Monday, August 25, 2014

ಅಚ್ಚರಿ - ಉಜ್ಜಿನಿ ರುದ್ರಪ್ಪ

Achhari - Ujjini Rudrappa



ಪತ್ರಕರ್ತ ಉಜ್ಜಿನಿ ರುದ್ರಪ್ಪ ತಮ್ಮಲ್ಲಿಯ ಕುತೂಹಲವನ್ನು ಜಾಗೃತವಾಗಿ ಇಟ್ಟುಕೊಂಡಿದ್ದರ ಕುರುಹು ಎಂಬಂತೆ 'ಅಚ್ಚರಿ' ಎಂಬ ಕೃತಿಯನ್ನು ನೀಡಿದ್ದಾರೆ. ಇದರಲ್ಲಿ ಎರಡು ಭಾಗಗಳಿವೆ. ಮೊದಲ ಭಾಗದಲ್ಲಿ ತಮ್ಮ ಸುತ್ತಲಿನ ಪರಿಸರದಲ್ಲಿ ಇತರರಿಗೆ ಸಾಮಾನ್ಯ ಅನಿಸಬಹುದಾದ ವಿಷಯದಲ್ಲಿಯ ಅಚ್ಚರಿ ಅಂಶವನ್ನು ಗಮನಕ್ಕೆ ತರುತ್ತಾರೆ. ಅವರು ಹೇಳಿದ ಮೇಲೆಯೇ ಅದರ ಮಹತ್ವ ನಮಗೆ ಗೋಚರವಾಗುವುದು. ಸಾಂಕೇತಿಕವಾದ ಕರಫಲ್ ಭಾಷೆ ಇಂದು ವಿನಾಶದ ಹಾದಿಯಲ್ಲಿದೆ ಎಂದು ಅವರು ಬರೆದಿದ್ದಾರೆ. ಇದನ್ನು ಗೂಢಚರ್ಯದಂಥ ಕೆಲಸಗಳಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಇದರತ್ತ ಗಮನ ಸೆಳೆದಿರುವುದೇ ರುದ್ರಪ್ಪ ಅವರ ಮಹಾನ್ ಸಾಧನೆ. ಇಂಥ ಹಲವು ವಿಸ್ಮಯಗಳನ್ನು ಅವರು ಈ ಕೃತಿಯಲ್ಲಿ ನೀಡಿದ್ದಾರೆ. ಇದರ ಎರಡನೇ ಭಾಗದಲ್ಲಿ ಹದಿನೆಂಟು 'ಗಣ್ಯರು ಕಂಡಂತೆ ಕಾಂಚಾಣ'ವನ್ನು ಕಿರು ಸಂದರ್ಶನಗಳಲ್ಲಿ ಹೇಳಿದ್ದಾರೆ. ಹಣದ ಕುರಿತ ಈ ಅನುಭವದ ಮಾತುಗಳು ಸಾಮಾನ್ಯರಿಗೆ ದಾರಿದೀಪದಂತೆ ಇವೆ.



Friday, August 22, 2014

ಅನುಸಂಧಾನ - ಬರಗೂರು ರಾಮಚಂದ್ರಪ್ಪ

Anusandhana -Baraguru Ramachandrappa




 ನಮ್ಮ ಸಮಕಾಲಿನ ಬರಹಗಾರರಲ್ಲಿ ಸಮಕಾಲಿನ ವಿವಾದಗಳಿಗೆ ತಕ್ಷಣವೇ ಸದಾ ಜಾಗೃತರಾಗಿರುವ ಬರಗೂರು ರಾಮಚಂದ್ರಪ್ಪನವರ ವಿವಿಧ ಕೃತಿಗೆಳಿಗೆ ಬರೆದ ಮುನ್ನುಡಿ ರೂಪದ ಬರಹಗಳ ಸಂಕಲನ 'ಅನುಸಂಧಾನ'. ಮುನ್ನುಡಿ ಬರಹವು ಸಾಹಿತ್ಯದಲ್ಲಿ  ಒಂದು ವಿಶೇಷ ಪ್ರಕಾರವಾಗಿ ಬೆಳೆದುಬರುತ್ತಿದೆ. ಅದರ ಲಕ್ಷಣ, ಸ್ವರೂಪಗಳನ್ನು ಇಂಥ ಕೃತಿಯನ್ನು ಇಟ್ಟುಕೊಂಡು ವಿರ್ವಚಿಸಬಹುದಾಗಿದೆ.

