Tuesday, May 28, 2013

ಮಂದ್ರ - ಎಸ್ ಎಲ್ ಭೈರಪ್ಪ

Mandra- S L Bhyrappa



ಯಾವುದೇ ಕಾದಂಬರಿಯನ್ನು ಒಮ್ಮೆ ಕೈಯಲ್ಲಿ ಹಿಡಿದರೆ ಮುಗಿಸುವವರೆಗೆ ಬಿಡಲಾರದ ಆಸಕ್ತಿ ಹುಟ್ಟಲು ಕಾರಣವೇನು ? ಅದರ ಭಾಷಾ ಪ್ರಯೋಗವೇ, ವಸ್ತುವೇ, ಕಥೆಯ ಹಂದರವೇ, ಪಾತ್ರಗಳ ನಡೆಯೇ ಎಂದು ನೋಡುವಾಗ, ಅದು ಯಾವುದೇ ಒಂದೆರಡು ಕಾರಣಗಳಿಗೆ ಸೀಮಿತವಾಗುವುದಿಲ್ಲ. ಅಂತಹ ಹಲವಾರು ಕಾರಣಗಳಿಂದಾಗಿ ಒಂದು ಕತಿ ಓದುಗರಲ್ಲಿ ಕಟ್ಟಿಕೊಡುವ ಒಟ್ಟಾರೆ ಅನುಭವ ಅಂದರೆ, ತಾದಾತ್ಮ್ಯ ಭಾವವೇ ಅದರ ಸಾಫಲ್ಯಕ್ಕೆ ಕಾರಣವಾಗುತ್ತದೆ. ಸಷ್ಟಿಪೂರ್ವದಲ್ಲಿ ಕವಿಯಲ್ಲಿ ಮೆತೋರುವ ರಸಭಾವಗಳು ಸಹದಯ ಓದುಗರಲ್ಲಿಯೂ ಅಂತಹದೇ ರಸ ಸಂವೇದನೆಗಳನ್ನು ಉದ್ದೀಪನಗೊಳಿಸುವುದು ಅಪೂರ್ವ ಸಿದ್ಧಿ. ಅಂತಹ ಸಿದ್ಧಿಯನ್ನು ಸಾಧಿಸಿರುವ ಬೆರಳೆಣಿಕೆಯ ಕವಿ/ಲೇಖಕರಲ್ಲಿ ಎಸ್.ಎಲ್.ಭೆರಪ್ಪ ಒಬ್ಬರು ಎನ್ನುವುದಕ್ಕೆ ಅವರ ಅಸಂಖ್ಯಾತ ಓದುಗರೇ ಸಾಕ್ಷಿ. ಅದರೊಂದಿಗೆ ಈಗ ಅವರಿಗೆ ಸಂದಿರುವ ಪ್ರತಿಷ್ಠಿತ ಸರಸ್ವತಿ ಸಮ್ಮಾನದ ಪುಷ್ಟಿಯೂ ದೊರೆತಿದೆ. ಈ ಸಮ್ಮಾನಕ್ಕೆ ನೇರ ಕಾರಣವಾಗಿರುವ ಅವರ ಮಂದ್ರದಲ್ಲಿ ಮೊದಲಿನಿಂದ ಕೊನೆಯವರೆಗೂ ಬೇರೆಲ್ಲಾ ರಸಭಾವಗಳಿಗಿಂತಲೂ ಸಾಂದ್ರವಾಗಿ ಹರಿಯುವ ಸಂಗೀತ ಝರಿಯಲ್ಲಿ ಸಹದಯ ಓದುಗರು ಮುಳುಗುತ್ತಾ ತೇಲುತ್ತಾ ಆರ್ದ್ರವಾಗುತ್ತಾರೆ.

ಜೀವನದ ವಿವಿಧ ಮಜಲುಗಳ ಸತ್ಯದರ್ಶನ ಮಾಡಿಸುತ್ತಾ ಮಂದ್ರದ ಚಿಕ್ಕ ದೊಡ್ಡ ಪಾತ್ರಗಳನ್ನು ಆವರಿಸುತ್ತಾ ಸಾಗುವ ವಿಶಾಲವಾದ ಸಂಗೀತದ ಹರವಿನಿಂದ ಈಚೆ ನಿಂತು ಇಲ್ಲಿನ ಸ್ತ್ರೀ ಪಾತ್ರಗಳ ಮೂಲಕ ಅಭಿವ್ಯಕ್ತವಾಗಿರುವ ವೌಲ್ಯ ಸಂಘರ್ಷದತ್ತ ಒಂದು ಕಿರು ನೋಟಬೀರುವ ಆಶಯ ಇಲ್ಲಿದೆ.

'ನನಗೆ ಯಾವ ಪಂಥದಲ್ಲಿಯೂ ವಿಶ್ವಾಸವಿಲ್ಲ' ಎನ್ನುವ ಭೆರಪ್ಪನವರು ಎಲ್ಲಾ ಪಂಥಗಳ ತಿರುಳನ್ನೂ ಸಾರವತ್ತಾಗಿ ಗ್ರಹಿಸಿ, ಅವೆಲ್ಲವನ್ನೂ ಮೀರಿನಿಂತು, ತನ್ನದೇ ಆದ ಸ್ವತಂತ್ರ ಹಾದಿಯಲ್ಲಿ ಸಾಗಿ ಬಂದಿದ್ದಾರೆ. ನಾಲಕ್ಕೂವರೆ ದಶಕಗಳಿಂದಲೂ ಸಾಹಿತ್ಯ ಸಷ್ಟಿಸುತ್ತಿರುವ ಭೆರಪ್ಪನವರನ್ನು ನಮ್ಮ ಪಾರಂಪರಿಕ ವೌಲ್ಯಗಳಲ್ಲಿರುವ ಗಟ್ಟಿತನ ಹಾಗೂ ಕಾಲಾಂತರದಲ್ಲಿ ಅದರ ಸುತ್ತಲೂ ಸಷ್ಟಿಯಾಗಿರುವ ಹಲವು ಆವರಣಗಳು ಬಹುವಾಗಿ ಕಾಡುತ್ತವೆ ಎನ್ನುವುದು ನನ್ನ ವೆಯಕ್ತಿಕ ಅನಿಸಿಕೆ. ಈ ಪಾರಂಪರಿಕ ವೌಲ್ಯಗಳು ಮಹಿಳೆಯರ ಮೇಲೆ ಹೇರಿರುವ ಒತ್ತಡಗಳು ಹಾಗೂ ಅವುಗಳಿಂದ ಹೊರಗೆ ಬರಲು ತವಕಿಸುವ ಆಧುನಿಕ ಮಹಿಳೆಯ ಇಬ್ಬಂದಿತನವನ್ನು ಇವರ ಹಲವು ಕತಿಗಳು ಬಿಚ್ಚಿಡುತ್ತವೆ. 'ವಂಶವಕ್ಷ'ದ ಕಾತ್ಯಾಯನಿಯಿಂದ ಹಿಡಿದು 'ಮಂದ್ರ'ದ ಮಧುಮಿತಾಳವರೆಗೆ ಈ ತಳಮಳ ಓದುಗರನ್ನು ಆರ್ದ್ರಗೊಳಿಸುತ್ತದೆ.

'ಮಂದ್ರ'ದಲ್ಲಿ ಅನೀತಿಯ ವೆಭವೀಕರಣವಾಗಿದೆ ಎನ್ನುವ ಆಪಾದನೆ ಅಲ್ಲಲ್ಲಿ ಕೇಳಿಬಂದಿದೆ. ಆದರೆ, ಯಾವುದು ನೀತಿ ? ಯಾವುದು ಅನೀತಿ ? ಇದನ್ನು ನಿರ್ಧರಿಸುವುದು ಸಮಾಜವೇ ಅಥವಾ ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಅಂತಃ ಪ್ರಜ್ಞೆಯೇ ? ಸಮಾಜ ನಿರ್ಧರಿಸುವ ನೀತಿ ಸಂಹಿತೆ ಸಾರ್ವಕಾಲಿಕ ಸತ್ಯವಂತೂ ಅಲ್ಲ ಎನ್ನುವುದನ್ನು ನಮ್ಮ ಚರಿತ್ರೆ ನಮಗೆ ತಿಳಿಸುತ್ತಿದೆ. ಮಹಾಭಾರತದ ಆದಿ ಭಾಗದಲ್ಲಿ ಸಮಾಜಕ್ಕೆ ಒಪ್ಪಿತವಾದ ನಿಯೋಗ ಪದ್ಧತಿ ಹಾಗೂ ಕಾನೀನ ಮಕ್ಕಳು ನಂತರ ಚರ್ಚಾಸ್ಪದವಾಗುವುದನ್ನು ಭೆರಪ್ಪನವರ 'ಪರ್ವ' ಎತ್ತಿ ತೋರಿಸುತ್ತದೆ. ಪರ್ವ ಪ್ರಾರಂಭವಾಗುವುದೇ ಈ ಬದಲಾಗುತ್ತಿದ್ದ ವೌಲ್ಯಗಳ ಚರ್ಚೆಯಿಂದ ಎನ್ನುವುದನ್ನು ಗಮನಾರ್ಹ. ನಂತರ, ದುರ್ಯೋಧನ ತನ್ನ ತಂದೆಯ ಹುಟ್ಟಿನ ಹಿಂದಿರುವ ಸತ್ಯವನ್ನು ತಿಳಿದರೂ, ಪಾಂಡವರ ಹುಟ್ಟಿನ ಬೇರನ್ನೇ ಅಲ್ಲಾಡಿಸುತ್ತಾ , ಅದನ್ನೇ ತನ್ನ ನೀತಿ ಸಂಹಿತೆಯಾಗಿಸುತ್ತಾನೆ. ಈ ಹಿನ್ನೆಲೆಯಲ್ಲಿ, ವಂಶವಕ್ಷದ ಕಾತ್ಯಾಯನಿಯಿಂದ ಮಂದ್ರದ ಮಧುಮಿತಾಳವರೆಗಿನ ನಾಲಕ್ಕು ದಶಕಗಳ ಕಾಲಘಟ್ಟದಲ್ಲಿ ನಮ್ಮ ಸಮಾಜದಲ್ಲಿ ಬದಲಾಗುತ್ತಿರುವ ವೌಲ್ಯಗಳನ್ನೂ ಹಾಗೂ ಅವುಗಳಿಗೆ ಸ್ಪಂದಿಸುತ್ತಾ ತಮ್ಮ ಅಂತಃ ಪ್ರಜ್ಞೆಯನ್ನು ಗಟ್ಟಿಗೊಳಿಸುತ್ತಾ ಸಾಗಿರುವ ಮಹಿಳೆಯರ ನಾನಾ ಮುಖಗಳನ್ನೂ ತೆರೆದಿಟ್ಟಿರುವ ಭೆರಪ್ಪನವರ ಸಾಹಿತ್ಯದಲ್ಲಿರುವ ಒಳನೋಟ ನನಗೆ ಮುಖ್ಯವಾಗುತ್ತದೆ. ಸಮಕಾಲೀನ ಸಮಾಜಕ್ಕೆ ಒಪ್ಪಿಗೆಯಾಗಿರಲಿ ಬಿಡಲಿ ನಮ್ಮ ಸುತ್ತ ಮುತ್ತ ಕಾಣುವ ಮಹಿಳೆಯರ ನೆತಿಕ ಬಲವನ್ನು ಗುರುತಿಸಿ ಅದು, ವಿಕಾಸದ ಹಾದಿಯಲ್ಲಿರುವುದನ್ನು ಭೆರಪ್ಪನವರು ತಮ್ಮ ಸ್ತ್ರೀ ಪಾತ್ರಗಳ ಮೂಲಕ ದಾಖಲಿಸುತ್ತಾರೆ.

'ಮಂದ್ರ'ದಲ್ಲಿ ಪ್ರಧಾನ ಪಾತ್ರ ಸಂಗೀತವೇ ಎನ್ನುವುದು ಮೇಲಿನ ನೋಟಕ್ಕೇ ತೋರುವುದಾದರೂ , ಅದರ ಹಿಂದೆ ಮುಂದೆ ನಡೆಯುವ ನೀತಿ-ಅನೀತಿಗಳ ದೊಂಬರಾಟಗಳು ಓದುಗರನ್ನು ಬಹಳವಾಗಿ ಕಾಡುತ್ತವೆ. ಮೊದಲಿನಿಂದ ಕೊನೆಯವರೆಗೂ ಇಲ್ಲಿ ವಿಜಂಭಿಸುವುದು ಸಂಗೀತದ ಝೇಂಕಾರ. ಅದರ ಔನ್ನತ್ಯದಲ್ಲಿ ಮತ್ತೆಲ್ಲವೂ, ಪ್ರೇಮ-ಕಾಮಗಳೂ ಕುಬ್ಜವಾಗಿಬಿಡುತ್ತವೆ. ಮೋಹನಲಾಲನ ಕಾಮವಾಸನೆಯಂತೆಯೇ ಮಧುಮಿತಾಳ ವೈವಾಹಿಕ ಜೀವನದ ಹಂಬಲವೂ ಕೂಡ ವ್ಯಾವಹಾರಿಕ ಸ್ತರದಲ್ಲಿಯೇ ಉಳಿದುಬಿಡುತ್ತದೆ. ಬೇರೆಲ್ಲಾ ಭಾವಗಳನ್ನೂ ಮೀರಿ ನಿಲ್ಲುವುದು ಸಂಗೀತದ ಒಲವು. ಇದು ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಆವರಿಸಿಕೊಂಡು ಕುಣಿಸುತ್ತದೆ. ಮನೋಹರಿ ದಾಸ್ ಅಂತಹವರು ಕಲಾ ಪ್ರಪಂಚದಲ್ಲಿ ಅದರಲ್ಲಿಯೂ ಚಲನಚಿತ್ರರಂಗದಲ್ಲಿ ಸಾಮಾನ್ಯವಾಗಿ ಕಾಣುವುದರಿಂದ ವಿಶೇಷವೆನಿಸುವುದಿಲ್ಲ. ಎಲ್ಲೆಡೆಯೂ ಚರ್ಚೆಗೆ ಗ್ರಾಸವಾಗಿರುವುದು ಮಧುಮಿತಾಳ ಜೀವನದಲ್ಲಿ ನುಗ್ಗಿ ಬರುವ ಸುನಾಮಿಯಂತಹ ಅಲೆಗಳು. ಅದರಲ್ಲಿ ಅವಳು ಸಿಲುಕಿಯೂ ಸಿಲುಕದಂತೆ ತೇಲುತ್ತಾ ಮುಳುಗುತ್ತಾ ತನ್ನ ಮೂಲ ಗುರಿಯನ್ನು ಸಾಧಿಸುವುದು ಆಧುನಿಕ ಮಹಿಳೆಯಲ್ಲಿ ವಿಕಾಸವಾಗಿರುವ ಅಂತಃಸತ್ತ್ವದ ದ್ಯೋತಕವಾಗುತ್ತದೆ.

