Wednesday, June 10, 2015

Filled Under:
, ,

ಪಂಚತಂತ್ರ - ದೇವುಡು

Hosagannada Panchatantra - Devudu



ನಮ್ಮ ಅಕ್ಕನ ಮಗ ಫೋನ್ ಮಾಡಿದಾಗಲೆಲ್ಲ, ಏನ್ ಮಾಡ್ತಿದೀಯ ಅಂದ್ರೆ ಡೋರೆಮಾನ್ ಇಲ್ಲ ಸಿನ್ ಚಾನ್ ನೋಡ್ತಿದೀನಿ ಅಂತ ಹೇಳ್ತಿದ್ದ. ಏನಿದೆ ಈ ಕಾರ್ಟೂನಲ್ಲಿ ಅಂತ ಅನಿಸಿದ್ರು ಅಷ್ಟಾಗಿ ತಲೆ ಕೆಡಿಸಿಕೊಳ್ಳಲಿಲ್ಲ, ಆ ಎರಡು ಕಾರ್ಟೂನನ್ನು ಯಾವತ್ತು ನೋಡಿಲ್ಲದ ಕಾರಣ ಹಾಗು ನಮ್ಮೆ ಮನೆಯಲ್ಲಿ ಯಾರು ಚಿಕ್ಕ ಮಕ್ಕಳಿಲ್ಲದ ಕಾರಣ ಯಾವುದೇ ಗೊಂಬೆಗಳ ಚಾನೆಲಗಳನ್ನು ಹಾಕುವುದಿಲ್ಲ. ಇತೀಚೆಗೆ ಬೇಸಿಗೆ ರಜೆಯಲ್ಲಿ ಅಕ್ಕನ ಮಗ ಮನೆಗೆ ಬಂದಾಗ ನಾವು ಯಾವುತ್ತು ನೋಡಿರದ, ಇಂತ ಚಾನೆಲ್ ಗಳು ಇವೆ ಅಂತಾನು ಗೊತ್ತಿರದ ಚಾನೆಲ್ ಗಳು ಆಡಲು ಪ್ರಾರಂಭಿಸಿದವು. ಕೆಲವು ವರ್ಷಗಳ ಹಿಂದೆ ನೋಡಿದ್ದಕಿಂತ ಹುಡುಗ ಈಗ ಸ್ವಲ್ಪ ಜಾಸ್ತಿ ಕಿರುಚಾಡಿದರು, ಜಾಸ್ತಿ ಗಲಾಟೆ ಮಾಡಿದರು, ಏನೇ ಬೇಕೆಂದರು ಏರು ಧ್ವನಿಯಲ್ಲಿ ಕೇಳಿದರು ನಮ್ಮ ಅಕ್ಕ ಚಿಕ್ಕ ಹುಡುಗರೆಲ್ಲ ಹೇಗೆ ಎಂದು ತಲೆಗೆ ಹಾಕಿಕೊಳ್ಳುವುದಿಲ್ಲ. ಆದರೆ ನನಗೆ ಇದರಿಂದ ಕಿರಿಕಿರಿ ಮಾತು ಆಶ್ಚರ್ಯ. ಆಶ್ಚರ್ಯ ಯಾಕಪ್ಪ ಅಂದ್ರೆ ನಾವು ಚಿಕ್ಕವರಿದ್ದಾಗ ಇಸ್ಟೊಂದು ಕಿರುಚಾಡುತ್ತಿರಲ್ಲಿಲ್ಲ, ಎಲ್ಲದಕ್ಕೂ ಕಿರುಚುತ್ತಿರಲ್ಲಿಲ್ಲ. ಅಕ್ಕನ ಮಗ ಅಲ್ವ ಏನು ಹೇಳಲು ಹೋಗಲಿಲ್ಲ. 

