದ, ಶ್ರೋತ್ರಿಯರಿಗಿಂಥ ಸ್ವಲ್ಪ ಚಿಕ್ಕವಳಾದ ಲಕ್ಷ್ಮಿಗೆ ತಿಳಿದ ಒಂದು ಸತ್ಯ ಇವರಿಗೆ ಹೇಗೆ ತಿಳಿಯದೇ ಹೋಯಿತೆಂಬುದು. ಅದೂ ಅದೇ ಊರಿನಲ್ಲಿಯೇ ಇದ್ದಂಥವರಾದ ಶ್ರೋತ್ರಿಯರು ತಕ್ಕ ಮಟ್ಟಿಗೆ ಜನಜನಿತವಾದ ಒಂದು ವಾರ್ತೆಯನ್ನು ತಿಳಿಯದೇ ಹೋದರಲ್ಲಾ ಎಂದು ನಂಬಲು ಸ್ವಲ್ಪ ಕಷ್ಟ. ಆದರೂ ಹೇಳುತ್ತಾರಲ್ಲಾ, ಕಾವ್ಯಾಸ್ವಾದನೆಗೆ ಅಥವಾ ರಸಾಸ್ವಾದನೆಗೆ ಮೊದಲಿಗೆ ಬೇಕಾಗಿರುವುದು ಕೋಲ್ರಿಜ್ ಹೇಳಿದ "willing suspension of disbelief". ನಾವೂ ಇಲ್ಲಿ ಅದನ್ನೇ ಆಶ್ರಯಿಸಿದಾಗೆ ಒದುಗರಿಗೆ ಒಂದು ಅದ್ಭುತ ಪ್ರಸಂಗ ಮೂಡುತ್ತದೆ. ಒಬ್ಬ ಮಹಾಪುರುಷನು ಒದಗಿದ ಕಷ್ಟವನ್ನು ಹೇಗೆ ನಿಭಾಯಿಸಬಲ್ಲ ಎಂಬುದು ಎಲ್ಲ ಓದುಗರಿಗೆ ಆಗುವ ಒಂದು ಪಾಠ. ಅದನ್ನು ದರ್ಶನಶಾಸ್ತ್ರವನ್ನು ಅಭ್ಯಸಿಸಿದ ಭೈರಪ್ಪನವರು ಚೆನ್ನಾಗಿಯೇ ಮಾಡಿಸುತ್ತಾರೆ. 

ಈ ಪುಸ್ತಕದ ಮೇಲೆ ಚಿತ್ರವನ್ನು ಮಾಡಿದ ಗಿರೀಶ್ ಕಾರ್ಣಾಡರ ಪ್ರಕಾರ ಈ ಸಿನಿಮಾ ಕೃತಿ ತಮ್ಮ ಅತ್ಯಂತ ದುರ್ಬಲ ಕೃತಿಗಳಲ್ಲಿ ಒಂದು ಎಂಬುದು. ಹಾಗೆ ಹೇಳಲು ಕಾರಣ ಸ್ವಲ್ಪವಿದೆಯೋ ಏನೋ! ಕಾತ್ಯಾಯನಿಯ ಪಾಡು ಎಂಥ ನಾಯಿಗೂ ಬೇಡವೆಂಬಂತೆ ನಿರೂಪಿಸಿದ ಭೈರಪ್ಪನವರು ಆಧುನಿಕ ಕಾದಂಬರಿಕಾರನ ಮುಸುಕು ಹಾಕಿಕೊಂಡ "ಸನಾತನಿ" ಎಂಬುದೇ ಆ ಕಾರಣವಿರಬಹುದೇ? ಆಧುನಿಕನಾದ ನನ್ನಲ್ಲೂ ಈ ವಿಷಯ ಸ್ವಲ್ಪ ಕಳವಳ ಮೂಡಿಸದೇ ಇರಲಿಲ್ಲ. ಈಗ ಯುವತಿಯಾದ ಒಬ್ಬ ವಿಧವೆ ಮತ್ತೆ ಮದುವೆಯೇ ಆಗಬಾರದೇ? ಮಕ್ಕಳಿಲ್ಲದಿದ್ದರೆ ಹೇಗೆ? ಮಕ್ಕಳಿದ್ದರೆ ಹೇಗೆ? ಇಲ್ಲಿ ಅಸಂಖ್ಯಾತ ಸಾಧ್ಯತೆಗಳಿದ್ದರೂ ಅವುಗಳಲ್ಲಿ ಒಂದನ್ನು ತೋರಿಸಿ ಈ ವಿಷಯದ ಬಗ್ಗೆ ಚಿಂತನೆಯನ್ನು ಪ್ರಚೋದಿಸುವುದೇ ಭೈರಪ್ಪನವರ ಕಥನಾಕೌಶಲವೆಂದು ಹೇಳಬೇಕೇ ಹೊರತು "ಅವರು ಹಾಗೆ ಚಿತ್ರಿಸಿದ್ದಾರೆ, ಆದ್ದರಿಂದ ಅವರು ಸನಾತನಿಗಳು" ಎಂದು ಹೇಳುವುದು ನನ್ನ ಪ್ರಕಾರ ಸರಿಯೆನಿಸುವುದಿಲ್ಲ. 

ಇನ್ನೊಂದು ಸಣ್ಣ ತಪ್ಪೂ ಪುಸ್ತಕದಲ್ಲಿದೆ. ಕೊಲಂಬಸನು ಅಮೇರಿಕೆಯನ್ನು ಕಂಡುಹಿಡಿದನೆಂದರೆ ಅದು ಹಾಸ್ಯಾಸ್ಪದವಾದ ಸಂಗತಿಯನ್ನು ಹೇಳುತ್ತಾ ಹೊರಟ ಭೈರಪ್ಪನವರು ಅಲ್ಲಿ ಭಾರತೀಯ ಮೂರ್ತಿಗಳ ಅವಶೇಷಗಳಿದ್ದವು ಎಂದು ನನ್ನ ಪ್ರಕಾರ ತಪ್ಪಾಗಿ ಬರೆದಿದ್ದಾರೆ. ಇದಕ್ಕೆ ಪುರಾವೆ ಎಲ್ಲಿಯೂ ಇಲ್ಲ ಎಂದು ನನ್ನ ತಿಳಿವಳಿಕೆ. ತಪ್ಪಿದ್ದಲ್ಲಿ ತಿದ್ದಿಕೊಳ್ಳಲು ಸಿದ್ಧನಾಗಿರುವೆ.

ಒಟ್ಟಿನಲ್ಲಿ, ಚಿಂತನೆಗೆ ಒಳ್ಳೆಯ ಗ್ರಾಸವಾಗುವ ಈ ವಂಶವೃಕ್ಷ ಅತ್ಯಂತ ಜನಪ್ರಿಯ ಕಾದಂಬರಿಗಳಲ್ಲಿ ಒಂದು. ಈ ಪುಸ್ತಕವನ್ನೋದಿದ ಅಥವಾ ಓದದ ಇತರರಿಗೆ ನನ್ನ ಅನಿಸಿಕೆಗಳನ್ನು ಓದಿ ಏನನ್ನಿಸಿದೆಯೋ ಎಂಬುದನ್ನು ತಿಳಿಯಲು ನಾನು ಕುತೂಹಲಿಯಾಗಿದ್ದೇನೆ.

ಮೂಲ:  http://goo.gl/wG11ZXಅಜ್ಞಾತ ಸುಂದರಿ - ಸೂರ್ಯದೇವರ ರಾಮಮೊಹನರಾವ್ ( ಕನ್ನಡಕ್ಕೆ - ಅಜ್ಜಂಪೂರ ಜೆ. ಸೂರಿ )

Agnyata Sundari - Suryadevavara Raamamohanrao 
ಈ ಕಾದಂಬರಿ ಓದುವಾಗ ನನ್ನನ್ನು "ಬೆಳದಿಂಗಳ ಬಾಲೆ" ಕನ್ನಡದ ಚಲನಚಿತ್ರ ತುಂಬಾ ನೆನಪಾಯಿತು. ಸಿನಿಮಾ ನೋಡುವ ಎಲ್ಲರು ಕನ್ನಡದ 'ಬೆಳದಿಂಗಳ ಬಾಲೆ' ಚಿತ್ರ ಗೊತ್ತು, ಯಾಕೆ ಅಂದ್ರೆ ಅದು ಅಂಥ ಒಂದು ಅಧ್ಬುತ ಚಿತ್ರ. ನೋಡಿಲ್ಲ ಅಂದ್ರೆ ದಯವಿಟ್ಟು ನೊಡಿ. ಈ ಕಾದಂಬರಿ ಆ ಚಿತ್ರವನ್ನು ಬಹುತೇಕ ಹೋಲುತ್ತದೆ ಕೊನೆಯಲ್ಲಿ ಮಾತ್ರ ಸ್ವಲ್ಪ ವ್ಯತ್ಯಾಸವಿದೆ ಮತ್ತು ಇಲ್ಲಿ ಇಬ್ಬರು ನಾಯಕಿಯರು. ಈ ಕಾದಂಬರಿ ಮೂಲತ: ತೆಲುಗು ಭಾಷೆಯದ್ದು ಇದನ್ನು ಕನ್ನಡಕ್ಕೆ ಅಜ್ಜಂಪೂರ ಜೆ. ಸೂರಿಯವರು ಅನುವಾದಿಸಿದ್ದಾರೆ. 

