Saturday, July 12, 2014

Filled Under:
, ,

ಹೇಮರೆಡ್ಡಿ ಮಲ್ಲಮ್ಮನ ಕಥೆಯು - ಕುಂ. ವೀ.

Hemareddy Mallammana Katheyu - Kum. Verrabadrappa



ನಾವೆಲ್ಲ ಎಲ್ಲಾ ಊರು ಜಾಗಗಳನ್ನು ನೋಡುವುದಕ್ಕೆ ಆಗೋಲ್ಲ, ಒಂದು ಚಿತ್ರ ನೋಡಿದರೆ ಒಂದು ಊರಿನ ಒಂದು ಭಾಗ ನೋಡಬಹುದೇ ಒರತು ಅಲ್ಲಿ ವಾಸಿಸುವ ಜನರ ಜೀವನ, ದಿನಚರಿ ಮತ್ತು ಕಷ್ಟ ಸುಖಗಳುನನ್ನು ತಿಳಿಯಲಾಗುವುದಿಲ್ಲ ಆದರೆ ಒಬ್ಬ ಅತ್ಯುತ್ತಮ ಕಾದಂಬರಿಕಾರ ನಮ್ಮನ್ನು ಒಂದು ಕಾದಂಬರಿಯ ಪಾತ್ರವನ್ನಾಗಿಸಿ ಆ ನಾಡಿನ ಸಂಪೂರ್ಣ ಚಿತ್ರಣವನ್ನು ನಮ್ಮ ಅನುಭವಕ್ಕೆ ತರುತ್ತಾರೆ, ಅಂತ: ಒಂದು ಕಾದಂಬರಿಯೇ ಕುಂ. ವೀ. ಯವರ  "ಹೇಮರೆಡ್ಡಿ ಮಲ್ಲಮ್ಮನ ಕಥೆಯು".

ನಾನು ಹಂಪಿಗೆ ಹೋಗುವಾಗ ಬಳ್ಳಾರಿ ನೋಡಿನೇ ಹೊರತು ಅಲ್ಲಿನ ಜೀವನ ನೋಡಿಲ್ಲ, ಆಂಧ್ರ ಪ್ರದೇಶವನ್ನು ಇನ್ನು ಮುಟ್ಟಿಲ್ಲ ಮತ್ತು ನಕ್ಷಲ್ ಬಗ್ಗೆ ಪೇಪರ್ ನಲ್ಲಿ ಓದಿದೇನೆ ಒರತು ಅವರ ಪ್ರಭಾವ ಗೊತ್ತ್ಲಿಲ್ಲ ಆದರೆ ಈ ಕಾದಂಬರಿ ಓದುವಾಗ ಇದೆಲ್ಲ ನನ್ನ ಕಣ್ಣ ಮುಂದೆ ನೆಡೆದಿ ಎನ್ನುವ ಮಟ್ಟಿಗೆ ಪರಿಣಾಮ ಬೀರಿದೆ. ನನ್ನ ಪ್ರಕಾರ ಈ ರೀತಿ ಅನುಭವ ಕೊಡುವ ಯಾವುದೇ ಭರಹಗಾರ ಒಬ್ಬ ಶ್ರೇಷ್ಠ ಭರಹಗಾರರಲ್ಲಿ ಒಬ್ಬರು. ಅದಕ್ಕೆ ಕನ್ನಡಿಯಂತೆ ಇವರ ‘ಬೇಟೆ’ ಕೃತಿ ‘ಮನಮೆಚ್ಚಿದ ಹುಡುಗಿ’ಯಾಗಿ ಶಿವರಾಜ್  ಕುಮಾರ್  ಗೆ ಹ್ಯಾಟ್ರಿಕ್ ಹೀರೊ ಪಟ್ಟ ತಂದುಕೊಟ್ಟಿದೆ, ‘ಬೇಲಿಯ ಹೂಗಳು’ ‘ದೊರೆ’ಯಾಗಿದೆ, ‘ಕೆಂಡದ ಮಳೆ ಗೆರೆವಲ್ಲಿ ಉದಕವಾಗಿದ್ದವರ ಕಥೆ’ ‘ಕೆಂಡದ ಮಳೆ’ಯಾಗಿದೆ, ‘ಕೊಟ್ರ ಹೈಸ್ಕೂಲಿಗೆ ಸೇರಿದ್ದು’ ‘ಕೊಟ್ರೇಶಿಯ ಕನಸು’ ಆಗಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರವೆಂಬ ರಾಷ್ಟ್ರೀಯ ಹೆಗ್ಗಳಿಕೆಗೆ ಭಾಜನವಾಗಿದೆ, ‘ಕೂರ್ಮಾವತಾರ’ವೂ ಚಲನಚಿತ್ರವಾಗಿ  ಕೇಂದ್ರ ರಜತ ಕಮಲ ಪ್ರಶಸ್ತಿಯನ್ನು ಪಡೆದುಕೊಂಡಿದೆ, ಅವರ ‘ಅರಮನೆ’ ಕಾದಂಬರಿಗೆ 2007ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ತೆಲುಗಿನ 150 ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದು ಕೇಂದ್ರ ಸಾಹಿತ್ಯ ಅಕಾಡೆಮಿಯೇ ಅವುಗಳನ್ನು ಪ್ರಕಟ ಮಾಡಿದೆ.