ಮಂದ್ರದಲ್ಲಿ ಪ್ರಮುಖವಲ್ಲದ ಪಾತ್ರ ಎಂದೆನಿಸುವ ಮೋಹನಲಾಲನ ಹೆಂಡತಿ ರಾಮಕುಮಾರಿಯ ಪಾತ್ರವೂ ಓದುಗರಲ್ಲಿ ಬೆರಗನ್ನೂ ಮೆಚ್ಚುಗೆಯನ್ನೂ ಸಷ್ಟಿಸುತ್ತಾ ಸಾಗುತ್ತದೆ. ಓದು-ಬರಹ ಕಾಣದ ಹಳ್ಳಿಯ ಬಡ ಹೆಣ್ಣು ರಾಮಕುಮಾರಿ ಮೋಹನಲಾಲನನ್ನು ಮದುವೆಯಾಗಿ ಎರಡು ಮಕ್ಕಳನ್ನು ಪಡೆದು ಅವನಿಂದ ಪರಿತ್ಯಕ್ತಳಾಗಿ ದೂರವೇ ನಿಂತವಳು. ತನ್ನ ಸಂಸಾರ ಸಾಕಲು ಅಡಿಗೆ ಕೆಲಸಕ್ಕೆ ನಿಂತ ಮನೆಯ ಯಜಮಾನ, ಗೋರೆ ಅವಳಿಗೆ ಸುಲಭವಾಗಿ ಕೆಲಸ ಕೊಟ್ಟದ್ದೇ , ಅವಳು ಮಹಾಗಾಯಕ ಮೋಹನಲಾಲನ ಮಡದಿ ಎಂದು ತಿಳಿದಮೇಲೆ. ಸಂಗೀತಗಾರನ ವೆಯಕ್ತಿಕ ಬದುಕಿನ ಬಗ್ಗೆ ಚಿಂತಿಸದೆ, ಅವನು ತನ್ನ ಸಂಗೀತದಲ್ಲಿ ಹೊರಹೊಮ್ಮಿಸುವ ಉದಾತ್ತ ಭಾವದಲ್ಲಿ ಮಿಂದು ಪುಳಕಗೊಳ್ಳಬಲ್ಲಂತಹ ಸಂಗೀತ ಪ್ರೇಮಿ ಹಾಗೂ ಸಂಗೀತಗಾರರ ಪೋಷಕರಾದ ಗೋರೆಯವರದು ಉದಾತ್ತ ಪಾತ್ರ. ಅಂತಹ ಪ್ರಾಮಾಣಿಕ ಗಹಸ್ಥನಿಗೂ ತನ್ನಲ್ಲಿ ಕೆಲಸಕ್ಕಿರುವ ರಾಮಕುಮಾರಿಯೊಂದಿಗೆ ಸಂಬಂಧ ಬೆಳೆಸುವ ಆಸೆ ಚಿಗುರಿ ಅವಳನ್ನು ಕೇಳಿಯೂ ಬಿಡುತ್ತಾನೆ. ಬೇರೆ ಯಾವ ದಿಕ್ಕೂ ಕಾಣದಂತಹ ಪರಿಸ್ಥಿತಿಯಲ್ಲಿ, ತನ್ನ ಸಂಸಾರ ಸಾಗಲು ನೆರವಾದ, ಹಲವಾರು ವರ್ಷಗಳಷ್ಟು ಕಾಲ ಸಭ್ಯತೆಯ ಎಲ್ಲೆಯನ್ನು ದಾಟದಿದ್ದ ತನ್ನ ಧಣಿ ಗೋರೆಸಾಹೇಬರಲ್ಲಿ ಪರಮ ಪೂಜ್ಯ ಭಾವ ತೆಳೆದಿದ್ದ ರಾಮಕುಮಾರಿಗೆ ಒಮ್ಮಿಂದೊಮ್ಮೆಗೇ ಬಂದ ಅವನ ಬೇಡಿಕೆ ದಿಗ್ಭ್ರಮೆ ಹುಟ್ಟಿಸುತ್ತದೆ. ಅಂತಹ ವಿಷಮ ಪರಿಸ್ಥಿತಿಯನ್ನು ದಾಟಲು ಅವಳಿಗೆ ನೆರವಾಗುವುದು ಅವಳು ಕಟ್ಟಿಕೊಂಡು ಬಂದ ಪಾರಂಪರಿಕ ವೌಲ್ಯಗಳು.

ಈಗ, ಸಾಹಿತ್ಯಾಸಕ್ತರಲ್ಲಿ ಬಹು ಚರ್ಚಿತವಾಗಿರುವ ಮಧುಮಿತಾಳ ಪಾತ್ರ ಸಷ್ಟಿಯನ್ನು ನೋಡೋಣ. ಮಧುಮಿತಾ ತನ್ನ ಗುರುವಿನ ಕಾಮದಾಹಕ್ಕೆ ಬಲಿಯಾಗುವುದನ್ನು ಅವಳ ನೆತಿಕ ಪತನವೆಂದು ವಿಚಾರಗೋಷ್ಠಿಗಳಲ್ಲಿ ಹಾಗೂ ಸಂವಾದದಲ್ಲಿ ಕೇಳಿಬಂದದ್ದು ಆ ಪಾತ್ರ ಬೆಳೆದು ಬಂದ ನಿಲುವಿಗೆ ಸರಿ ಎನಿಸುವುದಿಲ್ಲ. ಆಗ ತಾನೇ ಕಾಲೇಜಿನ ಓದು ಮುಗಿಸಿದ್ದ ನವ ಯುವತಿ ಮನಸೋಲುವಂತಹ ಯಾವುದೇ ಬಾಹ್ಯ ಆಕರ್ಷಣೆ ಮೋಹನಲಾಲನಲ್ಲಿ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಹರೆಯ ಮೀರಿದ, ಹಲ್ಲುಗಳ ಮೂಲಕ ತಂಬಾಕಿನ ಒರಟು ವಾಸನೆ ಬೀರುವ ವಿಷಯ ಲಂಪಟನಾದ ಅರವತ್ತು ವರ್ಷಗಳ ಮುದುಕ ಮೋಹನಲಾಲ್. ಅವನು ಸಂಗೀತದಲ್ಲಿ ಸಾಧಿಸಿದ್ದ ಶಕ್ತಿ ಅಪ್ರತಿಮ. ಸ್ವರಗಳನ್ನು ಹಿಂಜಿ ಹಿಂಜಿ ರಾಗದ ರಸವನ್ನು ಹೊರತೆಗೆಯುವುದಷ್ಟೇ ಅಲ್ಲದೆ, ತಾನು ಸಾಧಿಸಿದ್ದನ್ನು ವಿದ್ಯಾರ್ಥಿಗಳಿಗೆ ಉಣಬಡಿಸಬಲ್ಲ ಸಮರ್ಥ ಗುರು. ಸಂಗೀತ ಸಾಧನೆಯನ್ನೇ ಜೀವನದ ಗುರಿಯಾಗಿಸಿಕೊಂಡ ಮಧುಮಿತಾಳಿಗೆ ಇದ್ದ ವಿಕಲ್ಪ ಎರಡೇ ಎರಡು. ಅಂತಹ ಗುರು ಹೇಳಿದ್ದಕ್ಕೆ ತಲೆ ಬಾಗುವುದು ಅಥವಾ ಸಂಗೀತ ಸಾಧನೆಗೆ ತಿಲಾಂಜಲಿ ಬಿಡುವುದು.

ಸಾಂಪ್ರದಾಯಿಕತೆಯ ಮಡಿಲಲ್ಲಿ, ಸುಖ-ಸಮದ್ಧಿಯ ತೊಟ್ಟಿಲಲ್ಲಿ ಬೆಳೆದ ಸುಸಂಸ್ಕತ ಮನೆತನದ ಮಧುಮಿತಾಳ ಜೀವನದಲ್ಲಿ ಬಂದ ಮೊದಲ ಸುನಾಮಿ ಅಲೆಯೇ ಮೋಹನಲಾಲನ ಕಾಮವಾಸನೆಗೆ ಆಹಾರವಾಗುವುದು. ಅವಳು ಅದಕ್ಕೆ ಒಪ್ಪುವುದು ಸುಲಭವಾಗಿರಲಿಲ್ಲ. ಗುರುವಿನ ನಿರ್ಲಜ್ಜ ಕಾಮನೆಗೆ ಅವಳಲ್ಲಿ ಮೊದಲು ಹುಟ್ಟಿದ್ದು ಕೋಪ-ಅಸಹ್ಯ-ಜಿಗುಪ್ಸೆ. ಸಂಗೀತ ಕಲಿಯದಿದ್ದರೆ ಏನಾಯಿತು ? ನೀತಿಯನ್ನೇ ಕಳೆದುಕೊಂಡು ಬದುಕಿದರೆ ಏನು ಸುಖ ? ಎಂಬ ಆಲೋಚನೆಯಲ್ಲಿ ಎರಡು ದಿನ ಕಳೆದು ಸಂಗೀತವನ್ನು ಮರೆತು, ಸಾಹಿತ್ಯಾಭ್ಯಾಸ ಮಾಡುವ ನಿರ್ಧಾರದಿಂದ ಕಾದಂಬರಿ ಓದಲು ತೊಡಗಿದ ಮಧುಮಿತಾ ಗುರುವಿನ ಮುಖ ಮುರಿಯಲಿಕ್ಕೆಂದೇ ತನ್ನ ಪಾಠಕ್ಕೆ ನಿಗದಿಯಾದ ದಿನ ಹೋಗಿ 'ಶಿಷ್ಯೆ ಅಂದರೆ ಮಗಳ ಸಮಾನ ಅಲ್ಲವೇ ?' ಎಂದು ಕೇಳುತ್ತಾಳೆ. ಅದಕ್ಕೆ ಮೋಹನಲಾಲನದು ತಣ್ಣಗಿನ ಪ್ರತಿಕ್ರಿ0ೆು. ಯಾವ ಭಾವಾವೇಶವೂ ಇಲ್ಲದ ಅದೇ ಕಾಮನೆ .. ಬಲವಂತವೇನೂ ಇಲ್ಲವೆಂದು ನಿರ್ಧಾರದ ಎಲ್ಲಾ ಭಾರವನ್ನೂ ಅವಳ ಮೇಲೇ ಹಾಕುವ ವ್ಯಾವಹಾರಿಕ ಚಾಣಾಕ್ಷತನ.

ಮತ್ತೆರಡು ದಿನಗಳಲ್ಲೇ, ಕಥೆ-ಕಾದಂಬರಿ ಓದುವುದು ಬರಡು ಎನಿಸಿ, ಬೇರೆ ಗುರುಗಳನ್ನು ಅರಸಿ ಅಲ್ಲಿಯೂ ನಿರಾಶಳಾಗಿ, ಮತ್ತೆ ಮತ್ತೆ , ಮೋಹನಲಾಲನಂತಹ ಗುರುವಿನಲ್ಲಿಯೇ ಸಂಗೀತ ಕಲಿಯಬೇಕೆನ್ನುವ ಅದಮ್ಯ ಆಸೆಯೇ ಹೆಚ್ಚಾಗಿ ಮನಸ್ಸು ಅವನು ಬಯಸಿದ ಅನಿವಾರ್ಯ ಸಂಬಂಧಕ್ಕೆ ಸಿದ್ಧವಾಗುತ್ತದೆ. ' ಇವನದು ನೇರವಾಗಿ ಭಾವ ಸಾಗರವನ್ನು ಹೊಗಿಸಿ ಮುಳುಗಿಸಿಬಿಡುವ ವಿಧಾನ... ಬೇರೆ ಯಾರ ಗಾಯನದಲ್ಲಿಯೂ ಈ ಶಕ್ತಿ ಇಲ್ಲ...ಉಜ್ಜುಗಿಸುವ ಕಸುವಿಲ್ಲ...' ಎಂದು ಮನಸ್ಸು ತನ್ನದೇ ವಾದವನ್ನು ಮುಂದಿಟ್ಟು , ಸಂಗೀತ ಒಂದು ಗಂಧರ್ವ ವಿದ್ಯೆ , ಹಾಗಾಗಿ ತಮ್ಮದು ಗಾಂಧರ್ವ ವಿವಾಹ ಎಂದುಕೊಳ್ಳುವ ಸಮರ್ಥನೆಗೆ ಬಂದು ಮುಟ್ಟುವಲ್ಲಿ ಆರು ತಿಂಗಳು ಕಳೆದುಹೋಗಿ, ತನ್ನ ಸಂಗೀತ ಸಾಧನೆಗೆ ಅಷ್ಟು ವಿಳಂಬವಾಯಿತು ಎಂದು ಕೊರಗುವ ಮಧುಮಿತಾಳ ನಿರ್ಧಾರದಲ್ಲಿ ಓದುಗರೂ ತನ್ಮಯತೆಯಿಂದ ಭಾಗಿಗಳಾಗುವಂತೆ ಮಾಡುವ ರಸಸಷ್ಟಿ ಭೆರಪ್ಪನವರ ಸಿದ್ಧಹಸ್ತದಲ್ಲಿ ನಳಪಾಕವಾಗಿಸಿದೆ. ಇಲ್ಲಿ ಯಾವ ಅನೀತಿಯೂ ಕಾಣುವುದಿಲ್ಲ.

ಅಷ್ಟರಲ್ಲಾಗಲೇ, ಚಂಪಾಳ ದಬ್ಬಾಳಿಕೆಯನ್ನು ಸಹಿಸಿ, ಮನೋಹರಿ ದಾಸಳಿಂದ ಅವಹೇಳನಕ್ಕೆ ಗುರಿಯಾಗಿ ಇನ್ನು ಯಾವುದೇ ರೀತಿಯ ಬಂಧನವೂ ಬೇಡವೆಂದು ನಿರ್ಧರಿಸಿದ್ದ ಮನೋಹರಲಾಲ, ಆಗಲೂ ಯಾವ ಭಾವಾವೇಶಕ್ಕೂ ಒಳಗಾಗುವುದಿಲ್ಲ. ಮತ್ತೆ, ವಿವಾಹಿತಳಾದ ಮಧುಮಿತಾಳನ್ನು ಅಮೆರಿಕದಲ್ಲಿ ತನ್ನ ಭಾವೋದ್ದೀಪನಕ್ಕೆ ಒತ್ತಾಯಿಸಿದಾಗಲೂ ತನ್ನ ಸ್ವಾರ್ಥ ಸಾಧನೆಯೊಂದೇ ಅವನ ಗುರಿ. ಮಧುಮಿತಾಳಿಗೆ ಮಾತ್ರ ತನ್ನ ಬಾಳಿನಲ್ಲಿ ಮತ್ತೊಮ್ಮೆ ಇನ್ನೂ ಬಲವಾಗಿ ಬಂದೆರಗಿದ ಸುನಾಮಿ ಅಲೆಯನ್ನು ತಡೆದುಕೊಳ್ಳುವ ತ್ರಾಣ ಉಳಿದಿರುವುದಿಲ್ಲ. ಅಲ್ಲಿಯೂ ಸಂಗೀತವೇ ಗೆಲ್ಲುತ್ತದೆ. ಆದರೆ ಅದಕ್ಕೆ ಎರವಾಗುವುದು ಅವಳ ಸಾಂಸಾರಿಕ ಬಂಧನ. ಇಬ್ಬಂದಿ ಜೀವನದ ಒತ್ತಡವನ್ನು ತಾಳಲಾಗದೆ, ಮತ್ತೆ ಸಂಗೀತಕ್ಕೇ ಪೂರ್ಣವಾಗಿ ಅರ್ಪಿಸಿಕೊಳ್ಳಲು ಸಂಸಾರ ತೊರೆದು ಬಂದ ಮಧುಮಿತಾಳಿಗೆ, ಗುರುವಿನ ನಿರಾಕರಣೆ ಮೊದಲಿಗೆ ಆಘಾತಕರವಾದರೂ, ಅಷ್ಟರಲ್ಲಿ ಪ್ರಬುದ್ಧತೆಗೆ ಏರಿದ್ದ ಅವಳ ಮನಸ್ಸು, ಅಂತಃಸತ್ತ್ವವನ್ನು ಬೆಳೆಸಿಕೊಂಡು ಕೊನೆಗೆ ಗುರಿಸಾಧಿಸುವಲ್ಲಿ ಸಾಫಲ್ಯ ಹೊಂದುತ್ತದೆ ಎನ್ನುವಲ್ಲಿ ಭೆರಪ್ಪನವರು ಕಟ್ಟಿಕೊಡುವ ರಸಪಾಕ ಪೂರ್ಣವಾಗುತ್ತದೆ.

ವೆಯಕ್ತಿಕ ಭದ್ರ ಜೀವನದ ಹಲವು ಸುಖ-ಸೌಕರ್ಯಗಳನ್ನು ಬಲಿತೆತ್ತು, ಸಂಗೀತದ ಸಾಧನೆಯಲ್ಲಿ ತನ್ನ ಗುರಿ ಸಾಧಿಸಿದ ಪರ್ವಕಾಲದಲ್ಲಿಯೂ ಮಧುಮಿತಾಳಿಗೆ ಗಂಡನ ನೆನಪು ಕಾಡುವುದು ಅವನ ಮೇಲಿನ ಪ್ರೇಮದಿಂದಲ್ಲ... ಅಲ್ಲಿಯೂ ವಿಜಂಭಿಸುವುದು ಸಂಗೀತ ಪ್ರೇಮವೇ.. ಗಂಡ ವಿಕ್ರಮ ತನ್ನಿಂದಾಗಿ, ಅವನಿಗೆ ಪ್ರಿಯವಾದ ಸಂಗೀತದಿಂದ ವಂಚಿತನಾದ ಎನ್ನುವಂತಹ ಅವಳ ಕೊರಗೂ ಕೂಡ ಸಂಗೀತ ಅವಳನ್ನು ಆವರಿಸಿರುವ ಆಳವನ್ನು ಸೂಚಿಸುತ್ತದೆ. ಮಧುಮಿತಾಳ ನಿರ್ಧಾರಗಳಿಗೆ ನೀತಿ ಸಂಹಿತೆಯನ್ನು ತೊಡಿಸಿ, ಕೋರ್ಟಿನಲ್ಲಿ ನ್ಯಾಯಾಧೀಶರಂತೆ ನಿರ್ಣಯಕ್ಕೆ ಕೂತರೆ, ಓದುಗ ಅಲ್ಲಿ ಸಿಗುವ ರಸಾನುಭವದಿಂದ ವಂಚಿತನಾಗುತ್ತಾನೆ. ಇದು, ನಾನು ಕಂಡು ಮೆಚ್ಚಿದ ಮಂದ್ರದ ಪಾರ್ಶ್ವ ನೋಟ.

