Janara Chamatkara - Narashimaiah N
ನಿಮಗೆ ಸಿನೆಮಾ ನೋಡುವ ಅಭ್ಯಾಸವಿದ್ದರೆ ಇಂಗ್ಲಿಷ್ ಭಾಷೆಯ "Strangers On A Train (1951)" ನೋಡಿರಬಹುದು ನೋಡಿಲ್ಲ ಅಂದ್ರೆ ಆ ಕೆಥೆ ಹೇಗೆ ಹೋಗುತ್ತದೆ, ಇಬ್ಬರು ಅಪರಿಚತರು ತಮ್ಮ ಸಂಭಂದಗಳಿಂದ ಬೇಸತ್ತಿರುವ ವಿಚಾರವನ್ನು ಒಬ್ಬರಿಗೊಬ್ಬರು ಹೆಲಿಕೊಲ್ಲುತ್ತಾರೆ, ಆ ಸಂಬಂದಗಳಿಂದ ಮುಕ್ತಿ ಸಿಗಬೇಕಾದರೆ ಅವರರನ್ನು ಕೊಲೆಮಾಡಬೇಕು ಮತ್ತು ಒಬ್ಬರು ಇನ್ನೊಬ್ಬರ ಪತ್ನಿಯನ್ನು ಕೊಂದರೆ ಯಾರಿಗೂ ಅನುಮಾನ ಬರುವುದಿಲ್ಲ ಎಂದು ನಿರದರಿಸುತ್ತಾರೆ. ಇದೆ ಆ ಸಿನಿಮಾ ಕಥೆ. ನರಸಿಂಹಯ್ಯನವರ 'ಜಾಣರ ಚಮತ್ಕಾರ' ಕಾದಂಬರಿಯ ಕಥೆಯು ಸರಿಸುಮಾರು ಇದೆ.
ರೂಪನಗರದಲ್ಲಿ ಎರಡು ಕೊಲೆಯಾಗುತ್ತದೆ, ಎರಡಕ್ಕೂ ಯಾವುದೇ ಸಂಬಂದವಿರುವುದಿಲ್ಲ, ಎರಡು ಕೊಲೆಗಳು ಒಬ್ಬನೇ ಕೊಲೆಗಾರ ಮಾಡಿದನೆಂದು ಪೊಲೀಸರು ಎನಿಸುತ್ತಾರೆ. ಕೊಲೆಗಳು ನೆಡೆದು ಐದು ತಿಂಗಳಾದರೂ ಕೊಲೆಗಾರ ಸಿಗುವುದಿಲ್ಲ, ಯಾವ ಸುಳಿವು ಇಲ್ಲದೆ ಕೊಲೆಗಳು ಆಗಿರುತ್ತಾವೆ. ಎರಡೆನೇ ಕೊಲೆಯಲ್ಲಿ ಬೆರಳಚ್ಚಿನ ಗುರುತು ಇದ್ದರು ಅದು ಯಾರಿಗೂ ಹೊಲಿಕೆಯಾಗುವುದಿಲ್ಲ. ಇದರಿಂದ ಬೇಸತ್ತ ಪತ್ತೇದಾರಿ ಮತ್ತು ಪೋಲಿಸರು ಕೈ ಚೆಲ್ಲಿ ಕೋತಿರುತ್ತಾರೆ. ಆಗಲೇ ಮೂರನೇ ಕೊಲೆಯಾಗುತ್ತದೆ ಆವಾಗ ಪತ್ತೆದಾರ ಮಧುಸೂದನನಿಗೆ ಯಾಕೆ ಈ ಕೊಲೆಗಳು ಒಬ್ಬರನೊಬ್ಬರು ಪರಿಚವಿಲ್ಲದ ಸ್ನೇಹಿತರು ಮಾಡಿರಬಾರದು ಎಂದು ಎನಿಸುತ್ತದೆ. ಅದೇ ಸಂಶಯ ಕೊಲೆಗಾರರನ್ನು ಹಿಡಿಯಲು ನೆರವಾಗುತ್ತದೆ.
0 comments:
Post a Comment