Wednesday, July 23, 2014

Filled Under:
, ,

ಮುಯ್ಯಿಗೆ ಮುಯ್ಯಿ - ಅ. ನ. ಕೃ

Muyyige Muyyee - A Na Krishnaraya



ಒಬ್ಬರ ಏಳಿಗೆ ಕಂಡು ಒಬ್ಬರಿಗೆ ಆಗುವುದಿಲ್ಲ, ಅವರನ್ನು ಹೇಗಾದರೂ ಮಾಡಿ ಮಣ್ಣು ಮುಕ್ಕಿಸಬೇಕು, ಅವರ ಹೆಸರನ್ನು ಹಾಳು ಮಾಡಬೇಕು ಎಂದು ಒಳಗೊಳಗೇ ಮಸಲತ್ತು ಮಾದುತ್ತಿರುತ್ತಾರೆ. ಇದು ಎಲ್ಲ ಕಾಲಕ್ಕೂ ಅನ್ವಯವಾಗುತ್ತದೆ. ಕೆಲವರಿಗೆ ಒಂದು ಸುಖ ಸಂಸಾರ ಕಂಡರೆ ಆಗುವುದಿಲ್ಲ ಅವರ ಸಂಸಾರದಲ್ಲಿ ಹುಲಿ ಹಿಂಡಲು ಹಾತೊರೆಯುತ್ತಿರುತ್ತಾರೆ, ಅವರಿಗೆ ಒಂದು ಸಣ್ಣ ಅವಕಾಶ ಸಿಕ್ಕರೂ ಅದನ್ನು ಉಪಯೋಗಿಸಿ ಚಿಕ್ಕದ್ದನ್ನು ದೊಡ್ಡದ್ದು ಮಾಡಿ, ಗುಡ್ಡವನ್ನು ಬೆಟ್ಟ ಮಾಡಿ, ಇಲಿಯನ್ನು ಹುಲಿ ಮಾಡಿ ಇತರರ ಮುಂದೆ ಸುದ್ದಿ ಹರಡುತ್ತಾರೆ, ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಪ್ರಯತ್ನಿಸುತ್ತಾರೆ. ಆದರೆ ಒಬ್ಬ ಮನುಷ್ಯ ತನ್ನ ಗುಣ ಒಳ್ಳೆಯದಾಗಿದ್ದಲ್ಲಿ, ನಡತೆಯಲ್ಲಿ ಯಾವ ದೋಷ ಇಲ್ಲದ್ದಿದ್ದಲ್ಲಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ, ತಾನಾಹಿತು ತನ್ನ ಕೆಲಸವಾಹಿತು ಎಂದು ಕ್ರಮೇಣ ಸುಳು ಸುದ್ದಿಗಳು ತಣ್ಣಗಾಗಿ ಸುಳ್ಳು ಸುದ್ದಿ ಹಬ್ಬಿಸುವವರ ನಿಜ ಮರ್ಮ ತಿಲಿಯುತ್ತದೆ, ಇದೆ ಅ. ನ. ಕೃ. ರವರ 'ಮುಯ್ಯಿಗೆ ಮುಯ್ಯಿ' ಕಾದಂಬರಿಯ ಎಳೆ. 

ಅ. ನ. ಕೃಷ್ಣರಾಯ ರವರ ಬಹುತೇಕೆ ಕಾದಂಬರಿಗಳು ಸಾಮಜದಲ್ಲಿ ಕಾಡುತ್ತಿರುವ ಸಮಸ್ಯೆಗಳು ಮತ್ತು ಅದನ್ನು ಹೇಗೆ ನಿಭಾಹಿಸಬೇಕು ಎಂಬುದರ ಸುತ್ತ ರಚಿತವಾಗಿವೆ. ಅವರ ಕಾದಂಬರಿ 'ನಗ್ನ ಸತ್ಯ' , 'ಶನಿ ಸಂತಾನ' ಮತ್ತು 'ಸಂಜೆಗತ್ತಲು' ಕಾದಂಬರಿ ವೇಶ್ಯವಾಟಿಕೆ ಕುರಿತಾದರೆ 'ಮುಯ್ಯಿಗೆ ಮುಯ್ಯಿ' , 'ಮಾರ್ಜಾಲ ಸನ್ಯಾಸಿ' ಮಂತ್ರ ತಂತ್ರಗಳ ಸುತ್ತ ಸುಲಿದಾದುತ್ತದೆ. 

