Saturday, November 16, 2013

ಮೂಕಧಾತು - ಕೆ ಎನ್ ಗಣೇಶಯ್ಯ

Mooka Dhatu  - K. N. Ganeshaiah

 

 

ಮೂಖ ಧಾತು ಗಣೇಶಯ್ಯನವರ ಹೊಸ ಕಾದಂಬರಿ. ಗಣೇಶಯ್ಯನವರು ಚರಿತ್ರೆಯ ಘಟನೆಗಳನ್ನು ಮತ್ತು ತಮ್ಮ ಕಾಲ್ಪನಿಕ ಕಥೆ ಎಣೆಯುವ ಶಕ್ತಿಯನ್ನು ಊಪಯಗಿಸಿ ಕಣ್ಣಿಗೆ ಕಟ್ಟಿದಹಾಗೆ ಕಾದಂಬರಿಗೆ ಜೀವ ತುಂಬುತ್ತಾರೆ. ನಮ್ಮ ಅಂದರೆ ಭಾರತೀಯ ಸಂಸ್ಕೃತಿಯನ್ನು ಎಲ್ಲ ಪುಟಗಳಲ್ಲಿ ಎತ್ತಿ ಹಿಡಿಯತ್ತಾರೆ. ನಾನು ಒದುದಿದ ಬಹುಥೇಕ ಕಾದಂಬರಿಗಳು ಪ್ರಾಚೀನ ಭಾರತದ ಸಂಸ್ಕೃತಿಯನ್ನು ಹೀಗೆಳೆಯುವ ಪ್ರಯತ್ನ ಮಾಡಿದರೆ ಮತ್ತೆ ಕೆಲವರು ಭಾರತವನ್ನು ತೆಗಳಿದರೆ ಮಾತ್ರ ತಮ್ಮ ಕಾದಂಬರಿಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತವೆ ಅನ್ನೋ ರೀತಿಯಲ್ಲಿ ನಮ್ಮೆ ಭಾರತವನ್ನು ಬೆತ್ತಲೆ ಮಾಡಿ ನಿಲ್ಲಿಸುತ್ತಾರೆ. ಆದರ ಗಣೇಶಯ್ಯನವರ ಭಾರತದ ಅಧ್ಯತಿಮಿಕ,  ವೈಜ್ಞಾಯನಿಕ ಮತ್ತು ಸಾಂಸ್ಕ್ರುತಿಕ ಕೊಡಿಗೆಗಳನ್ನು ಎತ್ತಿ ಹಿಡಿಯುತ್ತಾರೆ. ಒಂದು ಕಾದಂಬರಿಯನ್ನು ಬರೆಯುವಾಗ ಅವರು ಮಾಡುವ ಆಳದ ಅಧ್ಯಯನ ಯಾರಿಗಾದರು ಬೆರಗು ಮೂಡಿಸುವಂಥದ್ದು. ಅವರು ಯಾದುದೆ ಮಾತನ್ನು ಗಾಳಿಯಲ್ಲಿ ಎತ್ತಿದ ಊಹ ಪೋಹಗಳಂತೆ ಬರವಣಿಗೆಯಲ್ಲಿ ಬಳಸುವುದಿಲ್ಲ, ಅವರ ಎಲ್ಲ ಮಾತುಗಳಿಗೂ ಪುಷ್ಟಿ ಮತ್ತು ಪುರವಗಳನ್ನು ಕೊದುತ್ತಾರೆ.
 

