Thursday, June 11, 2015

ಅಷ್ಟಕ್ಕೂ ನಾ ಹೇಳೋದು ಇಷ್ಟು - ವಿಶ್ವೇಶ್ವರ ಭಟ್

Ashtakku Naa Helodu Ishtu - Vishweshwara Bhatಮೂಲ ಲೇಖಕ: ಸ್ವಪನ್ ಸೇಠ 
ಅನುವಾದಕರು: ವಿಶ್ವೇಶ್ವರ ಭಟ್

ಮುನ್ನುಡಿಯಿಂದ:

ವ್ಯಕ್ತಿಯೊಬ್ಬ ವೃತ್ತಿಯಿಂದ ಲೇಖಕನಾಗಿದ್ದರೆ ಆತ ಪುಸ್ತಕ ಬರೆಯುತ್ತಾನೆ ಎಂದು ನಿರೀಕ್ಷಿಸಬಹುದು. ಆದರೆ ನನಗೆ ಯಾವತ್ತು ಕಥಾವಸ್ತುವೆಂಬುದು ಇರಲಿಲ್ಲ. ನಾನು ರಚಿಸಬಹುದಾದ ಯಾವುದೇ ಕಾಲ್ಪನಿಕ ಕಥಾನಕವೂ ಇರಲಿಲ್ಲ. ಹಾಗೆಂದು ನನ್ನ ಜೀವನದಲ್ಲಿ ಯಾವುದೇ ಅತ್ಯಾಸಕ್ತಿ ಕೆರಳಿಸುವ ಕತೆಯೂ ಇರಲಿಲ್ಲ. ಹೀಗಾಗಿ ನಾನು ಪುಸ್ತಕ ಬರೆಯುವ ಗೋಜಿಗೆ ಹೋಗಲಿಲ್ಲ. ನಾನು ಅನುಭವಿಸಿರುವುದು ಮಾತ್ರ ನನಗೆ ಗೊತ್ತಿದೆ ಅಷ್ಟೇ. ನೀವು ಓದಿರುವುದೆಲ್ಲವನ್ನೂ ನಾನು ಅನುಭವಿಸಿದ್ದೇನೆ. ಈ ಪುಸ್ತಕದ ಬಗ್ಗೆ ನನಗೆ ಹೇಳಲಿಕ್ಕಿರುವುದು ಕೇವಲ ಇಷ್ಟೇನೆ. 

ಮೂಲ ಲೇಖಕನ ಕುರಿತು :

ಜಾಹೀರಾತು ವೃತ್ತಿಯಲ್ಲಿರುವ ಸ್ವಪನ್ ಸೇಠ ಕೇವಲ ಹದಿನೇಳನೇ ವಯಸ್ಸಿನಲ್ಲಿ ವೀಡಿಯೊ ಟೇಪ್ ಮತ್ತು ಕಂಪ್ಯೂಟರ್ ಬಿಡಿಭಾಗಗಳನ್ನು ಮಾರಾಟ ಮಾಡಲಾರಂಭಿಸಿದರು. ಅವರು ಶಾಲೆಗೆ ಮೊದಲಿಗರಾಗಿದ್ದರು. ಆದರೆ ಕಾಲೇಜು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಹೊರಕ್ಕೆ ಬಂದರು. ಬೆಂಗಳೂರಿನ ಐಐಎಂನಲ್ಲಿ ಪಾಠ ಮಾಡಲು ಹೇಗೋ ಸಮಯ ಹೊಂದಿಸಿಕೊಂಡಿದ್ದರು. 

ಈ ಸಂದರ್ಭದಲ್ಲಿ ಅವರು ಟಾಟಾ ಸ್ಟೀಲ್ ಸಂಸ್ಥೆಗಾಗಿ ಅತ್ಯಂತ ಮಹತ್ವಪೂರ್ಣ ಘೋಷವಾಕ್ಯ "ವೀ ಆಲ್ಸೋ ಮೇಕ್ ಸ್ಟೀಲ್"(ನಾವು ಉಕ್ಕನ್ನೂ ನಿರ್ಮಾಣ ಮಾಡುತ್ತೇವೆ) ಬರೆದರು. ಇಪ್ಪತ್ತೆರಡರ ಹರೆಯದಲ್ಲೇ ಅವರು ಕಾನ್, ಮಾಂಟ್ರಿಕ್ಸ್ ಚಲನಚಿತ್ರೋತ್ಸವ ಮತ್ತು ಕ್ಲಿಯೋಸ್ ಪ್ರಶಸ್ತಿ ಪಡೆದರು. ತನ್ಮೂಲಕ ಕೇವಲ ಇಪ್ಪತ್ನಾಲ್ಕರ ವಯಸ್ಸಿಗೆ ದೇಶದ ಅತಿ ಚಿಕ್ಕ ವಯಸ್ಸಿನ ಸೃಜನಶೀಲ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 

