Kanaka Musuku - K. N. Ganeshaiah
ನಾಗೇಶ ಹೆಗಡೆರವರು ಬರೆದಿರುವ ಮುನ್ನುಡಿಯಿಂದ :
"ಕನಕ ಮುಸುಕು" ಕಾದಂಬರಿ ೨೦೦೫ರ ಕೊನೆಯಲ್ಲಿ "ಸುಧಾ" ವಾರಪತ್ರಿಕೆಯಲ್ಲಿ ವಾರವಾರವೂ ಬರತೊಡಗಿದಾಗ ಅದು ಕೇವಲ ಧಾರಾವಾಹಿಯಾಗಿ ಬರಲಿಲ್ಲ, ನಿಂತ ನೀರಂತಿದ್ದ ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಧಾರೆಯಾಗಿ ಬನ್ತು. ಕನ್ನಡ ಓದುಗರಿಗೆ ಮಿಂಚಿನ ಪುಳಕ ನೀಡುತ್ತ ಬಂತು.
ಅದುವರೆಗೆ ಕನ್ನಡದಲ್ಲಿ ಚಾರಿತ್ರಿಕ ಕಥಾನಕಗಳು ಅದೆಷ್ಟೋ ಬಂದಿದ್ದವು, ಮಾಸಲೆ ಸೇರಿಸಿದ ಪತ್ತೇದಾರಿ ಕಾದಂಬರಿಗಲಂತೂ ಲೆಕ್ಕವಿಲ್ಲದಷ್ಟು ಬಂದಿದ್ದವು. ಆದರೆ ಅವೆರಡರ ಸಂಗಮದಂತೆ ಐತಿಹಾಸಿಕ ಘಟನೆಗಳ ನೆಲೆಗಟ್ಟಿನಲ್ಲಿ ಇಂದಿನ ವಿದ್ಯಮಾನಗಳನ್ನು ರೋಚಕವಾಗಿ ಹೆಣೆದ ಚಾರಿತ್ರಿಕ ಥ್ರಿಲ್ಲರ್ ಮಾತ್ರ ನಮ್ಮ ಭಾಷೆಯಲ್ಲಿ ಇರಲ್ಲಿಲ್ಲ. ಈಚೆಗಷ್ಟೇ ಇಂಗ್ಲೀಷಿನಲ್ಲಿ ಡ್ಯಾನ್ ಬ್ರೌನನ "ಡಾ ವಿನ್ಸಿ ಕೋಡ್" ಹೆಸರಿನ ಚಾರಿತ್ರಿಕ ಥ್ರಿಲ್ಲರ್ ಜನಪ್ರಿಯತೆಯಾ ಉತ್ತುಂಗಕ್ಕೇರಿ ಭಾರತಿಯ ಓದುಗರ ಕೈಯಿಂದ ಕೈಗೆ ದಾಟುತ್ತಿದ್ದಾಗ "ನಮ್ಮ ಕಾದಮ್ಬರಿಕಾರರಿಗೇಕೆ ಇಂಥದ್ದೊಂದು ವಿಷಯ ಹೊಳೆಯುವುದಿಲ್ಲ?" ಎಂದು ಅನೇಕರು ಚರ್ಚಿಸಿದ್ದು ಉನ್ತು. ಚರ್ಚೆ ಇನ್ನು ಪೂರ್ತಿಗೊಳ್ಳುವ ಮೊದಲೇ,ಚರ್ಚೆ ಮೂಕ್ತಾಯ ಹಾಡುವಂತೆ ಕಾಣಿಸಿಕೊಂಡಿತು "ಕನಕ ಮುಸುಕು"
ಕನ್ನಡದ ಮಟ್ಟಿಗೆ ಹೊಸದೊಂದು ಮೈಲಿಗಲ್ಲು ಅನ್ನುವಂತೆ ಈ ಕಾದಂಬರಿಯಲ್ಲಿ ಅನೇಕ ಹೊಸತುಗಳಿವೆ. ಮೊದಲೆನೆಯದಾಗಿ ಗ್ರಂಥಕರ್ತರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು, ಇನ್ನೂ ವಿಶೇಷ ಉಪನ್ಯಾಸ, 'ಏಟ್ರಿ'ಯಂಥ ಜನಪರ ಸಂಘಟನೆಯ ಕೆಲಸ. ಅನೇಕ ಸಂಘ ಸಂಸ್ಥೆಗಳಿಗೆ ಸಲಹಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ.
