Wednesday, April 9, 2014

ಝೆನ್ ಕಥೆಗಳು - ನಗುವ ಬುದ್ಧ




ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.



ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ. ಹೆಗಲ ಮೇಲೆ ಸದಾ ಬಟ್ಟೆಯ ಗಂಟೊಂದನ್ನು ಹೊತ್ತು ಬೀದಿಗಳಲ್ಲಿ ನಡೆಯುತ್ತಿದ್ದ. ಅದರಲ್ಲಿ ಮಿಠಾಯಿ, ಹಣ್ಣು, ಇಂಥ ತಿನಿಸು ತುಂಬಿರುತ್ತಿದ್ದವು. ಬೀದಿಮಕ್ಕಳಿಗೆ ಅವನ್ನು ಹಂಚುತ್ತ ಅವರೊಡನೆ ಆಡುತ್ತಾ ಕಾಲ ಕಳೆಯುತ್ತಿದ್ದ. ಬೀದಿ ಬೀದಿಗಳಲ್ಲಿ ಅವನ “ಶಿಶುವಿಹಾರ”ಗಳಿದ್ದವು.


ಝೆನ್ ಪಂಥದ ಅನುಯಾಯಿಗಳು ಯಾರಾದರೂ ಕಂಡರೆ ಕೈ ಚಾಚಿ “ಒಂದು ಕಾಸು ಕೊಡಿ” ಎಂದು ಎಗ್ಗಿಲ್ಲದೆ ಕೇಳುತ್ತಿದ್ದ. “ದೇವಸ್ಥಾನಕ್ಕೆ ಬಂದು ಮಕ್ಕಳಿಗೆ ಪಾಠ ಹೇಳು” ಎಂದು ಯಾರಾದರೂ ಅಂದರೆ, ಮತ್ತಿನ್ನೊಮ್ಮೆ ಕೈ ಚಾಚಿ “ಕಾಸು ಕೊಡಿ” ಅನ್ನುತ್ತಿದ್ದ.



ಹೀಗೇ ಒಂದು ದಿನ ತನ್ನ ಆಟದ ಕಾಯಕದಲ್ಲಿ ಅವನು ತೊಡಗಿರುವಾಗ ಇನ್ನೊಬ್ಬ ಝೆನ್ ಗುರು ಅಲ್ಲಿಗೆ ಬಂದ. “ಝೆನ್‌ನ ಮಹತ್ವವೇನು?” ಎಂದು ಹೋಟಿಯನ್ನು ಕೇಳಿದ.



ಹೋಟಿ ತಟ್ಟನೆ ತನ್ನ ಹೆಗಲಮೇಲಿದ್ದ ಗಂಟನ್ನು ಕೆಳಕ್ಕಿಳಿಸಿ ಮೌನವಾಗಿ ನಿಂತ. ಅದೇ ಅವನ ಉತ್ತರ. “ಝೆನ್ ಸಾಕ್ಷಾತ್ಕಾರವಾಗಿರುವುದರ ಕುರುಹೇನು?” ಎಂದು ಆ ಗುರು ಮತ್ತೆ ಕೇಳಿದ.



ಹೋಟಿ ನಗುನಗುತ್ತಲೇ ಗಂಟನ್ನು ಮತ್ತೆ ಭುಜದ ಮೇಲೆ ಏರಿಸಿಕೊಂಡು ಮುಂದೆ ನಡೆದ.


ಝೆನ್ ಕಥೆಗಳು - ಪ್ರಥಮ ಸೂತ್ರ




ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇದನ್ನು ಬರೆದವನು ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ಕೊಸೆನ್ ಎಂಬ ಕಲಾವಿದ.

ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ಕಾಪಿ ಮಾಡಿಕೊಂಡು ಕೆತ್ತುತ್ತಿದ್ದರು. ಕೊಸೆನ್‌ಗೆ ಒಬ್ಬ ಧೈರ್ಯವಂತ ಶಿಷ್ಯ ಇದ್ದ. ಅಕ್ಷರ ಕಲೆಯಲ್ಲಿ ಪರಿಣತಿ ಪಡೆದಿದ್ದ. ಕೊಸೆನ್ ಮೊದಲ ಬಾರಿಗೆ ಅಕ್ಷರಗಳನ್ನು ಹಾಳೆಯ ಮೇಲೆ ಬರೆದಾಗ ಅವನೂ ಅಲ್ಲೇ ಇದ್ದ. 

"ಗುರುವೇ, ಇದು ಚೆನ್ನಾಗಿಲ್ಲ" ಅಂದ. 

