Nagna Satya - A Na Krishnaraya (A Na Kru)
ನಾನು ಮತ್ತು ನಮ್ಮ ಕನ್ನಡಿಗರು ನೋಡಿರುವ ನೂರೆಂಟು ಕನ್ನಡ ಚಿತ್ರಗಳಲ್ಲಿ "ಭಕ್ತ ಕುಂಬಾರ' ಮತ್ತು "ರಂಗ ನಾಯಕಿ" ಎರಡು ಅದ್ಭುತ ಚಿತ್ರಗಳು. ಈ ಚಿತ್ರಗಳು ಬಿಡುಗಡೆಯಾಗಿ ಹತ್ತಿಪತ್ತು ವರ್ಷಗಳೇ ಕಳೆದರು ಇನ್ನು ನಮ್ಮ ಮನಸ್ಸಿನ್ನಲ್ಲಿದೆ, ಯಾಕೆಂದರೆ ಈ ಚಿತ್ರಗಳಲ್ಲಿ ನಿರ್ದೇಶನ, ಕಥೆ, ಹಾಡುಗಳು, ನಟ-ನಟಿಯರ ನಟನ ಎಲ್ಲವು ತುಂಬ ಚೆನ್ನಾಗಿ ಮೂಡಿಬಂದಿದೆ. ಇಲ್ಲಿ ನಾನು ಹೇಳಬೇಕೆಂದಿರುವುದು ಈ ಚಿತ್ರಗಳಲ್ಲಿ ಮೂಡಿಬಂದಿರುವ ಎರಡು ಸನ್ನಿವೇಶಗಳು.
ಮೊದಲನೆಯದು 'ಭಕ್ತ ಕುಂಬಾರ' ಚಿತ್ರದ ಒಂದು ಸನ್ನಿವೇಶದಲ್ಲಿ ನಾಮದೇವ ದೇವಸ್ಥಾನದ ಒಳಗೆ ಹೋದಾಗ ಒಬ್ಬ ಸನ್ಯಾಸಿಯು ಕಾಲನ್ನು ಶಿವ ಲಿಂಗದ ಮೇಲೆ ಇತ್ತು ಮಲಗಿರುತ್ತಾನೆ, ಅದನ್ನು ನೋಡಿ ಕೋಪಗೊಂಡ ನಾಮದೇವ ಅವನನ್ನು ಗದರಿಸಿದಾಗ ಅವರು ನನಗೆ ಕಣ್ಣು ಕಾಣೋದಿಲ್ಲ ಮತ್ತು ಕಾಲನ್ನು ಎತ್ತಲೂ ಸಹ ಆಗುವುದಿಲ್ಲ, ಸ್ವಲ್ಪ ನೀವೇ ಸಹಾಯ ಮಾಡಿ ನನ್ನ ಕಾಲನ್ನು ಎಲ್ಲಿ ಶಿವ ಇಲ್ಲವೋ ಅಲ್ಲಿ ಇಡ್ತಿಯ ಎಂದು ಕೇಳುತ್ತಾನೆ. ಅದಕ್ಕೆ ಸರಿ ಎಂದು ಕಾಲನ್ನು ಬೇರೆ ಕಡೆ ಇಡಲು ಪ್ರಯತ್ನಿಸುತ್ತಾನೆ ಆದರೆ ಎಲ್ಲಿ ಇಡಲು ಹೋದರು ಎಲ್ಲೇ ಶಿವಲಿಂಗ ಪ್ರತ್ಯಕ್ಷ ವಾಗುತ್ತದೆ. ಇದನ್ನು ನೋಡಿ ತನ್ನ ತಪ್ಪಿನ ಅರಿವಾಗಿ ಶಿವ ಇಲ್ಲದ ಜಾಗವೇ ಇಲ್ಲ ಎಂದು ಗೊತ್ತಿದ್ದರು ತನ್ನ ಆಹಂಕಾರದಿಂದ ಅದನ್ನು ಮರೆತಿದ್ದೆ ಎಂದು ಕ್ಷಮಾಪಣೆ ಕೇಳುತ್ತಾನೆ. ಎರಡನೆಯದು "ರಂಗ ನಾಯಕಿ" ಚಿತ್ರದಲ್ಲಿ ಮಗ ತನ್ನ ತಾಯಿಗೆ ತಾನು ಅವಳನ್ನು ಪ್ರೀತಿಸುತ್ತೀದ್ದೇನೆ ಎಂದು ಹೇಳುತ್ತಾನೆ. ಈ ಎರಡು ಸನ್ನಿವೇಶ ನಮ್ಮೆದುರಿಗೆ ಬಂದರೆ ನಾವು ಕೋಪ ತೋರಿಸುವುದಿಲ್ಲ, ಇದು ಕೆಟ್ಟ ವಿವರಣೆ ಎಂದು ತೆಗಳುವುದಿಲ್ಲ ಏಕೆಂದರೆ ಆಗಿನ ಕಾಲದಲ್ಲಿ ವಿಷಯವನ್ನು ಅರ್ಥೈಸುವ ಪರಿ, ನೋಡುವ ರೀತಿ ಬೇರೆ ಇತ್ತು. ಈಗ ಯಾರಾದರು ಈ ಎರಡು ಸನ್ನಿವೇಶವನ್ನು ತಮ್ಮ ಚಿತ್ರದಲ್ಲಿ ಚಿತ್ರಿಸಿದರೆ ಆ ಚಿತ್ರ ತೆರೆ ಕಾಣುಹುದೇ ಕಷ್ಟ. ಎಕೆಂದರ ನಮ್ಮ ವಿಶಾಲ ಮನೋಭಾವನ್ನು ಕಳೆದುಕೊಂಡಿದ್ದೇವೆ (ನಮ್ಮ ಮನೋಭಾವನ್ನು ಕೆಲವರ ತಮ್ಮ ಲಾಬಕ್ಕೆ ದುರುಪಯೋಗ ಮಾಡಿಕ್ಕೆ ಇರಬಹುದು). ಒಂದು ಕಾಲಕ್ಕೆ ಒಳ್ಳೆಯದಾಗಿ ಕಾಣಿಸುವ ಕೆಲಸ, ಸ್ಥಿತಿ, ಸನ್ನಿವೇಶ ಮುಂದೊಂದು ದಿನ ಕೆಟ್ಟದಾಗಬಹುದು ಮತ್ತು ಇಂದು ದೂರುವ ಜನ ಹೋಗಳಬಹುದು ಅದು ಆ ಕಾಲಕ್ಕೆ ಮತ್ತು ಆ ಸಮಾಜಕ್ಕೆ ಬಿಟ್ಟಿದ್ದು. ಇದನ್ನೆಲ ಮೀರಿ ಒಂದು ತತ್ವ ಮತ್ತು ಸಿದ್ದಾಂತವನ್ನು ಬಿಡದೆ ಅಭಿಪ್ರಾಯವನ್ನು ನಿರ್ಬೀತಿಯಿಂದ ಹೇಳುವವನು ಮಾತ್ರ ಜನರ ಮನಸ್ಸಿನಲ್ಲಿ ಉಳಿಯುವವನು.
ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ ಅ. ನ. ಕೃ ರವರು ೧೯೫೦ ರಲ್ಲಿ ಬರೆದಿರುವ ವೇಶ್ಯಾವಾಟಿಕೆ ಕುರಿತು ಬರೆದಿರುವ "ನಗ್ನ ಸತ್ಯ" ಮತ್ತು ಅದರ ಮುಂದುವರಿದ ಭಾಗಗಳಾದ "ಶನಿ ಸಂತಾನ" ಮತ್ತು "ಸಂಜೆ ಗತ್ತಲು" ಕಾದಂಬರಿಗಳ ಬಗ್ಗೆ ಬರೆಯುವ ಮುನ್ನ ಒಂದು ಕೆಲಸ, ಒಂದು ಸಿದ್ದಾಂತ, ಒಂದು ನಿಯಮ ಒಂದು ಕಾಲದಲ್ಲಿ ಸಮಾಜಕ್ಕೆ ತಪ್ಪೆಂದು ಕಂಡರೂ ಮುಂದೆ ಅವರು ಅದೇ ಸರಿ ಎಂದು ಹೇಳುತ್ತಾರೆ ಮತ್ತು ಸರಿ ಇದ್ದುದ್ದು ಮುಂದೆ ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಯಾಕೆಂದರೆ "ನಗ್ನ ಸತ್ಯ" ಕಾದಂಬರಿ ಬಿಡುಗಡೆ ಯಾದಾಗ ಅ. ನ. ಕೃ ರವರು ಕನ್ನಡ ಸಾಹಿತ್ಯಕ್ಕೆ ಕಾಮದ ಬಣ್ಣ ಬಳಿದು ಹಾಳು ಮಾಡುತ್ತಿದ್ದಾರೆ ಎಂದು ಮತ್ತು ಅವರನ್ನು ಬಹಿಷ್ಕರಿಸಬೇಕೆಂದು ಕೆಲವು ಸಾಹಿತಿಗಳು ಮತ್ತು ಗುಂಪುಗಳ ಅಭಿಪ್ರಾಯ ಪಟ್ಟರು. ಆದರೆ ಈಗ ಕಾಮದ ಸನ್ನಿವೇಶ ವಿಲ್ಲದ ಕಾದಂಬರಿಗಳು ಸಿಕ್ಕುವುದೇ ಕಷ್ಟ. ಅವರು ತಮ್ಮ ಸುತ್ತ ಮುತ್ತಲಿನ ಸಮಜಾದಲ್ಲಿ ಆಗುತ್ತಿರುವ ಘಟನೆಗಳನ್ನು ಆದರಿಸಿ ಕಾದಂಬರಿ ಬರೆಯುತ್ತಿದ್ದರು ಮತ್ತು ಎಂದು ಅವರ ಅಭಿಪ್ರಾಯವನ್ನು ಹೇಳಲು ಹಿಂಜರಿಯುತ್ತಿರಲ್ಲ.
ಈ ಕಾದಂಬರಿಯಲ್ಲಿ ಬರುವ ಕಾಮ ಪ್ರಚೋದನೆ ಆ ಕಾಲಕ್ಕೆ (೧೯೫೧) ಅತಿಯಾದರಿ ಇಂದು ಓದಿದವರು ಇಷ್ಟಕ್ಕೆ ಅ. ನ. ಕೃ ರವರನ್ನು ಟೀಕಿಸಿದರ ಎಂದು ಕೇಳಬಹುದು. ಇಂದಿನ ಕಾದಂಬರಿಗಳಲ್ಲಿ ಬರುವ ಕಾಮ ಪ್ರಚೋದಾತ್ಮಕ ಸನ್ನಿವೇಶಗಳು ಮತ್ತು ವಿವರೆನೆಗಳು "ನಗ್ನ ಸತ್ಯ"ದಲ್ಲಿ ಬರುವ ವಿವರಣೆ ಏನೇನು ಅಲ್ಲ ಅನ್ನಿಸುತ್ತದೆ.
"ನಗ್ನ ಸತ್ಯ" ಒಬ್ಬ ವೇಶ್ಯಯ ಕಥೆಯಲ್ಲ ಇದು ವೇಶ್ಯವಾಟಿಕೆಯ ಕುರಿತು ಬರೆದಿರುವ ಕಾದಂಬರಿ. ಇಲ್ಲಿ ಬರುವ ಪಾತ್ರಗಳ ಸಮಜಾದ ಒಂದೊಂದು ಮುಖಗಳು. ಪೊಲೀಸರು, ರಾಜಕಾರಣಿಗಳು, ವ್ಯಾಪಾರಿಗಳು ಹೇಗೆ ತಮಗೆ ಬೇಕಾದ ಹಾಗೆ ಮಹಿಳೆಯರನ್ನು ಊಪಯೋಗಿಸಿ ಮತ್ತು ಬೇಡವಾದಾಗ ಅವರನ್ನು ಬಿಸಾಡಿ ಹೋಗುವ ಸಮಾಜದ ವಿಕೃತ ಕಾಮಿಗಳ ಮನಸ್ಸು ಮತ್ತು ಮುಖವನ್ನು ಸೇರಿಹಿಡಿದ್ದಿದ್ದಾರೆ.
