Friday, October 19, 2012

ರುದ್ರಪ್ರಯಾಗದ ಭಯಾನಕ ನರಬಕ್ಷಕ - ಪೂರ್ಣಚಂದ್ರ ತೇಜಸ್ವಿ

Rudraprayagada Bhayanaka Narabhakshaka - Poornachandra Tejasvi



 

ಪುಸ್ತಕದ ಮುನ್ನುಡಿಯಿಂದ 

ಜಿಮ್ ಕಾರ್ಬೆಟ್  ರವರ ಸಾಹಸ ಸತ್ಯಕಥೆ "ರುದ್ರಪ್ರಯಾಗದ ನರಭಕ್ಷಕ" ಅದರ ವಸ್ತುವಿನಿಂದ ಮಾತ್ರವಲ್ಲದೆ ಗದ್ಯಶ್ಯಲಿಯಿಂದಲೂ ಇಂಗ್ಲಿಷ್ ಸಾಹಿತ್ಯದಲ್ಲಿ ಪ್ರಖ್ಯಾತ ಕೃತಿಯಾಗಿದೆ. ಜಿಮ್ ಕಾರ್ಬೆಟ್  ರವರಿಗೆ ಸಾಹಿತ್ಯದಲ್ಲಿ ಚಿರಸ್ಥಾಯಿಯಾದ ಸ್ಥಾನ ದೊರಕಲು ಈ ಕೃತಿಯೂ ಒಂದು ಮೂಖ್ಯ ಕಾರಣವೆಂದೇ ಹೇಳಬಹುದು. ಎಂಟು ವರ್ಷಗಳ ಪರ್ಯಂತ ರುದ್ರಪ್ರಯಾಗದ ಆಜುಬಾಜಿನ ಐನೂರು ಚದರಮ್ಯಲಿ ಪ್ರದೇಶದಲ್ಲಿ ನಿರಂತರವಾಗಿ ನೂರಾರು ಕಗ್ಗೊಲೆಗಳನ್ನು ಮಾಡಿದ ಈ ಚಿರತೆಯಾ ಕುಯುಕ್ತಿ, ಚಾಣಾಕ್ಷತೆ, ಮನುಷ್ಯರ ನಡವಳಿಕೆ ತಿಳುವಳಿಕೆಗಳು ಅದನ್ನು ಈ ಕತೆಯ ಅಸಾಮಾನ್ಯ ಖಳನಾಯಕನನ್ನಾಗಿ ರೂಪಿಸಿದೆ.


ಸರ್ಕಾರದಿಂದ ಹಿಡಿದು ಸಾರ್ವಜನಿಕನಿಕರವರಿಗೆ ಎಲ್ಲರೂ ಇದು ಪ್ರಾನಿಯಲ್ಲವೆಂದೂ, ಯಾವುದೊ ಕ್ರೂರ ಪಿಶಾಚಿಯೇ ಪ್ರಾಣಿರೂಪ ಧರಿಸಿದೆ ಎಂದು ಯೋಚಿಸಿ ದಿಗ್ಬ್ರಾಂತರಾಗಿ ಕೈಕಟ್ಟಿ ಕುಳಿತರೆಂದರೆ ಈ ನರಬಕ್ಷಕ ಎಂಥ ಭೀಕರ ಕೊಲೆಪಾತಕಿಯಾಗಿರಬಹುದು ಯೋಚಿಸಿ! ಅಂಥ ಸನ್ನಿವೇಶದಲ್ಲೂ ಎಂದೆಗೆಡದೆ ಎಲ್ಲರಿಗೂ ಧೈರ್ಯ ಹೇಳುತ್ತಾ ಅಕ್ಷರಸಹ ಪ್ರಾಣದ ಹಂಗು ತೊರೆದು ಈ ನರಭಕ್ಷಕಕೊಲೆಗಳ ಸರಣಿಯನ್ನು ತಡೆಯಲು ಹೋರಾಡಿದ ಜಿಮ್ ಕಾರ್ಬೆಟ್  ಭಾರತ ರೂಪಿಸಿದ ಸರಳ, ಧೀರ, ಅಸಾಧಾರಣ ವ್ಯಕ್ತಿ. ಈತನ ಮುಗ್ದ ಪ್ರಾಮಾಣಿಕತೆ, ಅಲ್ಲಿನ ಜನಗಳಿಗೂ ಈತನಿಗೆ ಇದ್ದ ಪರಸ್ಪರ ಪ್ರೀತಿ ಗೌರವಗಳು ಈ ಪುಸ್ತಕಾದಾದ್ಯಂತ ಎಷ್ಟು ಚೆನ್ನಾಗಿ ಪ್ರತಿಬಿಂಬಿತವಾಗಿದೆ ಎಂದರೆ ಈ ಕೃತಿ ಸಾಹಸ ಕಥೆಗಿಂತಲೂ ಮಿಗಿಲಾಗಿ ನಮಗೆ ಘಾವಾ೯ಲಿನ ಜನರ ಸಾಮಾಜಿಕ ಕಾದಂಬರಿಯಂತೆ ಕಾಣುತ್ತದೆ. ನಾಳೆ ಬೆಳಗಾದರೆ ನಮ್ಮಲ್ಲಿ ಯಾರು ಇರುತ್ತೇವೋ! ಯಾರು ಇರುವುದಿಲ್ಲವೋ! ಎನ್ನುವಂಥ ಸಂದರ್ಭದಲ್ಲೂ ಜಿಮ್ ಕಾರ್ಬೆಟ್  ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವನದ ಹಂಗು ತೊರೆದು ಕಾರ್ಬೆಟ್ ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘಾವಾ೯ಲಿನ ಮುಗ್ದ ರೈತರು ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ.


