Sunday, June 21, 2015

ನಿಮ್ಮಷ್ಟು ಸುಖಿ ಯಾರಿಲ್ಲ - ವಿಶ್ವೇಶ್ವರ ಭಟ್

Nimmashtu Sukhi Yarilla - Vishweshwara Bhat

 

ಸ್ವಾಮಿ ಅನಾಮಧೆಯಪೂರ್ಣ ಎಂಬ ಹೆಸರಿನಲ್ಲಿ ನಾನು 'ಬತ್ತದ ತೆನೆ' ಎಂಬ ಅಂಕಣ ಬರೆಯುತ್ತಿದ್ದೆ, ನಂತರ ಅದೇ ಹೆಸರಿನಲ್ಲಿ ಪುಸ್ತಕವನ್ನು ಸಹ ಪ್ರಕಟಿಸಿದೆ ಈ ಕೃತಿಗೆ ಸಿಕ್ಕ ಪ್ರತ್ರಿಕ್ರಿಯೆ ಅಭೂತಪೂರ್ವ. ಈಗಲೂ ಅನೇಕರು ಕೃತಿಗೆ ಓದು ನೀಡಿದ ಸ್ಪೂರ್ತಿ ಬಗ್ಗೆ ಬರೆಯುತ್ತಿರುತ್ತಾರೆ.

ಇತ್ತೀಚಿಗೆ 'ಬತ್ತದ ತೆನೆ'ಯನ್ನು ಓದಿದ ಯೋಗಿ ದುರ್ಲಭಜೀ  ಅವರು. 'ಇಂತ ಕೃತಿ ಬಹಳ ಉಪಯುಕ್ತ. ನೀವು ಇದರ ಮುಂದಿನ ಭಾಗವನ್ನು ಬರೆಯಬೇಕು. ಜನರಿಗೆ ಉಪದೇಶಗಳನ್ನು ಕೊಡದೇ, ಸಲಹೆ. ಟಿಪ್ಸ್ ಗಳನ್ನೂ ಕೊಡುತ್ತಾ ಬದುಕಿನ ಪ್ರಮುಖ ಸಂಗತಿಗಳನ್ನು ಹೇಳಬೇಕು. ಅದಕ್ಕೂ ಮೊದಲು ಈ ಟಿಪ್ಸ್ ಗಳನ್ನು ನಿಮ್ಮ ಮೇಲೆ ಪ್ರಯೋಗಿಸಿಕೊಳ್ಳಬೇಕು. ಆಗ ಕೃತಿ ಶುಲ್ಕವಾಗುವುದಿಲ್ಲ. ಬೋಧೆಯಾಗುವುದಿಲ್ಲ. ಈಗ ಜನರಿಗೆ ಬೇಕಾಗಿರುವುದೇ ಇದು' ಎಂದರು.

ಅವರ ಮಾತುಗಳನ್ನು ಕೇಳಿದ ಬಳಿಕ ೩೦-೪೦ ಅಧ್ಯಾಯಗಳ ಶೀರ್ಷಿಕೆಗಳನ್ನು ಬರೆದಿಟ್ಟುಕೊಂಡೆ. ದುರ್ಲಭಜೀಯವರು  ಹೇಳಿದಂತೆ. ಈ ಪೈಕಿ ನಾನು ಎಷ್ಟು ಟಿಪ್ಸ್ ಗಳನ್ನು ಅಳವಡಿಸಿ ಕೊಂಡಿದ್ದೇನೆ ಎಂದು ನನ್ನನ್ನೇ ಕೇಳಿಕೊಂಡೆ. ಪೈಕಿ ನಾನು ಆಚರಿಸುತ್ತಿರುವ, ಪಾಲಿಸುತ್ತಿರುವ ಟಿಪ್ಸ್ ಗಳನ್ನಷ್ಟೇ ಆಯ್ಕೆ ಮಾಡಿಕೊಂಡು ಅವುಗಳ ಬಗ್ಗೆ ಹೆಚ್ಚು ಕೊರೆಯದೇ, ಸಂಕ್ಷಿಪ್ತವಾಗಿ ಬರೆಯಲಾರಂಭಿಸಿದೆ.

ಅವರ ಪರಿಣಾಮಣವೇ ಈ ಕೃತಿ!

ಬಹಳ ಸಂದರ್ಭಗಳಲ್ಲಿ ನಾವು ಸುಲಭವಾದ. ಸರಳವಾದ ಸಂಗತಿಗಳನ್ನು ಕ್ಲಿಷ್ಟಮಾಡಿಕೊಂಡು ಪೇಚಾಡುತ್ತೇವೆ. ನಾವು ಸಮಸ್ಯೆಗಳನ್ನು ಸೃಷ್ಟಿಸಿಕೊಳ್ಳುವುದೊಂದೇ ಅಲ್ಲ. ಆಹ್ವಾನವನ್ನೂ ಮಾಡುತ್ತೇವೆ. ಸಣ್ಣ ಸಂಗತಿಗಳೇ ನಮಗೆ ಬೃಹದಾಕಾರವಾಗಿ ಕಾಡುತ್ತವೆ.

ಅಷ್ಟಕ್ಕೂ ಜೀವನ ಅಂದ್ರೆ ಇದೇನಾ? ಇಷ್ಟೇನಾ? ನಮ್ಮ ಬದುಕನ್ನು ಸುಂದರವಾಗಿ ಕಳೆಯಲು ನೂರಾರು ಮಾರ್ಗಗಳಿವೆ. ಮಾರ್ಗಗಳು ಅಷೆಲ್ಲಾ ಇರಲಿ ಬಿಡಿ. ಆದರೆ ಆ ಸೌಂದರ್ಯವನ್ನು ಬೇರೆಲ್ಲೂ ಅರಸಬೇಕಾಗಿಲ್ಲ. ಅದನ್ನು ಹುಡುಕುವ ಮಾರ್ಗವಿದ್ದರೆ ಒಂದೇ. ನಮ್ಮ ಸುಖವನ್ನು ಸೃಷ್ಟಿಸಿಕೊಳ್ಳಬೆಕಾದವರು ನಾವೇ. ಅದು ನಮ್ಮೊಳಗೇ ಇದೆ. ಅದೇ ನಮಗೆ ಗೊತ್ತಿಲ್ಲ ಅದಕ್ಕಾಗಿ ಎಲ್ಲೆಲ್ಲೋ ಹುಡುಕುತ್ತೇವೆ. ಯಾರನ್ನೋ ಹುಡುಕಿಕೊಂಡು ಹೊಗುತ್ತೇವೆ. ನಮ್ಮನ್ನು ನಾವು ಪದೇಪದೆ ಭೇಟಿ ಮಾಡಿದರೆ, ನಮ್ಮೊಡನೆ ಕುಳಿತು ವಿಚಾರ ವಿನಿಮಯ ಮಾಡಿಕೊಂಡರೆ ಎಲ್ಲವೂ ಸಲೀಸು. ಅದಕ್ಕಾಗಿ ನಾವು ನಮಗೆ ಸಿಗಬೇಕು. ಆಗಲೇ ನಮ್ಮ ಸುಖ ಎಲ್ಲಿದೆಯೆಂಬುದು ತಿಳಿದೀತು.

