Thursday, February 12, 2015

ನೇಹಲ - ಕೆ ಎನ್ ಗಣೇಶಯ್ಯ

Nehala K. N. Ganeshaiah




ಕನ್ನಡಿಗರು, ನಮ್ಮ ಜೀವನದಲ್ಲಿ "ಹಿತ್ತಲ ಗಿಡ ಮದ್ದಲ್ಲ" ಎಂಬ ಗಾದೆ ಕೇಳೆ ಇರ್ತಿವಿ, ಗಣೇಶಯ್ಯ ನವರ "ನೇಹಲ" ಕಥಾ ಸಂಕಲ ಓದುತ್ತಾ ಈ ಗಾದೆ ತುಂಬ ಕಾಡಿತು. ನಾವು ನಮ್ಮ ಇತಿಯಾಸ, ಐತಿಯಾಸಿಕ ಸ್ಥಳಗಳನ್ನು ಕಡೆಗನಿಸುವಸ್ಟು ಬೇರೆ ಯಾರು ಕಡೆಗಣಿಸುವುದಿಲ್ಲವೇನೋ. ಭಾರತದ ಇತಿಯಾಸದಲ್ಲೇ ಒಂದು ದೊಡ್ಡ ಸಾಮ್ರಾಜ್ಯ ಎಂದರೆ ವಿಜಯನಗರ ಸಾಮ್ರಾಜ್ಯ, ಆದರೆ ನಮಗೆ ಆದರೆ ಬಗ್ಗೆ ಎಷ್ಟು ಗೊತ್ತು ???? ವಿಜಯನಗರ ಸಾಮ್ರಾಜ್ಯದಲ್ಲಿ ಚಿನ್ನ, ಮುತ್ತು, ರತ್ನಗಳನ್ನು ಬೀದಿ ಬೀದಿಗಳಲ್ಲಿ ಮಾರುತ್ತಿದ್ದರು ಎನ್ನುವುದು ಬಿಟ್ಟರೆ ಪಾಲು ಬಿದ್ದ ಹಂಪಿ ದೇವಸ್ಥಾನಗಳು ಗೊತ್ತು. ಅಷ್ಟು ಶ್ರೀಮಂತ ಸಾಮ್ರಾಜ್ಯದ ಹಿಂದಿನ ಕಥೆ ಮತ್ತು ಅದರ ಆಡಳಿತ ಮತ್ತು ಅಷ್ಟು ವೈಭವದ ಹಿಂದಿನ ರಹಸ್ಯ ಕೆಲವು ಜನರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ನಮ್ಮ ಶಾಲಾ ಕಾಲೇಜ್ ನಲ್ಲೂ ಹತ್ತಾರು ಸಾಲುಗಳು ಬಿಟ್ಟರೆ ಏನು ಕಲಿಸುವುದಿಲ್ಲ. ಅದಕ್ಕೆ ಏನು ನಮ್ಮ ಹಿರಿಯರು ಹೇಳಿರುವುದು ದೇಶ ಸುತ್ತು ಕೋಶ ಓದು ಎಂದು. 

ನಾನು ಹಿಂದೆ ಬರೆದುರುವಹಾಗೆ ಗಣೇಶಯ್ಯ ನವರು ಇತಿಯಾಸಕ್ಕೆ ಒಂದು ಕಾಲ್ಪನಿಕ ಅಂಶ ಸೇರಿಸಿ ಎಲ್ಲೂ ಬೇಸರವಾಗದಂತೆ ನಮ್ಮ ಕಣ್ಣ ಮುಂದೆ ತೋರಿಸುತ್ತಾರೆ. ಇದನ್ನು ಓದಿದ ಬಳಿಕ ನಮ್ಮ ರಾಜ್ಯದ ಬಗ್ಗೆ, ಇದನ್ನು ಆಳಿದ ರಾಜರ ಬಗ್ಗೆ ಹುಡುಕಿ ಅವರ ಬಗ್ಗೆ ತಿಲಿಕೊಳ್ಳುವ ಕುತೂಹಲ ಹುಟ್ಟುತ್ತದೆ. ನಮ್ಮಲ್ಲಿ ಈ ರೀತಿ ಕುತೂಹಲ ಹುಟ್ಟಿಸುವ ಕಾದಂಬರಿಯಾ ಬರವಣಿಗೆ ಎಷ್ಟು ಚೆನ್ನಾಗಿರಬೇಕು. ಈ ಕಥಾಸಂಕಲನದಲ್ಲಿ ಒಟ್ಟು ಎಂಟು ಕಥೆಗಳಿವೆ. ಕೆಲವೊಂದು ಐತಿಯಾಸಿಕ ಘಟನೆಗಳನ್ನು ಆದರಿಸಿ ಮತ್ತೆ ಕೆಲವು ವಿಜ್ಞಾನದ ಪ್ರಯೋಗಗಳ ಮೇಲೆ ಕೆಂದ್ರಿಕೃತವಾಗಿವೆ. 