ಈ ಕಾದಂಬರಿಯಲ್ಲಿ ಎರಡು ಕಾದಂಬರಿ ಇದೆ,  ಬೇರೆ ಬೇರೆ ಯಲ್ಲ  ಒಂದರೊಳಗೊಂದು. ಈ ಕಾದಂಬರಿಯಲ್ಲಿ ಬರುವ ಮೇಸ್ಟ್ರು ಅವರ ಸುತ್ತ ಮುತ್ತ ನಡೆಯುವ ಘಟನೆಗಳನ್ನು ಆದರಿಸಿ ಒಂದು ಕಾದಂಬರಿ ಬರೆಯುತ್ತಿರುತ್ತಾರೆ. ಇಲ್ಲಿನ ಕಥೆ ಕರ್ನಾಟಕ ಮತ್ತು ಆಂಧ್ರ ಗಾಡಿಯಲ್ಲಿ ಇರುವ ಕುಗ್ರಾಮ ವಾಗಿಲಿಯ ಸುತ್ತ ಮುತ್ತು ನೆಡೆಯುತ್ತದೆ. ಅಲ್ಲಿನ ಬಡತನ, ಶ್ರೀಮಂತರ ದಬ್ಬಾಳಿಕೆ, ಹಿಂದುಳಿದ ಜನರ ಅವಿದ್ಯಾವಂತಿಕೆ ಎಲ್ಲವನ್ನು ನಮ್ಮ ಎದುರಿದೆ ನಡೆಯುತ್ತಿದೆ ಎನ್ನುವಷ್ಟು ಸುಚಿತ್ರವಾಗಿ ಚಿತ್ರಿಸಿದ್ದಾರೆ. ಅಲ್ಲಿ ಇರುವ ನಕ್ಸಲ್ ವಾದಿಗಳು, ಕೊಲೆಗಾರರು, ಪೋಲಿಸರು, ರಾಜಕಾರಣಿಗಳು ತಮ್ಮ ತಮ್ಮ ಸ್ವರ್ತದ ಬುದ್ದಿಯಿಂದ ವಾಗಿಲಿಯನ್ನು ಇನ್ನು ಕುಗ್ರಾಮವಾಗಿ ಇರಿಸಿರುವರು, ಅಲ್ಲಿಗೆ ಬರುವ ಜಲದರನ ನಾಟಕದ ಕಂಪನಿ ಇದನ್ನು ಹೇಗೆ ಬದಲಾಯಿಸುತ್ತದೆ ಜನರು ಹೇಗೆ ಬದಲಾಗುತ್ತಾರೆ ಮತ್ತು ವಾಗಿಲಿಯ ಪ್ರಗತಿಯ ಬಾಗಿಲು ಹೇಗೆ ತೆಗೆಯುತ್ತದೆ ಎಂದು ಟೀಚರ್ ದೃಷ್ಟಿಯಲ್ಲಿ ತೊರಿಸಿದ್ದಾರೆ.

ಇದರಲ್ಲಿ ಬರುವ ಸನಿವೇಶಗಳು ನಾವು ನಮ್ಮ ಸುತ್ತ ಮುತ್ತ ಇಗಲು ನೋಡಬಹುದು, ಲಂಚಕೋರರು, ಕೊಲೆಗಾರರು, ಬುಟಾಟಿಕೆಯ ಸ್ವಾಮಿಗಳು, ಕಳ್ಳರು, ಇವೆಲ್ಲ ಕುಗ್ರಾದಲ್ಲೇ ಅಲ್ಲ ನಮ್ಮು ಊರಿನಲ್ಲೂ ನಡೆಯುತ್ತಿದೆ ಮತ್ತು ಮುಂದೇನು ನಡೆಯುತ್ತಿರುತ್ತದೆ ಇದನ್ನು ಎಲ್ಲ ಮೀರಿ ನಾವು ಹೇಗೆ ಬಾಳಬೇಕು ಮತ್ತು ನಮ್ಮ ಸುತ್ತ ಮುತ್ತ ಇರುವವರನ್ನು ನಮ್ಮ ಜೊತೆ ಹೇಗೆ ಏಳಿಗೆಯ ಕಡೆದೆ ಕರೆದು ಕೊಂದು ಹೋಗಬೇಕು ಎನ್ನುವುದನ್ನು ಇಲ್ಲಿ ಸ್ಕೂಲ್ ಟೀಚರ್ ಮೂಲಕ ಹೇಳಿಸಿದ್ದಾರೆ.




0 comments:

Post a Comment