ಈ ಪುಸ್ತಕ ಓದಿದೆ ಬಳಿಕ ನಿಮ್ಮಲ್ಲಿರುವ ಸುಖ, ಸಂತಸ, ನೆಮ್ಮದಿ ನಿಮಗೆ ಸಿಗಲಿ. ಸಿಗುತ್ತದೆಂದು ಆಶಯ ನನ್ನದು. ಯೋಗಿ ದುರ್ಲಭಾಜೀ ಅವರು ಹೇಳುವುದೇನೆಂದರೆ, 'ನಮಗೆ ಬೇಕಿರುವುದು ಜೀವನದ ಕುರಿತಾದ ಸಿದ್ದಾಂತಗಳಲ್ಲ. ಸರಳವಾದ ಜೀವನ ಸೂತ್ರಗಳು. ಒಂದು ಎಳೆ ಸಿಕ್ಕರೆ ದಾರ, ದಾರದಿಂದ ಹಗ್ಗ ಮಾಡಿಕೊಳ್ಳುವ ಜಾಣ್ಮೆಯನ್ನು ಜೀವನವೇ ಕಲಿಸಿಕೊಡುತ್ತದೆ.'

ನನ್ನ ಪ್ರಕಾರ, ಈ ಕೃತಿ ಕೂಡ ಅಂಥ ಒಂದು ಸಣ್ಣ ಎಳೆ. ಅದನ್ನು ನೀವು ದಾರವನ್ನಾದರೊ ಮಾಡಿಕೊಳ್ಳಿ, ಹಗ್ಗವನ್ನಾದರೂ ಮಾಡಿಕೊಳ್ಳಿ ಒಟ್ಟಾರೆ ಏನಾದರು ಮಾಡಿಕೊಳ್ಳಿ ಅದು ನಿಮ್ಮ ಬದುಕನ್ನು ಹಸನುಗೊಳಿಸುವ ಚೆಂದದ 'ಸೂತ್ರ'ವಾಗಲಿ.


Sunday, June 14, 2015

ಎಲ್ಲಾನು ಮಾಡುವುದು ಹೊಟ್ಟೆಗಾಗಿ - ಜೋಗಿ ( ಗಿರೀಶ್ ರಾವ್ )

Ellaanu Maaduvudu Hottegaagi -Jogi ( Girish Rao )

 

 

ಪುಸ್ತಕದ ಮುನ್ನುಡಿಯಿಂದ 

ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಆಹಂಕಾರ-ಆರೋಗ್ಯ-ಅನಾರೋಗ್ಯ ಹಾಗೂ ಸಾವು ನಮ್ಮ ದೇಹದ ಜೊತೆ ಸದಾ ಇರುವ ಅಂಗೋಪಾಂಗಗಳು ಎನ್ನಬಹುದು. ಹುಟ್ಟಿನ ಸಂಭ್ರಮದ ನಂತರ ಎಂದೋ ಬರುವ ಸಾವು, ಸಾವಿನ ನಂತರ ನಾವೆನಾಗ್ತೇವೆ ಅಂತ ಗೊತ್ತಿಲ್ಲದೇ ಹಾರಾಡುವುದು, 'ನಾವು' ಎಂದರೇನೆಂದು ನಮಗೇ ಗೊತ್ತಾಗದಿರುವುದು ಇದೆಲ್ಲಾ ನೋಡಿದರೆ ನಾವು ತೀರಾ ಪೋರೋಕ್ಷವಾಗಿ ಸಾವೆಂಬ ಆರಕ್ಕೆ ಮೂರಡಿ ಅಂತಿಮ ಸತ್ಯವನ್ನು, ಒಳಗೊಳಗೇ ಹೊತ್ತು ತಿರುಗಾಡುತ್ತೇವೆ ಅನ್ನಿಸುತ್ತದೆ. ಅದಕ್ಕೆ 'ಬದುಕು' ಎಂದು ಹೆಸರಿಟ್ತಿದ್ದೆವೇನೋ ಅನ್ನಿಸುತ್ತದೆ. ಇಲ್ಲದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ಇಷ್ಟೆಲ್ಲ ಹೆದರಬೇಕಾಗಿರಲಿಲ್ಲ. 

ಈ ಅನುಭವ ಕಥನ ಓದಿದಾಗ ಬರೆದವರು ತಮ್ಮ ಸ್ವಂತ ದೇಹದ ಬಗ್ಗೆ ಹದಿನೈದು ದಿನಗಳ ಕಾಲ ಎಷ್ಟು ಕಾಳಜಿ ವಹಿಸಿದ್ದರೋ, ಓದುವವರು ಒಂದೆರಡು ಗಂಟೆಗಳ ಕಾಲ ಅಷ್ಟೇ ಕಾಳಜಿ ವಹಿಸುತ್ತಾರೆ ಅನ್ನಿಸುತ್ತದೆ. ವಿವರಣೆಗಳಲ್ಲಿ ಮಾನವ ದೇಹ ಮತ್ತು ಆರೋಗ್ಯದ ನಿಗೂಢತೆಗಳೆಲ್ಲ ಲಘು ಹಾಸ್ಯಫಾಲ್ಲಿ ಬಿಚ್ಚಿಕೊಂಡರೂ, ನಗುವ ಕಂಗಳಲ್ಲೇ ನಮ್ಮ ನಮ್ಮ ಹೊಟ್ಟೆಗಳ ಕಡೆ ತುಸು ವಿಷಾದದಿಂದಲೇ ನೋಡಿಕೊಳ್ಳುವಂತಾಗುತ್ತದೆ 

