Tuesday, April 29, 2014

ಹುಲಿಯೂರಿನ ಸರಹದ್ದು ಸ್ವರೂಪ ನಿಗೂಢ ಮನುಷ್ಯರು - ಪೂರ್ಣಚಂದ್ರ ತೇಜಸ್ವಿ

Huliyoorina Sarahaddu, Swaroopa, Nigoodha Manushyaru - Poornachandra Tejasvi



ತೇಜಸ್ವಿಯವರ ಕಥೆ ಕಾದಂಬರಿಗಳನ್ನು ಓದುವುದೆಂದರೆ ಒಂದು ಸಂತೋಷ. ಯಾಕೆಂದ್ರೆ ಅವರ ಒಂದೊಂದು ಕಾದಂಬರಿಯು ನಮ್ಮನ್ನು ಒಂದೊಂದು ಪ್ರಪಂಜಕ್ಕೆ ಕರೆದ್ದೊಯುತ್ತಾರೆ. ಅವರ ಕಥೆ ಹೇಳುವ ರೀತಿ ಹಾಗೆ ಇದೆ, ನಮ್ಮನ್ನು ಒಂದು ಬೇರೆಯೇ ಪ್ರಪಂಚಕ್ಕೆ ಕರೆದೊಯ್ದು ನಮ್ಮನ್ನು ಆ ಪರಪಂಚದ ಒಂದು ಬಾಗವಾಗಿಬಿಡುಸುತ್ತಾರೆ. ಅವರು ಆ ಲೋಕದ ಒಂದೊಂದು ವರ್ಣನೆಯು ನಮ್ಮನ್ನು ಅದು ನಮ್ಮ ಮುಂದೇನೆ ಇದೆ ಎಂದು ಅನಿಸುತ್ತದೆ. ಈ ರೀತಿ ಮಾಡುವ ಕಲೆಗಾರಿಕೆ ತೇಜಸ್ವಿ ಒಬ್ಬರಿಗೆ ಮಾತ್ರ ಸಾಧ್ಯ. ಈ ಕಥಾಸಂಕಲದಲ್ಲು ಅವರು ನಮ್ಮನ್ನು ಹುಲಿಯೂರು, ಮೊನಿಯ ಬೆಟ್ಟದ ವರ್ಣನೆ, ಮಲೆನಾಡಿನ, ಚಿತ್ರಣ, ಚಂದ್ರಗುತ್ತಿ, ಉಗ್ರಗಿರಿ,ನವಿಲುಗುಂದ..... ಹೀಗೆ ಅವರು ನಮ್ಮನ್ನು ಆ ಊರಿನಲ್ಲಿ ಒಬ್ಬ ಮನುಷ್ಯನನ್ನು ಮಾಡುತ್ತಾರೆ. 