ಸಾಮಾನ್ಯವಾಗಿ ಕೃತಿಯೊಂದನ್ನು ಓದುವ ಓದುಗನಿಗೆ ಕೃತಿಯ ಮುಖ್ಯಾಂಶಗಳು ಹಾಗೂ ಆಶಯವನ್ನು ತಿಳಿಸುತ್ತ ಕೃತಿಕಾರನಿಗೆ ಶುಭಕೋರುವುದು ಈ ಬರಹದ ಒಂದು ಲಕ್ಷಣ. ಇಂಥವುಗಳಲ್ಲಿ ಕಾಟು ವಿಮರ್ಶೆಯನ್ನು ಕಾಣುವುದು ಸಾಧ್ಯವಿಲ್ಲ. ಮುನ್ನುಡಿ ಅಪೇಕ್ಷಿಸುವ ಕೃತಿಕಾರ ಕೃತಿಯ ಬಗ್ಗೆ. ತನ್ನ ಬಗ್ಗೆ ಒಳ್ಳೆಯ ಮಾತುಗಳನ್ನೇ ಬರೆಯಬೇಕು ಎಂದು ಬಯಸುವುದು ತೀರಾ ಸಹಜ. ಇಂಥ ಆಡಕ್ಕೊತ್ತಿನಲ್ಲಿ ಸಿಲುಕುವ ಮುನ್ನುಡಿಕಾರರು ತಮ್ಮ ಮಿತಿಯಲ್ಲಿಯೇ ಪುಸ್ತಕವೊಂದರ ಆಲೋಚನೆ ಮಾಡುತ್ತಾರೆ. ಸೂಕ್ಷ್ಮವಾಗಿ ಕೊರತೆಗಳನ್ನು ದಾಖಲಿಸುತ್ತಾರೆ. ಇನ್ನೊಂದು ಕೃತಿಯೊಂದಿಗೆ ಈ ಕೃತಿಯನ್ನು ಹೋಲಿಸಿ ನೋಡುತ್ತಾರೆ. ವೈಯಕ್ತಿವಾದ ಪ್ರೀತಿ ವಿಶ್ವಾಸಗಳ ನೆಲೆಯಲ್ಲಿ ಸಹೃದಯತೆಯನ್ನು ನಾವು ಮುನ್ನುಡಿಗಳಲ್ಲಿ ಕಾಣಬಹುದು.

ಬರಗೂರರ ಈ ಕೃತಿಯಲ್ಲಿ ಮುನ್ನುಡಿಗಳ ಜೊತೆಗೆ ಕೆಲವು ಪುಸ್ತಕಾವಲೋಕನಗಳೂ ಇವೆ. ಮುನ್ನುಡಿ ಬರಹಗಳಿಗೆ ಈ ಕೃತಿಯೊಂದು ದಿಕ್ಸೋಚಿಯೂ ಆಗಬಲ್ಲದು. ಬರಗೂರರ ಬರಹದ ಒಂದು ವಿಶೇಷವೆಂದರೆ, ಅವರು ಕೃತಿಯೊಂದರಲ್ಲಿ ಪ್ರತಿಪಾದನೆಯಾದ ವಿಷಯವನ್ನು ಗ್ರಹಿಸುತಾರೆ ಮತ್ತು ಆ ವಿಚಾರವನ್ನು ವಿಸ್ತರಿಸುತ್ತಾರೆ. ಅದಕ್ಕೊಂದು ಉದಾರಹಣೆ ಈ ಕೃತಿಯ, 'ಹರಿಹರಪ್ರಿಯರ ಕೆಲವು ಕೃತಿಗಳು' ಲೇಖನ. ಅದರಲ್ಲಿ "ಅಸಹನೆ ಮತ್ತು ಆತಂಕಗಳ ನಡುವೆ ಇರುವ ಸೂಕ್ಷ್ಮಗೆರೆಯನ್ನು  ಕಂಡುಕೊಳ್ಳುವ ಸಂವೇದನಾಶೀಲತೆ ಇದ್ದಾಗ ಆತಂಕ ಮೌಲ್ಯವಾಗುತ್ತ ಅಸಹನೆ ಹಿನ್ನೆಲೆಗೆ ಸರಿಯುತ್ತದೆ. ಸಂಕಟ ಉರಿಯುತ್ತ ಸಿಟ್ಟು ಆರತೊಡಗುತ್ತದೆ. ಹರಿಹರಪ್ರಿಯ ಅವರ ಬರವಣೆಗೆಯುದ್ದಕ್ಕೂ ಆ ಸಹನೆ = ಆತಂಕ ಮತ್ತು ಸಿಟ್ಟು- ಸಂಕಟಗಳ ನಡುವೆ ತುಯ್ದಾಡುತ್ತ ಆರೋಗ್ಯಕರ ನೆಲೆಗೆ ಹಾರೈಸುವ ತಳಮಳ ಹೇಳುತ್ತಾ ಬರಗೂರರು ಸಾಹಿತ್ಯದ ಒಂದು ಸಿದ್ದಾಂತವನ್ನು ಸೂತ್ರರೂಪದಲ್ಲಿ ವಿವರಿಸುತ್ತಾರೆ.