ಇಲ್ಲಿ ಬರುವ ಶ್ರೀಧರ್ ಎಂಬಿಎ ಮಾಡುತ್ತಿದ್ದಾಗ ಅಪರ್ಣನನ್ನು ಪ್ರೀತಿಸುತ್ತಿರುತ್ತಾನೆ ಅವಳು ಹೇಳದೆ ಹೋದರು ಇವನ್ನನ್ನು ಪ್ರೀತಿಸುತ್ತಾಳೆ. ಓದು ಮುಗಿಯುವ ಮುಂಚೆ ಅಪರ್ಣಳಿಗೆ ನೃತ್ಯ ಕಲೆಯಲ್ಲಿ ಆಸಕ್ತಿ ಮೂಡಿ ಅದರಲ್ಲಿ ತಲ್ಲೀನಳಾಗುತ್ತಾಳೆ. ನೃತ್ಯಕ್ಕೆಂದು ಅವಳು ದೇಶ ವಿದೇಶ ಸುತ್ತುತ್ತಿರುತ್ತಾಳೆ ಆದರೆ ಪ್ರೀತಿ ಮಾತ್ರ ಫೋನಿನಲ್ಲಿ ಮುಂದುವರೆಯುತ್ತಿರುತ್ತದೆ. ಈಗಿರುವಾಗ ಒಂದು ದಿನ ಶ್ರೀಧರನ ಫ್ಲಾಟ್ ಗೆ ಒಂದು ಅಪರಿಚಿತ ಹುಡುಗಿಯ ಫೋನ್ ಬರುತ್ತದೆ. ಅಲ್ಲಿಂದ ಶುರುವಾದ ಮಾತು ಪ್ರೀತಿಯ ಹತ್ತಿರತ್ತಿರ ಹೋಗುತ್ತದೆ. ಆ ಹುಡುಗಿಗೆ ಅಪರ್ಣಳ ಬಗ್ಗೆ ಗೊತ್ತಿದ್ದರು ಇವನ್ನನ್ನು ಪ್ರೀತಿಸುತ್ತಾಳೆ, ಅವರಿಬ್ಬರ ಮೇಲಿನ ಆಸುಯೇ ಇಂದಲ್ಲ ಶ್ರೀಧರನ ಒಳ್ಳೆಯ ಸ್ವಭಾವದ ಮೇಲಿನ ಅಭಿಮಾನದಿಂದ. ಇವನಿಗೂ ಈ ಅಪರಿಚಿತ   ಹುಡುಗಿ ಮೇಲೆ ಪ್ರೀತಿ ಚಿಗುರುತ್ತದೆ. ಅಪರ್ಣಳ ನಿರಂತರ ಸುತ್ತುವುದು, ಶ್ರೀಧರ್ ಇನ್ನು ಇವಳ ಹತ್ತಿರವಾಗುತ್ತಾನೆ. 

ಶ್ರೀಧರ್ ಏನೇ ಮಾಡಿದರು ಪೂಜಾಗೆ(ಅಪರಿಚಿತಳ ಹೆಸರು) ಗೊತ್ತಾಗುತ್ತದೆ. ಹೇಗೆ ಎಂದು ದಿನ ರಾತ್ರಿ ತಲೆ ಕೆಡಿಸಿಕೊಳ್ಳುತ್ತಾನೆ. ಆಗ ಅವನ ಮಿತ್ರ ಯೋಗಿ ಶ್ರೀಧರನ ವಿಷಯವಲ್ಲ ತಿಳಿದು ಅವಳು ಅವನ ಬಿಲ್ಡಿಂಗ್ ನ ಎದುರುಗಡೆ ಬಿಲ್ಡಿಂಗ್ ನಲ್ಲಿ ಇರಬಹುದು ಎಂದು ಹುಹಿಸುತ್ತಾರೆ. ಅವರು ಏನೇನೋ ಯೋಜನೆಗಳನ್ನು ಹಾಕಿದರು ಪೂಜಳನ್ನು ಹುಡುಕಲು ಹಾಗುವುದಿಲ್ಲ. ಮುಂದೆ ಅವರಿಬ್ಬರೂ ಬೇಟಿ ಮಾಡುತ್ತಾರೆ, ಏನಾಗುತ್ತದೆ ಎಂದು ಓದಿ ನೋಡಬೇಕು. 

ಕಾದಂಬರಿಯಲ್ಲಿ  ಎಲ್ಲಲ್ಲಿ ಕೆಲವು ಪಾತ್ರಗಳನ್ನೂ ಪ್ರಯತ್ನ ಪೂರಕವಾಗಿ ತುರುಕಿದ್ದಾರೆ ಎಂದು ಅನಿಸುತ್ತದೆ. ಮೇರಿ ಪಾತ್ರ ಏನಾಗುತ್ತದೆ ಎಂದೇ ತಿಳಿಯುವುದಿಲ್ಲ. ಯೋಗಿ ಅವನ ಹಳೆಯ ಪ್ರೀತಿಯನ್ನು ಹಿಂದೂ ಮುಂದು ನೋಡದೆ ಮತ್ತೆ ಒಪ್ಪಿಕೊಳ್ಳುತ್ತಾನೆ ಯಾಕೆ ಎಂದೇ ಹೇಳುವುದಿಲ್ಲ. ನಿರ್ಮಲಾಳ ಮಗು ಯೋಗಿಯನ್ನು ಯಾವ ರೀತಿ ಸ್ವೀಕರಿಸುತ್ತದೆ ಎಂದು ಹೇಳುವುದಿಲ್ಲ. ನಾನು ಓದಿದ ಮೊದಲ ತೆಲಗು ಕಾದಂಬರಿ ಇದು, ಅಲ್ಲಿನ ಕಾದಂಬರಿಕಾರರ ಬಗ್ಗೆ ಅಷ್ಟು ಗೊತ್ತಿಲ್ಲದ ಕಾರಣ ನಾನು ಇದರ ಬಗ್ಗೆ ಏನು ಖಂಡಿತಾಗಿ ಇದನ್ನು ನೀವು ಓದಬೇಕು ಎಂದು ಹೇಳಲಾರೆ. 


Tuesday, May 13, 2014

ಜಲಪಾತ - ಎಸ್ ಎಲ್ ಭೈರಪ್ಪ

Jalapatha - S L Bhyrappa

ಈಗಿನ ಅಂದರೆ ಆಧುನಿಕ ಕಾಲದ ಜನರಿಗೆ ಅದರಲ್ಲೂ ನಗರದಲ್ಲಿ ಇರುವ ಜನರಿಗೆ ಹಳ್ಳಿಯ ಜೀವನ ಬಲು ಸುಂದರ, ಚಿಂತೆನೇ ಇಲ್ಲ ಮತ್ತು ಆರಾಮಾಗಿ ಜೀವನ ಸಾಗಿಸಬೌದು ಎನ್ದು. ಆದರ ಹಳ್ಳಿಯ ಜನಕ್ಕೆ ನಗರದ ಜೀವನ ಆರಾಮಾಗಿ ಕಾಣುತ್ತದೆ, ತಿಂಗಳಿಗೆ ಬರುವ ಸಂಬಳ, ನಗರದ ಮಳಿಗೆಗಳು, ಬೇಕೆಂದಾಗ ಸಿಗುವ ವಸ್ತುಗಳು ಅವರಿಗೆ ಹಿತವೆನುಸುತ್ತದೆ. ಇಲ್ಲಿ ಯಾರು ಸರಿ ಯಾರು ತಪ್ಪು ಎಂದು ಹೇಳಿಕ್ಕೆ ಆಗುವುದಿಲ್ಲ ಯಾಕೆಂದರೆ ಇಬ್ಬರು ಸರಿ ಮತ್ತು ಇಬ್ಬರು ತಪ್ಪು. ಹಳ್ಳಿಯ ಜನಕ್ಕೆ ಒಂದು ತಿಂಗಳ ಸಂಬಳದ ಹಿಂದೆ ಇರುವ ಕಷ್ಟಗಳು ಮತ್ತು ಅದನ್ನು ಪಡೆದು ನಡೆಸುವ ಸಂಸಾರ ಗೊತಿರುವುಡಿಲ ಹಾಗೆಯೇ ನಗರದ ಜನರಿಗೆ ಹುತ್ತಿ ಬಿತ್ತಿ ಮತ್ತು ಮಾರುವ ಕಷ್ಟ ಗೊತ್ತಿಲ್ಲ. ನಾವು ಯಾವುದು ಸರಿಎನ್ದರ ಅದು ಅವರವರಿಗೆ ಬಿಟ್ಟಿದ್ದು. 