ಇವರ ಈ ಚೊಚ್ಚಲ ಕಾದಂಬರಿಯ ಹಸ್ತಪ್ರತಿ ನನ್ನ ಕೈ ತಲುಪಿದಾಗ ನಾನು ಅದೇ ತಾನೆ 'ಸುಧಾ'ದ ಊಸ್ತುವಾರಿ ವಹಿಸಿಕೊಂಡಿದ್ದೆ. ನನ್ನ ಪತ್ರಿಕೆಗೆ ಹೊಸ ಹೊಳಪು ಕೊಡಬೇಕು, ಹೊಸ ಛಾಪು ಮೂಡಿಸಬೇಕು , ಎಳೆಯ ಪೀಳಿಗೆಯನ್ನು ಆಕರ್ಷಿಸಬೇಕು ಎಂಬೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಜೋಡಿಸುವಾಗ ತಾನಾಗಿ ಬಂಡ ಕೃತಿ ಇದು. ಪ್ರಸಿದ್ದ ವಿಜ್ಞಾನಿಯೆಂದು ಖ್ಯಾತಿ ಪಡೆದ ಡಾ. ಗಣೇಶಯ್ಯನವರ ಬಗ್ಗೆ ಗೊತ್ತಿತ್ತಾದರೂ ಇವರು ಕನ್ನಡ ಕಾದಂಬರಿ ಬರೆಯುತ್ತಾರೆಂಬುದೇ ಅಚ್ಚರಿಯ ಸಂಗತಿಯಾಗಿತ್ತು. ಕುತೂಹಲದಿಂದ ನಾಲ್ಕಾರು ಪುಟಗಳನ್ನು ಮಗುಚಿದಾಗ ಅಲ್ಲಿ ಬಳಸಿದ್ದ ಪ್ರಬುದ್ದ ಭಾಷೆ, ಚುರುಕಿನ ನಿರೂಪಣೆ ಮೊದಲ ನೋಟಕ್ಕೇ ಗಮನ ಸೆಳೆಯಿತು. ಮನೆಗೆ ಒಯ್ದು ಒಂದೇ ಕಂತಿನಲ್ಲಿ ಓದಿ ಮುಗಿಸಿದ್ದಾಯಿತು.
ಹೊಸ ಸಾಹಿತಿಯೊಬ್ಬರನ್ನು ಹೊಸ ರೀತಿಯಲ್ಲಿ ಓದುಗರಿಗೆ ಪರಿಚಯಿಸುವ ಮಾರ್ಗವನ್ನು ದಾ. ಗಣೇಶಯ್ಯ ನಮಗೆ ತೋರಿಸಿಕೊಟ್ಟರು. 'ಕನಕ ಮುಸುಕು' ಪ್ರಕಟಿಸುವ ಮೊದಲು ಅವರೇ ರಚಿಸಿದ ಇನ್ನೊಂದು ಐತಿಹಾಸಿಕ ನೀಳ್ಗತೆ 'ಶಾಲಭಂಜಿಕೆ'ಯನ್ನು ಅವರು ಪ್ರಕಟಣೆಗೆ ಕಳುಹಿಸಿದರು. ಅದು 'ಸುಧಾ'ದ ವಿಶೇಷ ಮೂಖಪುಟ ಕತೆಯಾಗಿ ಪ್ರಕಟವಾದಾಗ ಓದುಗರ ಅಪಾರ ಮೆಚ್ಚುಗೆ ಪಡೆಯಿತು. ಸಮಕಾಲೀನ ನೈಜ ವರದಿಯಿಂದ ಮೆಲ್ಲಗೆ ಗತಕಾಲಕ್ಕೆ ಜಾರಿಕೊಳ್ಳುವ ರೋಚಕ ಹಂದರದಿಂದಾಗಿ ಅದು ನೈಜ ಕತೆಯೆ, ಕಾಲ್ಪನಿಕ ಸೃಷ್ಟಿಯ ಎಂಬುದು ಮೊದಲ ಓದಿಗೆ ಗೊತ್ತಾಗದಂಥ ನೀರುಪಣಾ ಕೌಶಲವನ್ನು ಓದುಗರ ಮೆಲಕು ಹಾಕುತ್ತಿದ್ದಂತೆಯೇ ಹೊಸ ಕಾದಂಬರಿಕಾರನೊಬ್ಬನ ಆಗಮನಕ್ಕೆ ವೇದಿಕೆ ಸಜ್ಜಾಗಿತ್ತು. 'ಕನಕ ಮುಸುಕು' ಕೂಡ ಅಷ್ಟೆ ಮುಸುಕಿನ ಜೋಳದ ಮೂಲಸ್ಥಾನ ನಿಷ್ಕರ್ಷೆಯ ಬಗೆಗಿನ ಸಮಕಾಲೀನ ಸಮಸ್ಯೆಯೊಂದರ ಮುಡುಕು ತೆರೆಯುವ ಲೇಖನದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಸುದೀರ್ಘ ಕಥಾಹಂದಕ್ಕೊಂದು ಕೌತುಕದ ನೆಲೆಗಟ್ಟು ಸಿದ್ದವಾಗುತ್ತದೆ.
ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳು ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಓದುಗರ ಕುತೂಹಲವನ್ನು ಹಿಂದೆಯೂ ಅಲ್ಲಲ್ಲಿ ಕೆನೆಕಿದ್ದ, ಇಂದಿಗೂ ಒಗಟಾಗಿಯೇ ಉಳಿದ 'ಸಿರಿಭೂವಲಯ'ದ ಪರಿಕಲ್ಪನೆಯನ್ನು ತೀರ ಸಹಜವೆಂಬಂತೆ ಕಥೆಯಲ್ಲಿ ಸೇರಿಸಿದ್ದು, ತಾಳೆಗರಿಯ ಲಿಪಿಯಲ್ಲಿ ಅಂಕಾಕ್ಷರ ಸೂತ್ರಗಳ ಮೂಲಕ ಜೈನ ಸಿರಿಸಂಪತ್ತಿನ ಕೀಲಿಕೈಯನ್ನು ಬಚ್ಚಿಟ್ಟಿದ್ದು ಎಲ್ಲವೂ ಮೂಂದಿನ ಅಧ್ಯಾಯಾಕ್ಕಾಗಿ ಕಾಡು ಕೂರುವಂತೆ ಮಾದುತ್ತೆ. ಇಂದು ನೆನ್ನೆಗಳ ಮಧ್ಯೆ ತಾಕಲಾತವಾಡುತ್ತ ಘಟನೆಗಳು ತೆರೆದುಕೊಳ್ಳುತ್ತವೆ. ಸಿನಿಮಾ ರೀಲಿನಂತೆ, ನವೆಂಬರ್ 6 ರಿಂದ ಗಂಟೆ ಗಂಟೆ ಲೆಕ್ಕಾಚಾರದಂತೆ ಹತ್ತು ದಿನಗಳಲ್ಲಿ ಕಥೆಯನ್ನು ಮುಗಿಸುವ ಜಾಣ್ಮೆ ಕೂಡ ಕನ್ನಡದ ಈಚಿನ ಓದುಗರಿಗೆ ಹೊಸದೆಂದೇ ಹೆಲಬಹುದು. ಸೇಟಲೈಟ್ ಚಾನೆಲ್, ಸೆಲ್ ಫೊನೆ. ಈ-ಮೇಲ್, ನೆಟ್ ಚಾಟ್ ಗಳ ಈ ಯುಗದಲ್ಲಿ ಕಾದಂಬರಿಯ ನಾಯಕಿಯೂ ಅಂಥದ್ದೇ ಹೈ -ಟೆಕ್ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾವೆಲ್ ಮಾಡುತ್ತ ಭೂತ=ಭವಿಷ್ಯಗಳನ್ನು ಬೆಸೆಯುವ ಕರಿಕಾರ್ತಿಯಾಗಿರುವುದು ಇಂಗ್ಲಿಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೋದ ಪೀಳಿಗೆಗೂ ಆಕ್ರಶಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದ್ದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ.
