Tuesday, April 22, 2014

ಅಳಿದ ಮೇಲೆ - ಶಿವರಾಮ ಕಾರಂತ

Alida Mele - Shivarama Karanth



ನಾವೆಲ್ಲಾ ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲವಾರು ಜನರ ಜೀವನದಲ್ಲಿ ಒಂದು ಪಾತ್ರವಾಗಿಬಿಟ್ಟಿರುತ್ತೇವೆ. ನಮಗರಿವಿಲ್ಲದಂತೆ ನಮ್ಮಿಂದ ಕಷ್ಟಕ್ಕೆ ಸಿಲುಕಿದವರು, ಖುಷಿ ಪಟ್ಟವರು ಸುಮಾರು ಜನರಿರುತ್ತಾರೆ. ಕಷ್ಟ ಪಟ್ಟವರು ದ್ವೇಷಿಸಿತ್ತಾರೆ, ಖುಷಿ ಪಟ್ಟವರು ಮರೆಯುತ್ತಾರೆ, ಇದರೆಲ್ಲದರ ಮಧ್ಯೆ ಒಂದೋ ಎರಡೋ ಮೂರೊ ಜನ ಮಾತ್ರ ನಮ್ಮನ್ನು ಪ್ರೀತಿ, ವಿಶ್ವಾಸದಿಂದ ನೆನೆಯುತ್ತಾರೆ. ಅಂತ ಎರಡು ಮೂರ ಜನ ಮಾತ್ರ ನಮ್ಮ ಜೀವನದೊಂದಿಗೆ ನೆಡೆದು ಬರುತ್ತಾರೆ ಕೊನೆವರೆಗೂ. ಒಂದು ಕಾಲದಲ್ಲಿ ಜನರ ಪರಿಚವಾಗಿ, ಪರಿಚಯ ಸ್ನೇಹವಾಗಿ ಆತ್ಮಿಯರಾಗುತ್ತಿದ್ದರು ಪಯಣಮಾದುವಾಗ,, ಬಸ್ಸಲ್ಲೋ ರೈಲ್ಲಲ್ಲೋ, ಈ ಆಧುನಿಕ ಜೀವನದಲ್ಲಿ ಅಕ್ಕ ಪಕ್ಕ ಕೂತವರು ಯಾರು ಎಂದು ತಿಳಿದುಕ್ಕೊಳ್ಳವ ಗೋಜಿಗೆ ಹೋಗುವುದಿಲ್ಲ ಇನ್ನು ಸ್ನೇಹ ಎಲ್ಲಿಂದ ಬರಬೆಕು. ಇದಕ್ಕೆ ನಮಗೆ ಸ್ನೇಹಿತರು ಹಿತೈಷಿಗಳು ಕಮ್ಮಿ, ಅವರನ್ನು ಹುಡುಕಿಕೊಂಡು ನಾವು ಫೇಸ್ಬುಕ್ ಅಲ್ಲೋ ಇಲ್ಲ ಅಂತರ್ಜಾಲದ ಯಾವುದು ವೆಬ್ ಸೈಟ್ ನಲ್ಲಿ ಕಾಲ ವ್ಯಯ ಮಾಡುತ್ತಿರುತ್ತೇವೆ.  'ಅಳಿದ ಮೇಲೆ' ಕಾದಂಬರಿ ಓದಿದ ಮೇಲೆ ನನಗನಿಸ್ಸಿದ್ದು ಅಂದರೆ ನಮ್ಮ ಜೀವನ ರುಚಿಇಲ್ಲದ ಒಂದು ದೀರ್ಘವಾದು ಊಟ ಎಂದು. ಯಾಕೆ ಹೀಗೆ ಹೇಳುತ್ತೇನೆ ಎಂದರೆ ನಾವ್ಯಾರು ಅಕ್ಕ ಪಕ್ಕ ಇರುವ ಜನರ ಬಗ್ಗೆ ತಿಳಿದುಕೊಳ್ಳುವುದಿಲ್ಲ, ಅವರ ಸ್ಥಿತಿ ಗತಿ ಗೊತ್ತಿರವುದಿಲ್ಲ ಇನ್ನು ನಮ್ಮ ಜೀವನದಲ್ಲಿ ವ್ಯವಿಧ್ಯತೆ ಹೇಗೆ ಬರಬೇಕು. 

