Friday, November 22, 2013

ಕನಕ ಮುಸುಕು - ಕೆ ಎನ್ ಗಣೇಶಯ್ಯ

Kanaka Musuku -  K. N. Ganeshaiah

ನಾಗೇಶ ಹೆಗಡೆರವರು ಬರೆದಿರುವ ಮುನ್ನುಡಿಯಿಂದ :
"ಕನಕ ಮುಸುಕು" ಕಾದಂಬರಿ ೨೦೦೫ರ ಕೊನೆಯಲ್ಲಿ "ಸುಧಾ" ವಾರಪತ್ರಿಕೆಯಲ್ಲಿ ವಾರವಾರವೂ ಬರತೊಡಗಿದಾಗ ಅದು ಕೇವಲ ಧಾರಾವಾಹಿಯಾಗಿ ಬರಲಿಲ್ಲ, ನಿಂತ ನೀರಂತಿದ್ದ ಕನ್ನಡ ಕಾದಂಬರಿ ಲೋಕಕ್ಕೆ ಹೊಸ ಧಾರೆಯಾಗಿ ಬನ್ತು. ಕನ್ನಡ ಓದುಗರಿಗೆ ಮಿಂಚಿನ ಪುಳಕ ನೀಡುತ್ತ ಬಂತು.
ಅದುವರೆಗೆ ಕನ್ನಡದಲ್ಲಿ ಚಾರಿತ್ರಿಕ ಕಥಾನಕಗಳು ಅದೆಷ್ಟೋ ಬಂದಿದ್ದವು, ಮಾಸಲೆ ಸೇರಿಸಿದ ಪತ್ತೇದಾರಿ ಕಾದಂಬರಿಗಲಂತೂ ಲೆಕ್ಕವಿಲ್ಲದಷ್ಟು ಬಂದಿದ್ದವು. ಆದರೆ ಅವೆರಡರ ಸಂಗಮದಂತೆ ಐತಿಹಾಸಿಕ ಘಟನೆಗಳ ನೆಲೆಗಟ್ಟಿನಲ್ಲಿ ಇಂದಿನ ವಿದ್ಯಮಾನಗಳನ್ನು ರೋಚಕವಾಗಿ ಹೆಣೆದ ಚಾರಿತ್ರಿಕ ಥ್ರಿಲ್ಲರ್ ಮಾತ್ರ ನಮ್ಮ ಭಾಷೆಯಲ್ಲಿ ಇರಲ್ಲಿಲ್ಲ. ಈಚೆಗಷ್ಟೇ ಇಂಗ್ಲೀಷಿನಲ್ಲಿ ಡ್ಯಾನ್ ಬ್ರೌನನ "ಡಾ ವಿನ್ಸಿ ಕೋಡ್" ಹೆಸರಿನ ಚಾರಿತ್ರಿಕ ಥ್ರಿಲ್ಲರ್ ಜನಪ್ರಿಯತೆಯಾ ಉತ್ತುಂಗಕ್ಕೇರಿ ಭಾರತಿಯ ಓದುಗರ ಕೈಯಿಂದ ಕೈಗೆ ದಾಟುತ್ತಿದ್ದಾಗ "ನಮ್ಮ ಕಾದಮ್ಬರಿಕಾರರಿಗೇಕೆ ಇಂಥದ್ದೊಂದು ವಿಷಯ ಹೊಳೆಯುವುದಿಲ್ಲ?" ಎಂದು ಅನೇಕರು ಚರ್ಚಿಸಿದ್ದು ಉನ್ತು. ಚರ್ಚೆ ಇನ್ನು ಪೂರ್ತಿಗೊಳ್ಳುವ ಮೊದಲೇ,ಚರ್ಚೆ ಮೂಕ್ತಾಯ ಹಾಡುವಂತೆ ಕಾಣಿಸಿಕೊಂಡಿತು "ಕನಕ ಮುಸುಕು"

ಕನ್ನಡದ ಮಟ್ಟಿಗೆ ಹೊಸದೊಂದು ಮೈಲಿಗಲ್ಲು ಅನ್ನುವಂತೆ ಈ ಕಾದಂಬರಿಯಲ್ಲಿ ಅನೇಕ ಹೊಸತುಗಳಿವೆ. ಮೊದಲೆನೆಯದಾಗಿ ಗ್ರಂಥಕರ್ತರೇ ಕನ್ನಡ ಸಾಹಿತ್ಯ ಲೋಕಕ್ಕೆ ಹೊಸಬರು, ಇನ್ನೂ ವಿಶೇಷ ಉಪನ್ಯಾಸ, 'ಏಟ್ರಿ'ಯಂಥ ಜನಪರ ಸಂಘಟನೆಯ ಕೆಲಸ. ಅನೇಕ ಸಂಘ ಸಂಸ್ಥೆಗಳಿಗೆ ಸಲಹಕಾರ್ಯ ಇವೆಲ್ಲವುಗಳ ಮಧ್ಯೆ ಕನ್ನಡದಲ್ಲಿ ಕಥೆ, ಕಾದಂಬರಿ ರಚನೆಯತ್ತಲೂ ಗಮನ ಕೊಡುವ ವಿಜ್ಞಾನಿ ಎಂಬುದೇ ಅಚ್ಚರಿಯ ಸಂಗತಿ.

ಇವರ ಈ ಚೊಚ್ಚಲ ಕಾದಂಬರಿಯ ಹಸ್ತಪ್ರತಿ ನನ್ನ ಕೈ ತಲುಪಿದಾಗ ನಾನು ಅದೇ ತಾನೆ 'ಸುಧಾ'ದ ಊಸ್ತುವಾರಿ ವಹಿಸಿಕೊಂಡಿದ್ದೆ. ನನ್ನ ಪತ್ರಿಕೆಗೆ ಹೊಸ ಹೊಳಪು ಕೊಡಬೇಕು, ಹೊಸ ಛಾಪು ಮೂಡಿಸಬೇಕು , ಎಳೆಯ ಪೀಳಿಗೆಯನ್ನು ಆಕರ್ಷಿಸಬೇಕು ಎಂಬೆಲ್ಲ ಕನಸುಗಳಿಗೆ ರೆಕ್ಕೆ ಪುಕ್ಕ ಜೋಡಿಸುವಾಗ ತಾನಾಗಿ ಬಂಡ ಕೃತಿ ಇದು. ಪ್ರಸಿದ್ದ ವಿಜ್ಞಾನಿಯೆಂದು ಖ್ಯಾತಿ ಪಡೆದ ಡಾ. ಗಣೇಶಯ್ಯನವರ ಬಗ್ಗೆ ಗೊತ್ತಿತ್ತಾದರೂ ಇವರು ಕನ್ನಡ ಕಾದಂಬರಿ ಬರೆಯುತ್ತಾರೆಂಬುದೇ ಅಚ್ಚರಿಯ ಸಂಗತಿಯಾಗಿತ್ತು. ಕುತೂಹಲದಿಂದ ನಾಲ್ಕಾರು ಪುಟಗಳನ್ನು ಮಗುಚಿದಾಗ ಅಲ್ಲಿ ಬಳಸಿದ್ದ ಪ್ರಬುದ್ದ ಭಾಷೆ, ಚುರುಕಿನ ನಿರೂಪಣೆ ಮೊದಲ ನೋಟಕ್ಕೇ ಗಮನ ಸೆಳೆಯಿತು. ಮನೆಗೆ ಒಯ್ದು ಒಂದೇ ಕಂತಿನಲ್ಲಿ ಓದಿ ಮುಗಿಸಿದ್ದಾಯಿತು.

ಹೊಸ ಸಾಹಿತಿಯೊಬ್ಬರನ್ನು ಹೊಸ ರೀತಿಯಲ್ಲಿ ಓದುಗರಿಗೆ ಪರಿಚಯಿಸುವ ಮಾರ್ಗವನ್ನು ದಾ. ಗಣೇಶಯ್ಯ ನಮಗೆ ತೋರಿಸಿಕೊಟ್ಟರು. 'ಕನಕ ಮುಸುಕು' ಪ್ರಕಟಿಸುವ ಮೊದಲು ಅವರೇ ರಚಿಸಿದ ಇನ್ನೊಂದು ಐತಿಹಾಸಿಕ ನೀಳ್ಗತೆ 'ಶಾಲಭಂಜಿಕೆ'ಯನ್ನು ಅವರು ಪ್ರಕಟಣೆಗೆ ಕಳುಹಿಸಿದರು. ಅದು 'ಸುಧಾ'ದ ವಿಶೇಷ ಮೂಖಪುಟ ಕತೆಯಾಗಿ ಪ್ರಕಟವಾದಾಗ ಓದುಗರ ಅಪಾರ ಮೆಚ್ಚುಗೆ ಪಡೆಯಿತು. ಸಮಕಾಲೀನ ನೈಜ ವರದಿಯಿಂದ ಮೆಲ್ಲಗೆ ಗತಕಾಲಕ್ಕೆ ಜಾರಿಕೊಳ್ಳುವ ರೋಚಕ ಹಂದರದಿಂದಾಗಿ ಅದು ನೈಜ ಕತೆಯೆ, ಕಾಲ್ಪನಿಕ ಸೃಷ್ಟಿಯ ಎಂಬುದು ಮೊದಲ ಓದಿಗೆ ಗೊತ್ತಾಗದಂಥ ನೀರುಪಣಾ ಕೌಶಲವನ್ನು ಓದುಗರ ಮೆಲಕು ಹಾಕುತ್ತಿದ್ದಂತೆಯೇ ಹೊಸ ಕಾದಂಬರಿಕಾರನೊಬ್ಬನ ಆಗಮನಕ್ಕೆ ವೇದಿಕೆ ಸಜ್ಜಾಗಿತ್ತು. 'ಕನಕ ಮುಸುಕು' ಕೂಡ ಅಷ್ಟೆ ಮುಸುಕಿನ ಜೋಳದ ಮೂಲಸ್ಥಾನ ನಿಷ್ಕರ್ಷೆಯ ಬಗೆಗಿನ ಸಮಕಾಲೀನ ಸಮಸ್ಯೆಯೊಂದರ ಮುಡುಕು ತೆರೆಯುವ ಲೇಖನದೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಸುದೀರ್ಘ ಕಥಾಹಂದಕ್ಕೊಂದು ಕೌತುಕದ ನೆಲೆಗಟ್ಟು ಸಿದ್ದವಾಗುತ್ತದೆ.

ಕಾದಂಬರಿಯುದ್ದಕ್ಕೂ ವರ್ತಮಾನದ ವಾಸ್ತವ, ಚಾರಿತ್ರಿಕ ದಾಖಲೆಗಳ ಆಧಾರಪೂರಕ ಛಾಯಾಚಿತ್ರಗಳು, ಸಂಖ್ಯಾಸೂತ್ರಗಳು ಒಗಟುಗಳು, ನಿರ್ವಿವಾದಿತ ಆಕರ ಗ್ರಂಥಗಳ ಪ್ರಸ್ತಾವ ಎಲ್ಲವೂ ಮಿಳಿತವಾಗಿ ಕಥಾನಕ ಸಾಗುತ್ತದೆ. ಓದುಗರ ಕುತೂಹಲವನ್ನು ಹಿಂದೆಯೂ ಅಲ್ಲಲ್ಲಿ ಕೆನೆಕಿದ್ದ, ಇಂದಿಗೂ ಒಗಟಾಗಿಯೇ ಉಳಿದ 'ಸಿರಿಭೂವಲಯ'ದ ಪರಿಕಲ್ಪನೆಯನ್ನು ತೀರ ಸಹಜವೆಂಬಂತೆ ಕಥೆಯಲ್ಲಿ ಸೇರಿಸಿದ್ದು, ತಾಳೆಗರಿಯ ಲಿಪಿಯಲ್ಲಿ ಅಂಕಾಕ್ಷರ ಸೂತ್ರಗಳ ಮೂಲಕ ಜೈನ ಸಿರಿಸಂಪತ್ತಿನ ಕೀಲಿಕೈಯನ್ನು ಬಚ್ಚಿಟ್ಟಿದ್ದು ಎಲ್ಲವೂ ಮೂಂದಿನ ಅಧ್ಯಾಯಾಕ್ಕಾಗಿ ಕಾಡು ಕೂರುವಂತೆ ಮಾದುತ್ತೆ. ಇಂದು ನೆನ್ನೆಗಳ ಮಧ್ಯೆ ತಾಕಲಾತವಾಡುತ್ತ ಘಟನೆಗಳು ತೆರೆದುಕೊಳ್ಳುತ್ತವೆ. ಸಿನಿಮಾ ರೀಲಿನಂತೆ, ನವೆಂಬರ್ 6 ರಿಂದ ಗಂಟೆ ಗಂಟೆ ಲೆಕ್ಕಾಚಾರದಂತೆ ಹತ್ತು ದಿನಗಳಲ್ಲಿ ಕಥೆಯನ್ನು ಮುಗಿಸುವ ಜಾಣ್ಮೆ ಕೂಡ ಕನ್ನಡದ ಈಚಿನ ಓದುಗರಿಗೆ ಹೊಸದೆಂದೇ ಹೆಲಬಹುದು. ಸೇಟಲೈಟ್ ಚಾನೆಲ್, ಸೆಲ್ ಫೊನೆ. ಈ-ಮೇಲ್, ನೆಟ್ ಚಾಟ್ ಗಳ  ಈ ಯುಗದಲ್ಲಿ ಕಾದಂಬರಿಯ ನಾಯಕಿಯೂ ಅಂಥದ್ದೇ ಹೈ -ಟೆಕ್ ಸಂಪರ್ಕ ತಂತ್ರಗಳನ್ನು ಬಳಸಿ, ಚೂಟಿಯಾಗಿ ಗ್ಲೋಬ್ ಟ್ರಾವೆಲ್ ಮಾಡುತ್ತ ಭೂತ=ಭವಿಷ್ಯಗಳನ್ನು ಬೆಸೆಯುವ ಕರಿಕಾರ್ತಿಯಾಗಿರುವುದು ಇಂಗ್ಲಿಷ್ ಕಾದಂಬರಿಗಳನ್ನು ಮಡಿಲಲ್ಲಿಟ್ಟುಕೊಂಡೇ ಬೆಳೆಯುವ ಹೋದ ಪೀಳಿಗೆಗೂ ಆಕ್ರಶಕವೆನಿಸುತ್ತದೆ. ನಮ್ಮ ಭಾಷೆಯಲ್ಲೂ ಇಂಥದ್ದೊಂದು ಕೃತಿ ಸಾಧ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಸಾಧ್ಯವಾಗುತ್ತದೆ.
ಇವೆಲ್ಲವುಗಳ ಹಿಂದಿನ ಸೃಜನಶೀಲ ಮನಸ್ಸು ನಮ್ಮನ್ನು ಅಚ್ಚರಿಗೊಳಿಸಬೇಕು. ವಿಜ್ಞಾನಿಯೊಬ್ಬ ತನ್ನ ಸಂಶೋಧನ ಕ್ಷೇತ್ರದ ಮಾಹಿತಿಗಳನ್ನು ಥ್ರಿಲ್ ಕೊಡುವ ಕಥಾ ರೂಪದಲ್ಲಿ ಹಣೆಯುವುದು ಅಷ್ಟೇನು ಸವಾಲಿನ ಕೆಲಸವಾಗಲಾರದು. ಇಲ್ಲಿ ಹಾಗಲ್ಲ, ಇತಿಹಾಸದ ಗರ್ಭದಲ್ಲಿ ಅಡಗಿದ ಸಂಗತಿಗಳನ್ನು ಸಾಧಾರ ಹೊರಕ್ಕೆಳೆದು, ವರ್ತಾಮಾನದೊಂದಿಗೆ ಬೆರೆಸಿ ಕಲ್ಲತ್ಮಾಕ ಹೆನೆಗೆ ಮಾಡಿದ್ದು ಅಪರೂಪದ ಸಾಧನೆಯೇ ಸರಿ.
ಅಲ್ಲಲ್ಲಿ ಕಡೆದಿಟ್ಟ ಕಲ್ಲುಳುಗಳ ಅವಶೇಷಗಳಲ್ಲಿ ಗತಕಾಲದ ನಮ್ಮ ರೋಚಕ ಚರಿತ್ರೆಗಳು ಹೂತುಹೊಗಿವೆ; ಇಲ್ಲವೇ ನೀರಸ ಪಠ್ಯಗಳಾಗಿ ಶಿಕ್ಷಕರ ನೋಟ್ ಬುಕ್ ಗಳಿಂದ ವಿದ್ಯಾರ್ಥಿಗಳ ನೋಟ್ ಬುಕ್ ಗಳಿಗೆ ದಾಟಿ ಯಾರನ್ನು ತಟ್ಟದೆ ಸಾಗುತ್ತಿವೆ. ಚರಿತ್ರೆಯ ಬಗೆಗಿನ ಅಂಥ ಅಸಡ್ಡೆಯನ್ನು ನಿವಾರಿಸಿ ಹೊಸ ಸಂಶೋಧನೆಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಇಲ್ಲವೇ ಕಡೇ ಪಕ್ಷ ಅಲಿದಿಳಿದ ಶಿಲ್ಲಸಾಕ್ಷಿಗಳತ್ತ ತುಸು ಗೌರವದಿಂದ ನೋಡುವಂತಾಗಲು ಇಂದು ತ್ರಿಲ್ಲೆರ್ಗಳ ಅಗತ್ಯ ತುಂಬಾ ಇದೆ. ಅದನ್ನು ಸಮಕಾಲೀನ ವಿಜ್ಞಾನಿಯೊಬ್ಬರು ತೋರೀಸಿಕೊಟ್ಟಿದ್ದಾರೆ. ಮುಸುಕಾಗುತ್ತಿರುವ ಕಾದಂಬರಿ ಲೋಕದತ್ತ ಓದುಗರು ಮತ್ತೆ ದೃಷ್ಟಿ ಹಾಹಿಸುವಂತೆ ಹೊಸ ದೇವಿಗೆ ಹಚ್ಚಿದ್ದಾರೆ.
ದಾ. ಗಣೇಶಯ್ಯ ಕನ್ನಡಕ್ಕೆ ದಕ್ಕಿದ ಹೊಸ ಆಸ್ತಿ.