ಇಪ್ಪತ್ತೆಂಟರ ಹರೆಯದಲ್ಲಿ ಅವರು ತಮ್ಮದೇ ಆದ ಈಕ಼್ವಸ್ ಸಂಷೆಯನ್ನು ಸ್ಥಾಪಿಸಿದರು. ಕೇವಲ ಒಂದು ವರ್ಷ ಕಳೆಯುವಷ್ಟರಲ್ಲಿ ಈ ಸಂಸ್ಥೆ, ವರ್ಷದ ಅತ್ಯುತ್ತಮ ಊದಯೋನ್ಮುಖ ಸಂಸ್ಥೆಯ ಪ್ರಶಸ್ತಿ ಗರಿಯನ್ನು ಮೂಡಿಗೆರಿಸಿಕೊಂಡಿತು. 

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಇವರು ಕೈ ಇಟ್ಟ ಬಹುತೇಕ ಎಲ್ಲ ಕೆಲಸಗಳಲ್ಲಿ ಯಶಸ್ಸು ಸಾಧಿಸಿದರು. ಆದರೆ ಈ ಪುಸ್ತಕದಲ್ಲಿ ಇದೇ ಮೊದಲು ಬಾರಿಗೆ ಸ್ವಪನ್, ವೈಫಲ್ಯ, ಮಹತ್ವಾಕಾಂಕ್ಷೆ, ನಾಯಕತ್ವ, ಪ್ರೀತಿ ಮತ್ತು ಮದುವೆ ಬಗ್ಗೆ ನಿಸ್ಸಂಕೋಚವಾಗಿ ಪ್ರಾಮಾಣಿಕತೆಯಿಂದ ಹೇಳಿಕೊಂಡಿದ್ದಾರೆ. 

ಅವರು ಸದಾ ಕಾಲ ಯಶಸ್ಸಿನ ಹಾದಿಯಲ್ಲೇನೂ ಸಾಗಲಿಲ್ಲ. ಪುಸ್ತಕದಲ್ಲಿ ಅವರು ಹೇಳಹೊರಟಿರುವುದು ಇದನ್ನೇ. 

ಸದಾ ಕಾಲ ಒಬ್ಬಂಟಿಯಾಗಿರಲು ಇಚ್ಚಿಸುವ ಸ್ವಪನ್ ಇದೀಗ, ವಸಂತ್ ವ್ಯಾಲಿಯಲ್ಲಿ ಬೋಧನೆಯ ಹೊಸ ಹಾದಿಯ ಅನ್ವೇಷಣೆಯಲ್ಲಿ ತೊಡಗಿದ್ದಾರೆ. 

ಹೊಸ ಕಲಾಪ್ರತಿಭೆಯ ಹುಡುಕಾಟದ ಜತೆಗೆ ಆಧುನಿಕ ಭಾರತೀಯ ಮತ್ತು ಸಮಕಾಲೀನ ಭಾರತದ ತಮ್ಮ ಅತ್ಯಮೂಲ್ಯ ಕಲಾಕೃತಿಗಳ ಸಂಗ್ರಹದಲ್ಲಿ ಹೊಸ ಪ್ರತಿಭೆಗಳ ಕಲಾಕೃತಿಗಳನ್ನು ಜೋಡಿಸುವುದು ಅವರ ಸದ್ಯದ ಕಾಯಕವಾಗಿದೆ. 

ಫೇಸ್ ಬುಕ್ ಸಮೂದಾಯದ ನಿರ್ವಹಣೆ ಜೊತೆಗೆ ವಿಶ್ವದ ಅಪರೂಪದ ವೈನ್ ಗಳು, ಪೇಪರ್, ಮೇಣದ ಬತ್ತಿ, ಪುಸ್ತಕಗಳು, ವಿಶ್ವ ಸಿನಿಮಾ, ಪೆನ್ಸಿಲ್ ಗಳು, ಸುಗಂಧ ದ್ರವ್ಯಗಳು ಮುಂತಾದ ಅನೇಕ ವಸ್ತುಗಳನ್ನು ಸಂಗ್ರಹಿಸುತ್ತಿದ್ದಾರೆ. ಪತ್ನಿ ಮತ್ತು ಇಬ್ಬರು ಪುತ್ರರ ಜೊತೆಗೆ ಅವರು ಗುರ್ ಗಾಂವ್ ನಿಂದ ಆಚೆ ತೆರಳುತ್ತಾರೆ. ಪುಸ್ತಕದನ್ದಿಗಳಿಗೆ, ಪುಸ್ತಕ ಕೊಳ್ಳಲು. 

ಅಂದ ಹಾಗೆ ಇದು, ಅವರ ಮೊದಲ ಪುಸ್ತಕ. 
0 comments:

Post a Comment