ಇಕ್ಯು ಎಂಬ ಜೆನ್ ಗುರು ಬಾಲ್ಯದಿಂದಲೇ ಮಹಾ ಬುದ್ಧಿವಂತನಾಗಿದ್ದ. ಅವನ ಗುರುವಿನ ಬಳಿ ಬಹಳ ಬೆಲೆ ಬಾಳುವ ಒಂದು ಅಮೂಲ್ಯವಾದ ಚಹಾ ಲೋಟವಿತ್ತು. ಒಂದು ದಿನ, ಪಾತ್ರೆಗಳನ್ನು ಜೋಡಿಸುತ್ತಿದ್ದಾಗ ಅಕಸ್ಮಾತಾಗಿ ಅವನು ಆ ಲೋಟವನ್ನು ಕೆಳಕ್ಕೆ ಬೀಳಿಸಿ ಒಡೆದುಬಿಟ್ಟನು! ಗುರುವಿನ ಹೆಜ್ಜೆ ಸಪ್ಪಳವನ್ನು ಕೇಳಿದ ಕೂಡಲೇ ಅವನು ಕೇಳಿದನು, “ಗುರುಗಳೇ, ಜನರೇಕೆ ಸಾಯುತ್ತಾರೆ?”
ಗುರು ಹೇಳಿದನು, “ಅದು ಸಹಜ ಮಗೂ, ಸ್ವಲ್ಪ ಕಾಲ ಜೀವಿಸಿದ ನಂತರ ಎಲ್ಲವೂ ಸಾಯಲೇ ಬೇಕು.”
ಇಕ್ಯು ಲೋಟದ ಚೂರುಗಳನ್ನು ತೋರಿಸುತ್ತಾ ಹೇಳಿದನು, “ಗುರುಗಳೇ, ತಮ್ಮ ಲೋಟಕ್ಕೆ ಸಾಯುವ ಕಾಲ ಬಂದಿತ್ತು!”
0 comments:
Post a Comment