ಕತೆಗಾರಿಕೆಯಲ್ಲಿ ತುಂಬ ದಿನಗಳ ಹಿಂದೆಯೇ ಸೀಲು ಹೊಡೆದಂಥ ಕಿಡಿಗೇಡಿ ನಿರ್ಲಿಪ್ತತೆ ಗಿಟ್ಟಿಸಿಕೊಂಡಿರುವ ಜೋಗಿ, ಇಲ್ಲಿ ತಮ್ಮ ಸ್ವಂತ ದೇಹವನ್ನೇ ಪಾತ್ರವಾಗಿಸಿ, ತಾವು ಸ್ವತ: ತುಸು ದೂರ ನಿಂತವರಂತೆ ಪೂರ್ತಿ ಮಜಾ ತಗೊಂಡು ಬರೆದಿರುವ ಅಪರೂಪದ ಕಥನ ಇದು. ಉದ್ದೇಶಪೂರ್ವಕವಾಗಿ ಗಹನವಾದದ್ದೆನನ್ನೋ ಹೇಳಿ ತಲೆಕೆಡಿಸದೆ, ಆರಾಮಾಗಿ ಯಾವುದೋ ಸರಳ ಅನುಭವ ಹೇಳಿ, ಓದುಗ ಇನ್ಯಾವತ್ತೋ ಅನ್ನ ತಿನ್ನುವಾಗಲೋ, ಸ್ನಾನ-ಪ್ರಕ್ಷಾಲನಗಳನ್ನು ಮಾಡುವಾಗಲೋ ಮನೋದೈಹಿಕ ಆರೋಗ್ಯದ ಬಗ್ಗೆ ಸಿರೆಯಸ್ಸಾಗುವಂತೆ ಮಾಡುವಲ್ಲಿ ಈ ಕಥನ 'ಡಾಕ್ಟರ ಚೀಟಿ' ರೀತಿಯಲ್ಲಿ ಯಶಸ್ವಿಯಾಗಿದೆ. 

ಇನ್ನೋದಷ್ಟು ಪಾತ್ರಗಳ ಒಳನೋಟ ಥರದ್ದು, ವೇದಾಂತದ ಥರದ್ದು ಸೇರಿ ಇನ್ನೇನೋ ಆಗಬಹುದಾಗಿದ್ದ ಬರಹ ಥಟ್ಟನೆ ನಿಂತುಹೋಯಿತು ಅನ್ನಿಸಬಹುದು ಓದುಗನಾಗಿ ಇನ್ನೇನ್ನೋ ಆಗಬಹುದಾಗಿದ್ದೆ ಬರಹ ಥಟ್ಟನೆ ನಿಂತುಹೋಯಿತು ಅನ್ನಿಸುವುದು ಓದುಗನಾಗಿ ಇನ್ನೇನೋ ಬಯಸುವ ನನ್ನ ವೈಯಕ್ತಿಕ ನಿರಾಸೆ ಇರಬಹುದು ಅಥವಾ ತೀರ ಸರಳವಾಗಿ ಕತೆಯಿಲ್ಲದೇ ಕಾಲಕೆಷೇಪ ಮಾಡುವುದು ನನಗೆ ತುಂಬ ಇಷ್ಟವಾಗಿರುವುದರಿಂದ ನಾನು ಹೀಗೆಲ್ಲ ಅನ್ನುತ್ತಿರಬಹುದು. ಓದುಗನಿಗೆ ಏನಾಗುತ್ತೆ ಎಂದು ಯೋಚಿಸುತ್ತಾ ಕೂತರೆ ಮಧ್ಯೆ ಗೊತ್ತಾಗಿದೆ. ಅದ್ದರಿಂದ ನನ್ನ ಈ ಅನಿಸಿಕೆ, ಏನೂ ಹೇಳದೇ ಇನ್ನೇನೋ ಹೇಳಲು ಹೋಗಿ ಹೆಂಗೆಂಗೋ  ಆಗಿರಬಹುದು. 

ಥೂ , ನಾನು ಎತ್ಲಾಗೆ ಹೊಂಟೆ, ನಂಗೇ ಗೊತ್ತಾಗ್ತಿಲ್ಲ. ಜಲ್ದಿ ಮುಗಿಸುತ್ತೇನೆ. ನಾನು ಕೂಡ ಒಂದೆರಡು ಬಾರಿ ಆಯುರ್ವೇದಿಕ್ ಸೆಂಟರುಗಳಲ್ಲಿ ಸಿಗರೇಟು ಬಿಡಲು ಯತ್ನಿಸಿ, ಗಂಜಿಗಿಂಜಿ ಕುಡಿದುಕೊಂಡು ಇದ್ದದ್ದರಿಂದ ಇಲ್ಲಿ ಜೋಗಿ ಹೇಳಿದ್ದೆಲ್ಲ ನನ್ನದೇ ಖಾಸಗಿ ವಿವರಗಳು ಅನಿಸುತ್ತಿವೆ. ಔಷಧಿ ಕೊಡುವ ಡಾಕ್ಟರಿಗೇ ಒಮ್ಮ ಸಿಗರೇಟು ಸೇದುವಂತೆ ಪುಸುಲಾಯಿಸಿದ ಕಾರಣ ನನ್ನುನ್ನು ಮರ್ಯಾದೊಚಿತವಾಗಿ ಅಲ್ಲಿಂದ ಓಡಿಸಲಾಗಿತ್ತು ಅನ್ನೋದು ಬೇರೆ ವಿಷಯ.   

ಯಾವುದೇ ಕೃತಿ ಓದಿ ಮುಗಿಸಿದ ತಕ್ಷಣ ಅದೊಂದು ಹೊಸ ಲೋಕವನ್ನೂ, ಆ ಕ್ಷಣದ ಅದರೆದ್ದೆ ಆದ ಹೊಸ ಭಾವಪ್ರಾಪ್ತಿಯನ್ನೂ 'ಟಪಕ್ಕಂತ' ಕರುಣಿಸಬೇಕು. ಅದು ಇಲ್ಲಿದೇ. ಎಲ್ಲರೊ ತಮ್ಮತಮ್ಮ ದೇಹ ತನಗೆ ತೋಚಿದ್ದು ಮಾಡಿದರೆ, ದೇಹ ತನಗೆ ತೋಚಿದ್ದು ಯಾಕೆ ಮಾಡುತ್ತದೆ, ದೇಹ-ಮನಸ್ಸು ಅದರೇನು ಎಂದೆಲ್ಲ ಒಮ್ಮೆ ಘನಗಾಂಭೀರ್ಯದಿಂದ  ಬಗ್ಗಿ ಹೊಟ್ಟೆ ನೋಡಿಕೊಂಡು 'ಮಿಸ್ಸು' ಮಾಡದೇ ಮೌನಾಚರಣೆ ಮಾಡಬೇಕಾಗಿ ಕೋರುತ್ತಾ ನನ್ನ ಪ್ರಾಸ್ತಾವಿಕ ಭಾಷಣ ಮುಗಿಸುತ್ತೇನೆ. 