ಇಲ್ಲಿ ಭ್ಯಪ್ಪನವರು ಈ ಜೀವನದ ವ್ಯತ್ಯಾಸದ ಚಿತ್ರಣವನ್ನೇ ಕಾದಂಬರಿಯಾಗಿಸಿದ್ದಾರೆ. ಭೂಪತಿ ಒಂದು ಅಡ್ವರ್ಟೈಸಿಂಗ್ ಕಂಪನಿಯಲ್ಲಿ ಫ್ರೀ ಲಾನ್ಸ್ ಪೈಂಟರ್, ಅವನಿಗೆ ಹೆಂಡತಿ ವಸು (ವಸುಂಧರಾ) ಮತ್ತು ಒಂದು ಗಂಡು ಮಗು ವಿಶ್ವ. ಅವರ ಜೀವನ ಭೂಪತಿಯ ಸಂಬಳದಲಿಯೇ ಸಾಗಬೇಕು. ಅವರ ಜೀವನ ಸುಮಾರಾಗಿ ಸಾಗುತ್ತಿದೆ. ಊರಿನಲ್ಲಿ ಅವರ ತಂದೆ ಮಾಡಿಟ್ಟ ಸ್ವಲ್ಪ ಆಸ್ತಿ ಇದೆ. ಹೆಂಡತಿ ಆಗಾಗ ಸಂಗೀತ ಕಲಿಯಲು ಹೋಗುತ್ತಾಳೆ. ಆದರೆ ಏನೋ ಒಂದು ಬೇಸರ ಅವರಿಬ್ಬರ ಮಧ್ಯದಲ್ಲಿ. ಜಗಳ ಆಡುವುದಿಲ್ಲ ಆದರು ಒಂದು ರೀತಿಯ ಒಡಕು ಇಬ್ಬರ ಮಧ್ಯೆ. ಅವರು ಇನ್ನೊದು ಮಗು ಬೇಡವೆಂದು ಒಂದು ಸಲ ಗರ್ಭಪಾಠ ಮಾಡಿಸಿಕೊಂಡಿದ್ದು ಇದೆ. ಆದರು ಮೊದಲಿನ ರೀತಿ ಅನ್ಯೊನ್ಯತೆ ಇಲ್ಲ. 

ಇದೆರೆಲ್ಲದುರ ಮಧ್ಯ ಬಂದು ಹೋಗುವ ಕೆಳಗಡೆ ಮನೆಯ ಸುಧಾಬಾಯಿ ಅವರ ಡಾಕ್ಟರ ಗಂಡ, ರೆಬೆಲ್ಲೊ, ಮತ್ರಾನಿ ಎಲ್ಲರ ಕತೆಗಳೆ ಒಂದು ವಿಚಿತ್ರ ಅನುಭವ. ಬೋಬಾಯಿಯಲ್ಲಿ ಎರಡು ಮಕ್ಕಳ ಜೊತೆ ಜೀವನ ಸಾಗಿಸಿಸುವುದು ಕಷ್ಟ ವೆಂದು ತಿಳಿದು ಎಲ್ಲ ಬಿಟ್ಟು ತಮ್ಮ ಹಳ್ಳಿಗೆ ಬರುತ್ತಾರೆ. ಇಲ್ಲಿ ಆರಾಮಾಗಿ ಜೀವನ ಸಾಗಿಸಬಹುದು ಎಂದು ತಿಳಿದು ಹಳ್ಳಿಗೆ ಬರುತ್ತಾರೆ. ಗುತ್ತಿಗೆಗೆ ಕೊಟ್ಟ ಭೂಮಿ, ಅವರು ನೋಡಿದ ಹಳ್ಳಿಯ ಜೀವನ ಮತ್ತು ಈಗಿರುವ ಜೀವನದ ವ್ಯತ್ಯಾಸ ಮತ್ತು ಅದರಿಂದ ಪಡುವ ಕಷ್ಟಗಳು ಎಲ್ಲ ಸತ್ಯಕ್ಕೆ ಹತ್ತಿರವಾದುದ್ದೆ ಎಂದು ಅನಿದುತ್ತದೆ. 

ಹಳ್ಳಿಯ ಜೀವನ ಸುಲಭ ಎನ್ನುವವರು ಈ ಕಾದಮಬ್ರು ಓದಬೇಕು ಮತ್ತು ಪಟ್ಟಣ ಜೀವನವೇ ಸುಂದರ ಎನ್ನುಅವರು ಇದನ್ನು ಓದಬೇಕು. 


Thursday, May 1, 2014

ಎರಡು ದಂಡೆಗಳು - ಬಿ ಪಿಶಿವಾನಂದ ರಾವ್

Yeradu Dandegalu - B P Shivananda Raoಒಂದು ದೇಶಕ್ಕೆ ಶ್ರೇಷ್ಠತೆ - ಗೌರವ ಹುಟ್ಟಿಸಿ ಕೊಡುವುದು ಅಲ್ಲಿರುವ ಕಾರ್ಖಾನೆಗಳು, ಸೇತುವೆ, ಸುಂದರ ಕಟ್ಟಡ, ರಸ್ತೆಗಳಿಂದ ಅಲ್ಲ ಬದಲು ಅಲ್ಲಿ ಜೀವಿಸಿರುವ ಕ್ರಿಯಾಶೀಲ ಬುದ್ದಿಯ, ಸಮಜೋತ್ಕರ್ಷಕ್ಕಾಗಿ ಪ್ರಾಮಾಣಿಕವಾಗಿ ತುಡಿಯುವ-ದುಡಿಯುವ ಮನಸ್ಸುಳ್ಳ ವ್ಯಕ್ತಿಗಳಿಂದಾಗಿ ಎಂಬುದು ಒಂದು ಶ್ಲಾಘನೀಯ ಸೂತ್ರ. 

ಚದ್ರಗಿರಿ-ಧರ್ಮಾಪುರ ಎರಡು ದಂಡೆಗಳಲ್ಲಿರುವ ಊರುಗಳು. ಮಧ್ಯ ಕಲ್ಹಳ್ಳ ಇದೆ. ಎರಡೂ ಸ್ಥಳಗಳಲ್ಲಿರುವ ವ್ಯಕ್ತಿಗಳ ಅಂತರ್ ದೃಷ್ಟಿ ದುಡಿಯುವ ಕಾರ್ಯವೈಖರಿ, ಸ್ವಾರ್ಥ-ದ್ವೇಷ, ಅದು ಇತರರ ಮೇಲೆ ಬೀರಿದ ಪ್ರಭಾವ; ಇದು ನನಗೆ ಇಷ್ಟವಾದ ಕಥಾ ವಸ್ತುವೇ 'ಎರಡು ದಂಡೆ' - ಕಾದಂಬರಿ. ಎರಡು ವಿಭಿನ್ನ ಅಭಿರುಚಿಯ ಜನರ ಬದುಕಿನ ಇತಿಹಾಸದಲ್ಲಿ ದುರಂತದ ಜೊತೆ ಉತ್ಕರ್ಷದ ಬೆಳಕು ಅಡಗಿದೆ. ಆಯಾ ಸ್ಥಳಗಳ ಉತ್ಥಾನ-ಪತನಕ್ಕೆ ಇಲ್ಲಿನ ನಿತ್ಯ ನಿದರ್ಶನವೆಂದು ಮಾತ್ರ ಹೇಳಬಯಸುವೆ. 

ಈ ಕಾದಂಬರಿಯಲ್ಲಿ ತಮ್ಮ ಊರಿನ ಏಳ್ಗೆಗಾಗಿ ಮಾತ್ರವಲ್ಲ ಕೆಲವಾದರೂ ಸಾಮಾಜಿಕ ಕಾರ್ಯಕ್ರಮಗಳಿಂದ ಸಾಮೂಹಿಕ ಉತ್ಕರ್ಷನಾ ದೃಷ್ಟಿಯಲ್ಲಿ ದುಡಿಯುವ-ದುಡಿಸುವ ಆತ್ಮವಿಶ್ವಾಸ ಹೊಂದಿದ ಗೋಪಾಲರು. ಅದಕ್ಕೆ ಸಚೇತನಾ ಶಕ್ತಿಯಾಗಿ ನಿಂತ ಅವರ ಮಗಳ ದಿಟ್ಟ ನಿಲುವಿನ ಗಟ್ಟಿ ಹೆಜ್ಜೆ. ಇವರ ಬದುಕಿನ ಚಿತ್ರಣ ಒಂದು ಕಡೆ. ಎರಡನೆಯದೆಂದರೆ ತಮ್ಮ ತಮ್ಮಲ್ಲಿ ಕಚ್ಚಾಡಿಕೊಳ್ಳುತ್ತ  ಸ್ವಾರ್ಥ-ದ್ವೇಷ-ಜಾತಿಯ ನಿಂದನೆಗಳಿಂದ ಏನೂ ಪ್ರಗತಿ ಸಾಧಿಸಿಕೊಳ್ಳದೆ ಕೊನೆಗೂ ಕೂಪಮಂಡೂಕಗಳಾಗಿ ಊಳಿಯೋ ಪಕ್ಕದ್ದೇ ಊರಿನ ಜನರ ಕರ್ಮಕಾಂಡದ್ದೇ ಚಿತ್ರಣ. 