ಕಾರಂತರಿಗೆ ಯಶವಂತ್'ರ ಪರಿಚವಾಗುವುದು ಮುಂಬೈಗೆ ಹೋಗುತ್ತಿರುವಾಗ ರೈಲು ಪ್ರಯಾಣದಲ್ಲಿ. ಅವರ ಪರಿಚಯ ಸ್ನೇಹವಾಗುತ್ತದೆ, ಯಶವಂತರು ತಮ್ಮ ಬಗ್ಗೆಯಾಗಲಿ ತಮ್ಮ ಮನೆಯರ ಬಗ್ಗೆಯಾಗಲಿ ಕಾರಂತರ ಹತ್ತಿರ ಮಾತಾಡಿದವರಲ್ಲ, ಅವರ ಮಾತು ಕಡಿಮೆ. ಕಳೆದ ಆರು ವರ್ಷದಲ್ಲಿ ಮುಂಬೈಗೆ ಯಾವಾಗಲಾದರು ಹೋದಾಗ ಕಾರಂತರು ಅವರನ್ನು ಬೀತಿಯಾಗಿ ಬರುತ್ತಿದ್ದರು, ಬೇಟಿಯಾದಾಗಲು ಮಾತು ತುಂಬಾ ತೂಕದ ಮಾತಾಡುತ್ತಿದ್ದರು. ಅವರು ಸತ್ತಾಗ ಅವರು ಕಲಿಸದ ಪತ್ರಗಳು ಮತ್ತು ಬಿಡಿಸಿದ ಚಿತ್ರಗಳ ಮೂಲಕ ಅವರ ಜೀವನದಲ್ಲಿ ಎನೇನಾಗಿರಬಹುದು ಎಂದು ಕಾರಂತರಿಗೆ ತಿಳಿಯುತ್ತದೆ. ಮತ್ತೆ ಅವರು ಹದಿನೈದು ಸಾವಿರಕೊಟ್ಟು ತಿಂಗಳಿಗೆ ೨೫ ರುಪಾಯಿಗಳಂತೆ ನಾಲ್ಕು ಜನರಿಗೆ ತಲುಪಿಸಿರಿ ಎಂದು ವಿನಂತಿಸುತ್ತಾನೆ. 

ಕಾರಂತರು ತಿಂಗಳಿಗೊಮ್ಮೆ ದುಡ್ಡು ಕೊಡುವಾಗ ಶಂಬುಭಟ್ಟ  ಪಾರ್ವತಿಯ ದುಡ್ಡು ಕದಿಯುತ್ತಿರುವಾಗಿ ಅನುಮಾನಬರುತ್ತದೆ, ಅದನ್ನು ಪರಿಶೀಲಿಸಲು ಎರಡು ತಿಂಗಳು ದುಡ್ಡು ಕಳಿಸುವುದಿಲ್ಲ, ದುಡ್ಡು ಬರದ ಕಾರಣ ಶಂಬುಭಟ್ಟ ಇವರಿಗೆ ಕಾಗದ ಬರಯುತ್ತಾನೆ. ಅವರ ಅನುಮಾನು ಇನ್ನು ಆಳಾವಾಗುತ್ತದೆ ಕಾರಂತರು ಅವರನ್ನು ನೋಡಲು ಅವರ ಹಳ್ಳಿಗೆ ಪ್ರಯಾಸದಿಂದ ಸಾಗಿ ಸೇರುತ್ತಾರೆ. ಅಲ್ಲಿ ಪಾರ್ವತಿಯು ಯಶವಂತರ ಸಾಕು ತಾಯಿ, ಅವರು ತುಂಬ ಕಷ್ಟದಲ್ಲಿದ್ದಾರೆ ಎಂದು ತಿಳಿಯುತ್ತದೆ. ಅವರಿಂದ ಯಶವಂತರು ತುಂಬ ದಾರಾಳು ಮನುಷ್ಯ, ಅಪ್ಪ ಸತ್ತ ಮೇಲೆ ಇದ್ದ ಆಸ್ತಿಯಲ್ಲೇ ದಾನ ಧರ್ಮ ಮಾಡಿ ಕಳೆದುಕೊಂಡ, ಸಾಲ ಜಾಸ್ತಿಯಾಗಿ ಮನೆ ಮಾರಿಕೊಂಡು ಬೇರೆ ಊರಿಗೆ ಹೋಗಿ ನೆಲೆಸಿ ಮತ್ತೆ ಕಳೆದುಕೊಂಡ ದುಡ್ದನೆಲ್ಲ ಗಳಿಸಿದ ಮತ್ತೆ ಹೆಂಡತಿ ಮಕ್ಕಳ ಕಾಟದಿಂದ ಮನೆ ಬಿಟ್ಟ ಎಂಬುದು ತಿಳಿಯುತ್ತದೆ. ಪಾರ್ವತಿ ಅಜ್ಜಿಯ ಆಸೆಯಂತೆ ಊರಿನ ದೇವಾಲಯದ ಜೀರ್ಣೋದ್ದಾರ ಮಾಡಿಸಿದ ಮೇಲೆ ಅವರು ಕಣ್ಣು ಮುಚ್ಚುತ್ತಾರೆ. 