ನಮಸ್ತೆ 

-- ಯೋಗರಾಜ ಭಟ್


Thursday, June 11, 2015

ಅಷ್ಟಕ್ಕೂ ನಾ ಹೇಳೋದು ಇಷ್ಟು - ವಿಶ್ವೇಶ್ವರ ಭಟ್

Ashtakku Naa Helodu Ishtu - Vishweshwara Bhat



ಮೂಲ ಲೇಖಕ: ಸ್ವಪನ್ ಸೇಠ 
ಅನುವಾದಕರು: ವಿಶ್ವೇಶ್ವರ ಭಟ್

ಮುನ್ನುಡಿಯಿಂದ:

ವ್ಯಕ್ತಿಯೊಬ್ಬ ವೃತ್ತಿಯಿಂದ ಲೇಖಕನಾಗಿದ್ದರೆ ಆತ ಪುಸ್ತಕ ಬರೆಯುತ್ತಾನೆ ಎಂದು ನಿರೀಕ್ಷಿಸಬಹುದು. ಆದರೆ ನನಗೆ ಯಾವತ್ತು ಕಥಾವಸ್ತುವೆಂಬುದು ಇರಲಿಲ್ಲ. ನಾನು ರಚಿಸಬಹುದಾದ ಯಾವುದೇ ಕಾಲ್ಪನಿಕ ಕಥಾನಕವೂ ಇರಲಿಲ್ಲ. ಹಾಗೆಂದು ನನ್ನ ಜೀವನದಲ್ಲಿ ಯಾವುದೇ ಅತ್ಯಾಸಕ್ತಿ ಕೆರಳಿಸುವ ಕತೆಯೂ ಇರಲಿಲ್ಲ. ಹೀಗಾಗಿ ನಾನು ಪುಸ್ತಕ ಬರೆಯುವ ಗೋಜಿಗೆ ಹೋಗಲಿಲ್ಲ. ನಾನು ಅನುಭವಿಸಿರುವುದು ಮಾತ್ರ ನನಗೆ ಗೊತ್ತಿದೆ ಅಷ್ಟೇ. ನೀವು ಓದಿರುವುದೆಲ್ಲವನ್ನೂ ನಾನು ಅನುಭವಿಸಿದ್ದೇನೆ. ಈ ಪುಸ್ತಕದ ಬಗ್ಗೆ ನನಗೆ ಹೇಳಲಿಕ್ಕಿರುವುದು ಕೇವಲ ಇಷ್ಟೇನೆ. 

ಮೂಲ ಲೇಖಕನ ಕುರಿತು :

ಜಾಹೀರಾತು ವೃತ್ತಿಯಲ್ಲಿರುವ ಸ್ವಪನ್ ಸೇಠ ಕೇವಲ ಹದಿನೇಳನೇ ವಯಸ್ಸಿನಲ್ಲಿ ವೀಡಿಯೊ ಟೇಪ್ ಮತ್ತು ಕಂಪ್ಯೂಟರ್ ಬಿಡಿಭಾಗಗಳನ್ನು ಮಾರಾಟ ಮಾಡಲಾರಂಭಿಸಿದರು. ಅವರು ಶಾಲೆಗೆ ಮೊದಲಿಗರಾಗಿದ್ದರು. ಆದರೆ ಕಾಲೇಜು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಹೊರಕ್ಕೆ ಬಂದರು. ಬೆಂಗಳೂರಿನ ಐಐಎಂನಲ್ಲಿ ಪಾಠ ಮಾಡಲು ಹೇಗೋ ಸಮಯ ಹೊಂದಿಸಿಕೊಂಡಿದ್ದರು. 

ಈ ಸಂದರ್ಭದಲ್ಲಿ ಅವರು ಟಾಟಾ ಸ್ಟೀಲ್ ಸಂಸ್ಥೆಗಾಗಿ ಅತ್ಯಂತ ಮಹತ್ವಪೂರ್ಣ ಘೋಷವಾಕ್ಯ "ವೀ ಆಲ್ಸೋ ಮೇಕ್ ಸ್ಟೀಲ್"(ನಾವು ಉಕ್ಕನ್ನೂ ನಿರ್ಮಾಣ ಮಾಡುತ್ತೇವೆ) ಬರೆದರು. ಇಪ್ಪತ್ತೆರಡರ ಹರೆಯದಲ್ಲೇ ಅವರು ಕಾನ್, ಮಾಂಟ್ರಿಕ್ಸ್ ಚಲನಚಿತ್ರೋತ್ಸವ ಮತ್ತು ಕ್ಲಿಯೋಸ್ ಪ್ರಶಸ್ತಿ ಪಡೆದರು. ತನ್ಮೂಲಕ ಕೇವಲ ಇಪ್ಪತ್ನಾಲ್ಕರ ವಯಸ್ಸಿಗೆ ದೇಶದ ಅತಿ ಚಿಕ್ಕ ವಯಸ್ಸಿನ ಸೃಜನಶೀಲ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಇಪ್ಪತ್ತೆಂಟರ ಹರೆಯದಲ್ಲಿ ಅವರು ತಮ್ಮದೇ ಆದ ಈಕ಼್ವಸ್ ಸಂಷೆಯನ್ನು ಸ್ಥಾಪಿಸಿದರು. ಕೇವಲ ಒಂದು ವರ್ಷ ಕಳೆಯುವಷ್ಟರಲ್ಲಿ ಈ ಸಂಸ್ಥೆ, ವರ್ಷದ ಅತ್ಯುತ್ತಮ ಊದಯೋನ್ಮುಖ ಸಂಸ್ಥೆಯ ಪ್ರಶಸ್ತಿ ಗರಿಯನ್ನು ಮೂಡಿಗೆರಿಸಿಕೊಂಡಿತು. 

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇವರು ಕೈ ಇಟ್ಟ ಬಹುತೇಕ ಎಲ್ಲ ಕೆಲಸಗಳಲ್ಲಿ ಯಶಸ್ಸು ಸಾಧಿಸಿದರು. ಆದರೆ ಈ ಪುಸ್ತಕದಲ್ಲಿ ಇದೇ ಮೊದಲು ಬಾರಿಗೆ ಸ್ವಪನ್, ವೈಫಲ್ಯ, ಮಹತ್ವಾಕಾಂಕ್ಷೆ, ನಾಯಕತ್ವ, ಪ್ರೀತಿ ಮತ್ತು ಮದುವೆ ಬಗ್ಗೆ ನಿಸ್ಸಂಕೋಚವಾಗಿ ಪ್ರಾಮಾಣಿಕತೆಯಿಂದ ಹೇಳಿಕೊಂಡಿದ್ದಾರೆ. 

ಅವರು ಸದಾ ಕಾಲ ಯಶಸ್ಸಿನ ಹಾದಿಯಲ್ಲೇನೂ ಸಾಗಲಿಲ್ಲ. ಪುಸ್ತಕದಲ್ಲಿ ಅವರು ಹೇಳಹೊರಟಿರುವುದು ಇದನ್ನೇ. 