'ಮುಯ್ಯಿಗೆ ಮುಯ್ಯಿ' ಕಾದಮ್ಬರಿಯಲ್ಲಿ ಬರುವ ನಾರಾಯಣ ಶಾಸ್ತ್ರಿಗಳು, ನಾಗಪ್ಪ , ಸಂಬು, ಸೀತಮ್ಮ, ಕಾಳಚಾರಿ ಎಲ್ಲ ಈ ಸಮಾಜದ ಒಂದೊಂದು ಮುಖಗಳಾಗಿ ತೊರಿಸಿದ್ದಾರೆ. ನಾರಾಯಣ ಶಾಸ್ತ್ರಿಗಳು ಹುಲ್ಲೂರಿನಲ್ಲೂ ಮತ್ತು ಸುತ್ತ ಮುತ್ತ ಹಳ್ಳಿಗಳಲ್ಲಿ ತುಂಬಾ ಪ್ರಸಿದ್ದರು, ಅವರ ನಡೆ ನುಡಿಗಳು ಮತ್ತು ಶ್ರದ್ದೆ ಇಂದ ಗಳಿಸಿದ ಹೆಸರದು. ಅವರ ಇಬ್ಬರು ಮಕ್ಕಳು ವಿಶ್ವೇಶ್ವರ ಮತ್ತು ಸಾಂಬ, ವಿಶ್ವೇಶ್ವರ ತಡೆ ಹಾಗೆ ಮೃದು ಸ್ವಭಾವ ಅವರ ಹಾದಿಯಲ್ಲೇ ಪೌರೋಹಿತ್ಯ ಮಾಡುತ್ತಿದ್ದಾನೆ ಆದರೆ ಸಾಮ್ಬುಗೆ ಮಂತ್ರ ಇತ್ಯಾದಿಗಳಲ್ಲಿ ಆಸಕ್ತಿ ಇಲ್ಲ. ಇಗೆ ಒಂದು ದಿನ ಪೌರೋಹಿತ್ಯಕ್ಕೆ ಹೋದಾಗ ವಿಶ್ವೇಶ್ವರ ತಮ್ಮ ಸಾಂಬನನ್ನು ಕರೆದುಕೊಂಡು ಹೋದ, ನದಿಯಲ್ಲಿ ಸ್ನಾನ ಮಡಿ ಮುಗಿಸಿದಾಗ ಅವನ ದೇಹದಲ್ಲಿ ನರಸಿಂಹ ಶಾಸ್ತ್ರಿಗಳ ಆತ್ಮ ಸೆರಿಕೊಲ್ಲುತ್ತದೆ. ಈ ವಿಷಯ ಎಲ್ಲ ದಿಕ್ಕುಗಳಲ್ಲಿ ಹಬ್ಬಿ ಅವನ ಹೆಸರು ಗಳಿಸುತ್ತಾನೆ, ಆದರೆ ಇದರಿಂದ ನಾರಯಾಣ ಶಾಸ್ತ್ರಿಗಳಿಗೆ ವಿಶ್ರಾಂತಿ ಇಲ್ಲ, ಅವರು ತಮ್ಮ ಗುರುಗಳಾದ  ನರಸಿಂಹ ಶಾಸ್ತ್ರಿಗಳ ಬಾಲಿ ತಮ್ಮ ದುಃಖ ವನ್ನು ಹೇಳಿಕೊಳ್ಳುತ್ತಾರೆ, ಇದನ್ನು ಕೇಳಿದ ಆತ್ಮ ಸಾಂಬನ ದೇಹವನ್ನು ಬಿಟ್ಟು ಹೊಗುತ್ತದೆ. ಇದನೆಲ್ಲ ನಾಗಪ್ಪ ದೊರದಲ್ಲೇ ನಿಂತು ಗಮನಿಸುತ್ತಿದ್ದ. 