ಧಾತು(ಡಿಎನ್ಎ) ಎಲ್ಲ ಜೀವಗಳ ಒಂದು ಅತಿ ಮೂಖ್ಯ ಮತ್ತು ಮೂಲಭೂತ ಅಂಶ. ನಮ್ಮ ಬಹುತೆಕ ಕಾರ್ಯಗಳು, ಗುಣಗಳು, ಮತ್ತು ಚಟುವಟಿಕೆಗಳು ಈ ಧಾತುವಿನ ಮೇಲೆ ಅವಲಂಬಿಸಿರುತ್ತದೆ. ನಮ್ಮು ಅಸೆ, ಪ್ರೀತಿ, ಸ್ವಾರ್ಥ, ... ಇತರೆ ಗುಣಗಳು ನಮ್ಮ ಈ ಧತುವಿನಲ್ಲಿ ಇರುತ್ತದೆ ಎಂದು ವಿಜ್ಞಾಯನಿಗಳು ಸಂಶೋಡಿಸಿ ದೃಡಪಡಿಸಿರುತ್ತಾರೆ. ಈ ಕಾದಂಬರಿಯಲ್ಲಿ ಆ ಧಾತುವಿನ ಎಳೆಯನ್ನು ಇಟ್ಟಿಕೊಂಡು ಎಣೆದಿರುರುವ ಒಂದು ಒಳ್ಳೆಯ ಕಾದಂಬರಿ. ಇಲ್ಲಿ ಕ್ರಿ.ಶ. ೧೧೫ ರಲ್ಲಿ ಭಾರತದಲ್ಲಿ ಆಗುತ್ತಿದ್ದ ಬೌದ್ಧ ಧರ್ಮದ ಜನಪ್ರಿಯತೆ ಮತ್ತು ಅವರ ಸಂಶೋದನೆ ಇಂದ ಹಿಡಿದು ಈಗಿನ ೨೦೧೨ ರ ವರಗೆ ಕಥೆಯನ್ನು ಎಣೆದ್ದಿದ್ದಾರೆ. ನಮ್ಮ ಸ್ವರ್ಹ್ತ ಧಾತುವನ್ನು ನಿಷ್ಕ್ರಿಯಗೊಳಿಸಲು ನಗರ್ಜುನರು ಕಂಡು ಹಿಡಿದ್ದಿದ್ದ ಪುಡಿ ಮತ್ತು ಬೂದಿಗಳ ತಯಾರಿಕೆಯ ಪುಸ್ತಕಗಳು ರಾಜರಿದ ರಾಜರಿಗೆ ವರ್ಗವನಣೆಯಾಗಿ ಕೊನೆಗೆ ಚೀನಾ ದೇಶ ಸೇರುತ್ತದೆ. ಇದರ ರಹಸ್ಯ ತಿಳಿದ ಚೀನಾದವರು ಅದನ್ನು ಭೂಮಂಡಲಕ್ಕೆ ಹವಯಲ್ಲಿ ವೈರಸ್ ರೀತಿ ಹರಡಿ ಎಲ್ಲರ ಅದಿಪತಿಯಾಗಿ ಮೆರೆಯಬೇಕು ಎಂದು ವಿಜ್ಞಯನಿಗಳನ್ನು ಬಂದಿಸಿ ಅವರಿಂದ ಅದಕ್ಕೆ ಬೇಕಾಗುವ ಕಾರ್ಯಗಳನ್ನು ಮಾಡಿಸುತ್ತಾರೆ. ಅದು ಹೇಗೆ ಅಂತ್ಯವಾಗುತ್ತದೆ ಮತ್ತು ಅದರ ಇಂದೇ ಯಾರು ಯಾರು ಕೆಲಸ ಮಾದಿತ್ತಾರೆ ಎನ್ನುವುದನ್ನು ಕಾದಂಬರಿ ಓದಿ ತಿಳಿಯಬೇಕು.

ಹಿನ್ನುಡಿ ಇಂದ :

ಈ ಕಾದಂಬರಿಯಲ್ಲಿ ಮೂರು ವಿಷಯಗಳನ್ನು ನಾನು ಮುಖಾಮುಖಿಯಾಗಿ ತರಲು ಪ್ರಯತ್ನಿಸಿರುವುದನ್ನು ಓದುಗರು ಗಮನಿಸಿರುತ್ತಾರೆ. ಆದರೂ, ಅವನ್ನು ನಾನು ಮತ್ತೆ ಚರ್ಚೆಗೆ ತರಲು ಬಯಸುತ್ತೇನೆ.