ಯಾವುದೇ ಸಜನಾತ್ಮಕ ಕ್ರಿಯೆಯಲ್ಲಿ ಸಹದಯ ಓದುಗ ಅರಸುವುದು ಕಾವ್ಯ ಕಟ್ಟಿಕೊಡುವ ರಸಾನುಭವವನ್ನು. ಕವಿಗಳು (ಸಾಹಿತಿಗಳು) ಸಹಜವಾಗಿಯೇ, ತಾವು ಕಂಡು ಕೇಳಿ ಅರಿತ ಸಮಾಜ ದರ್ಶನವನ್ನು ತಮಗೆ ಒಗ್ಗಿದ ಪ್ರಕಾರದಲ್ಲಿ ಹೊರಗಿಡುತ್ತಾರೆ. ಅಲ್ಲಿ ಬಳಕೆಯಾಗುವ ತಂತ್ರ ಹಾಗೂ ಭಾಷೆ ವೆಯಕ್ತಿಕವಾದರೂ, ಒಂದು ಕತಿಯ ಅಂತಿಮ ಅಭಿವ್ಯಕ್ತಿ ಕತಿಕಾರನ ವೆಯಕ್ತಿಕ ನಿಲುವಿನ ಪ್ರತಿಬಿಂಬವಾಗಬೇಕಿಲ್ಲ. ಬಹಳಷ್ಟು ಬಾರಿ ಹಾಗೆ ಆಗುವುದೂ ಇಲ್ಲ. ಕತಿಕಾರ ತನ್ನ ಅನುಭವವನ್ನು ಸಾಕ್ಷಿಪ್ರಜ್ಞೆಯೊಂದಿಗೆ ನೋಡಿ ಅಭಿವ್ಯಕ್ತಿಸಿದಾಗ ಅದು, ಬಹುಜನರ ಹದಯವನ್ನು ತಟ್ಟುತ್ತಾ ಬಹುಕಾಲ ನಿಲ್ಲಬಲ್ಲದು. ಹಾಗಾಗಿಯೇ ಭೆರಪ್ಪನವರು, ಇಂದು ಬರುವ ಯಾವುದೇ ರೀತಿಯ ಋಣಾತ್ಮಕ ವಿಮರ್ಶೆಗಳಿಂದ ವಿಚಲಿತಗೊಳ್ಳದೆ, ಯಾವುದೇ ಕತಿಯು ಎಷ್ಟು ದಶಕಗಳು ನಿಲ್ಲುತ್ತವೆ ಎನ್ನುವುದರಿಂದ ಅದರ ವೌಲ್ಯ ನಿರ್ಧಾರವಾಗುತ್ತದೆ ಎನ್ನುತ್ತಾರೆ.

ಪ್ರಸಕ್ತ ಶಕೆಯ ಎಂಟನೆಯ ಶತಮಾನದಲ್ಲಿದ್ದ 'ಉತ್ತರ ರಾಮಚರಿತಂ' ಎಂಬ ಉತಷ್ಟ ನಾಟಕವನ್ನು ರಚಿಸಿದ ಕವಿ, ಭವಭೂತಿ ತನ್ನ ನಾಟಕದ ಪ್ರಾರಂಭದಲ್ಲಿ, *ಉತ್ಪತ್ಸ್ಯತೇಸ್ತಿ ಮಮ ಕೋಪಿ ಸಮಾನಧರ್ಮಾ ಕಾಲೋಹ್ಯಯಂ ನಿರವಧಿರ್ವಿಪುಲಾ ಚ ಪಥ್ವೀ - ಯಾರಿಗೆ ಸಹದಯತೆಯ ಅರಿವಿಲ್ಲವೋ ಅವರು ಈ ಕತಿಯಿಂದ ದೂರವಿರಲಿ. ಈ ಭೂಮಿಯೂ ವಿಶಾಲವಾಗಿದೆ. ಕಾಲಕ್ಕೂ ಕೊನೆಯೆಂಬುದಿಲ್ಲ (ನಿರವಧಿ). ನನಗೆ ಸಮಾನಧರ್ಮನಾದ ಯಾವನಾದರೂ ಸಹದಯ ಎಂದಾದರೂ (ಎಲ್ಲಿಯಾದರೂ) ಹುಟ್ಟಿಬರುವನು* ಎಂದು ಆತ್ಮವಿಶ್ವಾಸದಿಂದ ಹೇಳುತ್ತಾನೆ.

ನಮ್ಮ ರಾಷ್ಟ್ರಕವಿ ಕುವೆಂಪುರವರೂ, 'ನಾನೇರುವಾ ಎತ್ತರಕೆ ನೀನೇರಬಲ್ಲೆಯಾ ನಾನಿಳಿವಾ ಆಳಕ್ಕೆ ನೀನಿಳಿಯಬಲ್ಲೆಯಾ' ಎಂದು ವಿಮರ್ಶಕರತ್ತ ಸವಾಲು ಹಾಕಿದ್ದು ಎಲ್ಲಾ ಕಾಲದಲ್ಲಿಯೂ ಕವಿಗಳಿಗೂ ವಿಮರ್ಶಕರಿಗೂ ಇರುವಂತಹ ಸಂಬಂಧ ಎಂತಹುದೆಂಬುದನ್ನು ತಿಳಿಸುತ್ತದೆ. ಹಾಗಾಗಿ, ಅಂತಹ ವಿಮರ್ಶಕರನ್ನು ಹೊರತು ಪಡಿಸಿದರೂ, ತಮ್ಮ ಜೀವಿತಾವಧಿಯಲ್ಲಿಯೇ, ಸಹದಯರ ಪ್ರೀತಿಯನ್ನು ಪಡೆಯುವ ಲೇಖಕರು ವಿರಳವೆನ್ನುವುದು ಎಲ್ಲಾ ಕಾಲಕ್ಕೂ ಅನ್ವಯಿಸುವ ಮಾತು. ಅಂತಹ ಪ್ರೀತಿಗೆ ಭಾಜನರಾಗಿರುವ ಭೆರಪ್ಪನವರ ಮಂದ್ರದಲ್ಲಿ ಕಾಣುವ ಒಂದು ಪಾರ್ಶ್ವ ನೋಟವನ್ನು ಇಲ್ಲಿಡುವುದು ನನ್ನ ಆಶಯ.

ಮೂಲ:- http://tinyurl.com/mandrareview


Saturday, January 12, 2013

ಮರಳಿ ಮಣ್ಣಿಗೆ - ಶಿವರಾಮ ಕಾರಂತ



ಶಿವರಾಮ ಕಾರಂತರ “ಮರಳಿ ಮಣ್ಣಿಗೆ” ಕಾದಂಬರಿಯು ಕನ್ನಡ ಸಾರಸ್ವತ ಲೋಕದಲ್ಲಿ ಮೆಚ್ಚುಗೆ ಪಡೆದ ಸಾಹಿತ್ಯದಾಕರಗಳಲೊಂದು. ಈ ಕಾದಂಬರಿಯಲ್ಲಿ ಕಾರಂತರು ಕರಾವಳಿ ತೀರ ಪ್ರದೇಶದ ಐತಾಳ ಕುಟುಂಬವೊಂದರ ತಲೆಮಾರನ್ನು ಕೇಂದ್ರಬಿಂದುವಾಗಿರಿಸಿಕೊಂಡು ಕಥೆಯನ್ನು ತುಂಬಾ ಸ್ವಾರಸ್ಯವಾಗಿ ಎಣೆದಿದ್ದಾರೆ. ಕಾದಂಬರಿಯನ್ನು ಓದುತ್ತಾ ಹೋದರೆ ಕರಾವಳಿಯ ತೀರ ಪ್ರದೇಶಗಳಿಗೆ ನಮ್ಮನ್ನು ನಮಗರಿವಿಲ್ಲದೆ ಕರೆದೊಯ್ಯತ್ತದೆ.


ಕೋದಂಡರಾಮ ಐತಾಳರ ಮಗ ರಾಮ ಐತಾಳರು ನಾರಾಯಣ ಮಯ್ಯನವರ ಮಗಳು ಪಾರ್ವತಿಯನ್ನು ವಿವಾಹವಾಗುವುದರಿಂದ ಕಥೆಯು ಪ್ರಾರಂಭವಾಗುತ್ತದೆ. ಇವರೀರ್ವರ ಮದುವೆಯಾದ ಕಲವೇ ವರುಷಗಳಲ್ಲಿ ಇಬ್ಬರು ಬೀಗರು ಅಂದರೆ ಕೋದಂಡರಾಮ ಐತಾಳರು ಹಾಗೂ ನಾರಾಯಣ ಮಯ್ಯನವರು ಕಾಲವಶವಾಗಿಬಿಡುತ್ತಾರೆ. ಮನೆಯ ಜವಾಬ್ದಾರಿ ಹಾಗೂ ಅಪ್ಪನಿಂದ ಬಳುವಳಿಯಾಗಿ ಬಂದ ಪೌರೋಹಿತ್ಯದ ಕೆಲಸವು ರಾಮ ಐತಾಳರ ಹೆಗಲ ಮೇಲೆ ಬೀಳುತ್ತದೆ. ರಾಮ ಐತಾಳರದು ಸ್ವಲ್ಪ ಆಸೆಬುರಕ ಸ್ವಭಾವ, ಪೌರೋಹಿತ್ಯದಲ್ಲಿ ತಮಗೆ ಸಿಕ್ಕ ಯಾವ ವಸ್ತುವನ್ನೂ ಬಿಡದೆ ಎಲ್ಲವನ್ನೂ ಮನೆಗೆ ಬಾಚಿಕೊಂಡು ಬರುತ್ತಿರುತ್ತಾರೆ. ಚಿಕ್ಕವಯಸಿನಲ್ಲೇ ತನ್ನ ಗಂಡನನ್ನು ಕಳೆದಕೊಂಡು ರಾಮ ಐತಾಳರ ತಂಗಿ ಸರಸ್ವತಿ ತನ್ನ ತೌವರು ಮನೆಯಲ್ಲೇ ಇರುತ್ತಾಳೆ. ರಾಮ ಐತಾಳರು ಹಾಗೂ ಪಾರ್ವತಿ ದಂಪತಿಗಳಿಗೆ ಮಕ್ಕಳಾಗದ ಕಾರಣ ರಾಮ ಐತಾಳರು ಸತ್ಯಭಾಮೆ ಎನ್ನುವ ಕನ್ಯೆಯನ್ನು ವಿವಾಹವಾಗಿತ್ತಾರೆ. ಈ ದಂಪತಿಗಳಿಗೆ ಗಂಡು ಮಗುವೊಂದು ಜನಿಸುತ್ತದೆ. ಆ ಮಗುವಿಗೆ ಲಕ್ಷ್ಮಿ ನಾರಾಯಣ (ಲಚ್ಚ) ಎಂಬ ಹೆಸರನ್ನು ಇಡುತ್ತಾರೆ. ಆ ಲಚ್ಚನೇ ಮರಳಿ ಮಣ್ಣಿಗೆ ಕಾದಂಬರಿಯ ಪ್ರಮುಖ ಪಾತ್ರಧಾರಿ. ಅವನು ಐತಾಳರ ಕುಟುಂಬಕ್ಕೆ ಕೀರುತಿ ತರುತ್ತಾನೋ ಇಲ್ಲ ಅಪಕೀರುತಿಯನ್ನು ತರುತ್ತಾನೋ ಅಲ್ಲದೆ ತನ್ನ ಪತ್ನಿಯಾಗಿ ಬರುವ ಸುಸಂಸ್ಕೃತ ಸಂಪ್ರಾದಯದ ಮನೆತನದ ಹುಡುಗಿ ನಾಗವೇಣಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದೇ ಈ ಕಾದಂಬರಿಯ ಪ್ರಮುಖ ತಿರುಳು.


ಕಾರಂತರು ಕಥೆಯನ್ನು ಎಳೆ ಎಳೆಯಾಗಿ ಬರೆದಿದ್ದಾರೆ. ಈ ಕಥೆಯಲ್ಲಿ ಕಡಲತೀರದ ಜನರ ಆಚಾರ-ವಿಚಾರವಿದೆ, ಕನ್ನಡ ಸಾಹಿತ್ಯಲೋಕಕ್ಕೆ ಉಡುಗೊರೆಯಾಗಿ ಹರಿದು ಬಂದಿರುವ ಹೊಸಹೊಸ ನುಡಿಮುತ್ತುಗಳಿವೆ, ಹಾಗೇನೇ ಪ್ರಾಯದ ಯುವಕರ ಕೆಡುಕಿನ ವಿಚಾರವೂ ಇದೆ, ಇವೆಲ್ಲಕ್ಕಿಂತ ಮಿಗಿಲಾಗಿ ಹೆಂಗಳೆಯರು ಹೊರಗಿನ ಕೆಲಸಕಾರ್‍ಯಗಳಲ್ಲಿ ಗಂಡಸರಿಗಿಂತ ಕಡಿಮೆ ಇಲ್ಲ ಎಂಬುದನ್ನು ತಿಳಿಸುವ ಮಾರ್ಮಿಕ ಸಂದೇಶವಿದೆ ಹಾಗೂ ಅವರು ಸಂಸಾರದಲ್ಲಿ ಅನುಭವಿಸುವ ಒಣ ನೋವುಗಳ ವ್ಯಾಕ್ಯಾನವಿದೆ. ನಿಜ ಹೇಳಬೇಕೆಂದರೆ ನಲವಿಗಿಂತ ನೋವೇ ಕಾರಂತರ ಈ ಕಥೆಯಲ್ಲಿದೆ. ಕೊನೆಯಲ್ಲಿ ನಗುವಿನ ಆಶಾಕಿರಣವೊಂದನ್ನು ಹುಟ್ಟಿಸುವುದರಲ್ಲಿ ಕಾರಂತರು ಯಶಸ್ವಿಯಾಗಿದ್ದಾರೆ.


ಮೂಲ:- http://goo.gl/u4DZv


ಮರಳಿ ಮಣ್ಣಿಗೆ ಕೃತಿಯು ಕಾರಂತರ ಮೊದ ಮೊದಲ ಬರವಣಿಗೆಗಳಲ್ಲಿ ಒಂದು. ೧೯೪೧ ನಲ್ಲಿ ಮೊದಲ ಮುದ್ರಣ ಕಂಡ ಈ ಪ್ರತಿ ಇಂದಿಗೂ ಕಾರಂತರ ಜನಪ್ರಿಯ ಪುಸ್ತಕಗಳಲ್ಲಿ ಒಂದು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ರೀತಿ ಕಾರಂತರು ತಮ್ಮನ್ನು ತೊಡಗಿಸಿಕೊಳ್ಳದ ವಿಷಯವೇ ಇಲ್ಲವೇನೋ.. ಬರವಣಿಗೆ, ಸಮಾಜ ಸೇವೆ, ಯಕ್ಷಗಾನ ಕಲೆ, ಪರಿಸರವಾದ, ಬಾಲವನ, ರಾಜಕೀಯ ಚಿಂತನೆ ಹೀಗೆ ಹಲವು ಹತ್ತು ಪ್ರಕಾರಗಳಲ್ಲಿ ಪಾಂಡಿತ್ಯ ಸಾಧಿಸಿದ್ದರು. ಅವರ ಬರವಣಿಗೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಕಾಳಜಿ ಹಾಗು ಪರಿಸರ ಪ್ರೇಮ ವ್ಯಕ್ತವಾಗುತ್ತಿತ್ತು… 'ಮರಳಿ ಮಣ್ಣಿಗೆ' ಸಾಮಾಜಿಕ ಕಾದಂಬರಿಯೂ ಅದಕ್ಕೆ ಹೊರತಾಗಿಲ್ಲ.