ಗುರು ಮತ್ತೊಮ್ಮೆ ಬರೆದು "ಹೇಗಿದೆ?" ಎಂದು ಕೇಳಿದ. "ಕೆಟ್ಟದಾಗಿದೆ, ಮೊದಲಿನದೇ ಎಷ್ಟೋ ವಾಸಿ" ಅಂದ ಶಿಷ್ಯ. 

ಗುರು ತಾಳ್ಮೆಯಿಂದ ಮತ್ತೆ ಬರೆದ. ಶಿಷ್ಯನಿಗೆ ಅದೂ ಇಷ್ಟವಾಗಲಿಲ್ಲ. ಮತ್ತೆ ಬರೆದ. ಮತ್ತೆ ಚೆನ್ನಾಗಿಲ್ಲ ಅನ್ನುವ ಮಾತು ಕೇಳಿದ. ಹೀಗೇ ಎಂಬತ್ತನಾಲ್ಕು ಪ್ರಥಮ ಸೂತ್ರಗಳು ರಾಶಿಯಾಗಿ ಬಿದ್ದವು. ಶಿಷ್ಯ ಯಾವುದನ್ನೂ ಒಪ್ಪಲಿಲ್ಲ. 

ವಿಮರ್ಶಕ ಶಿಷ್ಯ ಕೊಂಚ ಹೊತ್ತು ಹೊರಗೆ ಹೋಗಬೇಕಾಗಿ ಬಂತು. "ಅವನ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳುವುದಕ್ಕೆ ಇದೇ ಸಮಯ" ಎಂದುಕೊಂಡ ಗುರು ನಿರಾಳವಾದ ಮನಸ್ಸಿನಿಂದ ಸರಸರನೆ "ಪ್ರಥಮ ಸೂತ್ರ" ಬರೆದ.

ವಾಪಸ್ಸು ಬಂದ ಶಿಷ್ಯ "ಅದ್ಭುತ ಕಲಾಕೃತಿ" ಎಂದು ಉದ್ಗರಿಸಿದ.

ನೀತಿ - ಸದಾ ದೋಷಗಳನ್ನು ಹುಡುಕುವುದಲ್ಲ; ಎಲ್ಲವೂ ಹೀಗೇ ಇರತಕ್ಕದ್ದು ಎಂಬುದೂ ಅಲ್ಲ; ಇನ್ನೊಬ್ಬರ ಮೆಚ್ಚುಗೆ ಬಯಸುವುದೂ ಅಲ್ಲ; ನಿರಾಳವಾಗಿರುವುದು ಝೆನ್


Tuesday, April 8, 2014

ಝೆನ್ ಕಥೆಗಳು - ಒಂದು ಲೋಟ ಚಾ(ಟೀ)



ನಾನ್‌ಇನ್ ಜಪಾನಿನ ಮಾಸ್ಟರ್‌ನನ್ನು ನೋಡಲು ಒಬ್ಬ ವಿಶ್ವವಿದ್ಯಾಲಯ ಪ್ರೊಫೆಸರ್ ಬಂದ. ಅವನಿಗೆ ಝೆನ್ ಜ್ಞಾನದ ಬಗ್ಗೆ ತಿಳಿದುಕೊಳ್ಳಬೇಕಿತ್ತು.

ನಾನ್‌ಇನ್ ಅತಿಥಿಯ ಮುಂದೆ ಲೋಟವಿಟ್ಟು ಟೀ ಸುರಿಯತೊಡಗಿದ. ಲೋಟ ತುಂಬಿ ಟೀ ಹೊರಚೆಲ್ಲಿತು. ಇನ್ನೂ ಸುರಿಯುತ್ತಲೇ ಇದ್ದ.

ಸುಮ್ಮನೆ ನೋಡುತ್ತಿದ್ದ ಪ್ರೊಫೆಸರ್ “ಲೋಟ ತುಂಬಿದೆ. ಇನ್ನು ಹಿಡಿಸಲಾರದು’ ಎಂದ.


ಇದರಂತೆಯೇ ನೀನೂ ನಿನ್ನದೇ ಸ್ವಂತ ಅಭಿಪ್ರಾಯ-ಅನಿಸಿಕೆಗಳಿಂದ ತುಂಬಿಕೊಂಡಿದ್ದೀ. ನೀನು ಖಾಲಿಯಾಗದೇ ನಾನ್ಹೇಗೆ ಝೆನ್ ತೋರಿಸಲಿ ? ಎಂದು ನಾನ್‌ಇನ್ ಕೇಳಿದ. 