ರುದ್ರಪ್ರಯಾಗದ ನರಬಕ್ಷಕ ಮೈ ನವಿರೇಳಿಸುವಂಥ ಸತ್ಯಕಥೆಯಾಗಿರುವಂಥೆಯೇ ಅದ್ಭುತ ಕಲಾಕೃತಿಯೂ ಆಗಿದೆ.


Tuesday, October 16, 2012

ಪಾಕ ಕ್ರಾಂತಿ ಮತ್ತು ಇತರ ಕಥೆಗಳು - ಪೂರ್ಣಚಂದ್ರ ತೇಜಸ್ವಿ

Paaka Kranti Mattu Itare Kathegalu - Poornachandra Tejasvi




"ಪಾಕ ಕ್ರಾಂತಿ ಮತ್ತು ಇತರೆ ಕತೆಗಳು" ತೇಜಸ್ವಿಯವರ ಕಥಾಸಂಕಲನ. ಇದ್ದರಲ್ಲಿ ಬರೆದಿರುವ ಲೇಖನಗಳು ಕತೆ ಎನ್ನುವುದಕ್ಕಿಂತ ಜೀವನದಲ್ಲಿ ನಡೆದ ಘಟನೆಗಳು ಎನ್ನಬಹುದು. ಇದು ಎಲ್ಲರ ಜೀವನದಲ್ಲಿ ಒಂದು ಬಾರಿ ನಡೆಯೋ ಘಟನೆಗಳು.

೧. ಪಾಕಕ್ರಾಂತಿ
೨. ಕಳ್ಳನ ಕತೆ
೩. ಸುವರ್ಣ ಸ್ವಪ್ನ
೪. ಪಿಶಾಚಿಗಳು
೫. ನಗು
೬. ಮಳೆಗಾಲದ ಚಿತ್ರ
೭. ಸಂತೆ
೮. ಮೃತ್ಯೋರ್ಮಾ


ಹೆಂಡತಿ ಮನೆಯಲ್ಲಿ ಇಲ್ಲ ಅಂದ್ರೆ ಆಗುವ ಅವಾಂತರಗಳು, ಊಟಕ್ಕೆ ಆಗುವ ಕಷ್ಟಗಳು, ಅಡುಗೆ ಮಾಡಲು ಹೋಗಿ ಏನನ್ನನ್ನೋ ಮಾಡಿ ಗೊಣಗುವುದು. ಇದು ಮಾಡುವೆ ಆದ ಎಲ್ಲರಿಗು ಒಂದಲ್ಲ ಒಂದು ದಿನ ಆಗುವ ಘಟನೆ. ಎಲ್ಲ ಗಂಡಸರು ಹೆಂಡತಿ ಮಾಡುವ ಅಡುಗೆ ಬಹಳ ಸುಲಬ ಕಾರ್ಯ ಮತ್ತು ಅದು ತಾನು ಮಾಡಬಲ್ಲ ಎಂದು ಅದ್ದುಕೊಂದಿರುತ್ತಾನೆ, ಅದು ಸುಳ್ಳೆಂದು ಗೊತ್ತಾಗುವುದು ಹೆಂಡತಿ ಒಂದು ವಾರ ಊರಲ್ಲಿ ಇಲ್ಲದಿರುವಾಗ.