 ಸರಳವಾಗಿ ಹೇಳುವುದಾದರೆ 'ಮರಳಿ ಮಣ್ಣಿಗೆ' ಕಾದಂಬರಿ, ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ ಇದ್ದಂತಹ ಒಂದು ಗ್ರಾಮೀಣ ಕುಟುಂಬದ ಮೂರು ತಲೆಮಾರಿನ ಕತೆ. ಅಂದಾಜಿನ ಪ್ರಕಾರ, ಕತೆ ನಡೆದ ಕಾಲಮಾನ ೧೮೬೦ - ೧೯೪೦ ನಡುವಿನ ೬೦ - ೭೦ ವರ್ಷಗಳು. ದಕ್ಷಿಣ ಕನ್ನಡದ ಸಾಲಿಗ್ರಾಮ - ಕೋಟ ಸುತ್ತಮುತ್ತಲ ವ್ಯಾಪ್ತಿಯ ಹದಿನಾಲ್ಕು ಕೂಟ ಗ್ರಾಮಗಳಾದ ಕೋಡಿ, ಕನ್ಯಾನ, ಮಂದರ್ತಿ, ಹಂಗಾರುಕಟ್ಟೆ ಇತ್ಯಾದಿ ಊರುಗಳ ಹಿನ್ನಲೆಯಲ್ಲಿ, ಆ ಪ್ರದೇಶಕ್ಕೆ ಸೀಮಿತವಾಗಿರುವ 'ಕೋಟ' ಆಡು ಭಾಷೆಯನ್ನೇ ಬಳಸಿ, ಅತ್ಯಂತ ಸುಂದರವಾಗಿ ಪ್ರಾದೇಶಿಕ ವೈಶಿಷ್ಟ್ಯತೆ ಎತ್ತಿ ಹಿಡಿಯುತ್ತ, ಈ ಸಾಮಾಜಿಕ ಕಾದಂಬರಿಯನ್ನು ನಮ್ಮ ಮುಂದೆ ಪ್ರಸ್ತುತ ಪಡಿಸಿದ್ದಾರೆ ನಮ್ಮ ಕಾರಂತರು. ಈ ಕಾದಂಬರಿ ಮೊದಲು ಪ್ರಕಟಣೆಗೊಂಡಿದ್ದು ೧೯೪೧. ತದ ನಂತರ ಸುಮಾರು ಬಾರಿ ಮರು ಪ್ರಕಟಣೆಗೊಂಡಿದೆ. ಒಂದು ಶತಕದಷ್ಟು ಹಿಂದಿನ ಪುಸ್ತಕವಾದರೂ, ಇದರಲ್ಲಿ ಎತ್ತಿ ಹಿಡಿದಂತಹ ವಿಚಾರಗಳು, ಮೌಲ್ಯಗಳು, ಸಮಸ್ಯೆಗಳು, ತರ್ಕ ತಾಕಲಾಟಗಳು ಇಂದಿಗೂ ಪ್ರಸ್ತುತವೇ ಆಗಿವೆ.

 ಕತೆ ಶುರುವಾಗುವುದು ಪಾರೋತಿಯ (ಪಾರ್ವತಿಯ ರೂಢಿನಾಮ) ಲಗ್ನದ ವಿವರಣೆಯೊಂದಿಗೆ. ಜೇಷ್ಠ ಮಾಸದ ಜೋರು ಮಳೆಯಲ್ಲೇ ಮದುವೆಯಾಗಿ ರಾಮ ಐತಾಳರ ಮನೆ ತುಂಬುವ ಪಾರೋತಿಯ ಮುಂದಿನ ಬಾಳೆಲ್ಲ ಬರಿ ಬಿಡುವಿಲ್ಲದ ದುಡಿತ. ಮನೆ ಒಳ ಹೊರ ಕೆಲಸಗಳನೆಲ್ಲ ಬರೋಬ್ಬರಿ ನಿಭಾಯಿಸಿ, ಗಂಡನ ಇಷ್ಟಾನಿಷ್ಟ, ಕೋಪ-ತಾಪ, ಧೂರ್ತತೆಯನೆಲ್ಲ ಸಹಿಸುತ್ತ, ನಿರಂತರ ನಿರ್ಲಕ್ಷ್ಯದಲ್ಲೇ ನೊಂದರು ತುಟಿ ಪಿಟಕ್ ಎನ್ನದೆ ಬೇರೆಯವರ ಹಿತಕ್ಕಾಗಿ ಒಂದೇ ಸಮ ದುಡಿವ ಪಾರೋತಿ, ಒಂದರ್ಥದ ಸತಿ ಸಾವಿತ್ರಿ, ಆದರ್ಶ ಪತ್ನಿ! ಸಂತಾನಕ್ಕಾಗಿ ಸದಾ ಹಂಬಲಿಸಿ ಅದು ಕೈಗೂಡದೆ ಮನ ನೊಂದಿರುವ ಹೆಣ್ಣಾದರೂ ಸವತಿಯ ಮಗನನ್ನು ಸ್ವಂತ ಕೂಸಿಗಿಂತ ಹೆಚ್ಚಾಗಿ ಹಚ್ಚಿಕೊಂಡಂತ ಮಾತೃ ಹೃದಯ ಉಳ್ಳವಳು. ಪಾರೋತಿಯ ಸಹವರ್ತಿ, ಹಿತೈಷಿ, ಸ್ನೇಹಿತೆ, ಸಮಾನದುಖಿ ಎಲ್ಲವೂ ಆಗಿರುವುದು ರಾಮ ಐತಾಳರ ಏಕಮೇವ ಸಹೋದರಿ ಬಾಲ ವಿಧವೆಯಾದ ಸರಸೋತಿ (ಸರಸ್ವತಿಯ ರೂಢಿನಾಮ). ಪಾರೋತಿಯಂತೆ ಹೊಲ ಮನೆ ಕೃಷಿ ಕೆಲಸದಲ್ಲಿ ಅವಿರತ ದುಡಿಮೆಯಲ್ಲೇ ಅಣ್ಣನ ಮನೆಗಾಗಿ ಜೀವ ಸವೆಸಿದರು, ಪಾರೋತಿಯಂತೆ ಮೂಕವಾಗಿ ನಿರ್ಲಕ್ಷ್ಯ ಸಹಿಸಲಾರಳು. ಕೆಲಸದಲ್ಲಿ ಗಟ್ಟಿಗಿತ್ತಿ, ಮಾತಲ್ಲಿ ಹದ ತಪ್ಪಳು ಆದರೆ ಏನೊಂದು ತಪ್ಪು ಎಂದು ಕಂಡಲ್ಲಿ ಅಣ್ಣನನ್ನು ಖಂಡಿಸದೆ ಇರಲಾರಳು... ತೀರ ಅಧರ್ಮ ಎನಿಸಿತೋ ಮನೆ ಬಿಟ್ಟು ಹೊರಟೇ ಬಿಟ್ಟಾಳು. ಸರಸೋತಿಯು, ಸಂಪ್ರದಾಯ ಮೀರದೆ ಕೆಂಪು ಸೀರೆ ಬೋಳು ತಲೆ ಒಂದು ಹೊತ್ತು ಊಟದ ಚೌಕಟ್ಟಲ್ಲೇ ಕಾಲ ಕಳೆದರು, ಆ ಕಾಲಮಾನಕ್ಕೆ ಅಪರೂಪವೆನಿಸುವ ನೇರ ನಡೆ ನುಡಿಗಳ ದಿಟ್ಟ ಮಹಿಳೆ, ಸಶಕ್ತೆ! 



 ಇನ್ನು ರಾಮ ಐತಾಳರು ತಮ್ಮ ಪರಂಪರಾಗತ ಕುಲಕಸುಬಾದ ಪೌರೋಹಿತ್ಯ ಪೂಜೆ ಪುನಸ್ಕಾರದ ಹೊರತು ಬೇರೆ ಯಾವ ಕೆಲಸಕ್ಕು ತಲೆ ಹಾಕರು. ಹಾಗಂತ ಮನೆಯ ಆಡಳಿತ, ಅಧಿಕಾರ, ದರ್ಬಾರು ಯಾರಿಗೂ ಬಿಟ್ಟು ಕೊಡರು. ಮನೆ ಹೆಂಗಸರ ದುಡಿಮೆಯನ್ನು ತಾವು ಗಂಟು ಕಟ್ಟುತ್ತ, ಅವರನ್ನೇ ನಿಕೃಷ್ಟವಾಗಿ ಕಾಣುತ್ತ ತಮ್ಮ ದೌಲತ್ತು ಮೆರೆಸುವಂತ ದುರುಳರು. ಇಂತಹ ರಾಮ ಐತಾಳರು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಶೀನ ಮೈಯ್ಯರ ಪಾರುಪತ್ಯದಲ್ಲಿ ಎರಡನೇ ಮದುವೆ ಮಾಡಿಕೊಂಡು ಸತ್ಯಭಾಮೆಯನ್ನು ಮನೆ ತುಂಬಿಸಿಕೊಳ್ಳುವರು. ಕಾಲಕ್ರಮದಲ್ಲಿ ಅವರಿಗಿಬ್ಬರು ಮಕ್ಕಳು ಆಗುವವು. ಅದೇ ರೀತಿ ರಾಮ ಐತಾಳರ ಮಗನಾದ ಲಕ್ಷ್ಮಣ, ಅವನ ಪತ್ನಿ ನಾಗವೇಣಿ ಹಾಗು ಸುಪುತ್ರ ರಾಮನ ಬದುಕಿನ ಆಗುಹೊಗುಗಳೇ ಮುಂದಿನೆರಡು ತಲೆಮಾರಿನ ಕತೆ.



 ರಾಮ ಐತಾಳರು ಆ ಕಾಲದ ದ್ವಂದ್ವದ ಪ್ರತೀಕ ಎನ್ನಬಹುದು. ಒಂದೆಡೆ ತಲೆತಲಾಂತರದಿಂದ ಬಂದ ರೂಢಿ ಪದ್ಧತಿ ಅನುಶಾಸನ ಕಟ್ಟುಪಾಡುಗಳ ಬಿಡಲಾಗದ ಪರಿಸ್ಥಿತಿ. ಇನ್ನೊಂದೆಡೆ ಬದಲಾವಣೆಯ ಗಾಳಿಯ ಒತ್ತಡಕ್ಕೆ ಸಿಲುಕಿ ಸಾಮಾಜಿಕ ಸ್ಥಾನ ಮಾನ ಮನ್ನಣೆ ಭದ್ರತೆಯ ಕಡೆಗೆ ಒಲವು, ಅದಕ್ಕಾಗಿ ತುಡಿತ. ಈ ತೂಗು ಮನಸ್ಥಿತಿಯಿಂದಾಗಿ ಮಗನನ್ನು ಪದ್ದತಿಯಂತೆ ಮಠ ಶಿಕ್ಷಣಕ್ಕೆ ಕಳುಹಿಸದೆ ಇಂಗ್ಲಿಷ್ ಶಾಲೆ ಸೇರಿಸಿದರೂ, ಎಲ್ಲೋ ಒಂದು ಅಳುಕು ಕಾಡುತ್ತದೆ. ಮಗ ಕೈ ತಪ್ಪಿ ಹೋದಮೆಲಂತೂ ಅಪರಾಧಿ ಪ್ರಜ್ಞೆ ಭಾದಿಸುತ್ತದೆ. ಅದೇ ತರಹ ಸಾಮಾಜಿಕವಾಗಿ ದೊಡ್ಡ ವ್ಯಕ್ತಿ ಎಂದು ಗುರುತಿಸಿಕೊಳ್ಳಲು ರಾಮ ಐತಾಳರು ಶೀನ ಮೈಯರ ನಡುವಿನ ಪೈಪೋಟಿ, ಲಾಭದಾಯಕವಾದ್ದರಿಂದ ಬೆಂಗಳೂರಿನ ಹೋಟೆಲ್ ಉದ್ಯಮದಲ್ಲಿ ತೊಡಗಿಸಿಕೊಂಡರು ಆ ವೃತ್ತಿ ಬಗ್ಗೆ  ಒಂದು ಬಗೆಯ ತಾತ್ಸಾರ, ಕೃಷಿ ಆಧಾರಿತ ಬದುಕಿನ ಅನಿಶ್ಚಿತತೆ, ಕಷ್ಟ ನಷ್ಟ ಪರಿಪಾಟಲುಗಳ ಎಲ್ಲದರ ಬಗ್ಗೆಯು ವಿನೋದವಾಗಿ, ವಿಸ್ತಾರವಾಗಿ ಬರೆದಿದ್ದಾರೆ ಕಾರಂತರು.

 ಐತಾಳರ ಮಗ ಲಕ್ಷ್ಮಣ ಉರುಫ್ ಲಚ್ಚ ಮುಂದಿನ ಪೀಳಿಗೆಯ ಪರಮ ಸ್ವಾರ್ಥದ ಪ್ರತೀಕ. ಉಂಡು ತಿಂದ ಮನೆಗೂ, ಸಾಕಿ ಬೆಳೆಸಿದ ತಂದೆ ತಾಯಿಗಳಿಗೂ, ಕಟ್ಟಿಕೊಂಡ ಹೆಂಡತಿಗೂ, ಕಡೆಗೆ ತನಗೆ ಹುಟ್ಟಿದ ಮಗನಿಗೂ ಎರಡು ಬಗೆಯಲು ಹೇಸದ ಮೋಸಗಾರ. ಉನ್ನತ ಶಿಕ್ಷಣ ದೊರೆತಿದ್ದರು ಬದುಕಿನಲ್ಲಿ ದಾರಿ ತಪ್ಪಿದ ಯುವ ಜನಾಂಗದ ಪ್ರತಿನಿಧಿ. ಸಾಯುವ ಗಳಿಗೆವರೆಗೂ ಒಂದು ಹನಿ ಪಶ್ಚಾತ್ತಾಪವಿಲ್ಲದ ಸ್ವಲ್ಪ ಅತಿರೇಕವೇನೊ ಎಂಬಂತೆ ಚಿತ್ರಿತಗೊಂಡಿರುವ ದುಷ್ಟ ಪಾತ್ರ. ಸಾತ್ವಿಕ ಮನೆತನದಲ್ಲಿ ಹುಟ್ಟಿದರೂ, ಎಲ್ಲ ರೀತಿಯ ಸೌಕರ್ಯ ಸವಲತ್ತುಗಳಿದ್ದರೂ, ತನ್ನ ಇಂಗ್ಲಿಷ್ ಓದಿನ ಅಹಂಕಾರ ಹಾಗು ಹಳ್ಳಿ ಜೀವನದ ಬಗ್ಗೆಯ ತಾತ್ಸಾರದಿಂದಾಗಿ, ಪಟ್ಟಣ ಸೇರಿ ಕೆಟ್ಟು ತನ್ನ ಬಾಳನ್ನು ತಾನೇ ಹಾಳು ಮಾಡಿಕೊಂಡಂತ ಮೂಢಮತಿ. ಯಾವ ತಪ್ಪು ಮಾಡದ, ಕುಲೀನ ಮನೆತನದಲ್ಲಿ ಹುಟ್ಟಿದಂತಹ ಪತ್ನಿ ನಾಗವೇಣಿಗೆ ಕೊಡಬಾರದ ಕಷ್ಟಗಳೆಲ್ಲ ಕೊಟ್ಟು, ಪಡಬಾರದಂತ ಬಾಧೆಗೆ ನೂಕಿದ ಸ್ವಾರ್ಥಿ. ಅದೇ ಪೀಳಿಗೆಯ ಇನ್ನೊಂದು ಮುಖ ನಾಗವೇಣಿ. ತನ್ನದಲ್ಲದ ತಪ್ಪಿಗೆ ಕಡು ಶಿಕ್ಷೆ ಅನುಭವಿಸುತ್ತ, ಆದರೂ ಕರ್ತವ್ಯ ಬಿಟ್ಟು ಓಡದೆ, ತುಂಬಿದ ಮನೆಗೂ, ಮನೆಯ ಜನರಿಗೂ ನಿಸ್ವಾರ್ಥ ಸೇವೆಗೈವ ಒಳ್ಳೆ ಮನಸಿನಾಕೆ. ಒಂಟಿ ಮಹಿಳೆ ಎಂದು ಧೈರ್ಯಗೆಡದೆ ಮನೆ ಮತ್ತು ಮಗನನ್ನು ಉತ್ತಮ ರೀತಿಯಲ್ಲಿ ಸಂಭಾಳಿಸಿಕೊಂಡು ಹೋಗಿ, ಬದುಕಿನಲ್ಲಿ ಸಾರ್ಥಕತೆ ಕಂಡುಕೊಂಡ ಸಾಧ್ವಿ. ಈ ಕಾಲಮಾನದಲ್ಲಿ ನಡೆದಂತಹ ಅನೇಕ ನೈಜ ಘಟನೆಗಳಾದ ಗೇಣಿ ಪದ್ಧತಿಯಲ್ಲಿನ ಬದಲಾವಣೆ, ಪ್ಲೇಗು ಮಾರಿ ಹಾವಳಿ, ಊರು ಬಿಟ್ಟು ಪಟ್ಟಣ ಸೇರಿದ ಯುವಕರು ಹಾಗೇ ಊರಲ್ಲಿ ಹಿಂದೆ ಬಿಟ್ಟು ಹೋದಂತಹ ಮುದುಕರ ಸಂಕಟ ನೋವುಗಳು, ಕೃಷಿ ಬಗ್ಗೆಯ ಉದಾಸೀನ ಎಲ್ಲವೂ ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ ಕಾರಂತರು. ಒಂದು ಹಂತದಲ್ಲಿ ಬರುವ ಪಾತ್ರವೊಂದು ಹೇಳುವ ಮಾತು "ನಮ್ಮೂರು ನೋಡಿದ್ದೀಯಾ ಈಗ? ನನ್ನಂಥ ಕಣ್ಣು ಕಾಣದ ಜಬ್ಬುಗಳ (=ಮುದುಕರು) ಮಾತ್ರ  ಇರುವ ಊರು." ಹೆಚ್ಚಿನ ಓದಿಗಾಗೋ ಇಲ್ಲ ಹೊಟ್ಟೆಪಾಡಿಗಾಗೋ ಪಟ್ಟಣ ಸೇರುವ ಯುವ ಜನಾಂಗ ಪೇಟೆಯ ಜೀವನಶೈಲಿಯ ಮೋಹಕ್ಕೆ ಒಳಗಾಗಿ, ತಾವು ಹುಟ್ಟಿ ಬೆಳೆದು ಹಿಂದೆ ಬಿಟ್ಟು ಬಂದತಹ ಚಿಕ್ಕ ಹಳ್ಳಿ ಅಥವಾ ಊರನ್ನು ಮರೆತೇ ಬಿಡುವುದು ಇಂದಿಗೂ ಅಷ್ಟೇ ಸತ್ಯವಲ್ಲವೇ?