ಬರಗೂರರ ಒಳ ನೋಟಗಳಿಗೆ ಇನ್ನೊಂದು ಉದಾಹರಣೆ 'ಮೂರು ಕಾದಂಬರಿಗಳು: ಹಾಡ್ಲಹಳ್ಳಿ ನಾಗರಾಜ್' ಲೇಖನ ನೋಡಬಹುದು. ಅಲ್ಲಿ ಅವರು ಅಕ್ಷರ ಸಂಸ್ಕೃತಿ ಸ್ಥಿ ತ್ಯಂತರಗೊಂಡ ರೀತಿಯನ್ನು ದಾಖಲಿಸುತ್ತಾರೆ. "ನಮ್ಮಲ್ಲಿ ಸಾಹಿತ್ಯ ಸಂಭ್ರಮ ಮತ್ತು ಸಮೃದ್ದಿಗಳು ಕಡಿಮೆಯಾಗಿವೆಯೆಂದು ಕೆಲವು ಪ್ರತಿಷ್ಠಿತರು   ಆಗಾಗ್ಗೆ ಹಳಹಳಿಸುತ್ತಾರೆ. ಈ ಹಳಹಳಿಕೆಗೆ ಕಾರಣವಿಲ್ಲ ಎಂದುದು ನನ್ನ ಅಭಿಪ್ರಾಯ. ನಮ್ಮ ಸಂದರ್ಭದ ಸಾಹಿತ್ಯ ಸಂಭ್ರಮ ಮತ್ತು ಸಮೃದ್ದಿಗಳು ಸ್ಥಳಾಂತರಗೊಂಡಿವೆ; ಅಕ್ಷರ ಸಂಸ್ಕೃತಿಯ 'ಸಾಮಾಜಿಕ ರೇಖೆ'ಗಳು ಅಳಿಸಿಹೋಗುತ್ತ ಹೊಸ ಅನುಭವಗಳು  ಅಕ್ಷರವಾಗತೊಡಗಿದ ಸನ್ನಿವೇಶದಲ್ಲಿ ನಾವು ಹಾದುಹೋಗುತ್ತಿದ್ದೇವೆ. ಪ್ರತಿಷ್ಠಿತ ವಲಯದ ಪ್ರತಿಗಾಮಿ ಪೀಠಗಳಿಗೆ ನಡುಕ ಹುಟ್ಟಿ ಸಂಭ್ರಮ - ಸಮೃದ್ದಿಗಳ ಅಭಾವ ಕಾಣಿಸಿಕೊಂಡಿದ್ದರೆ  ಅಂಥವರಿಗೆ ಅದು ಸಹಜ - ಸ್ವಾಭಾವಿಕ. ಆದರೆ ಸಾಂಸ್ಕೃತಿಕ ಆವರಣದಲ್ಲಿ ಅಕ್ಷರಾಕೃತಿಗಳ ಕುಣಿತಕ್ಕೆ ಕಾರಣವಾಗಿರುವ ನಿರ್ಲಷಿತ ಸಾಮಾಜಿಕ ವಲಯಗಳಿಗೆ ಸಂಭ್ರಮವೂ ಇದೆ; ಆವೇಶವು ಇದೆ; ಹದಲ್ಲೇ ಬರಬೇಕೆಂಬ ಒತ್ತಾಸೆಯೂ ಇದೆ. ಇಂಥ ವಿಶಿಷ್ಟ ಸಂದರ್ಭವನ್ನು ಅರ್ಥಮಾಡಿಕೊಳ್ಳುವ ಮನಸ್ಸುಗಳು ಸಮೃದ್ದವಾಗಬೇಕಾಗಿದೆ...." ನಮ್ಮಲ್ಲಿರುವ ಪ್ರತಿಷ್ಠಿತ ವಿಮರ್ಶಕ ವಲಯವು ಹೊಸಬರು ಬರಹಗಳನ್ನು ಓದಿಲ್ಲ ಮತ್ತು ಬರಹಗಾರರನ್ನು ಗುರುತಿಸಿಲ್ಲ ಎಂದು ಅವರು ಹೇಳುತ್ತಾರೆ. ಕೃತಿಯೊಂದರ ಕೊರತೆಯನ್ನು ಹೇಳುವಲ್ಲಿಯೂ ಬರಗೂರರ ಹಿಂದೆಮುಂದೆ ನೋಡುವುದಿಲ್ಲ. ಇದೇ ಲೇಖನದ ಕೊನೆಯಲ್ಲಿ ಅವರು, "ಬಿಂಗಾರೆ ಕಲ್ಲು ಮತ್ತು ಕಡವೆ ಬೇಟೆ - ಹಾಡ್ಲಹಳ್ಳಿ ನಾಗರಾಜ್ ಅವರ ಉತ್ತಮ ಕತೆಗಾರಿಕೆ ಉದಾಹರಣೆಯಾಗಿ ನಿಲ್ಲುವ ರಚನೆಗಳಾಗಿವೆ. ಆದರೆ ಇದೇ ಮಾತನ್ನು 'ಕೋಕಿಲಾ' ಎಂಬ ಕಿರು ಕಾದಂಬರಿಯ ಬಗ್ಗೆ ಹೇಳಲಾರೆ. ಅದೊಂದು ಸಾಮಾನ್ಯ ಕಥಾನಕ. ವಸ್ತುವಿನಲ್ಲಿರುವ ಆದರ್ಶ, ಸ್ತ್ರೀಪರ ಸೃಷ್ಟಿಕೋನಗಳು ಮನನೀಯವಾದರೂ ಗಾಢಾವಾಗಿ ಕಾಡುವ ಕತೆಗಾರಿಕೆ ಕಾಣುವುದಿಲ್ಲ. ಮೊದಲೆರಡು ಕೃತಿಗಳ ನಾಗರಾಜ್ ಇಲ್ಲಿ ನಾಪತ್ತೆಯಾಗಿದ್ದಾರೆ...". ಈ ಕೃತಿಯನ್ನು ಇಟ್ಟುಕೊಂಡು ಬರಗೂರರ ವಿಮರ್ಶೆಯ ನೆಲೆಗಳೇನು, ಅವರ ಸಾಹಿತ್ಯ ಮೀಮಾಂಸೆಯೇನು ಎಂಬುದನ್ನು ಗುರುತಿಸಬಹುದಾಗಿದೆ. ಈ ದೃಷ್ಟಿಯಿಂದ ಇದೊಂದು ಮಹತ್ವದ ಕೃತಿ 
 