ಮುತ್ತಮ್ಮ,, ಕಮಲ, ನಾಗು, ಬಾಳು, ವೆಂಕಟಿ ಈ ಸಮಾಜದ ಒಂದು ಮುಖವಾದರೆ, ಮಾಡಿದ ಕೆಲಸವೆಲ್ಲ ಬಿಟ್ಟು ಹರಟೆ ಹೊಡೆದುಕೊಂಡು ಕಾಲ ಹರಣ ಮಾಡಿ ಕೊನೆಗೆ ಮುತ್ತಮ್ಮನ ಮನೆಗೆ ಗಿರಾಕಿಗಳನ್ನೂ ಹುಡುಕಿಕೊಡುವ ನಾಗರಾಜು ಇನ್ನೊದು ಮುಖ. ಮುತ್ತಮ್ಮನ ಮನೆಗೆ ಬರುವ ಹೆಂಗಸರು ಮತ್ತು ಗಿರಾಕಿಗಳನ್ನು ತನ್ನ ಮುಗ್ದ ಕಣ್ಣುಗಳಿಂದ ನೋಡುವ ಪುಟ್ಟಾ ಈ ಸಮಾಜದ ಸಂಕೇತಾವಾಗಿ ಕಾದಂಬರಿಯ ಮೂಖ ಸಾಕ್ಷಿಯಾಗುತ್ತಾಳೆ. ಶೇಷಗಿರಿ ತನ್ನ ಕಾಮಶಮನಕ್ಕಾಗಿ ಅಚ್ಚಮ್ಮ ಬಳಸಿಕೊಂಡು, ಅವರಿಬ್ಬರ ವಿಷ್ಯ ಮನೆಯಲ್ಲಿ ತಿಳಿದಾಗ ಮನೆಯಿಂದ ಹೊರಗೆ ಹೊಡಿಸುವಾಗ ಏನು ಮಾಡದೆ ಸುಮ್ಮನಿರುತ್ತಾನೆ. ಕೊನೆಗೆ ಮುತ್ತಮ್ಮನ ವೇಶ್ಯಾಗೃಹಕ್ಕೆ ಸೇರುತ್ತಾಳೆ.
ಶ್ರೀನಾಥನಾಥ ಕಾದಂಬರಿ ಬರೆಯುವಾಗ ವೇಶ್ಯ ಸಮಾಜದ ಬಗ್ಗೆ ಬರೆದು(ಒಂದು ಬಾರಿಯೂ ವೇಶ್ಯಯಾ ಬೇಟಿ ಮಾಡದೆ ತನ್ನ ಕಲ್ಪನೆಯಿಂದ ಬರೆದ್ದಿದ್ದು), ಚಿಕ್ಕಮ್ಮನ ಬಲವಂತದಿಂದ ಮನೆಯಿಂದ ಹೊರಗೆ ಹೋಗುತ್ತಾನೆ ತನ್ನ ಸ್ನೇಹಿತ ಶರ್ಮನಿಂದ ಮುತ್ತಮ್ಮನ ಮನೆಯಲ್ಲಿ ಕಮಲನ ಪರಿಚಯ ವಾಗುತ್ತೆ. ಪರಿಚಯ ಪ್ರೀತಿಗೆ ತಿರುಗಿ ಅವರಿಬ್ಬರೂ ಕಮಲನ ತಾಯಿ ಸುಶೀಲಮ್ಮನ ಜೊತೆ ಬೇರೆ ಮನೆ ಮಾಡುತ್ತಾರೆ. ಕಮಲಾ ಶ್ರೀನಾಥನ್ನು ಪ್ರೀತಿಸಿದರು ತಾಯಿಯ ಒತ್ತಾಯದ ಮೇಲೆ ಮುತ್ತಮ್ಮನ ಮನೆಗೆ ಹೋಗಿ ಬಂದು ಮಾಡುತ್ತಿರುತ್ತಾಳೆ, ಶ್ರೀನಾಥನಿಗೆ ಇಷ್ಟವಿಲ್ಲದ್ದಿದ್ದರು ಮತ್ತು ಹಾಗೆ ಮಾಡುವುದಿಲ್ಲ ಎಂದು ಭಾಷೆ ಕೊಟ್ಟಿದ್ದರು.