 ಕೊನೆಯದಾಗಿ, ಮೂರನೇ ತಲೆಮಾರಿನ ಕಥೆ ರಾಮ ಐತಾಳರ ಮೊಮ್ಮಗ ರಾಮನದು. ರಾಮನು ತಂದೆಯ ಪರಿಚಯವೇ ಇಲ್ಲದೆ ಕಡು ಬಡತನದಲ್ಲಿ ಬೆಳೆದು, ಮಂಗಳೂರಿನ ಅಜ್ಜನ ಮನೆಯಲ್ಲಿ  ಕಷ್ಟದಲ್ಲೇ ಓದು ಮುಗಿಸಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮದ್ರಾಸಿಗೆ ಹೋಗಿರುತ್ತಾನೆ. ಸ್ವಾಭಿಮಾನಿ ರಾಮ ಮನೆಪಾಠ, ಸಂಗೀತ ಪಾಠ ಹೇಳಿಕೊಡುತ್ತ ಹೇಗೋ ತನ್ನ ಓದಿಗೆ ದಾರಿ ಕಂಡು ಕೊಂಡಿರುತ್ತಾನೆ. ಅಂತ ಸಮಯದಲ್ಲಿ ಸ್ವಾತಂತ್ರ್ಯ ಚಳುವಳಿ ಅವನನ್ನು ತೀವ್ರವಾಗಿ ಸೆಳೆಯುತ್ತದೆ. ಒಂದೆಡೆ ತಮ್ಮ ಬಡತನದ ಒತ್ತಡ, ತಾಯಿಯ ಅಪಾರ ನಿರೀಕ್ಷೆ.. ಇನ್ನೊಂದು ಕಡೆ ಗಾಂಧಿವಾದದ ಕಡೆ ಒಲವು. ಆದರೂ ದೇಶಪ್ರೇಮವು ತಾಯಿಪ್ರೇಮಕ್ಕಿಂತ ದೊಡ್ಡದೆಂದು ಭಾವಿಸಿ, ಇನ್ನೇನು ಮುಗಿದೇ ಹೋಯಿತು ಎಂಬಂತ ಘಟ್ಟದಲ್ಲಿದ್ದ ಓದನ್ನು ಅಲ್ಲಿಗೆ ನಿಲ್ಲಿಸಿ, ಪೂರ್ತಿಯಾಗಿ ತನ್ನನ್ನು ತಾನೇ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವನು. ಈ ಪಾತ್ರದ ಚಿತ್ರಣ ಕಾರಂತರ ನಿಜ ಜೀವನದ ವ್ಯಕ್ತಿತ್ವ ಹಾಗು ಕೆಲ ಘಟನೆಗಳ ಮೇಲೆ ಆಧರಿಸಿದೆ. ಮದರಾಸಿನಿಂದ ಮರಳಿ ತನ್ನ ಊರಿಗೆ ಬರುವ ರಾಮ ಅನೇಕ ಟೀಕೆ ಟಿಪ್ಪಣಿ ಅವಮಾನಗಳಿಗೆ ಒಳಗಾದರೂ ಎದೆಗುಂದದೆ, ಗ್ರಾಮೀಣ ಅಭಿವೃದ್ದಿ, ಸ್ವಜನ ಹಿತಚಿಂತನೆ, ಖಾದಿ ತಯಾರಿಕೆ ಪ್ರೋತ್ಸಾಹನೆ, ಕುಡಿತ ಚಟಗಳ ನಿವಾರಣೆ, ಭಾಷಣ ಮಾತುಕತೆ ಇತ್ಯಾದಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿ ತನ್ನ ಬಾಳಿನ ಗುರಿ ಕಾಣುತ್ತಾನೆ. ಒಂದು ಹಂತದಲ್ಲಿ ತನ್ನ ಓದು ಮುಂದುವರಿಸಿದರೂ, ಮತ್ತೆ ಮರಳಿ ಮಣ್ಣಿಗೆ ಬಂದು ತಲೆತಲಾಂತರದಿಂದ ಬಂದ ಕೃಷಿ ವ್ಯವಸಾಯಕ್ಕೆ ತನನ್ನು ತಾನೇ ತೊಡಗಿಸಿಕೊಂಡು ತನ್ನ ಜೀವನದ ಯಶಸ್ಸು ಕಾಣುತ್ತಾನೆ. ಇಂತ ರಾಮ ಅಂದಿಗೂ ಇಂದಿಗೂ ಎಂದೆಂದಿಗೂ ಯುವ ಜನಾಂಗಕ್ಕೆ ಮಾದರಿ ವ್ಯಕ್ತಿ.

ಈ ಎಲ್ಲ ಪಾತ್ರಗಳ ಜೊತೆಗೆ ಇನ್ನೊಂದು ಅತ್ಯಂತ ಮನ ಸೆಳೆಯುವ ಹಾಗು ಬಹು ಮುಖ್ಯ ಪಾತ್ರವೆಂದರೆ ಕೋಟ ಸುತ್ತಮುತ್ತಲಿನ ಹಳ್ಳಿಗಾಡಿನ ಸುಂದರ ಪರಿಸರದ್ದು. ಕಡಲು, ದಂಡೆ, ಅಳುವೆ, ನದಿ ತೀರ, ಕೆರೆ, ತೋಟ, ಗದ್ದೆ, ಮನೆ, ಕೊಟ್ಟಿಗೆ, ಅಗೇಡಿ, ಅರಾಲು, ಚಪ್ಪರ ಹೀಗೆ ಹಲವಾರು ವಿಭಿನ್ನ ಚಿತ್ರಣಗಳು ಕತೆಯ ಜೊತೆಗೆ ಹಾಸುಹೊಕ್ಕಾಗಿವೆ… ದಕ್ಷಿಣ ಕನ್ನಡದ ಪಾರಂಪರಿಕ ವ್ಯವಸಾಯ ಪದ್ಧತಿ, ಜೀವನ ಶೈಲಿ ಹಾಗು ಜೀವನದ ಬಹು ಮುಖ್ಯ ಭಾಗವಾದ ಕಡಲಿನ ಬಗ್ಗೆ ಹಿಡಿದ ಕನ್ನಡಿಯಂತಿದೆ. ಸ್ವಲ್ಪ ಧೀರ್ಘವೇನೋ ಎನ್ನಿಸಿದರು, 'ಮರಳಿ ಮಣ್ಣಿಗೆ' ಯುವಕರೆಲ್ಲ ಓದಬೇಕಾದಂತ ಒಂದು ಉತ್ತಮ ಪುಸ್ತಕ. 
ಮೂಲ:- http://goo.gl/hF4UC


Thursday, January 10, 2013

ನಾಯಿ ನೆರಳು - ಎಸ್ ಎಲ್ ಭೈರಪ್ಪ

Naayi Neralu S L Bhyrappa




'ನಾಯಿ-ನೆರಳು' ಕಾದಂಬರಿ ಭಾರತಿಯ ಜನರ ಜೀವನ, ಭಕ್ತಿ, ಶ್ರದ್ದೆ ಮತ್ತು ಅವರಲ್ಲಿ ಮರೆಯಾಗುತ್ತಿರುವ ಭಾರತಿಯ ಸಂಸ್ಕೃತಿ ಬಗ್ಗೆ ಪುನರ್ಜನ್ಮ, ಕರ್ಮ, ಮತ್ತು ಸತ್ಯವನ್ನು ಆದಾರವಾಗಿಟ್ಟುಕೊಂಡು ಒಂದು ಸುಂದರ ಕಥೆಯನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ಬರುವ ಅಚುತ್ಯನ ಪಾತ್ರ ಅಧುನಿಕ ಜೀವನ ಮುಖವಾದರೆ ಮಿಕ್ಕೆಲ್ಲ ಪಾತ್ರಗಳು ನಮ್ಮ ಪೂರ್ವಜರರನ್ನು ಪ್ರತಿನಿದಿಸುತ್ತದೆ.


ವಿಶ್ವೇಶ್ವರನು ಕ್ಷೆತ್ರಪಾಲನಾಗಿ ಜೋಹಿಸರ ಮನೀಯಲ್ಲಿ ಹುಟ್ಟುತ್ತಾನೆ, ಎರಡನೇ ವಯಸ್ಸಿನಿಂದ ಅವನು "ನನಗೆ ಮದುವೆಯಾಗಿದೆ. ಹೆಂಡ್ತಿ ಹೆಸ್ರು ವೆಂಕಮ್ಮ, , ಒಂದು ಗಂಡು ಮಗೂನೂ ಇದೆ" ಎಂದು ತನ್ನ ಹದಿನೆಂಟನೆ ವಯಸ್ಸಗುವರೆಗೂ ಹೇಳುತ್ತಿರುತ್ತಾನೆ. ಇವನಿಗೆ ಪ್ರೇತ, ಬೂತ ಹಿಡಿದೇ ಎಂದು, ಅದನ್ನು ಬಿಡಿಸಲು ನಾನ ರೀತಿಯ ಪ್ರಯತ್ವನ್ನು ಮಾಡುತ್ತಾರೆ. ಆದರೆ ಅಚ್ಚಣ್ಣಯ್ಯ ಬಂದು ಇವನು ನನ್ನ ಮಗನ ಪುನರ್ಜನ್ಮ ಎಂದಾಗ ಅಲ್ಲರಿಗೂ ಆಶ್ಚರ್ಯವಾಗುತ್ತದೆ. ವಿಶ್ವೇಶ್ವರ ತನಗೂ ಜೋಹಿಸರಿಗೂ ಯಾವುದೇ ಸಂಬಂದ ಇಲ್ಲ ಎಂದಮೇಲೆ ಅವನು ಅಚ್ಚಣ್ಣಯ್ಯನ ಜೋತೆ ಅವರ ಊರಿಗೆ ಹೊರಡುತ್ತಾನೆ. ವೆಂಕಮ್ಮನಿಗೆ ಗಂಡ ಸತ್ತು ಹುಟ್ಟಿ ಬಂದಿದ್ದಕೆ ಸಂತ್ಹೊಶವಾದರು, ಹದಿನೆಂಟು ವರ್ಷದ ಹುಡುಗನ ಜೊತೆ ಸಂಸಾರ ಹೇಗೆ ಮಾಡುವುದು ಎಂದು ಯೋಚನೆ. ಇದನ್ನು ಜೋಗಿನಾಥ ಬೆಟ್ಟದ ಜೋಗಯ್ಯನು ಆತ್ಮಕ್ಕೆ ವಯಸ್ಸಿಲ್ಲ, ದೇಹಕ್ಕೆ ಮಾತ್ರ ಎಂದು ಅವರ ಸಂಶಯವನ್ನು ನಿವಾರಿಸುತ್ತಾನೆ. ಆದರೆ ಅಚುತ್ಯನಿಗೆ ಹದಿನೆಂಟು ವರ್ಷದ ಹುಡುಗ ತನ್ನ ತಂದೆ ಎಂದು ಒಪ್ಪಿಕೊಳ್ಳಲು ನಾಚಿಕೆಯಾಗುತ್ತದೆ. ಬೆಂಗಳೂರಿನಲ್ಲಿ ಓದಿದ ಅಚುತ್ಯನು ವಿಶ್ವೇಶ್ವರನು ಮೋಸಗಾರ, ಅವನ ಮುಗ್ದ ತಾಯಿ ಮತ್ತು ಅಜ್ಜ-ಅಜ್ಜಿಯ ಅಸ್ತಿಯನ್ನು ಕಬಳಿಸಲು ಬಂದಿದ್ದಾನೆ ಎಂದು ತನ್ನ ಪ್ರೊಫೆಸರ್ ರಾಸ್ ರೊಂದಿಗೆ ವಿಮರ್ಶಿಸುತ್ತಾನೆ. ವಿಶ್ವೇಶ್ವರನು ಕರಿಯನ ಮಗಳನ್ನು ಬಸುರಿ ಮಾಡಿ ಅವಳೊಂದಿಗೆ ಹೊಡೀಹೊದಾಗ, ಅಚುತ್ಯನು ಯಾರಿಗೂ ತಿಳಿಯದ ಹಾಗೆ ವಿಶ್ವೇಶ್ವರನುನ್ನು ಜೈಲಿಗೆ ಹಾಕಿಸುತ್ತಾನೆ. ಮುಂದೆ ಕದಮ್ಬೈಯಲ್ಲಿ ನಡೆಯುವ ಘಟನೆಗಳು, ವಿಶ್ವೇಶ್ವರನು ಹುಟ್ಟಿನ ಗುಟ್ಟು, ಅಚುತ್ಯನಿಗೆ ಮಕ್ಕಳಾಗಾದಾಗ ಅಮ್ಮನ್ನು ಹುಡುಕುವುದು, ......... ಎಲ್ಲಾ ಪಾತ್ರಗಳು ತಮ್ಮ ಪ್ರೂವದಲ್ಲಿ ಮಾಡಿದ ಕರ್ಮಗಳ ಅನುಗುಣವಾಗಿ ಜೀವನವನ್ನು ಅನುಭವಿಸುತ್ತಾರೆ.


ಭೈರಪ್ಪನವರು ಇಲ್ಲಿ ನಮ್ಮ ಕರ್ಮಗಳನ್ನು ನಾಯಿಗೆ ಹೋಲಿಸಿ, ನಾವು ಮಾಡುವ ಕೆಲಸಳ ಕರ್ಮವು ನಮ್ಮನ್ನು ನೆರಳಿನಂತೆ ಹಿಂಬಾಲಿಸುತ್ತದೆ ಎಂದು ಚಿತ್ರಿಸಿದ್ದಾರೆ. ಕಾಲೇಜಿನಲ್ಲಿ ಓದಿದ ಯುವ ಜನತೆ ತಮ್ಮ ತಂದೆ ತಾಯಿ ಮಾಡುವ ಕೆಲಸಗಳು ಅವ್ಯಜ್ಞಾನಿಕ ಮತ್ತು ಕುರುಡು ಸಿದ್ದಾಂತಗಳು ಎಂದುಕೊಳ್ಳುತ್ತಾರೆ. ಆದರೆ ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಈಗಿರುವ ಯುವ ಜನತೆ ಮಕ್ಕಳು ಹೊಳೆಯುವದೆಲ್ಲ ಚಿನ್ನ ಎನ್ನುವಂತೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದಾರೆ. ಭಾರತಿಯ ಸಂಸ್ಕೃತಿ ವ್ಯಜ್ಞಾನಿಕ ದೃಷ್ಟಿ ಇಂದ ಮತ್ತು ಜೀವನ ನಡೆಸುವ ದೃಷ್ಟಿಯಿಂದ  ಅದರ್ಶಮಯವದುದು.