Thursday, August 14, 2014

ಚಿತಾದಂತ - ಕೆ ಎನ್ ಗಣೇಶಯ್ಯ

 Chitadanta K. N. Ganeshaiah

 


ಗಣೇಶಯ್ಯ ನವರ ಕಾದಂಬರಿಗಳೇ ಹಾಗೆ ಹಿಡಿದರೆ ಮುಗಿಸುವವರೆಗೂ ಸಮದಾನವಿಲ್ಲ, ಕುತೂಹಲ ಹುಟ್ಟಿಸಿ, ತಲೆಗೆ ಹುಳು ಬಿಟ್ಟು  ಹಾಳೆವರೆಗೂ ನಮ್ಮನ್ನು ಕಾಡುತ್ತದೆ. ಚಿತದಂತ ಕಾದಂಬರಿ ಅಲೆಕ್ಸಾಂಡರ್ನ  ಭಾರತ ಪ್ರವೇಶ, ಭುದ್ದನ ಅನುಯಾಹಿಗಳ ಚಿನ್ನದ ಭಂಡಾರ, ಅಧುನಿಕ ರಹಸ್ಯ ಸೈನಿಕರದ ತೆರವಾದಿಗಳು ಮತ್ತು ಸಿಬಿಐ ಎಲ್ಲಾ ಒಂದು ರೋಚಕ ಕಾದಂಬರಿಯನ್ನು ಅರ್ಧದಲ್ಲೇ ಬಿಡಲು ಮನಸ್ಸು ಬರುವುದಿಲ್ಲ.

 ಗಣೇಶಯ್ಯನವರ ಒಂದೊಂದು ಕಾದಂಬರಿ ಓದುವಾಗಲು  ಇತಿಹಾಸದ ಒಂದೊಂದು ಕುತೂಹಲಕಾರಿ ಘಟನೆಗಳು ಗೊತ್ತಾಗುತ್ತದೆ. ಅವರ ಕಾದಂಬರಿಗಳು ಕಾಲ್ಪನಿಕವಿರಬಹುದು ಆದರೆ ಅವರು ಪ್ರಸ್ತಾಪಿಸುವ ಐತಿಹಾಸಿಕ ಘಟನೆಗಳು ಮಾತ್ರ ನಿಜವಾದುದು. ಅಲೆಕ್ಸಾಂಡರ್ ಭಾರತಕ್ಕೆ ಬಂದಿದ್ದು, ಅಶೋಕನ ಸಂಪತ್ತು ಬೌದ್ಧ ಧರ್ಮಕ್ಕೆ ಮೀಸಲು ಬಿಟ್ಟಿದ್ದು, ತೆರವಾದಿಗಳು ಎಲ್ಲವು ಇತಿಹಾಸದಲ್ಲಿ ಅದಗಿರಿವುದು ನಿಜ. ಈ ಎಲ್ಲಾ ನಿಜ ಘಟನೆಗಳನ್ನು ಒಟ್ಟುಗೂಡಿಸಿ  ಒಂದು ಎಳೆಯಲ್ಲಿ ಸೇರಿಸಿ ಒಂದು ರೋಚಕ ಕಾದಂಬರಿಯನ್ನು ನಮ್ಮ  ಇಟ್ಟಿದ್ದಾರೆ . ಈ ಕಾದಂಬರಿ ಎಲ್ಲೂ ನಮಗೆ ಬೇಸರ ಬರಿಸುವುದಿಲ್ಲ.   