೧. ದೇವರು, ಧರ್ಮ ಮತ್ತು ವಿಜ್ಞಾನ

ಧರ್ಮ ಮತ್ತು ವಿಜ್ಞಾನಗಳ ನಡುವೆ ಇರಬಹುದಾದ ಸಾಮರಸ್ಯ ಮತ್ತು ವೈರುಧ್ಯ ಹಲವು ರೀತಿಯ ಜಿಜ್ಞಾಸೆಗಳಿಗೆ ಕಾರಣವಾಗಿದ್ದು ಅದು ಎಂದಿಗೂ ಬಗೆಹರಿಯದ ಕಗ್ಗಂಟಾಗಿಯೆ ಉಳಿದಿದೆ-ಉಳಿಯುತ್ತದೆ. ಧರ್ಮ ಮತ್ತು ವಿಜ್ಞಾನಗಳೆ ರಡೂ ಸಹ ಸತ್ಯಾನ್ವೇಷಣೆಯ ವಿಭಿನ್ನ ದಾರಿಗಳಷ್ಟೆ ಎಂಬ ವಾದವು ಅವೆರಡರ ಸಾಮರಸ್ಯತೆಯನ್ನು ಸಮರ್ಥಿಸಿಕೊಂಡರೆ, ಆ ಸತ್ಯವನ್ನು ಹುಡುಕಲು ಅವು ಅನುಸರಿಸುವ ವಿಭಿನ್ನವಾದ ವಿಧಾನಗಳು ಅವುಗಳ ಮಧ್ಯದ ವೈರುಧ್ಯವನ್ನು ದೃಷ್ಟೀಕರಿಸುತ್ತವೆ. ಆದರೆ ಧರ್ಮವು ಆಧ್ಯಾತ್ಮಿಕ ರೂಪದಲ್ಲಿ ವಿಜ್ಞಾನದ ಎದುರು ನಿಂತಾಗ ಇಂತಹ ಹಲವು ವೈರುಧ್ಯಗಳು ಮಾಯವಾಗುತ್ತವೆ. ಅಷ್ಟೆ ಅಲ್ಲ, ಕೆಲವೊಮ್ಮೆಯಂತೂ ವಿಜ್ಞಾನ ಮತ್ತು ಆಧ್ಯಾತ್ಮಗಳ ನಡುವಿನ ಅಂತರವೂ ಸಹ ಕಡಿಮೆಯಾಗುತ್ತದೆ. ಉದಾಹರಣೆಗೆ,
ಕೆಲವು ವೇದ-ಉಪನಿಷತ್ತುಗಳಲ್ಲಿ ಕಂಡುಬರುವ ಪ್ರಕೃತಿಯ ವಿಸ್ಮಯದ ಹುಡುಕಾಟವು, ನಮ್ಮ ಅಸ್ತಿತ್ವದ ಅರ್ಥ ಅಥವ ಅದರ ಉದ್ದೇಶಕ್ಕಾಗಿ, ವಿಜ್ಞಾನಿಗಳು ತೊಡಗಿಕೊಳ್ಳುವ ಹುಡುಕಾಟದಿಂದ ಯಾವುದೇ ರೀತಿಯಲ್ಲಿ ಭಿನ್ನವೆನಿಸದು. ಇನ್ನು ವೃಕ್ಷಾಯುರ್ವೇದಗಳು, ಬೌದ್ಧ ಧರ್ಮದ ಆಧ್ಯಾತ್ಮಿಕತೆಯೊಂದಿಗೆ ಗುರುತಿಸಿಕೊಳ್ಳುವ ಯೋಗ, ಧ್ಯಾನಗಳಂತೂ ಆಯಾ ಕಾಲ ಘಟ್ಟಗಳ ವಿಜ್ಞಾನ ಭಂಡಾರಗಳೆಂದೆ ಪರಿಗಣಿಸಬಹುದು.

