ಪೂರ್ಣ ಹೆಸರು | ಕೋಟಿಗಾನಹಳ್ಳಿ ನಾರಾಯಣಗೌಡ ಗಣೇಶಯ್ಯ (ಡಾ।। ಕೆ. ಎನ್. ಗಣೇಶಯ್ಯ) |
ಹುಟ್ಟಿದ್ದು | ಮೇ ೧೦, ೧೯೫೩ |
ಸ್ಥಳ | ಕೋಟಿಗಾನಹಳ್ಳಿ, ಕೋಲಾರ ಜಿಲ್ಲೆ, ಕರ್ನಾಟಕ ರಾಜ್ಯ |
ವಿಧ್ಯಾಭ್ಯಾಸ | ಬಿ.ಎಸ್ಸಿ(ಕೃಷಿ ವಿಜ್ಞಾನ), ಎಂ.ಎಸ್ಸಿ(ಕೃಷಿ ವಿಜ್ಞಾನ), ಪಿಎಚ್ಡಿ |
ಕೆಲಸ | ಪ್ರಾಧ್ಯಾಪಕರು ಮತ್ತು
ಮುಖ್ಯಸ್ಥ, ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ ಮತ್ತು ಪರಿಸರ ವಿಜ್ಞಾನ ಶಾಲೆ ಮತ್ತು ಸಂರಕ್ಷಣೆ, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಜೀ.ಕೆ.ವಿ.ಕೆ, ಬೆಂಗಳೂರು |
ಕಿರು ಪರಿಚಯ
ಇವರು ಪರಿಸರ ಮತ್ತು ಜೀವವೈವಿಧ್ಯತೆಯ ಅಧ್ಯಯನ ಮತ್ತು ಸಂರಕ್ಷಣೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಹಲವು ವಿಜ್ಞಾನ ಪುಸ್ತಕಗಳನ್ನು ರಚಿಸಿ ಪ್ರಕಟಿಸಿದ್ದಾರೆ. ಇತಿಹಾಸದ ಅಧ್ಯಯನ, ಸಂಶೋಧನೆಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಜಗತ್ತಿನ ವಿಜ್ಞಾನಿಗಳಲ್ಲಿ ಚಿರಪರಿಚಿತರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟೀಯ ಸಂಘ ಸಂಸ್ಥೆಗಳಿಂದ ಪುರಸ್ಕೃತರಾಗಿದ್ದಾರೆ. ಜೀವವೈವಿಧ್ಯದ ಸಂರಕ್ಷಣೆಯ ಸಂಶೋಧನೆಯಲ್ಲಿ ಹಾಗೂ ಭಾರತದ ಜೀವಸಂಪತ್ತಿನ ಮಾಹಿತಿಯನ್ನು ಗಣಕೀಕರಿಸುವ ಪ್ರಮುಖ ಕಾರ್ಯದಲ್ಲಿ ನಿರತರು. ಜೊತೆಗೆ ಪಶ್ಚಿಮ ಮತ್ತು ಪೂರ್ವ ಘಟ್ಟಗಳ ಸಸ್ಯ ಮತ್ತು ಕೀಟ ಸಂಪನ್ಮೂಲದ ನಕ್ಷೆಯನ್ನೂ ತಯಾರಿಸುತ್ತಿದ್ದಾರೆ. ಭಾರತದ ಹಲವಾರು ಸಂಘ-ಸಂಸ್ಥೆಗಳಿಗೆ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತದ ಸಸ್ಯ, ಪ್ರಾಣಿ, ಅಣುಜೀವಿಗಳು, ಸಮುದ್ರದ ಜೀವ ಸಂಪತ್ತು ಇವನ್ನು ಕುರಿತು ಭಾರತ ಸರ್ಕಾರದ ಸಹಯೋಗದೊಂದಿಗೆ ಜೀವಸಂಪದ ಹೆಸರಿನಲ್ಲಿ ಇವರು ರೂಪಿಸಿದ ಸಿ.ಡಿ.ಗಳು ಬಿಡುಗಡೆಯಾಗಿವೆ. ಭಾರತದ ಸಸ್ಯಗಳ ಮೇಲಿನ ಜಾಲತಾಣ ಮತ್ತು ಸಿ.ಡಿ.ಗಳು ಪ್ರಪಂಚದ ವಿಜ್ಞಾನಿಗಳ ಗಮನ ಸೆಳೆದಿವೆ.
ಕಾದಂಬರಿಗಳು
ಪುಸ್ತಕ | ದಿನಾಂಕ |
---|---|
ಕರಿಸಿರಿಯಾನ | ೨೦೦೯ |
ಕಪಿಲಿಪಿಸಾರ | |
ಕನಕಮುಸುಕು | |
ಚಿತಾದಂತ | |
ಏಳು ರೊಟ್ಟಿಗಳು | ೨೦೧೧ |
ಮೂಕ ಧಾತು | ೨೦೧೨ |
ಶಿಲಾಕುಲ ವಲಸೆ | ೨೦೧೪ |
ಕಥಾಸಂಕಲನಗಳು
ಪುಸ್ತಕ | ದಿನಾಂಕ |
---|---|
ಶಾಲಭಂಜಿಕೆ | |
ಪದ್ಮಪಾಣಿ | |
ನೇಹಲ | |
ಸಿಗೀರಿಯ | ೨೦೧೧ |
ಕಲ್ದವಸಿ | ೨೦೧೩ |
ಕೆ.ಎನ್. ಗಣೇಶಯ್ಯ ಅವರ ಊರಿನ ಹೆಸರು ಕೋಟಿಗಾನಹಳ್ಳಿ. ಕೊಟ್ಟಿಗನಹಳ್ಳಿ ಅಲ್ಲ.
ReplyDeleteತುಂಬ ಧನ್ಯವಾದಗಳು ನವೀನ. ಹುಟ್ಟಿದ ಊರನ್ನು ಸರಿಮಾಡಿದ್ದೇವೆ
Deleteಚಿತಾದಂತ ಕಾದಂಬರಿಯಿಂದ ಶುರುವಾದ ಓದು ಶಿಲಾಕುಲ ವಲಸೆವರೆಗೂ ಸಾಗಿತು. ನನ್ನ ಮಟ್ಟಿಗೆ ಒಬ್ಬ ಲೇಖಕನ ಅಷ್ಟೂ ಕೃತಿಗಳನ್ನು ಓದಿ ಮುಗಿಸಿದ್ದು ಗಣೇಶಯ್ಯ ಒಬ್ಬರದ್ದೇ.
ReplyDelete