ಮೂಲhttp://goo.gl/x3yM9L
ಡಾ. ಕೆ. ಎನ್. ಗಣೇಶಯ್ಯನವರು ಭಾರತದ ಪುರಾತನ ಮತ್ತು ಸವಿಸ್ತಾರವಾದ ಇತಿಹಾಸವನ್ನು ಅಡಿಗಲ್ಲಾಗಿ ಇಟ್ಟುಕೊಂಡು, ಇಂದಿನ ಮನುಷ್ಯನ ಅತಿ ಆಸೆಯನ್ನು ಕಟ್ಟಡದ ಇಟ್ಟಿಗೆಗಳಂತೆ ಬಳಸುತ್ತಾ ಅತ್ಯಂತ ರೋಚಕವಾಗಿ ಕಥೆಯನ್ನು ನಮಗೆ ಹೇಳುತ್ತಾ ಹೋಗುತ್ತಾರೆ. ಅವರಿಗೆ ಗೊತ್ತು ನಮ್ಮ ಕನ್ನಡದ ಓದುಗರಿಗೆ ತೀರ ಹೊಸ ಅಥವಾ ತೀರ ಹಳೆಯದನ್ನು ಹೇಳಿದರೆ ಓದಲಾರರು ಎಂದು. ಹಾಗಾಗಿ ಎಷ್ಟು ಬೇಕೋ ಹೊಸ ತಂತ್ರಜ್ಞಾನವನ್ನು ಬಳಸಿ ಭಾರತ/ಕರ್ನಾಟಕದ ಸಂಸ್ಕೃತಿ ಗೆ ಒಗ್ಗುವ ಹಾಗೆ ಕಥೆಯನ್ನು ಬಿಡಿಸಿಡುತ್ತಾರೆ. ಇನ್ನೊಂದು ಮುಖ್ಯವಾಗಿ ಹೇಳಬೇಕಾದ್ದು ಪ್ರತಿ ಕಾದಂಬರಿಗೆ ಇವರು ಮಾಡುವ ಸಂಶೋಧನೆ. ಇತಿಹಾಸದಲಿ ಎಲ್ಲೋ ಕರಗಿಹೋದ/ಮರೆಯಾದ ಸತ್ಯಗಳನ್ನು ಹೇಳುತ್ತಾ ಹೋಗುತ್ತಾರೆ. ಮೂಲತಹ ಕೃಷಿ ವಿಜ್ಞಾನಿಗಳಾಗಿರುವ ಇವರು ಸಸ್ಯ ಥಳಿ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ. 'ಕಪಿ ಲಿಪಿ ಸಾರ' ದಲ್ಲಿ ಇವರು 'ಸಂಜೀವಿನಿ' ಯನ್ನು ಹುಡುಕುವ ಕಥೆಯನ್ನು ಹೇಳುತ್ತಾರೆ. ಅಷ್ಟೇ ಅಲ್ಲದೆ ರಾಮಾಯಣ ಆದಮೇಲೆ ಹನುಮಂತ ಎಲ್ಲಿ ಹೋದ? ಅಂಡಮಾನ್ ಗೆ ಅಂಡಮಾನ್ ಅಂತಾನೆ ಯಾಕೆ ಕರಿತಾರೆ?. ಹಾಗೂ ಜೀವ ವಿಜ್ಞಾದಲ್ಲಿ ಇತ್ತೆಚೆಗಾಗಿರುವ ಬೆಳವಣಿಗೆಗಳು ಇತ್ಯಾದಿಗಳನ್ನೂ ಬಳಸಿ ಸುಂದರವಾದ ಅಷ್ಟೇ ಕುತೂಹಲಕರವಾದ ಒಂದು ಲೋಕವನ್ನೇ ಸೃಷ್ಟಿಸುತ್ತಾರೆ.
ಇಷ್ಟೆಲ್ಲಾ ಹೇಳಿದಮೇಲೆ ನಾನು ಅವರ ಅಭಿಮಾನಿಯಾಗಿದ್ದೀನಿ ಅಂತ ಬಿಡಿಸಿ ಬೇರೆ ಹೇಳಬೇಕಾಗಿಲ್ಲ ಅಲ್ಲವೇ. ಹಾಗಾಗಿ ಮತ್ತೆರಡು ಪುಸ್ತಕ ತಂದಿರುವೆ ಇವರದೇ :) ಅದರಲ್ಲಿ ಒಂದನ್ನು ಮುಗಿಸಿರುವೆ. ಆ ಪುಸ್ತಕದ ಹೆಸರು 'ಕನಕ ಮುಸುಕು'. ಈ ಕಾದಂಬರಿಯ ಬಗ್ಗೆ ಚಿಕ್ಕದಾಗಿ ಚೊಕ್ಕದಾಗಿ ಹೇಳಬೇಕೆಂದರೆ, ಇಸ್ರೋ ಸಂಸ್ಥೆಯ ಚಿತ್ರ ಒಂದು ಕರ್ನಾಟಕದ ಸೋಮನಾಥ ಪುರದ ಸುತ್ತ ಅಸ್ವಾಭಾವಿಕ ದಿಬ್ಬಗಳನ್ನು ತೋರಿಸುತ್ತದೆ. ಇದನ್ನು ಅರ್ಥೈಸಲು ಹೋದಾಗ ಕೆಳಗಿನ ಕಥೆ ನಮ್ಮ ಮುಂದೆ ಹರಡಿಕೊಳ್ಳುತ್ತದೆ:

ಚಂದ್ರಗುಪ್ತ ಮೌರ್ಯ ಜೈನ ಸನ್ಯಾಸಿಯಾಗಿ ತನ್ನ ರಾಜ್ಯ ತ್ಯಜಿಸಿ ಉತ್ತರ ಭಾರದಿಂದ ದಕ್ಷಿಣ ಭಾರತಕ್ಕೆ ಜೈನ ಮತದ ಪ್ರಚಾರಕನಾಗಿ ಶ್ರವಣಬೆಳಗೊಳಕ್ಕೆ ಬರುತ್ತಾನೆ. ಇದು ನಾವೆಲ್ಲಾ ಓದಿರುವ/ಕೇಳಿರುವ ಸತ್ಯ. ಆದರೆ ಸ್ವಲ್ಪ ತಾರ್ಕಿಕವಾಗಿ ಯೋಚಿಸಿರುವ ಗಣೇಶಯ್ಯನವರು ಹಾಗೂ ಅಷ್ಟೇ ಆಳವಾಗಿ ಇದರ ವಿವರವನ್ನು ತಿಳಿದಿರುವ ಅವರು ಕೆಲವು ವಿಷಯಗಳನ್ನು ಗಮನಿಸಿದ್ದಾರೆ. ಹಲವಾರು ಶಾಸನಗಳು ಹೇಳಿರುವಂತೆ ಚಂದ್ರಗುಪ್ತ ಮೌರ್ಯನ ಜೊತೆ ಸುಮಾರು ೧೨೦೦೦ ಜೈನ ಮುನಿಗಳು ಬರುತ್ತಾರೆ!! ಯಾಕೆ? ಇಂತಹ ಪ್ರಶ್ನೆಗಳು ಕೊನೆಗೆ ಕೈ ಮಾಡಿ ತೋರಿಸುವ ಉತ್ತರ ಸುಮಾರು ೫೦೦ ಟನ್ ಚಿನ್ನದ ಕಡೆಗೆ. ಈ ಚಿನ್ನವನ್ನು ಮುಸುಕಿನಿ ಜೋಳದ ತೆನೆಯ ರೂಪದಲ್ಲಿ ಮುಸುಕಿನ ಜೋಳದ ತೆನೆಗಳ ಜೊತೆಗೆ ಉತ್ತಮ camouflage ಮಾಡಿ ತರುತ್ತಾರೆ . ಹಾಗಾಗಿ ಕನಕ ಮುಸುಕು.

ಚಂದ್ರಗುಪ್ತ ಮೌರ್ಯ ನಿಂದ ಶುರುವಾಗುವ ನಿಧಿಯ ರಹಸ್ಯ ಹೊಯ್ಸಳ ಸಾಮ್ರಾಜ್ಯ ದ ಶಕುಂತಲೆಯಲ್ಲಿ ಕೊನೆಗೊಳ್ಳುತ್ತದೆ. ಈ ನಿಧಿಯನ್ನು ಹುಡುಕಲು ಹೊರಡುವ ಕಾದಂಬರಿಯ ನಾಯಕಿ, ಆಕೆಯ ಗಂಡ, ಆಕೆಯ ಗುರು ಹಾಗೂ ಸಕಾರಣಗಳಿಗೆ ಇದನ್ನು ಮುಚ್ಚಿಡಲು ಪ್ರಯತ್ನಿಸುವ ಜೈನ ಧರ್ಮದ ಹಿರಿಯ ನಾಯಕರುಗಳು ಹಾಗೂ ಇಷ್ಟೆಲ್ಲಾ ಸಾಲದು ಎಂಬಂತೆ ನಾಯಕಿಯನ್ನು ಬೆನ್ನು ಹತ್ತುವ ಅಂತರಾಷ್ಟ್ರೀಯ ಕಳ್ಳರ ಗ್ಯಾಂಗ್. ಇನ್ನೇನು ಬೇಕು ಹೇಳಿ ಕಥೆಯನ್ನು ಇನ್ನಷ್ಟು ರೋಚಕವಾಗಿಸಲು? ಇಷ್ಟೆಲ್ಲಾ ಇದ್ದರು ಗಣೇಶಯ್ಯ ಕಥೆಯ ಮುಖ್ಯ ಲಹರಿಯನ್ನು ಬೇರೆ ಕಡೆಗೆ ಹರಿಯ ಬಿಡದೇ ಓದುಗನನ್ನು ಕಾದಂಬರಿ ಮುಗಿಯುವವರೆಗೂ ಕಟ್ಟಿ ಕೂರಿಸುತ್ತಾರೆ.
ನಾನು ಸುಮಾರು ೪ ವರ್ಷದ ಹಿಂದೆ ಬೆಂಗಳೂರಿನಬಳಿ ಇರುವ ದೇವರಾಯನ ದುರ್ಗಕ್ಕೆ ಹೋದಾಗ ಅಲ್ಲಿ ಒಬ್ಬ ಹೇಳಿದ್ದ ವಿಷ್ಣು ವರ್ಧನನ ಹೆಂಡತಿ ಶಾಂತಲೆ ಇಲ್ಲೇ ಬಿದ್ದು ಆತ್ಮ ಹತ್ಯೆ ಮಾಡಿಕೊಂಡಳು ಎಂದು. ಆಗಿನಿಂದ ನನಗೆ ಒಂದು ವಿಷ್ಯ ಅರ್ಥ ಆಗಿರಲಿಲ್ಲ. ಬೇಲೂರುಹಳೆಬೀಡಿನಲ್ಲಿದ್ದ ಶಕುಂತಲೆಗೂ ಇಲ್ಲಿಗೂ ಏನು ಸಂಬಂಧ, ಇಲ್ಲಿ ಬಂದು ಸಾಯುವನ್ತದ್ದು ಏನಾಗಿತ್ತು? ಈ ಪ್ರಶ್ನೆ ಗೆ ಕನಕ ಮುಸುಕು ತಕ್ಕಷ್ಟು ಉತ್ತರ ಕೊಟ್ಟಿತು. ಇಷ್ಟೇ ಅಲ್ಲದೆ ಮುಸಿಕಿನ ಜೋಳದ ಇತಿಹಾಸ ಮತ್ತು ಅದು ಏಷ್ಯಗೆ ಬಂದ ಬಗೆಗೆ ಇಂದಿಗೂ ಇರುವ ಕಗ್ಗಂಟು ಗಳನ್ನೂ ಕುತೂಹಲಕಾರಿಯಾಗಿ ಕಥೆಯ ಮಧ್ಯದಲ್ಲಿ ಗೊತ್ತಿಲ್ಲದಂತೆಯೇ ನಮಗೆ ತಿಳಿಸುತ್ತಾರೆ. ಇದಲ್ಲದೆ ರಾಜಕಾರಣ ಮತ್ತು ಧರ್ಮ/ಜಾತಿ ಇವೆರಡರ ಮಧ್ಯ ಇರುವ ಬಿಡಿಸಲಾಗದ ನಂಟನ್ನು ತಿಳಿಯಾಗಿ ಹೇಳುತ್ತಾರೆ. ಜೈನ, ವೈಷ್ಣವ, ಶೈವ, ಇಸ್ಲಾಂ ಮತ್ತು ಕ್ರಿಸ್ತ ಧರ್ಮ ಗಳ ಹಿಂದಿನ ತಿಕ್ಕಾಟಗಳು ನೋಡ ಸಿಗುತ್ತವೆ. ಇಷ್ಟೆಲ್ಲಾ ಸಾಕಾಗುವುದಿಲ್ಲ ಎಂದರೆ ದೊಡ್ಡವರ ಸಣ್ಣತನಗಳು ಹಾಗೂ ನಿಮಗೆ cryptography ಬಗ್ಗೆ ಉತ್ಸಾಹವಿದ್ದರೆ ಹಿಂದಿನ ಕಾಲದಲ್ಲಿ ಬಳಸಿದ ಕೊಡೆಡ್ ಸಂದೇಶಗಳನ್ನು ಸೇರಿಸಿ ನಮ್ಮನ್ನು ಚಕಿತಗೊಳಿಸುತ್ತಾರೆ.


Sunday, November 17, 2013

ಮರಣದ ಮರ್ಮ - ಎನ್ ನರಸಿಂಹಯ್ಯ

Marnada Marma -  Narashimaiah N

 

 

ಮುನ್ನುಡಿಯಿಂದ :

ಸಾಂಸಾರಿಕ ಜೀವನದ ಚಕ್ರವು ಸುಗುಮವಾಗಿ ಉರುಳಲು ದಂಪತಿಯರ ಪರಸ್ಪರ ಹೊಂದಾಣಿಕೆಯ ಪ್ರೀತಿವಿಶ್ವಾಸ ಅಥತ್ಯವಶ್ಯಕ. ಒಬ್ಬರನ್ನೊಬ್ಬರು ಹೊಂದಿಕೊಂಡು ಹೋಗದ ಬಾಳು ಜೋಡೆತ್ತಿನ ಗಾಡಿಗೆ ಒಂಟಿ ಎತ್ತನ್ನು ಕಟ್ಟಿದಂತಾಗುವುದು. ಹಿರಿಯರು ನಿಶ್ಚಿಯ ಮಾಡಿದ ಹೆಣ್ಣು=ಗಂಡುಗಳನ್ನು ಮಾಡುವೆ ಮಾಡಿಕೊಳ್ಳುವ ಕಾಲ ತಪ್ಪಿ, ಗನ್ದುಹೆಣ್ಣುಗಳೇ ಪರಸ್ಪರ ಒಪ್ಪಿ ಮದುವೆಯಾಗುವ ಕಾಲವೀಗ ನಡೆಯುತ್ತಿದೆ.

ತಂದೆತಾಯಿಯರ ನಿರ್ಬಂಧಕ್ಕೊಳಗಾಗಿ ಬೇಡವಾದ ಹೆಣ್ಣುಗಳನ್ನು ಗಂಡುಗಳೇ ಆಗಲೀ, ಗಂಡುಗಳನ್ನು ಹೆಣ್ಣುಗಳೇ ಆಗಲಿ ಮದುವೆಯಾದರೆ ಆ ಸಂಸಾರ ಜೀವನದಲ್ಲಿ ಸಂತೋಷವಿರದೆ ಏನಾದರೊಂದು ಏರುಪೇರುಗಳ ತೊಡಕಿನ ಸಮಸ್ಯಗಳಿದ್ದೇ  ಇರುತ್ತದೆ. ಗಂದಹೆಂಡಿರಲ್ಲಿ ಪ್ರೀತಿವಿಶ್ವಾಸವಿದ್ದು ಜಗಳಗಳಾದರೆ ಗಂಡ ಹೆಂಡಿರ ಜಗಳ ಉಂಡು ಮಲದುವತನಕ ಎಂಬಂತೆ ಹಗಲು ಜಗಳ ಆಡಿದವರು ರಾತ್ರಿ ಪರಸ್ಪರ ಪ್ರೀತಿಯಿಂದ ಮಾತಾನಾಡುತ್ತಾ ಬೆಳಿಗ್ಗೆ ಆಡಿದ ಜಗಳವನ್ನು ಮರೆಯುವರು. ಪ್ರೀತಿವಿಶ್ವಾಸವಿಲ್ಲದವರಲ್ಲಿ ಯಾರೇನು ಕೆಲಸ ಮಾಡಿದರೂ ತಪ್ಪಾಗಿ ಕಾಣುವುದು.

ಈ ಪತ್ತೆದಾರಿ ಕಾದಂಬರಿಯನ್ನು ಅಂತಹ ಒಂದು ಸಮಸ್ಯೆಯನ್ನು ಉಪಯೋಗಿಸಿಕೊಂಡು ವಿಲಕ್ಷಣ ಸನ್ನಿವೇಶ, ಘಟನೆಯೊಡನೆ ಬರೆದಿತ್ತೇನೆ. ಅಂದಮಾತ್ರಕ್ಕೆ ಇವರ ಪಾತ್ರಪರಿಚಯಗಳು ಸಮಾಜದ ಯಾವ ವ್ಯಕ್ತಿಗೂ ಅನ್ವಯಿಸದು, ಕಥಾವಿವರಣೆ, ಪಾತ್ರ ಪರಿಚಯವು ನನ್ನ ಸ್ವಯಂ ಕಲ್ಪಿತವಾಗಿರುತ್ತೆ.



ನಾನೇಕೆ ಬರಯುತ್ತೇನೆ ? - ಎಸ್ ಎಲ್ ಭೈರಪ್ಪ

Naneke Bareyuthene - S L Bhyrappa

 

ಭೈರಪ್ಪನವರು ಕನ್ನಡದ ಬಹು ಜನಪ್ರಿಯ ಲೇಖಕರು. ಅವರು ನೈಜತೆಗೆ ಹತ್ತಿರವಾಗಿ ಬರಯುತ್ತಾರೆ, ಅವರು ಬರಯುವ ಕಠೋರ ಸತ್ಯ ಕೆಲವರಿಗೆ ಹಿಡಿಸುವುದಿಲ್ಲ. ಅದಕ್ಕಾಗಿ ಅವರನ್ನು ಹೀಗೆಳೆಯುದು ಸಾಮಾನ್ಯ. ನಾವು ಯಾವುದೇ ಒಬ್ಬ ಲೇಖಕರ ಬರವಣಿಗೆಯನ್ನು ಟೀಕಿಸುವ ಮುನ್ನ ಅವರು ಯಾಕೆ ಮತ್ತು ಯಾವ ದೃಷ್ಟಿಕೋನದಿಂದ ಬರೆದ್ದಿದ್ದಾರೆ ಎಂದು ತಿಳಿದಿಕೊಳ್ಳಬೇಕು. ಲಿಲಿಯುವ ಮುನ್ನವೇ ಎಲ್ಲಾರು ಊಹ ಫೋಹಗಳನ್ನೂ ಹುಟ್ಟು ಹಾಕಿ ಲೇಖಕರ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಾರೆ. ಈ ಪುಸ್ತಕ ಭೈರಪ್ಪನವರು ಅವರು ಯಾವ ವಿಷಯವನ್ನು ಇಟ್ಟಿಕೊಂಡು ಅವರ ಕಾದಂಬರಿಗಳನ್ನು ಬರೆದ್ದಿದ್ದಾರೆ ಎಂದು ವಿವರಿಸುತ್ತಾರೆ.

