Thursday, August 14, 2014

ಚಿತಾದಂತ - ಕೆ ಎನ್ ಗಣೇಶಯ್ಯ

 Chitadanta K. N. Ganeshaiah

 


ಗಣೇಶಯ್ಯ ನವರ ಕಾದಂಬರಿಗಳೇ ಹಾಗೆ ಹಿಡಿದರೆ ಮುಗಿಸುವವರೆಗೂ ಸಮದಾನವಿಲ್ಲ, ಕುತೂಹಲ ಹುಟ್ಟಿಸಿ, ತಲೆಗೆ ಹುಳು ಬಿಟ್ಟು  ಹಾಳೆವರೆಗೂ ನಮ್ಮನ್ನು ಕಾಡುತ್ತದೆ. ಚಿತದಂತ ಕಾದಂಬರಿ ಅಲೆಕ್ಸಾಂಡರ್ನ  ಭಾರತ ಪ್ರವೇಶ, ಭುದ್ದನ ಅನುಯಾಹಿಗಳ ಚಿನ್ನದ ಭಂಡಾರ, ಅಧುನಿಕ ರಹಸ್ಯ ಸೈನಿಕರದ ತೆರವಾದಿಗಳು ಮತ್ತು ಸಿಬಿಐ ಎಲ್ಲಾ ಒಂದು ರೋಚಕ ಕಾದಂಬರಿಯನ್ನು ಅರ್ಧದಲ್ಲೇ ಬಿಡಲು ಮನಸ್ಸು ಬರುವುದಿಲ್ಲ.

 ಗಣೇಶಯ್ಯನವರ ಒಂದೊಂದು ಕಾದಂಬರಿ ಓದುವಾಗಲು  ಇತಿಹಾಸದ ಒಂದೊಂದು ಕುತೂಹಲಕಾರಿ ಘಟನೆಗಳು ಗೊತ್ತಾಗುತ್ತದೆ. ಅವರ ಕಾದಂಬರಿಗಳು ಕಾಲ್ಪನಿಕವಿರಬಹುದು ಆದರೆ ಅವರು ಪ್ರಸ್ತಾಪಿಸುವ ಐತಿಹಾಸಿಕ ಘಟನೆಗಳು ಮಾತ್ರ ನಿಜವಾದುದು. ಅಲೆಕ್ಸಾಂಡರ್ ಭಾರತಕ್ಕೆ ಬಂದಿದ್ದು, ಅಶೋಕನ ಸಂಪತ್ತು ಬೌದ್ಧ ಧರ್ಮಕ್ಕೆ ಮೀಸಲು ಬಿಟ್ಟಿದ್ದು, ತೆರವಾದಿಗಳು ಎಲ್ಲವು ಇತಿಹಾಸದಲ್ಲಿ ಅದಗಿರಿವುದು ನಿಜ. ಈ ಎಲ್ಲಾ ನಿಜ ಘಟನೆಗಳನ್ನು ಒಟ್ಟುಗೂಡಿಸಿ  ಒಂದು ಎಳೆಯಲ್ಲಿ ಸೇರಿಸಿ ಒಂದು ರೋಚಕ ಕಾದಂಬರಿಯನ್ನು ನಮ್ಮ  ಇಟ್ಟಿದ್ದಾರೆ . ಈ ಕಾದಂಬರಿ ಎಲ್ಲೂ ನಮಗೆ ಬೇಸರ ಬರಿಸುವುದಿಲ್ಲ.   