ಕೋತಿ ಮತ್ತು ಬೆಣೆ



ಒಂದು ವ್ಯಾಪಾರಿ ಒಮ್ಮೆ ತನ್ನ ತೋಟದ ಮಧ್ಯದಲ್ಲಿ ಒಂದು ದೇವಸ್ಥಾನ ನಿರ್ಮಿಸಲು ಆರಂಭಿಸಿತು. ಅನೇಕ ಕಲ್ಲುಕುಟಿಗ ಮತ್ತು ಬಡಗಿ ವ್ಯಾಪಾರಿಯಲ್ಲಿ  ಕೆಲಸ ಮಾಡುತ್ತಿದ್ದರು. ಪ್ರತಿ ದಿನ ತಮ್ಮ ಊಟಕ್ಕೆ ಪಟ್ಟಣಕ್ಕೆ ಹೋಗಿ ಬರುತ್ತಿದ್ದರು. ಒಂದು ದಿನ ಕಾರ್ಮಿಕರ ಊಟಕ್ಕೆ ಹೋದಾಗ,  ಕೋತಿಗಳ ಒಂದು ಹಿಂಡು ದೇವಾಲಯದ ಜಾಗಕ್ಕೆ ಬಂದಿಳಿಯಿತು ಮತ್ತು ಅವುಗಳ ಗಮನ ಸೆಳೆದ ವಸ್ತುಗಳೊಂದಿಗೆ ಏನೇನೋ ಆಡಲು ಪ್ರಾರಂಭಿಸಿದವು. ಒಂದು ಕೋತಿಯನ್ನು, ಮರನ್ನು  ಇಬ್ಬಾಗ ಮಾಡಿ ಅದು ಮುಚ್ಚ ಬಾರದೆಂದು ಅದರ ಮಧ್ಯ ಒಂದು  ಬೆಣೆಯನ್ನು ಸೇರಿಸಿ ಕಾರ್ಮಿಕರು ಬಿಟ್ಟು ಹೋಗಿದ್ದರು, ಆಕರ್ಷಿಸಿತು. 

ಕುತೂಹಲದಿಂದ ಕೋತಿಯೂ ಆ ಬೆಣೆಯನ್ನು ಎಳೆಯಲೂ ಪ್ರಾರಂಬಿಸಿತು. ಸತತ ಪ್ರಯತ್ನದ ನಂತರ ಬೆಣೆಯೂ ಕಿತ್ತು ಬಂತು ಆದರ ಕೋತಿಯ ಕಾಲು ಮರದ ಮಧ್ಯ ಸಿಕ್ಕಿಹಾಕಿಕೊಂಡಿತು. ಕಾಲು ತೆಗೆಯಲಾಗದೆ ಮರದ ಮಧ್ಯ ಸಿಕ್ಕಿ ಕೋತಿಯೂ ಸತ್ತಿತು. 


ನೀತಿ: ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡು ಪರಿಹಾರಕ್ಕೆ ಪರದಾಡಬಾರದು.





Sunday, April 6, 2014

ಕಪಿಲಿಪಿಸಾರ - ಕೆ ಎನ್ ಗಣೇಶಯ್ಯ

 Kapilipisaara - K. N. Ganeshaiah

 

 


ಮುನ್ನುಡಿಯಿಂದ:

ಸುಮಾರು ಹತ್ತು ವರ್ಷಗಳ ಹಿಂದೆ.

ಭಾರತದ ಸಸ್ಯರಾಶಿಯ ಬಗ್ಗೆ ಮಾಹಿತಿ ಖಾಜಾನೆಯೊಂದನ್ನು ತಯಾರಿಸುತ್ತಿದ್ದಾಗ. ಪಾಶ್ಚಾತ್ಯ ದೇಶದ ಕಂಪನಿಯೊಂದಕ್ಕಾಗಿ ಕೆಲಸ ಮಾಡುತ್ತಿದ್ದ. ಭಾರತೀಯರೇ ಆದ ಹಿರಿಯೊಬ್ಬರು ನಮ್ಮಲ್ಲಿಗೆ ಬಂದು ಆ ಮಾಹಿತಿಯನ್ನು ಮತ್ತು ಅದರ ಮೇಲಿನ ಸಂಪೂರ್ಣ ಅಧಿಕಾರವನ್ನು ಅಪಾರವಾದ ಬೆಲೆಗೆ ಕೊಳ್ಳುವ ಅಭಿಲಾಷೆ ವ್ಯಕ್ತಪಡಿಸುದ್ದು. ನಮ್ಮೆಲ್ಲರಿಗೂ ಅತೀವ ಆಶ್ಚರ್ಯ ಉಂಟುಮಾಡಿತ್ತು. ನಾವು ಕಲೆಹಾಕಿ ಸಂಸ್ಕರಿಸುತ್ತಿದ್ದ ಮಾಹಿತಿಯ ಉದ್ದೇಶ ಮತ್ತು ಉಪಯೋಗಗಳ ಅರಿವು ನಮಗಿದ್ದರೂ, ಅದು ಅಷ್ಟು ಬೆಲೆ ಬಾಳುವಂತಹುದೆಂದು ತಿಳಿದು ಖುಷಿಯಾಗಿತ್ತು. ಆದರೆ ಇವರ ಬೆನ್ನಲ್ಲೆಯೇ, ಹಲವು ವಿದೇಶೀಯರು, ಅದೇ ಮಾಹಿತಿ ಖಜಾನೆಯ ವಾರಸುತನಕ್ಕೆ ಭಾಗಿಯಾಗುವ ಕುತಂತ್ರ ತೋರಿದ್ದು ನಮಲ್ಲಿ ಗಾಬರಿಯನ್ನೂ ಉಂಟುಮಾಡಿತ್ತು.

