Wednesday, January 1, 2014

ಶಾಲಭಂಜಿಕೆ - ಕೆ ಎನ್ ಗಣೇಶಯ್ಯ

Shalabanjike - K. N. Ganeshaiah

 ಮುನ್ನುಡಿಯಿಂದ:

ನನ್ನ ಹಿರಿಯ ಸ್ನೇಹಿತರೊಬ್ಬರು ಬೈಪಾಸ್ ಸರ್ಜರಿ ಮಾಡಿಸಿಕೊಂಡು ಮನೆಯಲ್ಲಿದ್ದಾಗ ನೋಡಲೆಂದು ಹೊಗಿದ್ದೆ. ಡಾಕ್ಟರ್ ಸೂಚನೆಯಂತೆ ಸಮಯಕ್ಕೆ ತಕ್ಕ ಶುಶ್ರೂಷೆ ಮಾಡುತ್ತಿದ್ದ ಅವರ ಪತ್ನಿ ನನ್ನನ್ನು ಒಳಗೆ ಬರಮಾಡಿಕೊಂಡು ಅವರಿಗಿದ್ದ ಸ್ಥಿತಿಯಲ್ಲಿ ಅಲ್ಲಿಗೆ ಕರೆದೊಯ್ಯಲು ಮುಜುಗರಗೊಂಡು, ನನ್ನ ಕೈಗೆ 'ದ ವೀಕ್' ವಾರಪತ್ರಿಕೆ ಕೊಟ್ಟು ಕೆಲವೇ ನಿಮಿಷದಲ್ಲಿ ಅವರನ್ನು ತಯಾರಿಗೊಳಿಸುವುದಾಗಿ ಹೇಳಿ ಒಲಹೊದರು. ಆ ವಾರಪತ್ರಿಕೆಯ ಪುಟಗಳನ್ನೂ ತಿರುವಿ ಹಾಕುತ್ತಿದ್ದಂತೆ ಅಲ್ಲಿ ಕಂಡ ಶಾಲಭಂಜಿಕೆ ವಿವರಗಳು ನನ್ನೊಳಹೊಕ್ಕು, ಶಾಲಭಂಜಿಕೆ ನನ್ನನ್ನು ಕಾಡಲು ಪ್ರರಮ್ಭಿಸಿದಲು. ಅಷ್ಟು ಸುಂದರ ಮೂರ್ತಿಯನ್ನು ಕೆತ್ತಿದ ಶಿಲ್ಪಿಯ ವಿವರಗಳನ್ನು ಹುದುಕತೊಡಕಿದೆ. ಆಗ ನನಗೆ ದೊರೆತ ವಿಷಯಗಳು ನನ್ನನ್ನು ಶಾಲಭಂಜಿಕೆಯ ಸುತ್ತ ಕತ್ತಿಹಾಕಿದೆವು.


ಹೀಗೆ ಹುಟ್ಟಿದ ನನ್ನ 'ಶಾಲಭಂಜಿಕೆ' ಶ್ರೀ ನಾಗೇಶ್ ಹೆಗಡೆಯವರ ಮನಸ್ಸಿನ ಕಣ್ಣಿಗೂ ಮೆಚ್ಚುಗೆಯಾಗಿ, ಅವರು ನನಗೆ ಕರೆ ಮಾಡಿ 'ಈಗ ನನಗಿರುವ ಚಾಲೆಂಜ್ ಎಂದರೆ ಸುಧಾಗೆ ಈ ಕತೆಗೆ ತಕ್ಕ ಚಿತ್ರಗಳನ್ನು ಬರೆಸುವುದು' ಎಂದಾಗ ನಾನು ಒಪುಳುಕಗೊಂಡಿದ್ದೆ, ಕೊನೆಗೆ ಅವರ ಕಲ್ಪನಾ ಮೂಸೆಯಲ್ಲಿ 'ಸುಧಾ' ಮೂಖಪುತದೊಂದಿಗೆ ಮೂಡಿ ಬಂಡ 'ಶಾಲಭಂಜಿಕೆ' ಮನೆಮಾತಾಗಿಬಿಟ್ಟಳು. ಇಷ್ಟಲ್ಲದೆ, 'ಸುಧಾ' ಮೂಲಕ ಅವರಿತ್ತ ಓತ್ತೆಜನಕ್ಕಾಗಿ ನಾನು ಅವರಿಗೆ ಎಂದು ಋಣಿ.