ಲೇಖಕರ ಮಾತು:

ಕತೆಯಲ್ಲಿನ ಚರಿತ್ರೆ ಮತ್ತು ಚರಿತ್ರೆಯಲ್ಲಿನ ಸತ್ಯತೆ

ಕತೆ ಬರೆಯುವ ಕ್ರಿಯೆಯಲ್ಲಿ ನನಗೊಂದು ವಿರೋಧಾಭಾಸ ಕಂಡುಬರುತ್ತದೆ. ಸಾಹಿತ್ಯದ ಗಂಭೀರ ಆಧ್ಯಯನದಲ್ಲಿ ತೊಡಗಿಸಿಕೊಂಡವರ ಮತ್ತು ಸಾಹಿತ್ಯದ ವಿಮರ್ಶಕರ ಮಧ್ಯ ಈ ಗೊಂದಲ ಬಹಳಷ್ಟು ಚರ್ಚೆಗೆ ಒಳಪಟ್ಟಿರುವ ಸಾಧ್ಯತೆಯಿದ್ದರೂ, ನನಗೆ ಅದರ ಬಗ್ಗೆ ಇಲ್ಲಿ ಹೇಳಿಕೊಳ್ಳುವ ಕಾತುರತೆ ಮತ್ತು ಅವಶ್ಯಕತೆ ಕಾಣುತ್ತಿದೆ. 

ಎಲ್ಲ ಕತೆಗಾರರೂ ತಾವು ಬರೆದಿದ್ದನ್ನು ಓದುಗರ ನಿಜವೆಂದು ನಂಬುವಂತೆ ಬರೆಯಬೇಕೆಂದು ಬಯಸುತ್ತಾರೆ. ಆದರೆ, ಕತೆಗಾರ ಮತ್ತು ಓದುಗ ಇಬ್ಬರಿಗೂ ಸಹ ಅದು ಕತೆ ಎಂದು ಗೊತ್ತಿರುವಾಗ, ಈ ನಂಬಿಕೆ ಹುಟ್ಟಲು ಹೇಗೆ ಸಾಧ್ಯ? ಅದು ಸಾಧ್ಯವಾಗಿದ್ದರೂ ಅದೊಂದು ಹುಸಿನಂಬಿಕೆಯಲ್ಲವೆ? ಈ ದೃಷ್ಟಿಯಲ್ಲಿ, 'ಕೆತೆ'ಯನ್ನು ನಂಬಿಕೆಯಿಂದ ದೂರವಾಗಿರುವಂತೆ ಬರೆದರೆ ಮಾತ್ರ ತಾನೆ ಅದು 'ಕೆತೆ'ಯಾಗಲು ಸಾಧ್ಯ? ಆದರೆ ಹಾಗೆ ಬರೆದಾಗ ಒದುಗರೇಕೆ ಮೆಚ್ಚುವುದಿಲ್ಲ? 'ನೀವು ಬರೆದ ಕತೆಯಲ್ಲಿ ನೈಜತೆ ಎದ್ದು ಕಾಣುತ್ತದೆ' ಎಂದು ಹೊಗಳುವ ಓದುಗರ ಮಾತಲ್ಲಿ ಹುದುಗಿರುವ ಸೂಚನೆ, ಕತೆಯನ್ನು ನಂಬುವಂತೆ ಬರೆಯಬೇಕು ಎಂದಲ್ಲವೆ? ಹಾಗಿದ್ದಲ್ಲಿ ನಂಬುವಂತೆ ಬರೆಯಾಲಾದ ಕತೆಗಳು ಹೆಚ್ಚು ಮೆಚ್ಚುಗೆಗೆ ಪಾತ್ರವಾಗುತ್ತವೆಯೆಂದೆ? ಬರೆದ ಕತೆ ನಂಬುವಂತ್ತಿದ್ದರೆ ಅದು ಕೇವಲ ಸತ್ಯದ ನಿರೂಪಣೆಯಾಗಿ ಊಳಿಯುತ್ತದೆ ಅಷ್ಟೇ ಹೊರತು ಅದು ಕತೆಯಾಗಲು ಹೇಗೆ ಸಾಧ್ಯ? ಇವೇ ನನ್ನನ್ನು ಕಾಡುವ ವಿರೋಧಾಭಾಸಗಳು ಅಥವ ದ್ವಂದ್ವಗಳು.

