Tuesday, February 25, 2014

ನದಿಯ ನೆನಪಿನ ಹಂಗು - ಜೋಗಿ ( ಗಿರೀಶ್ ರಾವ್ )

Nadiya Nenapina Hangu - Jogi ( Girish Rao )




ಕಾದಂಬರಿ ನದಿಯ ಹಾಗೆ!

ನದಿ ಹುತ್ತಿವುದು ಒಂದು ಸಣ್ಣ ಸೆಲೆಯಾಗಿ, ಕ್ರಮೇಣ ಅದಕ್ಕೆ ಉಪನದಿಗಳು ಸೇರಿಕೊಳ್ಳುತ್ತವೆ. ಗುಪ್ತಗಾಮಿನಿಯಾಗಿ ಮತ್ತಾವುದೋ ಸೆಲೆ ಬಂದು ಕೂಡಿಕೊಳ್ಳುತ್ತದೆ, ಹೀಗೆ ತನ್ನನ್ನು ತೆಕ್ಕೆಗೆ ತೆಗೆದುಕೊಂಡು ನದಿ ಹರಿಯುತ್ತದೆ.  

ಕಾದಂಬರಿಯೂ ಹಾಗೆಯೆ. ನನ್ನ ಪ್ರಕಾರ ಸಣ್ಣಕತೆಯೆಂದರೆ ಶಿಕಾರಿ, ನಿಗೋಧದಲ್ಲಿ ಹೊಂಚಿ ಕುಳಿತವನು ಸುಳಿವೇ ತಿಳಿಯದೆ ಬರುವ ಮೃಗವನ್ನು ಕೆಡವಿ ಉರುಳಿಸುವುದು. ಕವಿತೆಯೆಂದರೆ ಬೆಸ್ತನ ಹಾಗೆ ಕಾಲದ ಹೊಳೆಗೆ ಗಾಳ ಹಾಕುತ್ತಾ ಕೂರುವುದು. 

ಆದರೆ ಕಾದಂಬರಿ ಹಾಗಲ್ಲ. ಅದರ ವಿಸ್ತಾರ ದೊಡ್ಡದು; ಅದು ಒಳಗೊಳ್ಳುವ ಸಂಗತಿಗಳೂ ಕೂಡಾ. ಅದು ಇಡೀ ಮನುಕುಲದ ಕತೆಯೂ ಹೊವ್ದು. ಹೀಗಾಗಿ ಕಾದಂಬರಿಯ ಕರ್ತೃ ಎಲ್ಲವನ್ನೂ ಔದಾರ್ಯದಿಂದ ಮತ್ತು ಅನುಮಾನದಿಂದ ಮತ್ತು ಅನುಮಾನದಿಂದ ನೋಡಬೇಕಾಗುತ್ತದೆ, ಚಂಚಲತೆಯ ಜೊತೆ ತನ್ಮಯತೆಯನ್ನೂ ಗಳಿಸಿಕೊಳ್ಳಬೇಕಾಗುತ್ತದೆ. 

ಆದರೆ ಈ ಕಾಲ ಕಷ್ಟದ್ದು. ನಮ್ಮ ಅನುಭವಗಳಲ್ಲಿ ಟೊಳ್ಳೆಷ್ಟು , ನಿಜವೆಷ್ಟು ಅನ್ನುವುದು ನಮಗೆ ಅರಿವಾಗದ ಕಾಲ. ನಮ್ಮನ್ನು ಯಾವ್ಯಾವ ಶಕ್ತಿಗಳೋ ನಿಯನ್ತ್ರಿಸುತ್ತವೆ. ಜಾತಿ, ರಾಜಕಾರಣ ಮತ್ತು ಧರ್ಮ ನಮ್ಮ ಶ್ರದ್ದೆಯನ್ನು ಮೀರಿ ವ್ಯಪಿಸಿದೆ. ಹಳ್ಳಿಗಳು ಕ್ರಮೇಣ ನಗರಗಳಾಗುತ್ತಿವೆ. ಟೀ. ವಿ. ಎಂಬ ಮಾಯೆ ಪ್ರತಿಯಬ್ಬರನ್ನೂ ವಿಶಿಷ್ಟವಾಗಿ ತಬ್ಬಿದೆ. ಎಲ್ಲೋ ಏನೋ ತಪ್ಪಿದೆ ಎಂಬ ಶಂಕೆಯಲ್ಲೇ ಸೃಜನಶೀಲತೆಯನ್ನು ಉಲಿಸಿಕೊಳ್ಳಬೇಕಾಗಿದೆ. ನದಿಯ ನೆನಪಿನ ಹಂಗು ಇಂಥ ಕಷ್ಟಕಾಲದಲ್ಲಿ ಹಿತ್ತಿದ ಕ್ರುತಿ. ಅದರ ಮೂಲಸೆಲೆ ಯಾವುದು ಅನ್ನುವುದು ನನಗೂ ಮರೆತು ಹೊಗಿದೆ. ನದಿಗೆ ನೆನಪುಗಳಿರುವುದಿಲ್ಲ ಅನ್ನುತ್ತಾರೆ. ಯಾಕೆಂದರೆ ಅದು ಎಲ್ಲವನ್ನೂ ತೊಳೆಯುತ್ತಾ ಸಾಗುತ್ತದೆ. ಆದರೆ ನದಿಯ ನೆನಪಿನ ಹಂಗಿನಿಂದ ನೀವ್ಯಾರೂ ಪಾರಾಗಲಾರಿರಿ ಅನ್ನುವುದು ನನಗೆ ಗೊತ್ತಿದೆ. ಇದ್ದ ನದಿಗಿಂತ ಗಾಢವಾಗಿ, ಇರದ ನದಿ ಕಾದುತ್ತದೆ. ನೋಡಿದ ಮುಖಕ್ಕಿಂತ ತೀವ್ರವಾಗಿ ನೋಡದ ಮುಖ ಕಾಡುವ ಹಾಗೆ!





Monday, February 24, 2014

ಜೋಗಿ ಕಥೆಗಳು - ಜೋಗಿ ( ಗಿರೀಶ್ ರಾವ್ )

 Jogi Kathegalu - Jogi ( Girish Rao )



 ಮುನ್ನುಡಿಯಿಂದ:

ಈ ಸಂಕಲನದ ಒಂದು ಕಥೆ ನನಗೆ ತುಂಬಾ ಇಷ್ಟವಾದುದ್ದು, ಕನ್ನಡಿಯೊಳಗೆ ಗಳಗನಾಥರಿರಲಿಲ್ಲ, 'ಗಳಗನಾಥರು ಬೆಚ್ಚಿಬಿದ್ದರು' ಕಥೆಯ ಮೊದಲ ಸಾಲೇ ಕಥೆಗೆ ಒಂದು ತಯಾರಿಯನ್ನು ನೀಡುತ್ತದೆ. ತುಂಬಾ ಕೇಳಿದ ಹೆಸರು. ಕಥೆಯ ಮೊದಲ ಪ್ಯಾರಾದಲ್ಲಿ ಗಳಗನಾಥರು ಇನ್ನೂ ಬದುಕಿದ್ದಾರೆ. ಅವರ ಮಗಳಿಗೆ ಅವರ ಇರವಿದೆ/ ಭಯಾನಕ ಅಂದರೆ ತನ್ನನ್ನು ನೋಡಿಕೊಳ್ಳುವ ಕನ್ನಡಿಯಲ್ಲಿ ತನ್ನದೇ ಬಿಂಬವಿಲ್ಲ (ತನಗೆ ತಾನು ಕಾಣುತ್ತಿಲ್ಲ, ಪರರಿಗೆ ಕಾನುತ್ತಿದ್ದಿದೇನೆ ಎಂದೇ ....) ನಿಟ್ಟುಸಿರನ್ನೂ ಚೆಲ್ಲಿದೇ, ಎಲ್ಲೂ ಸಂಯಮದ ಒಂದು ಹಂತವನ್ನು ಮೀರದೇ ಕಥೆ ಮುಂದರಿಯುತ್ತದೆ. ಕಥೆಯ ಮೋರುಮುಕ್ಕಾಲು ಪಾಲು ಗಳಗನಾಥರು ಬದುಕೆಯೀದ್ದಾರೆ, ಯಾಕೆಂದರೆ ಶಾಸ್ತ್ರಿಗಳು ಅವರನ್ನೇ ಕುರಿತು ನೇರ ಮಾತನಾದುತ್ತಿದ್ದಾರೆ. ತಮ್ಮ ಮನೆಯ ಬಾಗಿಲು ತಟ್ಟುವವರೆಗೂ ಬದುಕಿದ್ದ ಗಳಗನಾಥರು ಮನೆ ಹೊಕ್ಕ ಕ್ಷಣ ಬದುಕಿದ್ದರೇ ?