Wednesday, April 30, 2014

ಜನಿವಾರ ಮತ್ತು ಶಿವದಾರ - ಬಸವರಾಜ ಕಟ್ಟಿಮನಿ

Janivara Mattu Shivadara -  Basavaraja Kattimaniನಿಜ ಹೇಳಬೇಕು ಅಂದ್ರೆ ನಾನು ಇದೆ ಮೊದಲು ತಿಲಿದುಕೊಳ್ಳುತಿರುವುದು ಜನಿವಾರ ಮತ್ತು ಶಿವದಾರ ಏನೆನ್ನುವುದು. ಜನಿವಾರ ಬ್ರಾಹ್ಮಣರು ಮಾತು ಶಿವದಾರ ಲಿಂಗಾಯತರು ಹಾಕುವುದೆಂದು. ಈ ರೀತಿಯ ಕಾದಂಬರಿ ಓದುತ್ತಿರುವುದು ಇದೆ ಮೊದಲು. ಈ ಇಬ್ಬರ ಜಾತಿಗಳ ನಡುವೆ ಇಂಥ ಒಂದು ದೊಡ್ಡ ಅಂತರ ಮತ್ತು ಸಮಸ್ಯ ಇರುವುದೆಂದು ಗೊತ್ತಿರಲ್ಲಿಲ್ಲ. ಬಸವರಾಜ ಕಟ್ಟಿಮನಿ ಇದನ್ನು ಬರೆದ್ದಿದ್ದು ೧೯೫೫ ಇಸವಿಯಲ್ಲಿ. ಈಗ ಇಷ್ಟು ಅಂತರ ವಿರಲಾರದು ಎಂದು ನನ್ನ ಅನಿಸಿಕೆ. ಈಗಿನ ಕಾಲಕ್ಕೆ ನಾನು ನೋಡಿರುವ ಜನರಲ್ಲಿ ಇಂಥ ಜಾತಿಪರತೆ ಕಡಿಮೆ ಇದ್ದರು ಮಾಡುವೆ ವಿಷಯದಲ್ಲಿ ಮಾತ್ರ ಇದು ಒಂದು ದೊಡ್ಡ ಅಂಶವೆಂದೆ ಹೇಳಬೇಕು. ಯಾವುದೇ ಮಾಡುವೆ ದೊಡ್ಡವರು ನಿಂತು ಮಾಡುವುದಾದರೆ ಇಂದಿಗೂ ತಮ್ಮ ಮಕ್ಕಳಿಗೆ ಸ್ವಜಾತಿ ವರ ಇಲ್ಲ ವಧು ವನ್ನೇ ನೋಡುವುದು. ಪ್ರೀತಿ ಎಂದರೆ ಅದು ಬೇರೆ ಮಾತು, ಈಗಿನ ಕಾಲದಲ್ಲಿ ವಿದ್ಯಾವಂತ ತಂದೆ ತಾಯಿ ಅಡ್ಡಿ ಮಾಡುವುದಿಲ್ಲ. ಜನಿವಾರ ಮತ್ತು ಶಿವದಾರ ಬರೆದ ಕಾಲದಲ್ಲಿ ಪ್ರೀತಿ ಪ್ರೇಮ ಎಂದರೆ ಮೂಗು ಮುರಿಯುವವರು ಮಾತು ಹೆಣ್ಣು ಎಂದರೆ ಒಂದು ದಡ್ಡ ಬಾರಾ ಎಂದು ತಿಳಿಯುತ್ತಿದ್ದರು. ಆಗಿನ ಕಾಲದ ಜಾತಿಯ ಘಷಣೆಯ ಒಂದು ನೋಟವೆ 'ಜನಿವಾರ ಮತ್ತು ಶಿವದಾರ' ಕಾದಂಬರಿ. 

ಇಲ್ಲಿ ಬರುವ ರಾಮಚಂದ್ರರಾಯನು ಒಬ್ಬ ಬಡ ಬ್ರಾಹ್ಮಣ, ಒಂದು ಇನ್ಸೂರೆನ್ಸ್ ಆಫೀಸ್ ನಲ್ಲಿ ಕೆಲಸ ಮಾಡುತ್ತಿರುತ್ತಾನೆ. ಅವನ ಸಂಬಳ ಮನೆಗೆ ಸಾಲುವುದಿಲ್ಲ ಅದರ ಮೇಲೆ ಅವನು ಬ್ರಾಹ್ಮಣನೆಂದು ಅವರ ಮೇಲಾಧಿಕಾರಿ ಲಿಂಗಪ್ಪ ತುಂಬಾ ಕಾಟಕೊಡುತ್ತಿರುತ್ತಾನೆ. ಇದರ ಮೇಲೆ ಅವನಿಗೆ ಒಬ್ಬ ತಮ್ಮ ವೆಂಕಟೇಶ ಮತ್ತು ತಂಗಿ ಶಾಂತನ ಚಿಂತೆ. ಅವನಿಗೆ ಶಾಂತನ ಮಾಡುವೆ ಚಿಂತೆ. ಯಾರೇ ಬಂದರು ವರದಕ್ಷಿಣೆ ಕೇಳುತ್ತಾರೆ, ಇವನ ಬಾಲಿ ಹಣವಿಲ್ಲ. ಏನು ಮಾಡುವುದು ಎಂದೇ ಚಿಂತೆ. ಅವರ ಅಪ್ಪ ಮಾಧ್ವರಾಯರು ನಿವೃತ್ತಿಯಾಗಿ ಮನೆಲಿದ್ದಾರೆ. 

ಶಾಂತಗೆ ಓದುವಾಸೆ. ಅವಳನ್ನು ಡಿಗ್ರಿ ಮಾಡಲು ಕಾಲೇಜ್ ಗೆ ಸೇರಿಸುತ್ತಾರೆ. ಅವರ ಮನೆ ಮುಂದೆ ಒಂದು ಕೋಣೆಯಲ್ಲಿ ಕೊಡಬಾವಿ ಎನ್ನುವ ಕವಿ ಅಧ್ಯಾಪಕರಾಗಿ ಕೆಲಸ ಮಾಡುತ್ತಾ ಶಾಂತನನ್ನು ಇಷ್ಟ ಪಡುತ್ತಾನೆ. ಇದನ್ನು ಅರಿತ ಶಾತ ಮತ್ತು ಅವಳ ಗೆಳತಿಯರು ಅವನನ್ನು ನೋಡಿ ಒಳಗೊಳಗೆ ನಗುತ್ತಿರುತ್ತಾರೆ. ಇದರ ಮಧ್ಯೆ ಅಲ್ಲಿರಲು ಸದಾನಂದ ಅವನ ಕೋಣೆಗೆ ಇರಲು ಬರುತ್ತಾನೆ. ಅವನು ನೋಡಲು ಅಂದಾವಾಗಿ ಮತ್ತು ಒಳ್ಳೆ ಸಂಬಾವಿತನಾಗಿ ಕಾಣುತ್ತಾನೆ ಶಾಂತಳಿಗೆ. ಸದಾನಂದನು ಒಬ್ಬ ಕವಿ. ಒಂದೇ ಕಾಲೇಜ್ ನಲ್ಲಿ ಇರುವುದರಿಂದ ಇಬ್ಬರ ಪರಿಚಯ ಸ್ನೇಹವಾಗಿ ಮತ್ತು ಮುಂದೆ ಪ್ರೀಥಿಯಾಗು ಬೆಳೆಯುತ್ತಾದೆ. ಅವರ ಪಡುವ ಕಷ್ಟ ಮತ್ತು ಮದುವೆಯಾಗಲು ಮಾಡುವ ದಿಟ್ಟತನ ಕಟ್ಟಿಮನಿಯವರು ಮನಸ್ಸಿಗೆ ನಾಟುವಂತೆ ಬರೆದಿದ್ದರೆ. ಇಲ್ಲಿ ಅರ್ ಎಸ್ ಎಸ್, ಸೋಷಲಿಸ್ಟ್, ಕಮ್ಯುನಿಸ್ಟ್ ಮತ್ತು ಇತರೆ ಎಲ್ಲಾ ರೀತಿಯ ವಿಭಿನ್ನ ಪಾತ್ರಗಳು ಬಂದು ಹೋಗುತ್ತವೆ, ಅದರ ಬಗ್ಗೆ ಇಲ್ಲಿ ಹೇಳುವುದಕ್ಕೆ ಹೋಗುವುದಿಲ್ಲ. ಈ ಕಾದಂಬರಿಯಲ್ಲಿ ನಮಗೆ ನಮ್ಮ ಜಾತಿಯ ಮೇಲೆ ಅಂಧ ಮೋಧ ಮಾತ್ತು ಬೇರೆ ಜಾತಿಯ ಮಳೆ ಈರ್ಷೆ ಎಲ್ಲ ಬರಿ ನೀರಿನ ಮೇಲಿನ ಗುಳ್ಳೆ ಮಾತು ವಿಧ್ಯವಂತರಾದ ನಾವು ಬದುಕನ್ನು ಪ್ರೀತಿಸಬೇಕೆ ಹೊರತು ಜಾತಿಯನಲ್ಲ ಎಂದು ತೋರಿಸಿದ್ದರೆ. 

ನಾನು ಇಲ್ಲಿ ಯಾವುದೇ ಜಾತಿ ಕೀಳು ಯಾವುದೊ ಮೇಲೆ ಎಂದು ಹೇಳಿಕ್ಕೆ ಹೋಗುವುದಿಲ್ಲ ಯಾಕೆಂದರೆ ಅದು ಅವರವರ ಭಾವಕ್ಕೆ ಬಿಟ್ಟಿದ್ದು. Tuesday, April 29, 2014

ಸ್ಮಶಾನ ಭೈರಾಗಿ - ಎನ್ ನರಸಿಂಹಯ್ಯ

Smashana Bhyragi  - Narashimaiah Nನರಸಿಂಹಯ್ಯ ನವರ ಕಾದಂಬರಿಗಳೇ ಹೀಗೆ ಎರಡು ಅಥವಾ ಮೂರು ಗಂಟೆಗಳಲ್ಲಿ ಮುಗಿಸಬಹುದು. ಅವರ ಸರಳ ಭಾಷೆ, ಹೇಳುವು ರೀತಿ ಮತ್ತು ಕಥೆಯಲ್ಲಿನ ಕುತೂಹಲ ಕಾಯ್ದುಕೊಳ್ಳುಹುದು ಈ ರೀತಿಯ ಬಿರುಸಿನ ಓದುವಿಕೆಯ ಕಾರಣ. ಕನ್ನಡದ ಪತ್ತೇದಾರಿ ಕಾದಂಬರಿಕಾರರಲ್ಲಿ ನಿಸ್ಸಿಮರು ಎನಿಸಿಕೊಂಡವರು ನರಸಿಂಹಯ್ಯನವರು. ಅವರು ನೂರಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದವರು. 

