Monday, February 16, 2015

ಗೌರ್ಮೆಂಟ್ ಬ್ರಾಹ್ಮಣ - ಅರವಿಂದ ಮಾಲಗತ್ತಿ

Government Brahmana  - Aravinda Malagatti    

 



ನಮ್ಮ ಸ್ನೇಹಿತ ನಮ್ಮ ಹತ್ತಿರ ಅವನ ಕಷ್ಟ ಹೇಳಿಕೊಂಡಾಗ ನಾವು ತಿಳಿದೋ ತಿಳಿಯದೆಯೋ "ನನಗೆ ಅರ್ಥವಾದುತ್ತೆ " ಎಂದು ಉದ್ಗರಿಸುವೆವು. ವಾಸ್ತವವಾಗಿ ನಮಗೆ ಅವರ ಕಷ್ಟದ ನಿಜವಾದ ಆಳ ಮತ್ತು ಅವನ ಸಂಕಟ ತಿಳಿಯುವುದಿಲ್ಲ, ನಮಗೂ ಅದೇ ರೀತಿಯ ಸನ್ನಿವೇಶ ಎದುರಾದರು ಎರಡು ಒಂದೆಯಲ್ಲ. ನಾವು ಬೇರೆಯವರ ಕಷ್ಟದ ಸನ್ನಿವೇಶಗಳಿಗೆ ಸ್ಪಂದಿಸುವಾದ ಎಲ್ಲೋ ಒಂದು ಕಡೆ ನಮ್ಮನ್ನು ನಾವೇ ಸಮಾದಾನ ಪಡಿಸುವ ಮಾತುಗಳನ್ನು ಆಡುತ್ತೇವೆ, ಉದಾಹರಣೆಗೆ ನಮ್ಮ ಸ್ನೇಹಿತ ತನ್ನ ಕೆಲಸ ಹೋಯಿತು ಅಥವಾ ಹೆಂಡತಿ ಜೊತೆ ಜಗಳ ತೀರ ಹೆಚ್ಚಾದಾಗ ಎಂದು ನಮ್ಮ ಹತ್ತಿರ ಹೇಳಿಕೊಂಡಾಗ ನಾವು ನಮ್ಮ ಮನಸ್ಸಿನಲ್ಲಿ ನಾವು ನನ್ನದು ಅದೇ ಪರಿಸ್ಥಿತಿ, ನನ್ನ ಜೊತೆಯಲ್ಲಿ ಇವನು ಇದ್ದಾನಲ್ಲ ಎಂದು ಒಂದು ಎಳೆಯ ಸಂತೋಷ ಮಿಂಚಿ ಹಾರಿಹೊದುತ್ತದೆ, ಅವನಿಗೆ ನಾವು ಎಲ್ಲಾ ಸರಿಹೋಗುತ್ತದೆ, ಇದು ಸ್ವಲ್ಪ ದಿನ ಮಾತ್ರ, ಕೂತು ಸಮಾಧಾನವಾಗಿ ಮಾತಾಡಿ ನೋಡು ಎಂಬೆಲ್ಲಾ ಸಮಾದನಪಡಿಸುವ ಮಾತುಗಳನ್ನ ಹೇಳಿದರು ಅದೆಲ್ಲ ತಮಗೆ ತಾವೇ ಹೇಳಿಕೊಳ್ಳುವ ಭರವಸೆಯ ಮಾತು.