ಇನ್ನೊಂದು ವಿಮರ್ಶೆ:- http://goo.gl/nXN0oy


Tuesday, August 5, 2014

ಏಳು ರೊಟ್ಟಿಗಳು - ಕೆ ಎನ್ ಗಣೇಶಯ್ಯ

Elu Rottigalu K. N. Ganeshaiah




ನಮ್ಮ ಇತಿಹಾಸ ಎಷ್ಟು ಕಲುಷಿತವಾಗಿದೆ ಎಂದರೆ ಯಾವುದು ನಿಜ ಯಾವುದು ಸುಳ್ಳು ಎಂದು ಹೇಳಲಾಗುವುದಿಲ್ಲ. ನಮ್ಮ ಭಾರತದ ಇತಿಹಾಸ ಬ್ರಿಟಿಷರು ಕಲುಷಿತ ಮಾಡಿ ಹೋದರು, ಈ ನಮ್ಮ ರಾಜಕಾರಣಿಗಳು ತಮ್ಮ ಮತ ಪೆಟ್ಟಿಗೆ ಉಳಿಸಿಕೊಳ್ಳಲು ಇನ್ನು ಅದನ್ನೆ ಮಾಡುತ್ತಿದ್ದಾರೆ. ನಿಜವಾದ ಇತಿಹಾಸದ ಬಗ್ಗೆ ಮುಂದೆ ಗೊತ್ತಾಗೊ ಬಗ್ಗೆ ನಗಂತೂ ಆಶಯ ಇಲ್ಲ, ಯಾಕೆಂದರೆ ಸಂಶೋಧನೆ ಮಾಡೊ ಉಸ್ತ್ತುಕತೆ ಇದ್ದರು ಯಾರು ಪ್ರೋಸ್ತಹ ಮಾಡೋಲ್ಲ ಇದರ ಬಗ್ಗೆ ಬರೆಯುತ ಹೋದರೆ ಈ ಲೇಖನ ಸಾಲೋದಿಲ್ಲ. ಗಣೇಶಯ್ಯನವರು ಬರೆದಿರುವ 'ಏಳು ರೊಟ್ಟಿಗಳು' ಐತಿಹಾಸಿಕ ಕಾದಂಬರಿ ಸ್ವತಂತ್ರ ನಂತರ ಹೈದರಾಬಾದ್ ನಲ್ಲಿ ನಡೆದಿರಬಹುದಾದ ಘಟನೆಗಳನ್ನು ಕುರಿತಾಗಿದೆ. 

ಗಣೇಶಯ್ಯನವರು ಬರೆದಿರುವ ಇತರೆ ಕಾದಂಬರಿಗಳಂತೆ ಇದುವೇ ಕಾಲ್ಪನಿಕ ಮಿಶ್ರಿತ ಇತಿಹಾಸ ಕಥ. ಸ್ವತಂತ್ರ ನಂತರ ಹೈದರಾಬಾದ್ ರಾಜ್ಯವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂದು ಹೈದರಾಬಾದ್ ನವಾಬರು ಪ್ರಯತ್ನಿಸಿದ್ದು ಎಲ್ಲರಿಗು ಗೊತ್ತಿದೆ. ಇದನ್ನು ತಡೆಯಲು ನೆಹರು ಸೇನೆಯನ್ನು ಕಳಿಸುತ್ತಾರೆ, ಸೇನೆ ಕಾರ್ಯಾಚರಣೆ ನಟರ ಹೈದರಾಬಾದ್ ಭಾರತದ ಭಾಗವಾಗುತ್ತದೆ, ಇದೆಲ್ಲ ಇತಿಹಾಸ. ಪರದೆ ಹಿಂದೆ ನಡೆದ ಘಟನೆಗಳು ಮತ್ತು ಅದರೊಳಗೆ ಒಂದು ರೋಚಕ ನಿಧಿ ಹುಡುಕುವ ಕಥೆಯನ್ನು ಸುಂದರವಾಗಿ ಮತ್ತು ಎಲ್ಲೂ ಅಧಿಕ ಅನಿಸದಂತೆ ಹಣೆದಿದ್ದಾರೆ. 