ಇವೆಲ್ಲವುಗಳ ಹಿಂದಿನ ಸೃಜನಶೀಲ ಮನಸ್ಸು ನಮ್ಮನ್ನು ಅಚ್ಚರಿಗೊಳಿಸಬೇಕು. ವಿಜ್ಞಾನಿಯೊಬ್ಬ ತನ್ನ ಸಂಶೋಧನ ಕ್ಷೇತ್ರದ ಮಾಹಿತಿಗಳನ್ನು ಥ್ರಿಲ್ ಕೊಡುವ ಕಥಾ ರೂಪದಲ್ಲಿ ಹಣೆಯುವುದು ಅಷ್ಟೇನು ಸವಾಲಿನ ಕೆಲಸವಾಗಲಾರದು. ಇಲ್ಲಿ ಹಾಗಲ್ಲ, ಇತಿಹಾಸದ ಗರ್ಭದಲ್ಲಿ ಅಡಗಿದ ಸಂಗತಿಗಳನ್ನು ಸಾಧಾರ ಹೊರಕ್ಕೆಳೆದು, ವರ್ತಾಮಾನದೊಂದಿಗೆ ಬೆರೆಸಿ ಕಲ್ಲತ್ಮಾಕ ಹೆನೆಗೆ ಮಾಡಿದ್ದು ಅಪರೂಪದ ಸಾಧನೆಯೇ ಸರಿ.
ಅಲ್ಲಲ್ಲಿ ಕಡೆದಿಟ್ಟ ಕಲ್ಲುಳುಗಳ ಅವಶೇಷಗಳಲ್ಲಿ ಗತಕಾಲದ ನಮ್ಮ ರೋಚಕ ಚರಿತ್ರೆಗಳು ಹೂತುಹೊಗಿವೆ; ಇಲ್ಲವೇ ನೀರಸ ಪಠ್ಯಗಳಾಗಿ ಶಿಕ್ಷಕರ ನೋಟ್ ಬುಕ್ ಗಳಿಂದ ವಿದ್ಯಾರ್ಥಿಗಳ ನೋಟ್ ಬುಕ್ ಗಳಿಗೆ ದಾಟಿ ಯಾರನ್ನು ತಟ್ಟದೆ ಸಾಗುತ್ತಿವೆ. ಚರಿತ್ರೆಯ ಬಗೆಗಿನ ಅಂಥ ಅಸಡ್ಡೆಯನ್ನು ನಿವಾರಿಸಿ ಹೊಸ ಸಂಶೋಧನೆಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಇಲ್ಲವೇ ಕಡೇ ಪಕ್ಷ ಅಲಿದಿಳಿದ ಶಿಲ್ಲಸಾಕ್ಷಿಗಳತ್ತ ತುಸು ಗೌರವದಿಂದ ನೋಡುವಂತಾಗಲು ಇಂದು ತ್ರಿಲ್ಲೆರ್ಗಳ ಅಗತ್ಯ ತುಂಬಾ ಇದೆ. ಅದನ್ನು ಸಮಕಾಲೀನ ವಿಜ್ಞಾನಿಯೊಬ್ಬರು ತೋರೀಸಿಕೊಟ್ಟಿದ್ದಾರೆ. ಮುಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಹಿಸುವಂತೆ ಹೊಸ ದೇವಿಗೆ ಹಚ್ಚಿದ್ದಾರೆ.
ದಾ. ಗಣೇಶಯ್ಯ ಕನ್ನಡಕ್ಕೆ ದಕ್ಕಿದ ಹೊಸ ಆಸ್ತಿ.