ಆದರೆ ಇಲ್ಲಿನ ಎಲ್ಲ ಕತೆಗಳೂ ಹೀಗೆ ಅಕಸ್ಮಾತ್ ಘಟನೆಗಳಿಂದ ರೂಪಗೊಂಡಿಲ್ಲ. ಸೋಮನಾಥಪುರದ ವೀನುಗೊಪಾಲನ ಎದೆಯಲ್ಲಡಗಿರುವ ಗೋಮುಖ ನನ್ನನ್ನು ೨೦ ವರ್ಷಗಳಿಂದ ಆವರಿಸಿ 'ಎದೆಯಾಳದಿಂದೆದ್ದ ಗೋವು' ಕತೆಯಾದರೆ, ನಮ್ಮೂರಿನ ಬಳಿಯ ಶಿಲಾವೃತ್ತಗಳು ಮತ್ತು ನಾನು ಮಗುವಾಗಿ ಕಂಡ ತಾಯಿಯೊಬ್ಬಳ ತುಮುಲ 'ಶಿಲಾವ್ಯೂಹ'ವಾಗಿ ಬೆಳೆದವು. ಅಂಡಮಾನಿನಲ್ಲಿ ಕಾರ್ಯನಿರತರಾಗಿದ್ದ ಡಾ. ಬೆಳವಾಡಿ ಅವರೊಂದಿಗೆ ನನ್ನ ಚರ್ಚೆಯ ಫಲ 'ಪರತ್ಯಾಗ'ವಾದರೆ, ಈಜಿಪ್ಟಿನ 'ಪಿರಮಿಡ್ಡಿನ ಗರ್ಭದಲ್ಲಿ' ದೊರೆತ ತಾಳೆಗರಿಗಳನ್ನು ಆಧರಿಸಿ ವೀಣಾ ಕೈಗೊಂಡ ಹಸುಗಳ ಗರ್ಭಧಾರಣೆ ಕುರಿತು ಕುತೂಹಲಕಾರಿ ಸಂಶೋಧನೆ ಆದೇ ಹೆಸರಿನ ಕಥೆಗೆ ಆಧಾರವಾಯಿತು. ಅಮೇರಿಕಾದಿಂದ ಬಂದು, ಬಿಳಿಗಿರಿರಂಗನ ಬೆಟ್ಟದಲ್ಲಿ ಜೀನುನೋನಗಳ ಬಗ್ಗೆ ಪೂಜಾ ಕೈಗೊಂಡ ಸಂಶೋಧನೆಯ ಬಗೆಗಿನ ಕುತೂಹಲ 'ನಂಜಾದ ಮಧು'ವಾದರೆ, ಕೆಂಪೇಗೌಡನ ಸೊಸೆ ಹೀಗೆ ಕೋಟೆಗಾಗಿ ತ್ಯಾಗ ಮಾಡಿರಬಹುದು ಎನ್ನುವುದನ್ನು ನನ್ನ ಮಗಳಿಗೆ ಲಾಜಿಕ್ ಆಗಿ ವಿವರಿಸುವ ಚಾಲೆಂಜ್ ಉತ್ತರವಾಗಿ 'ಇಮ್ಮಡಿ ಗೋಪುರಗಳು' ನಿಂತವು.


ಹೀಗೆ ಈ ಎಲ್ಲ ಕತೆಗಳಿಗೆ ನೈಜ ಘಟನೆಗಳ ಮತ್ತು ವಸ್ತುಗಳ ಸುತ್ತ ಹೆಣೆದ ಕಲ್ಪನೆಗಳಾಗಿದ್ದು, ಅವುಗಳಲ್ಲಿ ಸತ್ಯ ಮತ್ತು ಕಲ್ಪನೆಗಳು ಸ್ವಾಭಾವಿಕವಾಗಿ ಬೇರೆತುಹೂಗಿವೆ. ಹಾಗೆಯೇ ಈ ಕತೆಗಳಿಗೆ ಕಾರಣರಾದ ಎಲ್ಲರನ್ನು ನಾನು ಸಾಧ್ಯವಾದಷ್ಟು  ಆಯಾ ಕತೆಗಳ ಪಾತ್ರದಾರಿಗಳಾಗಿ ತೊರೆಯಲು ಪ್ರಯತ್ನಿಸಿದ್ದೇನೆ ಕೂಡ; ಒಮ್ಮೆಮ್ಮೆ ಬೇರೆಯದೇ ಹೆಸರಿನಲ್ಲಿ ಅಡಗಿಟ್ಟಿಸ್ಸಿದ್ದೇನೆ.