ಇನ್ನೊಂದು ಕಥೆ ನನಗೆ ತುಂಬಾ ಇಷ್ಟವಾದುದ್ದು 'ಇನ್ನೊಬ್ಬ', ಮೊದಲ ಸಾಲಿನಲ್ಲೇ ಕಥೆ ಅನಾವರಣಗೊಳ್ಳುತ್ತದೆ. ಗೊರೊರಿನ ಪ್ರಜೆಗಳ ಪ್ರಕಾರ ಗೊರೂರು ರಾಮಸ್ವಾಮಿ ಅಯ್ಯಂಗಾರರೊ  ಗೊರೂರು ಕೃಷ್ಣಸ್ವಾಮಿ ಅಯ್ಯಂಗಾರರೊ ಜೀವದ ಗೆಲೆಯರು. ಮತ್ತೆ ಅದೇ, ತುಂಬಾ ಕೇಳಿದ ಹೆಸರು. ಒಮ್ಮೆಲೇ ಆಪ್ತವೆನಿಸುವ ಧಾತಿ. ಕಥೆ ನಿಧಾನವಾಗಿ ನುಸುಲುತ್ತದೆ. ಹರಡಿಕೊಂಡಂತೆಲ್ಲಾ ನಿಗೂಢವಾಗುತ್ತದೆ. ಇದ್ದವರು ಯಾರು, ಹೋದವರು ಯಾರು, ರಾಮಸ್ವಾಮಿ ಅಯ್ಯಂಗಾರರಷ್ಟೇ ಗೊಂದಲ ಒದುಗನಿಗೊ, ಪ್ರಶ್ನೆ ಕೇಳುವ ಮೇಷ್ಟ್ರಿಗೂ ಉಂಟಾಗುತ್ತದೆ. ಆದಂತೆ ಈ ರಾಮಸ್ವಾಮಿ ಅಯ್ಯಂಗಾರರು ಯಾರು? ಅವರ ಜೊತೆಗಿದ್ದ ಇನ್ನೊಬ್ಬ ಅಯ್ಯಂಗಾರರೇ ಕಥೆಯ ಶೀರ್ಷಿಕೆಯ ಇನ್ನೊಬ್ಬನೇ ಅಥವಾ ರಾಮಸ್ವಾಮಿಯಂತಾಗಲಿರುವ ಮೇಸ್ಟ್ರು ಆ ಇನ್ನೊಬ್ಬನೇ ?

ಎರಡೂ ಕಥೆಗಳಲ್ಲಿ ಕೊನೆಯ ನಾಲ್ಕು ಸಾಲುಗಳಲ್ಲಿ ಕಥೆಗೆ ತಣ್ಣನೆಯ ಒಂದು ತಿರುವಿತ್ತು ಜೋಗಿ ಎಲವನ್ನೂ ಕೊದವಿಕೊದೆದ್ದು ಬಿದುತ್ತರೆ. ಎಲ್ಲೂ ಯಾವದೇ ಭಾವೊದೇಗವಿಲ್ಲ. ಯಾವುದೇ ಧಾವಾತವಿಲ್ಲ. ಕಥೆಯನ್ನು ಒಂದಿ ಮುಗಿಸಿದ ಪುಟ ಅಗುಚಿದ ಮೇಲೆ ಮಾತ್ರ ಥಟ್ಟನೆ ಆವರಿಸುವ ಭೀತಿ ಒಂದೆರೆಕ್ಷಣ ಅಲ್ಲಾಡಿಸಿಬಿಡುತ್ತದೆ.

            **************

 ಸಣ್ಣ ಕಥೆಗಳಲ್ಲಿ ಹಲವಾರು ವಿಶಿಷ್ಟ ಪ್ರಯೋಗಗಳು ನದೆದಿವೆ.

ಅಗಷ್ಟೋ ಮಾಂಟೆರೊಸ್ಸೋನ ಒಂದು ಸಾಲಿನ ಒಂದು ಕಥೆ ನೆನಪಿಗೆ ಬರುತ್ತಿದೆ.

"ಅವನು ಎಚ್ಚೆತ್ತಾಗ ಡೈನೋಸಾರಸ್ ಇನ್ನೂ ಅಲ್ಲೇ ಇತ್ತು."

ಇನ್ನೊಂದು ಕಥೆ ನೆನಪಿಗೆ ಬರುತ್ತಿದೆ. ಇದೆ ಮೂರೇ ಸಾಲುಗಲಲ್ಲಿದೆ. ಇದು ವೈಯೆನ್ಕೆ ಹೇಳೆದ್ದು.

"ಕಾರಿನಲ್ಲಿ ಪೆಟ್ರೋಲು ಇದೆಯೇ ಎಂದು ನೋಡಲು ಬೆಂಕಿ ಕಡ್ಡಿ ಗೀರಿದ. ಪೆಟ್ರೋಲು ಇತ್ತು. ವಯಸ್ಸು ನಲವತ್ತು."

ಇವೆರಡು ಕಥೆಗಳಲ್ಲಿ ಒಂದು ಕ್ರಿಯೆಯಿದೆ. ಅನಿರೀಕ್ಷಿತ ತಿರುವುಗಲಿವೆ. ಸಣ್ಣ ಕಥೆಗೆ ಬೇಕಾಗುವ ಎಲ್ಲ ಸಾಮಗ್ರಿಗಳೂ ಇವೆ. ಪುಟಗಟ್ಟಲೆ ಬರೆದ ಕಥೆಗಳಿಂತಾ ಇವು ಎಷ್ಟೋ ಪ್ರಖರವಾಗಿವೆ. ಮತ್ತೆ ಮತ್ತೆ ತಿಣುಕಿಸುತ್ತವೆ.

ಕೆಲವರು ಹಠಕ್ಕೆ ಕೂತಂತೆ ಕಥೆಗಳ ಪಂಧಿಗಳನ್ನು, ಪಾಲಿಸಬೇಕಾದ ನಿಯಮಗಳನ್ನು ಮೊದಲೇ ಹರಡಿಕೊಂಡು ಕಥೆ ಬರೆಯುತ್ತಾರೆ. ಅಂದರೆ ಪೂರ ನಾಲ್ಕು ಸಾವಿರ ಪದಗಳಲ್ಲಿ ಒಂದೂ ಪೂರ್ಣವಿರಾಮವನ್ನಿಕ್ಕುವುದಿಲ್ಲ. ಅಥವಾ ಇಡೀ ಕಥೆಯನ್ನು ಕರ್ಮಣೀ ಪ್ರಯೋಗದಲ್ಲೇ ಬರೆಯುತ್ತರೆ. ಹೀಗೆ ಇದು ತಪಸ್ಸಿದ್ದಂತೆ. ಹಠದ ಮೇಲೆ ದೇವರನ್ನು ಒಲಿಸಿಕೊಳ್ಳುವ ಪರಿ. ಇನ್ನೊಂದು ಪರಿಯಿದೆ. ಕಥೆಯನ್ನು ಹರಿಯಬಿಟ್ಟು ಅದನ್ನೇ ಹಿಮ್ಬಾಲಿಸುವುದು. ಇದರ ಉದ್ದದ ಮೇಲೆ ದೇವರಾಣೆಗೂ ಕಥೆಗಾರನಿಗೆ ಹಿದಿತವಿರುವುದಿಲ್ಲ. ಅದು ಎರಡು ಸಾವಿರವೋ ಒಂದು ಸಾವಿರ ಪದಗಳಿಗೋ ಮುಗಿದರೂ ಮುಗಿಯಿತು, ಇಪ್ಪತ್ತು ಸಾವಿರ ಪದಗಳಿಗೆ ಮುಗಿದರೂ ಅಚ್ಚರಿಯಿಲ್ಲ. 




Sunday, February 23, 2014

ಮಹಾನಗರ: IT'S A HUMAN ZOO - ಜೋಗಿ

Mahanagara: Its A Human Zoo - Jogi




ಮುನ್ನುಡಿಯಿಂದ  

ನಾನು ಬೆಂಗಳೂರು ಕುರಿತು ಬರೆಯಲು ಹೋರಾಟ ಕಾದಂಬರಿಗೆ ಮಾಡಿಕೊಂಡ ಸಿದ್ದತೆಗಳು, ಓದಿಕೊಂಡು ಪುಸ್ತಕಗಳು , ಮಾಡಿದ ತಿರುಗಾಟ, ಕೇಳಿಸಿಕೊಂಡ ಕತೆ ಇವೆಲ್ಲ ಸೇರಿಕೊಂಡು ನನ್ನೊಳಗೇ ಒಂದು ಮಹಾನಗರ ಸೃಷ್ಟಿಯಾದಂತೆ ಕಾನುತ್ತದೆ. ಬೆಂಗಳೂರನ್ನು ಒಂದು ಕಾದಂಬರಿಯಲ್ಲಿ ಹಿಡಿಯಲು ಸಾಧ್ಯವಾ ಎಂದು ಮೂರು ವರುಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಮಹಾನಗರದ ಕಷ್ಟಗಳು ಒಂದೆರಡಲ್ಲ. ಅದು ದಿನದಿನಕ್ಕೂ ಬದಲಾಗುತ್ತಲೇ ಇರುತ್ತದೆ. ಆತಂಕಗಳ ತೀವ್ರತೆ ಒಂದೇ ಆದರೂ, ರೂಪ ಮಾತ್ರ ಬೇರೆ ಬೆರೆ. ಮೆಟ್ರೋ, ರಸ್ತೆರಿಪೇರಿ, ಪ್ಲ್ಯ್ ಓವರ್, ಪೆಟ್ರೋಲ್ ಬೆಲೆ ಏರಿಕೆ, ರಿಯಲ್ ಎಸ್ಟೇಟ್ ದಂಧೆ, ಮತ್ತೆ ತಲೆಯೆತ್ತಿದ ರೌಡಿ ಪಡೆ, ದಿನೇದಿನೇ ಹೆಚ್ಚಿತ್ತಿರುವ ಆತ್ಮಹತ್ಯೆ, ಸಿಗದ ಉದ್ಯೋಗ, ಏರುತ್ತಿರುವ ಬೆಲೆ - ಹೀಗೆ ಸ್ಥಾವರವಾಗಿರುವ ಸಮಸ್ಯೆಯ ಜೊತೆ ಇತ್ತೀಚೆಗೆ ಸೇರಿಕೊಂಡದ್ದು ಬೀದಿ ನಾಯಿಗಳ ಭಯ, ಪ್ರಳಯದ ಆತಂಕ, ಜೋತಿಷಿಗಳ ಕಾಟ ಮತ್ತು ಕಸ.