ಈ ಪುಸ್ತಕದಲ್ಲಿ ಅವರು ಕಳೆದ ಹತ್ತು ವರ್ಷಗಳಿಂದ ಬರೆದ ಲೇಖನಗಳ ಸಂಗ್ರಹವಿದೆ. ಅವರು ಬರೆದ ಸಂದರ್ಭ ಮತ್ತು ಕಾಲವನ್ನು ಬರೆದ್ದಿದ್ದಾರೆ.

ಪುಸ್ತಕದಿಂದ:

"ನಾವು ಇಂಥಹದೇ ಕಾರಣಕ್ಕಾಗಿ ಬರಯುತ್ತೇವೆಂದು ಎಲ್ಲ ಲೇಖಕರೂ ತಮ್ಮ ಜೀವನದುದ್ದಕ್ಕೂ ಮಾರ್ಗದರ್ಶಿಯಾಗುವಂಥ ಗುರಿಯನ್ನು ಖಚಿತಮಾಡಿಟ್ಟುಕೊಂಡಿರುವುದು ಸಾಧ್ಯವಿಲ್ಲ. ಉಳಿದವರ ಮಾತು ಹೋಗಲಿ ನನ್ನ ಬರವಣಿಗೆಯ ಗೊತ್ತುಗುರಿಗಳು ಇನ್ನು ಒಂದು ವಾರದ ನಂತರ ಯಾವ ಧಾಟಿಯಲ್ಲಿ ಹೋಗುತ್ತದೆ ಎಂದು ಈ ದಿನ ನಿಶ್ಚಯವಾಗಿ ಹೇಳಲಾರೆ. ಕಳೆದ ಹದಿನೇಳು ವರ್ಷದಿಂದ, ಎಂದರೆ ೧೯೫೯ ರಿಂದ ಬರೆಯುತ್ತಿದ್ದೇನೆ. ಈ ಅವದಿಯಲ್ಲಿ ನನ್ನ ಬರವಣಿಗೆಯ ಯಾಕೆ ಏನುಗಳನ್ನು ಹಲವು ಬಾರು ವಿಮರ್ಷಿಸಿಕೊಂಡಿದ್ದೇನೆ, ಬದಲಿಸಿಕೊಂಡಿದ್ದೇನೆ. ಎಷ್ಟೋ ಸಲ ನಾನು ಪ್ರಜ್ಞೆಯ ಮಟ್ಟದಲ್ಲಿ ಆಲೋಚಿಸಿದ್ದ ರೀತಿಯನ್ನು ಮೀರಿ ಕೃತಿಗಳು ಸ್ವರೂಪ ತೆಳೆದಿದೆ. ಅವುಗಳ ಹೊಸ ಬೆಳಕಿನಲ್ಲಿ ನನ್ನ ಬರವಣಿಗೆಯ ದಿಕ್ಕು ಯಾವುದು ಉಂಟು. ಈ ಅರ್ಥದಲ್ಲಿ ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಯ ಉತ್ತರವೂ ಸಮಗ್ರವಾಗಿ ನನಗೇ ಪೂರ್ತಿಯಾಗಿ ಅರಿವಿಗೆ ಬಂದಿಲ್ಲವೆಂದು ಹೇಳಬಹುದು. ನನ್ನ ಬರವಣಿಗೆಯ ಆರಂಭಬಿಂದುವಿನಿಂದ ಇದುವರೆಗೆ ಬದಲಾದ ಕೆಲವು ಮೂಖ್ಯ ತಿರುವುಗಳನ್ನು ಸಮೀಕ್ಷಿಸಿ ಈಗ ಯಾವ ನಿಲುವಿಗೆ ಬಂದಿರುವೆನೆಂದು ಸೂಚಿಸುವ ಪ್ರಯತ್ನವನ್ನಷ್ಟೇ ಇಲ್ಲಿ ಮಾಡುತ್ತೇನೆ "

ಭೈರಪ್ಪವನರ ಕಾಬರಿಗಳ ಇಂದಿರುವ ಮತ್ತು ಅವರ ಅನಿಸಿಕೆಗಳನ್ನು ತಿಳಿಯಬೇಕಾದರೆ ಈ ಪುಸ್ತಕವನ್ನು ಓದಲೆಬೇಕು


ವೇದವ್ಯಾಸರು ಮಹಾಭಾರತವನ್ನು ಬರೆದಿದ್ದು ಯಾಕೆ ? = ನಿರುಪಾಮಾ

Vedavyasaru Mahabharathavannu Baredaddu Eke? - Nirupama

 

ಭಾರತದ ಎಲ್ಲಾ ಜನರಿಗೆ ಮಹಾಭಾರತ ಮತ್ತು ರಾಮಾಯಣ ಮಹಾ ಕಥೆಗಳ ಬಗ್ಗೆ ಗೊತ್ತು ಆದರೆ ಭಾಹುತೇಕ ಜನರು ಇದೊಂದು ಕಥೆಯಾಗಿ ನೋಡುತ್ತಾರೆ ಹೊರತು ಇದು ನಮ್ಮ ಸುಖ ಜೀವನಕ್ಕೆ ದಾರಿ ಎಂದು ನೋಡುವುದಿಲ್ಲ, ಡಾ. ನಿರುಪಮರವರು ಮಹಾಭಾರತವನ್ನು ವೇದವ್ಯಾಸರು ವಿಶ್ವದ ಜನರಿಗೆ ಯಾಕೆ ಕೋಡಿಯಾಗಿ ಕೊಟ್ಟರು ಮತ್ತು ಅದರಲ್ಲಿ ಇರುವ ವಿಶೇಷ ಸಂದೇಶ ವನ್ನು ಈ ಪುಸ್ತಕದಲ್ಲಿ ವಿಸ್ತಾರವಾಗಿ ಚರ್ಚಿಸಿದ್ದಾರೆ.

ವೇದವ್ಯಾಸರು ರಚಿಸಿರುವ ಮಹಾಬಾರತ ಒಂದು ಮಹಾಕಾವ್ಯ. ಇಲ್ಲಿ ಬರುವ ಶ್ರೀ ಕೃಷ್ಣ, ಅರ್ಜುನ, ದುರ್ಯೋದನ, ಕುಂತಿ, ಮತ್ತು ಇತರೆ ಪಾತ್ರಗಳಿಂದ ಹೇಳಿಸುವ ಜೀವನದ ದಾರಿ, ನಾವು ಹೇಗೆ ಜೀವನ ಮಾಡಬೇಕು, ಹೇಗೆ ಆದರ್ಶವಾಗಿರಬೇಕು ಇಲ್ಲಾದಿದ್ದರೆ ದುರ್ಯೋದನನ ರೀತಿ ದಾರಿತಪ್ಪುತ್ತರೆ. ಇಲ್ಲಿ ನಿರುಪಮರವರು ಬರೆಯುತ್ತಾರೆ

"ಮಹಾಭಾರತದಲ್ಲಿ ವೇದವ್ಯಾಸರು ಶ್ರೀ ಕೃಷ್ಣನ ಮೂಖದಿಂದ ಗೀತೋಪನಿಶತ್ತನ್ನು ನಿಕ್ಷಿಪ್ತಗೊಳಿಸಿ ಈ ಗ್ರಂಥಗೌರವವನ್ನು ಹೆಚ್ಚಿಸಿದ್ದಾರೆ. ಮಹಾಭಾರತದ ರಚನೆ ವೇದವ್ಯಾಸರ ಧರ್ಮಸಾಧನೆಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿದೆ. ಕಾಲ ಕಳೆದಂತೆ ನಾಗರಿಕತೆ ಬೆಳೆದಂತೆ ಯಾವುದೇ ಒಂದು ಕ್ಷೇತ್ರದ ಮೂಲ ವಿಸ್ತಾರಗೊಳ್ಳುತ್ತ ಹೊಸ ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತ ಆಗಿ ಆಳತೆಗೆ ಮೀರಿ ಬೆಳೆಯುತ್ತ ಹೋಗುತ್ತಾರೆ. ಅದು ಜ್ಞಾನದ ಸಹಜ ಸ್ವಭಾವ. ಇದರಿಂದಾಗಿ ಅದು ಒಂದು ಹಂತದಲ್ಲಿ ಸಂಕೀರ್ಣಗೊಂಡು ಅಗಮ್ಯವಾಗಲಾರಂಭಿಸುತ್ತದೆ ಗೋದಲ ಗಳೇರ್ಪಟ್ಟು ಸಂದಿಗ್ಥತೆಯನ್ನೊಡ್ಡುತ್ತದೆ. ಹೀಗೆ ಗೋಜಲು ಗೋಜಲಾಗಿ ಬೆಳೆದದ್ದನ್ನು ಎಳೆಬಿಡಿಸಿ ಬೇರ್ಪಡಿಸುವುದು, ವರ್ಗೀಕರಿಸಿ ಕ್ರಮಬದ್ದ ಮಾಡುವುದು ಅನಿವಾರ್ಯವಾಗುತ್ತದೆ. ಇದು ಬಹು ಕಷ್ಟಸಾಧ್ಯವಾದ ಕಾರ್ಯ. ಹೀಗೆ ಹಿಂದೆ ಒಂದು ಕಾಲದಲ್ಲಿ ವೇದವು ಅಪಾರವಾಗಿ ಬೆಳೆದು ಕೀಂಕಾರಣ್ಯದಂತೆ ವ್ಯಾಪಿಸಿತು, ಅವುಗಳಲ್ಲಿ ಕ್ಲಿಷ್ಟತೆ, ಸಂದಿಗ್ಥತೆ ತೋರಿತು ಅದ್ವಿತೀಯ ಪ್ರತಿಭಾ ಸಂಪನ್ನರೂ, ಆಪಾರ ತಪೋನಿಧಿಯೂ ಆಗಿದ್ದು ವ್ಯಾಸಋಷಿ ಈ ಸಿಕ್ಕು ಸಿಕ್ಕಗಿದ್ದ ವೇದಸಾಹಿತ್ವವನ್ನು ವಿಂಗಡಿಸಿ, ಕ್ರಮಬದ್ದವಾಗಿ ಸುಗುಮವಾಗುವಂತೆ ಮಾಡಿ ವೇದವ್ಯಾಸರೆಂದು ಪ್ರಸಿದ್ದರಾದರು. "

ಹೀಗೆ ನಿರುಪಮರವರು ರಾಮಾಯಣ ಮತ್ತು ಮಹಾಭಾರತವನ್ನು ವಾಲ್ಮೀಕಿ ಮತ್ತು ವೇದವ್ಯಾಸರು ಏಕೆ ಬರೆದರು, ಅವರ ಉದ್ದೇಶಗಳೇನು ಎಂದು ಈ ಪುಸ್ತಕದಲ್ಲಿ ಬರೆದಿದ್ದಾರೆ.

 

 



Saturday, November 16, 2013

ಮೂಕಧಾತು - ಕೆ ಎನ್ ಗಣೇಶಯ್ಯ

Mooka Dhatu  - K. N. Ganeshaiah

 

 

ಮೂಖ ಧಾತು ಗಣೇಶಯ್ಯನವರ ಹೊಸ ಕಾದಂಬರಿ. ಗಣೇಶಯ್ಯನವರು ಚರಿತ್ರೆಯ ಘಟನೆಗಳನ್ನು ಮತ್ತು ತಮ್ಮ ಕಾಲ್ಪನಿಕ ಕಥೆ ಎಣೆಯುವ ಶಕ್ತಿಯನ್ನು ಊಪಯಗಿಸಿ ಕಣ್ಣಿಗೆ ಕಟ್ಟಿದಹಾಗೆ ಕಾದಂಬರಿಗೆ ಜೀವ ತುಂಬುತ್ತಾರೆ. ನಮ್ಮ ಅಂದರೆ ಭಾರತೀಯ ಸಂಸ್ಕೃತಿಯನ್ನು ಎಲ್ಲ ಪುಟಗಳಲ್ಲಿ ಎತ್ತಿ ಹಿಡಿಯತ್ತಾರೆ. ನಾನು ಒದುದಿದ ಬಹುಥೇಕ ಕಾದಂಬರಿಗಳು ಪ್ರಾಚೀನ ಭಾರತದ ಸಂಸ್ಕೃತಿಯನ್ನು ಹೀಗೆಳೆಯುವ ಪ್ರಯತ್ನ ಮಾಡಿದರೆ ಮತ್ತೆ ಕೆಲವರು ಭಾರತವನ್ನು ತೆಗಳಿದರೆ ಮಾತ್ರ ತಮ್ಮ ಕಾದಂಬರಿಗಳು ಹೆಚ್ಚು ಹೆಚ್ಚು ಮಾರಾಟವಾಗುತ್ತವೆ ಅನ್ನೋ ರೀತಿಯಲ್ಲಿ ನಮ್ಮೆ ಭಾರತವನ್ನು ಬೆತ್ತಲೆ ಮಾಡಿ ನಿಲ್ಲಿಸುತ್ತಾರೆ. ಆದರ ಗಣೇಶಯ್ಯನವರ ಭಾರತದ ಅಧ್ಯತಿಮಿಕ,  ವೈಜ್ಞಾಯನಿಕ ಮತ್ತು ಸಾಂಸ್ಕ್ರುತಿಕ ಕೊಡಿಗೆಗಳನ್ನು ಎತ್ತಿ ಹಿಡಿಯುತ್ತಾರೆ. ಒಂದು ಕಾದಂಬರಿಯನ್ನು ಬರೆಯುವಾಗ ಅವರು ಮಾಡುವ ಆಳದ ಅಧ್ಯಯನ ಯಾರಿಗಾದರು ಬೆರಗು ಮೂಡಿಸುವಂಥದ್ದು. ಅವರು ಯಾದುದೆ ಮಾತನ್ನು ಗಾಳಿಯಲ್ಲಿ ಎತ್ತಿದ ಊಹ ಪೋಹಗಳಂತೆ ಬರವಣಿಗೆಯಲ್ಲಿ ಬಳಸುವುದಿಲ್ಲ, ಅವರ ಎಲ್ಲ ಮಾತುಗಳಿಗೂ ಪುಷ್ಟಿ ಮತ್ತು ಪುರವಗಳನ್ನು ಕೊದುತ್ತಾರೆ.
 

ಧಾತು(ಡಿಎನ್ಎ) ಎಲ್ಲ ಜೀವಗಳ ಒಂದು ಅತಿ ಮೂಖ್ಯ ಮತ್ತು ಮೂಲಭೂತ ಅಂಶ. ನಮ್ಮ ಬಹುತೆಕ ಕಾರ್ಯಗಳು, ಗುಣಗಳು, ಮತ್ತು ಚಟುವಟಿಕೆಗಳು ಈ ಧಾತುವಿನ ಮೇಲೆ ಅವಲಂಬಿಸಿರುತ್ತದೆ. ನಮ್ಮು ಅಸೆ, ಪ್ರೀತಿ, ಸ್ವಾರ್ಥ, ... ಇತರೆ ಗುಣಗಳು ನಮ್ಮ ಈ ಧತುವಿನಲ್ಲಿ ಇರುತ್ತದೆ ಎಂದು ವಿಜ್ಞಾಯನಿಗಳು ಸಂಶೋಡಿಸಿ ದೃಡಪಡಿಸಿರುತ್ತಾರೆ. ಈ ಕಾದಂಬರಿಯಲ್ಲಿ ಆ ಧಾತುವಿನ ಎಳೆಯನ್ನು ಇಟ್ಟಿಕೊಂಡು ಎಣೆದಿರುರುವ ಒಂದು ಒಳ್ಳೆಯ ಕಾದಂಬರಿ. ಇಲ್ಲಿ ಕ್ರಿ.ಶ. ೧೧೫ ರಲ್ಲಿ ಭಾರತದಲ್ಲಿ ಆಗುತ್ತಿದ್ದ ಬೌದ್ಧ ಧರ್ಮದ ಜನಪ್ರಿಯತೆ ಮತ್ತು ಅವರ ಸಂಶೋದನೆ ಇಂದ ಹಿಡಿದು ಈಗಿನ ೨೦೧೨ ರ ವರಗೆ ಕಥೆಯನ್ನು ಎಣೆದ್ದಿದ್ದಾರೆ. ನಮ್ಮ ಸ್ವರ್ಹ್ತ ಧಾತುವನ್ನು ನಿಷ್ಕ್ರಿಯಗೊಳಿಸಲು ನಗರ್ಜುನರು ಕಂಡು ಹಿಡಿದ್ದಿದ್ದ ಪುಡಿ ಮತ್ತು ಬೂದಿಗಳ ತಯಾರಿಕೆಯ ಪುಸ್ತಕಗಳು ರಾಜರಿದ ರಾಜರಿಗೆ ವರ್ಗವನಣೆಯಾಗಿ ಕೊನೆಗೆ ಚೀನಾ ದೇಶ ಸೇರುತ್ತದೆ. ಇದರ ರಹಸ್ಯ ತಿಳಿದ ಚೀನಾದವರು ಅದನ್ನು ಭೂಮಂಡಲಕ್ಕೆ ಹವಯಲ್ಲಿ ವೈರಸ್ ರೀತಿ ಹರಡಿ ಎಲ್ಲರ ಅದಿಪತಿಯಾಗಿ ಮೆರೆಯಬೇಕು ಎಂದು ವಿಜ್ಞಯನಿಗಳನ್ನು ಬಂದಿಸಿ ಅವರಿಂದ ಅದಕ್ಕೆ ಬೇಕಾಗುವ ಕಾರ್ಯಗಳನ್ನು ಮಾಡಿಸುತ್ತಾರೆ. ಅದು ಹೇಗೆ ಅಂತ್ಯವಾಗುತ್ತದೆ ಮತ್ತು ಅದರ ಇಂದೇ ಯಾರು ಯಾರು ಕೆಲಸ ಮಾದಿತ್ತಾರೆ ಎನ್ನುವುದನ್ನು ಕಾದಂಬರಿ ಓದಿ ತಿಳಿಯಬೇಕು.