ಸದಾ ಕಾಲ ಒಬ್ಬಂಟಿಯಾಗಿರಲು ಇಚ್ಚಿಸುವ ಸ್ವಪನ್ ಇದೀಗ, ವಸಂತ್ ವ್ಯಾಲಿಯಲ್ಲಿ ಬೋಧನೆಯ ಹೊಸ ಹಾದಿಯ ಅನ್ವೇಷಣೆಯಲ್ಲಿ ತೊಡಗಿದ್ದಾರೆ. 

ಹೊಸ ಕಲಾಪ್ರತಿಭೆಯ ಹುಡುಕಾಟದ ಜತೆಗೆ ಆಧುನಿಕ ಭಾರತೀಯ ಮತ್ತು ಸಮಕಾಲೀನ ಭಾರತದ ತಮ್ಮ ಅತ್ಯಮೂಲ್ಯ ಕಲಾಕೃತಿಗಳ ಸಂಗ್ರಹದಲ್ಲಿ ಹೊಸ ಪ್ರತಿಭೆಗಳ ಕಲಾಕೃತಿಗಳನ್ನು ಜೋಡಿಸುವುದು ಅವರ ಸದ್ಯದ ಕಾಯಕವಾಗಿದೆ. 

ಫೇಸ್ ಬುಕ್ ಸಮೂದಾಯದ ನಿರ್ವಹಣೆ ಜೊತೆಗೆ ವಿಶ್ವದ ಅಪರೂಪದ ವೈನ್ ಗಳು, ಪೇಪರ್, ಮೇಣದ ಬತ್ತಿ, ಪುಸ್ತಕಗಳು, ವಿಶ್ವ ಸಿನಿಮಾ, ಪೆನ್ಸಿಲ್ ಗಳು, ಸುಗಂಧ ದ್ರವ್ಯಗಳು ಮುಂತಾದ ಅನೇಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರರ ಜೊತೆಗೆ ಅವರು ಗುರ್ ಗಾಂವ್ ನಿಂದ ಆಚೆ ತೆರಳುತ್ತಾರೆ. ಪುಸ್ತಕದನ್ದಿಗಳಿಗೆ, ಪುಸ್ತಕ ಕೊಳ್ಳಲು. 

ಅಂದ ಹಾಗೆ ಇದು, ಅವರ ಮೊದಲ ಪುಸ್ತಕ. 


Wednesday, June 10, 2015

ಪಂಚತಂತ್ರ - ದೇವುಡು

Hosagannada Panchatantra - Devudu



ನಮ್ಮ ಅಕ್ಕನ ಮಗ ಫೋನ್ ಮಾಡಿದಾಗಲೆಲ್ಲ, ಏನ್ ಮಾಡ್ತಿದೀಯ ಅಂದ್ರೆ ಡೋರೆಮಾನ್ ಇಲ್ಲ ಸಿನ್ ಚಾನ್ ನೋಡ್ತಿದೀನಿ ಅಂತ ಹೇಳ್ತಿದ್ದ. ಏನಿದೆ ಈ ಕಾರ್ಟೂನಲ್ಲಿ ಅಂತ ಅನಿಸಿದ್ರು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ, ಆ ಎರಡು ಕಾರ್ಟೂನನ್ನು ಯಾವತ್ತು ನೋಡಿಲ್ಲದ ಕಾರಣ ಹಾಗು ನಮ್ಮೆ ಮನೆಯಲ್ಲಿ ಯಾರು ಚಿಕ್ಕ ಮಕ್ಕಳಿಲ್ಲದ ಕಾರಣ ಯಾವುದೇ ಗೊಂಬೆಗಳ ಚಾನೆಲಗಳನ್ನು ಹಾಕುವುದಿಲ್ಲ. ಇತೀಚೆಗೆ ಬೇಸಿಗೆ ರಜೆಯಲ್ಲಿ ಅಕ್ಕನ ಮಗ ಮನೆಗೆ ಬಂದಾಗ ನಾವು ಯಾವುತ್ತು ನೋಡಿರದ, ಇಂತ ಚಾನೆಲ್ ಗಳು ಇವೆ ಅಂತಾನು ಗೊತ್ತಿರದ ಚಾನೆಲ್ ಗಳು ಆಡಲು ಪ್ರಾರಂಭಿಸಿದವು. ಕೆಲವು ವರ್ಷಗಳ ಹಿಂದೆ ನೋಡಿದ್ದಕಿಂತ ಹುಡುಗ ಈಗ ಸ್ವಲ್ಪ ಜಾಸ್ತಿ ಕಿರುಚಾಡಿದರು, ಜಾಸ್ತಿ ಗಲಾಟೆ ಮಾಡಿದರು, ಏನೇ ಬೇಕೆಂದರು ಏರು ಧ್ವನಿಯಲ್ಲಿ ಕೇಳಿದರು ನಮ್ಮ ಅಕ್ಕ ಚಿಕ್ಕ ಹುಡುಗರೆಲ್ಲ ಹೇಗೆ ಎಂದು ತಲೆಗೆ ಹಾಕಿಕೊಳ್ಳುವುದಿಲ್ಲ. ಆದರೆ ನನಗೆ ಇದರಿಂದ ಕಿರಿಕಿರಿ ಮಾತು ಆಶ್ಚರ್ಯ. ಆಶ್ಚರ್ಯ ಯಾಕಪ್ಪ ಅಂದ್ರೆ ನಾವು ಚಿಕ್ಕವರಿದ್ದಾಗ ಇಸ್ಟೊಂದು ಕಿರುಚಾಡುತ್ತಿರಲ್ಲಿಲ್ಲ, ಎಲ್ಲದಕ್ಕೂ ಕಿರುಚುತ್ತಿರಲ್ಲಿಲ್ಲ. ಅಕ್ಕನ ಮಗ ಅಲ್ವ ಏನು ಹೇಳಲು ಹೋಗಲಿಲ್ಲ. 