ಮಹಾನಗರಕ್ಕೆ ಕಸ ಸೇರುತ್ತಲೇ ಇದೆ. ಅದು ಸಾಂಸ್ಕೃತಿಕ, ರಾಜಕೀಯ, ಆಧುನಿಕತೆ -- ಹೀಗೆ ವಿವಿಧ ಸ್ವರೋಪದ್ದಿರಬಹುದು. ಬಗೆಹರಿಯದ ವಿವಾದಗಳು, ಚುನಾವಣೆಯ ಭಯ, ಭ್ರಷ್ಟಾಚಾರ ಜೊತೆಗೇ ಬೆಂಗಳೂರು ಕಾಲ್ನಡಿಗೆಯಲ್ಲಿ ಸಾಗುವವರಿಗೆ ಮಾರಣಾಂತಿಕ ಆಗುತ್ತಿದೆ. ಬೆಂಗಳೂರಿನ ಮನಸ್ಸನ್ನು ಚರಿತ್ರೆ ಮತ್ತು ವರ್ತಮಾನದ ತಲ್ಲಣಗಳೊಂದಿಗೆ ಹಿಡಿಯುವುದು ನನ್ನ ಆಸೆ, ಅದಕ್ಕೆ ಪೂರ್ವಭಾವಿಯಾಗಿ ಮಾಡಿಕೊಂಡು ಒಂದಿಷ್ಟು ಟಿಪ್ಪಣಿಗಳು, ಅನಿಸಿಕೆಗಳು ಮತ್ತು ಗ್ರಹಿಕೆಗಳು ಇಲ್ಲಿವೆ.

ಕತ್ತಲಲ್ಲಿ ಬೆಳೆವುದೊಂದಿಗೆ ಕೆಲಸ ಎಂಬ ಗೋಪಾಲಕೃಷ್ಣ ಅಡಿಗರ ಕವಿತೆ ಸಾಲು. ಬೆಂಗಳೂರು ಕೂಡ ಕತ್ತಲಲ್ಲಿ ಬೆಳೆಯುತ್ತಿರುವಂತೆ ಭಾಸವಾಗುತ್ತಿದೆ. ಅಭಿವೃದ್ದಿ ಎಂಬುದು ಇಲ್ಲಿ ನಿರನ್ತರ. ಎಲ್ಲಿ ಅಭಿವೃದ್ದಿ ಕಾರ್ಯ ಶಾಶ್ವತವಾಗಿರುತ್ತದೋ ಆ ನಗರ ಜೀವಿಸಲು ಅನರ್ಹ ಅನ್ನಿಸಿ ಕೊಲ್ಲುತ್ತದೆ. ಅದು ಭವಿಷ್ಯಕ್ಕೆ ಕೂಡಿಸಲು ಜಿಪುಣನಂತೆ ವರ್ತಮಾನದಲ್ಲಿ ಉಪವಾಸ ಕೆದಹುವ ಹುನ್ನಾರ.

***********

ಮಹಾನಗರವನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಕಷ್ಟ. ಇಲ್ಲಿ ಬಡತನ, ಶ್ರೀಮಂತಿಕೆ ಎಂಬ ಪದಗಳಿಗೆ ಅರ್ಥವಿಲ್ಲ. ವಿದ್ಯಾವಂತ, ಅವಿವೇಕಿ ಎಂಬ ವರ್ಗೀಕರಣ ಸಲ್ಲ. ಸಾಮೂಹಿಕವಾಗಿ ಏನೂ ನಡೆಯದ, ಸಮೊಹ ಇದು, ರಾಜಕಾರನವೊಂದೇ ಇಲ್ಲಿಯ ಘಟನೆಗಳನ್ನು ನಿಯಂತ್ರಿಸುತ್ತಿದೆ; ವಿದ್ಯಮಾನವನ್ನು ನಿಯಂತ್ರಿಸುತ್ತಿದೆ; ಬದುಕನ್ನು ನಿಯಂತ್ರಿಸುವಂಥ ಶಕ್ತಿ ಯಾವುದೂ ಇಲ್ಲ, ಒಂದು ಮಹಸರೊವರದಲ್ಲಿ ತೇಲುತ್ತಿರುವ ಒಣಗಿದ ಎಳೆಗಳು ಹಾಗೆ ಇಲ್ಲಿ ಮಂದಿ ತೇಲುತ್ತಿರುತ್ತಾರೆ. ಎಲ್ಲೋ ಹುಟ್ಟಿದ ಒಂದು ಅಲೆ ಯಾರನ್ನೋ ಯಾವುದೊ ದಡದತ್ತ ತೆಲಿಸುತ್ತದೆ. ಸರೋವರ ಎಷ್ಟು ವಿಶಾಲವಾಗಿದೆ ಎಂದರೆ ಎಲೆಗಳಿಗೆ ತಾವು ಕೇಂದ್ರದತ್ತ ಚಲಿಸುತ್ತಿದ್ದೆವೋ ದಡದತ್ತಲೋ ಅನ್ನುವುದು ಗೊತ್ತೂ ಆಗುವುದಿಲ್ಲ. ಮಹಾನಗರ ಯೊಚಿಸುತ್ತದೆ. ನಾವು ಅದನ್ನು ನಮ್ಮದು ಅಂದುಕೊಳುತ್ತೇವೆ. ಮಹಾನಗರ ಆಜ್ಞಾಪಿಸುತ್ತದೆ , ನಾವು ಸ್ವಯಂ ಪ್ರೇರಣೆ ಅನ್ದುಕೊಲ್ಲುತ್ತೆವೆ. ಮಹಾನಗರ ಕೊಳ್ಳುತ್ತದೆ, ನಾವದನ್ನು ದೈವಲೀಲೆ ಅನ್ನುತ್ತೆವೆ.


ತೂಫಾನ್ ಮೇಲ್ - ಜಯಂತ ಕಾಯ್ಕಿಣಿ

Toofan Mail (Katha Sankalana) - Jayanta Kaykini




ಮುನ್ನುಡಿಯಿಂದ :

ಐದಾರು ವರ್ಷಗಳ ಹಿಂದೆ ಮುಂಬಯಿಯ ಬೀದಿಯಲ್ಲಿ ಡೊಂಬರ ಮಹಿಳೆಯೊಬ್ಬಳು  -- " ಶಾರುಖ್ ಖಾನ್ ನನ್ನ ಮಗ, ಹಿಂದೆಂದೋ ಜಾತ್ರೆಯಲ್ಲಿ ಕಲೆದುಹೊಗಿದ್ದ. ಅವನೇ ಖಂಡಿತ ಅಲ್ಲಗಳೆಯಲಾರ" -- ಎಂದು ಹಠ ಹಿಡಿದು ಒಂದು ಮಾಯಾ ಕೋಲಾಹಲವನ್ನೇ ಎಬ್ಬಿಸಿಬಿಟ್ಟಳು . ಅವನ ಮನೆಯೆದುರು ರಂಪ ಮಾದಿದಲು. ಕೋರ್ಟಿಗೆ ಹೋಗುತ್ತೇನೆಂದು ರೋಡಿಸಿದಳು. ಪೋಲೀಸರು ನಡುವೆ ಬಂದರು. ಜನ ಅವಳನ್ನು ಭ್ರಮಿತೆ ಅನ್ದರು. ಪತ್ರಿಕೆಗಳೂ ಈ ಸುದ್ದಿಯೊಂದಿಗೆ ಅವರದೆ ಆಟವಾಡಿದುವು. ಶಾರುಖ್ ಖಾನ್ ಮಾತ್ರ ಈ ಪ್ರಸಂಗದುದ್ದಕ್ಕೂ ಒಂದು ಬಗೆಯ ನಿರುಪಾಯ ಸಹಾನುಭೂತಿಯಲ್ಲಿ ಮೊಉನವಾಗಿದ್ದ. ನೀನು ಕೂಡ ನನ್ನ ತಾಹಿಯಂತೆ ಎಂದಾತ ಘನತೆಯಿಂದ ಹೇಳಲು ಯತ್ನಿಸುತ್ತಿರುವಂತೆ ಭಾದವಾಗುತ್ತಿತ್ತು. ಆದರೆ ಮಾತು ಎಲ್ಲವನ್ನೂ ಬೇರೆಯೇ ಆಗಿಸುತ್ತಿತ್ತು ನಂತರ ಎಲ್ಲ ಮರೆಯಾಯಿತು.

ಏಕಾಏಕಿ ಆ ತಾಯಿಗೆ ಹಾಗೇಕೆ ಅನಿಸಿತು? ಮತ್ತು ಈ ಅಪರಿಚಿತ ತಾಯಿಂದ ವಿಚಿತ್ರವಾದ ಅಷ್ಟೇ ತೀವ್ರವಾದ ಹಟ ಶಾರುಖ್ ಖಾನ್ ನನ್ನು ಈಗಲೂ ಹೇಗೆ ಆಳವಾಗಿ ಕುಲುಕುತ್ತಿರುಬಹುದು ?

ಕತೆಗಿಂತ ಮಿಗಿಲಾದ ಸತ್ಯ ಯಾವುದಿದೆ?