ಹೀಗಿದ್ದೂ, ವಿಜ್ಞಾನ ಮತ್ತು ಧರ್ಮಗಳು ಹಲವು ವಿಷಯಗಳಲ್ಲಿ ತದ್ವಿರುದ್ದ ದೃಷ್ಟಿಯನ್ನು ಹೊಂದಿರುವುದು ಎಲ್ಲರಿಗೂ ವಿದಿತ. ಅಂತಹ ಒಂದು ಅತೀ ಪರಿಚಿತ ವಸ್ತುವೆಂದರೆ- ದೇವರು!
ದೇವರು ಕೇವಲ ನಂಬಿಕೆಯೆ?
ಅಥವಾ..
ದೇವರು ನಾವರಿಯದ ಸತ್ಯದ ಪರಿಕಲ್ಪನೆಯೆ?
ಅಥವಾ...
ವಿಜ್ಞಾನದ ಭಾಷೆಯ ಕ್ಲಿಷ್ಟತೆಗೆ ಸಿಕ್ಕಿಹಾಕಿಕೊಂಡಿರುವ ನಮ್ಮ ನಾಗರೀಕತೆಯು,  ದೇವರ ಮೂಲ ಅರ್ಥವನ್ನು ನಿರೂಪಿಸಲಾಗದೆ ತೊಳಲಾಡುತ್ತಿದೆಯೆ? ಧರ್ಮಗಳು ಉಪಯೋಗಿಸುವ ದೇವರ ಬಗೆಗಿನ ವ್ಯಾಖ್ಯಾನವನ್ನು ವೈಜ್ಞಾನಿಕವಾಗಿಯೂ ವಿಶ್ಲೇಷಿಸ ಬಹುದೆ? ಅಂತಹ ಪ್ರಯತ್ನ ಮಾಡುವುದರಿಂದ ವಿಜ್ಞಾನದ ವಾಸ್ತವಿಕತೆಗೆ ಕುತ್ತು ಬರುವ ಸಂಭವವಿದೆಯೆ? ಇಂತಹ ಪ್ರಶ್ನೆಗಳ ಹಿನ್ನೆಲೆಯಲ್ಲಿ ನಾನು ಡಾ| ಜೋಶಿಯ ವ್ಯಕ್ತಿತ್ವವನ್ನು ನಿರೂಪಿಸಿ ದ್ದೇನೆ.

೨. ಆಸೆ ಮತ್ತು ನಾಗರೀಕತೆ

ಆಸೆಯೆ ದುಃಖಕ್ಕೆ ಮೂಲ, ಆಸೆಯನ್ನು ತೊರೆದಾಗಲೆ ಮಾನವನಿಗೆ ಸುಖ, ಎಂದು ಬೌದ್ಧಧರ್ಮಾದಿಯಾಗಿ ಎಷ್ಟೋ ಧರ್ಮ-ಬೋಧನೆಗಳು ಸಾರಿವೆ, ಸಾರುತ್ತಿವೆ.  ಪ್ರಪಂಚದಾದ್ಯಂತ ಈ ನಂಬಿಕೆಯನ್ನು ಒಂದು ಪ್ರಮುಖವಾದ ಆದರ್ಶವೆಂದೂ ಪರಿಗಣಿಸಲಾಗಿದೆ. ಆಸೆಗಳು ಮಾನವನನ್ನು ಲೋಲುಪ್ತತೆಗೆ ನೂಕಿ, ಆತ ಪ್ರಕೃತಿಯ ಸಂಪತ್ತನ್ನು ಹಿಂಡಿ ಹೀರುವಂತೆ ಮಾಡಿ, ಇಡೀ ನಾಗರೀಕತೆಯನ್ನು ಮತ್ತು ಪ್ರಪಂಚವನ್ನು ವಿನಾಶದತ್ತ ಕರೆದೊಯ್ಯುತ್ತವೆ ಎನ್ನುವುದು ಈ ವಾದದ ಒಂದು ಪ್ರಮುಖ ಆಯಾಮ. ಪ್ರಸ್ತುತದಲ್ಲಿ ಪ್ರಪಂಚದ ಹಲವು ವಿದ್ಯಮಾನಗಳು ಇದಕ್ಕೆ ಪುರಾವೆ ಒದಗಿಸುತ್ತಿರು ವಂತೆಯೂ ಕಾಣುತ್ತಿದೆ.

