Sunday, June 14, 2015

Filled Under:
, ,

ಎಲ್ಲಾನು ಮಾಡುವುದು ಹೊಟ್ಟೆಗಾಗಿ - ಜೋಗಿ ( ಗಿರೀಶ್ ರಾವ್ )

Ellaanu Maaduvudu Hottegaagi -Jogi ( Girish Rao )

 

 

ಪುಸ್ತಕದ ಮುನ್ನುಡಿಯಿಂದ 

ಹಸಿವು-ದುಡಿಮೆ-ಬೊಜ್ಜು-ವ್ಯಾಯಾಮ-ಆಹಂಕಾರ-ಆರೋಗ್ಯ-ಅನಾರೋಗ್ಯ ಹಾಗೂ ಸಾವು ನಮ್ಮ ದೇಹದ ಜೊತೆ ಸದಾ ಇರುವ ಅಂಗೋಪಾಂಗಗಳು ಎನ್ನಬಹುದು. ಹುಟ್ಟಿನ ಸಂಭ್ರಮದ ನಂತರ ಎಂದೋ ಬರುವ ಸಾವು, ಸಾವಿನ ನಂತರ ನಾವೆನಾಗ್ತೇವೆ ಅಂತ ಗೊತ್ತಿಲ್ಲದೇ ಹಾರಾಡುವುದು, 'ನಾವು' ಎಂದರೇನೆಂದು ನಮಗೇ ಗೊತ್ತಾಗದಿರುವುದು ಇದೆಲ್ಲಾ ನೋಡಿದರೆ ನಾವು ತೀರಾ ಪೋರೋಕ್ಷವಾಗಿ ಸಾವೆಂಬ ಆರಕ್ಕೆ ಮೂರಡಿ ಅಂತಿಮ ಸತ್ಯವನ್ನು, ಒಳಗೊಳಗೇ ಹೊತ್ತು ತಿರುಗಾಡುತ್ತೇವೆ ಅನ್ನಿಸುತ್ತದೆ. ಅದಕ್ಕೆ 'ಬದುಕು' ಎಂದು ಹೆಸರಿಟ್ತಿದ್ದೆವೇನೋ ಅನ್ನಿಸುತ್ತದೆ. ಇಲ್ಲದಿದ್ದರೆ ಮನುಷ್ಯ ಅನಾರೋಗ್ಯಕ್ಕೆ ಇಷ್ಟೆಲ್ಲ ಹೆದರಬೇಕಾಗಿರಲಿಲ್ಲ. 

ಈ ಅನುಭವ ಕಥನ ಓದಿದಾಗ ಬರೆದವರು ತಮ್ಮ ಸ್ವಂತ ದೇಹದ ಬಗ್ಗೆ ಹದಿನೈದು ದಿನಗಳ ಕಾಲ ಎಷ್ಟು ಕಾಳಜಿ ವಹಿಸಿದ್ದರೋ, ಓದುವವರು ಒಂದೆರಡು ಗಂಟೆಗಳ ಕಾಲ ಅಷ್ಟೇ ಕಾಳಜಿ ವಹಿಸುತ್ತಾರೆ ಅನ್ನಿಸುತ್ತದೆ. ವಿವರಣೆಗಳಲ್ಲಿ ಮಾನವ ದೇಹ ಮತ್ತು ಆರೋಗ್ಯದ ನಿಗೂಢತೆಗಳೆಲ್ಲ ಲಘು ಹಾಸ್ಯಫಾಲ್ಲಿ ಬಿಚ್ಚಿಕೊಂಡರೂ, ನಗುವ ಕಂಗಳಲ್ಲೇ ನಮ್ಮ ನಮ್ಮ ಹೊಟ್ಟೆಗಳ ಕಡೆ ತುಸು ವಿಷಾದದಿಂದಲೇ ನೋಡಿಕೊಳ್ಳುವಂತಾಗುತ್ತದೆ 

ಕತೆಗಾರಿಕೆಯಲ್ಲಿ ತುಂಬ ದಿನಗಳ ಹಿಂದೆಯೇ ಸೀಲು ಹೊಡೆದಂಥ ಕಿಡಿಗೇಡಿ ನಿರ್ಲಿಪ್ತತೆ ಗಿಟ್ಟಿಸಿಕೊಂಡಿರುವ ಜೋಗಿ, ಇಲ್ಲಿ ತಮ್ಮ ಸ್ವಂತ ದೇಹವನ್ನೇ ಪಾತ್ರವಾಗಿಸಿ, ತಾವು ಸ್ವತ: ತುಸು ದೂರ ನಿಂತವರಂತೆ ಪೂರ್ತಿ ಮಜಾ ತಗೊಂಡು ಬರೆದಿರುವ ಅಪರೂಪದ ಕಥನ ಇದು. ಉದ್ದೇಶಪೂರ್ವಕವಾಗಿ ಗಹನವಾದದ್ದೆನನ್ನೋ ಹೇಳಿ ತಲೆಕೆಡಿಸದೆ, ಆರಾಮಾಗಿ ಯಾವುದೋ ಸರಳ ಅನುಭವ ಹೇಳಿ, ಓದುಗ ಇನ್ಯಾವತ್ತೋ ಅನ್ನ ತಿನ್ನುವಾಗಲೋ, ಸ್ನಾನ-ಪ್ರಕ್ಷಾಲನಗಳನ್ನು ಮಾಡುವಾಗಲೋ ಮನೋದೈಹಿಕ ಆರೋಗ್ಯದ ಬಗ್ಗೆ ಸಿರೆಯಸ್ಸಾಗುವಂತೆ ಮಾಡುವಲ್ಲಿ ಈ ಕಥನ 'ಡಾಕ್ಟರ ಚೀಟಿ' ರೀತಿಯಲ್ಲಿ ಯಶಸ್ವಿಯಾಗಿದೆ. 

