Sigiriya - K. N. Ganeshaiah
ಯಾವುದೇ ಪ್ರಮುಖ ಚಾರಿತ್ರಿಕ ಸ್ಥಳಕ್ಕೆ ಭೇಟಿಯಿತ್ತರೂ , ಅಲ್ಲಿನ ಚರಿತ್ರೆಯ ವಿವರಣೆಗಳಲ್ಲಿ ಒಂದಲ್ಲ ಒಂದು gap ಕಾಣುವುದು ಸಹಜ ಇಲ್ಲವೆ ಒಂದಲ್ಲ ಒಂದು ಅನುಮಾನ ಅಥವಾ ಉತ್ತರ ಸಿಗದ ಪ್ರಶ್ನೆ, ಧುತ್ತೆಂದು ಎದುರಾಗುತ್ತದೆ. ಅದಕ್ಕೆ ಉತ್ತರ ಹುಡುಕುತ್ತ ಹೋದಂತೆ, ನಾವು ನಿರೀಷಿಸಿರದ ರಹಸ್ಯಗಳು ನಮ್ಮ ಮುಂದೆ ತೆರೆದುಕೊಳ್ಳತೊಡಗುತ್ತದೆ. ಅಂತಹ ಹುಡುಕಾಟದಲ್ಲಿ ದೊರೆತ ಅಪರಿಚಿತ ವಿವರಗಳನ್ನು ಪರಿಚಿತವಿರುವ ಚರಿತ್ರೆಗೆ ಬೆರೆಸಿ ಕತೆಯೊಂದನ್ನು ಬೆಳೆಸಿದರೆ, ಕತೆಯ ಸೃಷ್ಟಿಯ ಜೊತೆಗೆ ಚರಿತ್ರೆಯನ್ನು ಪುನರಾವಲೋಕನ ಮಾಡಿದಂತಹ ಸಮಾಧಾನವೂ ನಮ್ಮದಾಗುತ್ತದೆ. ಹೀಗೆ ಬೆಳೆದ ಕತೆಯೇ, ಸಿಗೀರಿಯ . ಶ್ರೀಲಂಕಾದ ಯಾತ್ರಾಸ್ಥಳಗಳ ಬಗ್ಗೆ ಓದಿದಾಗಲೆಲ್ಲಾ, ಅತೀವವಾಗಿ ಆಕರ್ಷಿಸಿದ್ದ, ಸಿಗೀರಿಯದ ದುರ್ಗಮ ಬೆಟ್ಟ ಮತ್ತು ಅದರ ಮೇಲಿದ್ದ ಬೌದ್ಧ ವಿಹಾರ ನಮ್ಮನ್ನು ಸದಾ ಕಾಡಿತ್ತು. ಅಲ್ಲಿಗೆ ಹೋದಾಗ ಎದುರಾದ ಪ್ರಶ್ನೆಗಳನ್ನು ಕೆದಕಿದಾಗ ದೊರಕಿದ ಅದ್ಭುತ ವಿವರಗಳು ಈ ಕತೆಯ ವಸ್ತುವಾದವು
ಅಂತಹ ವಸ್ತುಗಳು ಒಮ್ಮೊಮ್ಮೆ ನಮ್ಮ ಹಿತ್ತಲ್ಲೇ ಇರುವ ಸಾಧ್ಯತೆಯೂ ಇದೆ ಎನ್ನುವುದಕ್ಕೆ ಹೊನ್ನಹುಟ್ಟು ಒಂದು ಉದಾಹರಣೆ. ಚಿಕ್ಕ ವಯಸ್ಸಿನಲ್ಲಿ, ನಮ್ಮೂರಿನಲ್ಲಿ ನೋಡಿದ್ದ ಒಬ್ಬ ಬ್ರಿಟೀಷ್ ಅಧಿಕಾರಿಯ ಸಮಾಧಿ, ಅದೇ ಕಾಲದಲ್ಲಿ, ಅಂದರೆ ಎರಡನೆಯ ಮಹಾಯುದ್ದದ ಸಮಯದಲ್ಲಿ, ನಮ್ಮೂರಿನ ಬಾಲಿ ಬೀಡುಬಿಟ್ಟಿದ್ದ ಮಿಲಿಟರಿ ಕ್ಯಾಂಪ್ಗೆ ಒಬ್ಬ ಅಜ್ಜಿ ಹಾಲು ತುಪ್ಪ ಮಾರಿ ಕೆರೆ ಕಟ್ಟಿಸಿದ ಅತಃಕರಣ ಕಳುಕುವ ಘಟನೆ, ಇಂಥಹುಗಳ ಸುತ್ತ ಹೆಣೆದ ಕತೆ ಇದು.
ಜೀವ ವಿಕಾಸವಾದದಲ್ಲಿನ ಕೆಲವು ಅದ್ಬುತ ಆವಿಷ್ಕಾರಗಳನ್ನು ಕೆತೆಗಳ ಮೂಲಕ ತರುವ ಪ್ರಯತ್ನವೆಂದರೆ ನನಗೆ ಸ್ವಲ್ಪ ಹೆಚ್ಚೆ ಎನ್ನಬಹುದು. ಇದಕ್ಕಾಗಿಯೆ ನಾನು ಈ ಮುಂದೆ ಬರೆದ ಹಲವು ಕತೆಗಳಲ್ಲಿ( ಉಗ್ರಬಂಧ, ಕಾರಾಗ ತ್ಯಾಗ, ಮಲಬಾರ್- ೦೭, ದೇಹಾತ್ಮ, ನಿಶಿದ್ದ ಬಂಧ, ....) ಜೀವವಿಕಾಸದ ಕೆಲವು ವಾದಗಳನ್ನು ತರಲು ಪ್ರಯತ್ನಿಸಿದ್ದೇನೆ. ಇಲ್ಲಿನ ಮಮಕಾರದ ಚರಮರಾಗ ದಲ್ಲಿ ಅಂತಹಧೇ ಒಂದು ಪ್ರಯತ್ನ
0 comments:
Post a Comment