Tuesday, September 11, 2012

ಚಿದಂಬರ ರಹಸ್ಯ - ಪೂರ್ಣಚಂದ್ರ ತೇಜಸ್ವಿ

Chidambara Rahashya - K. P. Poornachandra Tejasvi


ಕ್ರಾಂತಿ, ಜಾತಿ ವೈಶಮ್ಯಾ, ಪ್ರೀತಿ, ಸ್ನೇಹ, ರಾಜಕೀಯ, ವಿದ್ಯೆ, ಸಾಮಾಜಿಕ ಅಸಮತೋಲನ ಮತ್ತು ವೈರುತ್ವ..... ಈ ಎಲ್ಲವನ್ನು ಒಂದು ಕಾದಂಬರಿಯಲ್ಲಿ ನೋಡಬೇಕಾದರೆ ನೀವು ಚಿದಂಬರ ರಹಸ್ಯವನ್ನು ಓದಲೇಬೇಕು. ಎಲ್ಲಾ ವಿಷಯಗಳನ್ನು ಎಲ್ಲೂ ಜಾಸ್ತಿ ಕಮ್ಮಿ ಆಗದಂತೆ ಅರ್ಥಗರ್ಬಿತವಾಗಿ ಸೊಗಸಾಗಿ ಪ್ರಕೃತಿಯ ಮಧ್ಯದಲ್ಲಿ ನಡೆಯುವ ಘಟನೆ, ದುರ್ಗತನೆಗಳನ್ನು ಈ ಕಾದಂಬರಿಯಲ್ಲಿ ಕಣ್ಣಿಗೆ ಕಟ್ಟಿದಹಾಗೆ ಹೇಳುತ್ತಾರೆ. ಇದು ಪತ್ತೇದಾರಿ ಕಾದಂಬರಿ ರೀತಿ ಮೊದಮೊದಲು ಅನಿಸಿದರು ಇದು ಪತ್ತೇದಾರಿ ಕಾದಂಬರಿಯಲ್ಲ, ಸ್ವಲ್ಪ ಹಾಳೆಗಳನ್ನು ತಿರುವಿದ ಮೇಲೆ ಇದು ಜನರ ಜಾತಿ ವೈಶಮ್ಯಾ ಕಾದಂಬರಿ ಅನಿಸಿದರು ಇದು ಆ ರೀತಿಯ ಕಾದಂಬರಿಯಲ್ಲ, ಮತ್ತೆ ಮೂಡನಂಬಿಕೆ, ಅಂತರ ಜಾತಿಯಾ ಪ್ರೀತಿ, ಸ್ನೇಹ ಅಂತ ಒಂದೊಂದು ಹಂತದಲ್ಲಿ ಅನಿಸಿದರು ಕೊನೆಯಲ್ಲಿ ನಮಗೆ ಅನಿಸುವುದು ಇದು ಇವೆಲ್ಲ ವಿಷಯಗಳನ್ನು ಒಳಗೊಂಡ ಒಂದು ಸಮಗ್ರ ಸಂಗ್ರಹ ಪುಸ್ತಕ.


ಚಿದಂಬರ ರಹಸ್ಯ ನಾಲ್ಕು ಸ್ನೇಹಿತರ(ರಾಮಪ್ಪ, ಚಂದ್ರ, ರಮೇಶ ಮತ್ತು ಜೋಸೆಫ್) ಕ್ರಾಂತಿಂದ ಶುರುವಾಗಿ, ಅಂಗಾಡಿ ಯಾಲಕ್ಕಿ ಕೃಷಿ ಉತ್ಪಾದನೆಯ ಕುಸಿತದ ಕಾರಣಗಳನ್ನು ಪತ್ತೆಹಚ್ಚಲು ಶುರುಮಾಡಿ ಜೋಗಿಹಾಳ್ರವರ ಸಾವಿನ ಸುತ್ತ ಇರುವ ಸಂಶಯಗಳನ್ನು ಹುಡುಕುತ್ತಾ, ಕೃಷ್ಣೇಗೌಡರ ಮನೆ ಮೇಲೆ ಬೀಳುವ ಕಲ್ಲುಗಳನ್ನು ಯಾರಿಂದ ಅಥವಾ ಅವರ ಆಳುಗಳು ಹೇಳುವಂತೆ ದೆವ್ವ ಬೂತಗಳಿಂದ ಅಂತನಾ ಎಂದು ತಲೆ ಬಿಸಿಲಲ್ಲಿದ್ದರೆ, ಊರಿನಲ್ಲಿ ಜಾಸ್ತಿಯಾಗುತ್ತಿರುವ ಮರಗಳ ಕಳ್ಳ ಸಾಗಣೆ ಮತ್ತು ಮುಸಲ್ಮಾನರ ಜನಸಂಖ್ಯೆ, ಸುಲೇಮಾನ್ ಬೇರಿಂದ ಅಂದಕ್ಕೆ ಅವನ್ನನ್ನು ಮಟ್ಟಾ ಹಾಕಬೇಕೆಂದು ರೂಪು ರೆಷೆಗಾನ್ನು ರಚಿಸುತ್ತಿರುವ ಆಚಾರಿ,  ಕಾಲೇಜಿನ ಅವಾಂತರಗಳು, ಪಟೇಲರ ನಾಸ್ತಿಕತೆ ಮತ್ತು ಅವರ ಯಲ್ಲಕ್ಕಿ ಹ್ಯಬ್ರಿಡಿನ ಹುಡುಕಾಟ, ಇವೆಲ್ಲದುರ ಮಧ್ಯೆ ರಫಿ ಮತ್ತು ಜಯಂತಿಯ ಪ್ರೀತಿ. ಇಲ್ಲಿ ತೇಜಸ್ವಿಯವರೇ ಕಥಾ ನಾಯಕರು ಯಾಕೆಂದರೆ ಅವರ ಶಬ್ದ ಪ್ರಯೋಗ, ಪಾತ್ರಗಳ ಸಂಬಂಧ ಜೋಡಣೆ, ಮತ್ತು ಸ್ಥಿತಿಗೆ ಪೂರಕವಾಗಿ ಬಳಸುವ ವಿಚಾರಗಳು ಯಾವ ಕಾದಂಬರಿಕಾರನನ್ನು ನಾಚಿಸುವನತದ್ದು.