ಆದರೆ ಆಸೆಗಳೆ ಮಾನವನ ಸೃಜನಾತ್ಮಕತೆಗೆ ಅಧಾರವಲ್ಲವೆ? ಮಾನವನಲ್ಲಿ ಆಸೆಗಳೆ ಇಲ್ಲದಿದ್ದಲ್ಲಿ ನಮ್ಮ ನಾಗರೀಕತೆಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವೆ? ವಿಕಾಸವಾದದ ಹಿನ್ನೆಲೆಯಿಂದ ನೋಡಿದಾಗ, ಯಾವುದೇ ಗುಣ ಆಯಾ ಪ್ರಬೇಧದ ಉನ್ನತಿಗೆ ಉಪಯೋಗವಾಗದಿದ್ದಲ್ಲಿ, ಅದು ವಿಕಾಸಗೊಳ್ಳದು. ಹಾಗಿರುವಾಗ, ಮಾನವ ನಲ್ಲಿ ವಿಶೇಷವಾಗಿ ವಿಕಾಸಗೊಂಡಿರುವ ಈ ಆಸೆಗಳಿಂದ ಮಾನವ ಸಮೂಹಕ್ಕೆ, ಸಮಾಜಕ್ಕೆ ಪ್ರಯೋಜನವಿದೆಯೆಂದು ಭಾವಿಸಬಹುದೆ? ಬಹುಶಃ ಇದರಿಂದಲೆ ಆಸೆ ರಹಿತ ಮಾನವರು (ನಿಸ್ವಾರ್ಥಿಗಳು) ಅಥವ ಮಿತ-ಆಸೆಗಳುಳ್ಳವರು ವಿರಳವಿರಬಹುದೆ? ಇಂತಹ ಪ್ರಶ್ನೆಗಳು ಆಸೆಗಳ ಬಗೆಗಿರುವ ಧಾರ್ಮಿಕ ವಾದಕ್ಕೆ ಪ್ರತಿರೋಧವನ್ನು ಒಡ್ಡುವುದು ಸಹಜ.

ಈ ದ್ವಂದಕ್ಕೆ ಉತ್ತರ ಹುಡುಕುವಲ್ಲಿ 'ಆಸೆ'ಗಳ ವ್ಯಾಖ್ಯಾನ ಅತಿ?ಮುಖ್ಯ, ಆದರೆ ಅದು ಬಹುಶಃ ಅಸಾಧ್ಯ. ನಮಗಿರುವ ಹಲವು ರೀತಿಯ ಸ್ವಾಭಾವಿಕ ಬಯಕೆಗಳಾದ - ಹಸಿವು, ದಾಹ, ಕಾಮ, ನಿದ್ದೆ, ಇಂತಹವು ನಮ್ಮ ಉಳಿವಿಗೆ, ಪುನರಾಭಿವೃದ್ದಿಗೆ ಪೂರಕವಾಗಿ ವಿಕಾಸಗೊಂಡಿರುವ ಅವಶ್ಯಕತೆಗಳು. ಆದರೆ, ಅವಕ್ಕೂ ಮಿಗಿಲಾಗಿ ಮಾನವಲ್ಲಿ ಉದ್ಭವಿಸುವ ಬಯಕೆಗಳು ಅಥವ ಆಸೆಗಳು, ಬಹುಪಾಲು ನಮ್ಮ ಚಿಂತನಾ ಶಕ್ತಿಯ ವಿಕಾಸದೊಂದಿಗೆ ಬೆಳೆದಿರುವ ಮನಸ್ಸಿನ ಲಹರಿಗಳು. ಹಾಗಾಗಿ ಮನಸ್ಸನ್ನು ಅಂತಹ ಆಸೆಗಳಿಂದ ಮುಕ್ತಗೊಳಿಸಬೇಕೆಂದರೆ ಆತನ ಯೋಚನಾಶೀಲತೆಯನ್ನೆ ಜಡವಾಗಿಸಬೇಕಾಗಬಹುದು. ಮಾನವ ಹಾಗೆ ಯೋಚನಾರಹಿತನಾದಲ್ಲಿ ಅವನ ಆವಿಷ್ಕಾರ ಶಕ್ತಿ ಕುಂದಿ, ನಾಗರೀಕತೆಗೆ ಆಪತ್ತು ಬರುವ ಸಾಧ್ಯತೆ ಇದೆ ಎನ್ನುವ ಅಂಶ ಧರ್ಮ ಬೋಧನೆಗಳನ್ನು ಕಣ್ಣುಮುಚ್ಚಿ ಸ್ವೀಕರಿಸಿರುವ ಸಮಾಜಕ್ಕೆ ಎಚ್ಚರಿಕೆಯನ್ನು ನೀಡುತ್ತದೆ. ಹಾಗಾಗಿ ವಿಜ್ಞಾನ, ಆಧ್ಯಾತ್ಮಿಕತೆ ಮತ್ತು ಧರ್ಮಗಳು ಈ ವಿಷಯವನ್ನು ಅತಿ ಸೂಕ್ಷ್ಮವಾಗಿ ಚರ್ಚಿಸಬೇಕಿದೆ.

