Sunday, April 6, 2014

Filled Under:
, ,

ಮಹಾಬ್ರಾಹ್ಮಣ - ದೇವುಡು

MahaBrahmana  - Devudu



ಮುನ್ನುಡಿಯಿಂದ:

ಮಹಾಬ್ರಾಹ್ಮಣ ಕಥೆ ಪ್ರಸಿದ್ದರಾದ ವಸಿಷ್ಠ ವಿಶ್ವಾಮಿತ್ರರದು; ಬಹು ಪುರಾತನವಾದುದು. ಋಗ್ವೇದ, ಯಜುರ್ವೇದ, ಐತರೇಯ, ಕೌಷೀತಕೀ, ಗೋಪಥ, ಶಾಂಖಾಯನ, ಷಡ್ವಿಂಶ ಬ್ರಾಹ್ಮಣಗಳು, ರಾಮಾಯಣ, ಮಹಾಭಾರತ, ಹರಿವಂಶ, ವಿಷ್ಣುಪುರಾಣ, ವಾಯುಪುರಾಣ, ಯೋಗವಾಸಿಷ್ಠ ಇವುಗಳಲ್ಲಿ ಬನ್ದಿದೆ. ಆದರೂ ರಾಮಾಯಾಣದ ಕಥೆಯನ್ನು ಮೂಖ್ಯವಾಗಿಟ್ಟುಕೊಂಡು, ಮಿಕ್ಕ ಕಡೆಗಳಲ್ಲಿ ಸಿಕ್ಕುವ ಅಂಶಗಳನ್ನು ಅದರಲ್ಲಿ ಸಂದ  ಸಂದರ್ಭೋಚಿತವಾಗಿ ಸೇರಿಕೊಂಡು ಹೆಣೆದಿರುವ ಕಥೆ ಈ 'ಮಹಬ್ರಾಹ್ಮಣ'. 

ಅಲ್ಲಲ್ಲಿ ಉಪನಿಷತ್ತುಗಳ ರಹಸ್ಯವಿಧ್ಯೆಗಳೂ ಬಂದಿವೆ. ಈ ವಿದ್ಯಪ್ರತೀಕಗಳಲ್ಲಿ ಕೆಲವು ಸ್ವಾನುಭವ, ಕೆಲವು ಪರಾನುಭವ. ಕೆಲವು ಬರೆಯುತ್ತಿದ್ದಾಗ ತಾವಾಗಿ ಬಂದವು. ರುದ್ರನು ಪ್ರತ್ಯಕ್ಷವಾಗುವುದು, ದೇವತೆಗಳು ಬಂದು ಮಾತಾಡುವುದು, ಇವೆಲ್ಲ ಸ್ವಾನುಭವ. ಪ್ರಾಣಾಗ್ನಿ ಹೋತ್ರ ಪಂಚಾಗ್ನಿವಿದ್ಯಾ, ಇವು ಇದನ್ನು ಮಾಡಿ ನೋಡಿದ್ದವರ ಬಾಯಿಂದ ಕೇಳಿದುದು; ಮದನನು ಹೇಳುವ ಆಹಂಕಾರ ವಿಮರ್ದನ, ಜಗನ್ನಾಥರ ತೇರು, ಗಾಯತ್ರಿ ಸಾಕ್ಷಾತ್ಕಾರಕ್ಕಿಂತ ಮುಂಚೆ ಬರುವ ಬ್ರಹ್ಮಣಸ್ಪತಿ, ಪೂಷಾ, ದೇವರ ಅನುಗ್ರಹ ಮೊದಲಾದವು ತಾವಾಗಿ ಬಂದವು.  

ಹಾಗೇಯೇ ದಿವ್ಯಸ್ತ್ರೀಯರು ಮಾನವನೊಡನೆ ಸಂಸಾರವನ್ನು ಮಾಡಿರುವ ಚಿತ್ರಗಳು, ಕವಷ ಐಲೂಷನೆಂಬ ಶೂದ್ರರ್ಷಿಯು ವಿಶ್ವಾಮಿತ್ರರ ಅನುಗ್ರದಿಂದ ಋಷಿಯಾದನೆಂಬುದು, ಋಗ್ವೇದದ ನಾಲ್ಕನೆಯ ಮಂಡಲಕ್ಕೆ ತನ್ನ ಹೆಸರು ಕೊಟ್ಟಿರುವ ವಾಮದೇವರು ಏಳನೆಯ ಮಂಡಲದ ವಸಿಷ್ಠರ ಶಿಷ್ಯರಾಗಿ, ಮೂರನೆಯ ಮಂಡಲದ ವಿಶ್ವಾಮಿತ್ರರ ಆಧ್ಯಾತ್ಮಿಕ ಪುರೋಭಿವೃದ್ದಿಯ ಕಾರಣರಾದವರು ಎಂಬುದು, ಇವೆಲ್ಲ ಬರೆದವನ ಸೃಷ್ಟಿ. ಪ್ರಾಣವು ಲೋಕದಲ್ಲಿ ವ್ಯಕ್ತಿವ್ಯಕ್ತಿಗಳಲ್ಲಿ ಹರಡಿದ್ದರೂ ಮೂಲತಃ ಒಂದೇ ! ಕಾಲವು ಖಂಡವಾಗಿ ವ್ಯವಹಾರ ಗೊಚರವಾಗುತ್ತಿದ್ದರೂ ಇರುವುದೆಲ್ಲ ಒಂದೇ ಕಾಲ ! ಧರ್ಮ ಪರಿಷತ್ತು, ಬ್ರಹ್ಮ ಪರಿಷತ್ತು, ನೋಡುತ್ತಿದ್ದ ಹಾಗೆಯೇ ಒಳಗಿನ ಅಂತಸ್ತವನ್ನು ಗೊತ್ತುಮಾಡಿ ಕೊಳ್ಳುವುದು. ಇವೆಲ್ಲ ಶಾಸ್ತ್ರಗಳ ವಿಷಯಗಳು. ಹೀಗೆ ಏನೇನೋ ಎಷ್ಟೆಷ್ಟೋ ಓದಿ, ಅಷ್ಟಷ್ಟು ಕೇಳಿ, ಇನ್ನಷ್ಟು ಸ್ವಾನುಭವದಿಂದ ಸಮ್ಪಾದಿಸಿಕೊಂಡು, ಎಲ್ಲವನ್ನು ಗುರುಕೃಪೆಯಿಂದ ಮೂಸೆಯಲ್ಲಿಟ್ಟು ಕರಗಿಸಿ ಎರಕ ಹೂಯ್ದಿರುವ ಬೊಂಬೆಯಿದು.






0 comments:

Post a Comment