ಇದು ಅವರು ಬರೆದಿರುವ ಅಬಚೂರಿನ ಪೋಸ್ಟ್ ಆಫೀಸ್, ಜುಗಾರಿ ಕ್ರಾಸ್ ..... ಇತ್ಯಾದಿ ಕಥೆ ಕಾದಂಬರಿಗಳಿಗಿಂತ ತುಂಬ ವಿಬಿನ್ನ ಯಾಕೆಂದರೆ ಅವರು ಬರೆದ ಮೊದಲ ಕೆಲವು ಕತೆಗಳೇ ಇವು, ಸ್ವರೂಪ ಒಬ್ಬ ಮನುಷ್ಯ ಅಂತರ್ಯಕ್ಕೆ ಒಕ್ಕು ಅವರ ಭಾವನೆಗಳೇನು, ಅವರು ಇನ್ನೊಬ್ಬರ ಬಗ್ಗೆ ಇರುವ ಧೋರಣೆ ಎಲ್ಲವನ್ನು ತುಂಬ ವಿವರವಾಗಿ ಇದು ನಮ್ಮ ಚಿಂತನೆ ನೆ ಇರಬಹುದು ಅನ್ನಿಸುತ್ತದೆ. ಇಲ್ಲಿ ಅವರ ವಿಬಿನ್ನತೆ ಕಾಣುವುದು ನಿಗೂಡ ಮನುಷ್ಯರು ಕಿರುಕಾದಂಬರಿಯಲ್ಲಿ. ಅವರು ವಿವರಿಸುವ ಜೀವನದಲ್ಲಿ ಬಲಳಿದ ಬರಹಗಾರ ಜಗನ್ನಾಥ, ಎಕ್ಷ್ಚಿಸೆ ಇನ್ಸ್ಪೆಕ್ಟರ್ ರಂಗಪ್ಪ, ಗೋಪಾಲಯ್ಯ.... ಹೇಗೆ ಅವರು ಒಂದು ಮಳೆಯಲ್ಲಿ ಸಿಲುಕಿದ ಜಗನ್ನಾಥ ಮತ್ತು ರಂಗಪ್ಪ ನನ್ನು ಹೇಗೆ ಗೋಪಾಲಯ್ಯ ತಮ್ಮ ಮನೆಗೆ ಕರೆದೊಯ್ದು ಉಪಚರಿಸುತ್ತಾರೆ ಮತ್ತು ಮಳೆ ಜಾಸ್ತಿ ಹಾಗಿ ಭೂಕಂಪನವಾಗಿ ಎಲ್ಲರು ವಲಸೆ ಹೋಗಲು ನಿರ್ಧರಿಸುತ್ತಾರೆ, ಹಾಗೆ ಗೋಪಾಲಯ್ಯನ ಸಿ ಐ ಡಿ ದಿನಗಳು.. ಅವರವರ ಜೀವನದ ಬಗ್ಗೆ ಒಂದೊಂದು ಎಳೆಎಳೆಯನ್ನೇ  ಬಿಡಿಸು ನಮಗೆ ಬಡಿಸುತ್ತಾರೆ. ಇದರ ಮಧ್ಯೆ ಬಂದು ಹೋಗುವ ಕಾಡಿನ ಮನುಷ್ಯ ಮರಸ, ಕಂಪ್ರ ..... ಎಲ್ಲರು ಆ ಕಥೆಯ ಒಂದು ಬಹು ಮುಖ್ಯ ಪಾತ್ರವಾಗುತ್ತಾರೆ. 

ಅವರು ಇಲ್ಲಿ ಬಳಸುವ ಭಾಷೆ ಒಮ್ಮೊಮ್ಮೆ ನಮಗೆ ಅರ್ಥೈಸಿಕ್ಕೊಳ್ಳಲು ಸಲ್ಪ ಸಮಯ ಬೇಕು, ಅವರು ಇದು ಬರೆದಿದ್ದು ೧೯೭೦ ಯಾಲಿ ಮತ್ತು ಇದು ಮಲೆನಾಡಿನ ಭಾಷೆ.... ಆದರೆ ಅದು ಈ ಕಥಾಸಂಕಲನ ಓದಿದ ಮೇಲೆ ಅದು ಯಾಕೆ ಬಳೆಸಿದದಾರೆ, ಅದು ಯಾಕೆ ಮುಖ್ಯ ಎಂದು ತಿಳಿಯುತ್ತದೆ. ಇಲ್ಲಿ ಬರೆದಿರುವುದು ನಾವು ನೀವು ಮಾತಾಡುವ ರೀತಿಯಲ್ಲಿ ಬರೆದಿದ್ದಾರೆ. ಕರ್ವಾಲೋ ರೀತಿಯಲ್ಲಿ ನಾವು ನೋಡಿರದ ಒಂದು ನೀಗೂಡ ಪ್ರಪಂಜಕ್ಕ ನಮ್ಮನು ಪರಿಚಯಿಸುತ್ತಾರೆ. 




0 comments:

Post a Comment