ಮೂಲ - http://goo.gl/x3yM9L
ಡಾ. ಕೆ. ಎನ್. ಗಣೇಶಯ್ಯನವರು ಭಾರತದ ಪುರಾತನ ಮತ್ತು ಸವಿಸ್ತಾರವಾದ ಇತಿಹಾಸವನ್ನು ಅಡಿಗಲ್ಲಾಗಿ ಇಟ್ಟುಕೊಂಡು, ಇಂದಿನ ಮನುಷ್ಯನ ಅತಿ ಆಸೆಯನ್ನು ಕಟ್ಟಡದ ಇಟ್ಟಿಗೆಗಳಂತೆ ಬಳಸುತ್ತಾ ಅತ್ಯಂತ ರೋಚಕವಾಗಿ ಕಥೆಯನ್ನು ನಮಗೆ ಹೇಳುತ್ತಾ ಹೋಗುತ್ತಾರೆ. ಅವರಿಗೆ ಗೊತ್ತು ನಮ್ಮ ಕನ್ನಡದ ಓದುಗರಿಗೆ ತೀರ ಹೊಸ ಅಥವಾ ತೀರ ಹಳೆಯದನ್ನು ಹೇಳಿದರೆ ಓದಲಾರರು ಎಂದು. ಹಾಗಾಗಿ ಎಷ್ಟು ಬೇಕೋ ಹೊಸ ತಂತ್ರಜ್ಞಾನವನ್ನು ಬಳಸಿ ಭಾರತ/ಕರ್ನಾಟಕದ ಸಂಸ್ಕೃತಿ ಗೆ ಒಗ್ಗುವ ಹಾಗೆ ಕಥೆಯನ್ನು ಬಿಡಿಸಿಡುತ್ತಾರೆ. ಇನ್ನೊಂದು ಮುಖ್ಯವಾಗಿ ಹೇಳಬೇಕಾದ್ದು ಪ್ರತಿ ಕಾದಂಬರಿಗೆ ಇವರು ಮಾಡುವ ಸಂಶೋಧನೆ. ಇತಿಹಾಸದಲಿ ಎಲ್ಲೋ ಕರಗಿಹೋದ/ಮರೆಯಾದ ಸತ್ಯಗಳನ್ನು ಹೇಳುತ್ತಾ ಹೋಗುತ್ತಾರೆ. ಮೂಲತಹ ಕೃಷಿ ವಿಜ್ಞಾನಿಗಳಾಗಿರುವ ಇವರು ಸಸ್ಯ ಥಳಿ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. 'ಕಪಿ ಲಿಪಿ ಸಾರ' ದಲ್ಲಿ ಇವರು 'ಸಂಜೀವಿನಿ' ಯನ್ನು ಹುಡುಕುವ ಕಥೆಯನ್ನು ಹೇಳುತ್ತಾರೆ. ಅಷ್ಟೇ ಅಲ್ಲದೆ ರಾಮಾಯಣ ಆದಮೇಲೆ ಹನುಮಂತ ಎಲ್ಲಿ ಹೋದ? ಅಂಡಮಾನ್ ಗೆ ಅಂಡಮಾನ್ ಅಂತಾನೆ ಯಾಕೆ ಕರಿತಾರೆ?. ಹಾಗೂ ಜೀವ ವಿಜ್ಞಾದಲ್ಲಿ ಇತ್ತೆಚೆಗಾಗಿರುವ ಬೆಳವಣಿಗೆಗಳು ಇತ್ಯಾದಿಗಳನ್ನೂ ಬಳಸಿ ಸುಂದರವಾದ ಅಷ್ಟೇ ಕುತೂಹಲಕರವಾದ ಒಂದು ಲೋಕವನ್ನೇ ಸೃಷ್ಟಿಸುತ್ತಾರೆ.