ನಾನು ಪ್ರತಿ ದಿನ ಮನೆಗೆ ಹೋಗುವುದೇ ರಾತ್ರಿ ಯಾಗುತ್ತದೆ, ಟೀವಿ ಆಕುವುದೇ ಅಪರೂಪ, ನೋಡಿದರು ನ್ಯೂಸ್ ಇಲ್ಲ ಯಾವುದಾರು ಮ್ಯೂಸಿಕ್ ಚಾನೆಲ್ ಅರ್ಧ ಘಂಟೆ ಹಾಕಿದರೆ ಹೆಚ್ಚು. ವಾರಾಂತ್ಯದಲ್ಲಿ ಹೊರಗಡೆ ಓಡಾಟ ಇಲ್ಲ ಸಿನಿಮಾ ಇನ್ನು ಟೀವಿ ಗೆ ಸಮಯ ಎಲ್ಲಿ. ಹೀಗಿರುವಾದ ಒಂದು ಶನಿವಾರ ಏನು ಕೆಲಸವಿಲ್ಲ ಮನೆಯಲಿದ್ದಾಗೆ ಕುರ್ಚಿಯಲ್ಲಿ ಕೂತು ರಿಮೋಟ್ ನ ಒಂದು ಬಟನ್ ಒತ್ತಿದೆ, ಯಾರೋ ಕಿಟಾರನೆ ಕಿರುಚಿಕೊಂಡರು. ಮನೆಯಲ್ಲಿದ್ದ ಅಪ್ಪ, ಅಮ್ಮ, ಅಕ್ಕ ಎಲ್ಲರು ರೂಮಗಳಿಂದ ಓಡಿಬಂದು ನೋಡಿದರೆ ಕೌಶಿಕ್, ಅಕ್ಕನ ಮಗನ ಹೆಸರು, ಕಿರುಚಿಕೊಂಡಿದ್ದು, ಅವನ ಕಣ್ಣಲ್ಲಿ ನೀರು ಹರಿತಿದೆ. ಎಲ್ಲರು ನಾನೇ ಏನೋ ಮಾಡಿದಿನಿ ಎನ್ನುವ ರೀತಿಯಲ್ಲಿ ನೋಡ್ತಿದಾರೆ, ನಾನು ಏನು ಮಾಡಿಲ್ಲ ಅಂದ್ರು ನಂಬ್ತಿಲ್ಲ. ಕೌಶಿಕ್ ನ ರನ್ನ, ಬಂಗಾರಿ, ಮುದ್ದು ಅಂತ ಸಮಾದಾನ ಮಾಡಿ ಏನಾಯ್ತು ಅಂತ ಕೇಲ್ದ್ರೆ ದೋರೆಮಾನ್ ಬರ್ತಿತ್ತು ನಾನ್ ಚಾನೆಲ್ ಚೇಂಜ್ ಮಾಡ್ಬಿಟ್ಟೆ ಅಂತ ಗೋಳೇ ಅಂತ ಮತ್ತೆ ಅಳಲು ಶುರು ಮಾಡಿದ. ಸಮಾದಾನ ಮಾಡಿ ಚಾಕಲೇಟ್ ಕೊಟ್ಟು ಮತ್ತೆ ಡೋರೆಮನ್ ಹಾಕಿದಮೆಲೇನೆ ಮನೆಯಲ್ಲಿ ಶಾಂತಿ. 