ಇದೆ ರೀತಿ ಕ್ಲಾಸ್ಸಲ್ಲಿ ನಕ್ಕು ಮೇಡಂಕೈಯಲ್ಲಿ ಬೈಸಿಕೊಂಡಿದ್ದು , ಸಂತೆಯನ್ನು ನೋಡಿ ಆಶ್ಚರ್ಯದಿಂದ ನೋಡಿದ್ದು, ಮನೆಯಲ್ಲಿ ದೊಡ್ಡವರು ಸತ್ತಾಗ ಮಕ್ಕಳಿಗೆ ಅವರ ದೇವರ ಹತ್ತಿರ ಹೋಗಿದ್ದರೆಂದು ಹೇಳುವುದು ಯಾರ ಜೀವನದಲ್ಲಿ ಬೇಕಾದರೂ ಆಗಬಹುದು. ಆದ್ದರಿಂದಲೇ ನಾನು ಇದು ಕಥೆಗಳು ಅನ್ನುವುದುಕಿಂತ ಜೀವನದ ಘಟನೆಗಳು ಅನ್ನುವುದು.


Tuesday, October 9, 2012

ಕರ್ವಾಲೊ - ಪೂರ್ಣಚಂದ್ರ ತೇಜಸ್ವಿ

Karvalo -  Poornachandra Tejasvi

 

 

"ಕರ್ವಾಲೊ" ಕಾದಂಬರಿ, ಪೂರ್ಣಚಂದ್ರ ತೇಜಸ್ವಿ ಯಾಕೆ ಕನ್ನಡದ ಒಬ್ಬ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರು ಎಂಬುದನ್ನು ತಿಳಿಸುತ್ತದ್ದೆ. ಕರ್ವಾಲೊ ಕಥೆ ಕಗ್ಗಾಡಿನ ಹಳ್ಳಿಯ ಕೊಂಪೆಯೊಂದರಲ್ಲಿ ನಡೆಯುವ ಘಟನೆ. ಹಳ್ಳಿಯ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೊ ಕಾಲವಿಜ್ಞಾನಿಯಾಗಿ ರೂಪುಒಳ್ಳುವ ಅಚ್ಚರಿಯ ಕಥೆ. ಧರ್ಮ, ಧ್ಯಾನ, ತಪಸ್ಯಗಳಂತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡ ಎಲ್ಲ ಕಾದಂಬರಿಗಳಿಗಿಂತ ಸಂಪೂರ್ಣ ಬಿನ್ನವಾದ ಕೃತಿ. ತೆಜ್ವಸ್ವಿ ವಿವರಿಸುವ ಪರಿಸರ, ಗುಡ್ಡ ಗಾಡು ಪ್ರದೇಶದ ಜೀವನ, ಅಲ್ಲಿನ ಜನಗಳ ತೊಂದರೆಗಳು, ಪಡುವ ಕಷ್ಟಗಳನ್ನು ಕಣ್ಣಿಂದ ನೋಡಿದ ರೀತಿಯಲ್ಲಿ ವಿವರಿಸುತ್ತಾರೆ. ಕರ್ವಾಲೊ ಕಾಡಿನಲ್ಲಿ ನಡೆಯುವ ಒಂದು ಸಂಶೋದನೆ ಕೃತಿ.

ಈ ಕಾದಂಬರಿ ನೀವು ಯಾಕೆ ಓದಬೇಕು ಎಂಬುದಕ್ಕೆ ಸಾಕ್ಷಿ ಈ ಕಾದಂಬರಿ ಇಂಗ್ಲಿಷ್, ಹಿಂದಿ, ಮರಾಠಿ, ಮಲಯಾಳಂ ಮತ್ತು ಜಪಾನೀ ಭಾಷೆಗಳಲ್ಲಿ ಪ್ರಕಟವಾಗಿದೆ