ಹೀಗೆ ಕಾದಂಬರಿಯಲ್ಲಿ ಸಮಾಜದ ಪ್ರತಿಯೊಂದು ಮುಖವನ್ನು ಚಿತ್ರಿಸಿದ್ದಾರೆ ಕೃಷ್ಣರಾಯರು. ಇಲ್ಲಿ ಕಥೆ ಸಮಾಜದ ಸುತ್ತ ಸುತ್ತುತ್ತದೆಯೇ ಹೊರತು ಕೆಲವು ಜನರ ಸುತ್ತ ಅಲ್ಲ. ಜೀವನದಲ್ಲಿ ನಾವು ಮಾಡುವ ಒಳ್ಳೆ ಕೆಲಸಗಳಿಗೆ ಫಲ, ಕೆಟ್ಟ ಕೆಲಸಗಳಿಗೆ ಕಷ್ಟ ದೊರಕುವುದು ಕರ್ಮ. ನಾವು ಬೇರೆಯವರ ಕಷ್ಟ ಕಾಲದಲ್ಲಿ ಅವರಿಂದ ಲಾಭ ಪಡೆದು ಮುಂದೆ ಅವರನ್ನು ಮರೆತರೆ ನಾವು ಸುಖವನ್ನು ಅನುಭವಿಸಲಾರೆವು. ಕೃಷ್ಣರಾಯರೇ ಮುನ್ನುಡಿಯಲ್ಲಿ ಹೇಳುವ ಹಾಗೆ " ಶೀಲ ಉಪದೆಶದಿಂದಾಗಲಿ ಬರುವುದಿಲ್ಲ. ಅದು ಸ್ವಯಂಭೂಶಕ್ತಿ, ಅಶ್ಲೀಲ ಜೀವನದಲ್ಲಿ ಒಂದು ಬಗೆಯ ಕೃತಕ ಸೌಂದರ್ಯ, ಕೃತಕ ಆನಂದ, ಕೃತಕ ತೃಪ್ತಿ ಕಾಣುವ ವ್ಯಕ್ತಿ ಒಳಗಣ್ಣು ತೆರೆದು ನೋಡಿ ಶೀಲದಿಂದ ಲಭಿಸುವ ಸಾಶ್ವತ ಆನಂದ, ಸೌಂದರ್ಯ, ತೃಪ್ತಿಯನ್ನು ಗ್ರಹಿಸಬೇಕು. ಮನುಷ್ಯ ಬದುಕಬೇಕು, ಬಾಳಬೇಕು ನಿಜ; ಹೇಗಾದರು ಬಾಳಿದರೆ ಆಯಿತೇ? ಕಂಡವರ ರಕ್ತ ಹೀರಿ ಬದುಕುವುದು ಒಂದು ಬದುಕೇ! ಪರರ ಬಾಳನ್ನು ಮುಟ್ಟಿ ಬಾಳುವುದು ಒಂದು ಬಾಳೇ!!!"
ಈ ಕಾದಂಬರಿಯ ಮುಂದುವರಿದ ಭಾಗಗಳು "ಶನಿ ಸಂತಾನ" ಮತ್ತು "ಸಂಜೆಗತ್ತಲು"
0 comments:
Post a Comment