ಲೇಖಕರ ಮಾತು:

ಕತೆಯಲ್ಲಿನ ಚರಿತ್ರೆ ಮತ್ತು ಚರಿತ್ರೆಯಲ್ಲಿನ ಸತ್ಯತೆ

ಕತೆ ಬರೆಯುವ ಕ್ರಿಯೆಯಲ್ಲಿ ನನಗೊಂದು ವಿರೋಧಾಭಾಸ ಕಂಡುಬರುತ್ತದೆ. ಸಾಹಿತ್ಯದ ಗಂಭೀರ ಆಧ್ಯಯನದಲ್ಲಿ ತೊಡಗಿಸಿಕೊಂಡವರ ಮತ್ತು ಸಾಹಿತ್ಯದ ವಿಮರ್ಶಕರ ಮಧ್ಯ ಈ ಗೊಂದಲ ಬಹಳಷ್ಟು ಚರ್ಚೆಗೆ ಒಳಪಟ್ಟಿರುವ ಸಾಧ್ಯತೆಯಿದ್ದರೂ, ನನಗೆ ಅದರ ಬಗ್ಗೆ ಇಲ್ಲಿ ಹೇಳಿಕೊಳ್ಳುವ ಕಾತುರತೆ ಮತ್ತು ಅವಶ್ಯಕತೆ ಕಾಣುತ್ತಿದೆ. 

ಎಲ್ಲ ಕತೆಗಾರರೂ ತಾವು ಬರೆದಿದ್ದನ್ನು ಓದುಗರ ನಿಜವೆಂದು ನಂಬುವಂತೆ ಬರೆಯಬೇಕೆಂದು ಬಯಸುತ್ತಾರೆ. ಆದರೆ, ಕತೆಗಾರ ಮತ್ತು ಓದುಗ ಇಬ್ಬರಿಗೂ ಸಹ ಅದು ಕತೆ ಎಂದು ಗೊತ್ತಿರುವಾಗ, ಈ ನಂಬಿಕೆ ಹುಟ್ಟಲು ಹೇಗೆ ಸಾಧ್ಯ? ಅದು ಸಾಧ್ಯವಾಗಿದ್ದರೂ ಅದೊಂದು ಹುಸಿನಂಬಿಕೆಯಲ್ಲವೆ? ಈ ದೃಷ್ಟಿಯಲ್ಲಿ, 'ಕೆತೆ'ಯನ್ನು ನಂಬಿಕೆಯಿಂದ ದೂರವಾಗಿರುವಂತೆ ಬರೆದರೆ ಮಾತ್ರ ತಾನೆ ಅದು 'ಕೆತೆ'ಯಾಗಲು ಸಾಧ್ಯ? ಆದರೆ ಹಾಗೆ ಬರೆದಾಗ ಒದುಗರೇಕೆ ಮೆಚ್ಚುವುದಿಲ್ಲ? 'ನೀವು ಬರೆದ ಕತೆಯಲ್ಲಿ ನೈಜತೆ ಎದ್ದು ಕಾಣುತ್ತದೆ' ಎಂದು ಹೊಗಳುವ ಓದುಗರ ಮಾತಲ್ಲಿ ಹುದುಗಿರುವ ಸೂಚನೆ, ಕತೆಯನ್ನು ನಂಬುವಂತೆ ಬರೆಯಬೇಕು ಎಂದಲ್ಲವೆ? ಹಾಗಿದ್ದಲ್ಲಿ ನಂಬುವಂತೆ ಬರೆಯಾಲಾದ ಕತೆಗಳು ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತವೆಯೆಂದೆ? ಬರೆದ ಕತೆ ನಂಬುವಂತ್ತಿದ್ದರೆ ಅದು ಕೇವಲ ಸತ್ಯದ ನಿರೂಪಣೆಯಾಗಿ ಊಳಿಯುತ್ತದೆ ಅಷ್ಟೇ ಹೊರತು ಅದು ಕತೆಯಾಗಲು ಹೇಗೆ ಸಾಧ್ಯ? ಇವೇ ನನ್ನನ್ನು ಕಾಡುವ ವಿರೋಧಾಭಾಸಗಳು ಅಥವ ದ್ವಂದ್ವಗಳು.

ಇನ್ನೊಂದು ವಿಮರ್ಶೆ:- http://goo.gl/nXN0oy




0 comments:

Post a Comment