ಈ ಕಾದಂಬರಿ ಬರೆಯಲು  ಗಣೇಶಯ್ಯನವರು ಹೈದರಬಾದ್ ಇತಿಹಾಸದ ಬಗ್ಗೆ ಮಾಡಿರುವ ಅಧ್ಯಾನ ಶ್ಲಾಘನೀಯ. ನಿಜಾಮ್ ರ ನಿಜವಾದ ಕಥೆ ತಿಳಿಯಲು ಹೈದರಾಬಾದ್ ಗಲ್ಲಿ ಗಲ್ಲಿ ಸುತ್ತಿ ಘಟನೆಗಳನ್ನು ಕೂಡಿಹಾಕಿ ಮತ್ತು ಭಾರತದಲ್ಲಿ ನಿಷೇದಿತ ಪುಸ್ತಕದ ಜೆರಾಕ್ಸ್ ಪ್ರತಿ ಅಧ್ಯಾನ ಮಾಡಿ ಈ ಸುಂದರವಾದ ರೋಚಕ ಕಾದಂಬರಿಯನ್ನು ಬರೆದ್ದಿದ್ದಾರೆ. ಇಲ್ಲಿ ಗೋಪ್ಯವಾದ ನಿಶಿ ಇದೆ, ಇಂಟೆಲಿಜೆನ್ಸ್ ಆಫೀಸರ್ಸ್ ಇದಾರೆ, ಗುಪ್ತ ಸೈನಿಕರಿದ್ದಾರೆ, ... ಒಂದು ರೋಚಕ ಕಾದಂಬರಿಗೆ ಇನ್ನೇನು ಬೇಕು. 


Friday, August 1, 2014

ನರ ಬಲಿ - ಅ. ನ. ಕೃ

Nara Bali - A Na Krishnaraya




ಗತಕಾಲದ ಸಾಮಾಜಿಕ ಜೀವನ ಯಾವಾಗಲೂ ಕುತೂಹಲಕಾರಿ, ಒಂದು ಕಾಲದಲ್ಲಿ ನಮ್ಮ ತಂದೆ ತಾತಂದಿರು ಹೇಗೆ ಬಾಳಿದರು, ಅವರ ಆಶಯಗಳೇನು, ಅಭಿರುಚಿ ಎಂಥದು, ಅವರ ಜೀವನದ ಮೌಲ್ಯಗಳ ಯಾವವು ಎಂಬುದುನ್ನರಿಯಲು ನಾವು ಆಶಿಸುತ್ತೇವೆ. ಆದರೆ ಈ ಪರಿಜ್ಞನ ನಮ್ಮ ಜಾಪಲ್ಯಪೂರ್ಣಕ್ಕಷ್ಟೇ ಎಂದು ಭಾವಿಸುವುದು ತಪ್ಪಾದೀತು, ಹಿರಿಯರ ಜೀವನದಿಂದ ನಮ್ಮ ಜೀವನದಿಂದ ನಮ್ಮ ಜೀವನಕ್ಕೆ ಅತ್ಯವಶ್ಯಕವಾದ ಧೃತಿ, ಬೆಳಕು, ಸತ್ತ್ವ ದೊರೆಯುವುದೇ ಎಂದು ನೋಡಬೇಕು. 

ಈ ಐವತ್ತು ವರ್ಷಗಳ ನಮ್ಮ ಜೀವನವನ್ನು ಪರೀಕ್ಷಿಸಿ ನೋಡಿದರೆ ನೈತಿಕ ಮೌಲ್ಯಗಳ ಅವನತಿ ಸುಸ್ಪಷ್ಟವಾಗಿ ಕಂಡು ಬರಿತ್ತಿದೆ. ಅದರಲ್ಲಿಯೂ ಈ ಹದಿನೆಂಟು ವರ್ಷಗಳಲ್ಲಿ ಅದು ಅಧೋಗತಿಗೆ ಇಳಿದಿದೆ. 

ಸಮಾಜಪ್ರಜ್ಞೆಯುಳ್ಳ . ವಿಚಾರವಂತರು ಅವನತಿಯ ಕಾರನಗಳನ್ನರಸಿ, ಮೌಲ್ಯಗಳ ಪುನರ್ - ಪ್ರತಿಷ್ಠೆಗೆ ಪ್ರಯತ್ನಿಸಬೇಕು. 

ನಮ್ಮ ಆರ್ಥಿಕ ಜೀವನದ ಏರುಪೆರುಗಳೇ ಅವನತಿಯ ಕಾರಣವೆಂದು ಕೆಲವರ ಅಭಿಮತ, ಐವತ್ತು ವರ್ಷಗಳ ಹಿಂದೆ ಇದ್ದುದಕ್ಕಿಂತಲೂ ಈಗ ಜೀವನಸಂಗ್ರಾಮ ಪ್ರಬಲವಾಗಿದೆ. ದೇಶದ ರಾಜಕೀಯ ಪರಿಸ್ಥಿತಿಯನ್ನವಲಂಬಿಸಿ ನಮ್ಮ ಆರ್ಥಿಕಸ್ಥಿತಿಯೂ ವಿಪನ್ನಾವಸ್ಥೆಗೆ ಬನ್ದಿದೆ. ಆದರೆ ಆರ್ಥಿಕ ಸುಭದ್ರತೆಯೇ ನೈತಿಕ ಮೌಲ್ಯಗಳ ಮೂಲಾಧಾರ ಎಂದು ಭಾವಿಸುವುದು ತಪ್ಪು ಆರ್ಥಿಕ ಸಮೃದ್ದಿ ಅಪಗತಿಗಳಿಗಿಂತಲೂ ಹಚ್ಚಾಗಿ ಮನೋಧರ್ಮವನ್ನು ಈ ಸಮಸ್ಯ ಅವಲಂಬಿಸುತ್ತದೆ. ರೋಮ್ ಸಾಮ್ರಾಜ್ಯ ಸಮೃದ್ದಿಯ ತುತ್ತ ತುದಿಯಲ್ಲಿದ್ದಾಗಲೇ ಛಿದ್ರಛಿದ್ರವಾದುದನ್ನು ನಾವು ನೆನಪಿಸಿಕೊಳ್ಳಬೇಕು.