ಇವೆಲ್ಲರ ಹಿನ್ನೆಲೆಯಲ್ಲಿ 'ಕಪಿಲಿಪಿಸಾರ'ದ ಎಳೆಯೊಂದು ನನ್ನಲ್ಲಿ ಬೆಳೆಯತೊಡಗಿದ್ದಂತೆ, ಈ ಎಳೆಯ ಮತ್ತೊಂದು ಆಯಾಮದ ಸೃಷ್ಟಿಯಾದದ್ದು. ಮಾನವನ ಮತ್ತು ಮಂಗಗಳ ವಿಕಾಸದಲ್ಲಿ ಕಂಡುಬರುವ ಮಾನಸಿಕ ಸರಪಳಿಯ ಬಗ್ಗೆ ನನ್ನ ಸಹಪಾಠಿಯೊಬ್ಬರು ನಡೆಸುತ್ತಿದ್ದ ಸಂಶೋದನೆಯ ಬಗ್ಗೆ ಚರ್ಚಿಸುತ್ತಿದ್ದಾಗ. ಮಂಗಗಳಲ್ಲೂ. ತಾನು, ತನ್ನದು, ಸಾವು, ಜೀವ ಮತ್ತು ಸಾಮಾಜಿಕ ಒಳಿತು, ಕೆಟ್ಟದ್ದು ಎನ್ನುವ 'ಭಾವನೆ'ಗಳಿರುವ ಸಾಧ್ಯಾತೆ ಇದ್ದು. ಅವುಗಳ ನಡವಳಿಕೆ ಈ ಅಂಶಗಳಿಂದ ರೂಪಿಸಲ್ಪದುವುದರಲ್ಲಿ ಆಶರ್ಯವಿಲ್ಲ  ಎಂಬ ವಾದ, ರಾಮಾಯಣದ ಹನುಮಾನ್ ಈ ಪ್ರಶ್ನೆಗೆ ಉತ್ತರ ಒದಗಿಸಬಲ್ಲುದೆ? ಇಂತ ಹಲವು ಪ್ರಶ್ನೆಗಳು, ಇವೆಲ್ಲವೂ ಸೇರಿ 'ಕಪಿಲಿಸಾರ'ದ ಕತೆಯನ್ನು ಬೆಳೆಸತೊಡಗಿದವು. ಕೊನೆಗೆ 'ಸಂಜೀವಿನಿ' ಇವೆಲ್ಲವನ್ನೂ ಬೆಸೆಯುವ ಅಂಟಾಗಿ ಸೇರಿಕೊಂಡಿತು.


ಹೀಗೆ, ನನ್ನದೆ ಅನುಭವದಿಂದ, ನನ್ನ ಹತ್ತಿರದಲ್ಲೇ ಕಂಡ ಹಲವು ಕುತೂಹಲಗಳ ಆಧಾರದ ಬೆಳೆದ ಈ ಕಾದಂಬರಿ, ಇಂದಿಗೂ ನಮ್ಮ ದೇಶದಲ್ಲಿ ನಡೆಯತ್ತಿರುವ ಜ್ಞಾನದ ಲೂಟಿಗೆ, ಡಾಲರ್-ಆಧಾರಿತ-ಯೋಜನೆಗಳ ಆಮಿಶ ಒಡ್ಡಿ ಪಾಶ್ಚಾತ್ಯ ಸಂಸ್ಥೆಗಳು ನಡೆಯುತ್ತಿರುವ ನಮ್ಮ ಯುವ ವಿಜ್ಞಾನಿಗಳ 'ಖೆಡ್ಡಾ'ಗೆ ಒಂದು ಕನ್ನಡಿ.