ನಾನು ಮುಂಬಯಿಂದ ಬಿಟ್ಟ ಮೇಲೆ - ( ಸದ್ಯ, ಅದು ನನ್ನನ್ನು ಬಿಟ್ಟಿಲ್ಲ ) -- ಕಳೆದೈದು ವರುಷಗಳಲ್ಲಿ ಈ ಹನ್ನೊಂದು ಕತೆಗಳನ್ನು ಬರೆದ್ದಿದ್ದೇನೆ ಎನ್ನುವುದು ನಂಗಂತೂ ಒಳ್ಳೆಯ ಸುದ್ದಿ! ಈ ಸಂಕಲವನ್ನು ಉಮೇದಿಯಿಂದ ಪ್ರಕಾಶಿಸುತ್ತಿರುವ ಪ್ರಕಾಶ್, ಪ್ರಭಾ ಕಂಬತ್ತಳ್ಳಿ, ಬೆನ್ನ ಹಿಂದೆ ಎರಡು ಉತ್ಸಾಹದ ಮಾತಾಡಿರುವ ಗಿರೀಶ್ ಕಾರ್ನಾಡ್, ತಮ್ಮ 'ಫ್ಯಾಂಟಮ್ ಲೇಡಿ" -- ಛಾಯಾಚಿತ್ರ ಸರಣಿಯ ಬಿಂಬಗಳನ್ನು ಹೂದಿಕೆಗೆ ಬಳಸಲು ಸಮ್ಮತಿ ಕೊಟ್ಟ ಕಲೆಗಾರ್ತಿ ಪುಷ್ಪಮಾಲ ಎನ್., ಅದನ್ನು ವಿನ್ಯಾಸಗೊಳಿಸಿದ ಶ್ರೀಪಾದ್, ಈ ಕತೆಗಳನ್ನು ಪ್ರಕಟಿಸಿದ ಕನ್ನಡ ಪ್ರಭ, ಲಂಕೇಶ್ ಪತ್ರಿಕೆ, ಸುಧಾ, ಪ್ರಜಾವಾಣಿ, ..... ಇವರೆಲ್ಲರ ಮಿತ್ರಋಣ ಈ ಪುಸ್ತಕದ ಹಿಂದಿದೆ .

ಸ್ಪೋರ್ತಿಯನ್ನೂ ಸ್ತೈರ್ಯವನ್ನು ಸೂಸುವ ಅಕ್ಕರೆಯ ಲೋಕ ಕಣ್ಣ ಮುಂದಿದೆ .


Wednesday, January 1, 2014

ಶಾಲಭಂಜಿಕೆ - ಕೆ ಎನ್ ಗಣೇಶಯ್ಯ

Shalabanjike - K. N. Ganeshaiah

 



ಮುನ್ನುಡಿಯಿಂದ:

ನನ್ನ ಹಿರಿಯ ಸ್ನೇಹಿತರೊಬ್ಬರು ಬೈಪಾಸ್ ಸರ್ಜರಿ ಮಾಡಿಸಿಕೊಂಡು ಮನೆಯಲ್ಲಿದ್ದಾಗ ನೋಡಲೆಂದು ಹೊಗಿದ್ದೆ. ಡಾಕ್ಟರ್ ಸೂಚನೆಯಂತೆ ಸಮಯಕ್ಕೆ ತಕ್ಕ ಶುಶ್ರೂಷೆ ಮಾಡುತ್ತಿದ್ದ ಅವರ ಪತ್ನಿ ನನ್ನನ್ನು ಒಳಗೆ ಬರಮಾಡಿಕೊಂಡು ಅವರಿಗಿದ್ದ ಸ್ಥಿತಿಯಲ್ಲಿ ಅಲ್ಲಿಗೆ ಕರೆದೊಯ್ಯಲು ಮುಜುಗರಗೊಂಡು, ನನ್ನ ಕೈಗೆ 'ದ ವೀಕ್' ವಾರಪತ್ರಿಕೆ ಕೊಟ್ಟು ಕೆಲವೇ ನಿಮಿಷದಲ್ಲಿ ಅವರನ್ನು ತಯಾರಿಗೊಳಿಸುವುದಾಗಿ ಹೇಳಿ ಒಲಹೊದರು. ಆ ವಾರಪತ್ರಿಕೆಯ ಪುಟಗಳನ್ನೂ ತಿರುವಿ ಹಾಕುತ್ತಿದ್ದಂತೆ ಅಲ್ಲಿ ಕಂಡ ಶಾಲಭಂಜಿಕೆ ವಿವರಗಳು ನನ್ನೊಳಹೊಕ್ಕು, ಶಾಲಭಂಜಿಕೆ ನನ್ನನ್ನು ಕಾಡಲು ಪ್ರರಮ್ಭಿಸಿದಲು. ಅಷ್ಟು ಸುಂದರ ಮೂರ್ತಿಯನ್ನು ಕೆತ್ತಿದ ಶಿಲ್ಪಿಯ ವಿವರಗಳನ್ನು ಹುದುಕತೊಡಕಿದೆ. ಆಗ ನನಗೆ ದೊರೆತ ವಿಷಯಗಳು ನನ್ನನ್ನು ಶಾಲಭಂಜಿಕೆಯ ಸುತ್ತ ಕತ್ತಿಹಾಕಿದೆವು.


ಹೀಗೆ ಹುಟ್ಟಿದ ನನ್ನ 'ಶಾಲಭಂಜಿಕೆ' ಶ್ರೀ ನಾಗೇಶ್ ಹೆಗಡೆಯವರ ಮನಸ್ಸಿನ ಕಣ್ಣಿಗೂ ಮೆಚ್ಚುಗೆಯಾಗಿ, ಅವರು ನನಗೆ ಕರೆ ಮಾಡಿ 'ಈಗ ನನಗಿರುವ ಚಾಲೆಂಜ್ ಎಂದರೆ ಸುಧಾಗೆ ಈ ಕತೆಗೆ ತಕ್ಕ ಚಿತ್ರಗಳನ್ನು ಬರೆಸುವುದು' ಎಂದಾಗ ನಾನು ಒಪುಳುಕಗೊಂಡಿದ್ದೆ, ಕೊನೆಗೆ ಅವರ ಕಲ್ಪನಾ ಮೂಸೆಯಲ್ಲಿ 'ಸುಧಾ' ಮೂಖಪುತದೊಂದಿಗೆ ಮೂಡಿ ಬಂಡ 'ಶಾಲಭಂಜಿಕೆ' ಮನೆಮಾತಾಗಿಬಿಟ್ಟಳು. ಇಷ್ಟಲ್ಲದೆ, 'ಸುಧಾ' ಮೂಲಕ ಅವರಿತ್ತ ಓತ್ತೆಜನಕ್ಕಾಗಿ ನಾನು ಅವರಿಗೆ ಎಂದು ಋಣಿ.


ಆದರೆ ಇಲ್ಲಿನ ಎಲ್ಲ ಕತೆಗಳೂ ಹೀಗೆ ಅಕಸ್ಮಾತ್ ಘಟನೆಗಳಿಂದ ರೂಪಗೊಂಡಿಲ್ಲ. ಸೋಮನಾಥಪುರದ ವೀನುಗೊಪಾಲನ ಎದೆಯಲ್ಲಡಗಿರುವ ಗೋಮುಖ ನನ್ನನ್ನು ೨೦ ವರ್ಷಗಳಿಂದ ಆವರಿಸಿ 'ಎದೆಯಾಳದಿಂದೆದ್ದ ಗೋವು' ಕತೆಯಾದರೆ, ನಮ್ಮೂರಿನ ಬಳಿಯ ಶಿಲಾವೃತ್ತಗಳು ಮತ್ತು ನಾನು ಮಗುವಾಗಿ ಕಂಡ ತಾಯಿಯೊಬ್ಬಳ ತುಮುಲ 'ಶಿಲಾವ್ಯೂಹ'ವಾಗಿ ಬೆಳೆದವು. ಅಂಡಮಾನಿನಲ್ಲಿ ಕಾರ್ಯನಿರತರಾಗಿದ್ದ ಡಾ. ಬೆಳವಾಡಿ ಅವರೊಂದಿಗೆ ನನ್ನ ಚರ್ಚೆಯ ಫಲ 'ಪರತ್ಯಾಗ'ವಾದರೆ, ಈಜಿಪ್ಟಿನ 'ಪಿರಮಿಡ್ಡಿನ ಗರ್ಭದಲ್ಲಿ' ದೊರೆತ ತಾಳೆಗರಿಗಳನ್ನು ಆಧರಿಸಿ ವೀಣಾ ಕೈಗೊಂಡ ಹಸುಗಳ ಗರ್ಭಧಾರಣೆ ಕುರಿತು ಕುತೂಹಲಕಾರಿ ಸಂಶೋಧನೆ ಆದೇ ಹೆಸರಿನ ಕಥೆಗೆ ಆಧಾರವಾಯಿತು. ಅಮೇರಿಕಾದಿಂದ ಬಂದು, ಬಿಳಿಗಿರಿರಂಗನ ಬೆಟ್ಟದಲ್ಲಿ ಜೀನುನೋನಗಳ ಬಗ್ಗೆ ಪೂಜಾ ಕೈಗೊಂಡ ಸಂಶೋಧನೆಯ ಬಗೆಗಿನ ಕುತೂಹಲ 'ನಂಜಾದ ಮಧು'ವಾದರೆ, ಕೆಂಪೇಗೌಡನ ಸೊಸೆ ಹೀಗೆ ಕೋಟೆಗಾಗಿ ತ್ಯಾಗ ಮಾಡಿರಬಹುದು ಎನ್ನುವುದನ್ನು ನನ್ನ ಮಗಳಿಗೆ ಲಾಜಿಕ್ ಆಗಿ ವಿವರಿಸುವ ಚಾಲೆಂಜ್ ಉತ್ತರವಾಗಿ 'ಇಮ್ಮಡಿ ಗೋಪುರಗಳು' ನಿಂತವು.