ಹಿನ್ನುಡಿ ಇಂದ :

ಈ ಕಾದಂಬರಿಯಲ್ಲಿ ಮೂರು ವಿಷಯಗಳನ್ನು ನಾನು ಮುಖಾಮುಖಿಯಾಗಿ ತರಲು ಪ್ರಯತ್ನಿಸಿರುವುದನ್ನು ಓದುಗರು ಗಮನಿಸಿರುತ್ತಾರೆ. ಆದರೂ, ಅವನ್ನು ನಾನು ಮತ್ತೆ ಚರ್ಚೆಗೆ ತರಲು ಬಯಸುತ್ತೇನೆ.

೧. ದೇವರು, ಧರ್ಮ ಮತ್ತು ವಿಜ್ಞಾನ

ಧರ್ಮ ಮತ್ತು ವಿಜ್ಞಾನಗಳ ನಡುವೆ ಇರಬಹುದಾದ ಸಾಮರಸ್ಯ ಮತ್ತು ವೈರುಧ್ಯ ಹಲವು ರೀತಿಯ ಜಿಜ್ಞಾಸೆಗಳಿಗೆ ಕಾರಣವಾಗಿದ್ದು ಅದು ಎಂದಿಗೂ ಬಗೆಹರಿಯದ ಕಗ್ಗಂಟಾಗಿಯೆ ಉಳಿದಿದೆ-ಉಳಿಯುತ್ತದೆ. ಧರ್ಮ ಮತ್ತು ವಿಜ್ಞಾನಗಳೆ ರಡೂ ಸಹ ಸತ್ಯಾನ್ವೇಷಣೆಯ ವಿಭಿನ್ನ ದಾರಿಗಳಷ್ಟೆ ಎಂಬ ವಾದವು ಅವೆರಡರ ಸಾಮರಸ್ಯತೆಯನ್ನು ಸಮರ್ಥಿಸಿಕೊಂಡರೆ, ಆ ಸತ್ಯವನ್ನು ಹುಡುಕಲು ಅವು ಅನುಸರಿಸುವ ವಿಭಿನ್ನವಾದ ವಿಧಾನಗಳು ಅವುಗಳ ಮಧ್ಯದ ವೈರುಧ್ಯವನ್ನು ದೃಷ್ಟೀಕರಿಸುತ್ತವೆ. ಆದರೆ ಧರ್ಮವು ಆಧ್ಯಾತ್ಮಿಕ ರೂಪದಲ್ಲಿ ವಿಜ್ಞಾನದ ಎದುರು ನಿಂತಾಗ ಇಂತಹ ಹಲವು ವೈರುಧ್ಯಗಳು ಮಾಯವಾಗುತ್ತವೆ. ಅಷ್ಟೆ ಅಲ್ಲ, ಕೆಲವೊಮ್ಮೆಯಂತೂ ವಿಜ್ಞಾನ ಮತ್ತು ಆಧ್ಯಾತ್ಮಗಳ ನಡುವಿನ ಅಂತರವೂ ಸಹ ಕಡಿಮೆಯಾಗುತ್ತದೆ. ಉದಾಹರಣೆಗೆ,
ಕೆಲವು ವೇದ-ಉಪನಿಷತ್ತುಗಳಲ್ಲಿ ಕಂಡುಬರುವ ಪ್ರಕೃತಿಯ ವಿಸ್ಮಯದ ಹುಡುಕಾಟವು, ನಮ್ಮ ಅಸ್ತಿತ್ವದ ಅರ್ಥ ಅಥವ ಅದರ ಉದ್ದೇಶಕ್ಕಾಗಿ, ವಿಜ್ಞಾನಿಗಳು ತೊಡಗಿಕೊಳ್ಳುವ ಹುಡುಕಾಟದಿಂದ ಯಾವುದೇ ರೀತಿಯಲ್ಲಿ ಭಿನ್ನವೆನಿಸದು. ಇನ್ನು ವೃಕ್ಷಾಯುರ್ವೇದಗಳು, ಬೌದ್ಧ ಧರ್ಮದ ಆಧ್ಯಾತ್ಮಿಕತೆಯೊಂದಿಗೆ ಗುರುತಿಸಿಕೊಳ್ಳುವ ಯೋಗ, ಧ್ಯಾನಗಳಂತೂ ಆಯಾ ಕಾಲ ಘಟ್ಟಗಳ ವಿಜ್ಞಾನ ಭಂಡಾರಗಳೆಂದೆ ಪರಿಗಣಿಸಬಹುದು.

ಹೀಗಿದ್ದೂ, ವಿಜ್ಞಾನ ಮತ್ತು ಧರ್ಮಗಳು ಹಲವು ವಿಷಯಗಳಲ್ಲಿ ತದ್ವಿರುದ್ದ ದೃಷ್ಟಿಯನ್ನು ಹೊಂದಿರುವುದು ಎಲ್ಲರಿಗೂ ವಿದಿತ. ಅಂತಹ ಒಂದು ಅತೀ ಪರಿಚಿತ ವಸ್ತುವೆಂದರೆ- ದೇವರು!
ದೇವರು ಕೇವಲ ನಂಬಿಕೆಯೆ?
ಅಥವಾ..
ದೇವರು ನಾವರಿಯದ ಸತ್ಯದ ಪರಿಕಲ್ಪನೆಯೆ?
ಅಥವಾ...
ವಿಜ್ಞಾನದ ಭಾಷೆಯ ಕ್ಲಿಷ್ಟತೆಗೆ ಸಿಕ್ಕಿಹಾಕಿಕೊಂಡಿರುವ ನಮ್ಮ ನಾಗರೀಕತೆಯು,  ದೇವರ ಮೂಲ ಅರ್ಥವನ್ನು ನಿರೂಪಿಸಲಾಗದೆ ತೊಳಲಾಡುತ್ತಿದೆಯೆ? ಧರ್ಮಗಳು ಉಪಯೋಗಿಸುವ ದೇವರ ಬಗೆಗಿನ ವ್ಯಾಖ್ಯಾನವನ್ನು ವೈಜ್ಞಾನಿಕವಾಗಿಯೂ ವಿಶ್ಲೇಷಿಸ ಬಹುದೆ? ಅಂತಹ ಪ್ರಯತ್ನ ಮಾಡುವುದರಿಂದ ವಿಜ್ಞಾನದ ವಾಸ್ತವಿಕತೆಗೆ ಕುತ್ತು ಬರುವ ಸಂಭವವಿದೆಯೆ? ಇಂತಹ ಪ್ರಶ್ನೆಗಳ ಹಿನ್ನೆಲೆಯಲ್ಲಿ ನಾನು ಡಾ| ಜೋಶಿಯ ವ್ಯಕ್ತಿತ್ವವನ್ನು ನಿರೂಪಿಸಿ ದ್ದೇನೆ.

೨. ಆಸೆ ಮತ್ತು ನಾಗರೀಕತೆ

ಆಸೆಯೆ ದುಃಖಕ್ಕೆ ಮೂಲ, ಆಸೆಯನ್ನು ತೊರೆದಾಗಲೆ ಮಾನವನಿಗೆ ಸುಖ, ಎಂದು ಬೌದ್ಧಧರ್ಮಾದಿಯಾಗಿ ಎಷ್ಟೋ ಧರ್ಮ-ಬೋಧನೆಗಳು ಸಾರಿವೆ, ಸಾರುತ್ತಿವೆ.  ಪ್ರಪಂಚದಾದ್ಯಂತ ಈ ನಂಬಿಕೆಯನ್ನು ಒಂದು ಪ್ರಮುಖವಾದ ಆದರ್ಶವೆಂದೂ ಪರಿಗಣಿಸಲಾಗಿದೆ. ಆಸೆಗಳು ಮಾನವನನ್ನು ಲೋಲುಪ್ತತೆಗೆ ನೂಕಿ, ಆತ ಪ್ರಕೃತಿಯ ಸಂಪತ್ತನ್ನು ಹಿಂಡಿ ಹೀರುವಂತೆ ಮಾಡಿ, ಇಡೀ ನಾಗರೀಕತೆಯನ್ನು ಮತ್ತು ಪ್ರಪಂಚವನ್ನು ವಿನಾಶದತ್ತ ಕರೆದೊಯ್ಯುತ್ತವೆ ಎನ್ನುವುದು ಈ ವಾದದ ಒಂದು ಪ್ರಮುಖ ಆಯಾಮ. ಪ್ರಸ್ತುತದಲ್ಲಿ ಪ್ರಪಂಚದ ಹಲವು ವಿದ್ಯಮಾನಗಳು ಇದಕ್ಕೆ ಪುರಾವೆ ಒದಗಿಸುತ್ತಿರು ವಂತೆಯೂ ಕಾಣುತ್ತಿದೆ.

ಆದರೆ ಆಸೆಗಳೆ ಮಾನವನ ಸೃಜನಾತ್ಮಕತೆಗೆ ಅಧಾರವಲ್ಲವೆ? ಮಾನವನಲ್ಲಿ ಆಸೆಗಳೆ ಇಲ್ಲದಿದ್ದಲ್ಲಿ ನಮ್ಮ ನಾಗರೀಕತೆಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವೆ? ವಿಕಾಸವಾದದ ಹಿನ್ನೆಲೆಯಿಂದ ನೋಡಿದಾಗ, ಯಾವುದೇ ಗುಣ ಆಯಾ ಪ್ರಬೇಧದ ಉನ್ನತಿಗೆ ಉಪಯೋಗವಾಗದಿದ್ದಲ್ಲಿ, ಅದು ವಿಕಾಸಗೊಳ್ಳದು. ಹಾಗಿರುವಾಗ, ಮಾನವ ನಲ್ಲಿ ವಿಶೇಷವಾಗಿ ವಿಕಾಸಗೊಂಡಿರುವ ಈ ಆಸೆಗಳಿಂದ ಮಾನವ ಸಮೂಹಕ್ಕೆ, ಸಮಾಜಕ್ಕೆ ಪ್ರಯೋಜನವಿದೆಯೆಂದು ಭಾವಿಸಬಹುದೆ? ಬಹುಶಃ ಇದರಿಂದಲೆ ಆಸೆ ರಹಿತ ಮಾನವರು (ನಿಸ್ವಾರ್ಥಿಗಳು) ಅಥವ ಮಿತ-ಆಸೆಗಳುಳ್ಳವರು ವಿರಳವಿರಬಹುದೆ? ಇಂತಹ ಪ್ರಶ್ನೆಗಳು ಆಸೆಗಳ ಬಗೆಗಿರುವ ಧಾರ್ಮಿಕ ವಾದಕ್ಕೆ ಪ್ರತಿರೋಧವನ್ನು ಒಡ್ಡುವುದು ಸಹಜ.

ಈ ದ್ವಂದಕ್ಕೆ ಉತ್ತರ ಹುಡುಕುವಲ್ಲಿ 'ಆಸೆ'ಗಳ ವ್ಯಾಖ್ಯಾನ ಅತಿ?ಮುಖ್ಯ, ಆದರೆ ಅದು ಬಹುಶಃ ಅಸಾಧ್ಯ. ನಮಗಿರುವ ಹಲವು ರೀತಿಯ ಸ್ವಾಭಾವಿಕ ಬಯಕೆಗಳಾದ - ಹಸಿವು, ದಾಹ, ಕಾಮ, ನಿದ್ದೆ, ಇಂತಹವು ನಮ್ಮ ಉಳಿವಿಗೆ, ಪುನರಾಭಿವೃದ್ದಿಗೆ ಪೂರಕವಾಗಿ ವಿಕಾಸಗೊಂಡಿರುವ ಅವಶ್ಯಕತೆಗಳು. ಆದರೆ, ಅವಕ್ಕೂ ಮಿಗಿಲಾಗಿ ಮಾನವಲ್ಲಿ ಉದ್ಭವಿಸುವ ಬಯಕೆಗಳು ಅಥವ ಆಸೆಗಳು, ಬಹುಪಾಲು ನಮ್ಮ ಚಿಂತನಾ ಶಕ್ತಿಯ ವಿಕಾಸದೊಂದಿಗೆ ಬೆಳೆದಿರುವ ಮನಸ್ಸಿನ ಲಹರಿಗಳು. ಹಾಗಾಗಿ ಮನಸ್ಸನ್ನು ಅಂತಹ ಆಸೆಗಳಿಂದ ಮುಕ್ತಗೊಳಿಸಬೇಕೆಂದರೆ ಆತನ ಯೋಚನಾಶೀಲತೆಯನ್ನೆ ಜಡವಾಗಿಸಬೇಕಾಗಬಹುದು. ಮಾನವ ಹಾಗೆ ಯೋಚನಾರಹಿತನಾದಲ್ಲಿ ಅವನ ಆವಿಷ್ಕಾರ ಶಕ್ತಿ ಕುಂದಿ, ನಾಗರೀಕತೆಗೆ ಆಪತ್ತು ಬರುವ ಸಾಧ್ಯತೆ ಇದೆ ಎನ್ನುವ ಅಂಶ ಧರ್ಮ ಬೋಧನೆಗಳನ್ನು ಕಣ್ಣುಮುಚ್ಚಿ ಸ್ವೀಕರಿಸಿರುವ ಸಮಾಜಕ್ಕೆ ಎಚ್ಚರಿಕೆಯನ್ನು ನೀಡುತ್ತದೆ. ಹಾಗಾಗಿ ವಿಜ್ಞಾನ, ಆಧ್ಯಾತ್ಮಿಕತೆ ಮತ್ತು ಧರ್ಮಗಳು ಈ ವಿಷಯವನ್ನು ಅತಿ ಸೂಕ್ಷ್ಮವಾಗಿ ಚರ್ಚಿಸಬೇಕಿದೆ.

೩. ಸ್ವಾರ್ಥ ಮತ್ತು ಜೀವ

ಸ್ವಾರ್ಥವನ್ನು ತುಚ್ಛವಾಗಿ ಕಾಣುವ ನಮ್ಮ ಸಂಸ್ಕೃತಿ ಅಚ್ಚರಿಪಡಬೇಕಾದ ವಿಷಯ ವೆಂದರೆ ಆ ಸ್ವಾರ್ಥವು ಎಲ್ಲ ಜೀವಿಗಳ ವಿಕಾಸಕ್ಕೆ ಇಂಧನವಾಗಿರುವುದಷ್ಟೆ ಅಲ್ಲದೆ, ವಿಕಾಸದ ಹಾದಿಯಲ್ಲಿ ಮಾನವ ಕಾಣಿಸಿಕೊಳ್ಳುವ ಗತಿಯನ್ನು ನಿರ್ಣಯಿಸುವ ಅಗೋಚರ ಶಕ್ತಿಯಾಗಿದೆ ಕೂಡ. ಆ ಸ್ವಾರ್ಥವಿಲ್ಲದಿದ್ದಲ್ಲಿ ನಾವು ನಮ್ಮ ಮಕ್ಕಳನ್ನು ಸಾಕಿ ಸಲಹುತ್ತಿರಲಿಲ್ಲ; ಅವರನ್ನು ಬೆಳೆಸಿ ಕಾಪಾಡುತ್ತಿರಲಿಲ್ಲ. ಅದು ನಮ್ಮೆಲ್ಲರ ಹುಟ್ಟಿಗೆ, ಉಳಿವಿಗೆ, ವಿಕಾಸಕ್ಕೆ, ಆಧಾರ. ಹೀಗಿರುವಾಗ ಆ ಸ್ವಾರ್ಥಕ್ಕೆ ಕಡಿವಾಣ ಹಾಕುವುದೆಂದರೆ? ಇದು ಪ್ರಕೃತಿ ನಿಯಮಕ್ಕೆ ವಿರೋಧ ಮಾಡಿದಂತೆ.

ಆದರೆ..ಮಾನವ ಜೀವವಿಕಾಸದ ಹೊರತಾಗಿ ನಾಗರೀಕತೆಯನ್ನು ನಿರ್ಮಿಸಿದ್ದಾನೆ, ಸಂಸ್ಕೃತಿಯನ್ನು ಬೆಳೆಸಿ ರೂಢಿಸಿಕೊಂಡಿದ್ದಾನೆ. ಅವನಲ್ಲಿ ಸಂಸ್ಕೃತಿಯ ವಿಕಾಸ, ಜೀವವಿಕಾಸಕ್ಕಿಂತ ವೇಗವಾಗಿ ನಡೆಯುತ್ತಿದೆ. ಈ ವಿಕಾಸದಲ್ಲಿ ಸ್ವಾರ್ಥಕ್ಕೆ ಜಾಗವಿಲ್ಲ, ಅದರ ಅವಶ್ಯಕತೆಯಿಲ್ಲ ಎಂದು ಕೆಲವರು ವಾದಿಸಬಹುದು. ಆದರೆ..

ಸಕಲ ಜೀವಿಗಳ ಪುನರಾಭಿವೃದ್ಧಿಗೆ ಮೂಲಾಧಾರವಾದ ಈ ಸ್ವಾರ್ಥವನ್ನು ನಿಗ್ರಹಿಸುವುದೆಂದರೆ, ಅದು ಜೀವವನ್ನೇ ಬೆಳೆಯದ ಹಾಗೆ ಮಾಡಿದಂತೆ. ವಿಕಾಸದ ಕತ್ತು ಹಿಸುಕಿದಂತೆ. ಹಾಗಾಗಿ ಸ್ವಾರ್ಥವನ್ನು ನಿಗ್ರಹಿಸುವುದೆಂದರೆ ಈ ಭೂಮಿಯ ಮೇಲೆ ಮಾನವನನ್ನೂ ಮೀರಿದ ಜೀವಪ್ರಭೆಯೊಂದು ವಿಕಾಸಗೊಳ್ಳುವುದನ್ನು ತಡೆದಂತೆ. ಆ ಹಕ್ಕು ನಮಗಿದೆಯೆ? ನಾವು ಅಂತಹ ವಿಕಾಸವಿರೋಧಿ ಕ್ರಮಗಳನ್ನು ಪ್ರೇರೇಪಿಸ ಬಹುದೆ? ಅದು ಪ್ರಕೃತಿವಿರೋಧವಲ್ಲವೆ?