ಇಷ್ಟೆಲ್ಲಾ ಹೇಳಿದಮೇಲೆ ನಾನು ಅವರ ಅಭಿಮಾನಿಯಾಗಿದ್ದೀನಿ ಅಂತ ಬಿಡಿಸಿ ಬೇರೆ ಹೇಳಬೇಕಾಗಿಲ್ಲ ಅಲ್ಲವೇ. ಹಾಗಾಗಿ ಮತ್ತೆರಡು ಪುಸ್ತಕ ತಂದಿರುವೆ ಇವರದೇ :) ಅದರಲ್ಲಿ ಒಂದನ್ನು ಮುಗಿಸಿರುವೆ. ಆ ಪುಸ್ತಕದ ಹೆಸರು 'ಕನಕ ಮುಸುಕು'. ಈ ಕಾದಂಬರಿಯ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕೆಂದರೆ, ಇಸ್ರೋ ಸಂಸ್ಥೆಯ ಚಿತ್ರ ಒಂದು ಕರ್ನಾಟಕದ ಸೋಮನಾಥ ಪುರದ ಸುತ್ತ ಅಸ್ವಾಭಾವಿಕ ದಿಬ್ಬಗಳನ್ನು ತೋರಿಸುತ್ತದೆ. ಇದನ್ನು ಅರ್ಥೈಸಲು ಹೋದಾಗ ಕೆಳಗಿನ ಕಥೆ ನಮ್ಮ ಮುಂದೆ ಹರಡಿಕೊಳ್ಳುತ್ತದೆ:
ಚಂದ್ರಗುಪ್ತ ಮೌರ್ಯ ಜೈನ ಸನ್ಯಾಸಿಯಾಗಿ ತನ್ನ ರಾಜ್ಯ ತ್ಯಜಿಸಿ ಉತ್ತರ ಭಾರದಿಂದ ದಕ್ಷಿಣ ಭಾರತಕ್ಕೆ ಜೈನ ಮತದ ಪ್ರಚಾರಕನಾಗಿ ಶ್ರವಣಬೆಳಗೊಳಕ್ಕೆ ಬರುತ್ತಾನೆ. ಇದು ನಾವೆಲ್ಲಾ ಓದಿರುವ/ಕೇಳಿರುವ ಸತ್ಯ. ಆದರೆ ಸ್ವಲ್ಪ ತಾರ್ಕಿಕವಾಗಿ ಯೋಚಿಸಿರುವ ಗಣೇಶಯ್ಯನವರು ಹಾಗೂ ಅಷ್ಟೇ ಆಳವಾಗಿ ಇದರ ವಿವರವನ್ನು ತಿಳಿದಿರುವ ಅವರು ಕೆಲವು ವಿಷಯಗಳನ್ನು ಗಮನಿಸಿದ್ದಾರೆ. ಹಲವಾರು ಶಾಸನಗಳು ಹೇಳಿರುವಂತೆ ಚಂದ್ರಗುಪ್ತ ಮೌರ್ಯನ ಜೊತೆ ಸುಮಾರು ೧೨೦೦೦ ಜೈನ ಮುನಿಗಳು ಬರುತ್ತಾರೆ!! ಯಾಕೆ? ಇಂತಹ ಪ್ರಶ್ನೆಗಳು ಕೊನೆಗೆ ಕೈ ಮಾಡಿ ತೋರಿಸುವ ಉತ್ತರ ಸುಮಾರು ೫೦೦ ಟನ್ ಚಿನ್ನದ ಕಡೆಗೆ. ಈ ಚಿನ್ನವನ್ನು ಮುಸುಕಿನಿ ಜೋಳದ ತೆನೆಯ ರೂಪದಲ್ಲಿ ಮುಸುಕಿನ ಜೋಳದ ತೆನೆಗಳ ಜೊತೆಗೆ ಉತ್ತಮ camouflage ಮಾಡಿ ತರುತ್ತಾರೆ . ಹಾಗಾಗಿ ಕನಕ ಮುಸುಕು.
ಚಂದ್ರಗುಪ್ತ ಮೌರ್ಯ ನಿಂದ ಶುರುವಾಗುವ ನಿಧಿಯ ರಹಸ್ಯ ಹೊಯ್ಸಳ ಸಾಮ್ರಾಜ್ಯ ದ ಶಕುಂತಲೆಯಲ್ಲಿ ಕೊನೆಗೊಳ್ಳುತ್ತದೆ. ಈ ನಿಧಿಯನ್ನು ಹುಡುಕಲು ಹೊರಡುವ ಕಾದಂಬರಿಯ ನಾಯಕಿ, ಆಕೆಯ ಗಂಡ, ಆಕೆಯ ಗುರು ಹಾಗೂ ಸಕಾರಣಗಳಿಗೆ ಇದನ್ನು ಮುಚ್ಚಿಡಲು ಪ್ರಯತ್ನಿಸುವ ಜೈನ ಧರ್ಮದ ಹಿರಿಯ ನಾಯಕರುಗಳು ಹಾಗೂ ಇಷ್ಟೆಲ್ಲಾ ಸಾಲದು ಎಂಬಂತೆ ನಾಯಕಿಯನ್ನು ಬೆನ್ನು ಹತ್ತುವ ಅಂತರಾಷ್ಟ್ರೀಯ ಕಳ್ಳರ ಗ್ಯಾಂಗ್. ಇನ್ನೇನು ಬೇಕು ಹೇಳಿ ಕಥೆಯನ್ನು ಇನ್ನಷ್ಟು ರೋಚಕವಾಗಿಸಲು? ಇಷ್ಟೆಲ್ಲಾ ಇದ್ದರು ಗಣೇಶಯ್ಯ ಕಥೆಯ ಮುಖ್ಯ ಲಹರಿಯನ್ನು ಬೇರೆ ಕಡೆಗೆ ಹರಿಯ ಬಿಡದೇ ಓದುಗನನ್ನು ಕಾದಂಬರಿ ಮುಗಿಯುವವರೆಗೂ ಕಟ್ಟಿ ಕೂರಿಸುತ್ತಾರೆ.