ಹೀಗೆ ಈ ಎಲ್ಲ ಕತೆಗಳಿಗೆ ನೈಜ ಘಟನೆಗಳ ಮತ್ತು ವಸ್ತುಗಳ ಸುತ್ತ ಹೆಣೆದ ಕಲ್ಪನೆಗಳಾಗಿದ್ದು, ಅವುಗಳಲ್ಲಿ ಸತ್ಯ ಮತ್ತು ಕಲ್ಪನೆಗಳು ಸ್ವಾಭಾವಿಕವಾಗಿ ಬೇರೆತುಹೂಗಿವೆ. ಹಾಗೆಯೇ ಈ ಕತೆಗಳಿಗೆ ಕಾರಣರಾದ ಎಲ್ಲರನ್ನು ನಾನು ಸಾಧ್ಯವಾದಷ್ಟು  ಆಯಾ ಕತೆಗಳ ಪಾತ್ರದಾರಿಗಳಾಗಿ ತೊರೆಯಲು ಪ್ರಯತ್ನಿಸಿದ್ದೇನೆ ಕೂಡ; ಒಮ್ಮೆಮ್ಮೆ ಬೇರೆಯದೇ ಹೆಸರಿನಲ್ಲಿ ಅಡಗಿಟ್ಟಿಸ್ಸಿದ್ದೇನೆ.


Tuesday, December 31, 2013

ಯಕ್ಷಪ್ರಶ್ನೆ - ತಾ.ರಾ.ಸು

Yaksha Prashne = Ta Ra Su

 


ಮುನ್ನುಡಿಯಿಂದ:

ನನ್ನ ಈ ಹೊಸ ಕಾದಂಬರಿಗಿಟ್ಟ ಹೆಸರನ್ನು ಒದುತ್ತಿದ್ದಹಾಗೇ ವಾಚಕರಿಗೆ 'ಮಹಾಭಾರತ'ದಲ್ಲಿ ಬರುವ ಯಕ್ಷ ಪ್ರಶ್ನೆಯ ಕಥಾಭಾಗ ನೆನಪಿಗೆ ಬರುವುದು ಸ್ವಾಭಾವಿಕ.

ಕಾಡಿನ ಅಲೆತದಿಂದ ಬಾಯಾರಿ, ಕೊಳ ಒಂದಕ್ಕೆ ನೀರು ಕುಡಿಯಲೆಂದು ಬಂಡ ಪಂಚ ಪಾಂಡವರಲ್ಲಿ ಮೊದಲನೆಯ ನಾಲ್ವರು, ಆ ಕೊಳದಲ್ಲಿ ವಾಸವಾಗಿದ್ದ ಯಕ್ಷನೊಬ್ಬನು ಕೇಳಿದ ಜೀವನದ ಮೂಲಭೂತ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರ ಕೊಡಲಾಗದೆ,ನೀರು ಕುಡಿಯಲು ಹೋಗಿ ಮೃತರಾಗುತ್ತಾರೆ. ಕೊನೆಗೆ ಧರ್ಮರಾಯ ಆ ಪ್ರಶ್ನೆಗೆಲ್ಲಕ್ಕೂ ಉತ್ತರ ಕೊಟ್ಟು,ಯಕ್ಷನನ್ನು ತ್ರುಪ್ತಿಪಡಿಸಿ, ತನ್ನ ತಮ್ಮಂದಿರನ್ನು ಬದುಕಿಸಿ ಕೊಳ್ಳುತ್ತಾರೆ.

ಇದು ಸ್ಥೂಲವಾಗಿ 'ಮಹಾಭಾರತ'ದಲ್ಲಿ ಬರುವ ಕಥೆ. ಇದೊಂದು ಕುತೂಹಲಕಾರಿಯಾದ, ರಮ್ಯ ಕಥೆಯಾಗಿದ್ದಂತೆಯೇ ಸಾಂಕೇತಿಕ ಮಹತ್ವವನ್ನು  ಪಡೆದ ವಿಷಯವಾಗಿಯೂ ಇದೆ.

ಬಾಳಿನ ಸುಖ ಸಂತೋಷಗಳಿಗಾಗಿ ಬಾಯಾರಿ, ಅವುಗಳ ತೃಪ್ತಿಯತ್ತ ಧಾವಿಸುವ ಮನುಷ್ಯ, ಆ ಸಮಯದಲ್ಲಿ ಬಾಳಿನ ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬರುತ್ತದೆ. ಅಂಥ ಸವಾಲುಗಳನ್ನು ಎದುರುಸಿ, ಉತ್ತರ ಕೊದಬಲ್ಲವನು ಬದುಕುತ್ತಾನೆ, ಇಲ್ಲವಾದವನು ಸೋತು,ಜೀವನ್ಸ್ಮ್ರುತನಾಗುತ್ತಾನೆ, ನಮ್ಮ ಸುತ್ತಲ ಬಾಳಿನಲ್ಲಿ, ಇಂಥ ಸಮಯದಲ್ಲಿ, ಗೆಲ್ಲುವವರಿಗಿಂತ ಸೋಲುವವರೇ ಹೆಚ್ಚು. ಇದು ದಿನದಿನವೂ ನಾವು ಕಂಡುಕೊಂಡ ಸತ್ಯ. 

ನಿತ್ಯಜೀವನದಲ್ಲಿ, ಸಾಮಾನ್ಯ ಮಾನವನ ಬಾಳು ಎದುರಿಸಬೇಕಾದ ಹಲವಾರು ಸವಾಲುಗಳಲ್ಲಿ ಲೈಂಗಿಕ ಸಮಸ್ಯೆಯೂ ಇದನ್ನು ಕಾಮವೆನ್ನಿ, ಪ್ರೇಮವೆನ್ನಿ, ಎನಾದರೊ ಹೆಸರಿಟ್ಟು ಕರೆಯಿರಿ - ಒನ್ದು. ಅತ್ಯಂತ ಸಾಮಾನ್ಯ ಮನುಷ್ಯನ ಬಾಳೂ ಈ ಸಮಸ್ಯಯ ಆಘಾತಕ್ಕೆ ಹೊರತಾಗಿಲ್ಲ. ನಮ್ಮ ಸುತ್ತಲು ಸಹಸ್ತ್ರಾರು ಕುಟುಂಬಗಳಲ್ಲಿ ವ್ಯಕ್ತವಾಗಿಯೋ, ಅವ್ಯಕತವಾಗಿಯೋ ಕಾಣುವ ಸುಖ ಸಂತೋಷ, ದುಃಖ = ದುರಂತಗಳ ಬುನಾದುಯಲ್ಲಿ, ಈ ಸಮಸ್ಯ ಕಂಡ ಹಾಗೆಯೋ, ಕಾನದಮ್ತೆಯೋ ಹುದುಗಿದೆ. ಮಾನವನ ಬಾಳಿನ ಈ ಸುಖಾಂತ, ದುರಂತಗಳಿಗೆ, ಸಾಮಾನ್ಯ ಮಾನವ ವಿಧಿ ಎಂಬ ಕಾರಣವನ್ನು ಆರೋಪಿಸಿ ಸಮಾಧಾನ ಪಡೆಯಲೆತ್ನಿಸಿದರೆ, ಮನೋವಿಜ್ಞಾನಿ ಮಾನವನ ಸುಪ್ತ ಚಿತ್ತದಲ್ಲಿ ಹುದುಗಿರುವ ಕಾರಣಗಳನ್ನು ಬೆದಕಿ, ಹಲವಾರು ಹೆಸರಿನ ವೈಜ್ಞಾನಿಕ ಕಾರನಗನ್ನು ತೋರಿಸುತ್ತಾನೆ.

ವಿಧಿಯೆಂದೇ ಹೇಳಲಿ, ಗತ ಘಟನೆಯ ಪ್ರಭಾವದಿಂದ ಸುಪ್ತ ಚಿತ್ತಕ್ಕಾದ ಆಘಾತದ ಪರಿಣಾಮವೆಂದೇ ಹೇಳಲಿ, ಏನಾದರೂ ಜನ್ನ ಮಹಾಕವಿ ಹೇಳಿದ ಮಾತು, 'ಮನಸಿಜನ ಮಾಯೆ ವಿಧಿ ವಿಲಸನದ ನರಂಬಡೆಯೆ ಕೊಂದು ಕೂಗದೆ ನರರಂ'ಎಂಬ ನಿತ್ಯಸತ್ಯ.