Wednesday, October 3, 2012

ಕಿರಗೂರಿನ ಗಯ್ಯಾಳಿಗಳು - ಪೂರ್ಣಚಂದ್ರ ತೇಜಸ್ವಿ

Kiragoorina Gayyaligalu - Poornachandra Thejasvi



ಕಿರಗೂರಿನ ಗಯ್ಯಾಳಿಗಳು ಪೂರ್ಣಚಂದ್ರ ತೇಜಸ್ವಿಯವರ ಕಥಾ ಸಂಕಲನ. ಇದರಲ್ಲಿ ಇರುವ ಕಥೆಗಳು


೧. ಕಿರಗೂರಿನ ಗಯ್ಯಾಳಿಗಳು
೨. ಕೃಷ್ಣೇಗೌಡನ ಆನೆ
೩. ಮಾಯಾ ಮೃಗ
೪. ರಹಸ್ಯ ವಿಶ್ವ


ಕಿರಗೂರಿನ ಗಯ್ಯಾಳಿಗಳು ಹೆಸರೇ ಹೇಳುವಂತೆ ಇದು ಕಿರಗೂರಿನ ಹೆಂಗಸರ ಕಥೆ. ಕಿರಗೂರಿನ ಹೆಂಗಸರು ತಮ್ಮ ಉಜ್ವಲ ಸೌಂದರ್ಯದಿಂದ ನೋಡಿದವರನ್ನು ಬೆಚ್ಚಿ ಬೀಳಿಸುತ್ತಿದ್ದರು. ಇಲ್ಲಿನ ಗಂಡಸರು ಎಷ್ಟು ಸೌಮ್ಯರೋ ಹೆಂಗಸರು ಅಷ್ಟೇ ಬಜಾರಿಯರು. ಮೂರು ರಾತ್ರಿ ಮೂರು ದಿನ ಬೀಸಿದ ಬಿರುಗಾಳಿಂದ ಸೀಗೆಗೌಡರ ಮನೆ ಹತ್ತಿರ ಇದ್ದ ದೊಡ್ಡ ಮರ ಗಾಳಿ ಬೀಸಿದ ದಿಕ್ಕೆಗೆ ವಾಲಿಕೊಂಡಿತ್ತು. ಇದನ್ನು ಕಡಿಯಲು ಊರ ಹರಿಜನರ ಮಾರನು ಮತ್ತು ಸಿದ್ದನಿಗು ಸೀಗೆಗೌದರು ಹೇಳಿದರು. ಮರದ ಬೃಹದಾಕಾರ ಮತ್ತು ಜಟಿಲತೆ ಇಂದ ಮರವನ್ನು ಕಡಿಯಲಾಗಲ್ಲಿಲ್ಲ. ಶಂಕ್ರಪ್ಪನ ದುರುದ್ದೇಶದಿಂದ ಭ್ಯರಪ್ಪ, ಸುಬ್ಬಯ್ಯ, ಸೀಗೇಗೌಡ, ರಾಮಣ್ಣ ಮತ್ತು ಕಾಳೇಗೌಡ ಊರ ಪೋಲಿಸ್ ಸ್ಟೇಷನ್ನಲ್ಲಿ ರಾತ್ರಿ ಕಳೆದರು. ಇದು ಹರಿಜನರಿಂದ ಎಂದು ತಿಳಿದು ಮರ ಕಡಿಯಲು ಶಿಮೊಗ್ಗದಿಂದ ಸೋನ್ಸ್ ಮತ್ತು ಮಲಯಾಳಿಯನ್ನು ಕರೆಸಿದರು. ಹಾಗೋ ಹೀಗೋ ಮಾಡಿ ಮರ ಕಡಿದರು ಕಡಿದ ಮರ ಊರಳಿಸಲು ಹೋಗು ಭ್ಯ್ರಪ್ಪನ ಬೆನ್ನಿನ ಮೂಳೆಗೆ ಪೆಟ್ಟಾಯಿತು. ಕರಿಯ ಊರಿಗೆ ಮೂಳೆ ಹುಳುಕು ತೆಗೆದರು ಮರ ಕಡಿಯಲು ಹರಿಜನರ ಬದಲು ಬೇರೆಯವರಿ ಊಸ್ತೆವಾರಿ ಕೊಟ್ಟಿದ್ದರಿಂದ ಹುಳುಕು ತೆಗೆಯಲು ಒಪ್ಪಲ್ಲಿಲ್ಲ. ಇದರಿಂದ ಆದ ರಾದ್ದಾಂತ, ಹೆಂಗಸರ ಹಿಂಸಾಚಾರ, ಕಳ್ಳ ಬಟ್ಟಿ ಅಂಗಡಿ ದ್ವಂಸ, ಪ್ಪೋರ್ನಚಂದ್ರ ತೇಜಸ್ವಿಯವರು ಈ ಕಥೆಯಲ್ಲಿ ಚಿತ್ರಿಸಿದ್ದಾರೆ.


"ಮಾಯಾಮೃಗ" ಕತೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಂದ ರಾಷ್ಟ್ರದ ಅತ್ಯುತ್ತಮ ಹತ್ತು ಕತೆಗಳಲ್ಲಿ ಒಂದೆಂದು ಪರಿಗಣಿಸಿ "ಕಥಾ ರಾಷ್ಟ್ರೀಯ ಪ್ರಶಸ್ತಿ" ಕೊಡಲಾಗಿದೆ. "ಕೃಷ್ಣೇಗೌಡನ ಆನೆ" ಕತೆ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಮಲಯಾಳಿ ಭಾಷೆಗಳಿಗೆ ತರ್ಜುಮೆ ಮಾಡಲಾಗಿದೆ.