ನಾನ್‌ಇನ್ ಜಪಾನಿನ ಮಾಸ್ಟರ್‌ನನ್ನು ನೋಡಲು ಒಬ್ಬ ವಿಶ್ವವಿದ್ಯಾಲಯ ಪ್ರೊಫೆಸರ್ ಬಂದ. ಅವನಿಗೆ ಝೆನ್ ಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು.
ನಾನ್‌ಇನ್ ಅತಿಥಿಯ ಮುಂದೆ ಲೋಟವಿಟ್ಟು ಟೀ ಸುರಿಯತೊಡಗಿದ. ಲೋಟ ತುಂಬಿ ಟೀ ಹೊರಚೆಲ್ಲಿತು. ಇನ್ನೂ ಸುರಿಯುತ್ತಲೇ ಇದ್ದ.
ಸುಮ್ಮನೆ ನೋಡುತ್ತಿದ್ದ ಪ್ರೊಫೆಸರ್ “ಲೋಟ ತುಂಬಿದೆ. ಇನ್ನು ಹಿಡಿಸಲಾರದು’ ಎಂದ.
ಇದರಂತೆಯೇ ನೀನೂ ನಿನ್ನದೇ ಸ್ವಂತ ಅಭಿಪ್ರಾಯ-ಅನಿಸಿಕೆಗಳಿಂದ ತುಂಬಿಕೊಂಡಿದ್ದೀ. ನೀನು ಖಾಲಿಯಾಗದೇ ನಾನ್ಹೇಗೆ ಝೆನ್ ತೋರಿಸಲಿ ? ಎಂದು ನಾನ್‌ಇನ್ ಕೇಳಿದ.
0 comments:
Post a Comment