Heli Hogu Karana - Ravi Belegere
ಕೆಲವೊಮ್ಮೆ ಈ ರೀತಿ ಹಾಗುತ್ತದೆ, ತುಂಬಾ ಆಸೆ ಇಟ್ಟುಕೊಳ್ಳದೆ ಹೋದ ಚಿತ್ರ ಚೆನ್ನಾಗಿ ಮತ್ತೆ ತುಂಬಾ ಆಸೆ ಇಟ್ಟುಕೊಂಡ ಚಿತ್ರ ಸಪ್ಪೆಯಾಗುತ್ತದೆ. ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಮೊದಲೆನಯ ಸಾಲಿಗೆ ಸೇರುತ್ತದೆ. ಬೆಳೆಗೆರೆಯವರ ಕಾದಂಬರಿಗಳಲ್ಲಿ ಓದಿದ ಮೊದಲೆಯದು ಇದು. ನಾನು ತುಂಬಾನೇ ಅಂದ್ರೆ ತುಂಬಾನೆ ಆಂಗ್ಲ ಚಿತ್ರಗಳನ್ನು ನೋಡುತ್ತೇನೆ, ಈ ಕಾದಂಬರಿಯನ್ನು ಅಲ್ಲಿನ ಚಿತ್ರಗಳಿಗೆ ಹೋಲಿಸಿ ಹೇಳುವುದಾದರೆ, "Guilty Pleasure" ಚಿತ್ರದ ರೀತಿ. ಭೈರಪ್ಪನವರ ಕಾದಂಬರಿಗಳು ಜೇಮ್ಸ್ ಕ್ಯಾಮೆರೋನ್ ಮಾಡೋ ಚಿತ್ರಗಳ ಹಾಗೆ, ಮತ್ತು ಬೆಳೆಗೆರೆರವರ ಕಾದಂಬರಿಗಳು ಜಸ್ಟಿನ್ ಲಿನ್ ಚಿತ್ರಗಳ ರೀತಿ.
ಅಧುನಿಕ ಜಗತ್ತಿನ ಪ್ರೀತಿ, ಪ್ರೇಮ, ಜಗಳ, ಕಾಮ, ಕ್ರೋಧ ಎಲ್ಲಾವನ್ನು ನಮ್ಮಂಥವರ ಮನ ತಟ್ಟುವ ರೀತಿ ತುಂಬ ಚೆನ್ನಾಗಿ ಬರೆದಿದ್ದಾರೆ. ಹಿಮವಂತ ಬಡವನಾದರೂ ವ್ಯಕ್ತಿತ್ವ ಒಳ್ಳೆಯದು ಪ್ರಾರ್ಥನಾನನ್ನು ಡಾಕ್ಟರ ಓದಿಸಲು ದಿನ ರಾತ್ರಿ ದುಡಿಯುತ್ತ, ಹಗಲು ರಾತ್ರಿ ಅವಳ ನೆನಪಲ್ಲಿ ಕಳೆಯುತ್ತಾ ತನ್ನ ಮೋದಿನ ಜೀವನ ಬಗ್ಗೆ ಯೋಚಿಸುತ್ತಾನೆ. ಪ್ರಾರ್ಥನಾ ಹಿಮವಂತ ಕಷ್ಟಪಟ್ಟು ದುಡಿದು ಕೊಟ್ಟ ದುಡ್ಡಿನಿಂದ ದಾವಣಗೆರೆಯಲ್ಲಿ ಡಾಕ್ಟರ ಸೇರುತ್ತಾಳೆ. ಪ್ರಾರ್ಥನಾ ಹಾಸ್ಟೆಲ್ ನಲ್ಲಿ ಊರ್ಮಿಳ ಮತ್ತು ದೇಬಶಿಶ್ ಪರಿಚಯವಾಗುತ್ತದೆ. ಊರ್ಮಿಳ ಆಧುನಿಕ ಜಗತ್ತಿನ ದಿಟ್ಟ ಹುಡುಗಿ, ಸಿಗರೆಟ್ ಸೇದುತ್ತಾಳೆ, ವಾರಕೊಮ್ಮೆ ಕುಡಿಯುತ್ತಾಳೆ, ತಾನು ಯಾವ ಹುಡುಗರಿಗೂ ಕಮ್ಮಿಯಿಲ್ಲ ಅನ್ನೋ ರೀತಿಯಲ್ಲಿ ಜೀವನ ಸಾಗಿಸುತ್ತಾಳೆ. ಪ್ರಾರ್ಥನಾ ದೇಬಶಿಶ್ ಸಗಾತದಿಂದ ಬದಲಾಗುತ್ತಾಳೆ, ಇತ್ತ ಊರ್ಮಿಳ ಹಿಮವಂಥನ ಪರಿಚಯದಿಂದ ಬದಲಾಗುತ್ತಾಳೆ.
ಇಲ್ಲಿ ಪಾತ್ರಗಳ ಮೊಸವಿದೆ, ಕಾಮದ ವಾಸನೆಯಿದೆ, ಮನಸ್ಸಿನ ಗಟ್ಟಿತನವಿದೆ, ಸಾದಿಸಬೇಕೆಂಬ ಛಲವಿದೆ, ಆಹಂಕಾರವಿದೆ, ಬಲೆಗೆ ಬೀಳಿಸುವ ತಂತ್ರವಿದೆ. ಎಲ್ಲ ವರ್ಗದ ಓದುಗರಿಗೆ ಎನುಬೇಕೋ ಅದ್ದೆಲ್ಲಾ ಇದೆ.
ಮಾಟಾ ಮಂತ್ರ ಕೂಡ ಇದೆ. ಇದಿಲ್ಲದಿದ್ದರು ಕಾದಂಬರಿ ಚೆನಾಗಿರುತ್ತಿತ್ತು, ಇದರಿಂದ ಮತ್ತು ಕೆಲವು ವಿಷಯಗಳಿಂದ ಇದು ವಾಸ್ತವಕ್ಕೆ ಸ್ವಲ್ಪ ದೂರ ಅನಿಸುವುದುಂಟು. ಆದರೆ ಎಲ್ಲ ಹುಡುಗರು ತಾನು ಹಿಮವಂತ ಮತ್ತು ಬಿಟ್ಟು ಹೋದ ಹುಡುಗಿ ಪ್ರಾರ್ಥನಾ ಅನುಸುವುದರಲ್ಲಿ ಸಂಶಯವಿಲ್ಲ.
0 comments:
Post a Comment