ನಾವು ಚಿಕ್ಕವರಾಗಿದ್ದಾಗ ಈ ರೀತಿ ಹಠ ಮಾಡಿದ್ದರೆ ಕುಂಡೆ ಮೇಲೆ ಎರಡು ಬೀಳ್ತಿತ್ತು. ಈ ಗೊಂಬೆ ಕಥೆ ಅಷ್ಟೊಂದು ಚೆನ್ನಾಗಿದಿಯ ಅಂತ ನೋಡ್ದ್ರೆ, ಕಥೆನು ಇಲ್ಲ ನೀತಿನು ಇಲ್ಲ. ಬರಿ ಕಿರುಚುವುದು, ಅಪ್ಪ ಅಮ್ಮನಿಗೆ ಸುಳ್ಳು ಹೇಳುವುದು, ದೊಡ್ಡವರು ಹೇಳಿದ ಮಾತನ್ನು ವ್ಯಂಗ್ಯ ಮಾಡುವುದು...... ಹೇಗೆ ಅರ್ಧ ಘಂಟೆ ಮಕ್ಕಳು ಏನು ಮಾದಬಾರದೋ ಅದನ್ನೆಲ್ಲಾ ಡೋರೆಮಾನ್ ಕೈಯಲ್ಲಿ ಮಾಡಿಸುತ್ತಾರೆ. ಈಗ ನನಗೆ ಅರ್ಥವಾಯ್ತು ಯಾಕಪ್ಪ ಹೇ ಹುಡುಗ ಹೀಗೆ ಆಡುತ್ತಾನೆಂದು. ನಮ್ಮ ಬಾಲ್ಯದಲ್ಲಿ ನಾವು ನೋಡಿದ್ದು, ಓದಿದ್ದು ಪಂಚತಂತ್ರ, ತೆನಾಲಿ ರಾಮ, ಅಕ್ಬರ್ ಬೀರಬಲ್ .... ಈ ಕಥೆಗಳು ಅದರ ನೀತಿ ಅವುಗಳ ಮೇಲೆ ನಮ್ಮ ಗುಣ, ನಡತೆ ಬೆಳೆದು ಬಂದಿರುವುದು. ಎಲ್ಲಿ ದೊರೆಮಾನ್ ಮತ್ತು ಎಲ್ಲಿ ಪಂಚತಂತ್ರ. ನಾವು ಓದಿದ ಪ್ರತಿ ಒಂದು ಕಥೆಯಲ್ಲಿ ಒಂದು ನೀತಿ, ಮೊಲ ಮತ್ತು ಆಮೆ ಕಥೆ, ಸಿಂಹ ಮತ್ತು ಮೊಲದ ಕಥೆ, ಕೋತಿ ಮತ್ತು ಮೊಸಳೆ..... ಆಲಸಿ ಯಾಗಬಾರು, ಸುಳ್ಳು ಹೇಳಬಾರದು, ವಂಚನೆ ಮಾಡಬಾರದು ಎಂಬ ನೀತಿಗಳ ಮೂಲಕ ಬೆಳೆದವರು ನಾವು. ನಾವು ಸುಳ್ಳ ಹೇಳುವ ಮುಂಚೆ ಹತ್ತು ಸಾರಿಯಾದರೂ ಯೋಚಿಸುತ್ತೇವೆ ಯಾಕೆಂದರ ಅದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಚಿಂತಿಸುತ್ತೇವೆ. ನಾವು ಪಂಚತಂತ್ರ ಕಥೆ ಬಗ್ಗೆ ಯೋಚಿಸದಿದ್ದರು ಎಲ್ಲೋ ಒಂದುಕಡೆ ನಮ್ಮ ಮನಸ್ಸು ಮತ್ತು ಮಿದಿಳು ಹೇಳುತ್ತದೆ ಇದು ತಪ್ಪು ಎಂದು. ಚಿಕ್ಕ ಮಕ್ಕಳು ದೊರೆಮಾನ್ ನೋಡಿದರೆ ಆದರೆ ರೀತಿಯಲ್ಲಿ ಕಿರುಚಾಡುವುದು, ಸುಳ್ಳು ಹೇಳಿ ಹೊರಗೆ ಹೋಗುವುದು ಮಾಡುತ್ತಾರೆ, ಮುಂದೆ ಬೆಳಿತ ದೊಡ್ಡವರಾದ ಮೇಲೆ ಪ್ರಾಮಾಣಿಕ ಪ್ರಜ್ಞೆ ಇಲ್ಲವಾಗುತ್ತದೆ. 

ನಾನು ಓದಿದ ಪಂಚತಂತ್ರ ಕಥೆಗಳಲ್ಲಿ ದೇವುಡು ಅವರು ಬರೆದ ಪಂಚತಂತ್ರ ಪುಸ್ತಕ ತುಂಬ ಚೆನ್ನಾಗಿ ಬರೆದಿದ್ದಾರೆ. ನಾವು ನೋಡಿರುವ ಪಂಚತಂತ್ರ ಪುಸ್ತಕಗಳಲ್ಲಿ ಒಂದೊಂದು ಕಥೆ ಮತ್ತೆ ಕೊನೆಯಲ್ಲಿ ಅದರ ನೀತಿ. ಒಂದು ಕಥೆಗೂ ಮತ್ತು ಇನ್ನೊಂದು ಕಥೆಗೂ ಸಂಭಂದ ಇಲ್ಲ ಎನ್ನುವ ರೀತಿ ತೋರಿಸಿದ್ದಾರೆ. ಮೂಲ ಪಂಚತಂತ್ರದಲ್ಲಿ ಒಂದು ಕಥೆಗೂ ಇನ್ನೊಂದು ಕಥೆಗೂ ಸಂಭಂದ ಇದೆ. ಈ ಸಂಭಂದ ಯಾಕೆ ಮುಖ್ಯ ಎಂದು ಓದುಗರು ತಿಳಿಯಬೇಕು ಮತ್ತು ಮಕ್ಕಳಿಗೆ ತಿಳಿಸಬೇಕು. 