ಇನ್ನೋದಷ್ಟು ಪಾತ್ರಗಳ ಒಳನೋಟ ಥರದ್ದು, ವೇದಾಂತದ ಥರದ್ದು ಸೇರಿ ಇನ್ನೇನೋ ಆಗಬಹುದಾಗಿದ್ದ ಬರಹ ಥಟ್ಟನೆ ನಿಂತುಹೋಯಿತು ಅನ್ನಿಸಬಹುದು ಓದುಗನಾಗಿ ಇನ್ನೇನ್ನೋ ಆಗಬಹುದಾಗಿದ್ದೆ ಬರಹ ಥಟ್ಟನೆ ನಿಂತುಹೋಯಿತು ಅನ್ನಿಸುವುದು ಓದುಗನಾಗಿ ಇನ್ನೇನೋ ಬಯಸುವ ನನ್ನ ವೈಯಕ್ತಿಕ ನಿರಾಸೆ ಇರಬಹುದು ಅಥವಾ ತೀರ ಸರಳವಾಗಿ ಕತೆಯಿಲ್ಲದೇ ಕಾಲಕೆಷೇಪ ಮಾಡುವುದು ನನಗೆ ತುಂಬ ಇಷ್ಟವಾಗಿರುವುದರಿಂದ ನಾನು ಹೀಗೆಲ್ಲ ಅನ್ನುತ್ತಿರಬಹುದು. ಓದುಗನಿಗೆ ಏನಾಗುತ್ತೆ ಎಂದು ಯೋಚಿಸುತ್ತಾ ಕೂತರೆ ಮಧ್ಯೆ ಗೊತ್ತಾಗಿದೆ. ಅದ್ದರಿಂದ ನನ್ನ ಈ ಅನಿಸಿಕೆ, ಏನೂ ಹೇಳದೇ ಇನ್ನೇನೋ ಹೇಳಲು ಹೋಗಿ ಹೆಂಗೆಂಗೋ  ಆಗಿರಬಹುದು. 

ಥೂ , ನಾನು ಎತ್ಲಾಗೆ ಹೊಂಟೆ, ನಂಗೇ ಗೊತ್ತಾಗ್ತಿಲ್ಲ. ಜಲ್ದಿ ಮುಗಿಸುತ್ತೇನೆ. ನಾನು ಕೂಡ ಒಂದೆರಡು ಬಾರಿ ಆಯುರ್ವೇದಿಕ್ ಸೆಂಟರುಗಳಲ್ಲಿ ಸಿಗರೇಟು ಬಿಡಲು ಯತ್ನಿಸಿ, ಗಂಜಿಗಿಂಜಿ ಕುಡಿದುಕೊಂಡು ಇದ್ದದ್ದರಿಂದ ಇಲ್ಲಿ ಜೋಗಿ ಹೇಳಿದ್ದೆಲ್ಲ ನನ್ನದೇ ಖಾಸಗಿ ವಿವರಗಳು ಅನಿಸುತ್ತಿವೆ. ಔಷಧಿ ಕೊಡುವ ಡಾಕ್ಟರಿಗೇ ಒಮ್ಮ ಸಿಗರೇಟು ಸೇದುವಂತೆ ಪುಸುಲಾಯಿಸಿದ ಕಾರಣ ನನ್ನುನ್ನು ಮರ್ಯಾದೊಚಿತವಾಗಿ ಅಲ್ಲಿಂದ ಓಡಿಸಲಾಗಿತ್ತು ಅನ್ನೋದು ಬೇರೆ ವಿಷಯ.   

ಯಾವುದೇ ಕೃತಿ ಓದಿ ಮುಗಿಸಿದ ತಕ್ಷಣ ಅದೊಂದು ಹೊಸ ಲೋಕವನ್ನೂ, ಆ ಕ್ಷಣದ ಅದರೆದ್ದೆ ಆದ ಹೊಸ ಭಾವಪ್ರಾಪ್ತಿಯನ್ನೂ 'ಟಪಕ್ಕಂತ' ಕರುಣಿಸಬೇಕು. ಅದು ಇಲ್ಲಿದೇ. ಎಲ್ಲರೊ ತಮ್ಮತಮ್ಮ ದೇಹ ತನಗೆ ತೋಚಿದ್ದು ಮಾಡಿದರೆ, ದೇಹ ತನಗೆ ತೋಚಿದ್ದು ಯಾಕೆ ಮಾಡುತ್ತದೆ, ದೇಹ-ಮನಸ್ಸು ಅದರೇನು ಎಂದೆಲ್ಲ ಒಮ್ಮೆ ಘನಗಾಂಭೀರ್ಯದಿಂದ  ಬಗ್ಗಿ ಹೊಟ್ಟೆ ನೋಡಿಕೊಂಡು 'ಮಿಸ್ಸು' ಮಾಡದೇ ಮೌನಾಚರಣೆ ಮಾಡಬೇಕಾಗಿ ಕೋರುತ್ತಾ ನನ್ನ ಪ್ರಾಸ್ತಾವಿಕ ಭಾಷಣ ಮುಗಿಸುತ್ತೇನೆ. 

ನಮಸ್ತೆ 

-- ಯೋಗರಾಜ ಭಟ್




0 comments:

Post a Comment