ನಾನು ಪ್ರತಿ ದಿನ ಮನೆಗೆ ಹೋಗುವುದೇ ರಾತ್ರಿ ಯಾಗುತ್ತದೆ, ಟೀವಿ ಆಕುವುದೇ ಅಪರೂಪ, ನೋಡಿದರು ನ್ಯೂಸ್ ಇಲ್ಲ ಯಾವುದಾರು ಮ್ಯೂಸಿಕ್ ಚಾನೆಲ್ ಅರ್ಧ ಘಂಟೆ ಹಾಕಿದರೆ ಹೆಚ್ಚು. ವಾರಾಂತ್ಯದಲ್ಲಿ ಹೊರಗಡೆ ಓಡಾಟ ಇಲ್ಲ ಸಿನಿಮಾ ಇನ್ನು ಟೀವಿ ಗೆ ಸಮಯ ಎಲ್ಲಿ. ಹೀಗಿರುವಾದ ಒಂದು ಶನಿವಾರ ಏನು ಕೆಲಸವಿಲ್ಲ ಮನೆಯಲಿದ್ದಾಗೆ ಕುರ್ಚಿಯಲ್ಲಿ ಕೂತು ರಿಮೋಟ್ ನ ಒಂದು ಬಟನ್ ಒತ್ತಿದೆ, ಯಾರೋ ಕಿಟಾರನೆ ಕಿರುಚಿಕೊಂಡರು. ಮನೆಯಲ್ಲಿದ್ದ ಅಪ್ಪ, ಅಮ್ಮ, ಅಕ್ಕ ಎಲ್ಲರು ರೂಮಗಳಿಂದ ಓಡಿಬಂದು ನೋಡಿದರೆ ಕೌಶಿಕ್, ಅಕ್ಕನ ಮಗನ ಹೆಸರು, ಕಿರುಚಿಕೊಂಡಿದ್ದು, ಅವನ ಕಣ್ಣಲ್ಲಿ ನೀರು ಹರಿತಿದೆ. ಎಲ್ಲರು ನಾನೇ ಏನೋ ಮಾಡಿದಿನಿ ಎನ್ನುವ ರೀತಿಯಲ್ಲಿ ನೋಡ್ತಿದಾರೆ, ನಾನು ಏನು ಮಾಡಿಲ್ಲ ಅಂದ್ರು ನಂಬ್ತಿಲ್ಲ. ಕೌಶಿಕ್ ನ ರನ್ನ, ಬಂಗಾರಿ, ಮುದ್ದು ಅಂತ ಸಮಾದಾನ ಮಾಡಿ ಏನಾಯ್ತು ಅಂತ ಕೇಲ್ದ್ರೆ ದೋರೆಮಾನ್ ಬರ್ತಿತ್ತು ನಾನ್ ಚಾನೆಲ್ ಚೇಂಜ್ ಮಾಡ್ಬಿಟ್ಟೆ ಅಂತ ಗೋಳೇ ಅಂತ ಮತ್ತೆ ಅಳಲು ಶುರು ಮಾಡಿದ. ಸಮಾದಾನ ಮಾಡಿ ಚಾಕಲೇಟ್ ಕೊಟ್ಟು ಮತ್ತೆ ಡೋರೆಮನ್ ಹಾಕಿದಮೆಲೇನೆ ಮನೆಯಲ್ಲಿ ಶಾಂತಿ. 

ನಾವು ಚಿಕ್ಕವರಾಗಿದ್ದಾಗ ಈ ರೀತಿ ಹಠ ಮಾಡಿದ್ದರೆ ಕುಂಡೆ ಮೇಲೆ ಎರಡು ಬೀಳ್ತಿತ್ತು. ಈ ಗೊಂಬೆ ಕಥೆ ಅಷ್ಟೊಂದು ಚೆನ್ನಾಗಿದಿಯ ಅಂತ ನೋಡ್ದ್ರೆ, ಕಥೆನು ಇಲ್ಲ ನೀತಿನು ಇಲ್ಲ. ಬರಿ ಕಿರುಚುವುದು, ಅಪ್ಪ ಅಮ್ಮನಿಗೆ ಸುಳ್ಳು ಹೇಳುವುದು, ದೊಡ್ಡವರು ಹೇಳಿದ ಮಾತನ್ನು ವ್ಯಂಗ್ಯ ಮಾಡುವುದು...... ಹೇಗೆ ಅರ್ಧ ಘಂಟೆ ಮಕ್ಕಳು ಏನು ಮಾದಬಾರದೋ ಅದನ್ನೆಲ್ಲಾ ಡೋರೆಮಾನ್ ಕೈಯಲ್ಲಿ ಮಾಡಿಸುತ್ತಾರೆ. ಈಗ ನನಗೆ ಅರ್ಥವಾಯ್ತು ಯಾಕಪ್ಪ ಹೇ ಹುಡುಗ ಹೀಗೆ ಆಡುತ್ತಾನೆಂದು. ನಮ್ಮ ಬಾಲ್ಯದಲ್ಲಿ ನಾವು ನೋಡಿದ್ದು, ಓದಿದ್ದು ಪಂಚತಂತ್ರ, ತೆನಾಲಿ ರಾಮ, ಅಕ್ಬರ್ ಬೀರಬಲ್ .... ಈ ಕಥೆಗಳು ಅದರ ನೀತಿ ಅವುಗಳ ಮೇಲೆ ನಮ್ಮ ಗುಣ, ನಡತೆ ಬೆಳೆದು ಬಂದಿರುವುದು. ಎಲ್ಲಿ ದೊರೆಮಾನ್ ಮತ್ತು ಎಲ್ಲಿ ಪಂಚತಂತ್ರ. ನಾವು ಓದಿದ ಪ್ರತಿ ಒಂದು ಕಥೆಯಲ್ಲಿ ಒಂದು ನೀತಿ, ಮೊಲ ಮತ್ತು ಆಮೆ ಕಥೆ, ಸಿಂಹ ಮತ್ತು ಮೊಲದ ಕಥೆ, ಕೋತಿ ಮತ್ತು ಮೊಸಳೆ..... ಆಲಸಿ ಯಾಗಬಾರು, ಸುಳ್ಳು ಹೇಳಬಾರದು, ವಂಚನೆ ಮಾಡಬಾರದು ಎಂಬ ನೀತಿಗಳ ಮೂಲಕ ಬೆಳೆದವರು ನಾವು. ನಾವು ಸುಳ್ಳ ಹೇಳುವ ಮುಂಚೆ ಹತ್ತು ಸಾರಿಯಾದರೂ ಯೋಚಿಸುತ್ತೇವೆ ಯಾಕೆಂದರ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಚಿಂತಿಸುತ್ತೇವೆ. ನಾವು ಪಂಚತಂತ್ರ ಕಥೆ ಬಗ್ಗೆ ಯೋಚಿಸದಿದ್ದರು ಎಲ್ಲೋ ಒಂದುಕಡೆ ನಮ್ಮ ಮನಸ್ಸು ಮತ್ತು ಮಿದಿಳು ಹೇಳುತ್ತದೆ ಇದು ತಪ್ಪು ಎಂದು. ಚಿಕ್ಕ ಮಕ್ಕಳು ದೊರೆಮಾನ್ ನೋಡಿದರೆ ಆದರೆ ರೀತಿಯಲ್ಲಿ ಕಿರುಚಾಡುವುದು, ಸುಳ್ಳು ಹೇಳಿ ಹೊರಗೆ ಹೋಗುವುದು ಮಾಡುತ್ತಾರೆ, ಮುಂದೆ ಬೆಳಿತ ದೊಡ್ಡವರಾದ ಮೇಲೆ ಪ್ರಾಮಾಣಿಕ ಪ್ರಜ್ಞೆ ಇಲ್ಲವಾಗುತ್ತದೆ. 