ಇವೆಲ್ಲವೂ ಈ ಕಾದಂಬರಿಯ ರಚನೆಯ ಸಮಯದಲ್ಲಿ ನನ್ನಲ್ಲಿ ಮೂಡಿದ ಪ್ರಶ್ನೆಗಳು, ದ್ವಂದ್ವಗಳು. ಹಾಗಾಗಿ ಈ ಮೂರೂ ವಿಷಯಗಳನ್ನು ಸಾಧ್ಯವಾದಷ್ಟೂ ಮುಖಾಮುಖಿಯಾಗಿ ತರಲು ಪ್ರಯತ್ನಿಸಿದ್ದೇನೆ. ಇದೇ ಕಾರಣದಿಂದ ಇಲ್ಲಿ ಕತೆ ನಿಮಿತ್ತ ಮತ್ತು ಈ ವಿಷಯಗಳ ಮುಖಾಮುಖಿ ಚರ್ಚೆ ಈ ಕಾದಂಬರಿಯ ಮೂಲ ಉದ್ದೇಶ. ಆ ವಿಷಯಗಳೆ ಈ ಕಾದಂಬರಿಯ ಮನೆಯೊಳಗಿನ ಕುಟುಂಬದ ಜೀವಂತ ವ್ಯಕ್ತಿಗಳು. ಕತೆ ಕೇವಲ ಇಟ್ಟಿಗೆ, ಗೋಡೆ, ಸುಣ್ಣ.

ಈ ಮೂರೂ ವಿಷಯಗಳ ಇನ್ನೂ ಹಲವಾರು ಆಯಾಮಗಳನ್ನು ನಾನು ಕಾದಂಬರಿಯಲ್ಲಿ ಚರ್ಚಿಸುವ ಇಚ್ಛೆ ಇತ್ತಾದರೂ, ಅಂತಹ ಎಲ್ಲ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗದ ಕಾರಣ ಕೆಲವು ಕೋನಗಳ ಮಂಥನವನ್ನು ಓದುಗರಿಗೆ ಬಿಟ್ಟಿದ್ದೇನೆ. ಇದನ್ನು ಓದುಗರು ಗಮನಿಸುವರೆಂದು ಆಶಿಸುತ್ತೇನೆ.

 



Tuesday, August 27, 2013

ಚೋಮನ ದುಡಿ - ಶಿವರಾಮ ಕಾರಂತ

Chomana Dudi - Shivarama Karanth




ಈ ಕಾದಂಬರಿಯಲ್ಲಿ ಬಹಳವಾಗಿ ದಕ್ಷಿಣಕನ್ನಡ ಜಿಲ್ಲೆಯ ಹೊಲೆಯರ ಜೀವನಚಿತ್ರವಿದೆ. ಅಸ್ಪೃಶ್ಯರಾದ ಹೊಲೆಯರ ತಂಡದಲ್ಲಿ ಮೇರ, ಬೈರ, ಅಜಿಲ, ಮಾರಿ - ಎಂದು ನಾಲ್ಕಾರು ಬೇರೆ ಬೇರೆ ಭಾಗಗಳಿವೆ. ಅವರಲ್ಲಿ ಮೇರರು ಸಾಗುವಳಿಯನ್ನು ಮಾಡಿಕೊಂಡಿರಲು ಸಾಧ್ಯವಿದೆ. ಆದರೆ, ತೀರ ಕೆಳಗಿನವರೆಂದು ಎಣಿಸಲ್ಪಡುವ ಮಾರಿ ಹೊಲೆಯರಿಗೆ ಅಷ್ಟು ಅವಕಾಶವನ್ನು ಸಮಾಜ ಕೊಡುತ್ತಲಿಲ್ಲ. ದಕ್ಷಿಣಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿ ಈ ಜನರನ್ನು ಇಂದಿಗೂ ಕೂಲಿಗೆ ಕರೆಯುವುದಿಲ್ಲ. ಆದರೆ ದಕ್ಷಿಣ ಭಾಗದಲ್ಲಿ ಹೊಲಗೆಲಸಗಳಿಗೇನೋ ಕರೆಯುತ್ತಾರೆ. ಅಂಥ ಬಳಗದ ಜೀವಿಯು ಚೋಮ. ಈತನೇ ಈ ಕಾದಂಬರಿಯ ಕಥಾನಾಯಕ.

ಚೋಮನದುಡಿ’ಯು ಕಾರಂತರ ಸಾಮಾಜಿಕ ದರ್ಶನಕ್ಕೆ ಹಿಡಿದ ಕನ್ನಡಿಯಂಥ ಕಾದಂಬರಿಯಾಗಿದೆ. ಈ ದೇಶದ ವಿದ್ಯಾವಂತರೆಲ್ಲ ಬ್ರಿಟಿಷರನ್ನು ಭಾರತದಿಂದ ಹೊರ ಹಾಕಿದರೆ, ನಮ್ಮ ಬಹುತೇಕ ಸಮಸ್ಯೆಗಳೆಲ್ಲ ಪರಿಹಾರವಾಗಿ ಬಿಡುತ್ತವೆ ಎಂದು ಕನಸು ಕಾಣುವ ಕಾಲದಲ್ಲಿ ಕಾರಂತರು ಚೋಮನದುಡಿಯಂಥ ಪುಟ್ಟ ಕಾದಂಬರಿಯನ್ನು ಬರೆದರು. ಕಾರಂತರ ಪ್ರಕಾರ ಈ ನಾಡಿನ ಸಮಸ್ಯೆ ಭೂಮಿಯ ಅಸಮರ್ಪಕ ಹಂಚಿಕೆಯಲ್ಲಿದೆ. ಈ ಸಮಸ್ಯೆಯು ಅಸ್ಪೃಶ್ಯತೆಯಂಥ ಪಿಡುಗಿನೊಂದಿಗೆ ಸೇರಿಕೊಂಡು, ಪರಿಸ್ಥಿತಿ ತೀರ ಸಂಕೀರ್ಣವಾಗಿದೆ.

ಚೋಮನದುಡಿ ಕಾದಂಬರಿಯಲ್ಲಿ ಮೂರು ಭಿನ್ನಭಿನ್ನ ವರ್ಗಕ್ಕೆ ಸೇರಿದ ಜನರಿದ್ದಾರೆ. ಮೊದಲನೆಯ ವರ್ಗವು ಪಾರಂಪರಿಕ ನಂಬಿಕೆಯನ್ನು ಪ್ರಕಟಪಡಿಸುವ, ಯಾವುದೇ ಬದಲಾವಣೆಯನ್ನು ಒಪ್ಪಲು ತಯಾರಿಲ್ಲದ ಸಂಕಪ್ಪಯ್ಯ ಮತ್ತು ಅವನ ತಾಯಿಯದು. ಎರಡನೆಯದು, ಇಂಥ ನಂಬಿಕೆಗಳ ಕಾರಣವಾಗಿಯೇ ಶೋಷಣೆಗೊಳಗಾಗುವ ಚೋಮ ಮತ್ತು ಅವನ ಕುಟುಂಬ ವರ್ಗದ್ದು. ಮೂರನೆಯದು, ಮೇಲಿನೆರಡೂ ಲೋಕಕ್ಕೆ ಅಪರಿಚಿತವಾಗಿರುವ, ಆದರೆ ಆಧುನಿಕ ತಿಳುವಳಿಕೆ ಮತ್ತು ಕಾನೂನುಗಳ ಸಹಾಯದಿಂದ, ಜನಪರ ಎಂದು ತೋರಿಸಿಕೊಳ್ಳುವ, ಸಂಪ್ರದಾಯಗಳಿಗೆ ಇದಿರಾಗಿರುವ ಕ್ರಿಶ್ಚಿಯನ್ ಲೋಕ. ಈ ಮೂರು ಲೋಕಗಳ ನಡುವಣ ಸಂಘರ್ಷವೇ ಕಾದಂಬರಿಯ ಉಸಿರು. ಸಂಘರ್ಷವನ್ನು ಕಾರಂತರು ನಿರ್ವಹಿಸಿದ ರೀತಿಯೇ ಅವರನ್ನು ದಲಿತ ಬಂಡಾಯ ಬರಹಗಾರರಿಗಿಂತ ಭಿನ್ನವಾಗಿ ನೋಡುವಂತೆ ಮಾಡಿದೆ.




Friday, August 16, 2013

ದ್ಯಾವನೂರು ಹಾಗು ಒಡಲಾಳ - ದೇವನೂರು ಮಹಾದೇವ

Dyavanooru Hagu Odalaala - Devanura Mahadeva


ದ್ಯಾವನೂರು ಕಥಾಸಂಕಲನ:-

೧. ಮಾರಿಕೊಂಡವರು
೨. ಗ್ರಸ್ತರು
೩. ಒಂದು ದಹನದ ಕಥೆ
೪. ದತ್ತ
೫. ಡಾಂಬರು ಬಂದುದು
೬. ಮೂಡಲ ಸೇಮೇಲಿ ಕೊಲೆಗಿಲೆ ಮೂಂತಾಗಿ
೭. ಅಮಾಸ

ನನ್ನ ಮೇಲೆ ಅತಿಗಾಢವಾಗಿ ಪರಿಣಾಮ ಮಾಡಿ ನನ್ನ ಈವರೆಗಿನ ಬರವಣಿಗೆಯ ಮಿತಿಗಳಿಗೆ ನನ್ನ ಕಣ್ತೆರೆಯಿಸಿದ ಈ "ದ್ಯಾಅನೂರು" ಕಥಾ ಸ೦ಕಲನವನ್ನು ಮೊದಲ ಬಾರಿಗೆ ಓದಿದಾಗ ಅದರ ತಾಜಾತನಕ್ಕೆ ಮನಸ್ಸು ತೆರೆಯುತ್ತಿರುವಫ಼ಲೇ ಅದು ಪ್ರಕಟಿಸಿದ ಸತ್ಯಗಳಿ೦ದಾಗಿ ಓದಿನ ಕೊನೆಯಲ್ಲಿ ಮನಸ್ಸಿನಲ್ಲಿ ಸ್ಥಾಯಿಯಾಗಿ ನಿ೦ತ್ತದ್ದು ಹರವಾದ ಕೃತಜ್ಞತಾಭಾವ.

ದೇವನೋರು ಮಹಾದೇವರ ಬರವಣೆಗೆಯಲ್ಲಿ ನಮಗೆ ತಪ್ಪದೇ ಜೂಮ್ಮುದಟ್ಟಿಸಿವುದು ಇಲ್ಲಿ ಬಂದ ಅನುಭವದ ಪ್ರಾಮಾಣಿಕತೆ ಹಾಗೂ ಈ ಅನುಭವ ಯಾವ ಒಂದು ಸುಳ್ಳಿನ ಅಪಸ್ವರ ಅಬ್ಬಿಸದೇ ಅಷ್ಟೇ ಪ್ರಾಮಾಣಿಕವಾಗಿ ಭಾಷೆಯಲ್ಲಿ ಸಶರೀರವಾಗುವ ಸಾಚಾ ರೀತಿ. ಹೀಗೆ ತಾನು ಹಿಡಿದಿಟ್ಟ ಅನುಭವ ಅದರ ಹುಟ್ಟಿಗೆ ಕಾರಣವಾದ ಸಾಮಾಜಿಕ ಸಂದರ್ಭದಲ್ಲಿ ನಿಜವಾಗುವಾಗಲೇ ಅದರ ಮಾನವೀಯ ಆಯಾಮಗಳನ್ನು ಸ್ಪಷ್ಟವಾಗಿ, ಆದರೂ ಕಳತಮಕವಾಗಿ, ಆದ್ದರಿಂದಲೇ ನಮಗೆ ನೇರವಾಗಿ ಮುಟ್ಟುವಂತೆ ತೆರೆದು ತೋರಿಸುವಲ್ಲಿ, ತೋರಿಸಿ ಆ  ಸಂದರ್ಭವನ್ನೇ ಹೊಸ ಬೆಳಕಿನಲ್ಲಿ ನೋಡುವಂತೆ ಮಾಡುವುದರಲ್ಲಿ ಇಲ್ಲಿಯ ಪ್ರತಿಯೋದು ಕತೆಯೂ ಅಸಾಧಾರಣವಾದ ಯಸಸ್ಸುನ್ನು ಹಳಿಸಿದೆ.


                                                                                                    - ಯಶವಂತ ಚಿತ್ತಾಲ

ಒಡಲಾಳ :-

ಜಗತ್ಪ್ರಸಿದ್ದ ಕಲ್ಲವಿದ ವ್ಯಾನಗೋ ಸಮಗ್ರ ಕಲಾಕೃತಿ ಸರಣಿಗೂ, ಒಡಲಾಳದ ಕಥೆಯ ಘಟನಾವಳಿಗಳಿಗೂ ಒಂದು ಆಶ್ಚರ್ಯಕರವಾದ ಸಾಮ್ಯತೆಯಿದೆ. ಮತ್ತು ಸೃಸ್ಟೀಕರಿಸಿ ಹೇಳುದಾದರೆ ವ್ಯಂಗೋನ 'ಫೋಟಾಟೋ ಈಟರ್ರ್ಸ್' ಕೃತಿಗೂ ಒಡಲಾಳದ ಕಡ್ಲೇಕಾಯಿ ತಿನ್ನುವ ಪ್ರಸಂಗಕ್ಕೂ ಇರುವ ಸಾಮಾನ್ಯ ಅಂಶವಂದರೆ - ಎರಡೂ ಪ್ರಸಂಗಗಳು ಕತ್ತಲೆಯ ರಾತ್ರಿಯಲ್ಲಿ, ದೀಪದ ಕೃತಕ ಬೆಳಕಿನಲ್ಲಿ ನಡೆಯುತ್ತಿದ್ದು ನಿಜಕ್ಕೂ ಹಸಿದವರ 'ಯಜ್ಞ'ವಾಗಿ ತೊರಿಬರುತ್ತವೆ. ಮತ್ತೊಂರ್ಥದಲ್ಲಿ ಅನೇಕ ಆವೃತ್ತಿಗಳಲ್ಲಿರುವ  'ಲಾಸ್ಟ್ ಸಪ್ಪರ್' ಪೇಂಟಿಂಗ್ಗಳ ಧಾರ್ಮಿಕ ತೀವ್ರತೆಯ ಫೋಟಾಟೋ  ಈಟರ್ರ್ಸ್'  ಮತ್ತು ಒಡಲಾಳದ ಈ ಪ್ರಸಂಗಕ್ಕೆ ಸಹಜವಾಗಿಯೇ ದಕ್ಕಿದೆ.

                                                                                                     - ಅನಿಲ್ ಕುಮಾರ್  

 