ಮಹಾಬ್ರಾಹ್ಮಣ - ದೇವುಡು

MahaBrahmana  - Devudu



ಮುನ್ನುಡಿಯಿಂದ:

ಮಹಾಬ್ರಾಹ್ಮಣ ಕಥೆ ಪ್ರಸಿದ್ದರಾದ ವಸಿಷ್ಠ ವಿಶ್ವಾಮಿತ್ರರದು; ಬಹು ಪುರಾತನವಾದುದು. ಋಗ್ವೇದ, ಯಜುರ್ವೇದ, ಐತರೇಯ, ಕೌಷೀತಕೀ, ಗೋಪಥ, ಶಾಂಖಾಯನ, ಷಡ್ವಿಂಶ ಬ್ರಾಹ್ಮಣಗಳು, ರಾಮಾಯಣ, ಮಹಾಭಾರತ, ಹರಿವಂಶ, ವಿಷ್ಣುಪುರಾಣ, ವಾಯುಪುರಾಣ, ಯೋಗವಾಸಿಷ್ಠ ಇವುಗಳಲ್ಲಿ ಬನ್ದಿದೆ. ಆದರೂ ರಾಮಾಯಾಣದ ಕಥೆಯನ್ನು ಮೂಖ್ಯವಾಗಿಟ್ಟುಕೊಂಡು, ಮಿಕ್ಕ ಕಡೆಗಳಲ್ಲಿ ಸಿಕ್ಕುವ ಅಂಶಗಳನ್ನು ಅದರಲ್ಲಿ ಸಂದ  ಸಂದರ್ಭೋಚಿತವಾಗಿ ಸೇರಿಕೊಂಡು ಹೆಣೆದಿರುವ ಕಥೆ ಈ 'ಮಹಬ್ರಾಹ್ಮಣ'. 

ಅಲ್ಲಲ್ಲಿ ಉಪನಿಷತ್ತುಗಳ ರಹಸ್ಯವಿಧ್ಯೆಗಳೂ ಬಂದಿವೆ. ಈ ವಿದ್ಯಪ್ರತೀಕಗಳಲ್ಲಿ ಕೆಲವು ಸ್ವಾನುಭವ, ಕೆಲವು ಪರಾನುಭವ. ಕೆಲವು ಬರೆಯುತ್ತಿದ್ದಾಗ ತಾವಾಗಿ ಬಂದವು. ರುದ್ರನು ಪ್ರತ್ಯಕ್ಷವಾಗುವುದು, ದೇವತೆಗಳು ಬಂದು ಮಾತಾಡುವುದು, ಇವೆಲ್ಲ ಸ್ವಾನುಭವ. ಪ್ರಾಣಾಗ್ನಿ ಹೋತ್ರ ಪಂಚಾಗ್ನಿವಿದ್ಯಾ, ಇವು ಇದನ್ನು ಮಾಡಿ ನೋಡಿದ್ದವರ ಬಾಯಿಂದ ಕೇಳಿದುದು; ಮದನನು ಹೇಳುವ ಆಹಂಕಾರ ವಿಮರ್ದನ, ಜಗನ್ನಾಥರ ತೇರು, ಗಾಯತ್ರಿ ಸಾಕ್ಷಾತ್ಕಾರಕ್ಕಿಂತ ಮುಂಚೆ ಬರುವ ಬ್ರಹ್ಮಣಸ್ಪತಿ, ಪೂಷಾ, ದೇವರ ಅನುಗ್ರಹ ಮೊದಲಾದವು ತಾವಾಗಿ ಬಂದವು.  

