Mookajjiya Kanasugalu - Shivarama Karanth
ಈ ಕಾದಂಬರಿ ನಾನು ಎರಡೇ ದಿನಗಳಲ್ಲಿ ಮುಗಿಸಿದ್ದು, ನಾನು ನನ್ನ ಬಗ್ಗೆ ಹೊಗಳುವುದಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಕಾದಂಬರಿಯಾ ಹಿಡಿತ, ಮುಂದೆ ಏನಾಗುತದೆ ಎಂದು ತಿಳಿಯುವ ತವಕ, ಮತ್ತು ಕಾರಂತರ ಬರವಣೆಗೆಯಾ ಮೋಡಿ ಅಂತಹದ್ದು. ಈ ಕಾದಂಬರಿಗೆ ಜ್ಞಾನ ಪೀಠ ಪ್ರಶಸ್ತಿ ಸಿಕ್ಕಿರುವುದಕ್ಕೆ ಕಾದಂಬರಿಗೆ ಸಂದ ತಕ್ಕ ಪ್ರಶಸ್ತಿ ಎಂದು ಹೇಳಬಲ್ಲೆ. ಕಾರಂತರು ಮುನ್ನುಡಿಯಲ್ಲಿ ಇಲ್ಲಿ ಯಾರು ನಾಯಕರಲ್ಲ, ನಾಯಕಿಯರಿಲ್ಲ, ಮೂಕಜ್ಜಿಯು ಸಹ ನಾಯಕಿಯಲ್ಲ ಎಂದು ಹೇಳುತ್ತಾರೆ. ಈ ಕಾದಂಬರಿಯಲ್ಲಿ ಎಲ್ಲ ಜನರು ಪ್ರಮುಖ ಪಾತ್ರವನ್ನು ಒಂದೊಂದು ಕಡೆ, ಒಂದೊಂದು ಬಾರಿ ವಹಿಸಿಕೊಳ್ಳುತ್ತಾರೆ, ಅದಕ್ಕೆ ಇರಬೇಕು ಕಾರಂತರು ಈ ಕಾದಂಬರಿಗೆ ಯಾವ ನಾಯಕ, ನಾಯಕಿ ಇಲ್ಲ ಅಂತ ಹೇಳಿರಬಹುದು.
ಇಲ್ಲಿ ಮೂಕಜ್ಜಿಯು ತನ್ನ ಮೊಮ್ಮಗನಿಗೆ ದೇವರು ಒಬ್ಬನೇ, ಜನರು ತಮ್ಮ ತಮ್ಮ ಸ್ವಾರ್ಥಕ್ಕೆ ಬೇರೆ ಬೇರೆ ಹೆಸರುಗಳನ್ನ ಕೊಟ್ಟು, ದೇವರ ಹೆಸರಲ್ಲಿ ಅನಾಚಾರ, ಯುದ್ಧ, ಮತ್ತು ಸಮಾಜವನ್ನು ಒಡೆಯುತ್ತ ಹೇಗೆ ಬಂದರು ಅಂತ ಹೇಳುತ್ತಾರೆ. ಅಜ್ಜಿಯು ಗಂಡು ಹೆಣ್ಣಿನ ಪ್ರೀತಿ, ಪ್ರೇಮ, ಕಾಮ, ಕರ್ಮ, ಕರ್ತವ್ಯದ ಬಗ್ಗೆ ಹೇಳುವ ಮಾತು ಎಲ್ಲರಿಗೂ ಕಣ್ಣು ತೆರುಸುವಂತದ್ದು. ಅವರಿಗೆ ಬೂತ, ವರ್ತಮಾನ, ಭವಿಷ್ಯ ಎಲ್ಲ ಗೊತ್ತು ಆದರು ಅವರು ಆಕಾಶಕ್ಕೆ ಏಣಿ ಹಾಕಿ ಕೂರುವುದಿಲ್ಲ, ಅವರು ಸಮಾಜದ ಅಂಧರನ್ನು ಸರಿಯಾಗಿ ದಾರಿ ತೋರಿಸುಲು ಪ್ರಯತ್ನಿಸುತ್ತಾರೆ.
ಯಾವುದೇ ಪುಸ್ತಕ ಪ್ರೇಮಿಯು ಓದಬೇಕಿರುವ ಒಂದು ವಿಶಿಷ್ಟ, ಚಿರಂಜೀವಿ ಕಾದಂಬರಿ ಇದಾಗಿದೆ.
0 comments:
Post a Comment