೩. ಸ್ವಾರ್ಥ ಮತ್ತು ಜೀವ

ಸ್ವಾರ್ಥವನ್ನು ತುಚ್ಛವಾಗಿ ಕಾಣುವ ನಮ್ಮ ಸಂಸ್ಕೃತಿ ಅಚ್ಚರಿಪಡಬೇಕಾದ ವಿಷಯ ವೆಂದರೆ ಆ ಸ್ವಾರ್ಥವು ಎಲ್ಲ ಜೀವಿಗಳ ವಿಕಾಸಕ್ಕೆ ಇಂಧನವಾಗಿರುವುದಷ್ಟೆ ಅಲ್ಲದೆ, ವಿಕಾಸದ ಹಾದಿಯಲ್ಲಿ ಮಾನವ ಕಾಣಿಸಿಕೊಳ್ಳುವ ಗತಿಯನ್ನು ನಿರ್ಣಯಿಸುವ ಅಗೋಚರ ಶಕ್ತಿಯಾಗಿದೆ ಕೂಡ. ಆ ಸ್ವಾರ್ಥವಿಲ್ಲದಿದ್ದಲ್ಲಿ ನಾವು ನಮ್ಮ ಮಕ್ಕಳನ್ನು ಸಾಕಿ ಸಲಹುತ್ತಿರಲಿಲ್ಲ; ಅವರನ್ನು ಬೆಳೆಸಿ ಕಾಪಾಡುತ್ತಿರಲಿಲ್ಲ. ಅದು ನಮ್ಮೆಲ್ಲರ ಹುಟ್ಟಿಗೆ, ಉಳಿವಿಗೆ, ವಿಕಾಸಕ್ಕೆ, ಆಧಾರ. ಹೀಗಿರುವಾಗ ಆ ಸ್ವಾರ್ಥಕ್ಕೆ ಕಡಿವಾಣ ಹಾಕುವುದೆಂದರೆ? ಇದು ಪ್ರಕೃತಿ ನಿಯಮಕ್ಕೆ ವಿರೋಧ ಮಾಡಿದಂತೆ.

ಆದರೆ..ಮಾನವ ಜೀವವಿಕಾಸದ ಹೊರತಾಗಿ ನಾಗರೀಕತೆಯನ್ನು ನಿರ್ಮಿಸಿದ್ದಾನೆ, ಸಂಸ್ಕೃತಿಯನ್ನು ಬೆಳೆಸಿ ರೂಢಿಸಿಕೊಂಡಿದ್ದಾನೆ. ಅವನಲ್ಲಿ ಸಂಸ್ಕೃತಿಯ ವಿಕಾಸ, ಜೀವವಿಕಾಸಕ್ಕಿಂತ ವೇಗವಾಗಿ ನಡೆಯುತ್ತಿದೆ. ಈ ವಿಕಾಸದಲ್ಲಿ ಸ್ವಾರ್ಥಕ್ಕೆ ಜಾಗವಿಲ್ಲ, ಅದರ ಅವಶ್ಯಕತೆಯಿಲ್ಲ ಎಂದು ಕೆಲವರು ವಾದಿಸಬಹುದು. ಆದರೆ..