ಆ ಸತ್ಯವೇ ಇಲ್ಲಿ. ಈ ಕಾದಂಬರಿ ರೂಪವಾಗಿ ಚಿತ್ರಿಸವಾಗಿದೆ



Friday, November 22, 2013

ಕನಕ ಮುಸುಕು - ಕೆ ಎನ್ ಗಣೇಶಯ್ಯ

Kanaka Musuku -  K. N. Ganeshaiah

ನಾಗೇಶ ಹೆಗಡೆರವರು ಬರೆದಿರುವ ಮುನ್ನುಡಿಯಿಂದ :
"ಕನಕ ಮುಸುಕು" ಕಾದಂಬರಿ ೨೦೦೫ರ ಕೊನೆಯಲ್ಲಿ "ಸುಧಾ" ವಾರಪತ್ರಿಕೆಯಲ್ಲಿ ವಾರವಾರವೂ ಬರತೊಡಗಿದಾಗ ಅದು ಕೇವಲ ಧಾರಾವಾಹಿಯಾಗಿ ಬರಲಿಲ್ಲ, ನಿಂತ ನೀರಂತಿದ್ದ ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಧಾರೆಯಾಗಿ ಬನ್ತು. ಕನ್ನಡ ಓದುಗರಿಗೆ ಮಿಂಚಿನ ಪುಳಕ ನೀಡುತ್ತ ಬಂತು.
ಅದುವರೆಗೆ ಕನ್ನಡದಲ್ಲಿ ಚಾರಿತ್ರಿಕ ಕಥಾನಕಗಳು ಅದೆಷ್ಟೋ ಬಂದಿದ್ದವು, ಮಾಸಲೆ ಸೇರಿಸಿದ ಪತ್ತೇದಾರಿ ಕಾದಂಬರಿಗಲಂತೂ ಲೆಕ್ಕವಿಲ್ಲದಷ್ಟು ಬಂದಿದ್ದವು. ಆದರೆ ಅವೆರಡರ ಸಂಗಮದಂತೆ ಐತಿಹಾಸಿಕ ಘಟನೆಗಳ ನೆಲೆಗಟ್ಟಿನಲ್ಲಿ ಇಂದಿನ ವಿದ್ಯಮಾನಗಳನ್ನು ರೋಚಕವಾಗಿ ಹೆಣೆದ ಚಾರಿತ್ರಿಕ ಥ್ರಿಲ್ಲರ್ ಮಾತ್ರ ನಮ್ಮ ಭಾಷೆಯಲ್ಲಿ ಇರಲ್ಲಿಲ್ಲ. ಈಚೆಗಷ್ಟೇ ಇಂಗ್ಲೀಷಿನಲ್ಲಿ ಡ್ಯಾನ್ ಬ್ರೌನನ "ಡಾ ವಿನ್ಸಿ ಕೋಡ್" ಹೆಸರಿನ ಚಾರಿತ್ರಿಕ ಥ್ರಿಲ್ಲರ್ ಜನಪ್ರಿಯತೆಯಾ ಉತ್ತುಂಗಕ್ಕೇರಿ ಭಾರತಿಯ ಓದುಗರ ಕೈಯಿಂದ ಕೈಗೆ ದಾಟುತ್ತಿದ್ದಾಗ "ನಮ್ಮ ಕಾದಮ್ಬರಿಕಾರರಿಗೇಕೆ ಇಂಥದ್ದೊಂದು ವಿಷಯ ಹೊಳೆಯುವುದಿಲ್ಲ?" ಎಂದು ಅನೇಕರು ಚರ್ಚಿಸಿದ್ದು ಉನ್ತು. ಚರ್ಚೆ ಇನ್ನು ಪೂರ್ತಿಗೊಳ್ಳುವ ಮೊದಲೇ,ಚರ್ಚೆ ಮೂಕ್ತಾಯ ಹಾಡುವಂತೆ ಕಾಣಿಸಿಕೊಂಡಿತು "ಕನಕ ಮುಸುಕು"

ಕನ್ನಡದ ಮಟ್ಟಿಗೆ ಹೊಸದೊಂದು ಮೈಲಿಗಲ್ಲು ಅನ್ನುವಂತೆ ಈ ಕಾದಂಬರಿಯಲ್ಲಿ ಅನೇಕ ಹೊಸತುಗಳಿವೆ. ಮೊದಲೆನೆಯದಾಗಿ ಗ್ರಂಥಕರ್ತರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು, ಇನ್ನೂ ವಿಶೇಷ ಉಪನ್ಯಾಸ, 'ಏಟ್ರಿ'ಯಂಥ ಜನಪರ ಸಂಘಟನೆಯ ಕೆಲಸ. ಅನೇಕ ಸಂಘ ಸಂಸ್ಥೆಗಳಿಗೆ ಸಲಹಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ.

ಇವರ ಈ ಚೊಚ್ಚಲ ಕಾದಂಬರಿಯ ಹಸ್ತಪ್ರತಿ ನನ್ನ ಕೈ ತಲುಪಿದಾಗ ನಾನು ಅದೇ ತಾನೆ 'ಸುಧಾ'ದ ಊಸ್ತುವಾರಿ ವಹಿಸಿಕೊಂಡಿದ್ದೆ. ನನ್ನ ಪತ್ರಿಕೆಗೆ ಹೊಸ ಹೊಳಪು ಕೊಡಬೇಕು, ಹೊಸ ಛಾಪು ಮೂಡಿಸಬೇಕು , ಎಳೆಯ ಪೀಳಿಗೆಯನ್ನು ಆಕರ್ಷಿಸಬೇಕು ಎಂಬೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಜೋಡಿಸುವಾಗ ತಾನಾಗಿ ಬಂಡ ಕೃತಿ ಇದು. ಪ್ರಸಿದ್ದ ವಿಜ್ಞಾನಿಯೆಂದು ಖ್ಯಾತಿ ಪಡೆದ ಡಾ. ಗಣೇಶಯ್ಯನವರ ಬಗ್ಗೆ ಗೊತ್ತಿತ್ತಾದರೂ ಇವರು ಕನ್ನಡ ಕಾದಂಬರಿ ಬರೆಯುತ್ತಾರೆಂಬುದೇ ಅಚ್ಚರಿಯ ಸಂಗತಿಯಾಗಿತ್ತು. ಕುತೂಹಲದಿಂದ ನಾಲ್ಕಾರು ಪುಟಗಳನ್ನು ಮಗುಚಿದಾಗ ಅಲ್ಲಿ ಬಳಸಿದ್ದ ಪ್ರಬುದ್ದ ಭಾಷೆ, ಚುರುಕಿನ ನಿರೂಪಣೆ ಮೊದಲ ನೋಟಕ್ಕೇ ಗಮನ ಸೆಳೆಯಿತು. ಮನೆಗೆ ಒಯ್ದು ಒಂದೇ ಕಂತಿನಲ್ಲಿ ಓದಿ ಮುಗಿಸಿದ್ದಾಯಿತು.

ಹೊಸ ಸಾಹಿತಿಯೊಬ್ಬರನ್ನು ಹೊಸ ರೀತಿಯಲ್ಲಿ ಓದುಗರಿಗೆ ಪರಿಚಯಿಸುವ ಮಾರ್ಗವನ್ನು ದಾ. ಗಣೇಶಯ್ಯ ನಮಗೆ ತೋರಿಸಿಕೊಟ್ಟರು. 'ಕನಕ ಮುಸುಕು' ಪ್ರಕಟಿಸುವ ಮೊದಲು ಅವರೇ ರಚಿಸಿದ ಇನ್ನೊಂದು ಐತಿಹಾಸಿಕ ನೀಳ್ಗತೆ 'ಶಾಲಭಂಜಿಕೆ'ಯನ್ನು ಅವರು ಪ್ರಕಟಣೆಗೆ ಕಳುಹಿಸಿದರು. ಅದು 'ಸುಧಾ'ದ ವಿಶೇಷ ಮೂಖಪುಟ ಕತೆಯಾಗಿ ಪ್ರಕಟವಾದಾಗ ಓದುಗರ ಅಪಾರ ಮೆಚ್ಚುಗೆ ಪಡೆಯಿತು. ಸಮಕಾಲೀನ ನೈಜ ವರದಿಯಿಂದ ಮೆಲ್ಲಗೆ ಗತಕಾಲಕ್ಕೆ ಜಾರಿಕೊಳ್ಳುವ ರೋಚಕ ಹಂದರದಿಂದಾಗಿ ಅದು ನೈಜ ಕತೆಯೆ, ಕಾಲ್ಪನಿಕ ಸೃಷ್ಟಿಯ ಎಂಬುದು ಮೊದಲ ಓದಿಗೆ ಗೊತ್ತಾಗದಂಥ ನೀರುಪಣಾ ಕೌಶಲವನ್ನು ಓದುಗರ ಮೆಲಕು ಹಾಕುತ್ತಿದ್ದಂತೆಯೇ ಹೊಸ ಕಾದಂಬರಿಕಾರನೊಬ್ಬನ ಆಗಮನಕ್ಕೆ ವೇದಿಕೆ ಸಜ್ಜಾಗಿತ್ತು. 'ಕನಕ ಮುಸುಕು' ಕೂಡ ಅಷ್ಟೆ ಮುಸುಕಿನ ಜೋಳದ ಮೂಲಸ್ಥಾನ ನಿಷ್ಕರ್ಷೆಯ ಬಗೆಗಿನ ಸಮಕಾಲೀನ ಸಮಸ್ಯೆಯೊಂದರ ಮುಡುಕು ತೆರೆಯುವ ಲೇಖನದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಸುದೀರ್ಘ ಕಥಾಹಂದಕ್ಕೊಂದು ಕೌತುಕದ ನೆಲೆಗಟ್ಟು ಸಿದ್ದವಾಗುತ್ತದೆ.

ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳು ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಓದುಗರ ಕುತೂಹಲವನ್ನು ಹಿಂದೆಯೂ ಅಲ್ಲಲ್ಲಿ ಕೆನೆಕಿದ್ದ, ಇಂದಿಗೂ ಒಗಟಾಗಿಯೇ ಉಳಿದ 'ಸಿರಿಭೂವಲಯ'ದ ಪರಿಕಲ್ಪನೆಯನ್ನು ತೀರ ಸಹಜವೆಂಬಂತೆ ಕಥೆಯಲ್ಲಿ ಸೇರಿಸಿದ್ದು, ತಾಳೆಗರಿಯ ಲಿಪಿಯಲ್ಲಿ ಅಂಕಾಕ್ಷರ ಸೂತ್ರಗಳ ಮೂಲಕ ಜೈನ ಸಿರಿಸಂಪತ್ತಿನ ಕೀಲಿಕೈಯನ್ನು ಬಚ್ಚಿಟ್ಟಿದ್ದು ಎಲ್ಲವೂ ಮೂಂದಿನ ಅಧ್ಯಾಯಾಕ್ಕಾಗಿ ಕಾಡು ಕೂರುವಂತೆ ಮಾದುತ್ತೆ. ಇಂದು ನೆನ್ನೆಗಳ ಮಧ್ಯೆ ತಾಕಲಾತವಾಡುತ್ತ ಘಟನೆಗಳು ತೆರೆದುಕೊಳ್ಳುತ್ತವೆ. ಸಿನಿಮಾ ರೀಲಿನಂತೆ, ನವೆಂಬರ್ 6 ರಿಂದ ಗಂಟೆ ಗಂಟೆ ಲೆಕ್ಕಾಚಾರದಂತೆ ಹತ್ತು ದಿನಗಳಲ್ಲಿ ಕಥೆಯನ್ನು ಮುಗಿಸುವ ಜಾಣ್ಮೆ ಕೂಡ ಕನ್ನಡದ ಈಚಿನ ಓದುಗರಿಗೆ ಹೊಸದೆಂದೇ ಹೆಲಬಹುದು. ಸೇಟಲೈಟ್ ಚಾನೆಲ್, ಸೆಲ್ ಫೊನೆ. ಈ-ಮೇಲ್, ನೆಟ್ ಚಾಟ್ ಗಳ  ಈ ಯುಗದಲ್ಲಿ ಕಾದಂಬರಿಯ ನಾಯಕಿಯೂ ಅಂಥದ್ದೇ ಹೈ -ಟೆಕ್ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾವೆಲ್ ಮಾಡುತ್ತ ಭೂತ=ಭವಿಷ್ಯಗಳನ್ನು ಬೆಸೆಯುವ ಕರಿಕಾರ್ತಿಯಾಗಿರುವುದು ಇಂಗ್ಲಿಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೋದ ಪೀಳಿಗೆಗೂ ಆಕ್ರಶಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದ್ದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ.
ಇವೆಲ್ಲವುಗಳ ಹಿಂದಿನ ಸೃಜನಶೀಲ ಮನಸ್ಸು ನಮ್ಮನ್ನು ಅಚ್ಚರಿಗೊಳಿಸಬೇಕು. ವಿಜ್ಞಾನಿಯೊಬ್ಬ ತನ್ನ ಸಂಶೋಧನ ಕ್ಷೇತ್ರದ ಮಾಹಿತಿಗಳನ್ನು ಥ್ರಿಲ್ ಕೊಡುವ ಕಥಾ ರೂಪದಲ್ಲಿ ಹಣೆಯುವುದು ಅಷ್ಟೇನು ಸವಾಲಿನ ಕೆಲಸವಾಗಲಾರದು. ಇಲ್ಲಿ ಹಾಗಲ್ಲ, ಇತಿಹಾಸದ ಗರ್ಭದಲ್ಲಿ ಅಡಗಿದ ಸಂಗತಿಗಳನ್ನು ಸಾಧಾರ ಹೊರಕ್ಕೆಳೆದು, ವರ್ತಾಮಾನದೊಂದಿಗೆ ಬೆರೆಸಿ ಕಲ್ಲತ್ಮಾಕ ಹೆನೆಗೆ ಮಾಡಿದ್ದು ಅಪರೂಪದ ಸಾಧನೆಯೇ ಸರಿ.
ಅಲ್ಲಲ್ಲಿ ಕಡೆದಿಟ್ಟ ಕಲ್ಲುಳುಗಳ ಅವಶೇಷಗಳಲ್ಲಿ ಗತಕಾಲದ ನಮ್ಮ ರೋಚಕ ಚರಿತ್ರೆಗಳು ಹೂತುಹೊಗಿವೆ; ಇಲ್ಲವೇ ನೀರಸ ಪಠ್ಯಗಳಾಗಿ ಶಿಕ್ಷಕರ ನೋಟ್ ಬುಕ್ ಗಳಿಂದ ವಿದ್ಯಾರ್ಥಿಗಳ ನೋಟ್ ಬುಕ್ ಗಳಿಗೆ ದಾಟಿ ಯಾರನ್ನು ತಟ್ಟದೆ ಸಾಗುತ್ತಿವೆ. ಚರಿತ್ರೆಯ ಬಗೆಗಿನ ಅಂಥ ಅಸಡ್ಡೆಯನ್ನು ನಿವಾರಿಸಿ ಹೊಸ ಸಂಶೋಧನೆಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಇಲ್ಲವೇ ಕಡೇ ಪಕ್ಷ ಅಲಿದಿಳಿದ ಶಿಲ್ಲಸಾಕ್ಷಿಗಳತ್ತ ತುಸು ಗೌರವದಿಂದ ನೋಡುವಂತಾಗಲು ಇಂದು ತ್ರಿಲ್ಲೆರ್ಗಳ ಅಗತ್ಯ ತುಂಬಾ ಇದೆ. ಅದನ್ನು ಸಮಕಾಲೀನ ವಿಜ್ಞಾನಿಯೊಬ್ಬರು ತೋರೀಸಿಕೊಟ್ಟಿದ್ದಾರೆ. ಮುಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಹಿಸುವಂತೆ ಹೊಸ ದೇವಿಗೆ ಹಚ್ಚಿದ್ದಾರೆ.
ದಾ. ಗಣೇಶಯ್ಯ ಕನ್ನಡಕ್ಕೆ ದಕ್ಕಿದ ಹೊಸ ಆಸ್ತಿ.

ಮೂಲhttp://goo.gl/x3yM9L
ಡಾ. ಕೆ. ಎನ್. ಗಣೇಶಯ್ಯನವರು ಭಾರತದ ಪುರಾತನ ಮತ್ತು ಸವಿಸ್ತಾರವಾದ ಇತಿಹಾಸವನ್ನು ಅಡಿಗಲ್ಲಾಗಿ ಇಟ್ಟುಕೊಂಡು, ಇಂದಿನ ಮನುಷ್ಯನ ಅತಿ ಆಸೆಯನ್ನು ಕಟ್ಟಡದ ಇಟ್ಟಿಗೆಗಳಂತೆ ಬಳಸುತ್ತಾ ಅತ್ಯಂತ ರೋಚಕವಾಗಿ ಕಥೆಯನ್ನು ನಮಗೆ ಹೇಳುತ್ತಾ ಹೋಗುತ್ತಾರೆ. ಅವರಿಗೆ ಗೊತ್ತು ನಮ್ಮ ಕನ್ನಡದ ಓದುಗರಿಗೆ ತೀರ ಹೊಸ ಅಥವಾ ತೀರ ಹಳೆಯದನ್ನು ಹೇಳಿದರೆ ಓದಲಾರರು ಎಂದು. ಹಾಗಾಗಿ ಎಷ್ಟು ಬೇಕೋ ಹೊಸ ತಂತ್ರಜ್ಞಾನವನ್ನು ಬಳಸಿ ಭಾರತ/ಕರ್ನಾಟಕದ ಸಂಸ್ಕೃತಿ ಗೆ ಒಗ್ಗುವ ಹಾಗೆ ಕಥೆಯನ್ನು ಬಿಡಿಸಿಡುತ್ತಾರೆ. ಇನ್ನೊಂದು ಮುಖ್ಯವಾಗಿ ಹೇಳಬೇಕಾದ್ದು ಪ್ರತಿ ಕಾದಂಬರಿಗೆ ಇವರು ಮಾಡುವ ಸಂಶೋಧನೆ. ಇತಿಹಾಸದಲಿ ಎಲ್ಲೋ ಕರಗಿಹೋದ/ಮರೆಯಾದ ಸತ್ಯಗಳನ್ನು ಹೇಳುತ್ತಾ ಹೋಗುತ್ತಾರೆ. ಮೂಲತಹ ಕೃಷಿ ವಿಜ್ಞಾನಿಗಳಾಗಿರುವ ಇವರು ಸಸ್ಯ ಥಳಿ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. 'ಕಪಿ ಲಿಪಿ ಸಾರ' ದಲ್ಲಿ ಇವರು 'ಸಂಜೀವಿನಿ' ಯನ್ನು ಹುಡುಕುವ ಕಥೆಯನ್ನು ಹೇಳುತ್ತಾರೆ. ಅಷ್ಟೇ ಅಲ್ಲದೆ ರಾಮಾಯಣ ಆದಮೇಲೆ ಹನುಮಂತ ಎಲ್ಲಿ ಹೋದ? ಅಂಡಮಾನ್ ಗೆ ಅಂಡಮಾನ್ ಅಂತಾನೆ ಯಾಕೆ ಕರಿತಾರೆ?. ಹಾಗೂ ಜೀವ ವಿಜ್ಞಾದಲ್ಲಿ ಇತ್ತೆಚೆಗಾಗಿರುವ ಬೆಳವಣಿಗೆಗಳು ಇತ್ಯಾದಿಗಳನ್ನೂ ಬಳಸಿ ಸುಂದರವಾದ ಅಷ್ಟೇ ಕುತೂಹಲಕರವಾದ ಒಂದು ಲೋಕವನ್ನೇ ಸೃಷ್ಟಿಸುತ್ತಾರೆ.
ಇಷ್ಟೆಲ್ಲಾ ಹೇಳಿದಮೇಲೆ ನಾನು ಅವರ ಅಭಿಮಾನಿಯಾಗಿದ್ದೀನಿ ಅಂತ ಬಿಡಿಸಿ ಬೇರೆ ಹೇಳಬೇಕಾಗಿಲ್ಲ ಅಲ್ಲವೇ. ಹಾಗಾಗಿ ಮತ್ತೆರಡು ಪುಸ್ತಕ ತಂದಿರುವೆ ಇವರದೇ :) ಅದರಲ್ಲಿ ಒಂದನ್ನು ಮುಗಿಸಿರುವೆ. ಆ ಪುಸ್ತಕದ ಹೆಸರು 'ಕನಕ ಮುಸುಕು'. ಈ ಕಾದಂಬರಿಯ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕೆಂದರೆ, ಇಸ್ರೋ ಸಂಸ್ಥೆಯ ಚಿತ್ರ ಒಂದು ಕರ್ನಾಟಕದ ಸೋಮನಾಥ ಪುರದ ಸುತ್ತ ಅಸ್ವಾಭಾವಿಕ ದಿಬ್ಬಗಳನ್ನು ತೋರಿಸುತ್ತದೆ. ಇದನ್ನು ಅರ್ಥೈಸಲು ಹೋದಾಗ ಕೆಳಗಿನ ಕಥೆ ನಮ್ಮ ಮುಂದೆ ಹರಡಿಕೊಳ್ಳುತ್ತದೆ:

