Karvalo - Poornachandra Tejasvi
"ಕರ್ವಾಲೊ" ಕಾದಂಬರಿ, ಪೂರ್ಣಚಂದ್ರ ತೇಜಸ್ವಿ ಯಾಕೆ ಕನ್ನಡದ ಒಬ್ಬ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರು ಎಂಬುದನ್ನು ತಿಳಿಸುತ್ತದ್ದೆ. ಕರ್ವಾಲೊ ಕಥೆ ಕಗ್ಗಾಡಿನ ಹಳ್ಳಿಯ ಕೊಂಪೆಯೊಂದರಲ್ಲಿ ನಡೆಯುವ ಘಟನೆ. ಹಳ್ಳಿಯ ಮಂದಣ್ಣ, ಪ್ರಭಾಕರ, ಎಂಗ್ಟ, ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೊ ಕಾಲವಿಜ್ಞಾನಿಯಾಗಿ ರೂಪುಒಳ್ಳುವ ಅಚ್ಚರಿಯ ಕಥೆ. ಧರ್ಮ, ಧ್ಯಾನ, ತಪಸ್ಯಗಳಂತೆಯೇ ವಿಜ್ಞಾನವೂ
ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡ ಎಲ್ಲ ಕಾದಂಬರಿಗಳಿಗಿಂತ
ಸಂಪೂರ್ಣ ಬಿನ್ನವಾದ ಕೃತಿ. ತೆಜ್ವಸ್ವಿ ವಿವರಿಸುವ ಪರಿಸರ, ಗುಡ್ಡ ಗಾಡು ಪ್ರದೇಶದ
ಜೀವನ, ಅಲ್ಲಿನ ಜನಗಳ ತೊಂದರೆಗಳು, ಪಡುವ ಕಷ್ಟಗಳನ್ನು ಕಣ್ಣಿಂದ ನೋಡಿದ ರೀತಿಯಲ್ಲಿ
ವಿವರಿಸುತ್ತಾರೆ. ಕರ್ವಾಲೊ ಕಾಡಿನಲ್ಲಿ ನಡೆಯುವ ಒಂದು ಸಂಶೋದನೆ ಕೃತಿ.
ಈ ಕಾದಂಬರಿ ನೀವು ಯಾಕೆ ಓದಬೇಕು ಎಂಬುದಕ್ಕೆ ಸಾಕ್ಷಿ ಈ ಕಾದಂಬರಿ ಇಂಗ್ಲಿಷ್, ಹಿಂದಿ, ಮರಾಠಿ, ಮಲಯಾಳಂ ಮತ್ತು ಜಪಾನೀ ಭಾಷೆಗಳಲ್ಲಿ ಪ್ರಕಟವಾಗಿದೆ
0 comments:
Post a Comment