ಸ್ಮಶಾನ ಭೈರಾಗಿಯಲ್ಲಿ ಅವರು ಪತ್ತೇದಾರಿ ಜೊತೆಗೆ ಮಾತಾ ಮಾತ್ರ ಭೂತಗಳನ್ನು ಕಥೆಯ ಮೂಖ್ಯ ಪಾತ್ರವನ್ನಾಗಿಸಿದ್ದಾರೆ. ಅನಂತಚಾರರಿಗೆ ಬರಿ ೩೫ ರೂ ಗಳಿಗೆ ಒಂದು ಬಂಗಲೆ ಬಾಡಿಗೆಗೆ ಸಿಗುತ್ತಾದೆ, ಇದು ಯಾಕೆಂದು ಅವರ ಪತ್ನಿ ಮಂಜುಳ ವಿವರಿಸುತ್ತಾಳೆ. ಅದು ಒಂದು ಬೂತದ ಬಂಗಲೆ ಮತ್ತು ಅದನ್ನು ಯಾರು ಬಾಡಿಗೆಗೆ ತೆಗೆದುಕೊಂಡಿಲ್ಲವಾದ್ದರಿಂದ ಕಡಿಮೆಗೆ ಸಿಕ್ಕಿತು ಎಂದು. ಮಂಜುಳಗೆ ಅಳುಕು, ದುಃಖ ಒಮ್ಮೆಲೇ ಬರುತ್ತದೆ, ಇದಕ್ಕೆ ಅನಂತಚಾರಿ ಅವಳನ್ನು ಜೋಹಿಸರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಬಂದ ಮೇಲೆ ಅವಳಿಗೆ ಸಮಧಾನ ವಾಗುತ್ತದೆ. ಅದೇ ಊರಿನಲ್ಲಿ ಅಪ್ಪೊರಾಯ ಮತ್ತು ಆಲಮೇಲಮ್ಮ  ಎಂಬ ದಂಪತಿಗಳು ಒಂದು ಭೂತದ ಕಾಟಕ್ಕೆ ಸಿಲುಕಿರುತ್ತಾರೆ. ಅವರಿಗೆ ಮೊದಮೊದಲು ಕಷ್ಟ ಕೊಟ್ಟು ಆಮೇಲೆ ಅವರು ಭೂತ ಮಾತು ಕೇಳಿದರೆ ತಮ್ಮ ಎಲ್ಲ ಇಷ್ಟಾರ್ತವನ್ನು ನೆರವೆರುಸುವುದಾಗಿ ಹೇಳುತ್ತಾದೆ. ಅದರ ಪ್ರಕಾರ ಅಪ್ಪೊರಾಯ ಮತ್ತು ಆಲಮೇಲಮ್ಮ ಮನಸ್ಸಿಗೆ ಬೇಕೆನಿಸಿದ್ದನ್ನು ಭೂತವು ಕ್ಷಣ ಮಾತ್ರದಲ್ಲಿ ಒದಗಿಸುತ್ತದೆ. 

ಮಂಜುಳ ಮನೆಯಲ್ಲಿನ ಭೂತದಿಂದ ಬಹಳ ನೋವನ್ನು ಅನುಬವಿಸಿ ಅನಂತಚಾರಿ ಮನಜುಳೆಗೆ ತಾಯತ ಕಟ್ಟುತ್ತಾರೆ. ಕಟ್ಟಿದ ಮೇಲೆ ಭೂತದ ಕಾಟ ಇಲ್ಲವಾಗುತ್ತದೆ. ಅಪ್ಪೊರಾಯರಿಗೆ ಈ ಭೂತ ಯಾರು, ಏಕೆ ನಮ್ಮ ಸಹಾಯ ಮಾಡುತ್ತಿದೆ ಎಂದು ಕುತೂಹಲ, ಅವರಿಗೆ ಯಾರಾದರು ಕೇಡು ಬಯಸಿದರೆ ಆ ಭೂತವು ಅವರನ್ನು ತಂಟೆಗೆ ತೆಗೆದುಕೊಳ್ಳುವುದು. ಇದರಿಂದಾಗಿ ಊರಿನ ಜನರಿಗೆ ಅಪ್ಪೊರಾಯರ ಮೇಲೆ ಗೊಎರವ ಮತ್ತು ಹೆದರಿಕೆ. ಇದರ ಮಧ್ಯ ಆ ಊರಿಗೆ ಒಬ್ಬ ಸ್ಮಶಾನ ಭೈರಾಗಿಯಾ ಆಗಮನವಾಗುತ್ತದೆ. ಭೈರಾಗಿಯು ಯಾರ ಹತ್ತಿರನು ದುಡ್ಡು ಕೇಳದ ಎಲ್ಲರಿಗು ಸಹಾಯ ಮಾಡುತ್ತಿರುತ್ತಾನೆ ಆದರೆ ಅವನ ಮೇಲೆ ಪತ್ತೆದಾರ ಮಧುಸೂದನನಿಗೆ ಯಾಕೋ  ಅನುಮಾನ. 

ಸ್ಮಶಾನ ಭೈರಾಗಿ ಯಾರು, ಮಂಜುಳಾ ಮುಂದೆ ಏನಾಗುತ್ತಾಳೆ, ಅಪ್ಪೊರಾಯರ ಭೂತವು  ಮುಂದೆಯೂ ಸಹಾಯ ಮಾಡುತ್ತದ ಹಾಗು ಪತ್ತೆದಾರ ಮಧುಸೂದನನ ಅನುಮಾನದ ಕಾರಣಗಳೇನು ಎಂದು ನೀವು ಒದೆ ತಿಳಿಯಬೇಕು. ಒಂದಂತು ಹೇಳಬಲ್ಲೆ ನೀವು ಈ ಪುಸ್ತಕವನ್ನು ಓದಿದ ಮೇಲೆ ಬೇಜಾರಂತು ಆಗುವುದಿಲ್ಲ ಬದಲ್ಲಗಿ ಇನ್ನು ನರಸಿಂಹಯ್ಯ ನವರ ಕಾದಂಬರಿಗಳನ್ನು ಕೊಂದು ಓದುತ್ತಿರಿ. 


ಹುಲಿಯೂರಿನ ಸರಹದ್ದು ಸ್ವರೂಪ ನಿಗೂಢ ಮನುಷ್ಯರು - ಪೂರ್ಣಚಂದ್ರ ತೇಜಸ್ವಿ

Huliyoorina Sarahaddu, Swaroopa, Nigoodha Manushyaru - Poornachandra Tejasviತೇಜಸ್ವಿಯವರ ಕಥೆ ಕಾದಂಬರಿಗಳನ್ನು ಓದುವುದೆಂದರೆ ಒಂದು ಸಂತೋಷ. ಯಾಕೆಂದ್ರೆ ಅವರ ಒಂದೊಂದು ಕಾದಂಬರಿಯು ನಮ್ಮನ್ನು ಒಂದೊಂದು ಪ್ರಪಂಜಕ್ಕೆ ಕರೆದ್ದೊಯುತ್ತಾರೆ. ಅವರ ಕಥೆ ಹೇಳುವ ರೀತಿ ಹಾಗೆ ಇದೆ, ನಮ್ಮನ್ನು ಒಂದು ಬೇರೆಯೇ ಪ್ರಪಂಚಕ್ಕೆ ಕರೆದೊಯ್ದು ನಮ್ಮನ್ನು ಆ ಪರಪಂಚದ ಒಂದು ಬಾಗವಾಗಿಬಿಡುಸುತ್ತಾರೆ. ಅವರು ಆ ಲೋಕದ ಒಂದೊಂದು ವರ್ಣನೆಯು ನಮ್ಮನ್ನು ಅದು ನಮ್ಮ ಮುಂದೇನೆ ಇದೆ ಎಂದು ಅನಿಸುತ್ತದೆ. ಈ ರೀತಿ ಮಾಡುವ ಕಲೆಗಾರಿಕೆ ತೇಜಸ್ವಿ ಒಬ್ಬರಿಗೆ ಮಾತ್ರ ಸಾಧ್ಯ. ಈ ಕಥಾಸಂಕಲದಲ್ಲು ಅವರು ನಮ್ಮನ್ನು ಹುಲಿಯೂರು, ಮೊನಿಯ ಬೆಟ್ಟದ ವರ್ಣನೆ, ಮಲೆನಾಡಿನ, ಚಿತ್ರಣ, ಚಂದ್ರಗುತ್ತಿ, ಉಗ್ರಗಿರಿ,ನವಿಲುಗುಂದ..... ಹೀಗೆ ಅವರು ನಮ್ಮನ್ನು ಆ ಊರಿನಲ್ಲಿ ಒಬ್ಬ ಮನುಷ್ಯನನ್ನು ಮಾಡುತ್ತಾರೆ. 