ಹಾಗೇಯೇ ದಿವ್ಯಸ್ತ್ರೀಯರು ಮಾನವನೊಡನೆ ಸಂಸಾರವನ್ನು ಮಾಡಿರುವ ಚಿತ್ರಗಳು, ಕವಷ ಐಲೂಷನೆಂಬ ಶೂದ್ರರ್ಷಿಯು ವಿಶ್ವಾಮಿತ್ರರ ಅನುಗ್ರದಿಂದ ಋಷಿಯಾದನೆಂಬುದು, ಋಗ್ವೇದದ ನಾಲ್ಕನೆಯ ಮಂಡಲಕ್ಕೆ ತನ್ನ ಹೆಸರು ಕೊಟ್ಟಿರುವ ವಾಮದೇವರು ಏಳನೆಯ ಮಂಡಲದ ವಸಿಷ್ಠರ ಶಿಷ್ಯರಾಗಿ, ಮೂರನೆಯ ಮಂಡಲದ ವಿಶ್ವಾಮಿತ್ರರ ಆಧ್ಯಾತ್ಮಿಕ ಪುರೋಭಿವೃದ್ದಿಯ ಕಾರಣರಾದವರು ಎಂಬುದು, ಇವೆಲ್ಲ ಬರೆದವನ ಸೃಷ್ಟಿ. ಪ್ರಾಣವು ಲೋಕದಲ್ಲಿ ವ್ಯಕ್ತಿವ್ಯಕ್ತಿಗಳಲ್ಲಿ ಹರಡಿದ್ದರೂ ಮೂಲತಃ ಒಂದೇ ! ಕಾಲವು ಖಂಡವಾಗಿ ವ್ಯವಹಾರ ಗೊಚರವಾಗುತ್ತಿದ್ದರೂ ಇರುವುದೆಲ್ಲ ಒಂದೇ ಕಾಲ ! ಧರ್ಮ ಪರಿಷತ್ತು, ಬ್ರಹ್ಮ ಪರಿಷತ್ತು, ನೋಡುತ್ತಿದ್ದ ಹಾಗೆಯೇ ಒಳಗಿನ ಅಂತಸ್ತವನ್ನು ಗೊತ್ತುಮಾಡಿ ಕೊಳ್ಳುವುದು. ಇವೆಲ್ಲ ಶಾಸ್ತ್ರಗಳ ವಿಷಯಗಳು. ಹೀಗೆ ಏನೇನೋ ಎಷ್ಟೆಷ್ಟೋ ಓದಿ, ಅಷ್ಟಷ್ಟು ಕೇಳಿ, ಇನ್ನಷ್ಟು ಸ್ವಾನುಭವದಿಂದ ಸಮ್ಪಾದಿಸಿಕೊಂಡು, ಎಲ್ಲವನ್ನು ಗುರುಕೃಪೆಯಿಂದ ಮೂಸೆಯಲ್ಲಿಟ್ಟು ಕರಗಿಸಿ ಎರಕ ಹೂಯ್ದಿರುವ ಬೊಂಬೆಯಿದು.




Sunday, March 2, 2014

ಕಲ್ಲು ಕರಗುವ ಸಮಯ - ಪಿ. ಲಂಕೇಶ್

Kallu Karguva Samaya - P. Lankesh



ಕಥೆಗಳು

೧. ದಾಹ
೨. ಕೃತಜ್ಞತೆ
೩. ಒಂದು ಬಾಗಿಲು
೪. ಕಣ್ಮರೆ
೫. ಮುಟ್ಟಿಸಿಕೊಂಡವನು
೬. ಸಹಪಾಠಿ
೭. ಉರಿದ ಊರಿನವರು
೮. ವೃಕ್ಷದ ವೃತ್ತಿ
೯. ತೋಟದವರು
೧೦. ಕಲ್ಲು ಕರಗುವ ಸಮಯ
೧೧. ಸ್ಟೆಲ್ಲಾ ಎಂಬ ಹುಡುಗಿ
೧೨. ದೇವಿ
೧೩. ಸುಭದ್ರ
೧೪. ಮೃಗ ಮತ್ತು ಸುಂದರಿ
೧೫. ಟಾಲ್ ಸ್ಟಾಯ್
೧೬. ಅಧಿಕಾರಿಗಳು ಮತ್ತು ಕೆಲಸದವರು
೧೭. ದಾಳಿ

ಲಂಕೇಶ್ ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಅತ್ಯದ್ಬುತ ಬರಹಗಾರರಲ್ಲಿ ಒಬ್ಬರು. ಗಣೇಶಯ್ಯ ನವರ ಶಾಲಬಂಜಿಕೆ ಓದಿದ ಮೇಲೆ ಮುಂದೆ ಯಾವ ಪುಸ್ತಕ ಓದಬೇಕು ಎಂದು ಹುಡುಕುತ್ತಿರುವಾಗ ನನ್ನ ಸ್ನೇಹಿತ ಪರಿಚಹಿಸಿಕೊಟ್ಟ ಪುಸ್ತಕ ಲಂಕೇಶ್ ರವರ "ಕಲ್ಲು ಕರಗುವ ಸಮಯ". ಇದನ್ನು ಓದಿದ ಮೇಲೆ ನಾನು ಲಂಕೇಶ್ ರವರ ಬರಹದ ಅಭಿಮಾನಿಯಾಗಿದ್ದೇನೆ ಮತ್ತು ಇದನ್ನು ಓದಲು ಸಲಹೆ ಕೊಟ್ಟ ಸ್ನೇಹಿತನಿಗೆ ಆಬಾರಿಯಗಿದ್ದೇನೆ. 