ನಾನು ಸುಮಾರು ೪ ವರ್ಷದ ಹಿಂದೆ ಬೆಂಗಳೂರಿನಬಳಿ ಇರುವ ದೇವರಾಯನ ದುರ್ಗಕ್ಕೆ ಹೋದಾಗ ಅಲ್ಲಿ ಒಬ್ಬ ಹೇಳಿದ್ದ ವಿಷ್ಣು ವರ್ಧನನ ಹೆಂಡತಿ ಶಾಂತಲೆ ಇಲ್ಲೇ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಳು ಎಂದು. ಆಗಿನಿಂದ ನನಗೆ ಒಂದು ವಿಷ್ಯ ಅರ್ಥ ಆಗಿರಲಿಲ್ಲ. ಬೇಲೂರುಹಳೆಬೀಡಿನಲ್ಲಿದ್ದ ಶಕುಂತಲೆಗೂ ಇಲ್ಲಿಗೂ ಏನು ಸಂಬಂಧ, ಇಲ್ಲಿ ಬಂದು ಸಾಯುವನ್ತದ್ದು ಏನಾಗಿತ್ತು? ಈ ಪ್ರಶ್ನೆ ಗೆ ಕನಕ ಮುಸುಕು ತಕ್ಕಷ್ಟು ಉತ್ತರ ಕೊಟ್ಟಿತು. ಇಷ್ಟೇ ಅಲ್ಲದೆ ಮುಸಿಕಿನ ಜೋಳದ ಇತಿಹಾಸ ಮತ್ತು ಅದು ಏಷ್ಯಗೆ ಬಂದ ಬಗೆಗೆ ಇಂದಿಗೂ ಇರುವ ಕಗ್ಗಂಟು ಗಳನ್ನೂ ಕುತೂಹಲಕಾರಿಯಾಗಿ ಕಥೆಯ ಮಧ್ಯದಲ್ಲಿ ಗೊತ್ತಿಲ್ಲದಂತೆಯೇ ನಮಗೆ ತಿಳಿಸುತ್ತಾರೆ. ಇದಲ್ಲದೆ ರಾಜಕಾರಣ ಮತ್ತು ಧರ್ಮ/ಜಾತಿ ಇವೆರಡರ ಮಧ್ಯ ಇರುವ ಬಿಡಿಸಲಾಗದ ನಂಟನ್ನು ತಿಳಿಯಾಗಿ ಹೇಳುತ್ತಾರೆ. ಜೈನ, ವೈಷ್ಣವ, ಶೈವ, ಇಸ್ಲಾಂ ಮತ್ತು ಕ್ರಿಸ್ತ ಧರ್ಮ ಗಳ ಹಿಂದಿನ ತಿಕ್ಕಾಟಗಳು ನೋಡ ಸಿಗುತ್ತವೆ. ಇಷ್ಟೆಲ್ಲಾ ಸಾಕಾಗುವುದಿಲ್ಲ ಎಂದರೆ ದೊಡ್ಡವರ ಸಣ್ಣತನಗಳು ಹಾಗೂ ನಿಮಗೆ cryptography ಬಗ್ಗೆ ಉತ್ಸಾಹವಿದ್ದರೆ ಹಿಂದಿನ ಕಾಲದಲ್ಲಿ ಬಳಸಿದ ಕೊಡೆಡ್ ಸಂದೇಶಗಳನ್ನು ಸೇರಿಸಿ ನಮ್ಮನ್ನು ಚಕಿತಗೊಳಿಸುತ್ತಾರೆ.