'ನಾಯಿ-ನೆರಳು' ಕಾದಂಬರಿಯನ್ನು ಓದಿ ಮುಗಿಸಿದ ಮೇಲೆ ನನನ್ನು ಯೋಚನೆಗೆ ಮುಳಿಗಿಸಿದ್ದು ಒಂದು ಸಣ್ಣ ಪಾತ್ರ, ಪ್ರೊಫೆಸರ್ ರಾಸ್.  ಅವರು ಹೇಳುವ ಪ್ರಕಾರ ಪುನರ್ಜನ್ಮ ವ್ಯಜ್ಞಾನಿಕ ದೃಷ್ಟಿಂದ ಅಸಾದ್ಯ ಮತ್ತು ಅದನ್ನು ನಂಬಬಾರದು ಆದರೆ ಮರಿಯು ಮದುವೆಯಾಗದೆ ಏಸುವಿಗೆ ಜನ್ಮ ನೀಡುವುದು ಮಾತ್ರ ದೇವರ ಮೇಲಿನ ನಂಬಿಕೆ ಮತ್ತು ಅಂದನ್ನು ಮಾತ್ರ ನಂಬಬಹುದು ಎಂದು. ಇಲ್ಲಿ ನಾನು ನೋಡಿದ ದ್ವಂದ ವಾದ , ಯೇಸು ಮಾತ್ರ ನಿಜವಾದ ದೇವರು ಮತ್ತು ಭಾರತೀಯರು ನಂಬುವ ದೇವರು ಬರಿ ಕಲ್ಲುಗಳು ನಂಬಾರದು. ಈ ವಿಚಾರವು ಪಾತ್ರಕ್ಕೆ ಮಾತ್ರ ಸೀಮಿತವಾದ್ದು.


Wednesday, December 26, 2012

ಭೈರಪ್ಪನವರ ಸರಸ್ವತೀ ಸಮ್ಮಾನ ಸ್ವೀಕಾರ ಭಾಷಣ - ನವದೆಹಲಿ, 16-11-2011





ಮಾನ್ಯ ಡಾ. ಕರಣಸಿಂಹರೆ, ಕೆ.ಕೆ. ಬಿಲರ್ಾ ಪ್ರತಿಷ್ಠಾನದ ಅಧ್ಯಕ್ಷರೆ, ಅದರ ನಿದರ್ೇಶಕರಾದ ಭಟ್ಟಾಚಾರ್ಯರೆ,
ನನ್ನ ಕಾದಂಬರಿ `ಮಂದ್ರ'ವನ್ನು 2010ರ ಸರಸ್ವತಿ ಸಮ್ಮಾನಕ್ಕೆ ಆರಿಸಿದ ಸಮಿತಿಗೆ ಧನ್ಯವಾದಗಳು. ಹಾಗೆಯೇ ಮೊದಲಿನಿಂದಲೂ ಭಾರತದ ಹಲವಾರು ಭಾಷೆಗಳಲ್ಲಿ ನನ್ನ ಸಾಹಿತ್ಯ ಜೀವನದ ಬೆನ್ನೆಲುಬಾಗಿರುವ ಅಸಂಖ್ಯ ಓದುಗರಿಗೆ ನಾನು ಋಣಿಯಾಗಿದ್ದೇನೆ.

ನನ್ನ ಜೀವನವನ್ನು ನೆನಸಿಕೊಳ್ಳದೆ ನನ್ನ ಸಾಹಿತ್ಯದ ಉಗಮ ಮತ್ತು ಬೆಳವಣಿಗೆಯನ್ನು ಕುರಿತು ಮಾತನಾಡುವುದು ಸಾಧ್ಯವಿಲ್ಲ. ಕನರ್ಾಟಕದ ಒಂದು ಹಿಂದುಳಿದ ಹಳ್ಳಿಯ ತೀರ ಬಡತನದ ಕುಟುಂಬದಲ್ಲಿ ನಾನು ಹುಟ್ಟಿದೆ. ದುಡಿಮೆ ಮತ್ತು ಪಾಲನೆಗಳೆಲ್ಲ ನನ್ನ ತಾಯಿಯದಾಗಿತ್ತು : ತಂದೆಯು ಅತ್ಯಂತ ಬೇಜವಾಬ್ದಾರಿಯ ಮನುಷ್ಯ. ನಾನು ಹತ್ತು ವರ್ಷದವನಾಗಿದ್ದಾಗ ನನಗೆ, ಹದಿನೈದು ದಿನದ ಹಿಂದೆ ಮದುವೆಯಾಗಿದ್ದ ಅಕ್ಕನಿಗೆ ಮತ್ತು ನನಗಿಂತ ಎರಡು ವರ್ಷಕ್ಕೆ ಹಿರಿಯನಾದ ಅಣ್ಣನಿಗೆ ಪ್ಲೇಗು ಬಡಿದು ಅವರಿಬ್ಬರೂ ಒಂದು ಗಂಟೆಯ ಅಂತರದಲ್ಲಿ ಸತ್ತುಹೋದರು. ಹೇಗೋ ನಾನು ಉಳಿದುಕೊಂಡೆ. ಎರಡು ವರ್ಷಗಳ ನಂತರ ತಾಯಿಯೂ ಪ್ಲೇಗಿನಿಂದ ಸತ್ತಳು. ನಾನು ನಾಲ್ಕು ಮೈಲಿ ದೂರದ ಒಂದು ಊರಿನಲ್ಲಿ ವಾರಾನ್ನ ಮಾಡಿಕೊಂಡು ಓದನ್ನು ಮುಂದುವರೆಸಿದೆ. ನನಗೆ ಹದಿನಾಲ್ಕು ವರ್ಷವಾಗಿದ್ದಾಗ ನಾಲ್ಕು ವರ್ಷ ವಯಸ್ಸಿನ ತಂಗಿ ಕಾಲರಾದಿಂದ ಸತ್ತಳು. ನನಗೆ ಹದಿನೈದು ವರ್ಷವಾಗಿದ್ದಾಗ ಆರು ವರ್ಷ ವಯಸ್ಸಿನ ನನ್ನ ತಮ್ಮನು ಗೊತ್ತಿಲ್ಲದ ಒಂದು ಕಾಯಿಲೆಯಿಂದ ಸತ್ತು ನಾನೇ ಅವನ ಹೆಣವನ್ನು ಹೆಗಲ ಮೇಲೆ ಹೊತ್ತು ಸ್ಮಶಾನಕ್ಕೆ ಒಯ್ದು ಊರಿನ ತೋಟಿಯ ಸಹಾಯದಿಂದ ಸೌದೆಯನ್ನು ಒಟ್ಟಿ ಅವನನ್ನು ಸುಟ್ಟು ಹತ್ತಿರದ ಒಂದು ತೋಟದ ಬಾವಿಯಲ್ಲಿ ಸ್ನಾನ ಮಾಡಿದೆ.

ಈ ಅನುಭವಗಳೆಲ್ಲ ನನ್ನಲ್ಲಿ ಸಾವು ಎಂದರೇನು? ಅದರ ಅರ್ಥವೇನು? ಅದು ಯಾಕೆ ಬರುತ್ತದೆ? ಎಂಬ ಪ್ರಶ್ನೆಗಳಾಗಿ ಕಾಡತೊಡಗಿದವು. ನಾನು ಮೈಸೂರಿನಲ್ಲಿ ಇಂಟರ್ಮೀಡಿಯೆಟ್ ಓದುವಾಗ ತತ್ತ ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಯಾಮುನಾಚಾರ್ಯ ರನ್ನು ಕಂಡು ನನ್ನ ಈ ಪ್ರಶ್ನೆಗಳನ್ನು ತೋಡಿಕೊಂಡೆ. ಅವರು ಸಠೀಕಾ ಕಠೋಪನಿಷತ್ತಿನ ಕನ್ನಡ ಅನುವಾದದ ಒಂದು ಪುಸ್ತಕವನ್ನು ಕೊಟ್ಟು ಓದಲು ಹೇಳಿದರು. ಏಕಾಗ್ರತೆಯಿಂದ ಓದಿದರೂ ಅದು ನನ್ನ ಸಮಸ್ಯೆಗೆ ಉತ್ತರ ಕಾಣಿಸಲಿಲ್ಲ; ಯಮನು ನಚಿಕೇತನಿಗೆ ಬೋಧಿಸಿದ ಯಾವ ತತ್ತ ್ವವೂ ಅರ್ಥವಾಗಲಿಲ್ಲ. ಪ್ರಾಧ್ಯಾಪಕರನ್ನು ಮತ್ತೆ ಕಂಡು ಇದನ್ನು ಹೇಳಿದಾಗ ಅವರು, ``ಇವೆಲ್ಲ ತತ್ತ ್ವಶಾಸ್ತ್ರವನ್ನು ಕ್ರಮವಾಗಿ ಅಧ್ಯಯನ ಮಾಡಿದರೆ ಮಾತ್ರ ಅರ್ಥವಾಗುವ ವಿಷಯಗಳು. ನೀನು ಬಿ.ಎ.ಗೆ ತತ್ತ ್ವಶಾಸ್ತ್ರವನ್ನು ತೆಗೆದುಕೊ'' ಎಂದರು. ಹೀಗೆ ನಾನು ತತ್ತ ್ವಶಾಸ್ತ್ರದಲ್ಲೇ ಬಿ.ಎ. ಮತ್ತು ಎಂ.ಎ.ಗಳನ್ನು ಮಾಡಿದೆ. ಹೀಗೆ ಒಟ್ಟು ಹನ್ನೆರಡು ವರ್ಷ. ವಿದ್ಯಾಥರ್ಿಯಾಗಿ ನಾಲ್ಕು ವರ್ಷ, ಅಧ್ಯಾಪಕ ಮತ್ತು ಸಂಶೋಧಕನಾಗಿ ಎಂಟು ವರ್ಷ, ತತ್ತ ್ವಶಾಸ್ತ್ರದಲ್ಲೇ ಮುಳುಗಿದ್ದೆ. ಅಷ್ಟರಲ್ಲಿ ನನಗೆ ಪ್ರಿಯವಾಗಿದ್ದ, ತತ್ತ್ವಶಾಸ್ತ್ರದ ಒಂದು ಶಾಖೆಯಾದ ಸೌಂದರ್ಯ ಮೀಮಾಂಸೆಯಲ್ಲಿ ಆಸಕ್ತಿ ಬೆಳೆದು ಸತ್ಯ ಮತ್ತು ಸೌಂದರ್ಯವನ್ನು ಕುರಿತು ಸಂಶೋಧನೆ ಮಾಡಿ ಅನಂತರ ಸೌಂದರ್ಯ ಮತ್ತು ನೀತಿಯ ಅಧ್ಯಯನದಲ್ಲಿ ತೊಡಗಿದೆ. ಅಷ್ಟರಲ್ಲಿ ಎರಡು ವಿಷಯಗಳು ನನಗೆ ಅರಿವಾದವು:
(1) ಭಾರತ ಮತ್ತು ಪ್ರಾಚೀನ ಗ್ರೀಸ್ಗಳೆರಡರಲ್ಲೂ ವಿಶ್ವ ಅಥವಾ ಬ್ರಹ್ಮಾಂಡ ಮೀಮಾಂಸೆ, ಜ್ಞಾನಮೀಮಾಂಸೆ, ಮನಶ್ಶಾಸ್ತ್ರ ಮತ್ತು ನೀತಿ ಶಾಸ್ತ್ರಗಳನ್ನು ಒಳಗೊಂಡಿದ್ದ ತತ್ತ ್ವಶಾಸ್ತ್ರವು ಆಧುನಿಕ ಕಾಲದಲ್ಲಿ ಅವುಗಳೆಲ್ಲವನ್ನೂ ಕಳಚಿಕೊಂಡಿವೆ. ಖಭೌತ ವಿಜ್ಞಾನ, ಆಧುನಿಕ ಮನೋವಿಜ್ಞಾನ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮಾನವ ಜನಾಂಗ ಶಾಸ್ತ್ರ, ನ್ಯಾಯಶಾಸ್ತ್ರ, ವೈದ್ಯ ವಿಜ್ಞಾನ, ತೌಲನಿಕ ಮತ ಧರ್ಮ ಶಾಸ್ತ್ರ ಮೊದಲಾದ ಜ್ಞಾನದ ಶಾಖೋಪಶಾಖೆಗಳ ಬೆಳವಣಿಗೆ ಯಿಂದ ತತ್ತ ್ವಶಾಸ್ತ್ರವು ತನ್ನ ವ್ಯಾಪ್ತಿಯನ್ನು ಕಳೆದುಕೊಂಡು ಮೌಲ್ಯ ಮೀಮಾಂಸೆಗೆ ಅಡಕಗೊಂಡಿದೆ. 

(2) ವೇದ ಮತ್ತು ಉಪನಿಷತ್ತುಗಳು ಭಾರತದ ತತ್ತ ್ವಶಾಸ್ತ್ರಕ್ಕೆ ಆಧಾರವಾಗಿದ್ದರೂ ನಮ್ಮ ರಾಷ್ಟ್ರದ ಜೀವನಾದರ್ಶಗಳನ್ನು ಜಿಜ್ಞಾಸೆಗೆ ಒಳಪಡಿಸಿ ಅವುಗಳಿಗೆ ಮೂರ್ತಸ್ವರೂಪ ಕೊಟ್ಟದ್ದು ರಾಮಾಯಣ ಮಹಾಭಾರತಗಳು. ವೇದಪಾರಮ್ಯವನ್ನು ತಿರಸ್ಕರಿಸುವ ಜೈನ ಬೌದ್ಧ ಧರ್ಮಗಳು ಕೂಡ ಉಪನಿಷತ್ ಯುಗಧರ್ಮದ ಜಿಜ್ಞಾಸೆಯಿಂದ ಹುಟ್ಟಿದವೇ. ಅವುಗಳು ಕೂಡ ತಮ್ಮವೇ ದೃಷ್ಟಿಯಲ್ಲಿ ರಾಮಾಯಣ ಮಹಾಭಾರತಗಳಿಂದ ಮೂರ್ತಗೊಂಡ ಮೌಲ್ಯಗಳನ್ನು ವಿನ್ಯಾಸಗೊಳಿಸಿಕೊಂಡವು. ಇವುಗಳನ್ನು ಅರ್ಥ ಮಾಡಿಕೊಳ್ಳುವ ವೇಳೆಗೆ ನಾನು ನನ್ನ ಪ್ರಥಮ ಮಹತ್ತ ್ವದ ಕೃತಿ `ವಂಶವೃಕ್ಷ'ವನ್ನು ಬರೆದಿದ್ದೆ. ಈ ಸಾಹಿತ್ಯ ಸೃಷ್ಟಿಯ ಅನುಭವವು,  ನಮ್ಮ ರಾಷ್ಟ್ರದ ಜೀವನಾದರ್ಶಗಳಿಗೆ ಮೂರ್ತ ಸ್ವರೂಪ ಕೊಟ್ಟದ್ದು ಸಾಹಿತ್ಯಕೃತಿಗಳಾದ ರಾಮಾಯಣ ಮಹಾಭಾರತಗಳು ಎಂಬ ಅರಿವಿನಲ್ಲಿ ಬೆರೆತು ಜೀವನದ ಅರ್ಥವನ್ನು ಹುಡುಕಲು ನನಗೆ ಸಾಹಿತ್ಯವೇ ತಕ್ಕ ಮಾಧ್ಯಮ. ತರಗತಿಯಲ್ಲಿ ನಾನು ಪಾಠ ಮಾಡುತ್ತಿದ್ದ ಶುಷ್ಕ ಪಾಂಡಿತ್ಯದ ತತ್ತ ್ವ ಶಾಸ್ತ್ರವಲ್ಲ ಎಂಬ ದಾರಿಯನ್ನು ತೋರಿಸಿತು.