ಇದು ಅವರು ಬರೆದಿರುವ ಅಬಚೂರಿನ ಪೋಸ್ಟ್ ಆಫೀಸ್, ಜುಗಾರಿ ಕ್ರಾಸ್ ..... ಇತ್ಯಾದಿ ಕಥೆ ಕಾದಂಬರಿಗಳಿಗಿಂತ ತುಂಬ ವಿಬಿನ್ನ ಯಾಕೆಂದರೆ ಅವರು ಬರೆದ ಮೊದಲ ಕೆಲವು ಕತೆಗಳೇ ಇವು, ಸ್ವರೂಪ ಒಬ್ಬ ಮನುಷ್ಯ ಅಂತರ್ಯಕ್ಕೆ ಒಕ್ಕು ಅವರ ಭಾವನೆಗಳೇನು, ಅವರು ಇನ್ನೊಬ್ಬರ ಬಗ್ಗೆ ಇರುವ ಧೋರಣೆ ಎಲ್ಲವನ್ನು ತುಂಬ ವಿವರವಾಗಿ ಇದು ನಮ್ಮ ಚಿಂತನೆ ನೆ ಇರಬಹುದು ಅನ್ನಿಸುತ್ತದೆ. ಇಲ್ಲಿ ಅವರ ವಿಬಿನ್ನತೆ ಕಾಣುವುದು ನಿಗೂಡ ಮನುಷ್ಯರು ಕಿರುಕಾದಂಬರಿಯಲ್ಲಿ. ಅವರು ವಿವರಿಸುವ ಜೀವನದಲ್ಲಿ ಬಲಳಿದ ಬರಹಗಾರ ಜಗನ್ನಾಥ, ಎಕ್ಷ್ಚಿಸೆ ಇನ್ಸ್ಪೆಕ್ಟರ್ ರಂಗಪ್ಪ, ಗೋಪಾಲಯ್ಯ.... ಹೇಗೆ ಅವರು ಒಂದು ಮಳೆಯಲ್ಲಿ ಸಿಲುಕಿದ ಜಗನ್ನಾಥ ಮತ್ತು ರಂಗಪ್ಪ ನನ್ನು ಹೇಗೆ ಗೋಪಾಲಯ್ಯ ತಮ್ಮ ಮನೆಗೆ ಕರೆದೊಯ್ದು ಉಪಚರಿಸುತ್ತಾರೆ ಮತ್ತು ಮಳೆ ಜಾಸ್ತಿ ಹಾಗಿ ಭೂಕಂಪನವಾಗಿ ಎಲ್ಲರು ವಲಸೆ ಹೋಗಲು ನಿರ್ಧರಿಸುತ್ತಾರೆ, ಹಾಗೆ ಗೋಪಾಲಯ್ಯನ ಸಿ ಐ ಡಿ ದಿನಗಳು.. ಅವರವರ ಜೀವನದ ಬಗ್ಗೆ ಒಂದೊಂದು ಎಳೆಎಳೆಯನ್ನೇ  ಬಿಡಿಸು ನಮಗೆ ಬಡಿಸುತ್ತಾರೆ. ಇದರ ಮಧ್ಯೆ ಬಂದು ಹೋಗುವ ಕಾಡಿನ ಮನುಷ್ಯ ಮರಸ, ಕಂಪ್ರ ..... ಎಲ್ಲರು ಆ ಕಥೆಯ ಒಂದು ಬಹು ಮುಖ್ಯ ಪಾತ್ರವಾಗುತ್ತಾರೆ. 

ಅವರು ಇಲ್ಲಿ ಬಳಸುವ ಭಾಷೆ ಒಮ್ಮೊಮ್ಮೆ ನಮಗೆ ಅರ್ಥೈಸಿಕ್ಕೊಳ್ಳಲು ಸಲ್ಪ ಸಮಯ ಬೇಕು, ಅವರು ಇದು ಬರೆದಿದ್ದು ೧೯೭೦ ಯಾಲಿ ಮತ್ತು ಇದು ಮಲೆನಾಡಿನ ಭಾಷೆ.... ಆದರೆ ಅದು ಈ ಕಥಾಸಂಕಲನ ಓದಿದ ಮೇಲೆ ಅದು ಯಾಕೆ ಬಳೆಸಿದದಾರೆ, ಅದು ಯಾಕೆ ಮುಖ್ಯ ಎಂದು ತಿಳಿಯುತ್ತದೆ. ಇಲ್ಲಿ ಬರೆದಿರುವುದು ನಾವು ನೀವು ಮಾತಾಡುವ ರೀತಿಯಲ್ಲಿ ಬರೆದಿದ್ದಾರೆ. ಕರ್ವಾಲೋ ರೀತಿಯಲ್ಲಿ ನಾವು ನೋಡಿರದ ಒಂದು ನೀಗೂಡ ಪ್ರಪಂಜಕ್ಕ ನಮ್ಮನು ಪರಿಚಯಿಸುತ್ತಾರೆ. 


Sunday, April 27, 2014

ಭೀಮಕಾಯ - ಎಸ್ ಎಲ್ ಭೈರಪ್ಪ

Bhimakaya - S L Bhyrappa

ಭೀಮಕಾಯ ಭೈರಪ್ಪನವರ ಎರಡನೆಯ ಕಾದಂಬರಿ. ಒಂದು ಒಳ್ಳೆಯ ಕಾದಂಬರಿ ಬರೆಯಲು ಎಷ್ಟು ಆಳವಾದ ಆಧ್ಯನ ಮಾಡಬೇಕು ಅನ್ನುವುದನ್ನು ತೋರಿಸಿದ್ದಾರೆ. ಎಷ್ಟು ಜನ ಲೇಖಕರು ತಮ್ಮ ನಾಲ್ಕನೆಯ ಅಥವಾ ಐದನನೆಯ ಕಾದಂಬರಿ ಬರೆಯುವಾಗ ಉತ್ತಮವಾಗಿ ಬರೆಯುತ್ತಾರೆ, ಆದರೆ ಬೈರಪ್ಪನವರು ಬರೆಯಲೇ ಹುಟ್ಟಿದವರು ಎನ್ನುವುದು ಈ ಕಾದಂಬರಿ ಓದಿದಿಯಾ ಮೇಲೆ ತಿಳಿಯುತ್ತದೆ. ಈ ಕಾದಂಬರಿಗೆ ಅವರು ಗರಡಿ ಕುಸ್ತಿ ಬಗ್ಗೆ ಎಷ್ಟು ಆಳವಾದ ಅಧ್ಯನ ಮಾಡಿರಬೇಕು ಎಂದು ಓದುದುತ್ತಾ ಓದಂತೆ ತಿಳಿಯುತ್ತದೆ ಮತ್ತು ಆಶ್ಚರ್ಯವು ಆಗುತ್ತದೆ. ಆಶ್ಚರ್ಯ ಯಾಕೆಂದರೆ ೧೯೫೮ರಲ್ಲಿ ಅವರು ಕುಸ್ತಿ ಬಗ್ಗೆ ಪೂರ್ತಿ ತಿಳ್ಕೊಂಡು ಮತ್ತು ಆದರೆ ಸುತ್ತ ಕಥ ಎಣೆಯೊದು ಅಷ್ಟು ಸುಲಬವಲ್ಲ. 

ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ನಾವು ಕಾಲದಲ್ಲೂ ನೋಡಬಹುದು, ಒಬ್ಬರ ಯಶಸ್ಸು ಸಹಿಸದೆ ಇರುವವರು ಮತ್ತು ಅವರನ್ನು ತಪ್ಪು ದಾರಿಗೆ ಎಳೆಯುವವರು. ಇಲ್ಲಿ ಬರುವ ಸುಬ್ಬು ಒಳ್ಳೆಯ ಕುಸ್ತಿ ಪಟು, ಅವರು ತಂದೆ ಆಸೆ ಪಟ್ಟ ಹಾಗೆ ಕುಸ್ತಿಯಲ್ಲಿ ಪಳಗಿ ಸುತ್ತಾ ಮುತ್ತಾ ಊರಿನಲ್ಲಿ ಹೆಸರು ಗಳಿಸಿರುತ್ತಾನೆ. ಇದನ್ನು ಸಹಿಸದ ಬೇರೆ ಗರಡಿಯ ಹಳೆ ಕುಸ್ತಿ ಪಟುಗಳು ಇದರಲ್ಲಿ ಮಲ್ಲಾರಿ ಸುಬ್ಬುವನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂದು ಒಂದು ಯೋಜನೆ ಹಾಕುತ್ತನೆ. ಮಲ್ಲಾರಿಗೆ ಸುಬ್ಬು ಮೇಲೆ ಕೋಪ ಏಕೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲೇ ಅವನನ್ನು ಸೋಲಿಸಿದ್ದ, ಸುಬ್ಬುವನ್ನು ಆಖಾಡದಲ್ಲಿ ಸೋಲಿಸಲು ಹಾಗುವುದಿಲ್ಲ ಎಂದು ಈ ಕೆಟ್ಟ ಯೋಜನೆ ಹಾಕುತ್ತಾನೆ, ಇದಕ್ಕೆ ಅವನು ಪುಟ್ಟನ ಸಹಾಯ ತೆಗೆದುಕೊಳ್ಳುತ್ತಾನೆ.

