Wednesday, April 23, 2014

ಝೆನ್ ಕಥೆಗಳು - ಸ್ವರ್ಗದ ಬಾಗಿಲುಒಂದು ದಿನ ನೋಬುಶಿಂಗ್ ಎಂಬ ಸೈನಿಕ ಝೆನ್ ಗುರು ಹುಕೈನ್ ಹತ್ತಿರ ಬಂದು "ಗುರುಗಳೇ ಸ್ವರ್ಗ ಮತ್ತು ನರಕ ಅನ್ನುವುದು ನಿಜಬಾಗಲೂ ಇದೆಯೇ?" ಎಂದು ಕೇಳಿದನು. ಅದಕ್ಕೆ ಝೆನ್ ಗುರುಗಳು "ನೀನು ಏನು ಮಾಡುತ್ತಿರುವೆ? " ಎಂದು ಕೇಳಿದರು.

ಅದಕ್ಕೆ ಅವನು "ನಾನೊಬ್ಬ ಸೈನಿಕ" ಎಂದು ಹೇಳಿದ. ಅದಕ್ಕೆ ಗುರುಗಳು "ನೀನು ನೋಡಲಿಕ್ಕೆ ಭಿಕ್ಷುಕ ರೀತಿ ಕಾಣುತ್ತೀಯ, ನೀನು ದೇಶವನ್ನು ರಕ್ಷಿಸುತ್ತೀಯ ಅಂದರೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ" ಎಂದು ಹೇಳಿದರು

ತನ್ನ ಬಗ್ಗೆ ಈ ರೀತಿಯ ಹೇಳಿದ್ದನ್ನು ಕೇಳಿ ಆ ಸೈನಿಕನಿಗೆ ತುಂಬಾ ಕೋಪ ಬಂತು, ಮುಖ ಬಿಗಿದುಕೊಳ್ಳಲಾರಂಭಿಸಿತು, ಅವನ ಕೈಗಳು ಖಡ್ಗವನ್ನು ಮತ್ತಷ್ಟು ಬಿಗಿಯಾಯಿತು. ಇದನ್ನು ಗಮನಿಸಿದ ಝೆನ್ ಗುರು "ಖಡ್ಗವಿದ್ದರೆ ಮಾತ್ರ ಸಾಕೇ ಆ ನಿನ್ನ ಖಡ್ಗ ನನ್ನ ತಲೆಯನ್ನು ತೆಗೆಯುವಷ್ಟು ಹರಿತವಾಗಿಲ್ಲ" ಎಂದು ಹೇಳಿದರು.

ಇದನ್ನು ಕೇಳಿದ ಸೈನಿಕ ಕತ್ತಿಯನ್ನು ಮೇಲಕ್ಕೆ ಎತ್ತಿದನು. ಆಗ ಗುರುಗಳು "ಈಗ ನೀನು ಏನು ಮಾಡುತ್ತಿರುವೆ ಅದೇ ನರಕ" ಎಂದು ಹೇಳಿದರು. ಸೈನಿಕ ಖಡ್ಗ ಕೆಳಗೆ ಹಾಕಿ ಅವರ ಅನುಯಾಯಿಯಾದನು. ಆಗ ಗುರುಗಳು "ಇವತ್ತಿನಿಂದ ನಿನಗೆ ಸ್ವರ್ಗದ ಬಾಗಿಲು ತೆರೆಯಿತು" ಎಂದು ಹೇಳಿದರು.

0 comments:

Post a Comment