Sunday, September 16, 2012

ಜುಗಾರಿ ಕ್ರಾಸ್ - ಪೂರ್ಣಚಂದ್ರ ತೇಜಸ್ವಿ

 Jugari Cross - K. P. Poornachandra Tejasvi





ಒಂದು ಒಳ್ಳೆಯ ಪತ್ತೇದಾರಿ ಕಾದಂಬರಿಗೆ ಬೇಕಾದ ಎಲ್ಲಾ ರುಚಿಗಳು ಈ ಕಾದಂಬರಿಯಲ್ಲಿ ಸಿಗುತ್ತದೆ. ಪ್ರೀತಿ, ಹಣ, ದರೋಡೆಕೋರರು, ವಂಚನೆ, ಕೊಲೆ, ಮೋಸ ಮತ್ತು ಬಹುಮುಕ್ಯವಾದ ನಿಧಿಯಾ ರಹಸ್ಯ. ಜುಗಾರಿ ಕ್ರಾಸ್ ನಾನು ಓದಿದ ತೇಜಸ್ವಿಯವರ ಎರಡನೇ ಕಾದಂಬರಿ. ಇದು ಓದಲು ಶುರು ಮಾಡುವವರು ಮುಗಿಸುವುದರ ಮೊದಲು ಪುಸ್ತಕವನ್ನು ಮುಚ್ಚಿಡಲು ಆಗುವುದಿಲ್ಲ ಯಾಕೆಂದರ ಈ ಕಾದಂಬರಿ ಆ ರೀತಿಯ ಉಸ್ತುಕತೆಯನ್ನು ನಮ್ಮ ಮನದಲ್ಲಿ ಸೃಷ್ಟಿಸುತ್ತದೆ.

ಜುಗಾರಿ ಕ್ರಾಸ್, ಕಾಡಿನ ನಡುವೆ ಬಂದು ಕೂಡುವ ನಾಲ್ಕು ದಾರಿಗಳ ಸರ್ಕಲ್. ಈ ಕಾಡಿನ ಮಧ್ಯೆ ಇರುವ ಜಾಗಕ್ಕೆ ಯಾಕೆ ಜುಗಾರಿ ಕ್ರಾಸ್ ಅಂತ ಹೆಸರಿಟ್ಟಿದ್ದಾರೆ ಅಂತ ನಾವು ಕಾದಂಬರಿ ನಡುವೆ ಗೊತ್ತಾಗುತ್ತದೆ, ಇಲ್ಲಿ ಕಾಡಿನಲ್ಲಿ ನೆಡೆವುವ ಕಳ್ಳ ಸಾಗಣೆ , ಕಳ್ಳ ಬಟ್ಟಿ, ಪೋಲೀಸರ ಲಂಚಕೊರಿಕೆ, ಈ ಕಾರಣಗಳೇ ಇದಕ್ಕೆ ಆ ಹೆಸರು. ಇಲ್ಲಿ ಬಂದುಹೋಗುವ ಸಣ್ಣ ಸಣ್ಣ ಪಾತ್ರಗಳು, ಮಾತಾಡದ ದ್ಯಾವಮ್ಮ ಮಗಳು, ದೇವಪುರದ ಸಿದ್ದಪ್ಪ, ಅಬ್ಬುಸಾಲಿ, ಈ ಕಥೆಯ ಮುಖ್ಯ ಭಾಗವಗುತ್ತಾರೆ. ಕಥೆಯ ನಾಯಕ ಮತ್ತು ನಾಯಕಿಯಂತಿರುವ ಸುರೇಶ, ಗೌರಿ,  ತೇಜಸ್ವಿಯವರು ಸಮಾಜದಲ್ಲಿ ಆಗುತ್ತಿರುವ ಅನ್ಯಾಯ, ಅಕ್ರಮ, ಅನಾಚಾರಗಳ ವಿಸ್ತೃತ ಚಿತ್ರಣದಲ್ಲಿ ಮೂಕ ಪ್ರೆಕ್ಷಕರಾಗುತ್ತಾರೆ .

ಅರಣ್ಯ ಅಧಿಕಾರಿಗಳು ಲಂಚ ಕೊಡಲೆಂದು ಜನರಿಗೆ ಕೊಡುವ ಕಾಟ, ಫೋನಿನಲ್ಲೇ ನಡಯುವ ಕಳ್ಳ ದಂದೆಗಳು, ಸರ್ಕಾರದ ಹಾರಜಿನಲ್ಲಿ ನೆಡುವ ಗಂಡಾಗುಂಡಿ, ತೆರಿಗೆ ಉಳಿಸಲು ಅಡ್ಡ ದಾರಿ ಇಡುವ ರೈತರು, ದುಡ್ಡಿಗಾಗಿ ಬಡ ರೈತರ ಜೀವ ಹಿಂಡುವ ದಲ್ಲಾಳಿಗಳನ್ನು ತೇಜಸ್ವಿಯವರು ಮನ ಮುಟ್ಟುವಂತೆ ಹೇಳುತ್ತಾರೆ.

ಸುರೇಶನು ತಾನು ಮಾರಿದ್ದ ಅರವತ್ತು ಸಾವಿರದ ಏಲಕ್ಕಿಗೆ ಜೀವನ್ ಲಾಲನು ಯಾಕೆ ಒಂದು ಲಕ್ಷದ ಅರವತ್ತು ಸಾವಿರ ಕೊಟ್ಟು ಅಂತ ಯೋಚಿಸುತ್ತಿರುವಾಗ ಶೆಸಪ್ಪನ ಕೊಲೆ ಯಾಗುತ್ತದೆ (ಕೊನೆಯಲ್ಲಿ ಅದು ಬರಿ ಕೊಲೆಯ ಹಲ್ಲೆ ಅಂತ ತಿಳಿಯುತ್ತೆ). ಸುರೇಶನ ಹಳೆಯ ಮಿತ್ರ ರಾಜಪ್ಪ ಸಿಕ್ಕಿ ಅವನು ಮಾಡುತ್ತಿರುವ ಹಳೆಗನ್ನಡ ಅನುವಾದಕ್ಕೆ ಇವನ ಸಹಾಯ ಕೋರಿ ಕೊಡುವ ಲಿಪಿಯನ್ನು ಓದಿದಾಗ ಕೆಂಪು ಕಾಲಿನ ರತ್ನದ ಜಾಗಕ್ಕೆ ಅದು ನಕ್ಷೆ ಎಂದು ತಿಳಿಯುದರಲ್ಲಿ ದುಡ್ಡು ದೊಜಲು ಶಾಸ್ತ್ರೀ ಕಳಿಸಿದ್ದ ಗೂಂಡಗಳಿಗೆ ಹೆದರಿ ಚಲಿಸುವ ಟ್ರೈನಿನಿಂದ ಹಾರುತ್ತಾರೆ.

ಇದೊಂದು ೨೪ ಗಂಟೆಯಲ್ಲಿ ನಡಯುವ ಘಟನೆಗಳನ್ನು ತೇಜಸ್ವಿಯವರು ಎಲ್ಲೂ ಬೇಸರವಾಗದಂತೆ ವಿವರಿಸಿದ್ದಾರೆ.




0 comments:

Post a Comment