ಕನ್ನಡ ಸಾಹಿತ್ಯಕ್ಕೆ ಹೊಸ ಆಯಾಮ ನೀಡಿದ ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಬರಹಗಾರರಲ್ಲಿ ದೇವನೂರು ಒಬ್ಬರು. ತಮ್ಮ ಅಪಾರ ಜೀವನಾನುಭವದೊಂದಿಗೆ ಬರೆದ ದೇವನೂರು ಮಹದೇವ ಅವರು ತಮ್ಮ ಸಾಹಿತ್ಯ ಕೃತಿಗಳಲ್ಲಿ ದಲಿತರ ಬದುಕಿನ ಸಮರ್ಥವಾದ ಅನಾವರಣ ಮಾಡಿದವರು. ಇವರು ಕಥನ ಸಾಹಿತ್ಯವನ್ನು ನಂಬಿ ಮುಖ್ಯವಾದ ಮೂರು ಕೃತಿಗಳನ್ನು ಮಾತ್ರ ರಚಿಸಿದ್ದಾರೆ. ಅವುಗಳೆಂದರೆ ದ್ಯಾವನೂರು (ಕಥಾಸಂಕಲನ); ಒಡಲಾಳ (ಕಿರುಕಾದಂಬರಿ); ಕುಸುಮಬಾಲೆ (ಕಾದಂಬರಿ). ಈ ಮೂರು ಕೃತಿಗಳು ಅನುಕ್ರಮವಾಗಿ 53, 52, 77 ಪುಟಗಳಷ್ಟು ಮಾತ್ರವಾಗುತ್ತದೆ. ಈ ಬಗ್ಗೆ ಡಾ. ಹಾ.ಮಾ. ನಾಯಕರು ತಮ್ಮ ಅಂಕಣ ಬರಹವೊಂದರಲ್ಲಿ ಹೀಗೆ ಹೇಳಿದ್ದಾರೆ: ತರುಣ ಲೇಖಕರಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ನಿಮರ್ಿಸಿಕೊಂಡಿರುವ ದೇವನೂರು ಮಹದೇವ ಅವರು ಬರೆದಿರುವುದು ಬಹಳವಲ್ಲ. ಇವರಷ್ಟು ಸ್ವಲ್ಪವೇ ಬರೆದು, ಇಷ್ಟೊಂದು ಪ್ರಸಿದ್ಧಿ ಪಡೆದ ಇನ್ನೊಬ್ಬರನ್ನು ಕನ್ನಡದಲ್ಲಿ ನಾನು ಕಾಣೆ. ಈ ಮಾತು ದೇವನೂರು ಅವರ ಸಾಹಿತ್ಯ ಗಾತ್ರದಲ್ಲಿ ಕಿರಿದಾದರೂ ಪಾತ್ರದಲ್ಲಿ ಮಹತ್ವದ್ದು ಎಂಬುದನ್ನು ನೆನಪಿಸುತ್ತದೆ. ದಲಿತ ಬಂಡಾಯ ಸಾಹಿತ್ಯ ಚಳವಳಿಯಲ್ಲಿದ್ದ ಇತರೆ ಸಹ ಬರಹಗಾರರಿಗೆ ಸಿಗದಷ್ಟು ಮಾನ್ಯತೆ, ಪ್ರಸಿದ್ಧಿ ಇವರಿಗೇಕೆ ಸಿಕ್ಕಿತು? ಎಂದು ಪ್ರಶ್ನಿಸಿಕೊಂಡರೆ ಸಿಗುವ ಉತ್ತರ ಒಂದೇ: ಅದೆಂದರೆ ದೇವನೂರು ಅವರು ತಮ್ಮದೇ ವಿಶಿಷ್ಟವಾ ದೃಷ್ಟಿಯಲ್ಲಿ ದಲಿತ ಲೋಕವನ್ನು ಗಮನಿಸುವುದರಿಂದ ಹಿಡಿದು ಅದರ ಅಭಿವ್ಯಕ್ತಿಯವರೆಗೂ ಅದನ್ನು ಅನನ್ಯವಾಗಿಯೇ ಧ್ಯಾನಿಸುತ್ತಾರೆ. ಹಾಗಾಗಿಯೇ ಅಗಾಧ ಸಂಖ್ಯೆಯ ಓದುಗರು ಹಾಗೂ ಅಭಿಮಾನಿಗಳನ್ನು ಪಡೆದರು. ಇಂಥ ಜನಪ್ರಿಯತೆಗೆ ಸಾಕ್ಷಿಯೆಂಬಂತೆ ರಾಜ್ಯಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯೋತ್ಸವದಂತಹ ಪ್ರತಿಷ್ಠತೆ ಪ್ರಶಸ್ತಿಗಳು ಬಂದಿವೆ. ಇವೆಲ್ಲವಕ್ಕೂ ಕಳಸವಿಟ್ಟಂತೆ 2011 ರಲ್ಲಿ ಕೇಂದ್ರ ಸರ್ಕಾರ ನೀಡುವ ಪದ್ಮಶ್ರೀ ಪ್ರಶಸ್ತಿ ಕೂಡ ಬಂದಿದೆ. ಇವರ ಮೂರು ಕೃತಿಗಳಲ್ಲಿ ಕುಸುಮಬಾಲೆ ಕಾದಂಬರಿ ತನ್ನ ವಸ್ತು, ವಿಶೇಷವಾಗಿ ಅಭಿವ್ಯಕ್ತಿ ವಿಷಯದಲ್ಲಿ ಕನ್ನಡದ ಸಾಂಸ್ಕೃತಿಕ ಲೋಕದೊಳಗೆ ತೀವ್ರವಾದ ಟೀಕೆ ಮತ್ತು ಚರ್ಚೆಗಳಿಗೆ ಕಾರಣವಾಗಿದೆ. ಇನ್ನೂ ಒಡಲಾಳ ಹಾಗೂ ದ್ಯಾವನೂರು ಕೃತಿಗಳು ಎಲ್ಲಾ ರೀತಿಯ ಓದುಗರನ್ನು ತಮ್ಮೆಡೆಗೆ ಆಕಷರ್ಿಸಿವೆ. ಮಹದೇವ ಅವರು ಹೀಗೆ ಸಾಹಿತ್ಯ ಕೃತಿಗಳಿಂದ ಮಾತ್ರವೆ ಗಮನಾರ್ಹವೆನಿಸದೆ ತನ್ನ ಬದುಕಿನ ರೀತಿ-ನೀತಿಗಳ ವಿಷಯದಲ್ಲೂ ಅನನ್ಯವೆನಿಸಿದ್ದಾರೆ. ಅತೀ ಕೆಟ್ಟ ಬಡತನದಿಂದ ಬಂದ ಇವರು ಹಾಸ್ಟೆಲ್ ಸೌಲಭ್ಯಗಳ ಸಹಕಾರದೊಂದಿಗೆ ವಿದ್ಯಾಭ್ಯಾಸ ಆರಂಭಿಸಿ, ಓದು-ಬರಹದ ಕಡೆ ಆಸಕ್ತಿ ತೋರಿದವರು. ಗಾಂಧಿ-ಅಂಬೇಡ್ಕರ್-ಲೋಹಿಯಾ ಅವರಂಥ ಸಾಮಾಜವಾದಿಗಳ ಬರಹಗಳಿಂದ ಆಲೋಚನೆ ಹಾಗೂ ಬದುಕಿನ ಕ್ರಮಗಳನ್ನೇ ಬದಲಾಯಿಸಿಕೊಂಡರು. ಈ ಹಿನ್ನೆಲೆಯೊಳಗೆ ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ಮತ್ತು ಹೋರಾಟಗಳ ಕಡೆ ಆಸಕ್ತಿ ಬೆಳೆಸಿಕೊಂಡು ಅಂಥ ಕಾರ್ಯಗಳಲ್ಲಿ ಮಗ್ನರಾದರು. ಹೋರಾಟಕ್ಕೆ ಸ್ಪೂರ್ತಿ ಹಾಗೂ ಬೆನ್ನೆಲುಬಾಗಿದ್ದ ಮಾನವ,  ಸುದ್ದಿ ಸಂಗಾತಿ, ಪಂಚಮ ಮುಂತಾದ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ಈ ಎಲ್ಲಾ ಅನುಭವಗಳೊಮದಿಗೆ ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್.)ಯ ಸಂಸ್ಥಾಪಕರಲ್ಲಿ ಒಬ್ಬರಾದರು. ಇಂಥ ಸಾಮಾಜಿಕ ಚಟುವಟಿಕೆಗಳ ಪರಿಣಾಮವಾಗಿ ಅವರ ವೈಯುಕ್ತಿಕ ಬದುಕಿನಲ್ಲಿಯೂ ಗಮನಿಸಲೇಬೇಕಾದ ಎರಡು ಘಟನೆಗಳು ಜರಗಿವೆ. ಅವುಗಳಲ್ಲಿ ಒಂದು: ಭಾರತೀಯ ಹಿಂದೂ ಸಾಂಪ್ರದಾಯಿಕ ಸಮಾಜದಲ್ಲಿ ಬದುಕನ್ನೇ ಕಳೆದುಕೊಂಡಿದ್ದ ವಿದವೆಯೊಬ್ಬರನ್ನು ವಿವಾಹವಾಗಿದ್ದು. ಎರಡು: ಮೈಸೂರಿನ ಪ್ರತಿಷ್ಠಿತ ಭಾರತೀಯ ಭಾಷಾ ಸಂಸ್ಥಾನ (ಸಿ.ಐ.ಐ.ಎಲ್.)ದಲ್ಲಿ ಸಿಕ್ಕಿದ್ದ ಪ್ರಾಧ್ಯಾಪಕ ಹುದ್ದೆಯನ್ನು ತೊರೆದು ರೈತನಾದುದು. ಹೀಗೆ ಇಡೀ ಕನರ್ಾಟಕದ ದಲಿತರ ಬೌದ್ಧಿಕ ನಾಯಕನಾಗಿ ಬೆಳೆದು ನಿಂತ ದೇವನೂರು ಮಹದೇವ ಅವರಿಗೆ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಮಾನ್ಯತೆ ಮತ್ತು ಅವಕಾಶಗಳು ದೊರೆತವು. ಈ ಅವಕಾಶಗಳ ಗುಂಗಿನಲ್ಲಿ ದೇವನೂರು ಅಪ್ಪಟ ಸ್ವಾರ್ಥ ರಾಜಕಾರಣಿಯಂತೆ ವರ್ತಿಸಿದರು ಎಂಬಂಥಹ ಅಪವಾದಗಳೂ ಇವರ ಮೇಲಿವೆ. ಇವೆಲ್ಲ ಸಂಗತಿಗಳ ನಡುವೆ ಮತ್ತೆ ಮತ್ತೆ ಚರ್ಚೆಗೆ ಬಂದದ್ದು ಗಮನಿಸಲೇಬೇಕಾದ ಸಂಗತಿ. ಇಂಥ ರೋಚಕ ಬೆಳವಣಿಗೆಯನ್ನು ಗಮನಿಸಿದಂತಹ ಎಂತಹವರೂ ದೇವನೂರು ಅವರ ಸಾಹಿತ್ಯವನ್ನು ಓದುವ ಅಭಿಲಾಷೆ ವ್ಯಕ್ತಪಡಿಸುತ್ತಾರೆ. ಇಂಥ ಅಭಿಲಾಷೆಗಳ ಭಾಗವಾಗಿ ಪ್ರಸ್ತುತ ಲೇಖನದಲ್ಲಿ ಒಡಲಾಳ ಕಿರು ಕಾದಂಬರಿಯ ವಿವೇಚನೆಯನ್ನು ನಡೆಸಲಾಗಿದೆ. 