ಇದರ ಮಧ್ಯೆ ಯಶವಂತರ ಮಗನಿಗೆ ಅಪ್ಪ ಸತ್ತಿದ ವಿಷಯ ತಿಳಿದು ಅವರು ಕೊಟ್ಟಿರುವ ದುಡ್ಡು ಕೇಳಲು ದಾವೆ ಹಾಕುತ್ತಾನೆ ಮಾತ್ತೆ ಸುಮ್ಮನಾಗುತ್ತನೆ. ಯಶವಂತರ ಹೇಳಿರುವ ಇನ್ನು ಮೂರು ಜನ ಒಬ್ಬ ಅವರ ಅಳಿಯ, ಅವರ ಎರಡನೆಯ ಹೆಂಡತಿಯ ಮಗ ಮತ್ತು ಮಹಾಬಲೇಶ್ವರ ದಲ್ಲಿರುವ ಒಬ್ಬ ಪಂಡಿತರು. ಅವರೆಲ್ಲರು ಯಶವಂತರನ್ನು ಒಳ್ಳೆಯ ಮನುಷ್ಯ ಎಂದು ಹೇಳುವವರೆ. ಇದರೆಲ್ಲದರ ಮಧ್ಯ ಯಶವಂತರ ಹೆಂಡತಿಯ ಮಗಳನ್ನು ಭೇಟಿ ಮಾಡುತ್ತಾರೆ. 

ಕಾರಂತರು ಯಶವಂತರ ಜೀವನವನ್ನು ಪೂರ್ತಿಯಾಗಿ ಆತ್ಮ ಕತೆಯಾಗಿ ಬರೆಯದ್ದಿದ್ದರು ಅವರು ಪಟ್ಟ ಕಷ್ಟ, ಮೋಸಹೋದ ದಿನಗಳು, ಸಹಾಯ ಮಾಡಿದ ಜನರು ಎಲ್ಲವನ್ನು ತುಂಬ ಚೆನ್ನಾಗಿ ಚಿತ್ರಿಸಿದ್ದಾರೆ. ಅವರು ಈ ನಾಲ್ಕು ಜನರನ್ನು ಹುಡುಕಿಕೊಂಡು ಹೋದ ಪ್ರಸಂಗ, ಅವರಿಂದ ತಿಳಿದ ವಿಷಯಗಳು ಮತ್ತು ಅವರು ನೋಡಿದ ದೃಶ್ಯಗಳಿಂದ ಯಶವಂತರ  ಜೀವನವನ್ನು ಪೋಣಿಸುತ್ತಾರೆ. ಇಲ್ಲಿ ಜನರು ದುಡ್ಡಿನ ಹಿಂದೆ ಹೇಗೆ ಓಡುತ್ತಾರೆ, ಅದರಿಂದ ಬರುವ ವ್ಯಮನಸ್ಸು ಅದರಿಂದ ಸಂಭಂದದಲ್ಲಿ ಆಗುವ ಬಿರಿಕು ಎಂಥಹದ್ದು ಎಂದು ಕಾಣುತ್ತಾರೆ. ಇದು ಕಾರಂತರು ಬರೆದಿರುವ 'ಬೆಟ್ಟದೆ ಜೀವ' ಕಾದಂಬರಿಯ ರೀತಿಯಲ್ಲೇ ನಮ್ಮ ಮುಂದೆ ತರುತ್ತಾರೆ. ಒಂದು ಜೀವದ ಹಿಂದೆ ಹತ್ತಾರು ಜೀವಗಳ ಕೈ ಇದ್ದೆ ಇರುತ್ತದೆ ಮತ್ತು ನಾವಾಗಿ ಯಾವುದೇ ಸಂಬಂಧದಿಂದ ಕಳಚಿಕೊಳ್ಳಲಾಗುವುದಿಲ್ಲ ಮಾತು ಜೀವನ ನಡೆಸಿದಂತೆ ನಾವು ನೆಡೆದು ಹೋಗಬೇಕು. 




0 comments:

Post a Comment