ಇಲ್ಲಿ ನನಗೆ ಇಷ್ಟವಾದ ಕಥೆ "ರಾಗ ಪಂಜರ". ಭಾರತದಲ್ಲೇ ವಿಶಿಷ್ಟವಾದ ದೇವಸ್ಥಾನ ವಿಜಯ ವಿಠಲ ದೇವಸ್ಥಾನ ಮತ್ತು ಅದರ ಸಂಗೀತ ಹೊರಡುವ ಕಂಬಗಳು. ಈ ದೇವಸ್ಥಾನದ ಹಿಂದೆ ಒಂದು ದೊಡ್ಡ ದುರಂತ ಕಥೆಯೇ ಇದೆ ಎಂದು ನನಗೆ ತಿಳಿದಿದ್ದು ಈಗಲೇ. ಶ್ರೀ ಕೃಷ್ಣದೇವರಾಯ ಕಳಿಂಗ ದೇಶದ ಮೇಲೆ ೬ ವರ್ಷ ಮಾಡಿ ಅದ್ರ ರಾಜ ಗಜಪತಿ ಯನ್ನು ಸೋಲಿಸುತ್ತಾನೆ. ಎಲ್ಲಿ ಕೃಷ್ಣದೇವರಾಯ ಹಿಂತುರಿಗಿದ ಮೇಲೆ ಕಾಲಿಗ ದೇಶದ ಜನ ತಿರುಗಿ ಬೀಳುವರೋ ಎಂದು ತಿಳಿದು ತಿಮ್ಮರಸು ಕಳಿಂಗ ರಾಜನ ಮಗಳಾದ ಜಗನ್ಮೊಹಿನಿಯನ್ನು ಕೃಷ್ಣದೇವರಾನನ್ನು ಮದಿವೆಯಾಗಲು ಒಪ್ಪಿಸುತ್ತಾನೆ. ಮಾಡುವೆಯಾಗಿ ಬಂದ ನಂತರ ಆ ವಿಜಯದ ಸಂಕೇತವಾಗಿ ವಿಜಯ ವಿಠಲ ದೇವಸ್ಥಾನವನ್ನು ಕಟ್ಟಿಸಲು ಹೇಳುತ್ತಾನೆ. ಜಗನ್ಮೊಹಿನಿ ತನ್ನ ರಾಜ್ಯದ ಸೋಲು ಮತ್ತು ತನ್ನ ತಂದೆಯ ಅವಮಾನದಿಂದ ಬೆಂದು ಕೃಷ್ಣದೇವರಾಯನ ಮಗನನ್ನು ವಿಷವಿಕ್ಕಿ ಕೊಲ್ಲುತ್ತಾಳೆ. ಇಲ್ಲಿ ಗಣೇಶಯ್ಯ ನವರು ವೆಂಕೋಬ ಎಂಬ ಪಾತ್ರವಾನು ಸೆರಿಸುತ್ತಾರೆ. ಅವನು ಜಗನ್ಮೊಹಿನಿಯ ಪ್ರಿಯತಮ ಮತ್ತು ಅವರಿಬ್ಬರೂ ಸೇರಿ ರಾಜನ ಮಗನನ್ನು ಕೊಲ್ಲಲ್ಲು ಸಂಚು ಹೂಡಿರುತ್ತಾರೆ ಎಂದು ಬರೆದಿದ್ದಾರೆ. ವೆಂಕೋಬ ನನ್ನು ಬಿಟ್ಟರೆ ಬೇರೆ ಯಲ್ಲ ಪತ್ರಗಳು ಇತಿಯಾಸದಲ್ಲಿ ಉಲ್ಲೇಕ ವಾಗಿರುವ ಪಾತ್ರಗಳೆ.

ಈ ಪುಸ್ತಕ ಇಲ್ಲಿ ಕೊಳ್ಳಬಹುದು







0 comments:

Post a Comment