Friday, August 1, 2014

Filled Under:
, ,

ನರ ಬಲಿ - ಅ. ನ. ಕೃ

Nara Bali - A Na Krishnaraya
ಗತಕಾಲದ ಸಾಮಾಜಿಕ ಜೀವನ ಯಾವಾಗಲೂ ಕುತೂಹಲಕಾರಿ, ಒಂದು ಕಾಲದಲ್ಲಿ ನಮ್ಮ ತಂದೆ ತಾತಂದಿರು ಹೇಗೆ ಬಾಳಿದರು, ಅವರ ಆಶಯಗಳೇನು, ಅಭಿರುಚಿ ಎಂಥದು, ಅವರ ಜೀವನದ ಮೌಲ್ಯಗಳ ಯಾವವು ಎಂಬುದುನ್ನರಿಯಲು ನಾವು ಆಶಿಸುತ್ತೇವೆ. ಆದರೆ ಈ ಪರಿಜ್ಞನ ನಮ್ಮ ಜಾಪಲ್ಯಪೂರ್ಣಕ್ಕಷ್ಟೇ ಎಂದು ಭಾವಿಸುವುದು ತಪ್ಪಾದೀತು, ಹಿರಿಯರ ಜೀವನದಿಂದ ನಮ್ಮ ಜೀವನದಿಂದ ನಮ್ಮ ಜೀವನಕ್ಕೆ ಅತ್ಯವಶ್ಯಕವಾದ ಧೃತಿ, ಬೆಳಕು, ಸತ್ತ್ವ ದೊರೆಯುವುದೇ ಎಂದು ನೋಡಬೇಕು. 

ಈ ಐವತ್ತು ವರ್ಷಗಳ ನಮ್ಮ ಜೀವನವನ್ನು ಪರೀಕ್ಷಿಸಿ ನೋಡಿದರೆ ನೈತಿಕ ಮೌಲ್ಯಗಳ ಅವನತಿ ಸುಸ್ಪಷ್ಟವಾಗಿ ಕಂಡು ಬರಿತ್ತಿದೆ. ಅದರಲ್ಲಿಯೂ ಈ ಹದಿನೆಂಟು ವರ್ಷಗಳಲ್ಲಿ ಅದು ಅಧೋಗತಿಗೆ ಇಳಿದಿದೆ. 

ಸಮಾಜಪ್ರಜ್ಞೆಯುಳ್ಳ . ವಿಚಾರವಂತರು ಅವನತಿಯ ಕಾರನಗಳನ್ನರಸಿ, ಮೌಲ್ಯಗಳ ಪುನರ್ - ಪ್ರತಿಷ್ಠೆಗೆ ಪ್ರಯತ್ನಿಸಬೇಕು. 

ನಮ್ಮ ಆರ್ಥಿಕ ಜೀವನದ ಏರುಪೆರುಗಳೇ ಅವನತಿಯ ಕಾರಣವೆಂದು ಕೆಲವರ ಅಭಿಮತ, ಐವತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ಈಗ ಜೀವನಸಂಗ್ರಾಮ ಪ್ರಬಲವಾಗಿದೆ. ದೇಶದ ರಾಜಕೀಯ ಪರಿಸ್ಥಿತಿಯನ್ನವಲಂಬಿಸಿ ನಮ್ಮ ಆರ್ಥಿಕಸ್ಥಿತಿಯೂ ವಿಪನ್ನಾವಸ್ಥೆಗೆ ಬನ್ದಿದೆ. ಆದರೆ ಆರ್ಥಿಕ ಸುಭದ್ರತೆಯೇ ನೈತಿಕ ಮೌಲ್ಯಗಳ ಮೂಲಾಧಾರ ಎಂದು ಭಾವಿಸುವುದು ತಪ್ಪು ಆರ್ಥಿಕ ಸಮೃದ್ದಿ ಅಪಗತಿಗಳಿಗಿಂತಲೂ ಹಚ್ಚಾಗಿ ಮನೋಧರ್ಮವನ್ನು ಈ ಸಮಸ್ಯ ಅವಲಂಬಿಸುತ್ತದೆ. ರೋಮ್ ಸಾಮ್ರಾಜ್ಯ ಸಮೃದ್ದಿಯ ತುತ್ತ ತುದಿಯಲ್ಲಿದ್ದಾಗಲೇ ಛಿದ್ರಛಿದ್ರವಾದುದನ್ನು ನಾವು ನೆನಪಿಸಿಕೊಳ್ಳಬೇಕು.

