Tuesday, April 29, 2014

ಸ್ಮಶಾನ ಭೈರಾಗಿ - ಎನ್ ನರಸಿಂಹಯ್ಯ

Smashana Bhyragi  - Narashimaiah N



ನರಸಿಂಹಯ್ಯ ನವರ ಕಾದಂಬರಿಗಳೇ ಹೀಗೆ ಎರಡು ಅಥವಾ ಮೂರು ಗಂಟೆಗಳಲ್ಲಿ ಮುಗಿಸಬಹುದು. ಅವರ ಸರಳ ಭಾಷೆ, ಹೇಳುವು ರೀತಿ ಮತ್ತು ಕಥೆಯಲ್ಲಿನ ಕುತೂಹಲ ಕಾಯ್ದುಕೊಳ್ಳುಹುದು ಈ ರೀತಿಯ ಬಿರುಸಿನ ಓದುವಿಕೆಯ ಕಾರಣ. ಕನ್ನಡದ ಪತ್ತೇದಾರಿ ಕಾದಂಬರಿಕಾರರಲ್ಲಿ ನಿಸ್ಸಿಮರು ಎನಿಸಿಕೊಂಡವರು ನರಸಿಂಹಯ್ಯನವರು. ಅವರು ನೂರಕ್ಕೂ ಹೆಚ್ಚು ಪತ್ತೇದಾರಿ ಕಾದಂಬರಿಗಳನ್ನು ಬರೆದವರು. 

ಸ್ಮಶಾನ ಭೈರಾಗಿಯಲ್ಲಿ ಅವರು ಪತ್ತೇದಾರಿ ಜೊತೆಗೆ ಮಾತಾ ಮಾತ್ರ ಭೂತಗಳನ್ನು ಕಥೆಯ ಮೂಖ್ಯ ಪಾತ್ರವನ್ನಾಗಿಸಿದ್ದಾರೆ. ಅನಂತಚಾರರಿಗೆ ಬರಿ ೩೫ ರೂ ಗಳಿಗೆ ಒಂದು ಬಂಗಲೆ ಬಾಡಿಗೆಗೆ ಸಿಗುತ್ತಾದೆ, ಇದು ಯಾಕೆಂದು ಅವರ ಪತ್ನಿ ಮಂಜುಳ ವಿವರಿಸುತ್ತಾಳೆ. ಅದು ಒಂದು ಬೂತದ ಬಂಗಲೆ ಮತ್ತು ಅದನ್ನು ಯಾರು ಬಾಡಿಗೆಗೆ ತೆಗೆದುಕೊಂಡಿಲ್ಲವಾದ್ದರಿಂದ ಕಡಿಮೆಗೆ ಸಿಕ್ಕಿತು ಎಂದು. ಮಂಜುಳಗೆ ಅಳುಕು, ದುಃಖ ಒಮ್ಮೆಲೇ ಬರುತ್ತದೆ, ಇದಕ್ಕೆ ಅನಂತಚಾರಿ ಅವಳನ್ನು ಜೋಹಿಸರ ಮನೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಬಂದ ಮೇಲೆ ಅವಳಿಗೆ ಸಮಧಾನ ವಾಗುತ್ತದೆ. ಅದೇ ಊರಿನಲ್ಲಿ ಅಪ್ಪೊರಾಯ ಮತ್ತು ಆಲಮೇಲಮ್ಮ  ಎಂಬ ದಂಪತಿಗಳು ಒಂದು ಭೂತದ ಕಾಟಕ್ಕೆ ಸಿಲುಕಿರುತ್ತಾರೆ. ಅವರಿಗೆ ಮೊದಮೊದಲು ಕಷ್ಟ ಕೊಟ್ಟು ಆಮೇಲೆ ಅವರು ಭೂತ ಮಾತು ಕೇಳಿದರೆ ತಮ್ಮ ಎಲ್ಲ ಇಷ್ಟಾರ್ತವನ್ನು ನೆರವೆರುಸುವುದಾಗಿ ಹೇಳುತ್ತಾದೆ. ಅದರ ಪ್ರಕಾರ ಅಪ್ಪೊರಾಯ ಮತ್ತು ಆಲಮೇಲಮ್ಮ ಮನಸ್ಸಿಗೆ ಬೇಕೆನಿಸಿದ್ದನ್ನು ಭೂತವು ಕ್ಷಣ ಮಾತ್ರದಲ್ಲಿ ಒದಗಿಸುತ್ತದೆ. 

ಮಂಜುಳ ಮನೆಯಲ್ಲಿನ ಭೂತದಿಂದ ಬಹಳ ನೋವನ್ನು ಅನುಬವಿಸಿ ಅನಂತಚಾರಿ ಮನಜುಳೆಗೆ ತಾಯತ ಕಟ್ಟುತ್ತಾರೆ. ಕಟ್ಟಿದ ಮೇಲೆ ಭೂತದ ಕಾಟ ಇಲ್ಲವಾಗುತ್ತದೆ. ಅಪ್ಪೊರಾಯರಿಗೆ ಈ ಭೂತ ಯಾರು, ಏಕೆ ನಮ್ಮ ಸಹಾಯ ಮಾಡುತ್ತಿದೆ ಎಂದು ಕುತೂಹಲ, ಅವರಿಗೆ ಯಾರಾದರು ಕೇಡು ಬಯಸಿದರೆ ಆ ಭೂತವು ಅವರನ್ನು ತಂಟೆಗೆ ತೆಗೆದುಕೊಳ್ಳುವುದು. ಇದರಿಂದಾಗಿ ಊರಿನ ಜನರಿಗೆ ಅಪ್ಪೊರಾಯರ ಮೇಲೆ ಗೊಎರವ ಮತ್ತು ಹೆದರಿಕೆ. ಇದರ ಮಧ್ಯ ಆ ಊರಿಗೆ ಒಬ್ಬ ಸ್ಮಶಾನ ಭೈರಾಗಿಯಾ ಆಗಮನವಾಗುತ್ತದೆ. ಭೈರಾಗಿಯು ಯಾರ ಹತ್ತಿರನು ದುಡ್ಡು ಕೇಳದ ಎಲ್ಲರಿಗು ಸಹಾಯ ಮಾಡುತ್ತಿರುತ್ತಾನೆ ಆದರೆ ಅವನ ಮೇಲೆ ಪತ್ತೆದಾರ ಮಧುಸೂದನನಿಗೆ ಯಾಕೋ  ಅನುಮಾನ. 

ಸ್ಮಶಾನ ಭೈರಾಗಿ ಯಾರು, ಮಂಜುಳಾ ಮುಂದೆ ಏನಾಗುತ್ತಾಳೆ, ಅಪ್ಪೊರಾಯರ ಭೂತವು  ಮುಂದೆಯೂ ಸಹಾಯ ಮಾಡುತ್ತದ ಹಾಗು ಪತ್ತೆದಾರ ಮಧುಸೂದನನ ಅನುಮಾನದ ಕಾರಣಗಳೇನು ಎಂದು ನೀವು ಒದೆ ತಿಳಿಯಬೇಕು. ಒಂದಂತು ಹೇಳಬಲ್ಲೆ ನೀವು ಈ ಪುಸ್ತಕವನ್ನು ಓದಿದ ಮೇಲೆ ಬೇಜಾರಂತು ಆಗುವುದಿಲ್ಲ ಬದಲ್ಲಗಿ ಇನ್ನು ನರಸಿಂಹಯ್ಯ ನವರ ಕಾದಂಬರಿಗಳನ್ನು ಕೊಂದು ಓದುತ್ತಿರಿ. 




0 comments:

Post a Comment