ನಾನು ಓದಿದ ಪಂಚತಂತ್ರ ಕಥೆಗಳಲ್ಲಿ ದೇವುಡು ಅವರು ಬರೆದ ಪಂಚತಂತ್ರ ಪುಸ್ತಕ ತುಂಬ ಚೆನ್ನಾಗಿ ಬರೆದಿದ್ದಾರೆ. ನಾವು ನೋಡಿರುವ ಪಂಚತಂತ್ರ ಪುಸ್ತಕಗಳಲ್ಲಿ ಒಂದೊಂದು ಕಥೆ ಮತ್ತೆ ಕೊನೆಯಲ್ಲಿ ಅದರ ನೀತಿ. ಒಂದು ಕಥೆಗೂ ಮತ್ತು ಇನ್ನೊಂದು ಕಥೆಗೂ ಸಂಭಂದ ಇಲ್ಲ ಎನ್ನುವ ರೀತಿ ತೋರಿಸಿದ್ದಾರೆ. ಮೂಲ ಪಂಚತಂತ್ರದಲ್ಲಿ ಒಂದು ಕಥೆಗೂ ಇನ್ನೊಂದು ಕಥೆಗೂ ಸಂಭಂದ ಇದೆ. ಈ ಸಂಭಂದ ಯಾಕೆ ಮುಖ್ಯ ಎಂದು ಓದುಗರು ತಿಳಿಯಬೇಕು ಮತ್ತು ಮಕ್ಕಳಿಗೆ ತಿಳಿಸಬೇಕು. 

ಮೂಲತ: ಪಂಚತಂತ್ರ ಹುಟ್ಟಿದ್ದು ಹೀಗೆ.  'ದಕ್ಷಿಣ ದೇಶದ ಮಹಿಲಾರೋಪ್ಯ ಎಂಬ ನಗರವೊಂದಿದೆ ಅದರ ರಾಜ ಅಮರಶಕ್ತಿ. ಆತನು ಎಲ್ಲ ವಿದ್ಯೆಗಳನ್ನು ಬಲ್ಲವನು. ಆತನಿಗೆ ಮೂವರು ಮಕ್ಕಳು, ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ, ಇವರಿಗೆ ಓದುವುದು ಎಂದರೆ ಬೇಸರ ರಾಜನಿಗೆ ಇದರಿಂದ ತುಂಬ ದುಃಖ, ಅವರಿಗೆ ಯಾರೇ ಓಡಿಸಲು ಬಂದರು ಎನ್ನನ್ನು ಕಲಿವುದಿದೆಯಿಲ್ಲ, ಮಕ್ಕಳು ಬುದ್ದಿವಂತರಾಗದೆ ಇರುವುದನ್ನು ನೋಡಿ ರಾಜ ಮರುಗಿದನು. ಆಗ ಅವನ ಮಂತ್ರಿಯು ನಮ್ಮ ಅರಮನೆಯಲ್ಲಿ ವಿಷ್ಣುವರ್ಧನೆಂಬ ಬ್ರಾಹ್ಮಣನುಂಟು. ಆತನು ಎಲ್ಲ ಶಾಸ್ತ್ರಗಳನ್ನು ಬಲ್ಲನು. ಅವನ್ನು ಕೇಳೋಣ ಎಂದು ಸೂಚಿಸಿದನು, ವಿಷ್ಣುವರ್ಧನನು ರಾಜನ ಕೋರಿಕೆಯನ್ನು ಸ್ವೀಕರಿಸಿ ನಿಮ್ಮ ಮಕ್ಕಳನ್ನು ಆರು ತಿಂಗಳಲ್ಲಿ ನೀತಿಶಾಸ್ತ್ರ ನಿಪುಣರನ್ನಾಗಿ ಮಾಡುತ್ತೇನೆ ಎಂದು ಘೋಷಿಸುತ್ತಾನೆ. 

ವಿಷ್ಣುವರ್ಧನು ರಾಜನ ಮಕ್ಕಳಿಗೆ "ಸೆರೆಯಾದ ನರಿಯ ಕಥೆ" ಹೇಳಿದನು. ಈ ಕಥೆಯನ್ನು ಕೇಳಿ ರಾಜಕುಮಾರರು ಇಂತಹ ಇನ್ನೊಂದು ಕಥೆಯನ್ನು ಹೇಳಿ ಎಂದು ಬಲವಂತ ಮಾಡಿದರು. ಆಗ ಈ ಹುಡುಗರನ್ನು ದಾರಿಗೆ ತರಲು ಇದೇ ಸರಿಯಾದ ದಾರುಯೆಂದು "ಹಾಗಾದರೆ, ನೀವು ಈ ಕಥೆಯನ್ನು ಮತ್ತೆ ಹೇಳಿ. ನಿಮಗೆ ಇಂತಹ ಕಥೆಯನ್ನು ಬೇಕಾದಷ್ಟು ಹೇಳುವೆನು" ಎಂದನು. ಕಥೆಯನ್ನು ಚನ್ನಾಗಿ ಗಟ್ಟಿಮಾಡಿಕೊಂಡು ಬಂದು ಹೇಳಿದರು. ವಿಷ್ಣುವರ್ಧನು "ಇನ್ನು ಚಿಂತೆಯಿಲ್ಲ ಗೆದ್ದಂತಾಯಿತು" ಎಂದು ನೀತಿಶಾಸ್ತ್ರದ ಸಾರವನ್ನೆಲ್ಲಾ , ನೋಡದೆ ಮಾಡಿದರೆ, ಸಿಕ್ಕಿದ್ದು ಹೋಯಿತು, ಒಡೆಯುವುದು, ವೈರ ಸಾಧಿಸುವುದು, ಸ್ನೇಹ ಕಟ್ಟುವುದು ಎಂಬ ಐದು ತಂತ್ರಗಳನ್ನಾಗಿ ರಚಿಸಿ ಅವರಿಗೆ ಕಥೆಗಳಾಗಿಯೇ ಅದಷ್ಟನ್ನು ಹೇಳಿದನು. ಅವರೂ ಅದನ್ನು ಚೆನ್ನಾಗಿ ಕಲಿತು ಆರು ತಿಂಗಳಲ್ಲಿ ನೀತಿಶಾಸ್ತ್ರದಲ್ಲಿ ನಿಪುಣರಾದರು. 