'ನರ-ಬಲಿ' ಕಾದಂಬರಿಯಲ್ಲಿ ಆರ್ಥಿಕವಾಗಿ ತೀರ ವಿರುದ್ದವಾದ ಎರಡು ಪಾತ್ರಗಳನ್ನು ತಂದಿದ್ದೇನೆ. ಸಾಹುಕಾರ್ ಪಾಪಣ್ಣನವರ ಡ್ರೈವರ್ ಸೀನಪ್ಪ ಇಬ್ಬರೂ ಒಂದೇ ಗುರಿಯತ್ತ ಸಾಗಿದ್ದಾರೆ; ಇಬ್ಬರೂ ಕಷ್ಟ ಸುಖಗಳನ್ನು ಧಿಮಂತರಂತೆ ಎದುರಿಸುತ್ತಾರೆ; ಅವರ ಸಮಾನಧರ್ಮ, ಅವರ ಸಾಮಾಜಿಕ ಸ್ಥಿತಿಯನ್ನು ಮೆಟ್ಟಿ ತಲೆಯತ್ತಿ ನಿಂತಿದೆ. 

ಹಳೆಯಕಾಲದ ನಿಷ್ಕ್ರಮಣ, ಹೊಸ ಕಾಲದ ಉದಯಗಳ ಸಂಧಿಕಾಲದ ಸಾಮಾಜಿಕ ಚರಿತ್ರೆಯನ್ನು ನಾನು ಈ ಕಾದಮ್ಬರುಯ ವಸ್ತುವನ್ನಾಗಿ ಆರಿಸಿ ಕೊಂಡಿದ್ದೇನೆ. ಎತ್ತಿನಗಾಡಿ, ಅಜ್ಜಿಯ ಹಾಡು, ಕರೀ ನಿಲುವಂಗಿಗಳು ಮೋಟಾರುಕಾರು, ರೇಡಿಯೋ, ಸೂಟ್ ಗಳಾಗಿ ಪರಿವರ್ತಿವಾಗಿವೆ. ಆದರೆ ಇದೇ ಪ್ರಮಾಣದಲ್ಲಿ ನಮ್ಮ ಋಜುತ್ತ್ವ, ಸತ್ಯಾನುಸಂಧಾನ ಪ್ರಗತಿ ಹೊಂದಿವೆಯೇ?

ಇದರ ಮೂಲಕಾರಣ, ಆಧುನಿಕ ಜೀವನ ವ್ಯಕ್ತಿಯನ್ನು ವ್ಯಕ್ತಿಯನ್ನಾಗಿಯೇ  ಉಳಿಸುತ್ತದೆ. ಅವನು ತನ್ನ ಸುಖಕ್ಕೆ ಎಷ್ಟು ಜನ ಬೇಕೋ ಅಷ್ಟು ಜನರನ್ನು ಮಾತ್ರ ಸಂಗ್ರಹಿಸಿಕೊಳ್ಳುತ್ತಾನೆ. ಆದರೆ ಕೆಲವು ದಶಕಗಳ ಹಿಂದೆ ವ್ಯಕ್ತಿ ಸಮಷ್ಟಿಯ ಅಂಗವಾಗಿದ್ದ. ಅವನ ಊರು, ಅವನ ಹಳ್ಳಿ, ಅವನು ವಾಸಿಸುತ್ತಿದ್ದ ಬೀದಿ ಅವನ ಸಂಸಾರವಾಗಿತ್ತು. ತಮ್ಮ ಸುತ್ತಮುತ್ತಲಿನ, ಆಶ್ರೀತರ, ಕಷ್ಟಸುಖ ತನ್ನದುನ್ನುವ ಸಂಪ್ರದಾಯದಲ್ಲಿ ಹಿಂದಿನವರು ಬೆಳೆದಿದ್ದರು. ಈ ಮೌಲಿಕ ಜೀವನವನ್ನು ಇಂದು ಯಾವದಾದರೊಂದು ಸ್ವರೂಪದಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಈ ಕಾದಂಬರಿಯಲ್ಲಿ ಎತ್ತಿದ್ದೇನೆ. 
0 comments:

Post a Comment