ಇತ್ತಿಚೀನ ದಿನಗಳಲ್ಲಿ ಪರಿಶಿಷ್ಟ ಜಾತಿ ಜನಾಂಗಗಳಿಗೆ ಕೊಡುವ ಮೀಸಲಾತಿ ಬಗ್ಗೆ ತುಂಬಾ ಚರ್ಚೆಗಳು ನಡೆಯುತ್ತಿವೆ, ಆದರೆ ಪರ ಅಥವಾ ವಿರುದ್ಧ ವಿಚಾರದ ಬಗ್ಗೆ ಇಲ್ಲಿ ಪ್ರಸ್ತಾಪಿಸಲು ಇಷ್ಟ ಪಡುವುದಿಲ್ಲ. "ಗೌರ್ಮೆಂಟ್ ಬ್ರಾಹ್ಮಣ" ಎಂದು ಮೀಸಲಾತಿ ಮೇಲೆ ವಿಧ್ಯಾಭ್ಯಾಸ, ಕೆಲಸ ಮಾಡುವವರಿಗೆ ಹೇಳುತ್ತಾರೆ ಎಂದು ಅದೇ ಹೆಸರಿನ ಜೀವನ ಚರಿತ್ರೆ ಬರೆದಿರುವ ಪ್ರೊ. ಅರವಿಂದ ಮಾಲಗತ್ತಿ ಯವರು ಹೇಳುತ್ತಾರೆ. ಈ ಪುಸ್ತಕದಲ್ಲಿ ಅವರು ಪಟ್ಟ ಕಷ್ಟ ಮತ್ತು ಅವರಿಗೆ ಅವರ ಜಾತಿಯಿಂದ ಆದ ಅವಮಾನಗಳು ಮತ್ತು ಅದನ್ನೆಲ್ಲ ಮೀರಿ ಜೀವನದ ಹೇಗೆ ಯಶಸ್ಸಿವಿಯಾದರು ಎಂದು ತಿಳಿಸಿಕೊಡುತ್ತಾರೆ.

ನಾವು ಕೋಪ ಮಂಡುಕನ ರೀತಿ ನಮ್ಮ ಕಷ್ಟಗಳೇ ಜಾಸ್ತಿ ಮತ್ತು ಅವನ್ನು ಎದುರುಸಲು ಆಗುವುದಿಲ್ಲ ಎಂದು ಹೇಳಿಕೊಳ್ಳುವಾಗ ಬೇರೆಯವರ ಜೀವನದಲ್ಲೂ ಒಂದು ಸಾರಿ ಇಣುಕಿ ನೋಡಿ ಅವರು ಏನು ಕಷ್ಟಗಳನ್ನು ಎದುರಿಸಿದ್ದಾರೆ ಎಂದು ನೋಡಿದರೆ ಅವುಗಳ ಮುಂದೆ ನಮ್ಮ ಕಷ್ಟಗಳು ಏನೇನು ಅಲ್ಲ ಎಂದು ಗೊತ್ತಾಗುತ್ತದೆ. ಅರವಿಂದ ಮಾಲಗತ್ತಿಯವರ ಈ ಪುಸ್ತಕ ಓದುವಾಗ ನನಗೆ ದೇವನೂರು ಮಹಾದೇವರವರ "ಎದೆಗೆ ಬಿದ್ದ ಅಕ್ಷರ" ಜ್ಞಾಪಕ ವಾಗುತ್ತದೆ. ಮಾಲಗತ್ತಿ ಅವರ ಅಜ್ಜಿ ದೊಡ್ಡವರ ಮನೆಗೆ ಊಟಕ್ಕೆ ಹೋಗಿ ಸೆರಗಿನಲ್ಲಿ ಊಟವನ್ನು ಬಾಗಿಲು ಕಾಯುವವನಿಗೆ ಗೊತ್ತಾಗದ ರೀತಿ ಅಡಗಿಸಿಟ್ಟುಕೊಂಡು ಮಾಂಗೆ ತರುವ ವಿಚಾರ, ಶಾಲಾ ಕಾಲೇಜ್ ಗಳಲ್ಲಿ ಅದ ಅವಮಾನ, ತೋರಿಕೆಯ ಮುಂದುವರೆದ (pseudo progressive people) ತೋರಿಸುವ ಅಬದ್ಧ ಕಳಕಳಿ ಎಲ್ಲವನ್ನು ಮುಚ್ಚು ಮರೆಯಿಲ್ಲದೆ ಹೇಳುತ್ತಾರೆ.

ನಮ್ಮ ಸ್ವಯಂ ಸೃಷ್ಟಿತ ಶ್ರೀಮಂತರ ತೊದರೆಗಳನ್ನು ಪಕ್ಕಕಿಟ್ಟು ಈ ಪುಸ್ತಕವನ್ನು ಒಂದು ಬಾರಿ ಓದಿದರೆ ನಿಜವಾದ ಕಷ್ಟ ಏನು ಎಂದು ತಿಳಿಯುತ್ತದೆ.



ಈ ಪುಸ್ತಕ ಇಲ್ಲಿ ಕೊಳ್ಳಬಹುದು






0 comments:

Post a Comment