Sunday, April 6, 2014

ಕಪಿಲಿಪಿಸಾರ - ಕೆ ಎನ್ ಗಣೇಶಯ್ಯ

 Kapilipisaara - K. N. Ganeshaiah

 

 


ಮುನ್ನುಡಿಯಿಂದ:

ಸುಮಾರು ಹತ್ತು ವರ್ಷಗಳ ಹಿಂದೆ.

ಭಾರತದ ಸಸ್ಯರಾಶಿಯ ಬಗ್ಗೆ ಮಾಹಿತಿ ಖಾಜಾನೆಯೊಂದನ್ನು ತಯಾರಿಸುತ್ತಿದ್ದಾಗ. ಪಾಶ್ಚಾತ್ಯ ದೇಶದ ಕಂಪನಿಯೊಂದಕ್ಕಾಗಿ ಕೆಲಸ ಮಾಡುತ್ತಿದ್ದ. ಭಾರತೀಯರೇ ಆದ ಹಿರಿಯೊಬ್ಬರು ನಮ್ಮಲ್ಲಿಗೆ ಬಂದು ಆ ಮಾಹಿತಿಯನ್ನು ಮತ್ತು ಅದರ ಮೇಲಿನ ಸಂಪೂರ್ಣ ಅಧಿಕಾರವನ್ನು ಅಪಾರವಾದ ಬೆಲೆಗೆ ಕೊಳ್ಳುವ ಅಭಿಲಾಷೆ ವ್ಯಕ್ತಪಡಿಸುದ್ದು. ನಮ್ಮೆಲ್ಲರಿಗೂ ಅತೀವ ಆಶ್ಚರ್ಯ ಉಂಟುಮಾಡಿತ್ತು. ನಾವು ಕಲೆಹಾಕಿ ಸಂಸ್ಕರಿಸುತ್ತಿದ್ದ ಮಾಹಿತಿಯ ಉದ್ದೇಶ ಮತ್ತು ಉಪಯೋಗಗಳ ಅರಿವು ನಮಗಿದ್ದರೂ, ಅದು ಅಷ್ಟು ಬೆಲೆ ಬಾಳುವಂತಹುದೆಂದು ತಿಳಿದು ಖುಷಿಯಾಗಿತ್ತು. ಆದರೆ ಇವರ ಬೆನ್ನಲ್ಲೆಯೇ, ಹಲವು ವಿದೇಶೀಯರು, ಅದೇ ಮಾಹಿತಿ ಖಜಾನೆಯ ವಾರಸುತನಕ್ಕೆ ಭಾಗಿಯಾಗುವ ಕುತಂತ್ರ ತೋರಿದ್ದು ನಮಲ್ಲಿ ಗಾಬರಿಯನ್ನೂ ಉಂಟುಮಾಡಿತ್ತು.

ಇವೆಲ್ಲರ ಹಿನ್ನೆಲೆಯಲ್ಲಿ 'ಕಪಿಲಿಪಿಸಾರ'ದ ಎಳೆಯೊಂದು ನನ್ನಲ್ಲಿ ಬೆಳೆಯತೊಡಗಿದ್ದಂತೆ, ಈ ಎಳೆಯ ಮತ್ತೊಂದು ಆಯಾಮದ ಸೃಷ್ಟಿಯಾದದ್ದು. ಮಾನವನ ಮತ್ತು ಮಂಗಗಳ ವಿಕಾಸದಲ್ಲಿ ಕಂಡುಬರುವ ಮಾನಸಿಕ ಸರಪಳಿಯ ಬಗ್ಗೆ ನನ್ನ ಸಹಪಾಠಿಯೊಬ್ಬರು ನಡೆಸುತ್ತಿದ್ದ ಸಂಶೋದನೆಯ ಬಗ್ಗೆ ಚರ್ಚಿಸುತ್ತಿದ್ದಾಗ. ಮಂಗಗಳಲ್ಲೂ. ತಾನು, ತನ್ನದು, ಸಾವು, ಜೀವ ಮತ್ತು ಸಾಮಾಜಿಕ ಒಳಿತು, ಕೆಟ್ಟದ್ದು ಎನ್ನುವ 'ಭಾವನೆ'ಗಳಿರುವ ಸಾಧ್ಯಾತೆ ಇದ್ದು. ಅವುಗಳ ನಡವಳಿಕೆ ಈ ಅಂಶಗಳಿಂದ ರೂಪಿಸಲ್ಪದುವುದರಲ್ಲಿ ಆಶರ್ಯವಿಲ್ಲ  ಎಂಬ ವಾದ, ರಾಮಾಯಣದ ಹನುಮಾನ್ ಈ ಪ್ರಶ್ನೆಗೆ ಉತ್ತರ ಒದಗಿಸಬಲ್ಲುದೆ? ಇಂತ ಹಲವು ಪ್ರಶ್ನೆಗಳು, ಇವೆಲ್ಲವೂ ಸೇರಿ 'ಕಪಿಲಿಸಾರ'ದ ಕತೆಯನ್ನು ಬೆಳೆಸತೊಡಗಿದವು. ಕೊನೆಗೆ 'ಸಂಜೀವಿನಿ' ಇವೆಲ್ಲವನ್ನೂ ಬೆಸೆಯುವ ಅಂಟಾಗಿ ಸೇರಿಕೊಂಡಿತು.


ಹೀಗೆ, ನನ್ನದೆ ಅನುಭವದಿಂದ, ನನ್ನ ಹತ್ತಿರದಲ್ಲೇ ಕಂಡ ಹಲವು ಕುತೂಹಲಗಳ ಆಧಾರದ ಬೆಳೆದ ಈ ಕಾದಂಬರಿ, ಇಂದಿಗೂ ನಮ್ಮ ದೇಶದಲ್ಲಿ ನಡೆಯತ್ತಿರುವ ಜ್ಞಾನದ ಲೂಟಿಗೆ, ಡಾಲರ್-ಆಧಾರಿತ-ಯೋಜನೆಗಳ ಆಮಿಶ ಒಡ್ಡಿ ಪಾಶ್ಚಾತ್ಯ ಸಂಸ್ಥೆಗಳು ನಡೆಯುತ್ತಿರುವ ನಮ್ಮ ಯುವ ವಿಜ್ಞಾನಿಗಳ 'ಖೆಡ್ಡಾ'ಗೆ ಒಂದು ಕನ್ನಡಿ.






0 comments:

Post a Comment