Sunday, June 7, 2015

ನೂರೆಂಟು ಮಾತು - ವಿಶ್ವೇಶ್ವರ ಭಟ್

Noorentu Maatu - Vishweshwara Bhat



ವಿಶ್ವೇಶ್ವರ ಭಟ್ ರವರ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ಗುರುವಾರ ಪ್ರಕಟವಾದ "ನೂರೆಂಟು ಮಾತು" ಅಂಕಣದ ಸಂಗ್ರಹ ಈ ಪುಸ್ತಕದಲ್ಲಿದ. ಪ್ರತಿವಾರ ಬೇರೆ ಬೇರೆ ವಿಷಯ ಹುಡುಕಿ ಅರ್ಧ ಪುಟ ಓದುಗರಿಗೆ ನಿದ್ದೆ ಬರದಂತೆ, ಬೇರೆ ಪುಟ ತಿರುವದಂತೆ ಹಿಡಿದಿಡುವ ಕಲೆ ವಿಶ್ವೇಶ್ವರ ಭಟ್ ರಿಗೆ ಗೊತ್ತು. ಅವರ ಕೆಲವೊಂದು ವಿಷಯ ವಿವಾದಾತ್ಮಕ ಅನಿಸಿಕೊಂಡರು ಅವರ ಅಧ್ಯಯನದ ಆಳ ಕಮ್ಮಿಯಲ್ಲ.

ಅವರು ಈಗ "ಕನ್ನಡ ಪ್ರಭ" ಪತ್ರಿಕೆ ಬಿಟ್ಟ ಮೇಲೆ ಗುರುವಾರದ "ನೂರೆಂಟು ಮಾತು" ಅಂಕಣ ಇಲ್ಲದ ಪತ್ರಿಕೆ ಓದುವುದು ಗೌಡರ ಮನೆಯಲ್ಲಿ ಭಾನುವಾರ ಕೋಳಿ ಊಟ ಇಲ್ಲದಂತೆ. ಅವರು ವಿಜಯ ಕರ್ನಾಟಕ ಬಿಟ್ಟ ಮೇಲೆ ಅವರ ಓದುಗರು ತಮ್ಮ ಮನೆಯಲ್ಲಿ ಕನ್ನಡ ಪ್ರಭ ತರಿಸಲಾರಂಭಿಸಿದರು. ಈಗ ಯಾವುದೇ ಪತ್ರಿಕೆಯಲ್ಲಿ ಬರೆಯುತ್ತಿಲ್ಲ ಅಂದ ಮೇಲೆ ಅವರ ನಿಷ್ಠಾವಂತ ಓದುಗರು ಈ ಪುಸ್ತಕಗಳ ಮೊರೆ ಹೋಗಿದ್ದಾರೆ. ಅವರ ಒಂದೇ ಆಸೆ ಮತ್ತೆ ಗುರುವಾರ "ನೂರೆಂಟು ಮಾತು" ನಿಂದ ಶುರುವಾಗಲಿ ಎಂದು.


Saturday, June 6, 2015

ಬೆಸ್ಟ್ ಆಫ್ ಕೆಫ - ಎ. ವಿ. ಕೇಶವಮೂರ್ತಿ, ದಿವಾಕರ್ ಎಸ್

Best of Kefa - A V Keshavamoorthy, Divakar S


ಈಗ ಬರುವ ನಗೆ ಬರಹಗಳು ಬರಹಗಾರು ದ್ವಂದ್ವಾರ್ಥಕ್ಕೆ ಮೊರೆ ಹೋಗುತ್ತಾರೆ, ಯಾಕೆ ಮಾಡುತ್ತಾರೆ ಅವರ ಪ್ರಕಾರ ಆ ರೀತಿ ಬರೆಯದಿದ್ದಾರೆ ಯಾರು ಓದುವುದಿಲ್ಲ ಎಂದು. ಹಾಸ್ಯ ಈಗ ಒಂದು ಹೊಸ ತಿರುವಿನಲ್ಲಿ ಬಂದು ನಿಂತಿದೆ, ಅಗ್ಗದ ಗೆಲಿಮಾತು, ಬೇರೆಯವರನ್ನು ನೋಯಿಸುವ ವಿನೋದ. ಹತ್ತಾರು ವರ್ಷಗಳ ಹಿಂದೆ ಹೀಗೆ ಇರಲಿಲ್ಲ, ಹೇಳುವ ಹಾಸ್ಯ ಯಾರಿಗೂ ನೋವುಂಟುಮಾಡದೆ ಹೊಟ್ಟೆ ಹುಣ್ಣಾಗುವವರೆಗೂ ನಗಿಸುತಿದ್ದವು. ಇದರ ಪ್ರತ್ಯಕ್ಷ ಸಾಕ್ಷಿ ಎನ್ನುವ ರೀತಿಯಲ್ಲಿ ಕೇಫ಼ ರವರ ನಗೆ ಬರಹಗಳು ಕೊರವಂಜಿಯಲ್ಲಿ ಪ್ರಕಟವಾದವು.

ಈ ಸಂಕಲನದಲ್ಲಿ ಬರುವ ಹಾಸ್ಯ ಬರಹಗಳನ್ನು ಓದಿದಾಗ ನಮ್ಮ ಮುಖದ ಮೇಲೆ ಮೂಡುವುದು ನಗೆ ಮಾತ್ರ. ಅವರ ಹಾಸ್ಯದಲ್ಲಿ ಬರುವ ಪ್ರಮುಖ ಪಾತ್ರಗಳು ಶೌರಿ, ಟಿಪ್ಪು, ಮೈಗಳ್ಳರ ಸಂಘ, ಡೋಂಟ್ ಫಾಕೀರ್, ಬಾಬು ಎಲ್ಲರು ಈ ಪುಸ್ತಕ ಓದಿದ ಮೇಲೆ ನಮ್ಮ ಆತ್ಮೀಯ ಗೆಳೆಯರಾಗುತ್ತಾರೆ. ನಾವು  ಮೈಗಳ್ಳರ ಸಂಘದ ಸದ್ಯಸರು ಎಂದನಿಸುತ್ತದೆ. ತಮ್ಮ ನಿತ್ಯ ಜೀವನದ ಓಡಾಟಗಳಲ್ಲಿ ವಿನೋದವನ್ನು ತೋರಿಸುತ್ತಾರೆ. ಕೆಫ಼ ರವರ ಪೂರ್ಣ ಹೆಸರು ಎ. ವಿ. ಕೇಶವಮೂರ್ತಿ. ಎಲ್ಲರು ಓದಿ ನಗಬಹುದಾದ ಹಾಸ್ಯ ಬರಹಗಳ ಸಂಕಲನ "ಬೆಸ್ಟ್ ಆಫ್ ಕೆಫ".