'ನರ-ಬಲಿ' ಕಾದಂಬರಿಯಲ್ಲಿ ಆರ್ಥಿಕವಾಗಿ ತೀರ ವಿರುದ್ದವಾದ ಎರಡು ಪಾತ್ರಗಳನ್ನು ತಂದಿದ್ದೇನೆ. ಸಾಹುಕಾರ್ ಪಾಪಣ್ಣನವರ ಡ್ರೈವರ್ ಸೀನಪ್ಪ ಇಬ್ಬರೂ ಒಂದೇ ಗುರಿಯತ್ತ ಸಾಗಿದ್ದಾರೆ; ಇಬ್ಬರೂ ಕಷ್ಟ ಸುಖಗಳನ್ನು ಧಿಮಂತರಂತೆ ಎದುರಿಸುತ್ತಾರೆ; ಅವರ ಸಮಾನಧರ್ಮ, ಅವರ ಸಾಮಾಜಿಕ ಸ್ಥಿತಿಯನ್ನು ಮೆಟ್ಟಿ ತಲೆಯತ್ತಿ ನಿಂತಿದೆ. 

ಹಳೆಯಕಾಲದ ನಿಷ್ಕ್ರಮಣ, ಹೊಸ ಕಾಲದ ಉದಯಗಳ ಸಂಧಿಕಾಲದ ಸಾಮಾಜಿಕ ಚರಿತ್ರೆಯನ್ನು ನಾನು ಈ ಕಾದಮ್ಬರುಯ ವಸ್ತುವನ್ನಾಗಿ ಆರಿಸಿ ಕೊಂಡಿದ್ದೇನೆ. ಎತ್ತಿನಗಾಡಿ, ಅಜ್ಜಿಯ ಹಾಡು, ಕರೀ ನಿಲುವಂಗಿಗಳು ಮೋಟಾರುಕಾರು, ರೇಡಿಯೋ, ಸೂಟ್ ಗಳಾಗಿ ಪರಿವರ್ತಿವಾಗಿವೆ. ಆದರೆ ಇದೇ ಪ್ರಮಾಣದಲ್ಲಿ ನಮ್ಮ ಋಜುತ್ತ್ವ, ಸತ್ಯಾನುಸಂಧಾನ ಪ್ರಗತಿ ಹೊಂದಿವೆಯೇ?

ಇದರ ಮೂಲಕಾರಣ, ಆಧುನಿಕ ಜೀವನ ವ್ಯಕ್ತಿಯನ್ನು ವ್ಯಕ್ತಿಯನ್ನಾಗಿಯೇ  ಉಳಿಸುತ್ತದೆ. ಅವನು ತನ್ನ ಸುಖಕ್ಕೆ ಎಷ್ಟು ಜನ ಬೇಕೋ ಅಷ್ಟು ಜನರನ್ನು ಮಾತ್ರ ಸಂಗ್ರಹಿಸಿಕೊಳ್ಳುತ್ತಾನೆ. ಆದರೆ ಕೆಲವು ದಶಕಗಳ ಹಿಂದೆ ವ್ಯಕ್ತಿ ಸಮಷ್ಟಿಯ ಅಂಗವಾಗಿದ್ದ. ಅವನ ಊರು, ಅವನ ಹಳ್ಳಿ, ಅವನು ವಾಸಿಸುತ್ತಿದ್ದ ಬೀದಿ ಅವನ ಸಂಸಾರವಾಗಿತ್ತು. ತಮ್ಮ ಸುತ್ತಮುತ್ತಲಿನ, ಆಶ್ರೀತರ, ಕಷ್ಟಸುಖ ತನ್ನದುನ್ನುವ ಸಂಪ್ರದಾಯದಲ್ಲಿ ಹಿಂದಿನವರು ಬೆಳೆದಿದ್ದರು. ಈ ಮೌಲಿಕ ಜೀವನವನ್ನು ಇಂದು ಯಾವದಾದರೊಂದು ಸ್ವರೂಪದಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಈ ಕಾದಂಬರಿಯಲ್ಲಿ ಎತ್ತಿದ್ದೇನೆ.