ನಾಗಪ್ಪ ಮತ್ತು ಕಾಳಚಾರಿ ಒಂದು ಕಾಲದಲ್ಲಿ ಸ್ನೇಹಿತರು, ಇವರಿಗೆ ಶ್ರೀಕಂಠಪ್ಪ ಸ್ನೇಹಿತ. ಶ್ರೀಕಂಠಪ್ಪ  ಭದ್ರಮ್ಮನನ್ನು ಮದುವೆಯಾಗುತ್ತನೆ, ನೋಡಲು ತುಂಬಾ ಸುಂದರವಾಗಿ ಕಾಣುವ ಭದ್ರಮ್ಮನನ್ನು ಕಾಳಚಾರಿ ಮೋಹಿಸಲು ಪ್ರಯತ್ನಿಸುತ್ತಾನೆ. ಇದರಿನ ಕೋಪಗೊಂಡ ಶ್ರೀಕಂಠಪ್ಪ ಮತ್ತು ನಾಗಪ್ಪ ಬುದ್ದಿ ಹೇಳಲು ಹೋಗುತ್ತಾರೆ ಆದರೆ ಅದು ಫಲಿಸುವುದಿಲ್ಲ. ಕಾಳಾಚಾರಿ ಮಂತ್ರ ವಿದ್ಯೆಇಂದ ಶ್ರೀಕಂಠಪ್ಪ ನನ್ನು ಕೊಂದು ಭದ್ರಮ್ಮನನ್ನು ವಶೀಕರಣ ಮಾಡಿಕೊಂಡು ಅವನ ಮನೆಯಲ್ಲಿ ಇತ್ತುಕೊನ್ದಿರುತ್ತಾನೆ. ನಾಗಪ್ಪ ಅವನ ವಿರುದ್ದ ಮಂತ್ರ ಪ್ರಯೋಗ ಮಾಡಬಾರದು ಎಂದು ಅವನನ್ನು ಅಂಗ ಊನ್ಯತೆ ನಾಡಿ ಮೂಲೆಗುಂಪ್ಪಾಗಿಸುತ್ತಾನೆ. 

ಕಾಳಾಚಾರಿಯ ಕಾಟ ಹದ್ದುಮೀರಿ ಹೋಗಲು  ನಾರಯಾಣ ಶಾಸ್ತ್ರಿಗಳ  ಬಳಿ ಚಳುವಚಾರ್ರಿ ಬಂದು ಅವರ ಮಗಳನ್ನು ಕಾಪಾಡಲು ಬೆಡಿಕೊಳ್ಳುತ್ತಾನೆ. ಅವನಿಗೆ ಊರ ಪಟೇಲರ ಸಹಾಯ ಪಡೆದು ಪಡುವೆ ಮಾಡಿಸುತ್ತಾರೆ. ಆದರೆ ಕಾಳಾಚಾರಿಯ ಮಂತ್ರ ಪ್ರಯೋಗದಿಂದ ಅವಳನ್ನು ರಕ್ತ ಕಾರಿ ಸಾಯುವಂತೆ ಮಾಡುತ್ತನೆ. ಅದರಿಂದ ನಾರಯಾಣ ಶಾಸ್ತ್ರಿಗಳತುಂಬಾ ಕುಸಿದು ಹೊಗುತ್ತಾರೆ, ಅವಳ ಹತ್ಯೆಗೆ ನಾನೇ ಕಾರಣ ಎಂದು ಮನಸ್ಸಿಗೆ ನೋವು ಮಾದಿಕೊಲ್ಲುತ್ತಾರೆ. ಇದನ್ನು ನೋದದಾಗದೆ ಸಾಂಬ ಕಾಲಚಾರಿಯನ್ನು ಎದುರಿಸಲು ನಾಗಪ್ಪನ ಬಾಲಿ ಮಂತ್ರ ವಿದ್ಯೆ ಕಲಿಯಲು ಬರುತ್ತಾನೆ. ಮುಂದೆ ಇದರಿಂದಾಗುವ ಪರಿಣಾಮ ಮತ್ತು ಕಾಲಾಚಾರಿಯನ್ನು ಹೇಗೆ ಸೋಲಿಸುತ್ತಾನೆ ಮತ್ತು ಇದರಿಂದ ನಾರಯಾಣ ಶಾಸ್ತ್ರಿಗಳ ಮೇಲೆ ಆಗುವ ಪರಿಣಾಮವನ್ನು ಓದಿಯೇ ನೋಡಬೇಕು. 





0 comments:

Post a Comment