ಪುಟ್ಟ ಸುಬ್ಬುವನ್ನು ರಾಜಿಗೆ ಪರಿಚಯ ಮಾಡಿಸುತ್ತಾನೆ. ರಾಜಿ ಸುಬ್ಬುವನ್ನು ಮನಸಾರ ಪ್ರೀತಿಸುತ್ತಾಳೆ. ರಾಜಿಯ ಪರಿಚಯವಾದ ಮೇಲೆ ಸುಬ್ಬು ಕುಸ್ತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾ ಬರುತ್ತಾನೆ. ಅವನು ಒಂದು ದಿನ ಯಾವತ್ತು ಸೋಲದ ಕುಸ್ತಿಯಲ್ಲಿ ಚೋಲಾವಾರ್ ಸಿಂಗ್ ನಾ ಹತ್ತಿರ ಸೊಲುತ್ತಾನೆ. ಮುಂದೆ ಸುಬ್ಬು ಹೇಗೆ ತನ್ನ ತಪ್ಪಿನ ಅರಿವಾಗಿ ಪಶ್ಚಾತಾಪ ಪಟ್ಟು ಮತ್ತೆ ಗೆಲ್ಲುತ್ತಾನೆ ಎಂದು ನೀವು ಓದೆ ನೋಡಬೇಕು.

ನಮ್ಮ ಜೀವನದಲ್ಲೂ ಒಂದಲ್ಲ ಒಂದು ಬಾರಿ ಮ್ಯಲಾರಿಯಂತವರು ಸಿಗುತ್ತಾರೆ ಆದರೆ ನಾವು ನಮ್ಮ ಗುರಿ ತಪ್ಪಬಾರದು. ನಮಗೆ ಸರಿ ಯಾವುದು ತಪ್ಪು ಯಾವುದು ಎಂದು ತಿಳಿದು ಹೆಜ್ಜೆ ಹಾಕಬೇಕು. ತಪ್ಪು ಮಾಡಿ ತಿದ್ದಿಕೊಳ್ಳದೆ ಹೋದರೆ ನಮ್ಮ ಜೀವನಕ್ಕೆ ಆಪಾಯ. ಜೀವನದಲ್ಲಿ ಹೇಗೆ ತಾಪು ಮಾಡಿದರು ತಿದ್ದಿಕೊಳ್ಳಬಹುದು ಎಂದು ಸುಬ್ಬುವಿನ ಜೀವನದಿಂದ ತಿಳಿದುಕೊಳ್ಳಬಹುದು. 


Wednesday, April 23, 2014

ಝೆನ್ ಕಥೆಗಳು - ಸ್ವರ್ಗದ ಬಾಗಿಲುಒಂದು ದಿನ ನೋಬುಶಿಂಗ್ ಎಂಬ ಸೈನಿಕ ಝೆನ್ ಗುರು ಹುಕೈನ್ ಹತ್ತಿರ ಬಂದು "ಗುರುಗಳೇ ಸ್ವರ್ಗ ಮತ್ತು ನರಕ ಅನ್ನುವುದು ನಿಜಬಾಗಲೂ ಇದೆಯೇ?" ಎಂದು ಕೇಳಿದನು. ಅದಕ್ಕೆ ಝೆನ್ ಗುರುಗಳು "ನೀನು ಏನು ಮಾಡುತ್ತಿರುವೆ? " ಎಂದು ಕೇಳಿದರು.

ಅದಕ್ಕೆ ಅವನು "ನಾನೊಬ್ಬ ಸೈನಿಕ" ಎಂದು ಹೇಳಿದ. ಅದಕ್ಕೆ ಗುರುಗಳು "ನೀನು ನೋಡಲಿಕ್ಕೆ ಭಿಕ್ಷುಕ ರೀತಿ ಕಾಣುತ್ತೀಯ, ನೀನು ದೇಶವನ್ನು ರಕ್ಷಿಸುತ್ತೀಯ ಅಂದರೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ" ಎಂದು ಹೇಳಿದರು

ತನ್ನ ಬಗ್ಗೆ ಈ ರೀತಿಯ ಹೇಳಿದ್ದನ್ನು ಕೇಳಿ ಆ ಸೈನಿಕನಿಗೆ ತುಂಬಾ ಕೋಪ ಬಂತು, ಮುಖ ಬಿಗಿದುಕೊಳ್ಳಲಾರಂಭಿಸಿತು, ಅವನ ಕೈಗಳು ಖಡ್ಗವನ್ನು ಮತ್ತಷ್ಟು ಬಿಗಿಯಾಯಿತು. ಇದನ್ನು ಗಮನಿಸಿದ ಝೆನ್ ಗುರು "ಖಡ್ಗವಿದ್ದರೆ ಮಾತ್ರ ಸಾಕೇ ಆ ನಿನ್ನ ಖಡ್ಗ ನನ್ನ ತಲೆಯನ್ನು ತೆಗೆಯುವಷ್ಟು ಹರಿತವಾಗಿಲ್ಲ" ಎಂದು ಹೇಳಿದರು.

ಇದನ್ನು ಕೇಳಿದ ಸೈನಿಕ ಕತ್ತಿಯನ್ನು ಮೇಲಕ್ಕೆ ಎತ್ತಿದನು. ಆಗ ಗುರುಗಳು "ಈಗ ನೀನು ಏನು ಮಾಡುತ್ತಿರುವೆ ಅದೇ ನರಕ" ಎಂದು ಹೇಳಿದರು. ಸೈನಿಕ ಖಡ್ಗ ಕೆಳಗೆ ಹಾಕಿ ಅವರ ಅನುಯಾಯಿಯಾದನು. ಆಗ ಗುರುಗಳು "ಇವತ್ತಿನಿಂದ ನಿನಗೆ ಸ್ವರ್ಗದ ಬಾಗಿಲು ತೆರೆಯಿತು" ಎಂದು ಹೇಳಿದರು.Tuesday, April 22, 2014

ಅಳಿದ ಮೇಲೆ - ಶಿವರಾಮ ಕಾರಂತ

Alida Mele - Shivarama Karanthನಾವೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲವಾರು ಜನರ ಜೀವನದಲ್ಲಿ ಒಂದು ಪಾತ್ರವಾಗಿಬಿಟ್ಟಿರುತ್ತೇವೆ. ನಮಗರಿವಿಲ್ಲದಂತೆ ನಮ್ಮಿಂದ ಕಷ್ಟಕ್ಕೆ ಸಿಲುಕಿದವರು, ಖುಷಿ ಪಟ್ಟವರು ಸುಮಾರು ಜನರಿರುತ್ತಾರೆ. ಕಷ್ಟ ಪಟ್ಟವರು ದ್ವೇಷಿಸಿತ್ತಾರೆ, ಖುಷಿ ಪಟ್ಟವರು ಮರೆಯುತ್ತಾರೆ, ಇದರೆಲ್ಲದರ ಮಧ್ಯೆ ಒಂದೋ ಎರಡೋ ಮೂರೊ ಜನ ಮಾತ್ರ ನಮ್ಮನ್ನು ಪ್ರೀತಿ, ವಿಶ್ವಾಸದಿಂದ ನೆನೆಯುತ್ತಾರೆ. ಅಂತ ಎರಡು ಮೂರ ಜನ ಮಾತ್ರ ನಮ್ಮ ಜೀವನದೊಂದಿಗೆ ನೆಡೆದು ಬರುತ್ತಾರೆ ಕೊನೆವರೆಗೂ. ಒಂದು ಕಾಲದಲ್ಲಿ ಜನರ ಪರಿಚವಾಗಿ, ಪರಿಚಯ ಸ್ನೇಹವಾಗಿ ಆತ್ಮಿಯರಾಗುತ್ತಿದ್ದರು ಪಯಣಮಾದುವಾಗ,, ಬಸ್ಸಲ್ಲೋ ರೈಲ್ಲಲ್ಲೋ, ಈ ಆಧುನಿಕ ಜೀವನದಲ್ಲಿ ಅಕ್ಕ ಪಕ್ಕ ಕೂತವರು ಯಾರು ಎಂದು ತಿಳಿದುಕ್ಕೊಳ್ಳವ ಗೋಜಿಗೆ ಹೋಗುವುದಿಲ್ಲ ಇನ್ನು ಸ್ನೇಹ ಎಲ್ಲಿಂದ ಬರಬೆಕು. ಇದಕ್ಕೆ ನಮಗೆ ಸ್ನೇಹಿತರು ಹಿತೈಷಿಗಳು ಕಮ್ಮಿ, ಅವರನ್ನು ಹುಡುಕಿಕೊಂಡು ನಾವು ಫೇಸ್ಬುಕ್ ಅಲ್ಲೋ ಇಲ್ಲ ಅಂತರ್ಜಾಲದ ಯಾವುದು ವೆಬ್ ಸೈಟ್ ನಲ್ಲಿ ಕಾಲ ವ್ಯಯ ಮಾಡುತ್ತಿರುತ್ತೇವೆ.  'ಅಳಿದ ಮೇಲೆ' ಕಾದಂಬರಿ ಓದಿದ ಮೇಲೆ ನನಗನಿಸ್ಸಿದ್ದು ಅಂದರೆ ನಮ್ಮ ಜೀವನ ರುಚಿಇಲ್ಲದ ಒಂದು ದೀರ್ಘವಾದು ಊಟ ಎಂದು. ಯಾಕೆ ಹೀಗೆ ಹೇಳುತ್ತೇನೆ ಎಂದರೆ ನಾವ್ಯಾರು ಅಕ್ಕ ಪಕ್ಕ ಇರುವ ಜನರ ಬಗ್ಗೆ ತಿಳಿದುಕೊಳ್ಳುವುದಿಲ್ಲ, ಅವರ ಸ್ಥಿತಿ ಗತಿ ಗೊತ್ತಿರವುದಿಲ್ಲ ಇನ್ನು ನಮ್ಮ ಜೀವನದಲ್ಲಿ ವ್ಯವಿಧ್ಯತೆ ಹೇಗೆ ಬರಬೇಕು. 