         1978ರಲ್ಲಿ ಪ್ರಕಟವಾದ ದೇವನೂರು ಮಹದೇವ ಅವರ 52 ಪುಟಗಳ ಕಿರು ಕಾದಂಬರಿ ಒಡಲಾಳ. ದಲಿತ ಕುಟುಂಬದ ಕಥೆಯೊಂದರ ಮೂಲಕ ಇಡೀ ದಲಿತ ಲೋಕದ ವಾಸ್ತವವನ್ನು ನೈಜವಾಗಿ ದಾಖಲಿಸುತ್ತಲೇ ಅವರ ಬಿಡುಗಡೆಯ ಹಾದಿಗಳ ಬಗ್ಗೆ ಚಿಂತಿಸುವಂತೆ ಮಾಡುವ ಈ ಕೃತಿ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನಗಳಿಸಿದೆ. ಇಡೀ ಈ ಕಿರು ಕಥನವನ್ನು ಎರಡು ಪ್ರಮುಖ ಭಾಗಗಳಾಗಿ ವಿಂಗಡಿಸಿ ಚಚರ್ಿಸಬಹುದಾಗಿದೆ. ಈ ಭಾಗಗಳ ವಿವರಗಳನ್ನು ನೋಡುವಾಗ ಸಾಕವ್ವನ ಕೌಟುಂಬಿಕ ಸ್ಥಿತಿ-ಗತಿ ಹಾಗೂ ಕುಟುಂಬದ ಸದಸ್ಯರ ವೈಯುಕ್ತಿಕ ಪರಿಚಯವೂ ಕೃತಿಯ ಅರ್ಥ ಗ್ರಹಿಕೆಗೆ ಅನಿವಾರ್ಯವಾಗುತ್ತದೆ. ಹಾಗೆಯೇ ಈ ಎಲ್ಲಾ ವಿಷಯಗಳನ್ನು ದಾಖಲಿಸುವ ಲೇಖಕರು ತನ್ನ ಅಭಿವ್ಯಕ್ತಿಗೆ ತುಂಬಿರುವ ಅರ್ಥ ಮತ್ತು ಆಶಯಗಳನ್ನು ಗಮನಿಸಬೇಕಾಗುತ್ತದೆ. ಕೊನೆಯಲ್ಲಿ ಕೃತಿಯ ಮತ್ತೊಂದು ಅನನ್ಯ ಸಂಗತಿಯಾಗಿರುವ ಭಾಷೆಯ ಬಗೆಗೆ ವಿಚಾರ ಮಾಡಬೇಕಾಗುತ್ತದೆ. ಆದ್ದರಿಂದ ಮೇಲೆ ಉಲ್ಲೇಖಿಸಿರುವ ಎಲ್ಲಾ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಕಾದಂಬರಿಯ ಹಲವಾರು ವಿಚಾರಗಳನ್ನು ವಿವರಿಸಬಹುದಾಗಿದೆ. 
ಸಾಕವ್ವನ ಕೌಟುಂಬಿಕ ಸ್ಥಿತಿ-ಗತಿ
         ನಾಲ್ಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ಸಾಕವ್ವನ ಹಟ್ಟಿ. ಇದರ ಯಜಮಾನಿ ಸಾಕವ್ವ. ಇವರ ಮನೆಯಲ್ಲಿ ಯಜಮಾನಿಯಾಗಿ ಸಾಕವ್ವ: ಕಾಳಣ್ಣ, ಸಣ್ಣಯ್ಯ, ಗುರುಸಿದ್ಧ ಎನ್ನುವ ಮೂರು ಜನ ಗಂಡುಮಕ್ಕಳು; ಗೌರಮ್ಮ, ಪುಟ್ಟಗೌರಿ ಎಂಬ ಇಬ್ಬರು ಹೆಣ್ಣು ಮಕ್ಕಳು: ಅಷ್ಟೇ ಅಲ್ಲದೆ ಕಾಳಣ್ಣನ ಹೆಂಡತಿ; ಸಣ್ಣಯ್ಯನ ಹೆಂಡತಿ ಚಲುವಮ್ಮ ಹಾಗೂ ಈಕೆಯ ಮಕ್ಕಳಾದ ದುಪ್ಪಟೀಕಮೀಷನರ್ ಮತ್ತು ಶಿವು. ಇಷ್ಟೊಂದು ಸದಸ್ಯರ ಈ ಕುಟುಂಬ ಹೆಂಚು ಹೊದಿಸಿದ ಒಂದು ಮನೆ; ಹುಲ್ಲು ಹೊದಿಸಿದ ಮತ್ತೊಂದು ಮನೆ. ಇವುಗಳ ಜೊತೆಗೆ ಒಂದು ನೆರಕೆಯಲ್ಲಿ ವಾಸಿಸುತ್ತಿದ್ದಾರೆ. ಈ ಕುಟುಂಬಕ್ಕಿರುವ ಆಸ್ತಿ 4 ಎಕರೆ ಜಮೀನು. ಒಂದಿಷ್ಟು ಕೋಳಿಗಳು. ಮನೆಯಲ್ಲಿ  ಆರ್ಥಿಕವಾಗಿ ಯಾವುದೇ ಭದ್ರತೆಯಿಲ್ಲ. ಕುಟುಂಬದ ಸದಸ್ಯರೆಲ್ಲರಿಗೆ ಉದ್ಯೋಗವೂ ಇಲ್ಲ. ಜಮೀನಿದ್ದರೂ ಮಳೆಗಳಿಲ್ಲದ ಕಾರಣ ಯಾವುದೇ ಬೆಳೆಗಳನ್ನು ಬೆಳೆಯಲಾಗುತ್ತಿಲ್ಲ. ಹಾಗಾಗಿ ಒಂದೊತ್ತಿನ ಕೂಳಿಗೂ ಒದ್ದಾಡುವಂತಹ ಸ್ಥಿತಿ. ಅಂದಿನ ಆಹಾರವನ್ನು ಅಂದೇ ಸಂಪಾದಿಸುವ ಒತ್ತಡ ಇಲ್ಲಿದೆ. ಮಂಡಕ್ಕಿ  ಕಾಪಿ ನೀರು ಈ ಕುಟುಂಬದ ಸಾಮಾನ್ಯ ಆಹಾರ. ಮನೆಯಲ್ಲಿ ಎಣ್ಣೆ ಕ್ಯಾನು, ಹಿಟ್ಟಿನ ಡಬ್ಬಿ, ಕಾಳಿನ ಚೀಲಗಳು ಇವೆಯಾದರೂ ಇವೆಲ್ಲವೂ ಖಾಲಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಹೊಟ್ಟೆಗಿಲ್ಲದ ಈ ಕುಟುಂಬದ ಸದಸ್ಯರಲ್ಲಿ ಕೆಲವರು ಅನಿವಾರ್ಯವಾಗಿ ಕಳವು ಮಾಡುವಂತಹ ಒತ್ತಡಕ್ಕೆ ಒಳಗಾಗಿದ್ದಾರೆ. ಇನ್ನೂ ಕೆಲವರು ಇಂಥ ದುಸ್ಥಿತಿಯಿಂದ ದೂರ ಸರಿಯುವ ಪ್ರಯತ್ನದಲ್ಲಿದ್ದಾರೆ. ಆಧುನಿಕ ಕಾಲದ ಮಹತ್ವದ ಬೆಳವಣಿಗೆಗಳಿಂದಾಗಿ ಈ ಕುಟುಂಬದ ಪ್ರಾಚೀನ ದುಡಿಮೆಯ ಮಾರ್ಗಗಳು ಮೂಲೆಗುಂಪಾಗಿವೆ. ಇದಕ್ಕೆ ಗೋಡೆಯ ದೊಡ್ಡ ಮೊಳೇಲಿ ನೂಲೊ ರಾಟೆಯ ಕತ್ತಿಗೆ ಹಗ್ಗ ಬಿಗಿದು ನೇಣಾಕಿತ್ತು ಎಂಬ ಕಾದಂಬರಿಯ ಮಾತು ಸಮರ್ಥನೆಯನ್ನು ಒದಗಿಸುತ್ತದೆ. ಈ ಎಲ್ಲಾ ವಿವರಗಳು ಸಾಕವ್ವನ ಕುಟುಂಬ   ಆರ್ಥಿಕವಾಗದ  ದುಸ್ಥಿತಿಯನ್ನು ದರ್ಶಿಸುತ್ತವೆ ಕುಟುಂಬದ ಈ ಸ್ಥಿತಿಗೆ ಕಾಲದ ಮಹಿಮೆ ಹಾಗೂ ಆ ಸಮಾಜದಲ್ಲಿದ್ದ ಜಮೀನ್ದಾರಿ ಪದ್ಧತಿ ಮತ್ತು ಬಂಡವಾಳಶಾಹಿ ವ್ಯವಸ್ಥೆಗಳೇ ಕಾರಣ ಎಂಬುದನ್ನು ಮಾರ್ಮಿಕವಾಗಿ ಸೂಚಿಸಲಾಗಿದೆ. 
ಸಾಕವ್ವನ ಕೋಳಿ ಕಳವು
          ಇಡೀ ಕಾದಂಬರಿಯ ಕೇಂದ್ರ ಸಮಸ್ಯೆಯೆ ಸಾಕವ್ವನ ಕೋಳಿ ಕಳವಿನ ಪ್ರಸಂಗ. ಕಾದಂಬರಿ ಶುರುವಾಗುವುದೇ ಈ ಘಟನೆಯಿಂದ. ಸಾಕವ್ವ ತನ್ನ ಮನೆಯಲ್ಲಿದ್ದ ಕೋಳಿಗಳಲ್ಲಿ ಒಂದು ಕೋಳಿಯನ್ನು ದೇವರಿಗೆಂದು ಬಿಟ್ಟಿದ್ದು, ಅದೇ ಕೋಳಿಯನ್ನು ಯಾರೋ ಕದ್ದೊಯ್ಯುತ್ತಾರೆ. ಇದು ಸಾಕವ್ವನ ಮನಸ್ಸಿನಲ್ಲಿ ಹಲವಾರು ಆತಂಕಗಳನ್ನು ಹುಟ್ಟು ಹಾಕುತ್ತದೆ. ಇದ್ದ ಆಸ್ತಿಯ ಭಾಗವಾಗಿದ್ದ ಕೋಳಿ ಕಳುವಾಯಿತಲ್ಲ ಎಂಬ ಸಂಕಟ. ದೇವರಿಗೆ ಬಿಟ್ಟ ಕೋಳಿಯಾದ್ದರಿಂದ ದೇವರ ಅವಕೃಫೆಯಾಗುವುದೆಂಬ ಭಯ. ಈ ಹಿನ್ನೆಲೆಯ ಒಳಗೆ ಸಾಕವ್ವ ಎರಡು ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಾಳೆ. ಅವುಗಳಲ್ಲಿ ನನ್ನ ಕೋಳಿ ಕದ್ದು ತಿಂದವರ ಮನೆ ಹಾಳಾಗಲಿ ಎಂಬುದು ಒಂದು. ಮತ್ತೊಂದು ದೇವರು ತನ್ನ ಪಾಲನ್ನು ತಾನು ರಕ್ಷಿಸಿಕೊಳ್ಳಲಾಗಲಿಲ್ಲ ಎಂಬ ದೇವರ ಅಸ್ತಿತ್ವವನ್ನು ಪ್ರಶ್ನಿಸುವಂಥ ಭಾವನೆ. ಅನಂತಮೂರ್ತಿ ಅವರು ತಮ್ಮದೊಂದು ಲೇಖನದಲ್ಲಿ ವಿವರಿಸಿರುವಂತೆ ಸಾಕವ್ವನ ಇಲ್ಲಿನ ನೋವು ಹುಂಜ ದೇವರದ್ದು ಎನ್ನುವುದಾಗಲಿ, ಬಾಳ ಬೆಲೆ ಬಾಳುವಂತಹದ್ದು ಎನ್ನುವುದಾಗಲಿ ಮುಖ್ಯವಾಗದೆ ಹುಂಜ ನನ್ನದು ಎನ್ನುವ ಹಕ್ಕುಸ್ವಾಮ್ಯ ಸೂಚಕ ಸಂಬಂಧಿಯಾದುದು. 
           ಕಳೆದ ಹುಂಜದ ಬಗ್ಗೆ ಸಾಕವ್ವನನ್ನು ಬಿಟ್ಟರೆ ಕುಟುಂಬದ ಮತ್ಯಾರು ತಲೆಕೆಡಿಸಿಕೊಂಡವರಿಲ್ಲ. ಹುಂಜ ಕಳೆದ ದಿನದಿಂದಲೇ ಸಾಕವ್ವ ತನ್ನ ಮಗನೋ, ಮಗಳೋ ಕಳೆದುಕೊಂಡವಳಂತೆ ವತರ್ಿಸುತ್ತಾಳೆ. ಮೊದಲ ದಿನ ಬರಬಹುದು ಎಂಬ ಆಶಾ ಭಾವನೆ ಸುಳ್ಳಾದ ನಂತರ ಸಾಕವ್ವ ಹುಚ್ಚಳಂತೆ ಕೊ... ಕೊ... ಬಾ... ಬಾ... ಎಂದು ಕೂಗುತ್ತಾ ಊರ ತುಂಬಾ ತಿರುಗುತ್ತಾಳೆ. ಸಿಕ್ಕ ಸಿಕ್ಕವರ ಮೇಲೆ ಅನುಮಾನ ಪಡುತ್ತಾಳೆ. ವಿಶೇಷವಾಗಿ ಸವತಿ ಕೆಂಪಮ್ಮನ ಮೇಲೆ ಬಲವಾದ ಅನುಮಾನ ಪಟ್ಟು ಅವಳ ತಿಪ್ಪೆಯನ್ನು ಕೆದರಿ ನೋಡುತ್ತಾಳೆ. ಮೊಮ್ಮಗ ಶಿವುನನ್ನು ಜೊತೆಗೆ ಕರೆದುಕೊಂಡು ಊರಿನ ಮನೆ ಮನೆಯಲ್ಲಿ ಏನು ಸಾರು ಮಾಡಿದ್ದಾರೆ ಎಂಬುದನ್ನು ಪರೀಕ್ಷಿಸುತ್ತಾಳೆ. ಸದಾ ಹುಂಜದ ಧ್ಯಾನನದಲ್ಲೇ ಇರುವ ಸಾಕವ್ವ ಕಳೆದ ಹುಂಜನನ್ನು ಪಡೆಯುವ ಹಂಬಲದಲ್ಲಿದ್ದಾಳೆ. ಜೊತೆಗೆ ಈ ವಿಷಯದ ಬಗ್ಗೆ ಕುಟುಂಬದ ಯಾವ ಸದಸ್ಯರು ಗಮನ ನೀಡದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾಳೆ. ಈ ಪ್ರಸಂಗವನ್ನು ಕೊನೆಗೊಳಿಸುವ ಕಾದಂಬರಿಯ ಕ್ರಮ ವಾಸ್ತವಸ್ಥಿತಿಗತಿಗೆ ಅನುಗುಣವಾಗಿದೆ. ಹುಂಜನನ್ನು ಹುಡುಕಲು ಮಾದರಿಗಾಗಿ ಸಾಕವ್ವನ ಮತ್ತೊಂದು ಕೋಳಿ ಪಡೆದು ಪೊಲೀಸರು ದೂಳೆಬ್ಬಿಸಿಕೊಂಡು ಜೀಪಲ್ಲಿ ತೆರಳುವ ದೃಶ್ಯ ಅತ್ಯಂತ ಧ್ವನಿಪೂರ್ಣವಾಗಿದೆ. ಒಂದು ಹುಂಜ ಕಳೆದುಕೊಂಡ ಸಾಕವ್ವ ಅದನ್ನು ಪಡೆಯುವುದಕ್ಕಾಗಿ ಮತ್ತೊಂದು ಅಂತಹದ್ದೇ ಹುಂಜವನ್ನು ಕಳೆದುಕೊಂಡು ಪಡುವ ಯಾತನೆ ಇಡೀ ದಲಿತ ಲೋಕದ ಅಸಹಾಯಕ ಸ್ಥಿತಿಯನ್ನು ಸೂಚಿಸುತ್ತದೆ. 
ಸಾಹುಕಾರ್ ಎತ್ತಪ್ಪನ ಕಡ್ಲೆಕಾಯಿ ಮೂಟೆ ಕಳುವು
       ಕಾದಂಬರಿಯಲ್ಲಿ ಬರುವ ಮತ್ತೊಂದು ಕಳುವಿನ ಪ್ರಸಂಗ ಸಾಹುಕಾರ್ ಎತ್ತಪ್ಪನ ಕಡ್ಲೆಕಾಯಿ ಕಳವಿನ ಪ್ರಸಂಗ. ಬಂಡವಾಳಶಾಹಿ ಎತ್ತಪ್ಪ, ಸಾಕವ್ವನ ಕುಟುಂಬಕ್ಕೆ ಎಲ್ಲಾ ವಿಷಯಗಳಲ್ಲಿ ವಿರುದ್ಧ. ಬಡತನದ ಭಾಗವಾಗಿ ಸಾಕವ್ವನ ಕುಟುಂಬದ ಹಿರಿಮಗ ಕಾಳಣ್ಣ ಎತ್ತಪ್ಪನ ಮಿಲ್ಲಿನಿಂದ ಒಂದು ಕಡ್ಲೆಕಾಯಿ ಮೂಟೆಯನ್ನು ಹೊತ್ತು ತಂದು ಬೆಂಕಿ ಹಾಕಿ ಅದರ ಸುತ್ತ ತನ್ನ ಕುಟುಂಬದ ಸದಸ್ಯರೆಲ್ಲರನ್ನು ಕೂರಿಸಿಕೊಂಡು ತಿನ್ನುವ ಸಂದರ್ಭದಲ್ಲಿ ಅವರೆಲ್ಲರೂ ಸಾಹುಕಾರ್ ಎತ್ತಪ್ಪನ ಸ್ಥಿತಿಯ ಬಗ್ಗೆ ಮಾತನಾಡುತ್ತಾರೆ. ಇವರ ಮಾತುಗಳಿಂದಲೇ ತಿಳಿದು ಬರುವ ಎತ್ತಪ್ಪನ ಅಂತಸ್ತು ಹೀಗಿದೆ: ಎತ್ತಪ್ಪನ ದನದ ಹಟ್ಟಿ, ಅಲ್ಲಿರೋ ದನ ಹಾಗೂ ಎಮ್ಮೆಗಳು ಉನ್ನತ ಸ್ಥಿತಿಯಲ್ಲಿವೆ. ಅಂದ ಮೇಲೆ ಮನೆ-ಮನುಷ್ಯರ ಬಗ್ಗೆ ಹೇಳುವುದೇ ಬೇಡ. ಇವರ ಮನೆಯ ಮಗಳ ಮದುವೆ ಅಂಥ ಎಲ್ಲಾ ಸೂಚನೆಗಳನ್ನು ನೀಡುತ್ತದೆ. ಇಂತಹವರ ಸ್ವತ್ತು ಕಳುವಾದಾಗ ವ್ಯವಸ್ಥೆಯ ಭಾಗವಾದ ಪೊಲೀಸ್ ವ್ಯವಸ್ಥೆ ಸ್ಪಂಧಿಸುವ ರೀತಿ ಕಾನೂನು ಇದ್ದವರಿಗೊಂದು ಇಲ್ಲದವರಿಗೆ ಇನ್ನೊಂದು ಎಂಬ ನಾಣ್ನುಡಿಯನ್ನು ನೆನಪಿಸುತ್ತದೆ. 
        ಈ ಸಂದರ್ಭದಲ್ಲಿ ಬೆಂಕಿಯ ಮುಂದೆ ಕುಳಿತು ಸಾಕವ್ವನ ಕುಟುಂಬದ ಸದಸ್ಯರು ಚರ್ಚಿಸುವ ವಿಷಯಗಳು ಅತ್ಯಂತ ಪ್ರಮುಖವಾಗಿವೆ. ಮುಖ್ಯವಾಗಿ ಸಾಹುಕರ್ ಎತ್ತಪ್ಪನ ಕುಟುಂಬದಂತೆ ಶ್ರೀಮಂತ ಸ್ಥಿತಿಗೆ ತಲುಪುವ ಕನಸು ಕಾಣುತ್ತಾರೆ. ಅಷ್ಟೆ ಅಲ್ಲ ಎತ್ತಪ್ಪನ ದನ-ಎಮ್ಮೆಗಳು ಆನೆಗಳಂತಿದ್ದು ಅವುಗಳಲ್ಲಿ ಒಂದು ಸತ್ತರೆ ಸಾಕು ನಮ್ಮ ಇಡೀ ಹಟ್ಟಿ ಸಂತೃಪ್ತವಾಗುತಿತ್ತು ಎಂಬ ತತ್ಕ್ಷಣದ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿನ ಕದ್ದು ತಂದ ಕಡ್ಲೆಕಾಯಿಯಲ್ಲೇ ಸ್ವಲ್ಪ ಭಾಗವನ್ನು ಹಸಿದ ಇತರೆ ವ್ಯಕ್ತಿಗಳಿಗೂ ನೀಡುತ್ತಾರೆ. ಗುರುಸಿದ್ಧ ಅಸ್ಪೃಶ್ಯತೆಯ ವಿರುದ್ಧದ ತನ್ನ ಹೋರಾಟದ ವಿವರಗಳನ್ನು ನೀಡುವುದು ಕೂಡ ಇಲ್ಲಿಯೇ ಎಂಬುದನ್ನು ಗಮನಿಸಬೇಕು. ಹಾಗಾಗಿಯೇ ಕಾದಂಬರಿಯ ಈ ಸಂದರ್ಭ ಓದುಗರಲ್ಲಿ, ವಿಮರ್ಶಕರಲ್ಲಿ ಹಲವು ರೀತಿಯ ವಾಗ್ವಾದಗಳನ್ನು ಎಬ್ಬಿಸಿದೆ. ಮುಖ್ಯವಾದ ಅಂಥ ಒಂದೆರಡು ಅಭಿಪ್ರಾಯಗಳನ್ನು ಗಮನಿಸುವುದಾದರೆ,ಅನಂತಮೂರ್ತಿ  ಅವರು ಬೆಂಕಿ ಮುಂದೆ ಕುಟುಂಬದ ಎಲ್ಲಾ ಸದಸ್ಯರು ಕದ್ದು ತಂದ ಕಡ್ಲೆಕಾಯಿಯನ್ನು ತಿನ್ನುವ ಈ ಸಂದರ್ಭ ಯಜ್ಞ ಕಾರ್ಯದಂತೆ ಕಾಣುತ್ತದೆ ಎನ್ನುತ್ತಾರೆ. ಈ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿರುವ ಮ.ನ.ಜವರಯ್ಯ ಅವರು ಇಂಥ ಅತಿರೇಕದ ಹೋಲಿಕೆಗಳಿಗಿಂತ ವಾಸ್ತವ ನೆಲೆಯಲ್ಲಿ ನೋಡಬೇಕೆಂದು ಅಭಿಪ್ರಾಯ ಪಟ್ಟು ಅಂಥ ವಾಸ್ತವ ನೆಲೆಯಲ್ಲಿ ಮೂರು ರೀತಿಯ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಅವುಗಳಲ್ಲಿ ಮೊದಲನೆಯದಾಗಿ ಉಳ್ಳವರ ಸಂವೃದ್ಧಿಗಾಗಿ ದುಡಿದು ತಾವು ಮಾತ್ರ ಉಪವಾಸ ಬೀಳಬೇಕೆಂಬ ಅವ್ಯಕ್ತ ಆಕ್ರೋಶ ಒಡಲ ಬಡಬಾಗ್ನಿಯಾಗಿ ಕಡ್ಲೆಕಾಯಿ ನಾಮಾವಶೇಷವಾಯಿತು. ಎರಡನೆಯದಾಗಿ, ಕಡಲೆಯ ಕಾಯಿಯ ಒಂದು ಸಿಪ್ಪೆಯೂ ಸಿಗದಿದ್ದುದು, ದುಡಿದ ಒಡಲಿಂದ ಎದ್ದ ಕಿಚ್ಚಿಗೆ ಉಳ್ಳವರ ಸಿರಿತನ, ಧರ್ಪ, ಅನ್ಯಾಯಗಳೆಲ್ಲವೂ ಕಡಲೆ ಕಾಯಿಯಂತೆ ಸುಟ್ಟು ಬೂದಿಯಾದವು. ಮೂರನೆಯದಾಗಿ, ಕಡ್ಲೆಕಾಯಿಯನ್ನು ಹಸಿದ ಒಡಲುಗಳೆಲ್ಲ ಸುತ್ತುವರೆದು ತಿನ್ನುವ ಚಿತ್ರದಿಂದ ಹಸಿವು ಮನೆ ಮಂದಿಯನ್ನೆಲ್ಲ ಕಿತ್ತು ತಿಂದಿತು ಅಥವಾ ಮನೆಮಂದಿಯೆಲ್ಲ ಸೇರಿ ಹಸಿವನ್ನು ಕಿತ್ತು-ಕಿತ್ತು ತಿಂದರು ಎಂಬ ಧ್ವಂದ್ವಾರ್ಥ ಇರಬಹುದು. ಹೀಗೆ ಹಲವಾರು ಅರ್ಥಗಳನ್ನು ಪ್ರಸ್ತುತ ಪ್ರಸಂಗದಿಂದ ಅರಿಯಬಹುದಾಗಿದೆ.