ಲಂಕೇಶ್ ಕನ್ನಡ ಸಾಹಿತ್ಯ ಕ್ಷೇತ್ರ ಕಂಡ ಅತ್ಯದ್ಬುತ ಬರಹಗಾರರಲ್ಲಿ ಒಬ್ಬರು. ಗಣೇಶಯ್ಯ ನವರ ಶಾಲಬಂಜಿಕೆ ಓದಿದ ಮೇಲೆ ಮುಂದೆ ಯಾವ ಪುಸ್ತಕ ಓದಬೇಕು ಎಂದು ಹುಡುಕುತ್ತಿರುವಾಗ ನನ್ನ ಸ್ನೇಹಿತ ಪರಿಚಹಿಸಿಕೊಟ್ಟ ಪುಸ್ತಕ ಲಂಕೇಶ್ ರವರ "ಕಲ್ಲು ಕರಗುವ ಸಮಯ". ಇದನ್ನು ಓದಿದ ಮೇಲೆ ನಾನು ಲಂಕೇಶ್ ರವರ ಬರಹದ ಅಭಿಮಾನಿಯಾಗಿದ್ದೇನೆ ಮತ್ತು ಇದನ್ನು ಓದಲು ಸಲಹೆ ಕೊಟ್ಟ ಸ್ನೇಹಿತನಿಗೆ ಆಬಾರಿಯಗಿದ್ದೇನೆ.

ಲಂಕೇಶ್ ರವರು ಸಾಮಾನ್ಯ ಜನರ ಸ್ಥಿತಿ ಮತ್ತು ಮನಸ್ಸಿನ ವೇದನೆಯನ್ನು ಯಾವುದೇ ಆಡಂಬರವಿಲ್ಲದ ತೀರ ಸರಳವಾಗಿ ಮನಸ್ಸಿಗೆ ತಟ್ಟುವಂತೆ ಬರೆದಿದ್ದಾರೆ. ಇಲ್ಲಿ ಬರುವ ಪಾತ್ರಗಳು ನಾವೆಲ್ಲ ನಿತ್ಯ ಜೀವನದಲ್ಲಿ ನೋಡುವ ಜನರು, ಟೈಪಿಸ್ಟ್ ಮೀರಾ , ಪುಸ್ತಕದ ಅಂಗಡಿಯ ನಿರ್ಮಲ, ಕೂಲಿ ಕೆಲಸದ ಚೆನ್ನಮ್ಮ .... ಇವರಲ್ಲ ನಮ್ಮ ನಿತ್ಯ ಜೀವನದ ಮುಂದೆ ಹಾದು ಹೋಗುವ ಜನರು. ಅವರು ಮಾಡುವ ಕೆಲಸದ ಹಿಂದೆ ಒಂದು ಅನಿವಾರ್ಯತೆ ಇರುತ್ತದೆ ಎಂದು ಯೋಚಿಸುವ ಸಮಯ ಕೂಡ ನಮಗೆ ಇರುವುದಿಲ್ಲ ಎಂದು ಅವರನ್ನು ನೋಡಿದ ಬಳಿಕ ಮರೆಥುಬಿದುತ್ತೆವೆ.

ಇಲ್ಲಿ ನನಗೆ ತುಂಬ ಪರಿಣಾಮ ಬೀರಿದ ಪಾತ್ರಗಳೆಂದರೆ ಚೆನ್ನಮ್ಮ ಮತ್ತು ರೈತ ಬಸಲಿಂಗ. ಇಲ್ಲಿ ಚೆನ್ನಮ್ಮನ ವಯಸ್ಸು ಮತ್ತು ಕೆಲೆಸ ಮಾಡುತ್ತಿರುವ ರೀತಿ ನೋಡಿ ಮನೆ ಕಟ್ಟಿಸುತ್ತಿರುವ ಮಾಲಿಕ ಕನಿಕರದಿಂದ ಅವಳ ಕಷ್ಟವನ್ನು ತಿಳಿದಿಕೊಂಡು ಅವಳ ಗುಡಿಸಲಿಗೆ ತನ್ನ ಮನೆ ಕಟ್ಟುತ್ತಿರುವ ಹಲಿಗೆಗಳಿಂದಾನೆ ಬಾಗಿಲು ಕಟ್ಟಿಸಲು ಮೇಸ್ತ್ರಿಗೆ  ಹೇಳುತ್ತಾನೆ. ಕಟ್ಟಿಸಿದ ಮೇಲೆ ಚೆನ್ನಮ್ಮ ಕೆಲಸಕ್ಕೆ ಬರುವುದನ್ನು ನಿಲ್ಲಿಸುತ್ತಾಳೆ. ತಾನು ಚೆನ್ನಮ್ಮನ ಕಣ್ಣಿರಿಗೆ ಮೋಸ ಹೋಗಿದೆನೆಂದು ತಿಳಿದು ಬೇಸರಗೊಂಡ ನಟರ ಚೆನ್ನಮ್ಮ ಕೆಲೆವ ದಿನಗಳನ ನಂತರ ಬಂದು ತನ್ನ ಬಾಗಿಲಿ ಯಾರೋ ಕದ್ದರು ಎಂದು ತನ್ನ ವ್ಯಥೆಯನ್ನು ಅವನ ಮುಂದೆ ಹೇಳುತ್ತಾಳೆ. ಕದ್ದವರು ಮೆಸ್ತ್ರಿಯೇ ಎಂದು ತಿಳಿದ ಮೇಲೆ ಮಾಲಿಕನಿಗೆ ಅವಳ ಮೇಲೆ ಸಿಟ್ಟು ಮತ್ತು ಜನರ ಸ್ವಾರ್ಥದ ಬಗ್ಗೆ ಹೇಸಿಗೆ ಉಂಟಾಗುತ್ತದೆ.