ನಾನು ಬರೆಯಲು ಆರಂಭಿಸಿದಾಗಿನಿಂದ ಇದುವರೆಗೂ ಸಾಹಿತ್ಯ ನಿಮರ್ಿತಿಯು ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಪ್ರಯತ್ನದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು, ಹಾಗೆ ತೊಡಗಿಸಿಕೊಳ್ಳದ ಬರೆಹವು ಕೇವಲ ಬೂಸಾ ಎಂಬ ಒತ್ತಡವನ್ನು ಹಲವು ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳು ಹಾಕುತ್ತಿವೆ. ತತ್ತ ್ವಶಾಸ್ತ್ರದ, ಅದರಲ್ಲೂ ಮೌಲ್ಯ ಮೀಮಾಂಸೆಯ ಹಿನ್ನೆಲೆಯುಳ್ಳ ನನಗೆ ಬದಲಾವಣೆ, ಆಧುನಿಕತೆ ಮತ್ತು ಹಿಂದುಳಿದವರನ್ನು ಮೇಲೆತ್ತುವ ಮೌಲ್ಯಗಳಲ್ಲಿ ನಂಬಿಕೆ ಇದೆ, ಬದ್ಧತೆಯೂ ಇದೆ. ಆದರೆ ಸಾಹಿತ್ಯವೆಂಬ ಮೌಲ್ಯವನ್ನು ಈ ಬೇರೆ ಮೌಲ್ಯಗಳಿಗೆ ಅಡಿಯಾಳು ಮಾಡಿ ದುಡಿಸಹೊರಟರೆ ಸಾಹಿತ್ಯವು ಸಾಹಿತ್ಯವಾಗಿ ಉಳಿಯುವುದಿಲ್ಲ, ಅಲ್ಲದೆ ಅದು ಪ್ರಚಾರಸಾಹಿತ್ಯವಾಗಿ ತೀರ ಅಲ್ಪಾಯುಷಿಯಾಗುತ್ತದೆ, ಎಂಬುದು ನನ್ನ ವಿಮಶರ್ಿತ ಶ್ರದ್ಧೆಯಾಗಿದೆ. ಸಾಹಿತ್ಯವೆಂಬುದೇ ಮೌಲ್ಯಾನ್ವೇಷಣಕ್ಕೆ ಅತ್ಯಂತ ವಿಶಾಲವಾದ ಸಾಧ್ಯತೆಗಳ ಕ್ಷೇತ್ರ. ಅದು ರಾಜಕೀಯ ಪಕ್ಷಗಳು ಮತ್ತು ಸಕ್ರಿಯವಾದಿಗಳು ಒತ್ತಾಯಿಸುವ ಮೌಲ್ಯಗಳನ್ನು ಅವುಗಳಿಗಿಂತ ಎತ್ತರವಾದ ಹಂತದಲ್ಲಿ ನಿಂತು ಜೀವನದ ಇತರ ಮೌಲ್ಯಗಳೊಡನೆ ಅವುಗಳ ಸಂಬಂಧವನ್ನು ಪರಿಶೀಲಿಸಿ ಬೆಳಕು ಚೆಲ್ಲಬೇಕು. ಸಾಹಿತ್ಯ ನಿಮರ್ಿತಿಯೊಂದರಿಂದಲೇ ಜೀವನದ ಅಶನವಸನಗಳ ನ್ಯಾಯ ಅನ್ಯಾಯಗಳ ವಾಸ್ತವ ಸಮಸ್ಯೆಯನ್ನು ಬಗೆಹರಿಸುವುದು ಸಾಧ್ಯವಿಲ್ಲ. ಸಾಹಿತಿಯು ಸಕ್ರಿಯನಾಗಬಾರದೆಂಬ ನಿಷೇಧವಿಲ್ಲ: ಆದರೆ ಸಕ್ರಿಯನಾಗದವನು, ಸಕ್ರಿಯತೆಗೆ ಸಾಹಿತ್ಯ ನಿಮರ್ಿತಿಯನ್ನು ಅಡಿಯಾಳಾಗಿಸದವನು ನಿಮರ್ಿಸುವುದು ಸಾಹಿತ್ಯವೇ ಅಲ್ಲವೆಂಬ ಅಂಥ ಪ್ರಣಾಲಿಯಲ್ಲಿ ನನಗೆ ನಂಬಿಕೆ ಇಲ್ಲ. ತಮ್ಮ ಪ್ರಣಾಳಿಗೆ ಒಳಪಡದವರನ್ನು ಸಕ್ರಿಯವಾದಿಗಳು ಬೂಜ್ವರ್ಾ,
ಬಲಪಂಥೀಯ ಎಂಬ ಹೆಸರುಗಳಿಂದ ಹಳಿಯುತ್ತಾರೆ; ಸಾಮಾಜಿಕ ಸಮಸ್ಯೆಗಳು ಒಂದೆರಡು ದಶಕಗಳಲ್ಲಿ ಬದಲಾಗಿ, ಅವುಗಳಿಗೆ ಪರಿಹಾರವೆಂಬಂತೆ ಬರೆಯುವ ಸಾಹಿತ್ಯವು ಅನಂತರ ತನ್ನ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತದೆಂಬುದನ್ನು ಅವರು ಅರ್ಥ ಮಾಡಿಕೊಳ್ಳುವುದಿಲ್ಲ. ಉದ್ದಕ್ಕೂ ನಾನು ಗಟ್ಟಿಯಾಗಿ ನಿಂತು ನನ್ನ ಬೌದ್ಧಿಕ ಮತ್ತು ಸೃಷ್ಟಿಶೀಲತೆಯ ಸ್ವಾತಂತ್ರ್ಯವನ್ನು ಉಳಿಸಿಕೊಂಡಿದ್ದೇನೆ. ಸರಸ್ವತೀ ಸಮ್ಮಾನವು ನನ್ನ ಇತ್ತೀಚಿನ ಕೃತಿಗಳಲ್ಲಿ ಮಂದ್ರವನ್ನು ಆರಿಸಿರುವುದು ನನಗೆ ಸಂತೋಷವನ್ನುಂಟು ಮಾಡಿದೆ. ಒಬ್ಬ ಸಂಗೀತಗಾರ, ಅವನ ಸುತ್ತಮುತ್ತಣ ಘಟನೆ ಹಾಗು ಪಾತ್ರಗಳ ಮೂಲಕ ಕಲೆಗೂ ಜೀವನದ ಇತರ ಮೌಲ್ಯಗಳಿಗೂ ಇರುವ ಸಂಬಂಧವನ್ನು ನಾನು ಈ ಕಾದಂಬರಿಯಲ್ಲಿ ಅನ್ವೇಷಿಸಿದ್ದೇನೆ. ಇಡೀ ಕಾದಂಬರಿ ಯಲ್ಲಿ ಸಂಗೀತವೇ ಒಂದು ಮುಖ್ಯ ಪಾತ್ರವಾಗಿದೆ. ಸಂಗೀತವೇ ಅತ್ಯಂತ ಶುದ್ಧವಾದದ್ದು. ಇತರ ಕಲೆಗಳಾದ ಚಿತ್ರ, ಶಿಲ್ಪ, ಸಾಹಿತ್ಯ ಮೊದಲಾದವುಗಳ ತುಲನೆಯಲ್ಲಿ ಭಾವ ಮತ್ತು ರಸಗಳನ್ನು ಪರಿಶುದ್ಧ ಅಂದರೆ ಹಸಿಯಾದ, ಆದ್ದರಿಂದ ಅತ್ಯಂತ ಶಕ್ತವಾದ ಸ್ವರೂಪದಲ್ಲಿ ವ್ಯಕ್ತಪಡಿಸುವಂಥದು. ಅದು ಎಲ್ಲ ಮೂಲ ಮತ್ತು ಮಿಶ್ರ ರಸಗಳನ್ನು ಸೃಷ್ಟಿಸಿಕೊಂಡು ಮಂದ್ರದ ಆಳದಿಂದ ತಾರತಾರದ ಎತ್ತರಕ್ಕೆ ಸಂಚರಿಸುತ್ತದೆ. ಮಂದ್ರವು ಸಮಗ್ರ ಅಂತಮರ್ುಖತೆಯ ಸ್ಥಿತಿ ; ಎಂದರೆ ಧ್ಯಾನ.

ನಮಸ್ಕಾರ,
ಎಸ್.ಎಲ್.ಭೈರಪ್ಪ



Wednesday, November 28, 2012

ಹೇಳಿ ಹೋಗು ಕಾರಣ - ರವಿ ಬೆಳೆಗೆರೆ

Heli Hogu Karana - Ravi Belegere




ಕೆಲವೊಮ್ಮೆ ಈ ರೀತಿ ಹಾಗುತ್ತದೆ, ತುಂಬಾ ಆಸೆ ಇಟ್ಟುಕೊಳ್ಳದೆ ಹೋದ ಚಿತ್ರ ಚೆನ್ನಾಗಿ ಮತ್ತೆ ತುಂಬಾ ಆಸೆ ಇಟ್ಟುಕೊಂಡ ಚಿತ್ರ ಸಪ್ಪೆಯಾಗುತ್ತದೆ. ರವಿ ಬೆಳೆಗೆರೆಯವರ "ಹೇಳಿ ಹೋಗು ಕಾರಣ" ಮೊದಲೆನಯ ಸಾಲಿಗೆ ಸೇರುತ್ತದೆ. ಬೆಳೆಗೆರೆಯವರ ಕಾದಂಬರಿಗಳಲ್ಲಿ ಓದಿದ ಮೊದಲೆಯದು ಇದು. ನಾನು ತುಂಬಾನೇ ಅಂದ್ರೆ ತುಂಬಾನೆ ಆಂಗ್ಲ ಚಿತ್ರಗಳನ್ನು ನೋಡುತ್ತೇನೆ, ಈ ಕಾದಂಬರಿಯನ್ನು ಅಲ್ಲಿನ ಚಿತ್ರಗಳಿಗೆ ಹೋಲಿಸಿ ಹೇಳುವುದಾದರೆ, "Guilty Pleasure" ಚಿತ್ರದ ರೀತಿ. ಭೈರಪ್ಪನವರ ಕಾದಂಬರಿಗಳು ಜೇಮ್ಸ್ ಕ್ಯಾಮೆರೋನ್ ಮಾಡೋ ಚಿತ್ರಗಳ ಹಾಗೆ, ಮತ್ತು ಬೆಳೆಗೆರೆರವರ ಕಾದಂಬರಿಗಳು ಜಸ್ಟಿನ್ ಲಿನ್ ಚಿತ್ರಗಳ ರೀತಿ.


ಅಧುನಿಕ ಜಗತ್ತಿನ ಪ್ರೀತಿ, ಪ್ರೇಮ, ಜಗಳ, ಕಾಮ, ಕ್ರೋಧ ಎಲ್ಲಾವನ್ನು ನಮ್ಮಂಥವರ ಮನ ತಟ್ಟುವ ರೀತಿ ತುಂಬ ಚೆನ್ನಾಗಿ ಬರೆದಿದ್ದಾರೆ. ಹಿಮವಂತ ಬಡವನಾದರೂ ವ್ಯಕ್ತಿತ್ವ ಒಳ್ಳೆಯದು ಪ್ರಾರ್ಥನಾನನ್ನು ಡಾಕ್ಟರ ಓದಿಸಲು ದಿನ ರಾತ್ರಿ ದುಡಿಯುತ್ತ, ಹಗಲು ರಾತ್ರಿ ಅವಳ ನೆನಪಲ್ಲಿ ಕಳೆಯುತ್ತಾ ತನ್ನ ಮೋದಿನ ಜೀವನ ಬಗ್ಗೆ ಯೋಚಿಸುತ್ತಾನೆ. ಪ್ರಾರ್ಥನಾ ಹಿಮವಂತ ಕಷ್ಟಪಟ್ಟು ದುಡಿದು ಕೊಟ್ಟ ದುಡ್ಡಿನಿಂದ ದಾವಣಗೆರೆಯಲ್ಲಿ ಡಾಕ್ಟರ ಸೇರುತ್ತಾಳೆ. ಪ್ರಾರ್ಥನಾ ಹಾಸ್ಟೆಲ್ ನಲ್ಲಿ ಊರ್ಮಿಳ ಮತ್ತು ದೇಬಶಿಶ್ ಪರಿಚಯವಾಗುತ್ತದೆ. ಊರ್ಮಿಳ ಆಧುನಿಕ ಜಗತ್ತಿನ ದಿಟ್ಟ ಹುಡುಗಿ, ಸಿಗರೆಟ್ ಸೇದುತ್ತಾಳೆ, ವಾರಕೊಮ್ಮೆ ಕುಡಿಯುತ್ತಾಳೆ, ತಾನು ಯಾವ ಹುಡುಗರಿಗೂ ಕಮ್ಮಿಯಿಲ್ಲ ಅನ್ನೋ ರೀತಿಯಲ್ಲಿ ಜೀವನ ಸಾಗಿಸುತ್ತಾಳೆ. ಪ್ರಾರ್ಥನಾ ದೇಬಶಿಶ್ ಸಗಾತದಿಂದ ಬದಲಾಗುತ್ತಾಳೆ, ಇತ್ತ ಊರ್ಮಿಳ ಹಿಮವಂಥನ ಪರಿಚಯದಿಂದ ಬದಲಾಗುತ್ತಾಳೆ.
ಇಲ್ಲಿ ಪಾತ್ರಗಳ ಮೊಸವಿದೆ, ಕಾಮದ ವಾಸನೆಯಿದೆ, ಮನಸ್ಸಿನ ಗಟ್ಟಿತನವಿದೆ, ಸಾದಿಸಬೇಕೆಂಬ ಛಲವಿದೆ, ಆಹಂಕಾರವಿದೆ, ಬಲೆಗೆ ಬೀಳಿಸುವ ತಂತ್ರವಿದೆ. ಎಲ್ಲ ವರ್ಗದ ಓದುಗರಿಗೆ ಎನುಬೇಕೋ ಅದ್ದೆಲ್ಲಾ ಇದೆ.


ಮಾಟಾ ಮಂತ್ರ ಕೂಡ ಇದೆ. ಇದಿಲ್ಲದಿದ್ದರು ಕಾದಂಬರಿ ಚೆನಾಗಿರುತ್ತಿತ್ತು, ಇದರಿಂದ ಮತ್ತು ಕೆಲವು ವಿಷಯಗಳಿಂದ ಇದು ವಾಸ್ತವಕ್ಕೆ ಸ್ವಲ್ಪ ದೂರ ಅನಿಸುವುದುಂಟು. ಆದರೆ ಎಲ್ಲ ಹುಡುಗರು ತಾನು ಹಿಮವಂತ ಮತ್ತು ಬಿಟ್ಟು ಹೋದ ಹುಡುಗಿ ಪ್ರಾರ್ಥನಾ ಅನುಸುವುದರಲ್ಲಿ ಸಂಶಯವಿಲ್ಲ.


Friday, November 23, 2012

ಬೆಟ್ಟದ ಜೀವ - ಶಿವರಾಮ ಕಾರಂತ

Bettada Jeeva - Shivarama Karanth

 

 


 ತುಂಬಾ ದಿನಗಳ ಹಿಂದೆ ಶಿವರಾಮ ಕಾರಂತರ, "ಬೆಟ್ಟದ ಜೀವ" ಅನ್ನುವ ಚಿಕ್ಕ ಕಾದಂಬರಿಯೊಂದನ್ನ ಓದಲು ಶುರುಮಾಡಿದ್ದೆ. ಅದು ಕಾರಂತಜ್ಜರ ಮೇರುಕೃತಿಗಳಲ್ಲಿ ಒಂದೆಂಬುದನ್ನ ಕೇಳಿದ್ದೆ. ಅದು ಸುಮಾರು ನೂರೈವತ್ತು ಪುಟಗಳ ಚಿಕ್ಕ ಪುಸ್ತಕವಾದರೂ ಅದನ್ನ ಓದಿ ಮುಗಿಸಲು ಇಪ್ಪತ್ತು ದಿನಗಳಿಗೂ ಹೆಚ್ಚು ಸಮಯವಾಯ್ತು. ಅಷ್ಟೊಂದು ಸಮಯ ಹಿಡಿಯಲು ನನ್ನ ಕೆಲಸದ ಒತ್ತಡವಾಗಲಿ, ಪುಸ್ತಕವಾಗಲಿ ಕಾರಣವಾಗಿರಲಿಲ್ಲ, ಬದಲಾಗಿ ಓದುತ್ತಾ ಹೋದಂತೆಲ್ಲ ಎಲ್ಲಿ ಬೇಗನೆ ಮುಗಿದು ಬಿಡುವುದೊ ಅನ್ನುವ ಬೇಸರ ಅಷ್ಟೇ. ಹಾಗಾಗಿಯೇ ಮುಂದುವರೆದಂತೆಲ್ಲ ದಿನಕ್ಕೆ ಎರಡು-ಮೂರು ಪುಟಗಳನ್ನ ಮಾತ್ರ ಓದಿ ಮುಚ್ಚಿಡುತ್ತಿದ್ದೆ. ಒಮ್ಮೆ ಓದಿ ಮುಗಿಸಿದ ನಂತರ ಮತ್ತೆರಡು ಸಲ ಓದಿದೆ. ಕಾರಂತರಲ್ಲಿ ನಮ್ಮನ್ನ ಬರಹಗಳ ಮೂಲಕ ಕಟ್ಟಿಹಾಕುವ ಮಹತ್ತರವಾದ ಶಕ್ತಿಯಿತ್ತು. ಅದನ್ನ ಈ ಪುಸ್ತಕದಲ್ಲಿ ಹೆಚ್ಚಾಗಿಯೇ ತುಂಬಿದ್ದರು.