ಸಕಲ ಜೀವಿಗಳ ಪುನರಾಭಿವೃದ್ಧಿಗೆ ಮೂಲಾಧಾರವಾದ ಈ ಸ್ವಾರ್ಥವನ್ನು ನಿಗ್ರಹಿಸುವುದೆಂದರೆ, ಅದು ಜೀವವನ್ನೇ ಬೆಳೆಯದ ಹಾಗೆ ಮಾಡಿದಂತೆ. ವಿಕಾಸದ ಕತ್ತು ಹಿಸುಕಿದಂತೆ. ಹಾಗಾಗಿ ಸ್ವಾರ್ಥವನ್ನು ನಿಗ್ರಹಿಸುವುದೆಂದರೆ ಈ ಭೂಮಿಯ ಮೇಲೆ ಮಾನವನನ್ನೂ ಮೀರಿದ ಜೀವಪ್ರಭೆಯೊಂದು ವಿಕಾಸಗೊಳ್ಳುವುದನ್ನು ತಡೆದಂತೆ. ಆ ಹಕ್ಕು ನಮಗಿದೆಯೆ? ನಾವು ಅಂತಹ ವಿಕಾಸವಿರೋಧಿ ಕ್ರಮಗಳನ್ನು ಪ್ರೇರೇಪಿಸ ಬಹುದೆ? ಅದು ಪ್ರಕೃತಿವಿರೋಧವಲ್ಲವೆ?

ಇವೆಲ್ಲವೂ ಈ ಕಾದಂಬರಿಯ ರಚನೆಯ ಸಮಯದಲ್ಲಿ ನನ್ನಲ್ಲಿ ಮೂಡಿದ ಪ್ರಶ್ನೆಗಳು, ದ್ವಂದ್ವಗಳು. ಹಾಗಾಗಿ ಈ ಮೂರೂ ವಿಷಯಗಳನ್ನು ಸಾಧ್ಯವಾದಷ್ಟೂ ಮುಖಾಮುಖಿಯಾಗಿ ತರಲು ಪ್ರಯತ್ನಿಸಿದ್ದೇನೆ. ಇದೇ ಕಾರಣದಿಂದ ಇಲ್ಲಿ ಕತೆ ನಿಮಿತ್ತ ಮತ್ತು ಈ ವಿಷಯಗಳ ಮುಖಾಮುಖಿ ಚರ್ಚೆ ಈ ಕಾದಂಬರಿಯ ಮೂಲ ಉದ್ದೇಶ. ಆ ವಿಷಯಗಳೆ ಈ ಕಾದಂಬರಿಯ ಮನೆಯೊಳಗಿನ ಕುಟುಂಬದ ಜೀವಂತ ವ್ಯಕ್ತಿಗಳು. ಕತೆ ಕೇವಲ ಇಟ್ಟಿಗೆ, ಗೋಡೆ, ಸುಣ್ಣ.

ಈ ಮೂರೂ ವಿಷಯಗಳ ಇನ್ನೂ ಹಲವಾರು ಆಯಾಮಗಳನ್ನು ನಾನು ಕಾದಂಬರಿಯಲ್ಲಿ ಚರ್ಚಿಸುವ ಇಚ್ಛೆ ಇತ್ತಾದರೂ, ಅಂತಹ ಎಲ್ಲ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗದ ಕಾರಣ ಕೆಲವು ಕೋನಗಳ ಮಂಥನವನ್ನು ಓದುಗರಿಗೆ ಬಿಟ್ಟಿದ್ದೇನೆ. ಇದನ್ನು ಓದುಗರು ಗಮನಿಸುವರೆಂದು ಆಶಿಸುತ್ತೇನೆ.

 





1 comments:

  1. Excellent story plotting, realistic scenarios, backed by sound scientific facts

    ReplyDelete