ಮೂಲತ: ಪಂಚತಂತ್ರ ಹುಟ್ಟಿದ್ದು ಹೀಗೆ.  'ದಕ್ಷಿಣ ದೇಶದ ಮಹಿಲಾರೋಪ್ಯ ಎಂಬ ನಗರವೊಂದಿದೆ ಅದರ ರಾಜ ಅಮರಶಕ್ತಿ. ಆತನು ಎಲ್ಲ ವಿದ್ಯೆಗಳನ್ನು ಬಲ್ಲವನು. ಆತನಿಗೆ ಮೂವರು ಮಕ್ಕಳು, ಬಹುಶಕ್ತಿ, ಉಗ್ರಶಕ್ತಿ ಮತ್ತು ಅನಂತಶಕ್ತಿ, ಇವರಿಗೆ ಓದುವುದು ಎಂದರೆ ಬೇಸರ ರಾಜನಿಗೆ ಇದರಿಂದ ತುಂಬ ದುಃಖ, ಅವರಿಗೆ ಯಾರೇ ಓಡಿಸಲು ಬಂದರು ಎನ್ನನ್ನು ಕಲಿವುದಿದೆಯಿಲ್ಲ, ಮಕ್ಕಳು ಬುದ್ದಿವಂತರಾಗದೆ ಇರುವುದನ್ನು ನೋಡಿ ರಾಜ ಮರುಗಿದನು. ಆಗ ಅವನ ಮಂತ್ರಿಯು ನಮ್ಮ ಅರಮನೆಯಲ್ಲಿ ವಿಷ್ಣುವರ್ಧನೆಂಬ ಬ್ರಾಹ್ಮಣನುಂಟು. ಆತನು ಎಲ್ಲ ಶಾಸ್ತ್ರಗಳನ್ನು ಬಲ್ಲನು. ಅವನ್ನು ಕೇಳೋಣ ಎಂದು ಸೂಚಿಸಿದನು, ವಿಷ್ಣುವರ್ಧನನು ರಾಜನ ಕೋರಿಕೆಯನ್ನು ಸ್ವೀಕರಿಸಿ ನಿಮ್ಮ ಮಕ್ಕಳನ್ನು ಆರು ತಿಂಗಳಲ್ಲಿ ನೀತಿಶಾಸ್ತ್ರ ನಿಪುಣರನ್ನಾಗಿ ಮಾಡುತ್ತೇನೆ ಎಂದು ಘೋಷಿಸುತ್ತಾನೆ. 

ವಿಷ್ಣುವರ್ಧನು ರಾಜನ ಮಕ್ಕಳಿಗೆ "ಸೆರೆಯಾದ ನರಿಯ ಕಥೆ" ಹೇಳಿದನು. ಈ ಕಥೆಯನ್ನು ಕೇಳಿ ರಾಜಕುಮಾರರು ಇಂತಹ ಇನ್ನೊಂದು ಕಥೆಯನ್ನು ಹೇಳಿ ಎಂದು ಬಲವಂತ ಮಾಡಿದರು. ಆಗ ಈ ಹುಡುಗರನ್ನು ದಾರಿಗೆ ತರಲು ಇದೇ ಸರಿಯಾದ ದಾರುಯೆಂದು "ಹಾಗಾದರೆ, ನೀವು ಈ ಕಥೆಯನ್ನು ಮತ್ತೆ ಹೇಳಿ. ನಿಮಗೆ ಇಂತಹ ಕಥೆಯನ್ನು ಬೇಕಾದಷ್ಟು ಹೇಳುವೆನು" ಎಂದನು. ಕಥೆಯನ್ನು ಚನ್ನಾಗಿ ಗಟ್ಟಿಮಾಡಿಕೊಂಡು ಬಂದು ಹೇಳಿದರು. ವಿಷ್ಣುವರ್ಧನು "ಇನ್ನು ಚಿಂತೆಯಿಲ್ಲ ಗೆದ್ದಂತಾಯಿತು" ಎಂದು ನೀತಿಶಾಸ್ತ್ರದ ಸಾರವನ್ನೆಲ್ಲಾ , ನೋಡದೆ ಮಾಡಿದರೆ, ಸಿಕ್ಕಿದ್ದು ಹೋಯಿತು, ಒಡೆಯುವುದು, ವೈರ ಸಾಧಿಸುವುದು, ಸ್ನೇಹ ಕಟ್ಟುವುದು ಎಂಬ ಐದು ತಂತ್ರಗಳನ್ನಾಗಿ ರಚಿಸಿ ಅವರಿಗೆ ಕಥೆಗಳಾಗಿಯೇ ಅದಷ್ಟನ್ನು ಹೇಳಿದನು. ಅವರೂ ಅದನ್ನು ಚೆನ್ನಾಗಿ ಕಲಿತು ಆರು ತಿಂಗಳಲ್ಲಿ ನೀತಿಶಾಸ್ತ್ರದಲ್ಲಿ ನಿಪುಣರಾದರು. 





0 comments:

Post a Comment