"ಬೆಟ್ಟದ ಜೀವ", ಬೆಟ್ಟದ ಪರಿಸರದಲ್ಲಿ ತೋಟ, ಗದ್ದೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಗೋಪಾಲಯ್ಯ ಮತ್ತು ಶಂಕರಿ ಎನ್ನುವ ವೃದ್ದ ದಂಪತಿಗಳ ಕಥೆಯಿದು. ಕಥೆಯ ಆಳ, ಎತ್ತರ ತುಂಬಾ ಚಿಕ್ಕದಿದ್ದರು ಅದನ್ನ ಬಿಂಬಿಸಿದ್ದ ರೀತಿ ಕಾರಂತರ ವಿಶೇಷತೆಗೆ ಸಾಕ್ಷಿ. ಪಶ್ಚಿಮ ಘಟ್ಟಗಳ ನಡುವೆ, ಸುಬ್ರಮಣ್ಯ ದ ಸಮೀಪ, ಕುಮಾರ ಪರ್ವತದ ತಪ್ಪಲಲ್ಲಿ ಮನೆಬಿಟ್ಟಿರುವ ಮಗನ ಅಗಲಿಕೆಯನ್ನ ಭರಿಸಿಕೊಂಡು, ಬದುಕಿನೆಡೆಗೆ ಉತ್ಸಾಹವನ್ನ ಕಳೆದುಕೊಳ್ಳದೆ, "ಸುಖ" ಎನ್ನುವ ಪದಕ್ಕೆ ಬೇರೆಯದೇ ಅರ್ಥ ಕಂಡುಕೊಂಡು ಬದುಕುವ ವೃದ್ದರ ಜೀವನಗಾಥೆಯನ್ನ ಕಾರಂತರು ನಮ್ಮೆದುರು ಬಿಡಿಸಿಟ್ಟಿದ್ದ ಪರಿ ಅದ್ಭುತವಾಗಿತ್ತು. ನಿಸರ್ಗದ ಸೊಬಗನ್ನ, ಅಲ್ಲಿಯ ಜನರ ಬದುಕನ್ನ, ಕಣ್ಣಿಗೆ ಕಟ್ಟುವಂತೆ ಪುಸ್ತಕದಲ್ಲಿ ಹೇಳಲಾಗಿತ್ತು. ಓದುತ್ತಾ ಸಾಗಿದಂತೆಲ್ಲ ಘಟ್ಟಗಳ ನಡುವಿನ ಸೌಂದರ್ಯ ರಾಶಿ ಸವಿದ ಅನುಭವವಾಗುತ್ತಿತ್ತು.

ಈಗ ಪುಸ್ತಕದ ಬಗ್ಗೆ ಪೀಠಿಕೆ  ಹಾಕಿದ್ದಕ್ಕೆ ಕಾರಣ ಇದೆ. ಈ ಪುಸ್ತಕ ಚಲನಚಿತ್ರವಾಗಿದೆ. ಹೌದು, ಬೆಂಗಳೂರಿನ ಎರಡು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಈ ಚಿತ್ರ ಮಾಡುವ ಮೊದಲು ಯಾರಾದರು ನನ್ನಲ್ಲಿ ಈ ಪುಸ್ತಕವನ್ನ ಆದರಿಸಿ ಚಲನಚಿತ್ರ ಮಾಡಬಹುದಲ್ವೆ ಅನ್ನುವ ಪ್ರಶ್ನೆ ಮಾಡಿದ್ದರೆ, ಖಂಡಿತ ಸಾದ್ಯವಿಲ್ಲ ಅನ್ನುವ ಉತ್ತರ ಬರುತ್ತಿತ್ತು. ಕಾರಣ ಕಾರಂತರು ವರ್ಣಿಸಿದ ರೀತಿಯಲ್ಲಿ ಪ್ರಕೃತಿಯನ್ನು ಮತ್ತು ಅಷ್ಟು ಚಿಕ್ಕ ಎಳೆಯಿರುವ ಕಥೆಯನ್ನ ತೆರೆಯ ಮೇಲೆ ಬಿಡಿಸಿದುವುದು ಸಾದ್ಯವಿಲ್ಲ ಅನ್ನುವ ಭಾವನೆ.

ಆದರೆ ಚಿತ್ರ ನೋಡಿ ಬಂದ ನಂತರ ನನ್ನ ಅನಿಸಿಕೆ ಬದಲಾಗಿದೆ. ಇಂತಹ ಅದ್ಬುತ ಕಾದಂಬರಿಯನ್ನ ಅದರ ಮೂಲಸ್ವರೂಪಕ್ಕೆ ತೊಂದರೆಯಾಗದಂತೆ ನಿರ್ದೇಶಕ ಶೇಷಾದ್ರಿ ತೋರಿಸಿದ್ದಾರೆ. ಅವರ ಈ ಪ್ರಯತ್ನ ಮೆಚ್ಚುವಂತದ್ದು. ಬೆಂಗಳೂರಿನ ಕಾಂಕ್ರಿಟ್ ಕಾಡನ್ನ ಮರೆತು, ನಮ್ಮ ಪಶ್ಚಿಮ ಘಟ್ಟಗಳ ಸುಂದರ ಕಾಡಿನೊಂದಿಗೆ ಮೈಮರೆತು ವಿಹರಿಸುವ ತವಕವಿದ್ದವರು ನೋಡಲೇಬೇಕಾದ ಚಿತ್ರವಿದು. ಚಿತ್ರದ ಕತೆ ಚಿಕ್ಕದಾದುದರಿಂದ ಸ್ವಲ್ಪ ಮಂದಗತಿಯಲ್ಲಿ ಸಾಗಿದರು, ತೆರೆಯ ಮೇಲೆ ಕಾಣುವ ಪ್ರಕೃತಿ ಸೌಂದರ್ಯದ ಶ್ರೀಮಂತ ದೃಶ್ಯಗಳು ಎಲ್ಲಿಯೂ ಬೇಸರವೆನಿಸದಂತೆ ನೋಡಿಕೊಳ್ಳುತ್ತವೆ. ಅನಂತ ಅರಸ್ ಅವರ ಛಾಯಾಗ್ರಹಣ ಚಿತ್ರದ ಯಶಸ್ಸಿನಲ್ಲಿ ಪ್ರಮುಕ ಪಾತ್ರ ವಹಿಸಿದೆ. ಗೊಪಲಯ್ಯನ ಪಾತ್ರದಲ್ಲಿ ಧತ್ತಾತ್ರೆಯ ಅವರು ವಯಸ್ಸು ಮರೆತು ನಟಿಸಿದ್ದಾರೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದರೆ. ಮಚ್ಚು-ಲಾಂಗುಗಳು ಗುಡುಗುವ ಇವತ್ತಿನ ಚಲನಚಿತ್ರಗಳ ಮದ್ಯೆ "ಬೆಟ್ಟದ ಜೀವ" ಚಿತ್ರ ವಿಶೇಷವಾಗಿ ಕಾಣುತ್ತದೆ. ಆದರೆ ಕೇವಲ ಎರಡು ಚಿತ್ರಮಂದಿರಗಳಲ್ಲಿ ಮಾತ್ರ ತೆರೆ ಕಂಡಿರುವುದು ಬೇಸರದ ಸಂಗತಿ. ಅದಕ್ಕೆ ಜನರ ಅಭಿರುಚಿಯ ಬಗ್ಗೆ ನಿರ್ಮಾಪಕರಿಗೆ ಇರುವ ಅಳುಕು ಕಾರಣವಿರಬಹುದು. ಅಪರೂಪವಾಗಿರುವ ಇಂತಹ ಚಿತ್ರಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎನ್ನುವ ಆಶಯ ನಮ್ಮದು.
ಮೂಲ: http://goo.gl/72JEd
ಚಿತ್ರದ ಬಗ್ಗೆ: http://goo.gl/qNg9T


Wednesday, November 14, 2012

ಕಾಡಿನ ಕತೆಗಳು - ಪೂರ್ಣಚಂದ್ರ ತೇಜಸ್ವಿ

Kaadina Kathegalu - Poornachandra Tejasvi


Belandurina Narabhakshaka (Kaadina Kategalu - 1)
Pedachurina Rakshasa (Kaadina Kategalu - 2)
Jalahalliya Kurka (Kaadina Kategalu - 3)
Muniswami Mattu Magadi Chirathe (Kaadina KategaLu - 4)





ಕಾಡಿನ ಕತೆಗಳು - ಕಥಾಸಂಕಲನ


ಪುಸ್ತಕದ ಮುನ್ನುಡಿಯಿಂದ:-


ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ತಮ್ಮ ಅನುಭವಗಳನ್ನು ಬರೆದ ಕಾಲ ಚಾರಿತ್ರಿಕವಾಗಿ ಒಂದು ವಿಚಿತ್ರ ಪರ್ವಕಾಲವೆಂದು ಹೇಳಬಹುದು. ಹಿಂದೆ ಇಲ್ಲದ ಮತ್ತು ಮುಂದೆ ಬರದ 'ನ ಭತೋ ನ ಭವಷ್ಯತಿ' ಎನ್ನುವಂಥ ಚಾರಿತ್ರಿಕ ತಿರುವಿನಲ್ಲಿ ಇವರು ಬದುಕಿದ್ದವರು. ಅದಕ್ಕೂ ಹಿಂದೆ ಭಾರತದ ಕಾಡುಗಳಲ್ಲಿ ಹುಲಿ ಚಿರತೆಗಳು ಇವರು ಬದುಕಿದ್ದವರು. ಅದಕ್ಕೂ ಹಿಂದೆ ಭಾರತದ ಕಾಡುಗಳಲ್ಲಿ ಹುಲಿ ಚಿರತೆಗಳು ಇರಲಿಲ್ಲವೆಂದಲ್ಲ. ಹುಲಿ ಸಂಹರಸಿದ ಹೊಯ್ಸಳನಂಥ ಧೀರರ ಕತೆಗಳನ್ನು ನಾವು ಚರಿತ್ರೆಯಲ್ಲಿ ಕಾಣಬಹುದು. ಆದರೆ ಜನಸಂಖ್ಯೆ ಈಗಿನಂತೆ ಇರಲ್ಲಿಲ್ಲ. ಮತ್ತು ಕಾಡುಗಳಲ್ಲಿ ಹುಲಿ ಚಿರತೆಗಳ ಆಹಾರವಾದ ಇತರ ಪ್ರಾಣಿಗಳು ಹೇರಳವಾಗಿ ಇದ್ದವು ಹುಲಿ ಚಿರತೆಗಳಿಗೆ ಸಮಾಜ ಜೀವಿಯಾದ ಮನುಷ್ಯನನ್ನು ಹಿಡಿದು ತಿನ್ನಬೇಕಾದ ತುರ್ತು ಏನು ಇರಲ್ಲಿಲ್ಲ. ಅದ್ದರಿಂದ ಈ ಇಬ್ಬರು ಲೇಖಕರು ಹಿಂದೂ ನರಬಕ್ಷಕಗಳು ಹಾವಳಿ ಈ ಪ್ರಮಾಣದಲ್ಲಿ ಇರಲ್ಲಿಲ್ಲ.



ಬ್ರಿಟಿಷ್ ಸಾಮ್ರಾಜ್ಯದ ಪ್ರಾರಂಭಿಕ ದಿನಗಳಲ್ಲಿ, ಕೈಗಾರಿಕಾ ಕ್ರಾತಿ ತನ್ನ ಮೊದಲ ಹೆಜ್ಜೆ ಇಡಲು ಶುರು ಮಾಡಿದಾಗ ನರಭಕ್ಷಕ ಹುಲಿ ಚಿರತೆ ಸಿಂಹಗಳ ಘಟನೆಗಳನ್ನು ನೀವು ಹೆಚ್ಹಾಗಿ ಗಮನಿಸಬಹುದು. ಈ ಖಂಡಗಳಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚುತ್ತಾ ನಾಗರೀಕತೆ ವಿಸ್ತರಿಸಿ ಕಾಡಿನ ವಿಸ್ತೀರ್ಣ ಕುಗ್ಗುತ್ತಾ ಹೋದಂತೆ ಕಾಡಿನ ಮಾಂಸಹಾರಿ ಪ್ರಾಣಿಗಳು ವಿವಿಧರೀತಿಯ ಒತ್ತಡಕ್ಕೆ ಸಿಕ್ಕಿಕೂಂಡವು. ಕಾರ್ಬೆಟ್ ಮತ್ತು ಆಂಡರ್ಸನ್ ಈ ಪ್ರಾಣಿಗಳು ನರಬಕ್ಷಕಲಾಗಳು ಅನೇಕಾನೇಕ ವೈಯ್ಯಕ್ತಿಕ ಕಾರಣಗಳನ್ನು ಕೊಡುತ್ತಾರಾದರೂ, ಈ ಕಾರಣಗಳಿಗೂ ನಾನು ಮೇಲೆ ಹೇಳಿದ ಚಾರಿತ್ರಿಕ ಸಂದರ್ಭ ಮೂಲಭೂತ ಕಾರಣ ಎಂದು ನನ್ನ ಭಾವನೆ. ಈ ಚಾರಿತ್ರಿಕ ಘಟ್ಟದಲ್ಲಿ ಬದುಕಿದ್ದವರಿಂದ ಮಾತ್ರ ಇಂಥ ಕೃತಿಗಳನ್ನು ರಚಿಸಲು ಸಾಧ್ಯ. ಈಗ ಹುಲಿಗಳೇ ಅವಸಾನದ ಅಂಚಿನಲ್ಲಿದ್ದು ಸರ್ಕಾರದ ಸಹಾಯಧನದಿಂದ ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಇರುವುದರಿಂದ ಇನ್ನು ನರಭಕ್ಷಕಗಳ ಸವಾಲನ್ನು ಎದುರಿಸಬೇಕಾದ ಸಂದರ್ಭ ಪುನರಾವರ್ತನೆಯಾಗುವುದು ಅಸಂಭವ. ಆದ್ದರಿಂದಲೇ ನಾನು ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ರ ಅನುಭವಗಳನ್ನು 'ನ ಭತೋ ನ ಭವಷ್ಯತಿ' ಅಂದು ಹೇಳಿದ್ದು.


ನಾನು ಹುಟ್ಟುವ ಎಲೆಗಾಗಲೇ ಶಿಕಾರಿ ಯುಗದ ಕೊಟ್ಟಕೊನೆಯ ತುದಿ ಬಂದಿತ್ತು. ಆದರು ಈ ಕತೆಗನನ್ನು ಆಸ್ವಾದಿಸಿ ಅನುಭವಿಸುವ ಮಟ್ಟಿಗಾದರೂ ನನಗೆ ಕಾಡಿನ ಅನುಭವಗಳು ಪರಿಚಯವಾಯ್ತು. ಕೆನೆತ್ ಆಂಡರ್ಸನ್ ಕತೆಗಳ ಹಿನ್ನಲೆ, ಪರಿಸರ, ಪಾತ್ರಗಳು ಎಲ್ಲ ನನ್ನ ಅನುಚವವೇ ಅನ್ನುವಷ್ಟು ಚಿರಪರಿಚಿತವಾದುದು. ಚೋರ್ಡಿ, ಶೆಟ್ಟಿಹಳ್ಳಿ. ಶಿಕಾರಿಪುರ, ಬೆಳ್ಳಂದೂರು ಎಲ್ಲಾ ನಾವು ಕೋವಿ ಹೆಗಲಿಗೀರಿಸಿಕೊಂಡು ಮಳೆ ಬಿಸಿಲೆನ್ನದೆ ತಿರುಗಾಡಿರುವ ಜಾಗಗಳು. ನಾವು ಕಾದಿಗಿಲಿದಾಗ ನರಬಕ್ಷಕಗಳ ಯುಗ ಮುಗಿತ್ತೆಂಬುದೊಂದನ್ನು ಬಿಟ್ಟರೆ ಮಿಕ್ಕಿದೆಲ್ಲ ನಾನೇ ಅನ್ದೆರ್ಸೋನ್ನರ ಜೊತೆ ಇದ್ದೆನೇನೋ ಎನ್ನುವಷ್ಟು ನನಗೆ ಗೊತ್ತು.