ಬಸಲಿಂಗ ಮೈ ಮುರಿದು ದುಡಿಯುವ ರೈತ. ಅವನಿಗೆ ಒಂದು ದಿನ ಇದಕ್ಕಿದ್ದಂತೆ ಎಡಗಣ್ಣು ನೋವಲು ಆರಮ್ಬಿಸುತ್ತಗೆ. ಕೆಲವು ವೈದ್ಯರಿಗೆ ತೋರಿಸಿದರು ಏನು ಪ್ರಯೋಜನ ಆಗುವುದಿಲ್ಲ. ಅವನಿಗೆ ಯಾರೋ ಒಬ್ಬರು ಸರ್ಕಾರಿ ವ್ಯದ್ಯಾರಾದ ಡಾ।। ತಿಮ್ಮಪ್ಪ ನವರನ್ನು ನೋಡಲು ಹೆಲುತ್ತರೆ. ಅವರಿಗೆ ತೋರಿಸಿದ ಮೇಲೆ ಅವರು ಆಪರೇಷನ್ ಮಾಡಿ ಎರಡು ವಾರ ಕಣ್ಣಿಗೆ ನೀರು ತೋಕದಂತೆ ಸಲಹೆ ನೀಡುತ್ತಾರೆ. ಮನೆಗೆ ಬಂದಮೇಲೆ ಅವನಿಗೆ ಡಾ।। ತಿಮ್ಮಪ್ಪ ನವರ ಕೀಳು ಜಾತಿಯಿಂದ ಬಂಡ ಮನುಸ್ಯ ಎಂದು ತಿಳಿದು ಅವರ ಮಾತನ್ನು ಮೀರಿ ನೀರಿನಲ್ಲಿ ಸ್ನಾನ ಮಾದುತ್ತಾನೆ. ಇದರಿಂದ ಅವನ ಎಡಗಣ್ಣಿನ ದೃಷ್ಟಿ ಹೊಗುತ್ತದೆ. ಅದೇ ರೀತಿ ಬಳಗಣ್ನುನಲ್ಲಿ ನೋವು ಕಾನಿಸಿಕೊಲ್ಲುತ್ತದೆ. ಪೇಟೆಯ ಎಲ್ಲಾ ಖಾಸಗಿ ವ್ಯದ್ಯರಿಗೆ ತೋರಿಸದ್ರು ಗುಣವಾಗ ಮೇಲೆ ಬೇರೆ ದಾರಿಯಿಲ್ಲದೆ ಡಾ।। ತಿಮ್ಮಪ್ಪ ನವರ ಹತ್ತಿರ ಬಂದು ತಾನು ವರ್ತಿಸಿದ ರೀತಿ ಮತ್ತು ತನ್ನ ಸ್ತಿತಿಯನ್ನು ಹೇಳಿಕೊಳ್ಳುತ್ತಾನೆ.  ಅವರು ಅವನಿಗೆ ಸಂಮದಾನ ಹೇಳಿ ಆಪರೇಷನ್ ಮಾಡುತ್ತಾರೆ.

ಈ ಕಾಥಾ ಸಂಕಲದಲ್ಲಿ ಬರುವು ಪಾತ್ರಗಳೇ ಹೀಗೆ, ನಾವು ನೋಡುವ ಜನರೆ. ಲಂಕೇಶ್ ರವರು ಪಾತ್ರಗಳ್ಳನ್ನು ಹುಟ್ಟುಹಾಕುವುದಿಲ್ಲ, ಅವರು ನಾವು ಕಡೆಗಣಿಸುವ ಜನರ ಹಿಂದಿನ ಬದುಕನ್ನು ನೊದುತ್ತಾರೆ. ಇದಕ್ಕಾಗಿಯೇ ಈ ಸಂಕಲನಕ್ಕೆ "ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ" ಸಿಕ್ಕಿದೆ.