ಕಾರಂತರಿಗೆ ಯಶವಂತ್'ರ ಪರಿಚವಾಗುವುದು ಮುಂಬೈಗೆ ಹೋಗುತ್ತಿರುವಾಗ ರೈಲು ಪ್ರಯಾಣದಲ್ಲಿ. ಅವರ ಪರಿಚಯ ಸ್ನೇಹವಾಗುತ್ತದೆ, ಯಶವಂತರು ತಮ್ಮ ಬಗ್ಗೆಯಾಗಲಿ ತಮ್ಮ ಮನೆಯರ ಬಗ್ಗೆಯಾಗಲಿ ಕಾರಂತರ ಹತ್ತಿರ ಮಾತಾಡಿದವರಲ್ಲ, ಅವರ ಮಾತು ಕಡಿಮೆ. ಕಳೆದ ಆರು ವರ್ಷದಲ್ಲಿ ಮುಂಬೈಗೆ ಯಾವಾಗಲಾದರು ಹೋದಾಗ ಕಾರಂತರು ಅವರನ್ನು ಬೀತಿಯಾಗಿ ಬರುತ್ತಿದ್ದರು, ಬೇಟಿಯಾದಾಗಲು ಮಾತು ತುಂಬಾ ತೂಕದ ಮಾತಾಡುತ್ತಿದ್ದರು. ಅವರು ಸತ್ತಾಗ ಅವರು ಕಲಿಸದ ಪತ್ರಗಳು ಮತ್ತು ಬಿಡಿಸಿದ ಚಿತ್ರಗಳ ಮೂಲಕ ಅವರ ಜೀವನದಲ್ಲಿ ಎನೇನಾಗಿರಬಹುದು ಎಂದು ಕಾರಂತರಿಗೆ ತಿಳಿಯುತ್ತದೆ. ಮತ್ತೆ ಅವರು ಹದಿನೈದು ಸಾವಿರಕೊಟ್ಟು ತಿಂಗಳಿಗೆ ೨೫ ರುಪಾಯಿಗಳಂತೆ ನಾಲ್ಕು ಜನರಿಗೆ ತಲುಪಿಸಿರಿ ಎಂದು ವಿನಂತಿಸುತ್ತಾನೆ. 

ಕಾರಂತರು ತಿಂಗಳಿಗೊಮ್ಮೆ ದುಡ್ಡು ಕೊಡುವಾಗ ಶಂಬುಭಟ್ಟ  ಪಾರ್ವತಿಯ ದುಡ್ಡು ಕದಿಯುತ್ತಿರುವಾಗಿ ಅನುಮಾನಬರುತ್ತದೆ, ಅದನ್ನು ಪರಿಶೀಲಿಸಲು ಎರಡು ತಿಂಗಳು ದುಡ್ಡು ಕಳಿಸುವುದಿಲ್ಲ, ದುಡ್ಡು ಬರದ ಕಾರಣ ಶಂಬುಭಟ್ಟ ಇವರಿಗೆ ಕಾಗದ ಬರಯುತ್ತಾನೆ. ಅವರ ಅನುಮಾನು ಇನ್ನು ಆಳಾವಾಗುತ್ತದೆ ಕಾರಂತರು ಅವರನ್ನು ನೋಡಲು ಅವರ ಹಳ್ಳಿಗೆ ಪ್ರಯಾಸದಿಂದ ಸಾಗಿ ಸೇರುತ್ತಾರೆ. ಅಲ್ಲಿ ಪಾರ್ವತಿಯು ಯಶವಂತರ ಸಾಕು ತಾಯಿ, ಅವರು ತುಂಬ ಕಷ್ಟದಲ್ಲಿದ್ದಾರೆ ಎಂದು ತಿಳಿಯುತ್ತದೆ. ಅವರಿಂದ ಯಶವಂತರು ತುಂಬ ದಾರಾಳು ಮನುಷ್ಯ, ಅಪ್ಪ ಸತ್ತ ಮೇಲೆ ಇದ್ದ ಆಸ್ತಿಯಲ್ಲೇ ದಾನ ಧರ್ಮ ಮಾಡಿ ಕಳೆದುಕೊಂಡ, ಸಾಲ ಜಾಸ್ತಿಯಾಗಿ ಮನೆ ಮಾರಿಕೊಂಡು ಬೇರೆ ಊರಿಗೆ ಹೋಗಿ ನೆಲೆಸಿ ಮತ್ತೆ ಕಳೆದುಕೊಂಡ ದುಡ್ದನೆಲ್ಲ ಗಳಿಸಿದ ಮತ್ತೆ ಹೆಂಡತಿ ಮಕ್ಕಳ ಕಾಟದಿಂದ ಮನೆ ಬಿಟ್ಟ ಎಂಬುದು ತಿಳಿಯುತ್ತದೆ. ಪಾರ್ವತಿ ಅಜ್ಜಿಯ ಆಸೆಯಂತೆ ಊರಿನ ದೇವಾಲಯದ ಜೀರ್ಣೋದ್ದಾರ ಮಾಡಿಸಿದ ಮೇಲೆ ಅವರು ಕಣ್ಣು ಮುಚ್ಚುತ್ತಾರೆ. 

ಇದರ ಮಧ್ಯೆ ಯಶವಂತರ ಮಗನಿಗೆ ಅಪ್ಪ ಸತ್ತಿದ ವಿಷಯ ತಿಳಿದು ಅವರು ಕೊಟ್ಟಿರುವ ದುಡ್ಡು ಕೇಳಲು ದಾವೆ ಹಾಕುತ್ತಾನೆ ಮಾತ್ತೆ ಸುಮ್ಮನಾಗುತ್ತನೆ. ಯಶವಂತರ ಹೇಳಿರುವ ಇನ್ನು ಮೂರು ಜನ ಒಬ್ಬ ಅವರ ಅಳಿಯ, ಅವರ ಎರಡನೆಯ ಹೆಂಡತಿಯ ಮಗ ಮತ್ತು ಮಹಾಬಲೇಶ್ವರ ದಲ್ಲಿರುವ ಒಬ್ಬ ಪಂಡಿತರು. ಅವರೆಲ್ಲರು ಯಶವಂತರನ್ನು ಒಳ್ಳೆಯ ಮನುಷ್ಯ ಎಂದು ಹೇಳುವವರೆ. ಇದರೆಲ್ಲದರ ಮಧ್ಯ ಯಶವಂತರ ಹೆಂಡತಿಯ ಮಗಳನ್ನು ಭೇಟಿ ಮಾಡುತ್ತಾರೆ. 

ಕಾರಂತರು ಯಶವಂತರ ಜೀವನವನ್ನು ಪೂರ್ತಿಯಾಗಿ ಆತ್ಮ ಕತೆಯಾಗಿ ಬರೆಯದ್ದಿದ್ದರು ಅವರು ಪಟ್ಟ ಕಷ್ಟ, ಮೋಸಹೋದ ದಿನಗಳು, ಸಹಾಯ ಮಾಡಿದ ಜನರು ಎಲ್ಲವನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ. ಅವರು ಈ ನಾಲ್ಕು ಜನರನ್ನು ಹುಡುಕಿಕೊಂಡು ಹೋದ ಪ್ರಸಂಗ, ಅವರಿಂದ ತಿಳಿದ ವಿಷಯಗಳು ಮತ್ತು ಅವರು ನೋಡಿದ ದೃಶ್ಯಗಳಿಂದ ಯಶವಂತರ  ಜೀವನವನ್ನು ಪೋಣಿಸುತ್ತಾರೆ. ಇಲ್ಲಿ ಜನರು ದುಡ್ಡಿನ ಹಿಂದೆ ಹೇಗೆ ಓಡುತ್ತಾರೆ, ಅದರಿಂದ ಬರುವ ವ್ಯಮನಸ್ಸು ಅದರಿಂದ ಸಂಭಂದದಲ್ಲಿ ಆಗುವ ಬಿರಿಕು ಎಂಥಹದ್ದು ಎಂದು ಕಾಣುತ್ತಾರೆ. ಇದು ಕಾರಂತರು ಬರೆದಿರುವ 'ಬೆಟ್ಟದೆ ಜೀವ' ಕಾದಂಬರಿಯ ರೀತಿಯಲ್ಲೇ ನಮ್ಮ ಮುಂದೆ ತರುತ್ತಾರೆ. ಒಂದು ಜೀವದ ಹಿಂದೆ ಹತ್ತಾರು ಜೀವಗಳ ಕೈ ಇದ್ದೆ ಇರುತ್ತದೆ ಮತ್ತು ನಾವಾಗಿ ಯಾವುದೇ ಸಂಬಂಧದಿಂದ ಕಳಚಿಕೊಳ್ಳಲಾಗುವುದಿಲ್ಲ ಮಾತು ಜೀವನ ನಡೆಸಿದಂತೆ ನಾವು ನೆಡೆದು ಹೋಗಬೇಕು.