ಕಥನದ ಕೆಲವು ಪ್ರಮುಖ ಪಾತ್ರಗಳು ಮತ್ತು ಘಟನೆಗಳು
ಒಡಲಾಳ ಕಾದಂಬರಿಯಲ್ಲಿ ಬರುವ ಪಾತ್ರಗಳಲ್ಲಿ ವಿಶೇಷವಿದೆ. ಇಲ್ಲಿ ಬರುವ ಪಾತ್ರಗಳೆಂದರೆ: ಮನೆಯ ಯಜಮಾನಿ ಸಾಕವ್ವ, ಹಿರಿಮಗ ಕಾಳಣ್ಣ ಮತ್ತು ಆತನ ಮಡದಿ, ಕಿರಿಮಗ ಸಣ್ಣಯ್ಯ ಮತ್ತು ಆತನ ಹೆಂಡತಿ ಚಲುವಮ್ಮ ಹಾಗೂ ಇವರ ಮಕ್ಕಳು, ಮದುವೆಯಾದರೂ ಗಂಡನ ಬೇಜವ್ಬಾರಿ ಕಾರಣಕ್ಕೆ ತವರು ಮನೆ ಸೇರಿರುವ ಗೌರಮ್ಮ ಹಾಗೂ ಆಕೆಯ ಮಗ ಶಿವು, ಮತ್ತೊಬ್ಬ ದುಪ್ಟಿಕಮಿಷನರ್, ಮನೆಯ ಕಿರಿಮಗಳು ಪುಟ್ಟಗೌರಿ, ಕಿರಿಮಗ ಗುರುಸಿದ್ಧ. ಇವರಲ್ಲದೆ ಪೊಲೀಸ್ ರೇವಣ್ಣ, ಸಾಹುಕಾರ್ ಎತ್ತಪ್ಪ ಮೊದಲಾದವರು. ಇಷ್ಟು ಪಾತ್ರಗಳಲ್ಲಿ ನಮ್ಮ ಗಮನ ಸೆಳೆಯುವ ಪಾತ್ರಗಳಾಗಿ ಸಾಕವ್ವ, ಶಿವು, ಪುಟ್ಟಗೌರಿ, ಗುರುಸಿದ್ಧ ಅವರುಗಳು ಕಂಡುಬರುತ್ತಾರೆ.
ಸಾಕವ್ವ
ಅತ್ಯುತ್ತಮ ಪಾಲಕಿ-ಪೋಷಕಿ. ಈಕೆಯ ಸಿಟ್ಟು-ಸೆಡವು-ದ್ವೇಷಗಳೆಲ್ಲ ಕುಟುಂಬದ ಉದ್ಧಾರ ಸೂತ್ರಗಳು. ವೃದ್ಧಾಪ್ಯದಲ್ಲೂ ಛಲಗಾರ್ತಿ ಸೊಸೆ ಚಲುವಮ್ಮನ ಜೊತೆ ಆಸ್ತಿನೆಪದಲ್ಲಿ ಮಾಡಿದ ಜಗಳದಲ್ಲಿ, ಕಳೆದ ಹುಂಜಕ್ಕಾಗಿ ಪರದಾಡಿದ ಕ್ರಮದಲ್ಲಿ ಸವತಿ ಕೆಂಪಮ್ಮನ ಮೇಲಿನ ದ್ವೇಷದಲ್ಲಿ ಇವೇ ಮೊದಲಾದ ಪ್ರಸಂಗಗಳಲ್ಲಿ ಸಾಕವ್ವನ ಅಂತರಾಳ ಸ್ಪಷ್ಟವಾಗುತ್ತದೆ.
ಗುರುಸಿದ್ಧ
ಮನೆಯ ಹಕ್ಕುದಾರನಾದರೂ ಕುಟುಂಬಕ್ಕೆ ಅತಿಥಿ, ಗಾರೆ ಕಾಂಟ್ರ್ಯಾಕ್ಟು, ರೇಷ್ಮೆಗೂಡು ವ್ಯಾಪಾರ ವೃತ್ತಿಯನ್ನು ಮಾಡುತ್ತಿದ್ದಾನೆ. ಪಟ್ಟಣದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿರುವ ಗುರುಸಿದ್ಧ ವ್ಯವಸಾಯದಂತಹ ಸಾಂಪ್ರದಾಯಿಕ ವೃತ್ತಿಗಳಿಂದ ನಿದರ್ಿಷ್ಟ ವರಮಾನವಿಲ್ಲವೆಂದು ತೀಮರ್ಾನಿಸಿದ್ದಾನೆ. ಕೈಗೆ ವಾಚು, ಓಡಾಡಲು ಸೈಕಲ್ ಹೊಂದಿರುವ ಈತ ಪಟ್ಟಣದ ಮೇಲ್ಜಾತಿಗೆ ಸೇರಿದ ಶಿವಪ್ಪನ ಹೋಟೆಲಿನಲ್ಲಿ ಸಮಾನ ಸತ್ಕಾರ ಪಡೆಯಲೆತ್ನಿಸುತ್ತಿದ್ದಾನೆ. ಪೇಟೆಯ ಸಂಪರ್ಕದ ಪರಿಣಾಮ ಬೆಲ್ಲದ ಕಾಪಿಗಿಂತ ಸಕ್ಕರೆ ಟೀಗೆ ಒಗ್ಗಿಹೋಗಿದ್ದಾನೆ. ಇಂಥ ಕೆಲವು ಕಾರಣಗಳಿಗಾಗಿಯೇ ಕುಟುಂಬದಿಂದ ದೂರ. ಇದೇನೆ ಇದ್ದರೂ ಮನೆಯವರಿಗೆ ಈತ ಹೀರೋ ಆಗಿರುವುದಂತೂ ಸತ್ಯ. ಸಾಕವ್ವನ ಮನೆಯನ್ನು ಕಡಲೆ ಕಾಯಿಗಾಗಿ ತಲಾಶ್ ಮಾಡುವ ಸಂದರ್ಭದಲ್ಲಿ ಈತನ ಕೆಂಗಣ್ಣು ಪೊಲೀಸರಲ್ಲಿ ನಡುಕ ಹುಟ್ಟಿಸುತ್ತದೆ. ಗುರುಸಿದ್ಧನ ಈ ಎಲ್ಲಾ ಚಟುವಟಿಕೆಗಳನ್ನು ಗಮನಿಸಿದರೆ ದಲಿತರ ಉದ್ದಾರಕ್ಕಾಗಿ ಉದಯಿಸಲಿದ್ದ ದಲಿತ ಸಂಘರ್ಷ ಸಮಿತಿಯ ತತ್ವಗಳ ಮೊಳಕೆಗಳು ಕಾಣಿಸುತ್ತವೆ. 
ಪಟ್ಟಗೌರಿ
ಈ ಮನೆಯ ಸಂಕಷ್ಟ ಕೇಳಲಾರದೆ ನಾನು ಎಂದು ಈ ಮನೆಯನ್ನು ಬಿಟ್ಟೇನು ಎಂಬ ಭಾವನೆಯೊಳಗೆ ಈಕೆ ಬದುಕುತ್ತಿದ್ದಾಳೆ. ಮನೆಯ ಗೋಡೆಯ ಮೇಲೆ ಬಣ್ಣದಲ್ಲಿ ನವಿಲು ಬಿಡಿಸುವ ಪುಟ್ಟಗೌರಿ ಶೂನ್ಯದಲ್ಲಿ ಏನನ್ನಾದರೂ ಸೃಷ್ಟಿಸುವ ಭಾಗವಾಗಿ ಕಂಡುಬರುತ್ತಾಳೆ. ಅಷ್ಟೇ ಅಲ್ಲ ಕಡಲೆಕಾಯಿ ತಿನ್ನಲು ಮಾರಿಗುಡಿಯಲ್ಲಿ ನಾಟಕದ ತಾಲೀಮು ಮಾಡುತ್ತಿದ್ದ ಗುರುಸಿದ್ಧನನ್ನು ಕರೆತರಲು ಶಿವೂನ ಜೊತೆಗೂಡಿ ಹೋಗಿ ಬಂದುದು ಇವಳ ಕ್ರಿಯಾ ಶೀಲತೆಯನ್ನು ಸೂಚಿಸುತ್ತದೆ.
ಶಿವು
ಗೌರಮ್ಮನ ಎರಡನೇ ಮಗನಾದ ಶಿವು ಶಾಲೆಗೆ ಹೋಗುತ್ತಿದ್ದಾನೆ. ಅಕ್ಷರಸ್ಥನಾಗಿ ಮುಂದಿನ ಕುಟುಂಬದ ಬೆಳಕಾಗುವ ಸೂಚನೆಯಿದೆ. ಅದಕ್ಕಾಗಿಯೇ ಸಾಕವ್ವ ತನ್ನ ಕಳೆದುಹೋದ ಹುಂಜವನ್ನು ಹುಡುಕಲು ಶಿವೂನ ಸಹಾಯ ಪಡೆಯುತ್ತಾಳೆ. ಹಾಗೆಯೇ ಅಡವಿಟ್ಟ ಪಾತ್ರೆಗಳ ವ್ಯವಹಾರದ ಲೆಕ್ಕ ಹೇಳುವುದಕ್ಕೂ ಶಿವೂ ಬೇಕಾಗಿದ್ದಾನೆ. ಪುಟ್ಟಗೌರಿಯು ಬಿಡಿಸುವ ನವಿಲುಗಳ ಸಂವೇದನೆಯನ್ನು ಅರ್ಥಮಾಡಿಕೊಳ್ಳಬಲ್ಲಂಥವನು ಆಗಿದ್ದಾನೆ. ಒಟ್ಟಾರೆ ದಲಿತ ಕುಟುಂಬಗಳಿಗೆ ಶಿಕ್ಷಣ ಬೆಳಕಾಗುತ್ತದೆ ಎಂಬ ಆಶಯ ಇಲ್ಲಿದೆ.
ಪುಟ್ಟಗೌರಿ ನವಿಲು ಚಿತ್ರ ಬಿಡಿಸುವ ಸಂದರ್ಭ
         ಪುಟ್ಟಗೌರಿ ತನ್ನ ಮನೆಯ ಗೋಡೆಯ ಮೇಲೆ ನವಿಲಿನ ಚಿತ್ರ ಬಿಡಿಸುತ್ತಾಳೆ. ಚಿತ್ರ ಬಿಡಿಸಿದ ಕ್ರಮ ಇಲ್ಲಿ ಗಮನಾರ್ಹ. ಪ್ರಸ್ತುತ ವ್ಯವಸ್ಥೆಯೊಳಗೆ ಯಾವುದೇ ಚಿತ್ರಬಿಡಿಸುವಾಗಲೂ ಮೇಲಿನಿಂದ ಕೆಳಕ್ಕೆ ಅಂದರೆ ತಲೆಯಿಂದ ಪಾದಕ್ಕೆ ಬರುವುದು ಸಂಪ್ರದಾಯ. ಈ ಕ್ರಮ ಸಮಾಜದ ಏಣಿ-ಶ್ರೇಣಿ ವ್ಯವಸ್ಥೆಯನ್ನು ಸಮಥರ್ಿಸುವ ಭಾಗವೆನ್ನಬಹುದು. ಒಂದು ವ್ಯವಸ್ಥೆಯ ಪ್ರಕಾರ ಶಿರ ಶ್ರೇಷ್ಟಾಂಗ ಆದ್ದರಿಂದಲೇ ಶಿರಕ್ಕೆ ಮೊದಲ ಸ್ಥಾನ. ಪಾದ ಕನಿಷ್ಟ ಹಾಗಾಗಿಯೇ ಪಾದಗಳಿಗೆ ಕೊನೆಯ ಸ್ಥಾನ. ಆದರೆ ಪುಟ್ಟಗೌರಿ ತನ್ನ ನವಿಲಿನ ಚಿತ್ರವನ್ನು ಪಾದದಿಂದಲೇ ಅರಂಭಿಸುತ್ತಾಳೆ. ವ್ಯವಸ್ಥೆಯ ತಿಳುವಳಿಕೆಯನ್ನು ಒಡೆದುಹಾಕಿ ಪಾದಕ್ಕೆ ಮೊದಲ ಸ್ಥಾನ ಕಲ್ಪಿಸುವ ಆಲೋಚನೆ ಇಲ್ಲಿ ಪ್ರಧಾನವಾಗಿರುವಂತಿದೆ. ಇಡೀ ಶರೀರವನ್ನು ಹೊತ್ತು ತಿರುಗುವ ಪಾದಗಳಿಗೆ ಮೊದಲು ಸ್ಥಾನ ನೀಡಬೇಕೆಂಬ ಇಲ್ಲಿನ ಆಶಯಕ್ಕೆ ಸಾಮಾಜಿಕ ಏಣಿ-ಶ್ರೇಣಿ ತತ್ವವನ್ನು ತಿರುಗ-ಮುರುಗಾಗಿಸುವ ಕಲ್ಪನೆಯಿದೆ. ಹಾಗೆಯೇ ಆ ಮನೆಯನ್ನು ಪೊಲೀಸರು ತಲಾಶ್ ಮಾಡುವ ಸಂದರ್ಭದಲ್ಲಿ ಕುಟುಂಬದ ಸದಸ್ಯರೆಲ್ಲರೂ ಹೆದರಿ ನಿಂತಿರುವಾಗ ಗೋಡೆಯ ಮೇಲಿನ ನವಿಲು ಚಿತ್ರಗಳು ನರ್ತಿಸುತ್ತವೆ. ಈ ನರ್ತನವನ್ನು ವಿಶೇಷವಾಗಿ ಶಿವು ಮಾತ್ರ ಗಮನಿಸುತ್ತಾನೆ. ಇಂಥ ಎಲ್ಲಾ ಸೂಕ್ಷ್ಮಗಳು ಲೇಖಕರ ಸಮಕಾಲೀನ ಸ್ಪಂದನೆಯನ್ನು ಸೂಚಿಸುತ್ತವೆ.
ಶಿವು ಮತ್ತು ಸಾಕವ್ವನ ನಡುವಿನ ಒಂದು ಚರ್ಚೆ
             ಸಾಕವ್ವ ತನ್ನ ಹುಂಜವನ್ನು ಕಳೆದ ಆ ಹುಂಜವನ್ನು ಹುಡುಕುವ ಹಲವು ಪ್ರಯತ್ನಗಳನ್ನು ನಡೆಸುತ್ತಾಳೆ. ಅಂಥ ಪ್ರಯತ್ನಗಳಲ್ಲಿ ಶಿವುವನ್ನು ಕರೆದುಕೊಂಡು ಈ ಹುಂಜವನ್ನು ಪತ್ತೆಹಚ್ಚಲು ಹೊರಡುತ್ತಾಳೆ. ಆ ಸಂದರ್ಭದಲ್ಲಿ ಶಿವು ಮತ್ತು ಸಾಕವ್ವನ ನಡುವೆ ಯಮಲೋಕ ಕೇಂದ್ರಿತವಾದ ಚರ್ಚೆಯೊಂದು ನಡೆಯುತ್ತದೆ. ಇವರಿಬ್ಬರೂ ಹುಂಜ ಹುಡುಕಲು ಹೊರಟಾಗ ಸಂಜೆಗತ್ತಲು. ಶಿವು ನನಗೆ ಹೆದರಿಕೆಯಾಗುತ್ತದೆ ನಾನು ಬರಲಾರೆ ಎನ್ನುತ್ತಾನೆ. ಅದಕ್ಕೆ ಸಾಕವ್ವ ನಾನಿದ್ದೀನಲ್ಲ ಏತಕ್ಕೆ ಭಯ ಯಮದೂತರು ಬಂದರು ನಾವು ಹೆದರಬೇಕಿಲ್ಲ ಎಂಬ ಧೈರ್ಯವನ್ನು ತುಂಬುತ್ತಾಳೆ. ಹಾಗೆಯೇ ಇವರಿಬ್ಬರ ಮುಂದುವರಿದ ಚಚರ್ೆಯಲ್ಲಿ ಸಾಕವ್ವ, ಯಮದೂತರು ಬಂದು ನಮ್ಮನ್ನು ಎಳೆದೊಯ್ಯುತ್ತೇವೆ ಎಂದರೆ ನನ್ಯಾಕ ಎಳ್ಕಂಡು ವೋದೀರಿ ಮೂದೇವ್ಗಳ ನನೇ ಬರ್ತೀನಿ ನಡೀ ಅಂತೀನಿ. ಅವರಿಗಿಂತ ಮೊದಲು ಯಮಧರ್ಮನ ಮುಂದೆ ನಾನೇ ನಿಲ್ತೀನಿ ಎಂದಾಗ ಶಿವು ಅದ್ಕೂನೂ ನಿಂಗ ಹೆದ್ರಕ ಆಗಲ್ವಾ ಎಂಬ ಮುಗ್ದ ಪ್ರಶ್ನೆಯನ್ನು ಕೇಳುತ್ತಾನೆ. ಆಗ ಸಾಕವ್ವ ಅಯ್ ನರಲೋಕದಲ್ಲಿ ನಾನು ಪಟ್ಟ ಕಷ್ಟಕ್ಕಿಂತ ಆ ಸೀಕ್ಸ ಎಲ್ಲಾದ್ದು ತಗಾ ಅವ್ನ ಜೊತಲೂ ಅದ್ನೆ ಅಂತೀನಿ ಕನಾ ನನ್ನ ಅಂಥ ಮಾತನ್ನು ಕೇಳಿದ ಯಮ ನನ್ನ ಧೈರ್ಯ ಮೆಚ್ಚಿ ಏನುವರ ಬೇಕು ಕೇಳು ಅಂಥಾನೆ ಆಗ ನಾನು ನೋಡು ಸ್ವಾಮಿ ನನ್ನ ಮೊಮ್ಗೂಸು ನರಲೋಕದಲಿ ರಾಜ್ಭಾರ ಮಾಡುವಂಥ ವರ ಕೊಡು ಅಷ್ಟೆ ಸಾಕು ಅಂತೀನಿ ಎನ್ನುತ್ತಾಳೆ. ಈ ಪ್ರಸಂಗದಲ್ಲಿ ಪ್ರಮುಖವಾದ ಎರಡು ಅಂಶಗಳನ್ನು ಗಮನಿಸಿಬೇಕು. ಒಂದು: ನರಲೋಕದ ಕಷ್ಟಗಳಿಗಿಂತ ಯಮ ಲೋಕದ ಕಷ್ಟಗಳು ಏನೇನೂ ಅಲ್ಲ ಎನ್ನುವ ಮಾತು ದಲಿತರ ಬದುಕು ನರಕಕ್ಕಿಂತ ಹೀನಾಯವಾದುದು ಎಂಬ ವಾಸ್ತವ ಸತ್ಯವನ್ನು ಮನವರಿಕೆ ಮಾಡುವ ಪ್ರಯತ್ನ  ಇಲ್ಲಿದೆ. ಎರಡು: ಯಮಧರ್ಮನಲ್ಲಿ ಸಾಕವ್ವ ನನ್ನ ಮೊಮ್ಮಗ ರಾಜ್ಯಭಾರ ಮಾಡಬೇಕೆಂಬ ಬೇಡಿಕೆ ನಿಜ ಜೀವನದಲ್ಲಿ ಬೇಕಾಗಿರುವ ಆದರೆ ಅಸಾಧ್ಯವೆನಿಸುವ ಈ ಕನಸು ದಲಿತರೆಲ್ಲರ ಸ್ವಾಭಾವಿಕ ಕನಸು ಎಂಬುದನ್ನು ತಿಳಿಯಬಹುದಾಗಿದೆ. ಲೇಖಕರು ಪ್ರಜ್ಞಾಪೂರ್ವಕವಾಗಿ ಇಂಥ ಸನ್ನಿವೇಶಗಳನ್ನು ಸೃಷ್ಟಿಸುವುದರ ಮೂಲಕ ದಲಿತರ ವಿಮೋಚನೆಯ ಹಾದಿಗಳನ್ನು ಹುಡುಕುತ್ತಿದ್ದಾರೆ ಎನ್ನಬಹುದು.
ಕಥನದ ಭಾಷೆ 
        ಕನ್ನಡ ಸಾಹಿತ್ಯಕ್ಕೆ ದಲಿತ ಸಾಹಿತ್ಯವು ಒಂದು ಹೊಸ ಆಯಾಮವನ್ನೇ ತಂದುಕೊಟ್ಟಿರುವುದು ನಮೆಲ್ಲರಿಗೂ ತಿಳಿದ ವಿಷಯ. ದಲಿತ ಕುಟುಂಬಗಳ ದಿನ ನಿತ್ಯದ ವಿಷಯಗಳು ಹಾಗೂ ಪ್ರಾದೇಶಿಕ ಭಾಷೆ ಸಾಹಿತ್ಯದಲ್ಲಿ ಸ್ಥಾನವನ್ನು ಪಡೆದಿದ್ದು, ಸಾಹಿತ್ಯವು ಮುಖ್ಯ ವಾಹಿನಿಯ ವಸ್ತು ಮತ್ತು ಭಾಷೆಯ ಮೇಲೆ ಅವಲಂಬಿಸಬೇಕಾಗಿಲ್ಲ ಎಂಬ ಸ್ಪಷ್ಟ ಸಂದೇಶ ಇಲ್ಲಿದೆ. ದೇವನೂರು ಮಹದೇವ ಅವರ ಈ ಕಥನದಲ್ಲಿ ಮೈಸೂರಿನ ಪ್ರಾದೇಶಿಕ ಭಾಷೆಯ ಬಳಕೆಯಾಗಿದ್ದು ಸಂವಹನಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ದಿನ ನಿತ್ಯದ ಬಳಕೆಯ ಭಾಷೆ ಇದ್ದಾ ಹಾಗೆಯೇ ಬಳಕೆಗೊಂಡಿದೆ. ತಿಪ್ಗ ಬಂದಿದ್ದಿಕಾ ಕೂಸು ಅಷ್ಮಿಯಾ, ತಗಾ ಅದ್ಯಾರೊ ಒಬ್ಬಳು ಕುಟ್ಟೋ ಬತ್ತ ಬುಟ್ಟು ಹುಟ್ಟೋ ಶ್ಯಾಟ ನೋಡ್ಕತ್ತಿದ್ಲಂತೆ, ನಿಂಗೆ ಹೆದ್ರಕ ಆಗಲ್ವಾ, ಇಂಥ ಭಾಷೆಯ ಮೂಲಕ ದಲಿತರ ಸಮುದಾಯಗಳ ಬಳಕೆಯ ಭಾಷೆ ಕಂಡುಬರುತ್ತದೆ.
             ಒಟ್ಟಾರೆ ದೇವನೂರು ಮಹಾದೇವ ಅವರ ಒಡಲಾಳ ದಲಿತ ಲೋಕದ ಚಿತ್ರಣವನ್ನು ನೀಡುತ್ತಲೆ ಅವರ ಬದುಕಿನ ದುರಂತಗಳನ್ನು ಅನಾವರಣ ಮಾಡಿದ್ದಾರೆ. ದಲಿತರ ದುರಂತ ಸ್ಥಿತಿಯೊಳಗೆ ಇರುವ ಅವರ ಸೃಜನಶೀಲತೆಯ ಕಡೆಗೂ ಬೆರಳು ತೋರಿಸಿದ್ದಾರೆ.

ಮೂಲ:=  http://goo.gl/zNavnX