ನಾನು ಓದಿರುವ ಯಾವ ಕಾದಂಬರಿಗಳಲ್ಲೂ ಇಷ್ಟು ಪತ್ರಗಳನ್ನು ಇಟ್ಟುಕೊಂಡು ಯಾವ ವ್ಯಕ್ತಿ ವಿಚಾರವು ವ್ಯತ್ಯ ವಾಗದಂತೆ ನೋಡಿಕೊಂಡಿರುವುದು ಇದೆ ಕಾದಂಬರಿಯಲ್ಲಿ, ತೇಜಸ್ವಿ ಒಬ್ಬರೇ ಇದನ್ನು ಮಾಡಲು ಶಕ್ಯ ವ್ಯಕ್ತಿಯಂತೆ ಅನಿಸುತ್ತದೆ. ಪ್ರಕೃತಿ ಮತ್ತು ಮನುಷ್ಯ ಪ್ರಾಣಿಯ ತುಚ್ಚ ಕಾರಣಗಳ ಹೊಡೆದಾಟಗಳ ಮಧ್ಯೆ ಪ್ರೀತಿ ಅರಳುವುದನ್ನು ನೋಡಬೇಕಾದರೆ ಈ ಕಾದಂಬರಿಯನ್ನು ಮೊದಲು ಓದಿ.


ಕಾದಂಬರಿಯಾ ಒಂದು ತುಣುಕು


ವೈರಫಿ ಮೆಲ್ಲಗೆ ಅವಳ ಆಲಿಂಗನವನ್ನು ಸಡಿಲಿಸಿ ಬಾಗಿ ಅವಳ ಲಂಗ ಕೊಂಚ ಎತ್ತಿದ. ಜಯಂತಿಗೆ ಸ್ವಲ್ಪ ಗಾಬರಿಯಾಯ್ತು . ರಫಿ ಬಿಡುಗಣ್ಣಿನಿಂದ ಅವಳ ದಂತದಂಥ ಕಾಲುಗಳನ್ನು ಒಮ್ಮೆ ನೋಡಿ ಲಂಗ ಬಿಟ್ಟ. ಜಯಂತಿ ನಕ್ಕಳು. ರಫಿಯೂ ನಕ್ಕ.

"ಏನು ರಫಿ?" ಎಂದಳು.

"ಎನಿಲಪ್ಪ" ಎಂದ ರಫಿ.

"ಅಲ್ಲ ಯಾಕೆ ಬಿಟ್ಟಿಟ್ಟೆ? ಬಯ್ತೀನಿ ಅಂತನ?"

"ಇಲ್ಲ ಜಯಂತಿ. ನೀನು ನನಗೆ ಸಿಕ್ಕಿದಿಯಾ ಅಂತ ಏನು ಮಾಡಿದ್ರೂ ನಂಬಿಕೇನೆ ಬರ್ತಿಲ್ಲ. ನನ್ನ ಫ್ರೆಂಡ್ಸ್ ಗೂ ಅಷ್ಟೇ. ಮೊನ್ನೆ ರಾತ್ರಿ ನನ್ನ ತಬ್ಬಿದ್ದು, ಮೋಹಿನಿ ದೆವ್ವಾ ಇರಬೇಕು ಅಂತ ಕೊನೆಗೆ ತೀರ್ಮಾನ ಮಾಡಿದ್ರು ಅವರೆಲ್ಲ. ಕಾಲು ತಿರುಗಾ ಮುರುಗಾ ಇತ್ತೋ ಸರಿಯಗಿತ್ತ್ಹೋ ನೋಡಿದಿಯೇನೋ ಅಂತ ಬಯ್ದರು. ಅದಕ್ಕೆ ಇವತ್ರು ನೋಡಿದ್ದು."
 


0 comments:

Post a Comment