ಚಂದ್ರಗುಪ್ತ ಮೌರ್ಯ ಜೈನ ಸನ್ಯಾಸಿಯಾಗಿ ತನ್ನ ರಾಜ್ಯ ತ್ಯಜಿಸಿ ಉತ್ತರ ಭಾರದಿಂದ ದಕ್ಷಿಣ ಭಾರತಕ್ಕೆ ಜೈನ ಮತದ ಪ್ರಚಾರಕನಾಗಿ ಶ್ರವಣಬೆಳಗೊಳಕ್ಕೆ ಬರುತ್ತಾನೆ. ಇದು ನಾವೆಲ್ಲಾ ಓದಿರುವ/ಕೇಳಿರುವ ಸತ್ಯ. ಆದರೆ ಸ್ವಲ್ಪ ತಾರ್ಕಿಕವಾಗಿ ಯೋಚಿಸಿರುವ ಗಣೇಶಯ್ಯನವರು ಹಾಗೂ ಅಷ್ಟೇ ಆಳವಾಗಿ ಇದರ ವಿವರವನ್ನು ತಿಳಿದಿರುವ ಅವರು ಕೆಲವು ವಿಷಯಗಳನ್ನು ಗಮನಿಸಿದ್ದಾರೆ. ಹಲವಾರು ಶಾಸನಗಳು ಹೇಳಿರುವಂತೆ ಚಂದ್ರಗುಪ್ತ ಮೌರ್ಯನ ಜೊತೆ ಸುಮಾರು ೧೨೦೦೦ ಜೈನ ಮುನಿಗಳು ಬರುತ್ತಾರೆ!! ಯಾಕೆ? ಇಂತಹ ಪ್ರಶ್ನೆಗಳು ಕೊನೆಗೆ ಕೈ ಮಾಡಿ ತೋರಿಸುವ ಉತ್ತರ ಸುಮಾರು ೫೦೦ ಟನ್ ಚಿನ್ನದ ಕಡೆಗೆ. ಈ ಚಿನ್ನವನ್ನು ಮುಸುಕಿನಿ ಜೋಳದ ತೆನೆಯ ರೂಪದಲ್ಲಿ ಮುಸುಕಿನ ಜೋಳದ ತೆನೆಗಳ ಜೊತೆಗೆ ಉತ್ತಮ camouflage ಮಾಡಿ ತರುತ್ತಾರೆ . ಹಾಗಾಗಿ ಕನಕ ಮುಸುಕು.

ಚಂದ್ರಗುಪ್ತ ಮೌರ್ಯ ನಿಂದ ಶುರುವಾಗುವ ನಿಧಿಯ ರಹಸ್ಯ ಹೊಯ್ಸಳ ಸಾಮ್ರಾಜ್ಯ ದ ಶಕುಂತಲೆಯಲ್ಲಿ ಕೊನೆಗೊಳ್ಳುತ್ತದೆ. ಈ ನಿಧಿಯನ್ನು ಹುಡುಕಲು ಹೊರಡುವ ಕಾದಂಬರಿಯ ನಾಯಕಿ, ಆಕೆಯ ಗಂಡ, ಆಕೆಯ ಗುರು ಹಾಗೂ ಸಕಾರಣಗಳಿಗೆ ಇದನ್ನು ಮುಚ್ಚಿಡಲು ಪ್ರಯತ್ನಿಸುವ ಜೈನ ಧರ್ಮದ ಹಿರಿಯ ನಾಯಕರುಗಳು ಹಾಗೂ ಇಷ್ಟೆಲ್ಲಾ ಸಾಲದು ಎಂಬಂತೆ ನಾಯಕಿಯನ್ನು ಬೆನ್ನು ಹತ್ತುವ ಅಂತರಾಷ್ಟ್ರೀಯ ಕಳ್ಳರ ಗ್ಯಾಂಗ್. ಇನ್ನೇನು ಬೇಕು ಹೇಳಿ ಕಥೆಯನ್ನು ಇನ್ನಷ್ಟು ರೋಚಕವಾಗಿಸಲು? ಇಷ್ಟೆಲ್ಲಾ ಇದ್ದರು ಗಣೇಶಯ್ಯ ಕಥೆಯ ಮುಖ್ಯ ಲಹರಿಯನ್ನು ಬೇರೆ ಕಡೆಗೆ ಹರಿಯ ಬಿಡದೇ ಓದುಗನನ್ನು ಕಾದಂಬರಿ ಮುಗಿಯುವವರೆಗೂ ಕಟ್ಟಿ ಕೂರಿಸುತ್ತಾರೆ.
ನಾನು ಸುಮಾರು ೪ ವರ್ಷದ ಹಿಂದೆ ಬೆಂಗಳೂರಿನಬಳಿ ಇರುವ ದೇವರಾಯನ ದುರ್ಗಕ್ಕೆ ಹೋದಾಗ ಅಲ್ಲಿ ಒಬ್ಬ ಹೇಳಿದ್ದ ವಿಷ್ಣು ವರ್ಧನನ ಹೆಂಡತಿ ಶಾಂತಲೆ ಇಲ್ಲೇ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಳು ಎಂದು. ಆಗಿನಿಂದ ನನಗೆ ಒಂದು ವಿಷ್ಯ ಅರ್ಥ ಆಗಿರಲಿಲ್ಲ. ಬೇಲೂರುಹಳೆಬೀಡಿನಲ್ಲಿದ್ದ ಶಕುಂತಲೆಗೂ ಇಲ್ಲಿಗೂ ಏನು ಸಂಬಂಧ, ಇಲ್ಲಿ ಬಂದು ಸಾಯುವನ್ತದ್ದು ಏನಾಗಿತ್ತು? ಈ ಪ್ರಶ್ನೆ ಗೆ ಕನಕ ಮುಸುಕು ತಕ್ಕಷ್ಟು ಉತ್ತರ ಕೊಟ್ಟಿತು. ಇಷ್ಟೇ ಅಲ್ಲದೆ ಮುಸಿಕಿನ ಜೋಳದ ಇತಿಹಾಸ ಮತ್ತು ಅದು ಏಷ್ಯಗೆ ಬಂದ ಬಗೆಗೆ ಇಂದಿಗೂ ಇರುವ ಕಗ್ಗಂಟು ಗಳನ್ನೂ ಕುತೂಹಲಕಾರಿಯಾಗಿ ಕಥೆಯ ಮಧ್ಯದಲ್ಲಿ ಗೊತ್ತಿಲ್ಲದಂತೆಯೇ ನಮಗೆ ತಿಳಿಸುತ್ತಾರೆ. ಇದಲ್ಲದೆ ರಾಜಕಾರಣ ಮತ್ತು ಧರ್ಮ/ಜಾತಿ ಇವೆರಡರ ಮಧ್ಯ ಇರುವ ಬಿಡಿಸಲಾಗದ ನಂಟನ್ನು ತಿಳಿಯಾಗಿ ಹೇಳುತ್ತಾರೆ. ಜೈನ, ವೈಷ್ಣವ, ಶೈವ, ಇಸ್ಲಾಂ ಮತ್ತು ಕ್ರಿಸ್ತ ಧರ್ಮ ಗಳ ಹಿಂದಿನ ತಿಕ್ಕಾಟಗಳು ನೋಡ ಸಿಗುತ್ತವೆ. ಇಷ್ಟೆಲ್ಲಾ ಸಾಕಾಗುವುದಿಲ್ಲ ಎಂದರೆ ದೊಡ್ಡವರ ಸಣ್ಣತನಗಳು ಹಾಗೂ ನಿಮಗೆ cryptography ಬಗ್ಗೆ ಉತ್ಸಾಹವಿದ್ದರೆ ಹಿಂದಿನ ಕಾಲದಲ್ಲಿ ಬಳಸಿದ ಕೊಡೆಡ್ ಸಂದೇಶಗಳನ್ನು ಸೇರಿಸಿ ನಮ್ಮನ್ನು ಚಕಿತಗೊಳಿಸುತ್ತಾರೆ.